24/05/2020
ಶ್ರೀಮದ್ ರಾಮಾಯಣಮ್ — 83 ನಾನು ಅಯೋಧ್ಯೆಗೆ ಹಿಂತಿರುಗುವದಿಲ್ಲ, ನನ್ನನ್ನೂ ಈ ಕುದುರೆಗಳನ್ನೂ ನಿನ್ನ ಜೊತೆಯಲ್ಲಿ ಕರೆದುಕೊಂಡು ಹೋಗು ಎಂದು ಸುಮಂತ್ರರು ಪ್ರಾರ್ಥನೆ ಮಾಡಿದರೆ, ಅವರು ಹಿಂತಿರುಗಬೇಕಾದ ಅನಿವಾರ್ಯತೆಯನ್ನು ನಮ್ಮ ಸ್ವಾಮಿ ಮನಗಾಣಿಸುತ್ತಾನೆ. ಶ್ರೀರಾಮ ರಾಜನಲ್ಲ ಎಂದು ಸುಮಂತ್ರರು ಒಂದು ಕ್ಷಣಕ್ಕೂ ಆಲೋಚಿಸಿರುವದಿಲ್ಲ. ವನದ ಮಧ್ಯದಲ್ಲಿಯೂ ರಾಮನೇ ರಾಜ ಎಂಬ ಅವರ ಭಾವ ಅದ್ಭುತವಾದದ್ದು. ಶ್ರೀರಾಮ ದೇವರು ಎನ್ನುವ ಕಾರಣಕ್ಕೆ ಭಕ್ತಿಯನ್ನು, ರಾಜ ಎಂಬ ಕಾರಣಕ್ಕೆ ಗೌರವವನ್ನು, ತಾನು ಆಡಿಸಿ ಬೆಳೆಸಿದ ಮಗು ಎಂಬ ಕಾರಣಕ್ಕೆ ವಾತ್ಸಲ್ಯವನ್ನು ಸುಮಂತ್ರರು ತೋರುತ್ತಿದ್ದರು. ಸುಮಂತ್ರರ ಭಕ್ತಿ, ರಾಮನ ಭಕ್ತವಾತ್ಸಲ್ಯಗಳನ್ನು ವಾಲ್ಮೀಕಿಮಹರ್ಷಿಗಳು ಚಿತ್ರಿಸುವ ಕ್ರಮ ನಮ್ಮ ಕಣ್ಣಾಲಿಗಳಲ್ಲಿ ಅಪ್ರಯತ್ನವಾಗಿ ನೀರನ್ನು ತರಿಸುತ್ತವೆ, ನಮ್ಮ ಮನಸ್ಸಿನ ಕಶ್ಮಲವನ್ನು ದೂರಮಾಡಿಬಿಡುತ್ತವೆ. ಆಲದ ಮರದ ಹಾಲಿನಿಂದ ತಮ್ಮ ಕೂದಲನ್ನು ಜಟೆ ಮಾಡಿ, ಕಟ್ಟಿಕೊಂಡು ನರನಾರಾಯಣರಂತೆ ರಾಮ ಲಕ್ಷ್ಮಣರು ಕಂಗೊಳಿಸುವ ವಿವರವನ್ನಿಲ್ಲಿ ಕೇಳುತ್ತೇವೆ.
Play Time: 42:22
Size: 1.37 MB