10/05/2020
ಶ್ರೀಮದ್ ರಾಮಾಯಣಮ್ — 45 ದಶರಥ ಮಹಾರಾಜರು ತಮ್ಮ ಮಗ, ಹಿರಿಯ ಮಗ ಎನ್ನುವ ಕಾರಣಕ್ಕೆ ರಾಮನನ್ನು ಯುವರಾಜ ಮಾಡಲು ನಿರ್ಣಯಿಸಿದ್ದಲ್ಲ, ರಾಮನಲ್ಲಿ ಯುವರಾಜನಾಗುವ ಅರ್ಹತೆಯಿದೆಯೇ ಎಂದು ಪರೀಕ್ಷೆ ಮಾಡಿ ನಿರ್ಣಯಿಸುತ್ತಾರೆ. ಅವರು ಮಾಡಿದ ಪರೀಕ್ಷೆಗಳ ಚಿತ್ರಣ ಇಲ್ಲಿದೆ. ದಶರಥ ಮಹಾರಾಜರು ತಮ್ಮ ನಾಲ್ಕೂ ಜನ ಮಕ್ಕಳ ಮೇಲೆ ಮಾಡುತ್ತಿದ್ದ ಪ್ರೇಮ ಸಮಾನವಾಗಿತ್ತೆ, ವಿಷಮವಾಗಿತ್ತೆ? ಒಬ್ಬ ಮನುಷ್ಯನ ಚಾರಿತ್ರ್ಯವನ್ನು ನಿರ್ಣಯಿಸುವ ಮಹತ್ತ್ವದ ಮಾನದಂಡವೇನು? ತಾಯಂದಿರು ಮಕ್ಕಳನ್ನು ಯಾವ ರೀತಿ ಗಮನಿಸಬೇಕು? ತಪ್ಪು ಮಾಡಿದವರ ತಪ್ಪನ್ನು ರಾಮ ಕ್ಷಮಿಸುತ್ತಿದ್ದ ಎನ್ನುತ್ತಾರೆ, ರಾವಣನ ತಪ್ಪನ್ನೇ ಏಕೆ ಕ್ಷಮಿಸಲಿಲ್ಲ? ಸತ್ಯ ಮಾತನಾಡಿ ನರಕ ಪಡೆದ ಕೌಶಿಕ ಬ್ರಾಹ್ಮಣನ ಕಥೆಯ ಮರ್ಮವೇನು? ಅಭ್ಯಾಸಗಳ ಮಧ್ಯದಲ್ಲಿ ರಾಮಚಂದ್ರ ಹೇಗೆ ಕಾಲ ಕಳೆಯುತ್ತಿದ್ದ? ಮಹಾಪರಾಕ್ರಮಿಯಾದ ರಾಮಚಂದ್ರ ಸಾಮಾನ್ಯ ಬಲದ ತನ್ನ ಶಿಕ್ಷಕರನ್ನು ಹೇಗೆ ಕಾಣುತ್ತಿದ್ದ? ಶೀಲವೃದ್ಧರು, ಜ್ಞಾನವೃದ್ಧರು, ವಯೋವೃದ್ಧರು, ಉಪಾಧ್ಯಾಯರು, ಶಿಕ್ಷಕರು, ಗೆಳೆಯರು, ನಾಗರೀಕರು ನಮ್ಮ ಶ್ರೀರಾಮನನ್ನು ಹೇಗೆ ಕಾಣುತ್ತಿದ್ದರು ಎಂಬ ವಿವರಣೆ ಇಲ್ಲಿದೆ. ತಪ್ಪದೇ ಕೇಳಿ.
Play Time: 42:43
Size: 1.37 MB