Upanyasa - VNU730

ಶ್ರೀಮದ್ ಭಾಗವತಮ್ — 178 — ಅನೇಕ ಬಾರಿ ಸೃಷ್ಟಿ ಏಕೆ?

09/12/2018

ಬ್ರಹ್ಮಾಂಡದ ಆಚೆಯಲ್ಲಿ, ಬ್ರಹ್ಮಾಂಡದ ಒಳಗೆ, ಲೋಕಗಳಲ್ಲಿ ಹೀಗೆ ಅನೇಕ ಸಂದರ್ಭಗಳಲ್ಲಿ ದೇವತೆಗಳು ಸೃಷ್ಟಿಯಾದರು, ಪದಾರ್ಥಗಳು ಸೃಷ್ಟಿಯಾದವು ಎಂದು ಕೇಳುತ್ತೇವೆ. ಅದಕ್ಕೆ ಕಾರಣವನ್ನು ತಿಳಿಸುವದರೊಂದಿಗೆ ಆರಂಭವಾಗುವ ಈ ಪ್ರವಚನದಲ್ಲಿ ವಿರಾಡ್ರೂಪದ ಭಗವಂತನ ದೇಹದಿಂದ ಸೃಷ್ಟಿಯಾದ ಪದಾರ್ಥಗಳ ಕುರಿತು ತಿಳಿಯುತ್ತೇವೆ. 

ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — 

अथ षष्ठोऽध्यायः ।

ब्रह्मोवाच —

वाचो वह्नेर्मुखं क्षेत्रं छन्दसां सप्त धातवः ।

हव्यकव्यामृतान्नानां जिह्वा सर्वरसस्य च ।। १ ।।

सर्वासूनां च वायोश्च तन्नासे परमायने ।

अश्विनोरोषधीनां च घ्राणो गन्धस्य चैव हि ।। २ ।।

रूपाणां तेजसां चक्षुर्दिवः सूर्यस्य चाक्षिणी ।

कर्णौ दिशां च तीर्थानां श्रोत्रमाकाशशब्दयोः ।। ३ ।।

भागवततात्पर्यम् — तीर्थानां शास्त्राणाम् ।

तद्गात्रं वस्तुसाराणां सौभगस्य च भाजनम् ।

त्वगस्य स्पर्शवाय्वोश्च सर्वमेधस्य चैव हि ।। ४ ।। 

रोमाण्युद्भिजजातीनां यैर्वा यज्ञस्तु सम्भृतः ।

केशश्मश्रुनखान्यस्य शिलालोहाभ्रविद्युताम् ।। ५ ।।

भागवततात्पर्यम् । 

“याज्ञिका रोममूलस्था रोमान्तस्थास्तु तत्परे ।
 
उद्भिजो वासुदेवस्य लिङ्गगास्तु जरायुजाः” इति पाद्मे ।

“हरेः श्मश्वाश्रया विद्युच्छिला लोहा नखाश्रयाः” इत्याग्नेये ।

Play Time: 40:07

Size: 5.54 MB


Download Upanyasa Share to facebook View Comments
6456 Views

Comments

(You can only view comments here. If you want to write a comment please download the app.)
  • Sreedhar DN,Bangalore

    8:40 PM , 14/07/2019

    Gurugaley, I have a question here. Why Srushti, Sthithi and Laya happen many times? And do they happen in the same way always?

    Vishnudasa Nagendracharya

    ಜೀವರಾಶಿಗಳು ಅನಂತ ಇರುವ ಕಾರಣಕ್ಕೆ ಅವರೆಲ್ಲರ ಸ್ವರೂಪದ ಅಭಿವ್ಯಕ್ತಿಗೆ ಸೃಷ್ಟಿ ಸ್ಥಿತಿ ಲಯಗಳು ನಿರಂತವಾಗಿ ನಡೆಯಬೇಕು. ಒಂದೇ ಸೃಷ್ಟಿಯಲ್ಲಿ ಎಲ್ಲರ ಮುಕ್ತಿಯೂ ಉಂಟಾಗುವದಿಲ್ಲ.
    
    ಸೃಷ್ಟಿ-ಸ್ಥಿತಿ-ಲಯಾದಿಗಳನ್ನು ಮಾಡುವದು ದೇವರ ಸ್ವಭಾವವಾದ್ದರಿಂದಲೂ ಅದು ನಿರಂತರವಾಗಿ ನಡೆಯುತ್ತದೆ. 
    
    ತತ್ವ-ಬ್ರಹ್ಮಾಂಡಗಳ ಸೃಷ್ಟಿ ಎಲ್ಲವೂ ಪ್ರತೀಬಾರಿಯೂ ಒಂದೇ ರೀತಿಯಾಗುತ್ತದೆ. ಯಥಾಪೂರ್ವಂ ಅಕಲ್ಪಯತ್. ಹಿಂದಿನ ಕಲ್ಪದಲ್ಲಿ ಹೇಗೆ ಸೃಷ್ಟಿಯಾಗಿತ್ತೋ ಈ ಕಲ್ಪದಲ್ಲಿಯೂ ಹಾಗೆಯೇ ಪದಾರ್ಥಗಳ ಸೃಷ್ಟಿ. 
  • Vishwanandini User,Davanagere

    4:35 PM , 11/12/2018

    श्री गुरुभ्यो नमः 🙏