Upanyasa - VNU819

ಶ್ರೀಮದ್ ಭಾಗವತಮ್ — 237 — ಮಾಯಾ ದೇವಿಯ ಮಹಿಮೆ

08/09/2019

ಸೃಷ್ಟಿಯ ಮಹತ್ತರದ ಕಾರ್ಯದಲ್ಲಿ ತನ್ನ ಪ್ರಧಾನ ಕಿಂಕರಿಯನ್ನಾಗಿ ಭಗವಂತ ಸ್ವೀಕರಿಸುವದು ಮಹಾಲಕ್ಷ್ಮೀದೇವಿಯರನ್ನು. ಆ ಕಾರಣಕ್ಕಾಗಿ ಲಕ್ಷ್ಮೀದೇವಿಗೆ ಮಾಯಾ ಎಂಬ ಹೆಸರು ಬಂದದ್ದು ಎಂಬ ತತ್ವದ ವಿವರಣೆ ಇಲ್ಲಿದೆ. 

ಸೃಷ್ಟಿ ಮಾಡುವ ಯಶಸ್ಸನ್ನು ಪರಮಾತ್ಮ ತನ್ನ ಮಡದಿ ಮಕ್ಕಳಿಗೇ ಯಾಕೆ ನೀಡಿದ್ದು, ಪೂರ್ವಾಶ್ರಮದ ವಾಸನೆಯಲ್ಲಿಯೆ ಮುಳುಗಿರುವ ಪೀಠಾಧಿಪತಿಗಳಂತೆ, ಪರಮಾತ್ಮನೂ ಸಹ ಲಕ್ಷ್ಮಿ-ಬ್ರಹ್ಮ ಮುಂತಾದ ತನ್ನವರಿಗೇ ಯಶಸ್ಸು ನೀಡಿಸುತ್ತಿದ್ದಾನೆಯೇ? ಎಂಬ ಪ್ರಶ್ನೆಗೆ ಭಾಗವತ-ವಿಜಯಧ್ವಜೀಯಗಳು ನೀಡಿದ ಅದ್ಭುತ ಉತ್ತರದ ವಿವರಣೆ ಇಲ್ಲಿದೆ. 

ಲಕ್ಷ್ಮಿ-ಬ್ರಹ್ಮಾದಿಗಳಿಗೆ ಆ ಸಾಮರ್ಥ್ಯವಿದ್ದದ್ಕಕ್ಕಾಗಿ ದೇವರು ಅವರನ್ನು ಸೃಷ್ಟಿ ಕಾರ್ಯದಲ್ಲಿ ಸ್ವೀಕರಿಸಿದ್ದು ಎಂತಾದರೆ, ಕೃಮಿಯಿಂದ ರಾಜ್ಯವಾಳಿಸುವ ಸಾಮರ್ಥ್ಯವುಳ್ಳ ಸ್ವಾಮಿ ಕಲಿ-ಅಲಕ್ಷ್ಮಿ ಮುಂತಾದವರಿಂದಲೂ ಸೃಷ್ಟಿ ಮಾಡಿಸಬಹುದಲ್ಲವೇ ಎಂಬ ಪ್ರಶ್ನೆಗೂ ಉತ್ತರ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ವಚನ —

सा वा एतस्य संद्रष्टुः शक्तिः सदसदात्मिका। 
माया नाम महाभाग ययेदं निर्ममे विभुः ॥३॥Play Time: 46:54

Size: 5.51 MB


Download Upanyasa Share to facebook View Comments
7822 Views

Comments

(You can only view comments here. If you want to write a comment please download the app.)
 • Pranesh,Bangalore

