ಇವರು ಇಂತಹವರ ಅವತಾರ ಎಂದು ತಿಳಿಯುವ ಕ್ರಮ ಹೇಗೆ?
ಮಹಾನುಭಾವರ ಸ್ವರೂಪವನ್ನು ನಿರ್ಣಯ ಮಾಡುವ ಶಾಸ್ತ್ರೀಯವಾದ ಕ್ರಮಗಳು ಯಾವುವು? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ
ಅಂಗಗಳ ಕಸಿಯನ್ನು ಶಾಸ್ತ್ರೀಯವಾಗಿ ಹೇಗೆ ಒಪ್ಪಲು ಸಾಧ್ಯ?
ಸತ್ತ ದೇಹದಲ್ಲಿರುವ ಯಾವ ಇಂದ್ರಿಯಗಳೂ ಕಾರ್ಯ ಮಾಡುವದಿಲ್ಲ ಎಂದು ಶಾಸ್ತ್ರ ಹೇಳುತ್ತದೆ, ಆದರೆ ಸತ್ತ ದೇಹದಿಂದ ಕಣ್ಣು ಮುಂತಾದವನ್ನು ತೆಗೆದು ಕಣ್ಣಿಲ್ಲದವರಿಗೆ ಕಸಿ ಮಾಡಿದಾಗ ಕಣ್ಣು ಕೆಲಸ ಮಾಡುವದು ಕಂಡಿದೆ. ಹೀಗಾಗಿ ಶಾಸ್ತ್ರ ಹೇಳುವದನ್ನು ಹೇಗೆ ಒಪ್ಪಲು ಸಾಧ್ಯ ಎಂಬ ಪ್ರಶ್ನೆಗೆ ಶಾಸ್ತ್ರೀಯವಾದ ಉತ್ತರ ಈ ಲೇಖನದಲ್ಲಿದೆ.
ಎಲ್ಲ ಪ್ರಾಣಿಗಳಲ್ಲಿಯೂ ದೇವರಿದ್ದಾಗ ಗೋವಿಗೆ ಮಾತ್ರ ಏಕೆ ಪೂಜೆ?
ದೇವರನ್ನು ಸರ್ವವ್ಯಾಪಿ ಎನ್ನುತ್ತೀರಿ. ಅಂದ ಮೇಲೆ ನಾಯಿಯಲ್ಲಯೂ ದೇವರಿದ್ದಾನೆ, ಗೋವಿನಲ್ಲಿಯೂ ದೇವರಿದ್ದಾನೆ. ಸೊಳ್ಳೆ ನೊಣಗಳಲ್ಲಿಯೂ ಇದ್ದಾನೆ. ಸೊಳ್ಳೆಯನ್ನು ಕೊಲ್ಲುತ್ತೀರಿ, ನಾಯಿಯನ್ನು ಮುಟ್ಟುವದಿಲ್ಲ, ಗೋವನ್ನು ಪೂಜಿಸುತ್ತೀರಿ. ಏಕೆ ಈ ವೈಷಮ್ಯ?
ಕಾಮಪ್ರಸಂಗಗಳ ವಿಶ್ಲೇಷಣೆ
ಕುಂತಿ, ದ್ರೌಪದಿ ಮುಂತಾದವರ ಚಾರಿತ್ರ್ಯವನ್ನು ದ್ರೋಣ, ದ್ರುಪದ ಮುಂತಾದವರ ಜನನದ ಕ್ರಮವನ್ನು ರುದ್ರದೇವರ ಲಿಂಗಪೂಜೆಯನ್ನು ಹೀಯಾಳಿಸುವ ಇಂದಿನ ಆಧುನಿಕರ ಪ್ರಶ್ನೆಗಳಿಗೆ ಉತ್ತರಗಳು
ದೇವರು ಕಲ್ಲಾಗಲು ಹೇಗೆ ಸಾಧ್ಯ?
ಆಚಾರ್ಯರೇ ನಮಸ್ಕಾರ🙏🏻,ಜಡ ಚೇತನ ಆಗಲ್ಲ, ಚೇತನ ಜಡ ಆಗಲ್ಲ, ಅಂದಮೇಲೆ ಪರಮಚೇತನನಾದ ಭಗವಂತ, ಸ್ವಯಂವ್ಯಕ್ತ ಸ್ಥಳಗಳಲ್ಲಿ ನಮ್ಮ ಕಣ್ಣಿಗೆ ಕಲ್ಲಿನ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ಇದು ಹೇಗೆ ಎಂಬುದನ್ನು ತಿಳಿಸಿ ಆಚಾರ್ಯರೇ🙏🏻🙏🏻 — ಸುಧೀಂದ್ರ
ಕರ್ಮಗಳು ನಮಗೆ ಅಂಟದಿರಲು ಏನು ಮಾಡಬೇಕು?
ನಮ್ಮ ಹಿಂದಿನ ಜನ್ಮದ ಕರ್ಮಗಳೇ ನಮ್ಮನ್ನು ಸಾಕಷ್ಟು ಕಾಡಿಸುತ್ತಿವೆ. ರೋಗ, ದಾರಿದ್ರ್ಯ ಎಲ್ಲವೂ ಇವೆ. ಈಗ ಮತ್ತೆ ನಮ್ಮಿಂದ ಪಾಪಕರ್ಮಗಳು ನಡೆಯುತ್ತಲೇ ಇವೆ. ನಾವು ಈ ಕರ್ಮದ ಸಂಕೋಲೆಯಿಂದ ಹೊರಬರಲು ಯಾವುದಾದರೂ ಸುಲಭೋಪಾಯವಿದ್ದರೆ ತಿಳಿಸಿ. ಯಾವಾಗಲೂ ಮನಸ್ಸಿನಲ್ಲಿ ಸ್ಮರಣೆ ಮಾಡುವಂತದ್ದು. ಉಳಿದ ಯಾವುದೇ ವ್ರತ, ಅಧ್ಯಯನ ಮಾಡುವಷ್ಟು ಶಕ್ತಿಯಿಲ್ಲ.
ದತ್ತಾತ್ರೇಯನಿಗೆ ಮೂರು ಮುಖಗಳಿವಯೇ?
ದತ್ತಾತ್ರೇಯ ಎಂದರೆ ಯಾರು, ಚಿತ್ರಗಳಲ್ಲಿ ಕಾಣುವಂತೆ ಅವರಿಗೆ ಮೂರು ಮುಖಗಳಿವೆಯೇ. ದತ್ತಾತ್ರೇಯ ರೂಪದ ಮತ್ತು ಜಯಂತಿಯ ಕುರಿತು ತಿಳಿಸಿ.
ಸ್ವೋತ್ತಮರು ಎಂದರೆ ಯಾರು
ಸ್ವೋತ್ತಮ ಎಂಬ ಶಬ್ದಕ್ಕೆ ಅರ್ಥವೇನು, ಯಾರನ್ನು ಸ್ವೋತ್ತಮರು ಎಂದು ಗ್ರಹಿಸಬೇಕು
ಮೈಮೇಲೆ ದೇವರು ಬರಲು ಸಾಧ್ಯವೇ?
ಮನುಷ್ಯರ ಮೈಯಲ್ಲಿ ದೇವರು ದೇವತೆಗಳು ಬರಲು ಸಾಧ್ಯವೇ, ಶಾಸ್ತ್ರ ಇದಕ್ಕೇನು ಹೇಳುತ್ತದೆ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.
ಪಂಢರಪುರದ ವಿಠ್ಠಲ ದೇವರೋ. ಪ್ರತಿಮೆಯೋ?
ಆಚಾರ್ಯರಿಗೆ ನಮಸ್ಕಾರಗಳು. ಪಂಡರಾಪುರದ ಪಾಂಡುರಂಗನನ್ನು ನಾವು ಸಾಕ್ಷಾತ್ ದೇವರೆಂದು ತಿಳಿಯಬೇಕೊ ಇಲ್ಲವೇ ದೇವರ ಮೂತಿ೯ ಎಂದು ನಾವು ಚಿಂತಿಸಬೇಕೆ ? ದಯವಿಟ್ಟು ತಿಳಿಸಿ. ಪ್ರಶಾಂತ ಕುಲಕರ್ಣಿ, ಬಾಗಲಕೋಟೆ
ಜೀರ್ಣವಾದ ಪುಸ್ತಕಗಳನ್ನು ಹೇಗೆ ವಿಸರ್ಜಿಸಬೇಕು?
