ಸದಾಚಾರಸ್ಮೃತಿ — 12 — ದಂತಧಾವನ
ನಿಮಗೆ ಗೊತ್ತೆ, ನಮ್ಮ ಸುತ್ತಮುತ್ತಲೂ ಸಿಗುವ ಮರಗಳ ಕಡ್ಡಿಯನ್ನು ಹಲ್ಲುಜ್ಜುವದಕ್ಕಾಗಿ ಉಪಯೋಗಿಸುವದರಿಂದ ಕಿವುಡು ಪರಿಹಾರ, ಬುದ್ಧಿಯ ಚುರುಕುತನ, ವಾಕ್-ಶಕ್ತಿ, ಮಧುರಸ್ವರ, ದೇಹದ ಕಾಂತಿ ಮುಂತಾದವುಗಳನ್ನು ಸುಲಭವಾಗಿ ಪಡೆಯಲು ಸಾಧ್ಯ. ಮನುಕುಲದ ಮೇಲ ಅನುಗ್ರಹ ಮಾಡಲಿಕ್ಕಾಗಿಯೇ ಗ್ರಂಥಗಳನ್ನು ರಚಿಸಿರುವ ಶ್ರೀ ಗರ್ಗಾಚಾರ್ಯರು, ಅಶ್ವಲಾಯನರು ಯಾವ ಕಡ್ಡಿಯಿಂದ ಹಲ್ಲುಜ್ಜುವದರಿಂದ ಯಾವ ರೀತಿಯ ಪ್ರಯೋಜನವನ್ನು ನಾವು ಪಡೆಯುತ್ತೇವೆ ಎನ್ನುವದನ್ನು ತಿಳಿಸಿದ್ದಾರೆ. ಅವುಗಳ ವಿವರಣೆ ಇಲ್ಲಿದೆ. ಲೇಖನ VNA222, 223
ಸದಾಚಾರಸ್ಮೃತಿ — 11 — ಶೌಚದ ವಿಧಿಗಳು
ಯಾವ ಪ್ರದೇಶ, ಕಾಲ, ಸಂದರ್ಭಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡಬಾರದು ಎನ್ನುವ ನಿಷೇಧಗಳನ್ನು ಹಿಂದಿನ ಉಪನ್ಯಾಸದಲ್ಲಿ ತಿಳಿದೆವು. ಮಲಮೂತ್ರವಿಸರ್ಜನೆಯ ಕಾಲದಲ್ಲಿ ಅನುಸರಿಸಬೇಕಾದ ವಿಧಿಗಳ ಕುರಿತು ಇಲ್ಲಿ ತಿಳಿಯುತ್ತೇವೆ.
ಸದಾಚಾರಸ್ಮೃತಿ — 10 — ಶೌಚದಲ್ಲಿ ನಿಷೇಧಗಳು
ಬಯಲಶೌಚದ ಹಿಂದಿರುವ ವೈಜ್ಞಾನಿಕ ಅಂಶಗಳನ್ನು, ಇಂದಿಗೆ ಅದು ವಿರೂಪಗೊಂಡಿರುವದನ್ನು ಹಿಂದಿನ ಲೇಖನದಲ್ಲಿ ಮನಗಂಡೆವು. ಶೌಚವನ್ನು ಯಾವ ರೀತಿಯಾಗಿ ಆಚರಿಸಬೇಕು ಮತ್ತು ಯಾವ ರೀತಿಯಾಗಿ ಆಚರಿಸಬಾರದು ಎಂಬ ಎರಡೂ ವಿಷಯಗಳನ್ನು ಶಾಸ್ತ್ರಗಳು ಅತ್ಯಂತ ಸ್ಪಷ್ಟವಾಗಿ ತಿಳಿಸುತ್ತವೆ. ಶೌಚದಲ್ಲಿನ ನಿಷೇಧಗಳ ಕುರಿತು ತಿಳಿಸುವ ಲೇಖನಿವಿದು. ಇದರ ಕುರಿತ ಉಪನ್ಯಾಸ VNU367
ಸದಾಚಾರಸ್ಮೃತಿ — 09 — ಬಯಲಶೌಚ
ಮಲಮೂತ್ರವಿಸರ್ಜನೆಯ ವಿಷಯದಲ್ಲಿ ನಮ್ಮ ಋಷಿಮುನಿಗಳು ವಿಧಿಸುವದು ಬಹಿಃಶೌಚವನ್ನು. ಆದರೆ ಇವತ್ತು ಹಳ್ಳಿಗಳಲ್ಲಿ ಇರುವ ಬಯಲ ಶೌಚ ಖಂಡಿತ ಶಾಸ್ತ್ರೀಯವೂ ಅಲ್ಲ, ಸಮಾಜಸಮ್ಮತವೂ ಅಲ್ಲ. ನಮ್ಮ ಪ್ರಾಚೀನ ಋಷಿಮುನಿಗಳು ಎಂದಿಗೂ ಪ್ರಕೃತಿಗೆ ಮಾರಕವಾದ ಬದುಕನ್ನು ಉಪದೇಶಿಸಲಿಲ್ಲ. ಪ್ರಕೃತಿಗೆ ಆಪ್ಯಾಯಮಾನವಾಗಿ ಬದುಕುತ್ತಿದ್ದವರು ಅವರು. ನಮ್ಮ ಪ್ರಾಚೀನರ ಬಯಲ ಶೌಚದ ಹಿಂದೆ ಅದೆಂತಹ ವೈಜ್ಞಾನಿಕತೆ ಅಡಗಿದೆ, ಹಾಗೂ ಟಾಯ್ಲೆಟ್ಟಿನ ಉಪಯೋಗದಿಂದ ಈಗಾಗಲೇ ಪ್ರಕೃತಿಯ ಮೇಲೆ ಉಂಟಾಗಿರುವ ಪರಿಣಾಮವೇನು ಎನ್ನುವದನ್ನು ಇಲ್ಲಿ ತಿಳಿಯುತ್ತೇವೆ. ಈ ವಿಷಯದ ಕುರಿತ ಲೇಖನ VNA205 ನಲ್ಲಿದೆ.
SS08 — ಹಾಸಿಗೆಯಲ್ಲಿ ಹರಿಸ್ಮರಣೆ
ನಿದ್ರೆಯಿಂದ ಏಳುತ್ತಲೇ ಮಾಡಬೇಕಾದ ವಿಷ್ಣುಸ್ಮರಣೆಯ ಕುರಿತ ವಿವರ, ಪಠಿಸುವ ಶ್ಲೋಕಗಳು ಮತ್ತು ಅವುಗಳ ಅರ್ಥ, ಹಾಗೂ ಹಾಸಿಗೆಯಲ್ಲಿ ಶ್ಲೋಕಗಳನ್ನು ಪಠಿಸಬಹುದೇ ಎನ್ನುವ ಪ್ರಶ್ನೆಗೆ ಉತ್ತರ ಮುಂತಾದವುಗಳನ್ನೊಳಗೊಂಡ ಉಪನ್ಯಾಸ. ಇದೇ ವಿಷಯದ ಕುರಿತ ಲೇಖನ: VNA204.
