02/02/2018
ವಿದುರರು ತೀರ್ಥಯಾತ್ರೆ ಮಾಡಿಕೊಂಡು ಬಂದು ಧರ್ಮರಾಜನ ಬಳಿಯಲ್ಲಿ ಮಾತನಾಡುವಾಗ, ಧರ್ಮರಾಜನಿಗೆ ನೋವುಂಟಾಗುತ್ತದೆ ಎಂಬ ಕಾರಣಕ್ಕೆ ಯದುಕುಲವಿನಾಶದ ಬಗ್ಗೆ ಹೇಳಲಿಲ್ಲ ಎಂಬ ಮಾತನ್ನು ಭಾಗವತದಲ್ಲಿ ಕೇಳುತ್ತೇವೆ. ಆದರೆ, ಯದುಕುಲವಿನಾಶವಾಗುವದಿಕ್ಕಂತಲೂ 21 ವರ್ಷಗಳ ಮುಂಚೆಯೇ ವಿದುರರ ದೇಹತ್ಯಾಗವಾಗಿರುತ್ತದೆ. ಅಂದ ಮೇಲೆ ಈ ಭಾಗವತದ ಮಾತನ್ನು ಹೇಗೆ ಒಪ್ಪುವದು ಎಂಬ ಪ್ರಶ್ನೆಗೆ ಆಚಾರ್ಯರು ಪದ್ಮಪುರಾಣದ ವಚನದಿಂದ ನಮಗೆ ಉತ್ತರವನ್ನು ನೀಡುತ್ತಾರೆ. ಆಚಾರ್ಯರ ವಚನದಲ್ಲಿಯೂ ಸಹ ಬನ್ನಂಜೆ ಒಂದು ಕಡೆಗೆ ಗೊಂದಲವನ್ನುಂಟು ಮಾಡಿದ್ದಾರೆ. ಈ ವಿಷಯಗಳ ಚರ್ಚೆ ಇಂದಿನ ಉಪನ್ಯಾಸದಲ್ಲಿ. ಕೆಟ್ಟಸುದ್ದಿಯನ್ನು ಹೇಳಬೇಕಾದರೆ ನಮಗಿರಬೇಕಾದ ಎಚ್ಚರಗಳ ಕುರಿತ ಚಿಂತನೆಯೂ ಇಂದಿನ ಉಪನ್ಯಾಸದಲ್ಲಿ.
Play Time: 48:54
Size: 7.60 MB