ಆಚಾರ್ಯರಿಗೆ ನಮಸ್ಕಾರಗಳು. ಹರಿದ ಅಥವಾ ಮಲಿನವಾದ ಮಂತ್ರಪುಸ್ತಕಗಳನ್ನು ಏನು ಮಾಡಬೇಕು ದಯವಿಟ್ಟು ತಿಳಿಸಿ. — ಉದ್ಯಾವರ ನಾಗರಾಜ್
ಈಗಿನ ಕಾಲದಲ್ಲಿ ದೇವಸ್ಥಾನದ ಹುಂಡಿಗೆ ಹಣ ಹಾಕಬಹುದೇ?
ಗುರುಗಳೇ, ಮನೆಯ ದೇವರಿಗೆ ಕಾಣಿಕೆ ಹಾಗೂ ನೈವೇದ್ಯ ಮಾಡಿಸಲು ಹೋದಾಗ ಅಲ್ಲಿ ಪೂಜೆ ಮಾಡುವ ಅರ್ಹತೆ ಇಲ್ಲದವರು (ಬ್ರಾಹ್ಮಣೇತರರಾಗಿರಬಹುದು, ಬ್ರಾಹ್ಮಣರಾಗಿದ್ದೂ ಬ್ರಾಹ್ಮಣರಂತೆ ಬದುಕುತ್ತಿಲ್ಲದವರಾಗಿರಬಹುದು) ಪೂಜೆ ಮಾಡುತ್ತಿದ್ದರೆ ನಾವು ಏನು ಮಾಡಬೇಕು ಕಾಣಿಕೆ ಡಬ್ಬಿಗೆ ಹಾಕಿದರೂ ಅದು ಕೂಡ ಕಮಿಟಿಗೆ ಹೊಗುತ್ತದೆ ಇಂತಹ ಸಂದರ್ಭಗಳಲ್ಲಿ ಶಾಸ್ತ್ರ ಏನು ಹೇಳುತ್ತದೆ? — ವಿಜಯೀಂದ್ರ ಪೂಜ್ಯ ಆಚಾರ್ಯರೇ, ನಾನು ಒಂದು ದೇವಸ್ಥಾನದಲ್ಲಿಯೇ ಹಿಂದೆ ಕೆಲಸ ಮಾಡುತ್ತಿದ್ದೆ. ಅಲ್ಲಿ ನಡೆಯುವ ಹಣದ ದುರುಪಯೋಗವನ್ನು ಕಣ್ಣಾರೆ ಕಂಡಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ ದೇವಸ್ಥಾನಗಳಿಗೆ ಸಾಮಾನ್ಯಜನರು ಹಣ ನೀಡುವದು ಎಷ್ಟು ಸಮಂಜಸ? ಈ ರೀತಿ ನೀಡುವದರಿಂದ ಪುಣ್ಯ ಬರುತ್ತದೆಯೇ? — ಉಮಾ ನಾಗರಾಜ್
ಕಾಣ್ವರೊಂದಿಗೆ ವಿವಾಹ ಸಂಬಂಧವನ್ನು ಬೆಳೆಸಬಹುದೇ?
ಆಚಾರ್ಯರೇ, ನಾವು ನನ್ನ ತಮ್ಮನಿಗೆ ಶುಕ್ಲಯಜುರ್ವೇದಿಯ ಮಾಧ್ವ ಕಣ್ವ ಮಠದ ಕನ್ಯೆಯ ಜೊತೆಗೆ ವಿವಾಹ ಮಾಡಬಹುದೇ. ನಮ್ಮದು ಉತ್ತರಾದಿ ಮಠ. — ಬಿಂದು ಮಾಧವ
ಶಠ ಮತ್ತು ಶಾಠ್ಯ ಎಂದರೇನು?