SS07 — ಬ್ರಾಹ್ಮಮುಹೂರ್ತದಲ್ಲಿ ಏಳಲು ಸುಲಭೋಪಾಯ
ನಿದ್ರೆಯ ಆರು ರೀತಿಯ ಅವಧಿಗಳನ್ನು ತಿಳಿದೆವು, ಬ್ರಾಹ್ಮಮುಹೂರ್ತದಲ್ಲಿ ಮಲಗಿರುವದರಿಂದ ಮಾಡಿದ ಪುಣ್ಯವೆಲ್ಲವೂ ಕ್ಷಯವಾಗುತ್ತದೆ ಎನ್ನುವದನ್ನೂ ತಿಳಿದೆವು. ಈಗ ಪ್ರಶ್ನೆ. ನಮಗೆ ಏಳಬೇಕೆಂಬ ಅಪೇಕ್ಷೆಯೂ ಇದೆ, ಏಳಲು ಅವಕಾಶವೂ ಇದೆ. ಆದರೆ ಏಳಲು ಸಾಧ್ಯವಾಗುತ್ತಿಲ್ಲ. ಏನು ಮಾಡಬೇಕು? ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ಮಂದರಾದ ನಮ್ಮ ಈ ಪ್ರಶ್ನೆಗೂ ಉತ್ತರವನ್ನಿತ್ತಿದ್ದಾರೆ. ಆ ಉತ್ತರದ ನಿರೂಪಣೆ ಇಲ್ಲಿದೆ. ಲೇಖನ VNA187
SS06 — ನಿದ್ರೆಯ ಅವಧಿ ಮತ್ತು ಏಳುವ ಸಮಯ
ಶಾಸ್ತ್ರ ತಿಳಿಸುವ ಆರು ರೀತಿಯ ನಿದ್ರೆಯ ಅವಧಿಯನ್ನು ವಿವರಿಸುವ ಉಪನ್ಯಾಸವಿದು. ಬ್ರಾಹ್ಮಮುಹೂರ್ತದಲ್ಲಿ ಯಾಕಾಗಿ ಏಳಬೇಕು, ಉಂಟಾಗುವ ಆಧ್ಯಾತ್ಮಿಕ ಪ್ರಯೋಜನಗಳೇನು, ಸಂನ್ಯಾಸಿಗಳು ಯಾವಾಗ ಏಳಬೇಕು, ಗೃಹಸ್ಥರು ಯಾವಾಗ ಎಂಬ ವಿಷಯಗಳೊಂದಿಗೆ, ಗಳಿಗೆ, ಮುಹೂರ್ತ ಮತ್ತು ಯಾಮ ಎನ್ನುವ ಶಬ್ದಗಳ ಅರ್ಥವವಿರಣೆ ಇಲ್ಲಿದೆ. ಲೇಖನ VNA186
SS05 — ಕರ್ಮಸಮರ್ಪಣೆಗೆ ಕಾರಣಗಳು
ದೇವರಿಗೇಕೆ ಕರ್ಮಗಳನ್ನು ಸಮರ್ಪಿಸಬೇಕು? ಈ ಪ್ರಶ್ನೆಗೆ ಶ್ರೀಮದಾಚಾರ್ಯರು ನೀಡಿರುವ ಉತ್ತರಗಳ ಸಂಗ್ರಹ ಈ ಉಪನ್ಯಾಸದಲ್ಲಿದೆ. ಲೇಖನ VNA185
SS04 — ಕರ್ಮಗಳಲ್ಲಿ ಅನುಸಂಧಾನ — 3
ಆಚಾರ್ಯರ ಸದಾಚಾರಸ್ಮೃತಿಯ ಮೊದಲ ವಾಕ್ಯದ ಅರ್ಥಾನುಸಂಧಾನವನ್ನು ಮಾಡುತ್ತ ಶ್ರೀ ರಾಘವೇಂದ್ರಸ್ವಾಮಿಗಳು ತಿಳಿಸಿಕೊಟ್ಟ “ತ್ವದಾಜ್ಞಯಾ, ತ್ವತ್ಪ್ರಸಾದಾತ್, ತ್ವತ್ಪ್ರೇರಣಯಾ, ತ್ವತ್ಪ್ರೀತ್ಯರ್ಥಂ, ತ್ವಾಮುದ್ದಿಶ್ಯ, ತ್ವಾಮನುಸ್ಮರನ್ನೇವ” ಎಂಬ ಅನುಸಂಧಾನಗಳಲ್ಲಿ ಮೊದಲ ಮೂರನ್ನು ಅರ್ಥ ಮಾಡಿಕೊಂಡೆವು. ಕಡೆಯ ಮೂರು ಅನುಸಂಧಾನಗಳ ವಿವರಣೆ ಇಲ್ಲಿದೆ. ಲೇಖನ VNA183
