20/05/2020
ಶ್ರೀಮದ್ ರಾಮಾಯಣಮ್ — 53 ಕೈಕಯಿ ರಾಮಚಂದ್ರನನ್ನು ಅಪಾರವಾಗಿ ಪ್ರೀತಿಸುತ್ತಿದ್ದವಳು, ರಾಮನ ರಾಜಾ್ಯಭಿಷೇಕದ ಸುದ್ದಿ ಕೇಳಿ ಸಂತಸ ಪಟ್ಟವಳು. ಭರತನನ್ನು ರಾಮ ರಾಜ್ಯದಿಂದ ಹೊರಹಾಕುತ್ತಾನೆ, ಕೊಲ್ಲುತ್ತಾನೆ ಎಂದೆಲ್ಲ ಹೇಳಿದರೂ ಒಪ್ಪದ ಕೈಕಯಿಯನ್ನು ಮಂಥರೆ ಹಿಂದೆ ಕೈಕಯಿ ಮಾಡಿದ ಒಂದು ತಪ್ಪನ್ನು ನೆನಪು ಮಾಡಿಕೊಟ್ಟು ಅವಳ ಮನಸ್ಸನ್ನು ಬದಲಾಯಿಸುತ್ತಾಳೆ. ಆಚಾರ್ಯರು ಈ ಪ್ರಸಂಗವನ್ನು ಅತ್ಯಂತ ಕೌಶಲದಿಂದ ನಿರ್ಣಯಿಸಿರುವ ಕ್ರಮದ ವಿವರಣೆಯೊಂದಿಗೆ. ಮಂಥರೆಯ ಅರ್ಥಹೀನ ಪ್ರಲಾಪಗಳನ್ನು ಮಾಡಿದರೆ ಕೈಕಯಿ ರಾಮಚಂದ್ರನ ಗುಣಗಾನ ಮಾಡಿ, “ದೊಡ್ಡ ಮಗ ರಾಮನಿಗೇ ರಾಜ್ಯ ಸಲ್ಲಬೇಕಾದ್ದು” ಎಂದು ಪ್ರತಿಪಾದಿಸುತ್ತಾಳೆ. ಹೊರಗೆ ಮಂಥರೆಯಿಂದ, ಒಳಗೆ ನಿಕೃತಿಯಿಂದ ಪ್ರಭಾವಿತಳಾದ ಕೈಕಯಿ ಯಾವ ರೀತಿ ರಾಮನಿಗೆ ರಾಜ್ಯವನ್ನು ತಪ್ಪಿಸುವದು ಎಂದು ಕೇಳುತ್ತಾಳೆ. ಹಿಂದೆ ದಶರಥಮಹಾರಾಜರು ಕೈಕಯಿಗೆ ಕೊಟ್ಟ ವರವನ್ನು ನೆನಪಿಸಿ, ಕೆಟ್ಟ ಬಟ್ಟೆಯನ್ನು ಹಾಕಿಕೊಂಡು, ನೆಲದ ಮೇಲೆ ಮಲಗಿ, ದಶರಥರಿಂದ ಹೇಗೆ ವಚನ ತೆಗೆದುಕೊಳ್ಳಬೇಕು ಎಂಬೆಲ್ಲ ಕೆಟ್ಟ ಬುದ್ಧಿಯನ್ನು ಹೇಳಿಕೊಡುತ್ತಾಳೆ. ಭ್ರಾಂತಿಗೊಳಗಾದ ಮನುಷ್ಯ ಹೇಗೆ ವರ್ತಿಸುತ್ತಾನೆ ಎಂಬುದಕ್ಕೆ ದೃಷ್ಟಾಂತವಾಗಿ, ಮಂಥರೆಯ ವಶಕ್ಕೆ ಬಂದ ಕೈಕಯಿ ಆ ಮಂಥರೆಯ ಅತಿಕೆಟ್ಟ ಶರೀರವನ್ನು ಹೊಗಳುವ, ಅವಳ ಪೃಷ್ಠಕ್ಕೆ ಬಂಗಾರದ ಕವಚ ಮಾಡಿಸಿಕೊಡುವ ಮಾತನ್ನಿಲ್ಲಿ ಕೇಳುತ್ತೇವೆ. ಮಂಥರೆಯ ಮಾತಿನಂತೆ ಕೈಕಯಿ ಕ್ರೋಧಾಗರಕ್ಕೆ (ಸಿಟ್ಟು ಬಂದಾಗ ಇರುವ ಮನೆ) ಹೋಗಿ ಕುಳಿತುಕೊಳ್ಳುತ್ತಾಳೆ. ಇದೇನು, ಸಿಟ್ಟು ಬಂದಾಗ ಇರಲೂ ಮನೆ ಕಟ್ಟಿಸಿಕೊಳ್ಳುತ್ತಿದ್ದರೆ ಹಿಂದಿನವರು, ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ.
Play Time: 54:10
Size: 1.37 MB