16/08/2019
ಶ್ರೀಮನ್ ಮಹಾಭಾರತವನ್ನು ಓದುವದರಿಂದ ವೈಷಯಿಕ ಸುಖದಲ್ಲಿ ಮನಸ್ಸು ಆಸಕ್ತವಾಗುತ್ತದೆ ಎಂದು ಭ್ರಾಂತಿ ಬರುವಂತಹ ವಾಕ್ಯವೊಂದರ ಪರಿಶುದ್ಧ ಅರ್ಥವನ್ನು ಶ್ರೀಮದಾಚಾರ್ಯರು ತಿಳಿಸುತ್ತಾರೆ. ಶ್ರೀಮದಾಚಾರ್ಯರ ವ್ಯಾಖ್ಯಾನವನ್ನು ಏಕೆ ಒಪ್ಪಬೇಕು ಎಂಬ ಪ್ರಶ್ನೆಗೆ ಉತ್ತರ ಪಡೆಯುವದರೊಂದಿಗೆ ಮಹಾಭಾರತ ನಮ್ಮ ಮೇಲೆ ಉಂಟು ಮಾಡುವ ಮಹತ್ತರ ಪರಿಣಾಮದ ಕುರಿತ ವಿವರಣೆ ಇಲ್ಲಿದೆ. ಬ್ರಹ್ಮಸೂತ್ರಗಳಿಂದಾರಂಭಿಸಿ ಸಕಲ ಸಚ್ಚಾಸ್ತ್ರಗಳಿಗೂ ಇರುವ ಸಂಬಂಧದ ಚಿಂತನೆಯೊಂದಿಗೆ ಶ್ರೀಮದ್ ಭಾಗವತ ಮತ್ತು ಶ್ರೀಮನ್ ಮಹಾಭಾರತಗಳ ಅಪೂರ್ವ ಸಂಬಂಧದ ನಿರೂಪಣೆ ಈ ಭಾಗದಲ್ಲಿ. ಶ್ರೀಮನ್ ಮಹಾಭಾರತದ ಅದ್ಭುತ ವೈಶಿಷ್ಟ್ಯದ ಚಿತ್ರಣದೊಂದಿಗೆ. ಇಲ್ಲಿ ವಿವರಣೆಗೊಂಡ ವಾಕ್ಯಗಳು — यैस्तत्त्वभेदैरधिलोकनाथो लोकानलोकान् सह लोकपालान्। अचीकॢपद् यत्र हि सर्वसत्त्वनिकायभेदोऽधिकृतः प्रतीतः ॥८॥ येन प्रजानामुत आत्मकर्म रूपाभिधानेन भिदां व्यधत्त। नारायणो विश्वसृगात्मयोनिरेतच्च नो वर्णय विप्रवर्य ॥९॥ परावरेषां भगवन् कृतानि श्रुतानि मे व्यासमुखादभीक्ष्णम्। न तृप्नुमः कर्णसुखावहानां तेषामृते कृष्णकथामृतौघात्॥१०॥ भागवततात्पर्यम् — ऋते अवगमे। “ऋ गतौ” इति धातोः। तेषां तात्पर्यावगमे कृष्णकथामृतौघ एवासौ यतः ॥ कस्तृप्नुयात् तीर्थपदोऽभिधानात् सत्रेषु वः सूरिभिरीड्यमानात्। यः कर्णनाडीं पुरुषस्य यातो भयप्रदां गेहरतिं छिनत्ति ॥११॥ मुनिर्विवक्षुर्भगवद्गुणानां सखाऽपि ते भारतमाह कृष्णः। यस्मिन् नृणां ग्राम्यसुखानुवादैर्मतिर्गृहीता न हरेः कथायाम् ॥१२॥ भागवततात्पर्यम् — यस्मिन् भारते। हरेः कथायां ग्राम्यसुखानुवादैर्मतिर्न गृहिता । “भारतान्नाधिकं विष्णोर्महिमावाचकं क्वचित्। भारतान्न विरागाय भारतान्न विमुक्तये” इति पाद्मे ॥
Play Time: 54:28
Size: 5.51 MB