Upanyasa - VNU890

ವೇಶ್ಯೆಯರ ಸಾಹಸ

08/03/2020

ಋಷ್ಯಶೃಂಗರು ಹುಟ್ಟಿನಿಂದ ಹೆಣ್ಣನ್ನೇ ಕಂಡಿಲ್ಲ, ಹೀಗಾಗಿ ಹೆಣ್ಣಿನ ಪ್ರಲೋಭನೆಯನ್ನೊಡ್ಡಿ ಅವರನ್ನು ನಮ್ಮ ರಾಜ್ಯಕ್ಕೆ ಕರೆತರಬಹುದು ಎಂದು ಆಲೋಚಿಸಿದ ರೋಮಪಾದ ನಗರದ ವೇಶ್ಯೆಯರಿಗೆ ಈ ಕಾರ್ಯ ಮಾಡಲು ತಿಳಿಸುತ್ತಾನೆ. ಆದರೆ ಶಾಪದ ಭಯದಿಂದ ಅವರ್ಯಾರೂ ಸಿದ್ಧರಾಗದೇ ಇದ್ದಾಗ ಮುದಿ ವೇಶ್ಯೆಯೊಬ್ಬಳು ಬಂದು ತಾನು ಕೇಳುವ ಪದಾರ್ಥಗಳನ್ನು ನೀಡಿದರೆ ನಾನು ಪ್ರಯತ್ನಿಸುತ್ತೇನೆ ಎನ್ನುತ್ತಾಳೆ. 

ಅವಳು ಕೇಳಿದ ಎಲ್ಲ ವ್ಯವಸ್ಥೆಯೂ ಆಗುತ್ತದೆ. ತನ್ನ ಮಗಳನ್ನೇ ಸಿದ್ಧಗೊಳಿಸಿ ಆ ಮುದುಕಿ ಋಷ್ಯಶೃಂಗರನ್ನು ಕರೆತರುವ ಸಾಹಸಕ್ಕೆ ಕೈ ಹಾಕುತ್ತಾಳೆ. ಆ ವೇಶ್ಯೆಯರು ಮಾಡಿದ ಸಾಹಸ, ಋಷ್ಯಶೃಂಗರ ಮುಗ್ಧತೆಯ ಚಿತ್ರಣ ಇಲ್ಲಿದೆ. 

ಒಟ್ಟಾರೆ ಈ ಪ್ರಸಂಗದಿಂದ ನಾವು ಕಲಿಯಬೇಕಾದ ಪಾಠಗಳ ಚಿಂತನೆ ಇಲ್ಲಿದೆ. ಬ್ರಹ್ಮಚರ್ಯ, ಸಮಾಜರಕ್ಷಣೆ ಮುಂತಾದ ವಿಷಯಗಳಲ್ಲಿ ಹುಚ್ಚುಚ್ಚು ಆಲೋಚನೆಗಳು ಸಲ್ಲದು ಎಂಬ ತತ್ವದ ನಿರೂಪಣೆಯೊಂದಿಗೆ. Play Time: 56:04

Size: 1.37 MB


Download Upanyasa Share to facebook View Comments
1629 Views

Comments

(You can only view comments here. If you want to write a comment please download the app.)
 • Shilpa,London

  8:25 PM , 28/03/2020

  ಅದ್ಭುತವಾದ ನಿರುಪಣೆ 🙏🙏
  ಆಚಾರ್ಯರೆ, ಒಂದು ಸಣ್ಣ ಪ್ರಶ್ನೆ. ವೇಶ್ಯಯರು ಕರಿದ ಪದಾರ್ಥಗಳನ್ನು ಬ್ರಾಹ್ಮಣನಿಗೆ ನೀಡುವುದು ಶಾಸ್ತ್ರ ವಿಹಿತ ಆಗುವುದಿಲ್ಲ ಅಲ್ಲವೇ? ದಯವಿಟ್ಟು ತಿಳಿಸಿ 🙏🙏

  Vishnudasa Nagendracharya

  ಈ ಪ್ರಶ್ನೆಗೆ ಅನೇಕ ಉತ್ತರಗಳಿವೆ. 
  