ಶಠ ಮತ್ತು ಶಾಠ್ಯ ಎಂದರೇನು ಗುರುಗಳೇ? — ಸುದರ್ಶನ ಶ್ರೀ.ಲ.
ಲಕ್ಷದೀಪವ್ರತ ನಿಯಮಗಳೇನು?
ಗುರುಗಳಿಗೆ ನಮನ. ನನ್ನ ಮಡದಿ ತಾನೇ ಬತ್ತಿಯನ್ನು ಮಾಡಿ ಲಕ್ಷಬತ್ತಿಗಳ ದೀಪದ ವ್ರತವನ್ನು ಮಾಡುತ್ತಿದ್ದಾರೆ. ಇದನ್ನು ಹೇಗೆ ಮಾಡಬೇಕು ಮತ್ತು ಯಾವಾಗ ಆರಂಭಿಸಬೇಕು ಎನ್ನುವದನ್ನು ತಿಳಿಸಿ. ಈಗಾಗಲೇ ಮೂವತ್ತು ಸಾವಿರ ಬತ್ತಿಗಳಾಗಿವೆ. ಮಧ್ಯದಲ್ಲಿ ನಿಲ್ಲಿಸಿ, ಬತ್ತಿಗಳನ್ನು ಮಾಡಿಕೊಂಡು ಮುಂದುವರೆಸಬಹುದೇ? ದೀಪವನ್ನು ಹಚ್ಚಬೇಕಾದರೆ ಎರಡೆರಡು ಬತ್ತಿಗಳನ್ನು ತೆಗೆದುಕೊಂಡು ಹಚ್ಚುತ್ತಾರೆ. ಹೀಗಾಗಿ ಐವತ್ತುಸಾವಿರ ದೀಪಗಳನ್ನು ಹಚ್ಚಿದರೆ ಲಕ್ಷ ಬತ್ತಿಗಳನ್ನು ಹಚ್ಚಿದಂತಾಗುತ್ತದೆ. ಇದು ಸರಿಯೇ? — ಬಿ. ಶೇಷಗಿರಿ ಆಚಾರ್
ಅಪಾರ್ಟುಮೆಂಟುಗಳಲ್ಲಿ ಗೃಹಪ್ರವೇಶ ಹೇಗೆ?
ನಮಸ್ಕಾರಗಳು, ಅಪಾರ್ಟಮೆಂಟಗಳಲ್ಲಿ ಮನೆ ಖರೀದಿಸಿದರೆ ವಾಸ್ತು ಶಾಂತಿ ಮಾಡಬೇಕೋ ಬೇಡವೋ? ಯಾಕೆ ಈ ಪ್ರಶ್ನೆ ಅಂದರೆ, ಅಲ್ಲಿ ಯಾವ ಕಾರ್ಯವೂ ಶಾಸ್ತ್ರೋಕ್ತ ವಿಧಿವಿಧಾನಗಳಿಂದ ಮಾಡಲು ಅನುಕೂಲ ಇರುವುದಿಲ್ಲ (ex. ಗೋ ಮತ್ತು ಕರುವಿನ ಪ್ರವೇಶ this is just one example) ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು? Or just we can enter how we use to enter into the rented house? — ಎ. ಎಸ್. ಕುಲಕರ್ಣಿ.
