Upanyasa - VNU891

ಮಳೆ ತರಿಸಿದ ಋಷ್ಯಶೃಂಗರು

08/03/2020

ವೃದ್ಧೆ ಉಪಾಯದಿಂದ ಋಷ್ಯಶೃಂಗರನ್ನು ಅಂಗದೇಶಕ್ಕೆ ಕರೆತಂದದ್ದು, ಅವರು ಕಾಲಿಟ್ಟ ತಕ್ಷಣ ಮಳೆ ಸುರಿಯಲಾರಂಭಿಸಿದ್ದು, ಆ ಮಳೆಯನ್ನು ರಾಜನಿಂದಾರಂಭಿಸಿ ಪಶು ಪಕ್ಷಿ ಪ್ರಾಣಿಗಳವರೆಗೆ ಎಲ್ಲರೂ ಆಸ್ವಾದಿಸಿದ್ದು, ರೋಮಪಾದ ನಡೆದ ವೃತ್ತಾಂತವನ್ನೆಲ್ಲ ಋಷ್ಯಶೃಂಗರಿಗೆ ನಿವೇದಿಸಿಕೊಂಡು ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದ್ದು, ಹಾಗೂ ಸಿಟ್ಟಿಗೆ ಬಂದಿದ್ದ ವಿಭಾಂಡಕರನ್ನು ರೋಮಪಾದ ಶಾಂತಗೊಳಿಸಿದ ಅದ್ಭುತ ಕ್ರಮ ಇವೆಲ್ಲವನ್ನೂ ಇಲ್ಲಿ ಕೇಳುತ್ತೇವೆ. 

ಗೋವುಗಳಿಗೂ ಬ್ರಾಹ್ಮಣರಿಗೂ ಇರುವ ದಿವ್ಯ ಸಂಬಂಧದ ಕುರಿತು ನಾವಿಲ್ಲಿ ಕೇಳುತ್ತೇವೆ. ಕಾಲಿಟ್ಟ ತಕ್ಷಣ ಮಳೆ ಬರುವದು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಉತ್ತರ ಪಡೆಯುವದರೊಂದಿಗೆ. 

Play Time: 43:40

Size: 1.37 MB


Download Upanyasa Share to facebook View Comments
1231 Views

Comments

(You can only view comments here. If you want to write a comment please download the app.)
 • Vishwnath MJoshi,Bengaluru

  7:53 PM , 01/04/2020

  श्रीगुरुभ्यो नमः। अथ गुरुपादौ नमस्करोमि
  ಗುರುಗಳಿಗೆ ನಮಸ್ಕಾರ
  ರಾಮಾಯಣ ಪ್ರವಚನ ತುಂಬಾ ಸುಂದರವಾಗಿ ಮುಡಿಬರುತ್ತಿದೆ. ರಾಮಾಯಣದ "ಮಳೆ ತರಿಸಿದ ಖಷ್ಯಶೃಂಗರು" ಪ್ರವಚನ ಮಾಲಿಕೆ ಯಲ್ಲಿ ಒಂದು ಪ್ರಶ್ನೆ ಇದೆ. ವಿಭಾಂಡಕರು ರೋಮಪಾದರ ನಗರಕ್ಕೆ ಬಂದು ಖಷ್ಯಶೃಂಗರು ಶಾಂತಾದೇವಿಯರನ್ನ ಮದುವೆಯಾಗಿದ್ದನ್ನು ಕಂಡು ಮತ್ತು ಒಂದು ಆದೆಶವನ್ನು ಮಾಡುತ್ತಾರೆ ಎಂಬುವುದನ್ನು ಕೇಳಿದೆವು.
  