SS03— ಕರ್ಮಗಳಲ್ಲಿ ಅನುಸಂಧಾನ — 2
ಆಚಾರ್ಯರ ಮಂಗಳಾಚಾರಣ ಶ್ಲೋಕದಲ್ಲಿನ ನಿರ್ಮಮಃ ಮತ್ತು ಕರ್ಮಾಣಿ ಸಂನ್ಯಸ್ಯ ಎಂಬ ತತ್ವಗಳನ್ನು ಯಥಾಶಕ್ತಿ ಅರ್ಥ ಮಾಡಿಕೊಂಡೆವು. ಈ ಉಪನ್ಯಾಸದಲ್ಲಿ ಅಧ್ಯಾತ್ಮಚೇತಸಾ ಎಂಬ ಪದದ ಅರ್ಥಾನುಸಂಧಾನವಿದೆ. ದೇವರ ಆಜ್ಞೆ, ಪ್ರಸಾದ, ಪ್ರೇರಣೆಗಳನ್ನು ನೆನೆಯುವ ಬಗೆಯ ಚಿಂತನೆಯಿದೆ. ಲೇಖನ VNA182
SS02 — ಕರ್ಮಗಳಲ್ಲಿ ಅನುಸಂಧಾನ — 1
ನಾಹಂ ಕರ್ತಾ ಹರಿಃ ಕರ್ತಾ ತತ್ಪೂಜಾ ಕರ್ಮಚಾಖಿಲಮ್” ಎಂಬ ಶ್ಲೋಕದ ವಿವರಣೆ ಈ ಉಪನ್ಯಾಸದಲ್ಲಿದೆ. ಆಚಾರ್ಯರ ಸದಾಚಾರಸ್ಮೃತಿಯ ಅರ್ಥಾನುಸಂಧಾನ ಈ ಲೇಖನ ಮತ್ತು ಉಪನ್ಯಾಸಗಳಿಂದ ಆರಂಭ. ಲೇಖನ VNA181
SS01 — ಸದಾಚಾರದ ಆವಶ್ಯಕತೆ ಮತ್ತು ಗ್ರಂಥಗಳು
ಸದಾಚಾರವನ್ನು ಯಾಕಾಗಿ ಅನುಷ್ಠಾನ ಮಾಡಬೇಕು, ಸಾಧನೆಯಲ್ಲಿ ಸದಾಚಾರದ ಪಾತ್ರವೇನು ಎನ್ನುವ ಪ್ರಶ್ನೆಗಳಿಗೆ ಶ್ರೀಮದಾಚಾರ್ಯರು ಗೀತಾಭಾಷ್ಯ ಮುಂತಾದ ಗ್ರಂಥಗಳಲ್ಲಿ ನೀಡಿರುವ ಉತ್ತರಗಳ ಅನುಸಂಧಾನ ಮತ್ತು ನಮ್ಮ ಮಾಧ್ವಪರಂಪರೆಯಲ್ಲಿ ಇರುವ ಸದಾಚಾರದ ಗ್ರಂಥಗಳ ಮಾಹಿತಿ ಈ ಲೇಖನದಲ್ಲಿದೆ.
ರುದ್ರಾಕ್ಷಿ ಮತ್ತು ತುಳಸೀಮಣಿ
ರುದ್ರಾಕ್ಷಿ ಮಾಲೆ ಹಾಗೂ ತುಳಸಿ ಮಾಲೆಯನ್ನು ಒಬ್ಬ ವ್ಯಕ್ತಿ ಏಕ ಕಾಲದಲ್ಲಿ ಧರಿಸಬಹುದೇ? ದಯವಿಟ್ಟು ಉತ್ತರಿಸಿ. — ನಿತ್ಯಾನಂದ ಭಟ್
ಮಧ್ಯಾಹ್ನದ ಸಂಧ್ಯಾವಂದನೆಯನ್ನು ಬೆಳಿಗ್ಗೆ ಮಾಡುವದು ಉತ್ತಮವೋ, ಸಂಜೆ ಮಾಡುವದು ಉತ್ತಮವೋ?
