24/05/2020
ಶ್ರೀಮದ್ ರಾಮಾಯಣಮ್ — 64 ಸೀತೆಗೆ ಕಷ್ಟವಾಗಬಹುದು ಎನ್ನುವ ಕಾರಣಕ್ಕೆ ಕಾಡಿಗೆ ಕರೆದೊಯ್ಯಬಾರದು ಎಂದು ರಾಮದೇವರು ಕಾಡಿನ ಕಷ್ಟಗಳನ್ನು ಭಯವಾಗುವಂತೆ ವರ್ಣಿಸಿದರೆ ಅದ್ಭುತ ಉತ್ತರಗಳನ್ನು ನೀಡಿ ಸೀತೆ ಗಂಡನನ್ನು ಒಪ್ಪಿಸುವ ಪ್ರಸಂಗದ ಚಿತ್ರಣವನ್ನಿಲ್ಲಿ ಕೇಳುತ್ತೇವೆ. ಶ್ರೀರಾಮನಿಗೂ ಸೀತೆಯನ್ನು ಬಿಟ್ಟಿರಲು ಸಾಧ್ಯವಿಲ್ಲ, ಕರೆದೊಯ್ಯಬೇಕೆಂಬ ಅಪೇಕ್ಷೆ ಇದೆ, ಕಾಡಿನ ಎಲ್ಲ ಕಷ್ಟಗಳಿಂದ ಪತ್ನಿಯನ್ನು ಪಾರು ಮಾಡುವ ಶಕ್ತಿಯೂ ಇದೆ. ಆದರೂ ಕರೆದುಕೊಂಡು ಹೋಗುವದಿಲ್ಲ ಎಂದು ಹೇಳಿ ಅಳಿಸಿದ್ದೇಕೆ ಎಂಬ ಪ್ರಶ್ನೆಗೆ ಅದ್ಭುತ ಉತ್ತರ ಇಲ್ಲಿದೆ. ಎಷ್ಟು ಕೇಳಿದರೂ ರಾಮದೇವರು ಸೀತೆಯನ್ನು ಕರೆದೊಯ್ಯಲು ಒಪ್ಪದೇ ಇದ್ದಾಗ ರಾಮನ ಮೇಲೆ ಸಿಟ್ಟಿಗೆ ಬಂದು ಮಾತನಾಡುತ್ತಾರೆ. ಈ ಸಿಟ್ಟಿನಲ್ಲಿ ತಿರಸ್ಕಾರವಿರಲಿಲ್ಲ, ಆ ಆಕ್ಷೇಪದಲ್ಲಿ ಗಂಡನ ಬಗ್ಗೆ ಅವಜ್ಞೆ ಇರಲಿಲ್ಲ, ಕಿಂತು, “ಪ್ರಣಯಾಚ್ಚಾಭಿಮಾನಾಚ್ಚ ಪರಿಚಿಕ್ಷೇಪ ರಾಘವಮ್” ಪ್ರೀತಿ ಅಭಿಮಾನ ಪುರಸ್ಸರವಾಗಿ ಸಿಟ್ಟಿಗೆ ಬಂದರು ಎಂಬ ಮಾತನ್ನು ಕೇಳುತ್ತೇವೆ. ಹೆಂಡತಿಗೆ ಗಂಡನ ಬಳಿ ಯಾವ ರೀತಿಯ ಸಲಿಗೆ ಇರಬೇಕು ಎಂಬ ಪಾಠದೊಂದಿಗೆ.
Play Time: 60:00
Size: 1.37 MB