06/04/2020
ಶ್ರೀಮದ್ ರಾಮಾಯಣಮ್ — 25 ಯಜ್ಞ ನಡೆಯುವ ಸಂದರ್ಭದಲ್ಲಿ ಮಾರೀಚ ಸುಬಾಹುಗಳು ರಾಕ್ಷಸರೊಡನೆ ಬಂದು ಕಪಾಲಗಳಿಂದ ರಕ್ತವನ್ನು ಸುರಿದೇ ಬಿಡುತ್ತಾರೆ. ಒಂದು ಹನಿಯೂ ಯಜ್ಞವೇದಿಯನ್ನು ಮುಟ್ಟದಂತೆ ಕ್ಷಣಕಾಲದಲ್ಲಿ ಆ ರಾಕ್ಷಸರನ್ನು ನಿಗ್ರಹಿಸಿದ ರೋಮಾಂಚಕಾರಿಯ ಘಟನೆಯನ್ನು ನಾವಿಲ್ಲಿ ಕೇಳುತ್ತೇವೆ. ವಿಶ್ವಾಮಿತ್ರರ ಧನ್ಯತೆಯ ಚಿತ್ರಣದೊಂದಿಗೆ. ಅಣ್ಣನ ಸೇವೆಯನ್ನು ಲಕ್ಷ್ಮಣದೇವರು ಅದ್ಭುತವಾಗಿ ಮಾಡುತ್ತಾರೆ ಎಂದು ಮುಂದೆ ಕೇಳುತ್ತೇವೆ. ಗುರುಸೇವೆಯನ್ನು ಹೇಗೆ ಮಾಡಬೇಕು ಎನ್ನುವದನ್ನು ಅವರು ಅಣ್ಣ ರಾಮಚಂದ್ರನಿಂದಲೇ ಕಲಿತದ್ದು ಎಂಬ ಅಪೂರ್ವ ವಿಷಯವನ್ನಿಲ್ಲಿ ಕೇಳುತ್ತೇವೆ. ನಾವು ಮಾಡುವ ಧರ್ಮಾಚರಣೆಯನ್ನು ಎಂದಿಗೂ ಹೇಳಿಕೊಳ್ಳಬಾರದು ಎನ್ನುವ ಪಾಠವನ್ನು ವಿಶ್ವಾಮಿತ್ರರ ಅದ್ಭುತ ಚರ್ಯೆಯೊಂದು ಕಲಿಸುತ್ತದೆ. ವಿಶ್ವಾಮಿತ್ರರ ಯಜ್ಞದಲ್ಲಿ ಸಪ್ತರ್ಷಿಗಳೂ ಪಾಲ್ಗೊಳ್ಳುತ್ತಾರೆ. ಸಪ್ತರ್ಷಿಗಳಲ್ಲಿ ವಸಿಷ್ಠರೂ ಒಬ್ಬರು. ಈ ಎಲ್ಲ ಋಷಿಗಳೂ ಸಾಂಶರು, ಅಂದರೆ ಒಂದೇ ಸಮಯದಲ್ಲಿ ಅನೇಕ ಕಡೆ ಇರಬಲ್ಲ ಸಾಮರ್ಥ್ಯವುಳ್ಳವರು. ಹೀಗಾಗಿ ವಸಿಷ್ಠರು ಅಯೋಧ್ಯೆಯಲ್ಲಿದ್ದರು, ಇಲ್ಲಿ ಹೇಗೆ ಬರಲು ಸಾಧ್ಯ ಎಂಬ ಪ್ರಶ್ನೆ ಸಲ್ಲದು ಎಂಬ ವಿವರಣೆ ಇಲ್ಲಿದೆ.
Play Time: 38:57
Size: 1.37 MB