06/02/2018
ಧೃತರಾಷ್ಟ್ರ ಧರ್ಮರಾಜನ ಅನುಮತಿಯನ್ನು ಪಡೆದು ವನಕ್ಕೆ ತೆರಳಿದ ಎಂದು ಮಹಾಭಾರತ ತಿಳಿಸಿದರೆ, ಪಾಂಡವರಿಗೆ ತಿಳಿಯದಂತೆ ಧೃತರಾಷ್ಟ್ರ ವನಕ್ಕೆ ತೆರಳಿದ ಎಂದು ಭಾಗವತ ಹೇಳುತ್ತದೆ. ಎರಡೂ ಸತ್ಯವಾಗಿರಲು ಸಾಧ್ಯವಿಲ್ಲ. ಪುರಾಣಗಳಲ್ಲಿ ಹೀಗೆ ಪರಸ್ಪರವಿರುದ್ಧವಾಗಿ ಏಕೆ ಕಥೆಗಳನ್ನು ನಿರೂಪಣೆ ಮಾಡುತ್ತಾರೆ ಎಂಬ ಪ್ರಶ್ನೆಗೆ ಆಚಾರ್ಯರು ನೀಡಿದ ಉತ್ತರದ ನಿರೂಪಣೆಯೊಂದಿಗೆ ಎರಡೂ ಗ್ರಂಥಗಳನ್ನು ಅರ್ಥ ಮಾಡಿಕೊಳ್ಳುವ ಕ್ರಮವನ್ನು ಇಲ್ಲಿ ವಿವರಿಸಲಾಗಿದೆ. ಋಷಿಗಳು ಕಾಮುಕರು, ಕುಂತಿ ಮುಂತಾದವರು ವ್ಯಭಿಚಾರಿಣಿಯರು ಎಂಬ ಇಂದಿನ ಜನರ ಆಕ್ಷೇಪಗಳಿಗೆ ಇಲ್ಲಿ ಉತ್ತರಗಳಿವೆ, ತಪ್ಪದೇ ಕೇಳಿ. ನಿಮ್ಮ ಮಕ್ಕಳಿಗೂ ಕೇಳಿಸಿ. ಇಲ್ಲಿ ವಿವರಣೆಗೊಂಡ ಭಾಗವತತಾತ್ಪರ್ಯದ ವಚನಗಳು — “ವ್ಯಾಸಾದಯೋ ವರ್ತಮಾನಮತೀತಾನಾಗತೇ ತಥಾ । ವ್ಯತ್ಯಸ್ಯಾಪಿ ವದಂತ್ಯದ್ಧಾ ಮೋಹನಾರ್ಥಂ ದುರಾತ್ಮನಾಮ್ ।। ಪೌರ್ವಾಪರ್ಯಂ ಯತೋ ನೈವ ಸದೈವ ಪರಿವರ್ತನಾತ್ । ಅತಶ್ಚ ವ್ಯತ್ಯಯಾದೇತದ್ವದಂತಿ ಜ್ಞಾನಚಕ್ಷುಷಃ" ಇತಿ ಬ್ರಾಹ್ಮೇ ।
Play Time: 46:46
Size: 7.60 MB