24/05/2020
ಶ್ರೀಮದ್ ರಾಮಾಯಣಮ್ — 77 ದುಃಖದಿಂದ ಮನುಷ್ಯ ಕುಗ್ಗಿಹೋಗಬಾರದು, ದುಃಖ ಪಡಬಾರದ ವಿಷಯಕ್ಕೆ ದುಃಖ ಪಡಬಾರದು ಎಂಬ ಸನಾತನ ಗೀತಾತತ್ವವನ್ನು ಸುಮಿತ್ರಾದೇವಿಯರು ಸ್ವಯಂ ಆಚರಿಸಿ ಉಪದೇಶಿಸುವ ಅದ್ಭುತ ಭಾಗವಿದು. ರಾಮ ವನಕ್ಕೆ ಹೋದ ಎಂದು ದುಃಖ ಪಡಬಾರದು, ರಾಮ ವನಕ್ಕೆ ಹೋದ ಎಂದು ಹೆಮ್ಮೆ ಪಡಬೇಕು. ಕಾರಣ, ಯಾರಿಗೂ ತೊರೆಯಲಿಕ್ಕಾದ ರಾಜ್ಯದ ಲೋಭಕ್ಕೊಳಗಾಗದೆ ತಂದೆಯ ಮಾತನ್ನು ಉಳಿಸಲು ಹೊರಟಿದ್ದಾನೆ. ರಾಕ್ಷಸರಿರುವ ಕಾಡಿಗೆ ರಾಮ ಹೋದ ಎಂದು ಭಯ ಬೀಳಬೇಡ, ಕಾಡಿಗೆ ರಾಮ ಹೊರಟದ್ದಕ್ಕೆ ರಾಕ್ಷಸರಿಗೆ ಭಯವುಂಟಾಗಬೇಕು. ರಾಮನ ಜೊತೆ ಲಕ್ಷ್ಮಣ ಇದ್ದಾನೆ, ರಾಮ ಸೀತೆಯರಿಗೆ ವನದ ಕಷ್ಟ ಉಂಟಾಗದಂತೆ ಸೇವೆ ಮಾಡುತ್ತಾನೆ ರಾಮ ಎಲ್ಲರಂತೆ ಪ್ರಾಕೃತ ಪುರುಷನಲ್ಲ, ಪರಮಪುರುಷ ಶ್ರೀಮನ್ನಾರಾಯಣ ಅದನ್ನು ಮರೆಯಬೇಡ. ಸಕಲ ಸೌಭಾಗ್ಯದೇವತೆಯಾದ ಲಕ್ಷ್ಮೀದೇವಿಯೇ ಸೀತೆಯಾಗ ಯಾರ ಸೇವೆಗೆ ಜೊತೆ ಹೊರಟಿದ್ದಾರೆಯೋ ಆ ರಾಮನಿಗೆ ದುಃಖವಿಲ್ಲ ಯಾವ ಸ್ವಾಮಿ ಸಕಲ ಪದಾರ್ಥಗಳ ಒಳಗಿದ್ದಾನೆಯೋ ಆ ರಾಮನಿಗೆ ಕಾಡಿನ ವಾಸದಿಂದ ದುಃಖವಿಲ್ಲ ಕೌಸಲ್ಯಾ-ಸುಮಿತ್ರಾ ಎಂಬ ಶಬ್ದಗಳ ಅರ್ಥಾನುಸಂಧಾನದೊಂದಿಗೆ ಆ ತಾಯಂದಿರ ಗುಣಗಳ ಚಿಂತನೆ ಇಲ್ಲಿದೆ. “ನಿರೂಪ್ಯಾಪಿ ಕ್ಲೇಶಂ ಯಃ ಪರಿರಕ್ಷತಿ ಸ ಮಿತ್ರಮ್” ಯಾವುದು ಕ್ಲೇಶ, ಯಾವುದು ಕ್ಲೇಶವಲ್ಲ ಎಂದು ತಿಳಿಸಿ ಕ್ಲೇಶದ ಕಾಲದಲ್ಲಿ ಜೊತೆಯಲ್ಲಿದ್ದು ಕಾಪಾಡುವವನು ಮಿತ್ರ ಎಂದು ಆಚಾರ್ಯರು ತಿಳಿಸಿರುವ ಮಿತ್ರಶಬ್ದದ ಅರ್ಥಚಿಂತನೆ ಇಲ್ಲಿದೆ.
Play Time: 59:03
Size: 1.37 MB