Upanyasa - VNU844

ವಾಸುದೇವನ ಜೊತೆಯಲ್ಲಿ ನಡೆದಾಡಿದ ದೇವರು

20/10/2019

ವಾಸುದೇವ ಏಕಾಂಗಿಯಾಗಿ ಹೊರಟ ಬಳಿಕ ಮಧ್ಯಗೇಹಾರ್ಯರು ಹುಡುಕಿಕೊಂಡು ಬರುತ್ತಾರೆ. ಕಾಡಿನ ದಾರಿಯಲ್ಲಿ ಒಬ್ಬನೇ ಹೇಗೆ ಬಂದೆ ಎಂದಾಗ, ದೇವರು ಜೊತೆಯಲ್ಲಿದ್ದ ಎಂಬ ಮಗನ ಉತ್ತರ ಅವರನ್ನು ಆಶ್ಚರ್ಯದ ಕಡಲಿನಲ್ಲಿ ಮುಳುಗಿಸುತ್ತದೆ. ಆ ಘಟನೆಯ ವಿವರ ಇಲ್ಲಿದೆ

Play Time: 33:07

Size: 7.63 MB


Download Upanyasa Share to facebook View Comments
937 Views

Comments

(You can only view comments here. If you want to write a comment please download the app.)
  • Jasyashree Karunakar,Bangalore

    2:21 PM , 23/10/2019

    ಭೂತ ಪಿಶಾಚಿಗಳಿರುವ ಕಾಡನ್ನೂ ಲೆಕ್ಕಿಸದೆ ......
    ಮನಸ್ಸು  ಮಧ್ಯಗೇಹಾಯ೯ರ ಹಿಂದೆಯೇ ಓಡಿತ್ತು....
     ಕಾನನದೇವತಾ ಸದನ ದಾಟಿಕೊಂಡು,  ಆ ಬಾಲರೂಪದ ಮುಖ್ಯಪ್ರಾಣನ ಕಾಣಲೆಂದು...
    
    ನಮ್ಮ ಮನಸ್ಸು   ಲೌಕಿಕ ವಸ್ತುಗಳ ಹಿಂದೆ ಓಡದೆ, ಹರಿವಾಯು  ಗುರುಗಳ ಹಿಂದೆ ಓಡುವಂತಾಗುತ್ತಿರುವದು ನೀವು ನೀಡುತ್ತಿರುವ ಉಪನ್ಯಾಸಗಳ ಪ್ರಭಾವ...
    
    ನಿಮಗೆ ಭಕ್ತಿಯ ನಮನ....
    
    ಕಣ್ಣಿಗೆ ಕಾಣುವ ಪರದೆಯಲ್ಲಿ ಮನುಷ್ಯನ ವಿವಿಧ ಭಾವನೆಗಳನ್ನು ಸುಲಭವಾಗಿ ವೖಭವೀಕರಿಸಬಹುದು...
    
    ಆದರೆ ನೀವು ಇಲ್ಲಿ ಮಾಡಿದ್ದು ಮನದ ಪರದೆಯಲ್ಲಿ ಏಕಕಾಲದಲ್ಲಿ ವಿವಿಧ ಭಾವಗಳನ್ನು ನಮ್ಮ *ಅನುಭವಕ್ಕೆ* ತಂದುಕೊಟ್ಟಿದ್ದು...
    
    ತಪ್ಪಿಸಿಕೊಂಡ ಮಗನನ್ನು ಹುಡುಕುವ ತಂದೆಯ ಮನಸ್ಸಿನ ದುಗುಡ....
    
    ಅಮಂಗಲವಾಗ ಬಾರದೆಂದು ಒತ್ತರಿಸಿಬರುವ ದುಃಖವನ್ನು ಹತ್ತಿಕ್ಕುವ ಕ್ಷಣಗಳು....
    
    ಸಕಲ ದುಮ೯ತವನ್ನು ಖಂಡಿಸುವ ಜಗದ್ಗುರುವಿನ ಲಕ್ಷಣವನ್ನು ಬಿಂಬಿಸುವ ಪರಿ ಮತ್ತೊಂದೆಡೆ....
    
    ಹುಡುಕಿ ಹುಡುಕಿ, ಬಸವಳಿದು ಹೋದ ದುಂಬಿಗೆ ಮಕರಂದವನ್ನು ಹೊತ್ತ ಕಮಲ ದೊರೆತಂತೆ...
    
    ಕಳೆದು ಹೋಗಿದ್ದ  ಮಗನನ್ನು ಕಂಡಾಗ, ಬಂದ ಆನಂದಾಶ್ರುವನ್ನು ತಡೆಹಿಡಿದದ್ದು...
    
    ನಂತರ ಮಗನ ರಕ್ಷಣೆಗಾಗಿ ಭಗವಂತನನ್ನು ಬೇಡುವ ಪರಿ....
    
    ಮನಸ್ಸನ್ನೇ ಕದಡಿ ಬಿಡುತ್ತದೆ....
    
    ಒಂದೊಂದು ಭಾವಗಳ ನಿರೂಪಣೆಯೂ ಅದ್ಭುತ...
    ಮನಸ್ಸಿಗೆ ಮೃಷ್ಟಾನ್ನ ದೊರಕಿದಂತಾಯಿತು....
    
    ಗುರುಭಕ್ತಿಯನ್ನು ಹೆಚ್ಚಿಸುವ ಮಧ್ವಚರಿತೆಯನ್ನು ಮನಸ್ಸಿನಲ್ಲಿ ಮೂಡಿಸಿದ ಗುರುಗಳಿಗೆ ಮತ್ತೊಮ್ಮೆ 
    ಭಕ್ತಿಯ ನಮನಗಳು🙏🙏🙏