11/11/2018
ಬ್ರಹ್ಮದೇವರಿಂದ ತತ್ವೋಪದೇಶವನ್ನು ಬಯಸಿ ಬಂದಿರುವ ನಾರದರು “ತತ್ವವನ್ನು ತಿಳಿಸಿರಿ” ಎಂದು ಹೇಳುವ ಬದಲು “ತತ್ವವನ್ನು ತಿಳಿಯಿರಿ” ಎಂದು ಹೇಳುತ್ತಾರೆ. ಈ ರೀತಿ ಗ್ರಂಥ ಬರೆದಿರುವ ವೇದವ್ಯಾಸದೇವರಿಗೆ ಸಂಸ್ಕೃತದ ಜ್ಞಾನವಿಲ್ಲ ಎಂದು ಕೆಲವರು ಪುಸ್ತಕಗಳನ್ನೂ ಬರೆದದ್ದುಂಟು. ಆದರೆ, ಈ ಪ್ರಯೋಗದ ಹಿಂದೆ ಇರುವ ಅದ್ಭುತ ತತ್ವರಾಶಿಯನ್ನು ತಿಳಿಸಿಕೊಟ್ಟವರು ಶ್ರೀಮದಾಚಾರ್ಯರು. ಶಾಸ್ತ್ರಗ್ರಂಥಗಳಲ್ಲಿನ ಒಂದೊಂದು ಶಬ್ದದ ಹಿಂದೆಯೂ ಅದೆಂತಹ ಗಾಂಭೀರ್ಯವಿರುತ್ತದೆ ಎಂದು ಮನಗಾಣಿಸುವ ಭಾಗ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — अथ पञ्चमोऽध्यायः । नारद उवाच — देवदेव नमस्तेऽस्तु भूतभावन पूर्वज । तद् विजानीहि यज्ज्ञानमात्मतत्वनिदर्शनम् ।। १ ।। भागवततात्पर्यम् — विजानीहि विज्ञापय । “व्यत्ययो(ऽ)भेदस्वातन्त्र्यकरणेषु” इति वचनात् ।
Play Time: 43:40
Size: 5.97 MB