04/05/2018
ಮೋಕ್ಷವೂ ಸಜ್ಜನರ ಸಂಪರ್ಕಕ್ಕೆ ಸಮಾನವಾದುದದಲ್ಲ ಎನ್ನುತ್ತದೆ ಭಾಗವತ. ಈ ಮಾತನ್ನು ಒಪ್ಪುವದು ಹೇಗೆ. ಸಜ್ಜನರ ಸಂಪರ್ಕವೇ ಮೋಕ್ಷಕ್ಕಿಂತ ದೊಡ್ಡದಾಗುವದಾದರೆ, ಮೋಕ್ಷವನ್ನು ಬಯಸಬೇಕೇಕೆ, ಇಲ್ಲಿಯೇ ಸತ್ಸಂಪರ್ಕದಲ್ಲಿದ್ದರಾಯಿತಲ್ಲ ಎಂಬ ಪ್ರಶ್ನೆಗೆ ಅತೀ ಸೂಕ್ಷ್ಮ ಪ್ರಮೇಯಗಳನ್ನೊಳಗೊಂಡ ಉತ್ತರವನ್ನು ಶ್ರೀಮದಾಚಾರ್ಯರು ನೀಡುತ್ತಾರೆ. ಈ ಸಾಧನೆಯ ಸಂದರ್ಭದಲ್ಲಿ ನಮಗಿರಬೇಕಾದ ಎಚ್ಚರವೇನು ಎನ್ನುವದನ್ನು ಮನಗಾಣಿಸುವ ಭಾಗ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — ತುಲಯಾಮ ಲವೇನಾಪಿ ನ ಸ್ವರ್ಗಂ ನಾಪುನರ್ಭವಮ್। ಭಗವತ್ಸಙ್ಗಿಸಙ್ಗಸ್ಯ ಮರ್ತ್ಯಾನಾಂ ಕಿಮುತಾಶಿಷಃ ।। ೧೩ ।। ಭಾಗವತತಾತ್ಪರ್ಯಮ್ “ಸಮ್ಯಕ್ಸ್ವರೂಪಸ್ಯಾವ್ಯಕ್ತಿರಭಾವೋ ಜನನಸ್ಯ ಚ । ಅಲ್ಪಯತ್ನಾತ್ ತತೋ ವೃದ್ಧಿಹೇತೋಃ ಸತ್ಸಙ್ಗತಿರ್ವರಾ” ಇತಿ ವಾಯುಪ್ರೋಕ್ತೇ ।
Play Time: 45:14
Size: 7.60 MB