ಹಚ್ಚೆ, Tattoo ಹಾಕಿಸಿಕೊಳ್ಳಬಹುದೇ
ನಮಸ್ಕಾರ ಆಚಾರ್ಯರೇ. ಇತ್ತೀಚೆಗೆ ಹಚ್ಚೆ ಹಾಕಿಕೋಳ್ಳುವುದು ಒಂದು ಚಟವಾಗಿದ್ದು ಅದು ಶಾಸ್ತ್ರ ಸಮ್ಮತವೇ ? ಸುಧಾ ಓದುವ ವಿದ್ಯಾರ್ಥಿಗಳು ಕೂಡ ಇದರಿಂದ ಹೋರತಾಗಿಲ್ಲವಲ್ಲ? — ಜಯರಾಮಾಚಾರ್ಯರ ಬೆಣಕಲ್ ಆಚಾರ್ಯರೆ ಭಕ್ತಿ ಪೂರ್ವಕ ನಮಸ್ಕಾರಗಳುಆಚಾರ್ಯರೆ ಹಚ್ಚೆ ಹಾಕಿಸಿಕೊಳ್ಳುವ ಪದ್ದತಿ ಹಿಂದು ಧರ್ಮದಿಂದ ಬಂದದ್ದಾ? ಇದಕ್ಕೆ ಶಾಸ್ತ್ರ ಸಮ್ಮತವಿದೆಯ ಕೆಲವರು ಇದೆ ಎಂದು ಮೌಢ್ಯದಿಂದ ವಾದಿಸುತ್ತಾರೆ. ಸರಿಯಾದ ಮಾಹಿತಿ ನೀಡಿ🙏 — ಮಂಜುನಾಥ್
ಗಾಯತ್ರಿಯ ಜಪ ಮತ್ತು ಉಪದೇಶ
ಆಚಾರ್ಯರಿಗೆ ಪ್ರಣಾಮಗಳು.ಗಾಯತ್ರೀ ಮಂತ್ರ ಜಪವನ್ನು ಸ್ವರ ರಹಿತವಾಗಿಯೂ ಮಾಡಬಹುದೇ? ಉಪದೇಶ, ಸ್ವರ ರಹಿತವಾಗಿ ಆಗಿದ್ದರೆ, ಬೇರೆಯವರ ಬಳಿ ಸ್ವರಬದ್ಧವಾದ ಉಪದೇಶವನ್ನು ಉಪನಯನದ ಬಳಿಕ ಪಡೆಯಬಹುದೇ? ದಯವಿಟ್ಟು ತಿಳಿಸಿ. — ಗುರುರಾಜ್
ಮಂತ್ರ ಜಪಿಸಲು ಉಪದೇಶ ಅನಿವಾರ್ಯವೇ?
ಪೂಜ್ಯ ಆಚಾರ್ಯರಿಗೆ ನಮಸ್ಕಾರಗಳು. ಮಂತ್ರಗಳ ಜಪ ಮಾಡಬೇಕಾದರೆ ಪಡೀಲೇಬೇಕು ಎಂದು ಕೆಲವರು. ಬ್ರಹ್ಮೋಪದೇಶ ಆಗಿದ್ರೆ ಯಾವ ಜಪವನ್ನಾದ್ರುವು ಮಾಡಬಹುದು ಎಂದು ಕೆಲವರು. ಏನು ಮಾಡಬೇಕು ತಿಳಿಸಿ. ಎಲ್ಲ ಮಂತ್ರಕ್ಕೂ ಉಪದೇಶ ಪಡೆಯುವದು ಕಷ್ಟ ಅಲ್ವಾ? — ರಂಗನಾಥ್, ಹಾವೇರಿ.
ಶೂದ್ರರು ಏಕಾದಶಿ ಆಚರಿಸುವ ಕ್ರಮ
ಆಚಾರ್ಯರಿಗೆ ನನ್ನ ನಮನಗಳು.ಆಚಾರ್ಯರೆ ನಾನು ಕುರುಬ ನನಗೆ ಏಕಾದಶಿ ಮಾಡುವ ಕ್ರಮವನ್ನು ದಯಮಾಡಿ ತಿಳಿಸಿ. — ರಾಜೇಶ್, ಮೈಸೂರು.
ತಂಬಾಕು ಸೇವಿಸಬಹುದೇ?
ಶ್ರೀ ಗಣೇಶಾಯ ನಮಃ. ಆಚಾರ್ಯರೆ ಬ್ರಾಹ್ಮಣರಿಗೆ ತಂಬಾಕು ಸೇವಿಸಲು ಶಾಸ್ರ್ತದಲ್ಲಿ ಅನುಮತಿ ಇದೆಯೇ? — ಮಂಜುನಾಥ ಯಾದವಾಡೆ
ಪೂಜೆ, ಉಪಾಸನೆ, ಸಾಧನೆ ಎಂದರೇನು?
