Upanyasa - VNU839

ಸಾಲದ ಬಾಧೆಯನ್ನು ಪರಿಹರಿಸುವ ಚರಿತ್ರೆ

11/10/2019

ಕೊಟ್ಟ ಸಾಲ ತಿರುಗಿ ಬಾರದೇ ಇದ್ದಾಗ, ಅಥವಾ ವಿಪರೀತ ಸಾಲವಾಗಿ ತೀರಿಸಲು ಸಾಧ್ಯವಾಗದೇ ಇದ್ದಾಗ ಆ ಸಾಲದಬಾಧೆಯಿಂದ ಹೊರಬರಲು ಆಚಾರ್ಯರ ಚರಿತ್ರೆಯನ್ನು ಪ್ರತಿದಿವಸ ಮೂರು ಬಾರಿ ಶ್ರವಣ ಮಾಡಿ. ಭಾವಿಮುಖ್ಯಪ್ರಾಣ ಶ್ರೀ ವಾದಿರಾಜತೀರ್ಥಗುರುಸಾರ್ವಭೌಮರು ಅನುಗ್ರಹಿಸಿರುವ ಋಣಮೋಚನ ಸ್ತೋತ್ರವೂ ವಿಶ್ವನಂದಿನಿಯಲ್ಲಿ ಉಪಲಬ್ಧವಿದೆ. ಅದನ್ನು ಪಠಣ ಮಾಡಿ. ಋಣಬಾಧೆ ಪರಿಹಾರವಾಗುತ್ತದೆ. 

ಶ್ರೀ ಮಧ್ಯಗೇಹಾರ್ಯರು ಎತ್ತೊಂದನ್ನು ಕೊಂಡಿರುತ್ತಾರೆ. ಆದರೆ, ಅದರ ಪೂರ್ಣ ಹಣವನ್ನು ತೀರಿಸಲು ಸಾಧ್ಯವಾಗಿರುವದಿಲ್ಲ. ಎತ್ತು ಮಾರಿದ ವ್ಯಕ್ತಿ ಮನೆಬಾಗಿಲಿಗೇ ಬಂದು ಕುಳಿತಿರುತ್ತಾನೆ. ಪುಟ್ಟ ವಾಸುದೇವ ಕೈಯಲ್ಲಿ ಹುಣಿಸೇಬೀಜಗಳನ್ನು ಹಿಡಿದುಕೊಂಡು ಹೋಗಿ ಅದನ್ನು ಆ ಶೆಟ್ಟಿಗೆ ನೀಡುತ್ತಾನೆ, ಅವನಿಗೆ ದೊರೆಯಬೇಕಾದ ಹಣ ದೊರೆತುಬಿಡುತ್ತದೆ, ಅಷ್ಟೇ ಅಲ್ಲ ಅವನ ಆಧ್ಯಾತ್ಮಿಕ ಉನ್ನತಿಯೂ ಆಗುತ್ತದೆ. ಆ ಶ್ರೇಷ್ಠ ಘಟನೆಯ ವಿವರ ಇಲ್ಲಿದೆ. 


लीलावसानसमये सहसा कदाचित्‌
आर्योऽमुनाऽभ्यवहृतिं प्रति चोद्यमानः ।
रोद्धैष नोऽस्ति धनिको वृषविक्रयीति
प्रोवाच नन्दनमुखेन्दुमवेक्ष्य मन्दम्‌  ॥ 50॥

लीलाकरेण स करेण सुकोमलेन  
बीजान्तराणि किल कानिचिदाशु तस्मै ।
स्मित्वाऽर्भकोऽभिमतनिष्कपदे यदाऽदा
दादत्त तानि धनिको बहुमानपूर्वम्‌  ॥ 51॥

लब्धं सुतादिति वदन्‌ द्विजपुङ्गवेन
कालान्तरे निजधने प्रतिदित्सितेऽपि ।
साक्षादमानवनवाकृतितः स लेभे
बीजच्छलेन पुरुषार्थमहो विशिष्टम्‌  ॥ 52॥


Play Time: 06:18

Size: 1.49 MB


Download Upanyasa Share to facebook View Comments
1983 Views

Comments

(You can only view comments here. If you want to write a comment please download the app.)
  • Satyanarayana,Hubli

    6:00 AM , 26/10/2019

    ಸಾಲದ ಬಾದೆ ತುಂಬಾನೆ ಅದಕ್ಕೆ ಕೇಳಿದೆ ತಪ್ಪು ಇದಲಿ ಕ್ಷಮಿಸಿ
  • Satyanarayana,Hubli

    5:55 AM , 26/10/2019

    ಕೇಳಿದರೆ ಸಾಕು ಮನಸ್ಸು ತೃಪ್ತಿ ಆಗುತ್ತೆ
  • Satyanarayana,Hubli

    5:54 AM , 26/10/2019

    Upanyasa VNU 839 ಹುಣಸೆ ಬಿಜದ ಬಗ್ಗೆ ಹೇಳಿರಲಾ ಇದು ಯಾವ ಊರಲ್ಲಿ ಇದೆ
  • Jasyashree Karunakar,Bangalore

    1:45 PM , 22/10/2019

    839
    ಗುರುಗಳೆ ಶ್ರೀಮದಾನಂದತೀಥ೯ಭಗವತ್ಪಾದಾಚಾಯ೯ಗುರುಗಳ ಒಂದೊಂದು ಮಹಿಮೆಯನ್ನು ಕೇಳಿದಾಗಾಲೂ  ಎನೂ ಒಂದು ಅದ್ಭುತವಾದ ಆನಂದವಾಗುತ್ತದೆ ಮನಸ್ಸಿಗೆ...
    
    ನೀವು ಬರಿಯ ಕಥೆಯನ್ನು ಹೇಳುತ್ತಿಲ್ಲ ಗುರುಗಳೆ....
    ನಮ್ಮ ಮನಸ್ಸಿನಲ್ಲಿ ಆ ಅದ್ಭುತವಾದ ಘಟನೆಯನ್ನು ಅಚ್ಚೊತ್ತುವಂತೆ ಭಕ್ತಿಯನ್ನು ನೀಡುತ್ತಾ ಹೇಳುತ್ತೀರ.....
    ಅದಕ್ಕೆ ಅದು ಆದ್ರ೯ತೆಯ ಭಾವವನ್ನು ನೀಡುತ್ತದೆ....
    
    ಹುಣಸೇ ಬೀಜದ ಲೆಕ್ಕವನ್ನು ಮಾಡುವಾಗಲೂ ಸಹಿತ.....
    
    ನೀವು ಒಂದು...ಎರಡು....ಮೂರು ಅಂತ ಹೇಳುವ ಸಂಧಭ೯ದಲ್ಲಿ ಸಹಿತ.....ನಾವೂ ಕೂಡ ಆ ಕಾಲಕ್ಕೆ ಹೋಗಿ, ಇನ್ನೇನು ಆ ಘಟನೆಯನ್ನು ಕಣ್ತುಂಬಿಸಿಕೊಳ್ಳುತ್ತೇವೆಯೊ ಎನೊ ...ಅನ್ನುವಂತಾಗಿಬಿಡುತ್ತದೆ...
    
    ನಿಮ್ಮ ಉಪನ್ಯಾಸಗಳ ವೖಶಿಷ್ಟ್ಯ ಅದು....🙏
  • Satyanarayana R B,Bengaluru

    9:42 PM , 19/10/2019

    ಅದ್ಭುತ. ಆಚಾರ್ಯರೇ
  • Santosh Patil,Gulbarga

    2:02 PM , 15/10/2019

    Thanks Gurugale 🙏