16/04/2020
ಶ್ರೀಮದ್ ರಾಮಾಯಣಮ್ — 31 ಅಹಲ್ಯಾದೇವಿಯರು ಗೌತಮರ ಶಾಪದಿಂದ ಕಲ್ಲಾಗಿದ್ದರು ಎಂಬ ಮಾತನ್ನು ನಾವು ದಾಸಸಾಹಿತ್ಯದಲ್ಲಿ ಮೇಲಿಂದ ಮೇಲೆ ಕೇಳುತ್ತೇವೆ. ಸ್ವಯಂ ಆಚಾರ್ಯರೂ ಸಹ ಶಿಲೀಕೃತಾಮ್ ಎಂದು, ಅಹಲ್ಯೆ ಶಿಲೆಯಾಗಿದ್ದರು ಎಂದು ಹೇಳಿದ್ದಾರೆ. ಆದರೆ ಚೇತನ ಜಡವಾಗಲು ಸಾಧ್ಯವಿಲ್ಲ, ಜಡ ಚೇತನವಾಗಲು ಸಾಧ್ಯವಿಲ್ಲ ಎನ್ನುವದನ್ನು ಭಗವತ್ಪಾದರು ನ್ಯಾಯವಿವರಣದಲ್ಲಿ ಪ್ರತಿಪಾದಿಸುತ್ತಾರೆ. ಕಲ್ಲಾಗಿದದ್ದರು ಎಂದರೆ ನ್ಯಾಯವಿವರಣದ ವಿರೋಧ, ಕಲ್ಲಾಗಿರಲಿಲ್ಲ ಎಂದರೆ ತಾತ್ಪರ್ಯನಿರ್ಣಯದ ಮತ್ತು ದಾಸಸಾಹಿತ್ಯದ ವಿರೋಧ. ಇದನ್ನು ಹೇಗೆ ಅರ್ಥ ಮಾಡಿಕೊಳ್ಳುವದು ಎಂಬ ಪ್ರಶ್ನೆಗೆ ಶ್ರೀಮದಾಚಾರ್ಯರ ಸಿದ್ಧಾಂತ ನೀಡಿದ ಉತ್ತರಗಳ ಸಂಗ್ರಹ ಇಲ್ಲಿದೆ. ಇಲ್ಲಿ ವಿವರಣೆಗೊಂಡ ಶಾಸ್ತ್ರ ವಚನಗಳು — “ನ ಹಿ ಕಶ್ಚಿತ್ ಸುಶಕ್ತೋಪಿ ಚಕಾರಾಚೇತನಂ ಚಿತಿಮ್” ನ್ಯಾಯವಿವರಣದ ವಾಕ್ಯ ಮಹಾಭಾರತ ತಾತ್ಪರ್ಯನಿರ್ಣಯದ “ಶಿಲೀಕೃತಾಮ್” “ಜಡಿಕೃತಸ್ತೇನ ಸ ರಾವಣೋಪಿ” “ಶಿವೇಂದ್ರಪೂರ್ವಾ ಅಪಿ ಕಾಷ್ಠವತ್ ಕೃತಾಃ” “ಕಾಷ್ಠಾದಿವತ್ ತ್ವದ್ವಶಗಂ ಸಮಸ್ತಮ್” ಎಂಬ ವಾಕ್ಯಗಳು. ಸಂಗ್ರಹ ರಾಮಾಯಣದ ವಾಕ್ಯ — ಪ್ರೈಕ್ಷತ ಪ್ರೇಕ್ಷಣೀಯೇನ ತಾಮಪಾಂಗೇನ ಶಾರ್ಙ್ಗಭೃತ್ । ಸಾ ತದ್ದರ್ಶನಮಾತ್ರೇಣ ಕಾಂತಾ ಕಾಂತಪ್ರಿಯಾ ಬಭೌ ।
Play Time: 48:52
Size: 1.37 MB