  1. ಋಷ್ಯಶೃಂಗರನ್ನು ಕರೆತರುವ ಅನಿವಾರ್ಯವಿತ್ತು, ಹೀಗಾಗಿ ಈ ಕ್ರಮವನ್ನು ವೇಶ್ಯೆಯರು ಅನುಸರಿಸುವದೂ ಅನಿವಾರ್ಯವಿತ್ತು. 
  
  2. ವೇಶ್ಯೆಯರು ಅಸ್ಪೃಶ್ಯರಲ್ಲ. ಅವರೂ ಸಹ ಸಮಾಜದ ಒಂದು ಅಂಗ. ಬ್ರಾಹ್ಮಣನಿಗೆ ವಿಶೇಷ ನಿಯಮಗಳಿರುವದು ಸತ್ಯ. ಆದರೆ ವೇಶ್ಯೆಯರು ಮಾಡಿದ ಪದಾರ್ಥಗಳನ್ನು ಉಳಿದವರು ತಿನ್ನಬಾರದು ಎಂದಿರಲಿಲ್ಲ. ಹಿಂದಿನ ಕಾಲದಲ್ಲಿ ವೇಶ್ಯೆಯರ ಮನೆಯಲ್ಲಿಯೇ ಜನರು ಅನೇಕ ವರ್ಷ ಉಳಿದುಕೊಳ್ಳುತ್ತಿದ್ದರು. ಹೀಗಾಗಿ ಅವರ ಕೈಯಲ್ಲಿ ಭೋಜನ ಮಾಡಬಾರದು ಎಂಬ ನಿಯಮವಿಲ್ಲ. 
  
  ವೇಶ್ಯಾವೃತ್ತಿ ಎನ್ನುವದು “ವೇಶ್ಯೆಯಾಗಬೇಕು ಎಂದು ಬಯಸುವ” ನಿರ್ದಿಷ್ಟ ಗುಂಪಿನ ಸ್ತ್ರೀಯರಿಗೆ ಧರ್ಮವೇ ಆಗಿದೆ. ಮನುಷ್ಯರು ಅನುಸರಿಸಬೇಕಾದ ವೃತ್ತಿಗಳ ಕುರಿತು ಮಾಡುವ ಉಪನ್ಯಾಸಗಳಲ್ಲಿ ಈ ವಿಷಯದ ಕುರಿತು ವಿವರವಾಗಿ ತಿಳಿಸುತ್ತೇನೆ. 
  
  3. ಪ್ರಾಚೀನ ಕಾಲದ ವೇಶ್ಯೆಯರೂ ಸಹ ಧರ್ಮಾಚರಣೆಯನ್ನು ಮಾಡುತ್ತಿದ್ದರು. ಭಗವಂತನಿಗೆ ನಿವೇದಿತವಾದದ್ದನ್ನೇ ಉಂಡು ಬದುಕುತ್ತಿದ್ದರು. ಹೀಗಾಗಿ ಅವರು ನಿಷಿದ್ಧ ಪದಾರ್ಥಗಳನ್ನು ತಂದು ಋಷ್ಯಶೃಂಗರಿಗೆ ನೀಡಲಿಲ್ಲ. 
  
