14/01/2020
ಗುರುಗಳೇ ದ್ರೌಪದಿಯ ವಸ್ತ್ರಾಪಹರಣದ ಕುರಿತ ನನ್ನ ಅನೇಕ ಪ್ರಶ್ನೆಗಳಿವೆ. ದಯವಿಟ್ಟು ಪರಿಹರಿಸಬೇಕಾಗಿ ವಿನಂತಿ. 1. ನಾವು ಸಿನಿಮಾ ನಾಟಕಗಳಲ್ಲಿ ನೋಡಿದಂತೆ ಕೃಷ್ಣ ಮೇಲೆ ನಿಂತಿರುತ್ತಾನೆ, ಅವನ ಕೈಯಿಂದ ಸೀರೆ ಬರುತ್ತಿರುತ್ತದೆ. ಘಟನೆ ಈ ರೀತಿ ನಡೆಯಲು ಸಾಧ್ಯವೇ ಇಲ್ಲ ಅಲ್ಲವೇ. ದೇವರು ದ್ರೌಪದಿಗೆ ಹೇಗೆ ಸೀರೆಯನ್ನು ನೀಡಿದ ಎನ್ನುವದನ್ನು ತಿಳಿಸಿ. 2. ಮಹಾಭಾರತ ಅಧ್ಯಾತ್ಮಿಕ ಅರ್ಥದಿಂದ ಕೂಡಿದ್ದು ಎನ್ನುತ್ತಾರೆ. ದ್ರೌಪದಿಯ ವಸ್ತ್ರಾಪಹರಣಕ್ಕೇನಾದರೂ ಆಧ್ಯಾತ್ಮಿಕ ಅರ್ಥ ಇದ್ದಲ್ಲಿ ತಿಳಿಸಿ. 3. ದಾಸಸಾಹಿತ್ಯದಲ್ಲಿ ಮೇಲಿಂದ ಮೇಲೆ ದ್ರೌಪದೀರಕ್ಷಣೆಯ ಕುರಿತ ಮಾತು ಬರುತ್ತದೆ, ಏನಾದರೂ ವಿಶೇಷ ಕಾರಣವಿದೆಯೇ? 4. ಭಾರತೀ ವಾಯುದೇವರಿಗೆ ದುಃಖವಿಲ್ಲ ಎನ್ನುತ್ತಾರೆ, ವಸ್ತ್ರಾಪಹರಣದ ಸಂದರ್ಭದಲ್ಲಿ ದುಃಖವಾಯಿತಲ್ಲವೇ? ಕಡೆಯ ಪ್ರಶ್ನೆ — 5. ವಸ್ತ್ರಾಪಹರಣದಂತಹ ಘೋರ ಕೃತ್ಯ ನಡೆಯಬೇಕಾದರೆ ಪಾಂಡವರೇಕೆ ಸುಮ್ಮನಿದ್ದರು?
Play Time: 22:54
Size: 1.37 MB