21/04/2018
ದೇವರು ಭಕ್ತಾಪರಾಧಸಹಿಷ್ಣು ಎನ್ನುವದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಎಲ್ಲ ಸಂದರ್ಭಗಳಲ್ಲಿಯೂ ದೇವರು ತನ್ನ ಭಕ್ತರ ಅಪರಾಧಗಳನ್ನು ಮನ್ನಿಸಿಲ್ಲ. ಭಕ್ತರ ಅಪರಾಧಗಳಿಗೂ ದೇವರು ಶಿಕ್ಷೆ ನೀಡಿದ್ದಿದೆ. ಹಾಗಾದರೆ ದೇವರು ಯಾವಾಗ ಭಕ್ತರ ಅಪರಾಧಗಳನ್ನು ಮನ್ನಿಸುತ್ತಾನೆ, ಅವನು ಮನ್ನಿಸಲು ಮಾಡಬೇಕಾದ ಪ್ರಾರ್ಥನೆ ಮತ್ತು ಅನುಸಂಧಾನಗಳೇನು ಎನ್ನುವದನ್ನು ಚಂದ್ರಿಕಾಚಾರ್ಯರು ಮುಂತಾದ ಮಹಾನುಭಾವರು ತಿಳಿಸಿರುವ ಪ್ರಮೇಯಗಳ ವಿವರಣೆ ಇಲ್ಲಿದೆ. ಸಕಾಮಕರ್ಮಗಳ ವ್ಯಾಪ್ತಿ ತುಂಬ ಗಂಭೀರವಾದದ್ದು, ನಮ್ಮ ದಿನನಿತ್ಯದ ಎಲ್ಲ ಕಾರ್ಯಗಳೂ ಸಕಾಮಕರ್ಮಗಳೇ, ಅದನ್ನು ಮೀರಲು ಸಾಧ್ಯವೇ ಇಲ್ಲ. ಅಂತಹ ಸಕಾಮಕರ್ಮಗಳಿಂದ, ವಿಕರ್ಮಗಳಿಂದ ದೂರವಾಗುವ ರಹಸ್ಯವನ್ನು, ಶಾಸ್ತ್ರದಲ್ಲಿ ತಿಳಿದ ತತ್ವಗಳು ಸದಾ ಸ್ಮರಣೆಗೆ ಬರಬೇಕಾದರೆ ಮಾಡಬೇಕಾದ ಉಪಾಸನೆಯೇನು ಎನ್ನುವದನ್ನು ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ಕಾರುಣ್ಯದಿಂದ ತಿಳಿಸುತ್ತಾರೆ. ಆ ಪ್ರಮೇಯಗಳ ವಿವರಣೆ ಇಲ್ಲಿದೆ. ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತ ಮತ್ತು ಭಾಗವತತಾತ್ಪರ್ಯನಿರ್ಣಯದ ವಚನಗಳು — ಸತ್ಯಂ ಶೌಚಂ ದಯಾ ದಾನಂ ತ್ಯಾಗಃ ಸಂತೋಷ ಆರ್ಜವಮ್। ಶಮೋ ದಮಸ್ತಪಃ ಸಾಮ್ಯಂ ತಿತಿಕ್ಷೋಪರತಿಃ ಶ್ರುತಮ್ ।। ೨೬ ।। ಜ್ಞಾನಂ ವಿರಕ್ತಿರೈಶ್ವರ್ಯಂ ಶೌರ್ಯಂ ತೇಜೋ ಧೃತಿಃ ಸ್ಮೃತಿಃ। ಸ್ವಾತಂತ್ರ್ಯಂ ಕೌಶಲಂ ಕಾಂತಿಃ ಸೌಭಗಂ ಮಾರ್ದವಂ ಕ್ಷಮಾ ।। ೨೭ ।। ಪ್ರಾಗಲ್ಭ್ಯಂ ಪ್ರಶ್ರಯಃ ಶೀಲಂ ಸಹ ಓಜೋ ಬಲಂ ಭಗಃ। ಗಾಂಭೀರ್ಯಂ ಸ್ಥೈರ್ಯಮಾಸ್ತಿಕ್ಯಂ ಕೀರ್ತಿರ್ಮಾನೋಽನಹಂಕೃತಿಃ ।। ೨೮ ।। ಏತೇ ಚಾನ್ಯೇ ಚ ಭಗವನ್ನಿತ್ಯಾ ಯತ್ರ ಮಹಾಗುಣಾಃ। ಪ್ರಾರ್ಥ್ಯಾ ಮಹತ್ತ್ವಮಿಚ್ಛದ್ಭಿರ್ನ ವಿಯಂತಿ ಸ್ಮ ಕರ್ಹಿಚಿತ್ ।। ೨೯ ।। ಭಾಗವತತಾತ್ಪರ್ಯಮ್ — ತ್ಯಾಗೋ ಮಿಥ್ಯಾಭಿಮಾನವರ್ಜನಮ್। “ಮಿಥ್ಯಾಭಿಮಾನವಿರತಿಸ್ತ್ಯಾಗ ಇತ್ಯಭಿಧೀಯತೇ” ಇತಿ ನಾರಾಯಣಾಧ್ಯಾತ್ಮೇ । ಏಕಾಂತತಃ ಶುಭಭಾಗಿತ್ವಂ ಸೌಭಾಗ್ಯಮ್ । “ಶುಭೈಕಭಾಗೀ ಸುಭಗೋ ದುರ್ಭಗಸ್ತದ್ವಿಪರ್ಯಯಃ” ಇತಿ ಗೀತಾಕಲ್ಪೇ । “ಶಮಃ ಪ್ರಿಯಾದಿಬುದ್ಧ್ಯುಜ್ಝಾ ಕ್ಷಮಾ ಕ್ರೋಧಾದ್ಯನುತ್ಥಿತಿಃ । ಮಹಾವಿರೋಧಕರ್ತುಶ್ಚ ಸಹನಂ ತು ತಿತಿಕ್ಷಣಮ್” ಇತಿ ಪಾದ್ಮೇ । “ಸ್ವಯಂ ಸರ್ವಸ್ಯ ಕರ್ತೃತ್ವಾತ್ ಕುತಸ್ತಸ್ಯ ಪ್ರಿಯಾಪ್ರಿಯೇ” ಇತಿ ಚ ಪಾದ್ಮೇ । “ಪ್ರಿಯಮೇವ ಯತಃ ಸರ್ವಮಪ್ರಿಯಂ ನಾಸ್ತಿ ಕುತ್ರಚಿತ್ । ಸ್ವಯಮೇವ ಯತಃ ಕರ್ತಾ ಶಾನ್ತೋತೋ ಹರಿರೀಶ್ವರಃ” ಇತಿ ಬ್ರಹ್ಮತರ್ಕೇ ।। ಮಾನಃ ಪರೇಷಾಮ್ । “ಗುಣೈಃ ಸ್ವರೂಪಭೂತೈಸ್ತು ಗುಣ್ಯಸೌ ಹರಿರೀಶ್ವರಃ । ನ ವಿಷ್ಣೋರ್ನಚ ಮುಕ್ತಾನಾಂ ಕೋಪಿ ಭಿನ್ನೋ ಗುಣೋ ಮತಃ” ಇತಿ ಬ್ರಹ್ಮತರ್ಕೇ ।
Play Time: 46:16
Size: 7.60 MB