08/03/2020
ಸಾಧನೆ ಮಾಡುವ ಸಂದರ್ಭದಲ್ಲಿ ಯಾವ ರೀತಿಯ ಭ್ರಾಂತಿಗೂ ಒಳಗಾಗಬಾರದು, ನಮಗೆ ವಿಹಿತವಲ್ಲದ ಮಾರ್ಗದಲ್ಲಿ ನಡೆಯಬಾರದು ಎಂಬ ಬಹಳ ದೊಡ್ಡ ಪಾಠವನ್ನು ಕಲಿಸುವ ಕಥೆ ಋಷ್ಯಶೃಂಗರ ಕಥೆ. ಮಹಾಭಾರತದ ವನಪರ್ವದಲ್ಲಿ, ವಾಲ್ಮೀಕಿರಾಮಾಯಣದ ಬಾಲಕಾಂಡದಲ್ಲಿ ಮತ್ತು ಸಂಗ್ರಹರಾಮಾಣಯದಲ್ಲಿ ನಿರೂಪಿತವಾದ ಕಥೆಯ ನಿರೂಪಣೆ ಇಲ್ಲಿದೆ, ಮಧ್ಯದಲ್ಲಿ ಮೂಡಿಬರುವ ಪ್ರಶ್ನೆಗಳಿಗೆ ಉತ್ತರ ನೀಡುವದರಿಂದಿಗೆ. ಋಷಿಗಳು ವಿಚಿತ್ರವಾದ ರೀತಿಯಲ್ಲಿ ಮಕ್ಕಳನ್ನು ಪಡೆಯುವದನ್ನು ನಾವು ಪುರಾಣಗಳಲ್ಲಿ ತಿಳಿಯುತ್ತೇವೆ. ಋಷಿಗಳು ಕಾಮಾಂಧರಲ್ಲ ಎನ್ನುವ ತತ್ವದ ನಿರೂಪಣೆಯೊಂದಿಗೆ ಅವರ ಅಪಾರ ಇಂದ್ರಿಯನಿಗ್ರಹದ ಕುರಿತ ಚಿಂತನೆ ಇಲ್ಲಿದೆ. ಅಪ್ಸರೆಯೊಬ್ಬಳು ಬ್ರಹ್ಮದೇವರ ಶಾಪದಿಂದ ಜಿಂಕೆಯಾಗಿರುತ್ತಾಳೆ. ಜಿಂಕೆಯಾಗಿ ಋಷಿಯೊಬ್ಬನನ್ನು ಹಡೆದರೆ ಶಾಪವಿಮೋಚನೆಯಾಗುತ್ತದೆ ಎಂದು ಅನುಗ್ರಹಿಸಿರುತ್ತಾರೆ. ಅಮೋಘವೀರ್ಯರಾದ ವಿಭಾಂಢಕರಿಗೆ ಊರ್ವಶಿಯನ್ನು ಕಂಡು ರೇತಃಸ್ಖಲನವಾದಾಗ ಆ ವೀರ್ಯವನ್ನು ಕುಡಿದ ಜಿಂಕೆ ಋಷ್ಯಶೃಂಗರನ್ನು ಹಡೆದ ಘಟನೆಯ ವಿವರ ಇಲ್ಲಿದೆ. ಅಂಗದೇಶದ ರಾಜ ರೋಮಪಾದ. ಮಹಾಧಾರ್ಮಿಕ. ಆದರೂ ಅವನಿಂದ ಒಮ್ಮೆ ಮಹತ್ತರ ಅಪಚಾರವಾಗುತ್ತದೆ. ಅದನ್ನು ನೀಡುತ್ತೇನೆ, ಇದನ್ನು ನೀಡುತ್ತೇನೆ ಎಂದು ಶ್ರೇಷ್ಠ ಬ್ರಾಹ್ಮಣರಿಗೆ ಹೇಳಿ ಅವರಿಂದ ಯಜ್ಞ ಮಾಡಿಸುತ್ತಾನೆ, ಯಜ್ಞ ಮುಗಿದ ನಂತರ ಅವರಿಗೆ ಅದನ್ನು ನೀಡದೆ ಕಳುಹಿಸಿಬಿಡುತ್ತಾನೆ, ಈ ಅಪಚಾರದಿಂದ ಅವನ ರಾಜ್ಯದಲ್ಲಿ ಮಳೆಯಾಗದೇ ಕ್ಷಾಮ ಆವರಿಸಿಬಿಡುತ್ತದೆ. ಪ್ರಾಸಂಗಿಕವಾಗಿ “ಅಸಂತುಷ್ಟೋ ದ್ವಿಜೋ ನಷ್ಟಃ” ಎಂಬ ವಾಕ್ಯದ ವಿವರಣೆ ಇಲ್ಲಿದೆ.
Play Time: 31:38
Size: 1.37 MB