ಆಚಾರ್ಯರಿಗೆ ಭಕ್ತಿ ಪೂರ್ವಕ ನಮಸ್ಕಾರಗಳು. ಆಚಾರ್ಯರೆ ಪೂಜೆ, ಉಪಾಸನೆ,ಮತ್ತು ಸಾಧನೆ ಇವುಗಳಲ್ಲಿನ ವ್ಯತ್ಯಾಸ ಏನು? — ಮಂಜುನಾಥ್
ಬ್ರಹ್ಮವೋ, ಬ್ರಮ್ಹವೋ?
ಪೂಜ್ಯ ಆಚಾರ್ಯರಿಗೆ ಸಾಷ್ಟಾಂಗ ಪ್ರಣಿಪಾತಗಳು. ತಮ್ಮ ವಿಶ್ವನಂದಿನಿಯ App ನಮಗೆ ಅತ್ಯಂತ ಉಪಯುಕ್ತವಾಗುತ್ತಿದೆ. ಮುಖ್ಯವಾಗಿ ಪ್ರಶ್ನೋತ್ತರ ವಿಭಾಗ ನಮಗೆ ರಸಾಯನದಂತಿದೆ. ವಿದೇಶಪ್ರವಾಸದ ಕುರಿತು ನಿಮ್ಮ ಪ್ರಶ್ನೋತ್ತರ ನಮ್ಮ ಆಲೋಚನೆಯ ವಿಧಾನವನ್ನು ಬದಲಿಸಿದೆ. ಹೋದರೆ ತಪ್ಪೇನು ಎಂದು ನಾವೆಲ್ಲರೂ ವಾದಿಸುತ್ತಿದ್ದೆವು. ಆದರೆ, “ಕೋಟಿಕೋಟಿ ಜನ್ಮಗಳಲ್ಲಿ ಸಾಧನೆ ಮಾಡಿ, ಅನಂತ ಜನ್ಮಗಳನ್ನು ದಾಟಿ ಪಡೆದಿರುವ ಈ ಅದ್ಭುತ ಬ್ರಾಹ್ಮಣ್ಯವನ್ನು ಕೇವಲ ಒಂದು ಊರಿಗಾಗಿ ಬಿಡಲು ಸಾಧ್ಯವೇ? ಬಿಡುವದು ಯುಕ್ತವೇ?” ಎಂಬ ನಿಮ್ಮ ಮಾತು ವೈಯಕ್ತಿಕವಾಗಿ ನನ್ನ ಮೇಲೆ ತುಂಬ ಪರಿಣಾಮ ಬೀರಿದೆ, ವಿದೇಶಕ್ಕೆ ಹೋಗುವ ನಿರ್ಧಾರವನ್ನು ಕೈಬಿಟ್ಟಿದ್ದೇನೆ, ಗುರುಗಳೆ. ಈಗ ನನ್ನ ಪ್ರಶ್ನೆ ಹೀಗಿದೆ — ಬನ್ನಂಜೆ ಗೋವಿಂದಾಚಾರ್ಯರು ಮತ್ತು ತಾವು ಬ್ರಹ್ಮ ಎಂಬ ಶಬ್ದವನ್ನು ಬ್ರಹ್,ಮ ಎಂದು ಉಚ್ಚರಿಸುತ್ತೀರಿ. ಆದರೆ ಆ ರೀತಿಯ ಉಚ್ಚಾರಣೆ ತಪ್ಪು, ಬ್ರಮ್ಹ ಎಂದೇ ಉಚ್ಚರಿಸಬೇಕು ಎಂದು ಕೆಲವು ಪಂಡಿತರು ಹೇಳುತ್ತಿದ್ದಾರೆ. ಮತ್ತು ಬ್ರಹ್ಮ ಎಂಬಲ್ಲಿ ಹ ಎನ್ನುವದು silent ಎಂದು ಅನೇಕರ ವಾದ. ಅದಕ್ಕೆ ಪಾಣಿನೀಯ ಶಿಕ್ಷಾದ ಆಧಾರವನ್ನೂ ನೀಡುತ್ತಾರೆ. ಔರಸ್ಯಂ ತಂ ವಿಜಾನೀಯಾತ್ ಎಂದು. ಅಕ್ಷರ ಎದೆಯಲ್ಲಿಯೇ ಇರಬೇಕು ಎಂದು. ತಮ್ಮ ಉಚ್ಚಾರಣೆಯ ಕ್ರಮಕ್ಕೆ ಏನು ಆಧಾರ ಎನ್ನುವದನ್ನು ತಿಳಿಸಬೇಕಾಗಿ ಪ್ರಾರ್ಥನೆ. — ಸುಧಾಕರ, ಬೆಂಗಳೂರು.
