20/12/2019
ಶ್ರೀಕೃಷ್ಣನ ಪ್ರತಿಮೆ ನಿರ್ಮಾಣವಾದ ರೀತಿ, ಉಡುಪಿಗೆ ಬಂದ ವಿವರ, ಶ್ರೀಮದಾಚಾರ್ಯರು ಅದನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿದ ಕ್ರಮದ ವಿವರಣೆಯನ್ನು ಶ್ರೀಮಧ್ವವಿಜಯದ ಉಪನ್ಯಾಸದಲ್ಲಿ [VNU277] ಮತ್ತು ಪಂಚಾಮೃತ ಎಂಬ ಫೋಲ್ಡರಿನಲ್ಲಿ ಸಹಿತ ಪ್ರಕಟಿಸಲಾಗಿದೆ. [VNU439] ಕೃಷ್ಣಂ ವಂದೇ ಮಂಥಪಾಶಧರಂ ದಿವ್ಯಾರ್ಭಕಾಕೃತಿಮ್ । ಶಿಖಾಬಂಧತ್ರಯೋಪೇತಂ ಭೈಷ್ಮೀಮಧ್ವಕರಾರ್ಚಿತಮ್ । ಮಂಥಪಾಶಧರಂ ಕಡೆಗೋಲು, ಹಗ್ಗಗಳನ್ನು ಹಿಡಿದ ದಿವ್ಯಾರ್ಭಕಾಕೃತಿಮ್ ಪರಮಾದ್ಭುತವಾದ ಮಗುವಿನ ರೂಪದಲ್ಲಿರುವ ಶಿಖಾಬಂಧತ್ರಯೋಪೇತಂ ತಲೆಯಲ್ಲಿ ಮೂರು ಕಟ್ಟಿದ ಜುಟ್ಟುಗಳುಳ್ಳ ಭೈಷ್ಮೀಮಧ್ವಕರಾರ್ಚಿತಮ್ ರುಕ್ಮಿಣೀದೇವಿಯರ, ಶ್ರೀಮದಾಚಾರ್ಯರ ಕರಗಳಿಂದ ಪೂಜಿತನಾದ ಕೃಷ್ಣಂ ಉಡುಪಿಯ ಶ್ರೀಕೃಷ್ಣನನ್ನು ವಂದೇ ಸ್ತುತಿಸುತ್ತೇನೆ, ನಮಸ್ಕರಿಸುತ್ತೇನೆ.
Play Time: 3:13
Size: 2.27 MB