  ನನ್ನ ಪ್ರಶ್ನೆ , शास्त्र गल प्रकार ५ वर्षा केलगीन ಮಕ್ಕಳಿದ್ದ ರೆ, ಬಿಟ್ಟು ಹೋಗಬಾರದು ಕಳ್ಳತನ ಮಾಡಿಯಾದರು ಸಾಕಬೇಕು ಅಂಥ.ಇಲ್ಲಿ ಖಷ್ಯಶೃಂಗರು ಮಗ ಹುಟ್ಟಿದ ಕೂಡಲೇ ಬಿಟ್ಟುಹೊಗುವುದು ತಮ್ಮ ಜವಾಬ್ದಾರಿ ಯಿಂದ ದೂರಸರಿದ ಹಾಗೆ ಆಗಲ್ಲಿಲ್ಲವೆ. ಇದು शास्त्र गल ವಿರುದ್ದಾ ಅಲ್ಲವೆ. ಹೇಗೆ ಅರ್ಥ ಮಾಡಿಕೊಳ್ಳೊದು ಈ ಪ್ರಸಂಗವನ್ನು. ದಯವಿಟ್ಟು ತಿಳಿಸಿಕೊಡಿ ಎಂದು ಕೊರುತ್ತೇನೆ ಧನ್ಯವಾದಗಳು ಗುರುಗಳೆ.

  Vishnudasa Nagendracharya

  ಋಷ್ಯಶೃಂಗರು ಋಷಿಗಳು. ಅವರ ಪ್ರಧಾನವಾದ ಕಾರ್ಯ ತಪಸ್ಸು. ಅದನ್ನು ಬಿಟ್ಟು ರಾಜ್ಯದಲ್ಲಿರತಕ್ಕದ್ದಲ್ಲ ಎಂದು ಅಭಿಪ್ರಾಯ. 
  
  ಹಳ್ಳಿ-ನಗರ-ಪಟ್ಟಣಗಳ ಲೌಕಿಕ ಜೀವನದಲ್ಲಿ ವಾಸ ಮಾಡುತ್ತಿರುವ ಮನುಷ್ಯ ಹೆಂಡತಿ ಮಕ್ಕಳನ್ನು ಸಾಕುವದೇ ಕಾರ್ಯ. ಅದನ್ನು ಮಾಡಲೇಬೇಕು. ಹೆಂಡತಿ ಮಕ್ಕಳನ್ನು ಸಾಕದೇ ಬೇಜವಾಬ್ದಾರಿಯಿಂದ ಬದುಕಬಾರದು ಎನ್ನುವದು ಆ ನಿಯಮದ ತಾತ್ಪರ್ಯ. 
  
  ಆದರೆ, ಋಷ್ಯಶೃಂಗರ ಸಂದರ್ಭದಲ್ಲಿ ಆ ಸಮಸ್ಯೆಯಿಲ್ಲ. ಅವರು ಕಾಡಿಗೆ ಹಿಂತಿರುಗಲೇ ಬೇಕು. ಹೀಗಾಗಿ ಕೇವಲ ಮಗು ಹುಟ್ಟುವವರೆಗೆ ಮಾತ್ರ ರಾಜ್ಯವಾಸವಿರಲಿ, ಆ ನಂತರ ಕಾಡಿಗೆ ನಡೆದು ತಪಸ್ಸು ಮಾಡು ಎನ್ನುವದು ವಿಭಾಂಢಕರ ಆದೇಶದ ತಾತ್ಪರ್ಯ. 
  
  ಮತ್ತು, ಋಷ್ಯಶೃಂಗರು ತಮ್ಮ ಹೆಂಡತಿಯನ್ನೇನು ತೊರೆಯುವದಿಲ್ಲ. ಶಾಂತಾದೇವಿಯರನ್ನೂ ಜೊತೆಯಲ್ಲಿ ಕರೆದಕೊಂಡೇ ಕಾಡಿಗೆ ತೆರಳಿ ತಪಸ್ಸಿಗೆ ತೊಡಗುತ್ತಾರೆ. 
 • SUDHEENDRA H,Bengalore

