Upanyasa - VNU726

ಶ್ರೀಮದ್ ಭಾಗವತಮ್ — 174 — ಸೃಷ್ಟಿಯ ಆರಂಭ

03/12/2018

ದೇವರು ಮಾಡುವ ಸೃಷ್ಟಿಯ ಕ್ರಮವನ್ನು ತಿಳಿಸಲು ಆರಂಭಿಸುವ ಬ್ರಹ್ಮದೇವರು ಮೊಟ್ಟಮೊದಲಿಗೆ ಪರಮಾತ್ಮನ ಸ್ವಾತಂತ್ರ್ಯದ ಕುರಿತು ಅದ್ಭುತವಾಗಿ ತಿಳಿಸುತ್ತಾರೆ. ನಮ್ಮ ಸ್ವಾಮಿ ಯಾರ ಅಧೀನನೂ ಅಲ್ಲ, ಎಲ್ಲವೂ ಅವನಧೀನ ಎಂಬ ಚಿಂತನೆಯ ದಿವ್ಯ ನಿರೂಪಣೆ ಇಲ್ಲಿದೆ.  ಕಾಲದ ಕುರಿತ ಸ್ವಾರಸ್ಯಕರ ಚರ್ಚೆಯೊಂದಿಗೆ. 

ಅಧ್ಯಾತ್ಮಶಾಸ್ತ್ರದಲ್ಲಿ ಅತ್ಯಂತ ಮಹತ್ತ್ವವನ್ನು ಪಡೆದಿರುವ ಯದೃಚ್ಛಾ ಎಂಬ ಶಬ್ದಕ್ಕೆ ಆಚಾರ್ಯರು ಅರ್ಥವನ್ನು ತಿಳಿಸಿರುವದು ಇದೇ ಸಂದರ್ಭದಲ್ಲಿ. 

ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — 

ಎರಡನೆಯ ಸ್ಕಂಧ, ಐದನೆಯ ಅಧ್ಯಾಯ

कालं कर्म स्वभावं च मायेशो मायया स्वया ।

आत्मन् यदृच्छया प्राप्तं विबुभूषुरुपाददे ।। २० ।।

भागवततात्पर्यम् — स्वया मायया स्वशक्त्या । 

“यत्रान्यहेत्वभावः स्यादीश्वरेच्छादिना विना । 

तदिच्छा हि यदृच्छा स्यादतस्तत्र यदृच्छया” इति ब्रह्मतर्के ।

“कालकर्मस्वभावादि नित्ययेशेच्छया सदा । 

प्राप्तमेव विशेषेण सृष्ट्यादावुन्नयत्यजः” इति च ।

विबुभूषुः बहुधा बुभूषुः ।

“ईशो बह्वीः पुरः सृष्ट्वा तत्रैव बहुरूपताम् । 
तत्तन्नियामकतया प्राप्तुं कालाद्युपाददे” इति च ।

Play Time: 32:30

Size: 7.94 MB


Download Upanyasa Share to facebook View Comments
6160 Views

Comments

(You can only view comments here. If you want to write a comment please download the app.)
  • Vishwanandini User,Bangalore

    12:30 PM, 04/12/2018

    ಗುರುಗಳೆ
    
    ವಿಶ್ವನಂದಿನಿಯಲ್ಲಿ ಹಲವಾರು ವಿಷಯಗಳ ಕುರಿತು ಉಪನ್ಯಾಸಗಳು....ಹೀಗಾಗಿ ಯಾವುದನ್ನು ಮೊದಲು ಕೇಳಬೇಕು..ಯಾವುದನ್ನು ನಂತರ ಕೇಳಬೇಕು ಅನ್ನುವ ಗೊಂದಲವಿತ್ತು. ಶ್ರವಣ ಮಾಡುವಾಗ ಪ್ರಾಥಮಿಕಹಂತದ ಪ್ರಶ್ನೆಗಳೂ ಬರುತ್ತಿತ್ತು...
    
    ಆದರೆ ಈಗ ಶ್ರೀಮದ್ಭಾಗವತವು ವಿಸ್ತಾರವಾಗುತ್ತಾ ಹೋಗುತ್ತಿದ್ದಂತೆ, ನಮ್ಮಲ್ಲಿರುವ ಜ್ಞಾನದ ಹಂತವೂ ಮೇಲಕ್ಕೇರುವ ಅನುಭವವಾಗುತ್ತಿದೆ...
    
    ಕಾರಣ ನಮ್ಮ ಅಲ್ಪವಾದ ಬುದ್ಧಿಯಿಂದ ತಿಳಿಯಲು ಅಸಾಧ್ಯಾವಾದ ತತ್ವಗಳನ್ನೂ ಸಹ ಲೌಖಿಕವಾದ ಉದಾಹರಣೆಯನ್ನು ನೀಡುತ್ತಾ ನಮ್ಮನ್ನು ಶ್ರೇಷ್ಟವಾದ ತತ್ತ್ವಗಳಿಂದ ವಂಚಿತರಾಗದಂತೆ ನೋಡಿಕೊಂಡೇ ಮುಂದೆ ಮುಂದೆ ಸಾಗುತ್ತಿದ್ದೀರಿ....ಹೀಗಾಗಿ ಬೇರೆಯ ವಿಷಯಗಳನ್ನೂ ಸಹ ಅಥ೯ಮಾಡಿಕೊಳ್ಳಲು ತುಂಬಾ ಸಹಾಯವಾಗುತಿದೆ..
    
    ತುಂಬಾ ಸಂತೋಷವಾಗುತ್ತಿದೆ..
    
     ಜಿಜ್ಞಾಸುಗಳಿಗೆ ಯಾವ ಯೂನಿವಸಿ೯ಟಿಯಲ್ಲಿಯೂ ಸಿಗದ ಅಧ್ಯಾತ್ಮ ವಿದ್ಯೆಯನ್ನು ನಾವು ಕುಳಿತಲ್ಲಿಯೇ ಸಿಗುವಂತೆ ಮಾಡಿದ್ದೀರಿ..
    
    ನಿಮಗೆ ಭಕ್ತಿಯ ನಮಸ್ಕಾರಗಳು