Upanyasa - VNU825

ಶ್ರೀಮದ್ ಭಾಗವತಮ್ — 241 — ಪಾದಾರವಿಂದದ ಮಾಹಾತ್ಮ್ಯ

16/09/2019

ಶಕ್ತಿಗೀತೆಯ ಮೊದಲನೆಯ ಭಾಗ

ಸೃಷ್ಟಿಕಾರ್ಯದಲ್ಲಿ ಭಗವಂತನ ಕಿಂಕರರಾಗಿ ಸೇವೆ ಮಾಡುವ 23 ತತ್ವಗಳಿಗೆ ಅಭಿಮಾನಿಗಳಾದ ದೇವತೆಗಳು, ಪರಮಾತ್ಮನ ಶಕ್ತಿಗೆ ವಿಷಯರಾದ್ದರಿಂದ ಶಕ್ತಿದೇವತೆಗಳು ಎಂದು ಕರೆಸಿಕೊಳ್ಳುತ್ತಾರೆ. ಆ ದೇವತೆಗಳು ತಮ್ಮ ಶಕ್ತಿಯ ಅಭಿವ್ಯಕ್ತಿಗಾಗಿ ಹಾಗೂ ಬ್ರಹ್ಮಾಂಡದ ಸೃಷ್ಟಿಗಾಗಿ ಪರಮಾತ್ಮನನ್ನು ಮಾಡಿದ ಸ್ತೋತ್ರವೇ ಶಕ್ತಿಗೀತೆ. 

ನಮ್ಮ ಸ್ವರೂಪ ಸಾಮರ್ಥ್ಯವನ್ನು ಅಭಿವ್ಯಕ್ತಿಗೊಳಿಸುವ, ಯಾವ ಕಾರ್ಯ ಮಾಡಬೇಕು ಮಾಡಬಾರದು ಎಂಬ ಜ್ಞಾನವನ್ನು ಕರುಣಿಸುವ, ಕಾರ್ಯವನ್ನು ಮಾಡಲು ಶಕ್ತಿಯನ್ನು ಅನುಗ್ರಹಿಸುವ ಈ ಶಕ್ತಿಗೀತೆಯಲ್ಲಿ ಮೊದಲಿಗೆ ದೇವರ ಪಾದಾರವಿಂದಗಳ ಮಾಹಾತ್ಮ್ಯ ಅದ್ಭುತವಾಗಿ ಚಿತ್ರಣವಾಗಿದೆ. ದೇವರ ಪಾದವನ್ನು ಆಶ್ರಯಿಸಿದರೆ ಮಾತ್ರ ಸುಖ, ಇಲ್ಲದಿದ್ದರೆ ಇಲ್ಲ ಎಂಬ ತತ್ವವನ್ನು ತತ್ವಾಭಿಮಾನಿದೇವತೆಗಳು ಪ್ರತಿಪಾದಿಸಿರುವ ಭಾಗ. 

ಬ್ರಹ್ಮವಿದ್ಯೆಗೆ ಛಾಯಾ ಎಂಬ ಹೆಸರಿದೆ, ಮತ್ತು ಆ ಹೆಸರು ಯಾಕಾಗಿ ಬಂದಿದೆ ಎಂಬ ಅಪೂರ್ವ ತತ್ವದ ವಿವರಣೆ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯಗಳ ವಚನಗಳು — 

देवा ऊचुः

नताः स्म ते देव पदारविन्दं प्रपन्नतापोपशमातपत्रम्। 
यन्मूलकेता यतयोऽञ्जसोरुसंसारदुःखं बहिरुत्क्षिपन्ति ॥१७॥

ऋते यदस्मिन् भव ईश जीवास्तापत्रयेणाऽभिहता न शर्म। 
आत्मन् लभन्ते भगवंस्तवाङ्घ्रिच्छायाशविद्यामत आश्रयेम ॥१८॥

भागवततात्पर्यम्।

“ब्रह्मविद्या हरेश्छाया तदंशा हि सुरेष्वपि। 
सर्वविद्याः श्रियः प्रोक्ताः प्रधानांशश्चतुमुखः” इति ब्राह्मे ॥



Play Time: 39:06

Size: 1.37 MB


Download Upanyasa Share to facebook View Comments
8132 Views

Comments

(You can only view comments here. If you want to write a comment please download the app.)
  • No Comment