  8:21 PM , 01/04/2020

  ಆಚಾರ್ಯರಿಗೆ ನಮಸ್ಕಾರಗಳು. 
   ಶ್ರೀಮದ್ ರಾಮಾಯಣ ಪ್ರವಚನ ಅದ್ಭುತವಾಗಿ ಬರುತ್ತಿದೆ ಋಷ್ಯಶೃಂಗರ ಕಥೆ ಮತ್ತು ನಾವು ಇರಬೇಕಾದ ಎಚ್ಚರ ಇವೆಲ್ಲಾ ಬಹಳ ಚೆನ್ನಾಗಿದೆ.
 • Padmini Acharyara,Mysuru

  12:07 PM, 27/03/2020

  🙏ಶ್ರೀ ಗುರುಭ್ಯೋ ನಮಃ🙏
  
  ಒಂದು ಪ್ರಶ್ನೆ..
  ವಿಭಾಂಡಕರು ಮಗ ಕಾಣಿಸದೆ ಇದ್ದಾಗ ಯಾಕಾಗಿ ಸಿಟ್ಟಿಗೆ ಬರ್ತಾರೆ ಅಂದರೆ ಮಗ ಕಾಣುತ್ತಿಲ್ಲ ಅಂದರೆ ಗಾಬರಿಯಾಗಬೇಕಲ್ಲ ಅದು ಬಿಟ್ಟು ಸಿಟ್ಟಿಗೆ ಬರುವ ಕಾರಣವೇನು?

  Vishnudasa Nagendracharya

  ಯಾವುದೇ ಕಷ್ಟದ ಪರಿಸ್ಥಿತಿ ಎದುರಾದಾಗ ಅದನ್ನು ಎದುರಿಸುವ ಸಾಮರ್ಥ್ಯ ಇಲ್ಲದವರು ಮಾತ್ರ ಆತಂಕ ಗಾಭರಿಗೆ ಒಳಗಾಗುತ್ತಾರೆ. ಯಾರಿಗೆ ಅದನ್ನು ಎದುರಿಸುವ ಸಾಮರ್ಥ್ಯವಿದೆ ಅವರು ಆತಂಕಕ್ಕೊಳಗಾಗದೇ ಅದನ್ನು ಎದುರಿಸುತ್ತಾರೆ. 
  
  ಇನ್ನು ಈ ಕಷ್ಟ ಉಂಟಾಗಲು ಕಾರಣರಾದವರಿಗೆ ಶಾಸನವನ್ನು ಮಾಡುವ ಸಾಮರ್ಥ್ಯ ಉಳ್ಳವರು ಸಿಟ್ಟಿಗೆ ಬರುತ್ತಾರೆ. 
  
  ತಮ್ಮ ಮಗನನ್ನು ಕರೆದೊಯ್ದವರನ್ನು ಶಾಸನ ಮಾಡುವ ಶಕ್ತಿ ಉಳ್ಳ ವಿಭಾಂಡಕರು, ತಪ್ಪಿಗೆ ಶಿಕ್ಷೆ ಕೊಡಲು ಮುಂದಾಗಿ ಸಿಟ್ಟಿಗೆ ಬರುತ್ತಾರೆ. 
  
  ಮಗು ಮಂಚದ ಮೇಲೆ ಕುಣಿದಾಡುತ್ತಿರುತ್ತದೆ. ತಾಯಿ ಗಾಭರಿಯಿಲ್ಲದೆ ಆಡಿಸುತ್ತಿರುತ್ತಾಳೆ. ಕಾರಣ, ಮಂಚದಿಂದ ಕೆಳಗೆ ಬೀಳದಂತೆ ಹಿಡಿದುಕೊಳ್ಳುವ ಶಕ್ತಿ ಇರುತ್ತದೆ. 
  
  ಮಗು ಬಾವಿಯ ಕಟ್ಟೆಯ ಮೇಲೆ ನಿಂತು ಕುಣಿಯುತ್ತಿದೆ. ತಾಯಿ ಗಾಭರಿಯಾಗುತ್ತಾಳೆ. ಕಾರಣ ಬಾವಿಗೆ ಬೀಳದಂತೆ ಹಿಡಿಯುವ ಶಕ್ತಿ ಅವಳಿಗಿಲ್ಲ. 
  
