19/02/2018
ದೇವರಲ್ಲಿನ ತ್ಯಾಗ, ಸಂತೋಷ, ಆರ್ಜವ, ಶಮ, ದಮ, ತಪಸ್ಸು ಮತ್ತು ಸಾಮ್ಯ ಎಂಬ ಗುಣಗಳ ಚಿಂತನೆ ಇಲ್ಲಿದೆ. ದೇವರಲ್ಲಿ ಯಾವ ಕಾರಣಕ್ಕೆ ದುಃಖವಿಲ್ಲ, ಜೀವರಿಗೆ ಯಾಕಾಗಿ ದುಃಖ ಉಂಟಾಗುತ್ತದೆ, ಆ ದುಃಖವನ್ನು ಕಳೆದುಕೊಳ್ಳಲು ಮಾಡಬೇಕಾದ ಉಪಾಸನೆ ಏನು ಎಂಬ ಪ್ರಶ್ನೆಗೆ ಉತ್ತರ ನೀಡುವ ಮಹತ್ತ್ವದ ಪ್ರಮೇಯದ ವಿವರಣೆ, ದೇವರ ಮನಸ್ಸು, ಮಾತು, ಕೃತಿಗಳು ಎಂದಿಗೂ ಏಕಪ್ರಕಾರವಾದದ್ದು, ದೇವರ ರೂಪಗಳಲ್ಲಿ ಸರ್ವಥಾ ಭೇದವಿಲ್ಲ, ದೇವರ ಯಾವ ಗುಣವನ್ನು ಉಪಾಸಿಸುವದರಿಂದ ನಮಗೆ ಇಂದ್ರಿಯನಿಗ್ರಹ ದೊರೆಯುತ್ತದೆ ಮುಂತಾದ ವಿಷಯಗಳ ನಿರೂಪಣೆ ಇಂದಿನ ಉಪನ್ಯಾಸದಲ್ಲಿ. ಇಲ್ಲಿ ವಿವರಣೆಗೊಂಡ ಭಾಗವತದ ಮತ್ತು ಭಾಗವತತಾತ್ಪರ್ಯದ ವಚನಗಳು — सत्यं शौचं दया दानं त्यागः सन्तोष आर्जवम्। शमो दमस्तपः साम्यं तितिक्षोपरतिः श्रुतम् ।। २६ ।। “शमः प्रियादिबुद्ध्युज्झा क्षमा क्रोधाद्यनुत्थितिः । महाविरोधकर्तुश्च सहनं तु तितिक्षणम्” इति पाद्मे ।
Play Time: 46:34
Size: 7.60 MB