10/05/2020
ಶ್ರೀಮದ್ ರಾಮಾಯಣಮ್ — 43 ರಾಮ ಪರಶುರಾಮರಿಬ್ಬರೂ ವಿಷ್ಣುವಿನ ಅವತಾರವಾದರೆ ಯುದ್ಧ ಹೇಗಾಗಲು ಸಾಧ್ಯ, ಒಬ್ಬರು ಸೋತು ಒಬ್ಬರು ಗೆಲ್ಲಲು ಹೇಗೆ ಸಾಧ್ಯ, ಪರಶುರಾಮರ ಲೋಕಗಳನ್ನು ರಾಮದೇವರು ಸುಟ್ಟು ಹಾಕಿದರು ಎಂದರೆ ಏನರ್ಥ, ಪರಶುರಾಮರು ದೈನ್ಯಕ್ಕೊಳಗಾಗಿದ್ದು ಸತ್ಯವಲ್ಲವೇ ಎಂಬೆಲ್ಲ ಪ್ರಶ್ನೆಗಳ ಭಗವತ್ಪಾದರು ನೀಡಿದ ಉತ್ತರಗಳ ವಿವರಣೆ ಇಲ್ಲಿದೆ. ಪರಶುರಾಮರ ಧ್ವನಿಯಲ್ಲಿ ದೈನ್ಯವಿತ್ತು ಎಂದು ರಾಮಾಯಣ ಹೇಳುತ್ತದೆ, ಅವರ ಧ್ವನಿ ಮೇಘಗಂಭೀರವಾಗಿತ್ತು ಎಂದು ಆಚಾರ್ಯರು ನಿರ್ಣಯಿಸುತ್ತಾರೆ. ಈ ವಿರೋಧದ ಪರಿಹಾರ ಇಲ್ಲಿದೆ. ಅತುಲ ಎಂಬ ಹೆಸರಿನ ವಿಚಿತ್ರ ಅಸುರನ ಕಥೆ. ಅತುಲನಿಗೆ ಪರಶುರಾಮರ ಹೊಟ್ಟೆಯಲ್ಲಿ ಇರುವ ವರವನ್ನು ರುದ್ರದೇವರಿಗೆ ನೀಡುತ್ತಾರೆ. ದೇವರ ಹೊಟ್ಟೆಯಲ್ಲಿ ಪ್ರವೇಶ ಮಾಡಿಸುವ ಶಕ್ತಿ ರುದ್ರದೇವರಿಗೆ ಹೇಗೆ ಇರಲು ಸಾಧ್ಯ ಎಂಬ ಪ್ರಶ್ನೆಗೆ ಶ್ರೀಮನ್ನಾರಾಯಣ ಪಂಡಿತಾಚಾರ್ಯರು ನೀಡಿದ ಉತ್ತರದ ವಿವರ ಇಲ್ಲಿದೆ. ನಾಳೆಯ ಉಪನ್ಯಾಸಕ್ಕೆ ಬಾಲಕಾಂಡ ಸಮಾಪ್ತವಾಗುತ್ತದೆ. ಸಾಧ್ಯವಾದರೆ ಮನೆಯಲ್ಲಿ ಬ್ರಾಹ್ಮಣ ದಂಪತಿಗಳಿಗೆ ಭೋಜನ ಮಾಡಿಸಿ. ಇಲ್ಲವಾದಲ್ಲಿ ಬ್ರಾಹ್ಮಣ ದಂಪತಿಗಳಿಗೆ ಸ್ವಯಂಪಾಕವನ್ನಾದರೂ ನೀಡಿ. ಶ್ರೀಮದ್ ರಾಮಾಯಣ ನಿರ್ವಿಘ್ನವಾಗಿ ನಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಿ.
Play Time: 39:46
Size: 1.37 MB