ನಾವು ಕೆಲಸಕ್ಕೆ ಹೋಗುವದರಿಂದ ಮಧ್ಯಾಹ್ನದ ಸಂಧ್ಯಾವಂದನೆಯನ್ನು ಮಧ್ಯಾಹ್ನಕಾಲದಲ್ಲಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಬೆಳಿಗ್ಗೆ ಅಥವಾ ಸಂಜೆ ಮಾಡಬೇಕಾಗುತ್ತದೆ. ಯಾವಾಗ ಮಾಡಿದರೆ ಉತ್ತಮ ಎನ್ನುವದನ್ನು ತಿಳಿಸಿ.
ಪ್ರವರದಲ್ಲಿ ನಾವು ಸುಳ್ಳು ಹೇಳುತ್ತಿದ್ದೇವೆಲ್ಲವೇ?
ಸಂಧ್ಯಾವಂದನೆ ಮುಂತಾದ ಸಂದರ್ಭಗಳಲ್ಲಿ ನಾವು ನಮ್ಮ ಪ್ರವರ ಹೇಳಿ ನಮಸ್ಕಾರ ಮಾಡುತ್ತೇವೆ. ಪ್ರವರದಲ್ಲಿ “ಋಕ್ ಶಾಖಾಧ್ಯಾಯೀ, ಯಜುಃಶಾಖಾಧ್ಯಾಯೀ” ಎಂದು ನಾನು ಋಗ್ವೇದವನ್ನು ಓದುತ್ತಿರುವವನು, ಯಜುರ್ವೇದವನ್ನು ಓದುತ್ತಿರುವವನು ಎಂದು ಹೇಳುತ್ತೇವೆ. ನಾವು ಓದುತ್ತಿಲ್ಲವಾದ್ದರಿಂದ ಅದು ಸುಳ್ಳು. ಸುಳ್ಳಿನ ಪ್ರವರ ಹೇಳುವದರಿಂದ ಪ್ರವರವನ್ನೇ ಹೇಳದಿರುವದು ಒಳಿತಲ್ಲವೇ?
ಅಕ್ಷತೆ ಧರಿಸಿ ಮಠಕ್ಕೆ ಹೋಗಬಹುದೆ?
ನಮ್ಮ ಮನೆಯಲ್ಲಿ ಪೂಜೆಯನ್ನು ಮುಗಿಸಿ ಅಂಗಾರ ಅಕ್ಷತೆ ಧರಿಸಿ ಮಠ, ದೇವಸ್ಥಾನಗಳಲ್ಲಿ ಇನ್ನೂ ನೈವೇದ್ಯವಾಗದ ಸಮಯಕ್ಕೆ ಹೋಗಬಹುದೆ.
ಸಂನ್ಯಾಸಿಯಾದವನು ಮತ್ತೆ ಗೃಹಸ್ಥನಾಗಬಹುದೇ? ಶಾಸ್ತ್ರದಲ್ಲಿ ಅನುಮತಿ ಇದೆಯೇ?
ಸಂನ್ಯಾಸಿಯಾದವನು ಮತ್ತೆ ಗೃಹಸ್ಥನಾಗಬಹುದೇ? ಶಾಸ್ತ್ರದಲ್ಲಿ ಅನುಮತಿ ಇದೆಯೇ?
ನಾವು ಮಾಡುವ ಅಲ್ಪ ಧರ್ಮಾಚಾರಣೆಯನ್ನು ದೇವರು ಸ್ವೀಕರಿಸುತ್ತಾನೆಯಾ?
