Upanyasa - VNU783

ಶ್ರೀಮದ್ ಭಾಗವತಮ್ — 210 — ವಿದುರರ ಕಥೆಯ ಆವಶ್ಯಕತೆ

21/07/2019

ಅಪರೋಕ್ಷಜ್ಞಾನ, ಉತ್ಕ್ರಾಂತಿ, ಮಹಾಪ್ರಳಯ ಮುಂತಾದವುಗಳನ್ನು ನಿರೂಪಿಸಿ ಸೃಷ್ಟಿಯನ್ನು ನಿರೂಪಿಸಲು ಹೊರಟ ಭಾಗವತದ ಈ ಸಂದರ್ಭದಲ್ಲಿ ವಿದುರರ ಕಥೆಯ ನಿರೂಪಣೆ ಬರುತ್ತದೆ. ಈ ತತ್ವಗಳ ಪ್ರತಿಪಾದನೆಯ ಮಧ್ಯದಲ್ಲಿ ಯಾಕಾಗಿ  ಈ ಕಥೆಯನ್ನು ಹೇಳಬೇಕು ಎಂಬ ಪ್ರಶ್ನೆಗೆ ನಮ್ಮ ಶ್ರೀಮದ್ ವಿಜಯಧ್ವಜತೀರ್ಥಶ್ರೀಪಾದಂಗಳವರು ನೀಡಿದ ಅದ್ಭುತ ಉತ್ತರದ ವಿವರಣೆ ಇಲ್ಲಿದೆ. 

ಈ ಪ್ರವಚನದಿಂದ ಮೂರನೆಯ ಸ್ಕಂಧದ ಅರ್ಥಾನುಸಂಧಾನ ಆರಂಭವಾಗುತ್ತದೆ. 

ಮೂರನೆಯ ಸ್ಕಂಧದ ಶ್ರವಣ-ಕೀರ್ತನಗಳು ನಿರ್ವಿಘ್ನವಾಗಿ ನಡೆಯಲಿ ಎಂಬ ಪ್ರಾರ್ಥನೆ ಮತ್ತು ಶ್ರೀಮದ್ ಭಾಗವತ ಕಾಮಧೇನುವಿದ್ದಂತೆ, ಶ್ರೀಮದ್ ವಿಜಯಧ್ವಜತೀರ್ಥರ ವ್ಯಾಖ್ಯಾನ ಅದರ ಕರುವಿದ್ದಂತೆ ಎಂಬ ಮಾತಿನ ವಿವರಣೆ ಇಲ್ಲಿದೆ. 


ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ವಚನಗಳು — 

श्रीमद्भागवते तृतीयस्कन्धे प्रथमोऽध्यायः

श्रीशुक उवाच —

एवमेतत् पुरा पृष्टो मैत्रेयो भगवान् किल। 
क्षत्त्रा वनं प्रविष्टेन त्यक्त्वा स्वगृहमृद्धिमत्	 ॥१॥

Play Time: 41:02

Size: 5.51 MB


Download Upanyasa Share to facebook View Comments
6327 Views

Comments

(You can only view comments here. If you want to write a comment please download the app.)
  • DESHPANDE P N,BANGALORE

    1:26 PM , 24/07/2019

    S.Namaskargalu. The start has been started in a fantastic way.
  • Jasyashree Karunakar,Bangalore

    8:24 PM , 22/07/2019

    ಗುರುಗಳೇ 
    
    ಇಂದಿನ ಉಪನ್ಯಾಸದಲ್ಲಿ  ನೀವು ಹೇಳಿದ್ದು ಇಷ್ಟೆ.....
    
    "ವಿದುರರ ವಿಷಯ ಈ ಸಂಧಭ೯ದಲ್ಲಿ ಯಾಕಾಗಿ ಬಂದಿದೆ" ಅಂತ ಅಷ್ಟೇ ಬೇರೇನೂ ಇಲ್ಲ.....
    
    ಆದರೆ ನೀವು ಹೇಳಿದ ಆ ರಸಭರಿತ ಶಬ್ದಗಳು ನೇರವಾಗಿ ಅಂತರಂಗಕ್ಕೇ ಇಳಿಯಬೇಕು ಹಾಗಿದೆ....
    
    ಶ್ರೀಮದ್ಭಾಗವತ ನಮ್ಮನ್ನು ತನ್ನಲ್ಲಿ ಬಂಧಿಸುತ್ತಿದೆ....
    
    ಹಾಗಾಗಿ ಲೌಕಿಕ ಬಂಧನವು ನಿಧಾನವಾಗಿ ಸಡಿಲವಾಗುತ್ತಿದೆ...
    ಧನ್ಯರು ನಾವು....
    
    ಕತ೯ವ್ಯಕ್ಕೂ ಬಂಧನಕ್ಕೂ ನಡುವೆ ಇರುವ ಅಂತರವನ್ನು ಶ್ರೀಮದ್ಭಾಗವತ ನಮಗೆ ಅಥ೯ಮಾಡಿಸುವ ರೀತಿಯೇ ಚೆಂದ....
    
    ಭಕ್ತಿಯೇ ಕಣ್ಣೀರಾಗುತ್ತಿದೆ.....
    
    
    ಅಷ್ಟೆ ....
    
    ಹೇಳಲು ಬೇರೇನೂ ಶಬ್ದಗಳಿಲ್ಲ....
    
    ನಿಮ್ಮ  ಬಿಡುವಿಲ್ಲದ ದಿನಗಳಲ್ಲಿಯೂ ಸಹ, ನೀವು ಉಪನ್ತಯಾಸಗಳನ್ಯಾಸಗಳನ್ನು ತಯಾರಿಮಾಡಿಕೊಂಡು, ನಿಮ್ಮ ಸಮಯವನ್ನು  ನಮ್ಮ ಶ್ರವಣಕ್ಕಾಗಿ ಮೀಸಲಿಡುತಿದ್ದೀರಿ ಅನ್ನುವದೇ ನಮ್ಮ ಸೌಭಾಗ್ಯ ..🙏🙏
    
    ಧನ್ಯವಾದಗಳು ಗುರುಗಳೇ..
  • Mudigal sreenath,Bengulutu

    2:02 PM , 22/07/2019

    Sreenaath teekarayara aradhanage manage we pravachane post maadiddu volledayithu acharyare
  • ಪ್ರಮೋದ,ಬೆಂಗಳೂರು

    10:50 AM, 22/07/2019

    ಶ್ರೀಮದ್ಭಾಗವತದ ತೃತೀಯ ಸ್ಕಂಧ ಪ್ರಾರಂಭಿಸಿದಕ್ಕೆ ಅನಂತಾನಂತಾನಂತ ಧನ್ಯವಾದಗಳು ಆಚಾರ್ಯರೇ🙏🙏🙏🙏🙏
  • T venkatesh,Hyderabad

    8:43 AM , 22/07/2019

    "ಸ್ಮಯನ್ನ್ "...🙏