24/05/2020
ಶ್ರೀಮದ್ ರಾಮಾಯಣಮ್ — 62 ಮನಸ್ಸಿನಲ್ಲಿ ಅಪಾರವಾದ ದುಃಖವಿದ್ದರೂ, ಆ ದುಃಖವನ್ನು ತಡೆದು ಮನಃಪೂರ್ವಕವಾಗಿ, ಮತ್ತು ಶಾಸ್ತ್ರ ತಿಳಿಸಿದ ಪರಿಶುದ್ಧ ಕ್ರಮದಲ್ಲಿ ಕೌಸಲ್ಯಾದೇವಿಯರು ಮಗನಿಗೆ ಮಂಗಳಾಶಾಸನ ಮಾಡಿ, ಕೈಗೆ ಕಂಕಣ ಕಟ್ಟಿ ಕಳುಹಿಸಿಕೊಡುವ ಘಟನೆಯ ಚಿತ್ರಣ ಇಲ್ಲಿದೆ. ಎಂತಹ ವಿಪ್ಲವದ ಕಾಲದಲ್ಲಿಯೂ ಧರ್ಮದ ಮಾರ್ಗವನ್ನು ಬಿಡದ, ಇದು ಧರ್ಮ, ಇದು ಅಧರ್ಮ ಎಂದು ಪರಿಸ್ಪಷ್ಟವಾಗಿ ತಿಳಿದಿರುವ ರಾಮನನ್ನು ಕಂಡು ಕೌಸಲ್ಯೆಗೆ ಹೆಮ್ಮೆಯಾಗುತ್ತದೆ. ಬದುಕಿನ ಸಕಲ ದುಃಖ ದುಮ್ಮಾನಗಳನ್ನೂ ದಾಟುವ ಕ್ರಮ, ಶ್ರೀ ಹರಿಭಕ್ತಿಸಾರದಲ್ಲಿ ಶ್ರೀ ಕನಕದಾಸಾರ್ಯರು ತಿಳಿಸಿದ “ಬಾಳಬೇಕೆಂಬುವಗೆ ನೆರೆ ನಿಮ್ಮೂಳಿಗವ ಮಾಡಿ” ಎಂಬ ನುಡಿಯ ವಿವರಣೆ ಇಲ್ಲಿದೆ.
Play Time: 54:41
Size: 1.37 MB