24/05/2020
ಶ್ರೀಮದ್ ರಾಮಾಯಣಮ್ — 60 ರಾಮ ಕೌಸಲ್ಯಾ ಸಂವಾದ ಕಾಡಿಗೆ ಹೊರಟ ನಿನ್ನೊಂದಿಗೆ ನಾನು ಬರುತ್ತೇನೆ ಎಂಬ ಕೌಸಲ್ಯೆದೇವಿಯರ ಮಾತಿಗೆ ಅವರೇಕೆ ಅಯೋಧ್ಯೆಯಲ್ಲಿಯೇ ಇರಬೇಕು ಎನ್ನುವದಕ್ಕೆ ರಾಮ ನೀಡುವ ಮೂರು ಶ್ರೇಷ್ಠ ಕಾರಣಗಳನ್ನಿಲ್ಲಿ ಕೇಳುತ್ತೇವೆ. ಶ್ರೀರಾಮನಿಗಿದ್ದ ಧರ್ಮನಿಷ್ಠೆ, ದಶರಥರ ಬಗ್ಗೆ ಇದ್ದ ಅಪಾರ ಗೌರವ, ಭರತನ ಮೇಲೆ ರಾಮನಿಗಿದ್ದ ವಿಶ್ವಾಸಗಳ ಚಿತ್ರಣದೊಂದಿಗೆ ಮನಕಲಕುವ ತಾಯಿ-ಮಗನ ಸಂಭಾಷಣೆಯಿನಿಲ್ಲಿದೆ. ತಂದೆಯ ಮಾತನ್ನು ನಡೆಸುವದಾದರೆ, ತಾಯಿಯಾದ ನನ್ನ ಮಾತನ್ನೂ ನಡೆಸು, ನನ್ನನ್ನು ನಿನ್ನೊಟ್ಟಿಗೆ ಕರೆದುಕೊಂಡು ಹೋಗು ಎಂದರೆ ಆ ಮಾತಿಗೆ ರಾಮ ನೀಡುವ ಅದ್ಭುತ ಉತ್ತರದ — ದಿವ್ಯ ಸ್ತ್ರೀಧರ್ಮದ — ಉದಾಹರಣೆ ಇಲ್ಲಿದೆ. ಪ್ರತಿಯೊಂದು ವಿಷಯದಲ್ಲಿ ಶ್ರೀರಾಮನಿಗಿರುವ ದಾರ್ಢ್ಯವನ್ನು ಕಂಡು ಕೌಸಲ್ಯಾದೇವಿಯರು ಮನಗಾಣುತ್ತಾರೆ. ಧರ್ಮವನ್ನು ಎಂದಿಗೂ ಬಿಡದ ರಾಜ ನಮ್ಮಪ್ಪ, ಎಂದು ದಶರಥರನ್ನು “ಧರ್ಮರಾಜ” ಎಂದು ಶ್ರೀರಾಮರು ಗೌರವದಿಂದ ಕರೆಯುವ ಅಪೂರ್ವ ಪ್ರಸಂಗ ಇಲ್ಲಿದೆ. ನಮಗೆ ಅತ್ಯಂತ ಪ್ರಿಯರಾದವರು ನಮ್ಮಿಂದ ಅನಿವಾರ್ಯವಾಗಿ ದೂರವಾದಾಗ ಅವರ ಕ್ಷೇಮಕ್ಕಾಗಿ ನಾವೇನು ಮಾಡಬೇಕು ಎಂದು ಸ್ವಯಂ ಜಗದೊಡೆಯ ತಿಳಿಸಿದ ಮಾರ್ಗದ ವಿವರಣೆ.
Play Time: 61:02
Size: 1.37 MB