16/04/2020
ಶ್ರೀಮದ್ ರಾಮಾಯಣಮ್ — 33 ಜನಕಮಹಾರಾಜರ ಪೂರ್ವಜರೂ ಸಹ ಸೀತೆಯನ್ನು ರಾಮದೇವರಿಗೆ ನೀಡಬೇಕೆಂದು ಅದಕ್ಕಾಗಿ ಧನುಷ್ಯವನ್ನು ಪಡೆಯಬೇಕೆಂದು ತಪಸ್ಸು ಮಾಡಿದ್ದರು ಎಂಬ ಅಪೂರ್ವವಿಷಯವದೊಂದಿಗೆ ಸೀತಾದೇವಿಯ ಪ್ರಾದುರ್ಭಾವದ ಅದ್ಭುತ ಚಿತ್ರಣ ಇಲ್ಲಿದೆ. ಶ್ರೀರಾಮನಿಗೇ ಸೀತೆಯನ್ನು ನೀಡಬೇಕು ಎಂದು ಜನಕ ಮಹಾರಾಜರು ನಿಶ್ಚಯಿಸಿದ್ದರೆ, ಧನುರ್ಭಂಗದ ಪಣವನ್ನು, ಸ್ವಯಂವರವನ್ನು ಏಕೆ ಏರ್ಪಡಿಸಿದರು? ರುದ್ರದೇವರಿಂದ ಧನುಷ್ಯವನ್ನು ಪಡೆದದ್ದು ಜನಕ ಮಹಾರಾಜರೋ ಅಥವಾ ಜನಕರ ಪೂರ್ವಜರೋ? ನಿರ್ಣಯವೇನು? ಮಗುವೊಂದು ಭೂಮಿಯಲ್ಲಿ ಹೇಗಿರಲು ಸಾಧ್ಯ, ಇದ್ದರೂ ಉಸಿರಾಟ ಹೇಗೆ ಸಾಧ್ಯ? ಲೋಕವಿಚಿತ್ರವಾದ ಕ್ರಮದಲ್ಲಿ ಲಕ್ಷ್ಮೀದೇವಿಯರು ಅವತರಿಸಲು ಕಾರಣವೇನು? ಅಗ್ನಿ, ಜಲಗಳಲ್ಲಿ ಅವತರಿಸದೇ ಭೂಮಿಯಲ್ಲೇ ಅವತರಿಸಲು ವಿಶೇಷ ಕಾರಣವಿದೆಯೇ? ಎಂಬ ಪ್ರಶ್ನೆಗಳಿಗೆ ಉತ್ತರದೊಂದಿಗೆ ಶಿವಧನುಷ್ಯ ಎಂದರೆ ರುದ್ರದೇವರ ಕೈಯಲ್ಲಿನ ಪಿನಾಕವಲ್ಲ, ದಕ್ಷಯಜ್ಞದ ಸಂದರ್ಭದಲ್ಲಿ ದೇವತೆಗಳ ಶರೀರವನ್ನು ಕತ್ತರಿಸಿದ ಧನುಷ್ಯ ಎಂಬ ವಿವರ ಇಲ್ಲಿದೆ. ಆಧುನಿಕತೆಯ ನೆಪದಲ್ಲಿ ಟ್ರಾಕ್ಟರ್ ಗಳನ್ನು ಉಪಯೋಗಿಸುತ್ತಿರುವದು ಎಂತಹ ಅನರ್ಥ ಉಂಟಾಗುತ್ತದೆ ಎನ್ನುವದರ ವಿವರ ಇಲ್ಲಿದೆ.
Play Time: 44:31
Size: 1.37 MB