  ಎಲ್ಲದಕ್ಕಿಂತ ಮುಖ್ಯವಾದ ಮತ್ತು ಪ್ರಧಾನವಾದ ಉತ್ತರಗಳು ಹೀಗಿವೆ — 
  
  4. ಮಳೆ ಸುರಿಸದ ಪ್ರದೇಶದಲ್ಲಿ ಕಾಲಿಟ್ಟರೆ ಮಳೆ ತರಿಸುವ ಸಾಮರ್ಥ್ಯವಿದ್ದ ಋಷ್ಯಶೃಂಗರಿಗೆ, ಯಾರು ಯಜ್ಞ ಮಾಡಿದರೆ ದೇವತೆಗಳೇ ಸಾಕ್ಷಾತ್ತಾಗಿ ಬಂದು ಹವಿಸ್ಸನ್ನು ಸ್ವೀಕರಿಸುತ್ತಾರೆಯೋ ಅಂತಹ ಋಷ್ಯಶೃಂಗರಿಗೆ, ತಾವು ತಿನ್ನುವ ಪದಾರ್ಥವನ್ನು ಶುದ್ಧಿ ಮಾಡಿಕೊಳ್ಳುವ ಪೂರ್ಣ ಸಾಮರ್ಥ್ಯವಿದೆ. ರಾಯರು ಮಾಂಸವನ್ನು ಹಣ್ಣು ಮಾಡಿದಂತೆ. ಹೀಗಾಗಿ ಅಶುದ್ಧವಾದ ಪದಾರ್ಥವನ್ನು ಋಷ್ಯಶೃಂಗರು ಸ್ಪರ್ಶ ಮಾಡಿದ ಮಾತ್ರಕ್ಕೆ ಅದು ಶುದ್ದವಾಗುತ್ತದೆ. 
  
  5. ಋಷ್ಯಶೃಂಗರ ದೃಷ್ಟಿಯಿಂದ ತಪ್ಪಲ್ಲದಿದ್ದರೂ, ವೇಶ್ಯೆಯರ ದೃಷ್ಟಿಯಿಂದ ತಪ್ಪಲ್ಲವೇ ಎಂದರೆ, ಖಂಡಿತ ತಪ್ಪಲ್ಲ. ಕಾರಣ, ಈ ಕಾರ್ಯ ಸಕಲ ಜಗತ್ತಿಗೆ ಹಿತಕಾರಿಯಾದದ್ದರಿಂದ ಭಗವಂತನಿಗೆ ಪ್ರಿಯವಾದದ್ದು. “ಸತಾಂ ಚ ಧಾರಕೋ ಧರ್ಮಃ” ಸಜ್ಜನರಿಗೆ ಯಾವುದು ಹಿತಕಾರಿಯೋ ಯಾವುದು ಸಜ್ಜನರನ್ನು ಉಳಿಸುತ್ತದೆಯೋ ಅದು ಧರ್ಮ. ಹೀಗಾಗಿ ವೇಶ್ಯೆಯರ ಈ ಸಾಹಸವೂ ಅಧರ್ಮವಲ್ಲ. ಮತ್ತು ಆ ಮುದಿವೇಶ್ಯೆ ಎಲ್ಲಿಯೂ ತಾನಾಗಲೀ ತನ್ನವರಾಗಲೀ ಧರ್ಮದ ಎಲ್ಲೆ ಮೀರದಂತೆ ನಡೆದುಕೊಳ್ಳುತ್ತಾಳೆ. 
  
  
 • Anirudhha r,Bangalore

  11:00 PM, 27/03/2020

  Adhutavagittu🙏
 • Bheemesha vaidya,Harapanahalli

  10:53 AM, 24/03/2020

  ಗುರುಗಳಿಗೆ ಪ್ರಣಾಮಗಳು
  
  ಹಾಗಾದರೆ ಋಷ್ಯಶೃಂಗರು ಶಾಸ್ತ್ರಾಧ್ಯಯನ ಮಾಡುತ್ತಿರಲಿಲ್ಲವೇ, ಶಾಸ್ತ್ರದ ಜ್ಞಾನವಿದೆ ಎಂದರೆ ಹೆಣ್ಣು ಎಂಬ ವಸ್ತು ಇದೆ ಎಂಬ ಜ್ಞಾನ ಸಹಜ ಅಲ್ಲವೇ, ವಿಭಾಂಡಕರಿಗೆ ಬಂದವರು ಯಾರು ಎಂದು ತಿಳಿಯಲು ಮೂರುದಿನ ತಮ್ಮ ತಪಸ್ಸನ್ನು ತ್ಯಜಿಸಿ ಆಶ್ರಮ ಕಾಯಬೇಕಿತ್ತೆ, ಅಂದರೆ ಅವರಿನ್ನು ಅಪರೋಕ್ಷಜ್ಞಾನವನ್ನು ಪಡೆದಿರಲಿಲ್ಲವೇ, ಬೇರೆಯ ರೂಪವನ್ನೆ ಪಡೆಯುವ ಶಕ್ತಿಯಿದ್ದ ವಿಭಾಂಡಕರಿಗೆ ಅಲ್ಲಗೆ ಬಂದವರ ಬಗ್ಗೆ ತಿಳಿಯಲು ಏಕೆ ಸಾಧ್ಯವಾಗಿರಲಿಲ್ಲ ?
  
