21/06/2020
ಶ್ರೀಮದ್ ರಾಮಾಯಣಮ್ — 73 ಸೀತೆ ನಾರುಮಡಿಯನ್ನು ಕೈಕಯಿ ನೀಡಿದಾಗ ವಸಿಷ್ಠರು ಕೈಕಯಿಯನ್ನು ನಿಂದಿಸಿ, ರಾಮ ವನಕ್ಕೆ ಹೋದರೆ ನಾವು ಸೀತೆಯನ್ನೇ ಸಿಂಹಾಸನದಲ್ಲಿ ಕೂಡಿಸುತ್ತೇವೆ ಎಂದು ಹೇಳುವ, ಆದರೆ ಸೀತಾದೇವಿಯರು ಅದನ್ನು ವಿನಯದಿಂದ ನಿರಾಕರಿಸುವ ಘಟನೆಯನ್ನಿಲ್ಲಿ ಕೇಳುತ್ತೇವೆ. ಕೈಕೆಯಿಯನ್ನು ವಸಿಷ್ಠರು ಶೀಲವರ್ಜಿತೆ ಎಂದು ಕರೆಯುತ್ತಾರೆ. ಕೈಕಯಿ ಪರಪುರುಷಸಂಪರ್ಕವನ್ನು ಮಾಡಿದವಳಲ್ಲ. ಹಾಗಾದರೆ ಕೈಕಯಿಯನ್ನು ವಸಿಷ್ಠರು ಹೀಗೇಕೆ ಕರೆದರು ಎಂಬ ಪ್ರಶ್ನೆಗೆ ಹಾರೀತರು ಶೀಲ ಎನ್ನುವ ಶಬ್ದಕ್ಕೆ ತಿಳಿಸಿರುವ ಅರ್ಥದ ವಿಸ್ತಾರ ಇಲ್ಲಿದೆ. ಶ್ರೀರಾಮ ವನಕ್ಕೆ ಹೋದರೆ, ಸೀತೆಗೆ ಪಟ್ಟಾಭಿಷೇಕ ಮಾಡುತ್ತೇವೆ ಎನ್ನುತ್ತಾರೆ ವಸಿಷ್ಠರು. ಆ ಮಾತಿಗೆ, ಮಾತನಾಡದೇ ಸೀತಾದೇವಿ ಉತ್ತರ ನೀಡುವ ಕ್ರಮವೇ ಅದ್ಭುತ. ಶ್ರೀರಾಮಚಂದ್ರ ವನಕ್ಕೆ ಹೊರಟರೆ ಸಮಗ್ರ ಪಶು ಪಕ್ಷಿ ಪ್ರಾಣಿಗಳೂ ಸಹ ಅವನನ್ನು ಹಿಂಬಾಲಿಸುತ್ತವೆ ಎಂದು ವಸಿಷ್ಠರು ತಿಳಿಸುವ ಅಪೂರ್ವ ಪ್ರಮೇಯವನ್ನಿಲ್ಲಿ ಕೇಳುತ್ತೇವೆ. ತಂದೆಯ ಕಾಲುಗಳನ್ನು ಮುಟ್ಟಿ ನಮಸ್ಕಾರ ಮಾಡಿ ಶ್ರೀರಾಮಚಂದ್ರ ತಾಯಿ ಕೌಸಲ್ಯೆಗಾಗಿ ಪ್ರಾರ್ಥನೆ ಮಾಡುವ ಮನಕಲಕುವ ಘಟನೆಯನ್ನಿಲ್ಲಿ ಕೇಳುತ್ತೇವೆ.
Play Time: 38:12
Size: 6.85 MB