27/04/2020
ಶ್ರೀಮದ್ ರಾಮಾಯಣಮ್ — 34 ಭೂಮಿಯ ಎಲ್ಲ ರಾಜರೂ, ರಾವಣನೂ ಸಹ ಬಂದು ಶಿವಧನುಷ್ಯವನ್ನು ಅಲ್ಲಾಡಿಸಲು ಸಾಧ್ಯವಾಗದೇ ಹೋದದ್ದು, ಪರಶಿವನ ಪರಮಪ್ರಸಾದದಿಂದಲೇ ಐದು ಸಾವಿರ ಜನ ಮಹಾಬಲಿಷ್ಠರಾದ ಕಿಂಕರರು ಅದನ್ನು ಮಹಾಪ್ರಯತ್ನದಿಂದ ಎಳೆದು ತರುತ್ತಿದ್ದದ್ದು, ಆ ಧನುಷ್ಯದ ಗಾತ್ರ, ರಾಮಚಂದ್ರನಿಗೆ ಆಯುಧಗಳ ಬಗ್ಗೆ ಇದ್ದ ಆಸಕ್ತಿ ಪ್ರೇಮ ಇವೆಲ್ಲದರ ವಿವರಣೆ ಇಲ್ಲಿದೆ. ರಾಮ ಧನುಷ್ಯವನ್ನು ಹೆದೆಯೇರಿಸಲಿ ಎಂದು ಜನಕಮಹಾರಾಜರು ಹೇಳಿದಾಗ ಊರಿನ ನಾರಿಯರು ತವಕದಿಂದ ಆಡಿದ ವಿನೋದದ ಮಾತಿನ ಚಿತ್ರಣದೊಂದಿಗೆ. “ಬಿಲ್ಲನ್ನು ಹೆದೆಯೇರಿಸುವದು” ಎನ್ನುವ ಮಾತಿನ ಅರ್ಥವಿವರಣೆ ಇಲ್ಲಿದೆ.
Play Time: 47:31
Size: 5.51 MB