  12:01 AM, 12/09/2019

  ಛ o ದೋಗ್ಯ ಉಪನಿಷತ್ತಿನ 6ನೇ ಅಧ್ಯಾಯ 2ನೇ ಖಂಡದ ಭಾಷ್ಯದಲ್ಲಿ ಶ್ರೀಮದ್ ಆಚಾರ್ಯರು ಹೇಗೆ ಹೇಳಿದ್ದಾರೆ
  ಸತ್ ಹೆಸರಿನ ಪರಮಾತ್ಮನಿಂದ ಪ್ರಲಯಕಾಲದಲೂ ಇದ್ದ ತೇಜ ಎಂಬ ಹೆಸರಿನ ಶ್ರೀದೇವಿಯನ್ನು ರೂಪಾಂತರದಿಂದ ವಿದ್ಯಾ ಎಂಬ ಮಹಾಲಕ್ಷ್ಮಿಯನ್ನು ಸೃಷ್ಟಿಸಿದ ಇವಳಿಂದ ಜಗತ್ ಸೃಷ್ಟಿಯಾಯಿತು ಎಂದಿದೆ
  ಆದರೆ ಇಲ್ಲಿ ಮಾಯಾ ಎಂದಿದೆ ಹೇಗೆ ಅರ್ಥಮಾಡುವುದು

  Vishnudasa Nagendracharya

  ತೇ ಸರ್ವತ್ರ ವ್ಯಾಪ್ತನಾದ ಶ್ರೀಹರಿಯಲ್ಲಿ ಸರ್ವತ್ರ ವ್ಯಾಪ್ತವಾದ ಪ್ರಕೃತಿಯಲ್ಲಿ ಅಭಿಮಾನಿನಿಯಾಗಿ ಇರುವದರಿಂದ, ಅಜಾ ಎಂದರೆ ಎಂದಿಗೂ ಜನನವಿಲ್ಲದೇ ಇರುವದರಿಂದ ಮತ್ತು ಅ ಎಂಬ ಹೆಸರುಳ್ಳ ಶ್ರೀಹರಿಯಿಂದ ವಿಶೇಷ ಸೃಷ್ಟಿಯನ್ನು ಪಡೆಯುವ ಮಹಾಲಕ್ಷ್ಮೀದೇವಿಗೆ ತೇಜ ಎಂದು ಹೆಸರು, ಮತ್ತು ವಿದ್ಯಾಭಿಮಾನಿನಿಯಾದ್ದರಿಂದ ವಿದ್ಯಾ ಎಂದೂ ಹೆಸರು. 
  
  ಒಂದೊಂದು ರೂಪಕ್ಕೆ ಅನೇಕಾನೇಕ ಹೆಸರುಗಳಿರುವದರಿಂದ ಇದು ಕೂಡುತ್ತದೆ. 
  
  ಛಾಂದೋಗ್ಯೋಪನಿಷತ್ತಿನ ಈ ಭಾಗದಲ್ಲಿ ಹೇಳುತ್ತಿರುವದು, ಅಗ್ನಿತತ್ವಕ್ಕೆ ನಿಯಾಮಕವಾಗಿ ಹುಟ್ಟಿಬಂದ ಲಕ್ಷ್ಮೀರೂಪದ ಕುರಿತು. ಹೀಗಾಗಿ ತೇಜಃಶಬ್ದದ ಬಳಕೆಯಿದೆ. 
 • Pranesh,Bangalore

  12:04 AM, 12/09/2019

  ಸದೇವ ಸೋಮ್ಯ... ಎಂಬಲ್ಲಿ ಸತ್ ನಾಮಕ ಪರಮಾತ್ಮನ ಜೊತೆಯಲ್ಲಿ ಇರುವ ತೇಜ ನಾಮಕ ಲಕ್ಷ್ಮೀದೇವಿಯನ್ನು ರೂಪಾಂತರದಿಂದ ವಿದ್ಯಾ ನಾಮಕ ಲಕ್ಷ್ಮಿಯನ್ನು ಸೃಷ್ಟಿಸಿದ ಎಂದಿದೆ

  Vishnudasa Nagendracharya

  ತೇಜೋನಾಮಕ ಲಕ್ಷ್ಮೀಯಿಂದ ವಿದ್ಯಾನಾಮಕ ಲಕ್ಷ್ಮೀದೇವಿಯಲ್ಲ. ತೇಜ ಮತ್ತು ವಿದ್ಯಾ ಎನ್ನುವದು ಎರಡೂ ಒಂದೇ ರೂಪದ ಹೆಸರು. 
 • DESHPANDE P N,BANGALORE

  10:16 AM, 20/09/2019

  S.Namaskargalu. Anugrahvirali