ಈ ವಿಡಿಯೋ ಕುರಿತು ನಿಮ್ಮ ಅಭಿಪ್ರಾಯ ತಿಳಿಸಿ
ನಿಮಗೆಲ್ಲರಿಗೂ ಸ್ತೋತ್ರಗಳನ್ನು ಸುಲಭವಾಗಿ ಕಲಿಸಲು ಒಂದು ವಿಡಿಯೋ ಸಿದ್ಧಪಡಿಸಿದ್ದೇನೆ. ಒಮ್ಮೆ ಸಂಪೂರ್ಣವಾಗಿ ನೋಡಿ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟಿನ ಮುಖಾಂತರ ತಿಳಿಸಿ.
ದೈವ ಬಲ ಇಲ್ಲದವರನ್ನು ದೇವರು ರಕ್ಷಿಸುತ್ತಾನೆಯೇ?
ಆಚಾರ್ಯರಿಗೆ ಪ್ರಣಾಮಗಳು. ನನ್ನ ಪ್ರಶ್ನೆ ಇಂತಿದೆ — ಒಂದು ಸನ್ನಿವೇಶ. ಒಬ್ಬ ಮನುಷ್ಯನ ತಾರಾಬಲದಲ್ಲಿ ದೈವಬಲ ಕಡಿಮೆ/ಇಲ್ಲವೇ ಇಲ್ಲ ಅಂತಿದೆ. ಹಾಗಿರುವಾಗ ಕೃಷ್ಣ ಭಗವದ್ಗೀತೆಯಲ್ಲಿ ಹೇಳುವದು — “ನನ್ನನ್ನು ಸ್ಮರಿಸುವವರನ್ನು ನಾನು ಕಾಪಾಡುತ್ತೇನೆ” ಅಂತ. ಈ ಎರಡೂ ವಾಕ್ಯಗಳು ಒಂದಕ್ಕೊಂದು ವಿರುದ್ಧ ಅರ್ಥ ಕೊಡುತ್ತಿವೆ. ದಯವಿಟ್ಟು ಸಂದೇಹ ಪರಿಹರಿಸಿ. — ಚೇತನ್ ರಾಜ್ ರಾವ್.
ವಾಯುಸ್ತುತಿ ಪ್ರವಚನ
ಶ್ರೀ ಗುರುಭ್ಯೋ ನಮಃ. ತಮ್ಮ ಮುಖದಿಂದ ವಾಯುಸ್ತುತಿಯ ಉಪನ್ಯಾಸವನ್ನು ಕೇಳಬೇಕೆಂಬ ಆಸೆಯಿಂದ ತಮ್ಮಲ್ಲಿ ಪ್ರಾರ್ಥನೆಯನ್ನು ಸಲ್ಲಿಸ ಬಯಸುತ್ತೇನೆ. ದಯವಿಟ್ಟು ಈ ಪ್ರಾರ್ಥನೆಯನ್ನು ಸ್ವೀಕರಿಸಿ ನಮ್ಮನ್ನು ಉದ್ಧರಿಸಬೇಕು. — ಪವನ.
ಆತ್ಮನಿಗೆ ಸಾವಿಲ್ಲವಾದರೆ ಆತ್ಮಹತ್ಯೆ ಹೇಗೆ?
