05/02/2018
ನಮ್ಮವರೊಬ್ಬರು ಸಾಧನೆಯನ್ನು ಮಾಡುತ್ತಿರುವಾಗ ನಾವವರನ್ನು ತಡೆಯಬಾರದು, ಅಷ್ಟೇ ಅಲ್ಲ, ಎಷ್ಟು ರೀತಿಯಲ್ಲಿ ಸಾಧ್ಯವೋ ಅಷ್ಟು ರೀತಿಯಲ್ಲಿ ಅವರ ಸಾಧನೆಗೆ ಹೆಗಲಾಗಿ ನಿಲ್ಲಬೇಕು ಎನ್ನುವದನ್ನು ವಿದುರ, ಧರ್ಮರಾಜ, ಕುಂತಿಯರ ಚರ್ಯೆಯಿಂದ ಭಾಗವತ ತಿಳಿಸುತ್ತದೆ. ತಾನು ಮಾಡಿದ ಸಕಲ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ಕಟ್ಟ ಕಡೆಯ ವಯಸ್ಸಿನಲ್ಲಿ ಧೃತರಾಷ್ಟ್ರ ತಪಸ್ಸಿಗೆ ತೆರಳಿದ ವಿವರ ಇಂದಿನ ಉಪನ್ಯಾಸದಲ್ಲಿ. ನಮ್ಮಿಂದ ತೊಂದರೆಗೊಳಗಾದವರು ನಮ್ಮ ತಪ್ಪನ್ನು ಎತ್ತಿ ತೋರಿಸದ ಮಾತ್ರಕ್ಕೆ ತಪ್ಪು ಸರಿಯಾಗುವದಿಲ್ಲ, ದೇವರು ಶಿಕ್ಷೆ ನೀಡಿಯೇ ನೀಡುತ್ತಾನೆ. ಹೀಗಾಗಿ ಪಾಪ ಪ್ರಕ್ಷಾಲನೆ ಮಾಡಿಕೊಳ್ಳಲೇಬೇಕು ಹಾಗೂ ಪಾಪ ಪ್ರಕ್ಷಾಲನೆ ಮಾಡಿಕೊಳ್ಲಲು ಗೀತಾಚಾರ್ಯ ತಿಳಿಸಿದ ಮೂರು ದಾರಿಗಳನ್ನೂ ಸಹ ಇಲ್ಲಿ ವಿವರಿಸಲಾಗಿದೆ. ಇಲ್ಲಿ ವಿವರಣೆಗೊಂಡ ಭಾಗವತ ಶ್ಲೋಕಗಳು — ಏವಂ ರಾಜಾ ವಿದುರೇಣಾನುಜೇನ ಪ್ರಜ್ಞಾಚಕ್ಷುರ್ಬೋಧಿತ ಆಜಮೀಢಃ। ಛಿತ್ತ್ವಾ ಸ್ವೇಷು ಸ್ನೇಹಪಾಶಾನ್ ದ್ರಢಿಮ್ನೋ ನಿಶ್ಚಕ್ರಾಮ ಭ್ರಾತೃಸನ್ದರ್ಶಿತಾಧ್ವಾ। ಪತಿಂ ಪ್ರಯಾಂತಂ ಸುಬಲಸ್ಯ ಪುತ್ರೀ ಪತಿವ್ರತಾ ಚಾನುಜಗಾಮ ಸಾಧ್ವೀ। ಹಿಮಾಲಯಂ ನ್ಯಸ್ತದಂಡಪ್ರಹರ್ಷಂ ಮನಸ್ವಿನಾಮವಸತ್ ಸಂವಿಹಾರಮ್।
Play Time: 47:11
Size: 7.60 MB