07/03/2020
ಮೂಲರಾಮಾಯಣವನ್ನು ನಾರದರಿಂದ ಕೇಳಿ, ರಾಮಚಂದ್ರನನ್ನು ಸಾಕ್ಷಾತ್ತಾಗಿ ಕಾಣುತ್ತ, ಬ್ರಹ್ಮದೇವರ ಅನುಗ್ರಹದಿಂದ ಸಮಗ್ರ ರಾಮಾಯಣದ ಎಲ್ಲ ಘಟನೆಗಳನ್ನೂ ಮನಃಪಟಲದಲ್ಲಿ ಕಂಡ ವಾಲ್ಮೀಕಿ ಮಹರ್ಷಿಗಳು ಪರಮಾದ್ಭುತವಾಗಿ ರಾಮಾಯಣವನ್ನು ರಚಿಸಿ ಅದನ್ನು ತಮ್ಮ ಆಶ್ರಮದಲ್ಲಿ ರಾಮನ ಮಕ್ಕಳಿಂದಲೇ ಪ್ರಯೋಗ ಮಾಡಿಸುತ್ತಾರೆ. ಕುಶೀಲವರಾದ (ಅದ್ಭುತ ಪ್ರತಿಭೆ ಉಳ್ಳವರನ್ನು ಕುಶೀಲವ ಎನ್ನುತ್ತಾರೆ) ಕುಶಲವರಿಬ್ಬರೂ ಸಮಗ್ರ ರಾಮಾಯಣವನ್ನು ಋಷಿಗಳ ಸಭೆಯಲ್ಲಿ ಹಾಡಿದಾದ ಆ ಮುನಿಗಳೆಲ್ಲರೂ ತಮ್ಮ ಕಣ್ಣ ಮುಂದೆಯೇ ರಾಮಾಯಣ ನಡೆಯುತ್ತಿದೆ ಎನ್ನುವಂತೆ ಆಸ್ವಾದಿಸುತ್ತಾರೆ. ಗುರುಗಳ ಆಜ್ಙೆಯಂತೆ ಗ್ರಾಮಗ್ರಾಮಗಳಲ್ಲಿ ರಾಮಾಯಣದ ಗಾನವನ್ನು ಮಾಡುವಾಗ, ಸ್ವಯಂ ಶ್ರೀರಾಮಚಂದ್ರನೂ ಅದನ್ನು ಕೇಳಿ, ತನ್ನ ಸಭೆಗೆ ಕರೆಯಿಸಿ ಆ ತನ್ನ ಮಕ್ಕಳಿಂದ ರಾಮಾಯಣವನ್ನು ಶ್ರವಣ ಮಾಡಿದ ಘಟನೆಯ ವಿವರ ಇಲ್ಲಿದೆ.
Play Time: 33:32
Size: 1.37 MB