Upanyasa - VNU738

ರಥಸಪ್ತಮಿ ಶುಭಾಶಯಗಳು

12/02/2019

ರಥಸಪ್ತಮಿ ಶುಭಾಶಯಗಳು

ಶ್ರೀ ಪ್ರಹ್ಲಾದರಾಜರಿಗೂ 
ಶ್ರೇಷ್ಠ ವ್ಯಾಸರಾಯರ ಜನ್ಮವನ್ನನುಗ್ರಹಿಸಿ 
ಅವರಿಂದ ಮಹೋನ್ನತ ಸಾಧನೆಯನ್ನು ಮಾಡಿಸಿದ
ಸೂರ್ಯಾವತಾರಿಗಳಾದ 
ಶ್ರೀ ಬ್ರಹ್ಮಣ್ಯತೀರ್ಥಗುರುರಾಜರು

ಕಾರುಣ್ಯದಿಂದ ನಮ್ಮೆಲ್ಲರನ್ನು

ಜನ್ಮಜನ್ಮದಲ್ಲಿಯೂ 
ಭಗವದ್ಭಕ್ತರ ಮನೆಯಲ್ಲಿ ಹುಟ್ಟಿಸಿ, 

ಮಹಾ ವೈಷ್ಣವರನ್ನು 
ಮಕ್ಕಳು ಮೊಮ್ಮಕ್ಕಳು, 
ಬಂಧು, ಬಾಂಧವರನ್ನಾಗಿ ಕರುಣಿಸಿ, 

ಒಟ್ಟಾರೆ ಮುಂಬರುವ 
ಸಕಲ ಜನ್ಮಗಳಲ್ಲಿಯೂ 
ಶ್ರೀಮನ್ ಮಧ್ವಮತದಲ್ಲಿ 
ಜನ್ಮನೀಡಿ ಪೊರೆಯಲಿ ಎಂದು 
ಆ ಮಹಾನುಭಾವರನ್ನು 
ಭಕ್ತಿಯಿಂದ ಪ್ರಾರ್ಥಿಸಿ

ಉಷಃಕಾಲಕ್ಕೆ ಅಭಿಮಾನಿನಿಯಾದ ಉಷಾದೇವಿಯರು
ಸೂರ್ಯಸಾರಥಿಯಾದ ಅರುಣದೇವರು
ಸಂಜ್ಞಾಪತಿ ಸೂರ್ಯದೇವರು
ಭಾರತೀಪತಿ ಮುಖ್ಯಪ್ರಾಣದೇವರು
ಲಕ್ಷ್ಮೀಪತಿ ಶ್ರೀಮನ್ನಾರಾಯಣರು

ನಿಮಗೆ ದೃಢವಾದ ಆರೋಗ್ಯವನ್ನು, 
ದೀರ್ಘವಾದ ಆಯುಷ್ಯವನ್ನು
ಸಾತ್ವಿಕವಾದ ಸಂಪತ್ತನ್ನು,
ಪ್ರಾಮಾಣಿಕ ಜ್ಞಾನ ಭಕ್ತಿ ವೈರಾಗ್ಯಗಳನ್ನು ಕರುಣಿಸಿ 
ಉತ್ತಮ ಸಾಧನೆಯನ್ನು ಮಾಡಿಸಲಿ,

ನಿಮ್ಮ ವಂಶಾಭಿವೃದ್ಧಿಯನ್ನು ಮಾಡಲಿ,
ಭಾಗವತೋತ್ತಮರನ್ನು ಮಕ್ಕಳು ಮೊಮ್ಮಕ್ಕಳನ್ನಾಗಿ ನೀಡಲಿ

ಎಂಬ ಹಾರೈಕೆಯೊಂದಿಗೆ 

ವಿಶ್ವನಂದಿನಿಯ ಸಕಲ ಬಾಂಧವರಿಗೂ

ರಥಸಪ್ತಮಿಯ ಹಾರ್ದಿಕ ಶುಭಾಶಯಗಳು. 

ಸಜ್ಜನರ ವಂಶ ಅಭಿವೃದ್ಧವಾಗಲಿ!
ಸಜ್ಜನರ ಮನೆ ಸಮೃದ್ಧವಾಗಿರಲಿ!

— ವಿಷ್ಣುದಾಸ ನಾಗೇಂದ್ರಾಚಾರ್ಯ

Play Time:

Watch Video Share to facebook View Comments
647 Views

Comments

(You can only view comments here. If you want to write a comment please download the app.)
 • RajashreeVenkstesh,Bangalore

  12:46 PM, 12/02/2019

  ಜ್ಞಾನ ಪೂರ್ವಕವಾಗಿ ನಮ್ಮ ಕೈಲಿ ಹಬ್ಬವನ್ನು ಆಚರಿಸುವಂತೆ ಮಾಡಿದ ಗುರುಗಳಿಗೆ... ನಮ್ಮ ಸಂಸಾರದ ಪರವಾಗಿ ಅನಂತಾನಂತ ನಮಸ್ಕಾರಗಳು..
 • Vatsala,Mysore

  12:40 PM, 12/02/2019

  Rathasaptamiya shubhashayagalu
 • Latha,COIMBATORE

  11:27 AM, 12/02/2019

  Namaskaragalu Gurugalige
 • Jasyashree Karunakar,Bangalore

  10:40 AM, 12/02/2019

  ಗುರುಗಳೆ
  
  ಯಾವುದೇ ಪವ೯ದಿನಗಳನ್ನು ಕೇವಲ ಅವರು ಮಾಡುತ್ತಾರೆ, ನಾವು ಮಾಡುತ್ತೇವೆ ಅನ್ನುವ ಹಾಗಾದೇ , ಎಲ್ಲವನ್ನೂ ಜ್ಞಾನಪೂವ೯ಕವಾಗಿ ತಿಳಿದುಕೊಂಡು ನಾವೂ ಆಚರಣೆ ಮಾಡಬೇಕು ಅನ್ನುವ ಉತ್ಸಾಹ ಬರುತ್ತದೆ ನೀವು ನೀಡುವ ಲೇಖನಗಳು
 • Sudha,Bangalore

  10:20 AM, 12/02/2019

  Thamagu olleya karyakke thamma hejje itidiri nin samastha karyaglu oleashagali.