24/05/2020
ಶ್ರೀಮದ್ ರಾಮಾಯಣಮ್ — 59 ದಶರಥನನ್ನು ಕಂಡು ರಾಮ ದುಃಖ ಪಟ್ಟ ರೀತಿ, ಕೈಕಯಿಯಿಗೆ ದಿಟ್ಟ ರೀತಿಯಲ್ಲಿ ಉತ್ತರ ಕೊಟ್ಟದ್ದು, ಕೈಕಯಿಯ ಅಹಂಕಾರ, ಉನ್ಮಾದ, ರಾಮಚಂದ್ರನ ಒಂದು ಮಾತು ಆ ದುಷ್ಟ ಕೈಕಯಿಯನ್ನೂ ನಡುಗುವಂತೆ ಮಾಡಿದ್ದು ಮುಂತಾದ ವಿಷಯಗಳು ಇಲ್ಲಿವೆ. ಹಿರಿಯರು ನಮಗೆ ಅವಮಾನ ಮಾಡಿದರೂ, ನಮ್ಮತನವನ್ನು ಕಳೆದುಕೊಳ್ಳದೇ, ಆದರೆ ಧ್ವನಿಯನ್ನೂ ಎತ್ತರಿಸದೆ ಯಾವ ರೀತಿ ಮಾತನಾಡಬೇಕು ಎಂಬ ಪಾಠವಿದೆ ಇಲ್ಲಿ. “ರಾಮೋ ದ್ವಿರ್ನಾಭಿಭಾಷತೇ” ರಾಮ ಎರಡೆರಡು ಮಾತಾಡುವದಿಲ್ಲ, ಹಿಂದೆ ಮಾತನಾಡಿದ್ದಕ್ಕೆ ವಿರುದ್ಧವಾಗಿ ಮುಂದೆ ಮಾತನಾಡುವದಿಲ್ಲ ಎಂಬ ಪ್ರಸಿದ್ದವಾದ ವಾಕ್ಯ ಇದೇ ಸಂದರ್ಭದಲ್ಲಿ ಬರುವದು. ನಾವು ಲೌಕಿಕ ಪ್ರಪಂಚಕ್ಕೆ ಅಂಟಿಕೊಳ್ಳಬಾರದು ಎನ್ನುವ ಅದ್ಭುತ ಪಾಠವನ್ನಿಲ್ಲಿ ಕೇಳುತ್ತೇವೆ. ರಾಜ್ಯ ಬಿಟ್ಟು ವನಕ್ಕೆ ಹೋಗು ಎಂದಾಗ ರಾಮನಲ್ಲಿ ಲೇಶ ವ್ಯಥೆ ಸಹಿತ ಉಂಟಾಗುವದಿಲ್ಲ, ಆದರೆ, ತಾಯಿ ಕೌಸಲ್ಯೆಗೆ ಪರಮದುಃಖದ ವಿಷಯವನ್ನು ಹೇಳಬೇಕು ಎಂದು ನೆನೆಸಿಕೊಂಡು ರಾಮ ದುಃಖ ಪಡುವ ವಿಡಂಬನೆ ನಮಗೆ ಜೀವನದ ಅದ್ಭುತ ಪಾಠವನ್ನು ಕಲಿಸುತ್ತದೆ.
Play Time: 61:03
Size: 1.37 MB