21/12/2019
ಸಾಡೇಸಾತಿಯ ಪರಿಹಾರಕ್ಕೆ, ಅಷ್ಟಮಶನಿಯ ಪರಿಹಾರಕ್ಕೆ, ಜಾತಕದಲ್ಲಿ ಶನಿ ದುಸ್ಥಾನದಲ್ಲಿರುವದ ರಿಂದ ಉಂಟಾಗುವ ದೋಷದ ಪರಿಹಾರಕ್ಕೆ ರಾಮಬಾಣದಂತಹ ಸ್ತೋತ್ರವನ್ನು ಭಾವಿಸಮೀರರಾದ ಶ್ರೀಮದ್ ವಾದಿರಾಜತೀರ್ಥಗುರುಸಾರ್ವಭೌಮರು ಅನುಗ್ರಹಿಸಿದ್ದಾರೆ. ಇದನ್ನು ಪ್ರತೀನಿತ್ಯ 108 ಬಾರಿ (ಅನಿವಾರ್ಯ ಸಂದರ್ಭಗಳಲ್ಲಿ ಯಥಾಶಕ್ತಿ) ಜಪ ಮಾಡುವದರಿಂದ ಸಕಲ ದುಷ್ಫಲಗಳೂ ಪರಿಹಾರವಾಗುತ್ತವೆ. ಭಕ್ತಿಯಿಂದ ಮಾಡುವ ಪ್ರಾರ್ಥನೆ ಶೀಘ್ರದಲ್ಲಿ ಪರಿಹಾರವನ್ನು ನೀಡುತ್ತದೆ. ಶನೇ ದಿನಮಣೇಃ ಸೂನೋ ಹ್ಯನೇಕಗುಣಸನ್ಮಣೇ । ಅರಿಷ್ಟಂ ಹರ ಮೇಽಭೀಷ್ಟಂ ಕುರು ಮಾ ಕುರು ಸಂಕಟಮ್ ॥ ದಿನಮಣೇಃ ಸೂನೋ ದಿನಮಣಿ ಎಂದರೆ ಸೂರ್ಯ, ಸೂನು ಎಂದರೆ ಮಗ. ಸೂರ್ಯನ ಪುತ್ರನಾದ ಅನೇಕಗುಣಸನ್ಮಣೇ ಕಾರುಣ್ಯ, ಜ್ಞಾನ ಮುಂತಾದ ಅನೇಕಸದ್ಗುಣಗಳಿಂದ, ರತ್ನದಂತೆ ಶೋಭಿಸುವ ಶನೇ ಓ ಶನೈಶ್ಚರನೇ, ಮೇ ನನ್ನ ಅರಿಷ್ಟಂ ಹರ ಎಲ್ಲ ಅನಿಷ್ಟವನ್ನು ದೂರ ಮಾಡು ಅಭೀಷ್ಟಂ ಕುರು = ನನ್ನ ಮನಸ್ಸಿನ ಅಭಿಷ್ಟವನ್ನು ದಯಪಾಲಿಸು ಸಂಕಟಂ ಮಾ ಕುರು ದುಃಖವನ್ನು ನೀಡಬೇಡ. ಭಕ್ತಿಯಿಂದ ಈ ಸ್ತೋತ್ರವನ್ನು ಅರ್ಥಾನುಸಂಧಾನ ಪೂರ್ವಕವಾಗಿ ಪಾರಾಯಣ ಮಾಡಿ. ಕಬ್ಬಿಣ ಶನಿಯಿಂದ ನಿಯಮಿತವಾದ ಲೋಹ. ಅದನ್ನು ಸದಾಚಾರಿಗಳಾದ ನಿತ್ಯ ಅಧ್ಯಯನಶೀಲರಾದ, ಗಾಯತ್ರೀಜಪಶೀಲರಾದ, ಯೋಗ್ಯರಾದ ಬ್ರಾಹ್ಮಣರಿಗೆ ದಾನ ಮಾಡುವದರಿಂದ ಶನೈಶ್ಚರ ಪ್ರೀತನಾಗುತ್ತಾನೆ. ಶನಿಯಿಂದ ಉಂ ಟಾಗುವ ದೋಷಗಳು ಪರಿಹಾರವಾಗುತ್ತವೆ. ಹೀಗಾಗಿ ಕಬ್ಬಿಣದ ದಾನವನ್ನು ಮಾಡಿ. ಶ್ರೀ ಲಕ್ಷ್ಮೀನರಸಿಂಹದೇವರ, ಪ್ರಾಣದೇವರ ಮತ್ತು ನವಗ್ರಹಗಳ ಮುಂದೆ, ಮನೆಯಲ್ಲಿ ಎಳ್ಳೆಣ್ಣೆಯ ದೀಪವನ್ನು ಹಚ್ಚಿ. ಶನೇ ದಿನಮಣೇಃ ಸೂನೋ ಹ್ಯನೇಕಗುಣಸನ್ಮಣೇ । ಅರಿಷ್ಟಂ ಹರ ಮೇಽಭೀಷ್ಟಂ ಕುರು ಮಾ ಕುರು ಸಂಕಟಮ್ ॥ ಅನೇಕಗುಣಳಿಂದ ಕೂಡಿದ, ದೇವತಾರತ್ನನಾದ, ಸೂರ್ಯಪುತ್ರನಾದ ಓ ಶನೈಶ್ಚರ, ನನ್ನ ಎಲ್ಲ ಅನಿಷ್ಟಗಳನ್ನು ಪರಿಹಾರ ಮಾಡು, ಎಲ್ಲ ಅಭೀಷ್ಟಗಳನ್ನು ಪೂರೈಸು, ಸಂಕಟವನ್ನುಂಟುಮಾಡಬೇಡ. ಶುಭವಾಗಲಿ. — ವಿಷ್ಣುದಾಸ ನಾಗೇಂದ್ರಾಚಾರ್ಯ
Play Time: 03:01
Size: 2.14 MB