ಕರಿದ ಪದಾರ್ಥಗಳನ್ನು ತಿಂದರೆ ಬೊಜ್ಜು ಬರುತ್ತದೆ ಎಂದು ಹೇಳಿದರೆ, ಕರಿದ ಪದಾರ್ಥ ತಿನ್ನದವರಿಗೆ ಬೊಜ್ಜು ಬರುವದೇ ಇಲ್ಲವೇ ಎಂದು ಪ್ರಶ್ನೆ ಮಾಡಿದಂತಾಯಿತು.
ಬೊಜ್ಜು ಬರಲು ಕರಿದ ಪದಾರ್ಥ ಕಾರಣ. ಆದರೆ ಕರಿದ ಪದಾರ್ಥವೊಂದೇ ಕಾರಣವಲ್ಲ. ಸಿಹಿಯೂ ಕಾರಣ. ಅತಿಯಾಗಿ ಯಾವುದನ್ನೇ ತಿನ್ನುವದೂ ಕಾರಣ. ಕಡಿಮೆ ತಿಂದರೂ ವ್ಯಾಯಾಮ ಮಾಡದಿರುವದು ಕಾರಣ.
ಹಾಗೆ, ನಿಷಿದ್ಧ ಪದಾರ್ಥಗಳನ್ನು ಸೇವಿಸುವದೊಂದೇ ತಾಮಸ ಗುಣಕ್ಕೆ ಕಾರಣವಲ್ಲ. ತಾಮಸ ಪ್ರದೇಶದಲ್ಲಿ ವಾಸವಿರುವದು, ತಾಮಸ ಜನರ ಜೊತೆಯಲ್ಲಿ ಸಂಪರ್ಕ ಇರುವದು, ತಾಮಸವಾದ ಪುಸ್ತಕಗಳನ್ನು ಓದುವದು, ತಾಮಸವಾದ ಸಿನಿಮಾ ನಾಟಕ ಕಾವ್ಯಗಳನ್ನು ಓದುವದು, ದೊಡ್ಡವರ ಶಾಪ ಮುಂತಾದ ಅನೇಕ ಕಾರಣಗಳಿಂದ ನಮ್ಮಲ್ಲಿ ತಾಮಸ ಗುಣಗಳು ಬರಲು ಬೆಳೆಯಲು ಸಾಧ್ಯ.
ತಾಮಸ ಗುಣ ಇರಬಾರದು ಎಂದರೆ ಇವೆಲ್ಲವನ್ನೂ ತ್ಯಾಗ ಮಾಡಬೇಕು.
Pavan,Bengaluru
2:40 PM , 17/07/2018
ಧನ್ಯವಾದಗಳು ಆಚಾರ್ಯರಿಗೆ, ಅತ್ಯಂತ ಅದ್ಭುತವಾದ ಹಾಗೂ ಸರಳ ಉತ್ತರ.
Pavan,Bengaluru
2:40 PM , 17/07/2018
ಧನ್ಯವಾದಗಳು ಆಚಾರ್ಯರಿಗೆ, ಅತ್ಯಂತ ಅದ್ಭುತವಾದ ಹಾಗೂ ಸರಳ ಉತ್ತರ.
Mythreyi Rao,Bengaluru
2:36 PM , 17/07/2018
ಧನ್ಯವಾದಗಳು ಗುರುಗಳೆ
Satish P Sali,Hubli
2:34 PM , 17/07/2018
Namaskar, Acharayare evannu Devaru Srishti yake madida