  ದಯಮಾಡಿ ತಿಳಿಸಿ 🙏🙏🙏

  Vishnudasa Nagendracharya

  ಋಷ್ಯಶೃಂಗರ ಕುರಿತು ಪ್ರಶ್ನೆಗೆ “ಮಳೆ ತರಿಸಿದ ಋಷ್ಯಶೃಂಗರು” ಎಂಬ ಉಪನ್ಯಾಸದಲ್ಲಿ (ಹತ್ತನೆಯದು, ಇದರ ಮುಂದಿನದು) ಪೂರ್ಣವಾಗಿ ಉತ್ತರ ನೀಡಿದ್ದೇನೆ. 
  
  ವಿಭಾಂಡಕರ ಕುರಿತ ಪ್ರಶ್ನೆಗೆ ಉತ್ತರ — “ಮತ್ತಃ ಸ್ಮೃತಿರ್ಜ್ಞಾನಮಪೋಹನಂ ಚ” ಎಂದು ಗೀತೆಯಲ್ಲಿ ಪ್ರತಿಯೊಬ್ಬರ ಜ್ಞಾನವೂ ದೇವರ ಅಧೀನ ಎಂದು ತಿಳಿಸುತ್ತಾನೆ. ಋಷ್ಯಶೃಂಗರನ್ನು ಕರೆತರಲು ಬಂದ ವೇಶ್ಯೆಯರಿಗೆ, ಕರೆಸಿದ ರೋಮಪಾದಾದಿಗಳಿಗೆ ಶಾಪ ನೀಡಬಾರದು ಎಂದು ವಿಭಾಂಡಕರಿಗೆ ಆ ರೀತಿಯ ಜ್ಞಾನವನ್ನು ದೇವರು ಆ ಸಂದರ್ಭದಲ್ಲಿ ನೀಡುವದಿಲ್ಲ. 
  
  ಎರಡನೆಯದು, ಉಪನ್ಯಾಸದಲ್ಲಿ ತಿಳಿಸಿದ ಹಾಗೆ, ಮನುಷ್ಯರ್ಯಾರೋ ಈ ಕಾರ್ಯ ಮಾಡುತ್ತಿದ್ದಾರೆ ಎಂದು ವಿಭಾಂಡಕರಿಗೆ ಸಂಶಯವೂ ಬರುವದಿಲ್ಲ. ರಾಕ್ಷಸರ ಕೃತ್ಯವಿರಬಹುದು ಎಂದು ಆಲೋಚಿಸುತ್ತಾರೆ. ಹೀಗಾಗಿ ಯಾರಿವರು ಎಂದು ಆಲೋಚಿಸುವ ಪ್ರಯತ್ನವನ್ನೇ ವಿಭಾಂಡಕರು ಮಾಡುವದಿಲ್ಲ. 
 • Rakshit,Banglore

  7:26 PM , 24/03/2020

  ಧನ್ಯವಾದಗಳು ಗುರುಗಳೇ
 • Santosh Patil,Gulbarga

  10:50 AM, 24/03/2020

  Thanks Gurugale 🙏🙏🙏
 • deashmukhseshagirirao,Banglore

  6:30 AM , 24/03/2020

  🙏🏻🙏🏻🙏🏻🙏🏻🙏🏻