  ಮಗುವನ್ನು ಮತ್ತೊಂದು ಮಗು ಎಳೆದುಕೊಂಡು ಹೋಗಿ ಬೀಳಿಸುತ್ತದೆ. ಆಗ ತಾಯಿ ಸಿಟ್ಟಿಗೆ ಬಂದು ಬೀಳಿಸಿದ ಮಗುವನ್ನು ಹೊಡೆಯುತ್ತಾಳೆ. ಕಾರಣ, ಆ ತಪ್ಪನ್ನು ಅದು ಮತ್ತೊಮ್ಮೆ ಮಾಡಬಾರದು ಎಂದು. 
  
  
 • Padmini Acharyara,Mysuru

  11:58 AM, 27/03/2020

  🙏ಶ್ರೀ ಗುರುಭ್ಯೋ ನಮಃ🙏
  
  ಋಷ್ಯಶೃಂಗರ ಬಗ್ಗೆ ಕೇಳುತ್ತಿದ್ದರೆ ಅವರ ಬಗ್ಗೆ ಭಕ್ತಿ ಗೌರವ ತಾನಾಗಿ ಮನಸ್ಸಿನಲ್ಲಿ ಮೂಡೂತ್ತದೆ ಮತ್ತು 
  ಶ್ರೀ ವಿದ್ಯಾಪಯೋನಿಧಿ ಗುರುಗಳ ಕರುಣೆಯ ಕುರಿತು ಕೇಳಿ ಪರಮಾನಂದವಾಯಿತು.🙏🏻
 • Poornima Sowda,Bangalore

  2:46 PM , 26/03/2020

  ಗುರುಗಳೇ... ವೃದ್ಧೆ ಕೃತಕವಾದ ದೋಣಿ ನಿರ್ಮಾಣ ಮಾಡಿದ ರೀತಿ ಅದ್ಭುತ ಮತ್ತು ಆಶ್ಚರ್ಯಕರ. ಆ ತ್ರೇತಾಯುಗದ engineerಗೆ ನನ್ನ ನಮಸ್ಕಾರಗಳು. ಆ ವೃದ್ಧೆಗೆ ಅದೆಂಥಾ ದೇಶ ಭಕ್ತಿ.
  
  ಗುರುಗಳೇ... ನೀವು ನಮ್ಮೆಲ್ಲರಿಗೂ ಆ ದೋಣಿಯಲ್ಲಿ ವಿಹಾರ ಮಾಡಿಸಿದ್ದಕ್ಕೆ ತುಂಬಾ,ತುಂಬಾ, ತುಂಬಾ ಧನ್ಯವಾದಗಳು. ಯಾಕೆಂದರೆ ನಾನು ಸ್ವಲ್ಪ ಹೊತ್ತು ಆ ದೋಣಿಯಲ್ಲೇ ಇದ್ದೆ.
  
  ನಿಮ್ಮ ಮೂಲಕ ನಿಮ್ಮ ಗುರುಗಳ ಅನುಗ್ರಹ ನಮ್ಮೆಲ್ಲರಿಗೂ ಈ ಜ್ಞಾನ ಕಾರ್ಯದಿಂದ ದೊರೆತಿದೆ. ನಾವೆಲ್ಲರೂ ಧನ್ಯರು. 
  
  ಹೀಗೆ ಗುರುಗಳ ಕೃಪೆಯಿಂದ ನೀವು ಹೇಳಿದ ತತ್ವವನ್ನು ನಮ್ಮೆಲ್ಲರಿಗೂ ಅರ್ಥವಾಗಲಿ.🙏
 • deashmukhseshagirirao,Banglore

  10:15 PM, 25/03/2020

  🙏🏻🙏🏻🙏🏻🙏🏻🙏🏻
 • Santosh Patil,Gulbarga

  10:03 PM, 25/03/2020

  Thanks Gurugale 🙏🙏