ಆತ್ಮನಿಗೆ ಸಾವಿಲ್ಲ ಎನ್ನುತ್ತಾರೆ. ಹಾಗಾದರೆ ಆತ್ಮಹತ್ಯೆ ಅತ್ಮಶ್ರಾದ್ಧ ಎನ್ನುವ ಶಬ್ದಗಳು ಏನನ್ನು ಹೇಳುತ್ತವೆ? ಆತ್ಮಕ್ಕೆ ಸಾವೇ ಇಲ್ಲದ ಬಳಿಕ ಹತ್ಯೆ ಹೇಗೆ? ಶ್ರಾದ್ಧ ಹೇಗೆ? — ಅಖಿಲಾ ದೇಶಪಾಂಡೆ.
ವಾಯುಸ್ತುತಿಯನ್ನು ಸಂಜೆ ಪಠಿಸಬಾರದೇ?
ಕೆಲವರು ವಾಯುಸ್ತುತಿಯನ್ನು ಸಾಯಂಕಾಲ ಪಠಿಸಬಾರದು ಎಂದು ಹೇಳುತ್ತಾರೆ .ಇನ್ನು ಕೆಲವರು ಪಠಿಸಬಹುದು ಎಂದು ಹೇಳುತ್ತಾರೆ . ಇದರಲ್ಲಿ ಯಾವುದು ಸರಿ? — ಶ್ರೀಹರಿ ಪೆಜತ್ತಾಯ
ಏಕಾದಶಿಯ ದಿವಸ ಪದಾರ್ಥಗಳು ಕಲುಷಿತವಾಗುವದಿಲ್ಲವೇ?
ಆಚಾರ್ಯರೆ ನಮಸ್ಕಾರಗಳು. ನನ್ನದೊಂದು ಪ್ರಶ್ನೆ — ಏಕಾದಶಿಯಂದು ಸಕಲ ಪಾಪಗಳು ಆಹಾರವನ್ನು ಆಶ್ರಯಿಸಿರುತ್ತವೆ. ಆದ್ದರಿಂದ ಅಂದು ಭೋಜನ ಮಾಡಬಾರದು. ಆಚಾರ್ಯರೆ ಈಗ ಎಣ್ಣೆ ಉಪ್ಪು ಉಪ್ಪಿನಕಾಯಿ ಇವುಗಳು ಏಕಾದಶಿಗೆ ತಗುಲುತ್ತವೆ ಅಲ್ಲವೆ ಅದನ್ನು ಮತ್ತೆ ಉಪಯೋಗಿಸಲು ಬರುತ್ತದೆಯೇ ತಿಳಿಸಿಕೊಡಿ — ಮಂಜುನಾಥ್
ಪ್ರಳಯಕಾಲದಲ್ಲಿ ಅಂಧಂತಮಸ್ಸು ಇರುತ್ತದೆಯೇ?
ಪ್ರಳಯಕಾಲದಲ್ಲಿ ದೇವರು ಲಕ್ಷ್ಮೀದೇವಿ ಇಬ್ಬರೇ ಇರುವಾಗ ಅಂಧಂತಮಸ್ಸು ಇರುತ್ತದೆಯೋ ಇರುವದಿಲ್ಲವೋ? — ರಾಘವೇಂದ್ರ
ಸಂಜೆ ಊರ್ಧ್ವಪುಂಡ್ರ ಧರಿಸಬಹುದೇ?
ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು🙏 ದ್ವಾದಶ ಊರ್ಧ್ವಪುಂಡ್ರಗಳು ಗೋಪಿಚಂದನದಿಂದ ಸಾಯಂ ಸಂಧ್ಯವಂದನೆಯಲ್ಲಿ ಹಚ್ಚಿಕೊಳ್ಳ ಬಹುದೇ? 🙏 ದಯವಿಟ್ಟು ತಿಳಿಸಿ. — ಭಾರದ್ವಾಜ್ ಕರಣಮ್, ಬಳ್ಳಾರಿ.