ಆಚಾರ್ಯರೇ, ನಮ್ಮ ಮನೆಯಲ್ಲಿ ನಾವು ಪೂರ್ಣವಾಗಿ ಸದಾಚಾರಿಗಳಲ್ಲ. ಹಾಗೆಂದು ನಿಷಿದ್ಧ ಕೆಲಸ ಮಾಡುತ್ತಿಲ್ಲ. ಉದಾಹರಣೆಗೆ ನಿತ್ಯ ಪೂಜೆ ಮಾಡಬೇಕು. ಆಗುತ್ತಿಲ್ಲ. ಶುದ್ಧ ಮಡಿಯಲ್ಲಿ ಅಡಿಗೆ ಮಾಡಿ ತಿನ್ನಬೇಕು. ಅದನ್ನು ಮಾಡುತ್ತಿಲ್ಲ. ಹಾಗೆಂದು ಹೋಟೆಲ್ಲಿನಲ್ಲಿ ತಿನ್ನುತ್ತಿಲ್ಲ. ನಿಷಿದ್ಧ ಪದಾರ್ಥಗಳನ್ನೂ ತಿನ್ನುತ್ತಿಲ್ಲ. ದೇವರಲ್ಲಿ ಭಕ್ತಿಯಿದೆ. ಸಾಧನೆಯಲ್ಲಿ ನಮ್ಮಂತಹವರಿಗೆ ಸ್ಥಾನವಿದೆಯೇ ಆಚಾರ್ಯರೆ. ನಮ್ಮ ಭಕ್ತಿಯನ್ನು ದೇವರು ಸ್ವೀಕರಿಸುತ್ತಾನೆಯಾ. ಕೆಲವು ನಿಯಮಗಳನ್ನು ಅನುಸರಿಸುತ್ತಿದ್ದೇವೆ. ಕೆಲವು ನಿಯಮಗಳನ್ನು ಪಾಲಿಸಲು ಸಾಧ್ಯವಾಗುತ್ತಿಲ್ಲ. ಮಾಡಬಾರದು ಎಂದು ಹೇಳಿರುವದನ್ನು ಖಂಡಿತ ಮಾಡುವದಿಲ್ಲ. ಆದರೆ ಮಾಡಬೇಕಾದ ಎಲ್ಲವನ್ನೂ ಪಾಲಿಸದೇ ಇದ್ದಾಗ ದೇವರು ನಾವು ಮಾಡಿದ್ದಕ್ಕೆ ಉತ್ತಮ ಫಲವನ್ನು (ಲೌಕಿಕ ಫಲವಲ್ಲ. ನೀವು ಭಾಗವತದಲ್ಲಿ ಹೇಳಿದಂತೆ ಜ್ಞಾನ ಭಕ್ತಿ ವೈರಾಗ್ಯಗಳನ್ನು ) ಕರುಣಿಸುತ್ತಾನೆಯಾ. ದಯವಿಟ್ಟು ತಿಳಿಸಿ. — ಅರವಿಂದ್ ಭಾರದ್ವಾಜ್
ಮೇಲ್ನೀರಿನ ಕುರಿತು ತಿಳಿಸಿ
ಸ್ನಾನದ ನಂತರ ಮೇಲ್ನೀರು ಹಾಕಿಕೊಳ್ಳುವದು ಏಕೆ ತಿಳಿಸಿ. — ರಾಮಚಂದ್ರ ಗಜೇಂದ್ರಗಡ್.
ಊರ್ಧ್ವಪುಂಡ್ರಗಳ ನಿಖರ ಸಂಖ್ಯೆ ಎಷ್ಟು? 12, 13, 14,ಅಥವಾ 15?
ಶ್ರೀ ಗುರುಭ್ಯೋ ನಮಃ. ದ್ವಾದಶನಾಮಗಳು ಎಂದು ಪ್ರಸಿದ್ಧಿ ಇರುವಾಗ, ಕೇವಲ ದ್ವಾದಶ ನಾಮಗಳನ್ನು ಧಾರಣೆ ಮಾಡದೆ, ಕೆಲವರು ತ್ರಯೋದಶ, ಕೆಲವರು ಚತುರ್ದಶ ಎಂದು ಕೆಲವರು ಪಂಚದಶ ನಾಮಗಳನ್ನು ಧಾರಣೆ ಮಾಡುತ್ತಾರೆ. ಈ ವ್ಯತ್ಯಾಸ ಏಕೆ ಮತ್ತು ಸರಿಯಾದ ಸಂಖ್ಯೆ ಯಾವುದು ಎಂದು ದಯಮಾಡಿ ತಿಳಿಸಿ. — ಪವನ್ ಬೆಂಗೇರಿ.
ಹಸ್ತೋದಕ, ಪಾದೋದಕ ಸ್ವೀಕರಿಸಬಹುದೇ?
ಗುರುಗಳೆ, ನೀವೇ ಹಿಂದೊಮ್ಮೆ ನಾನು ಗುರುಗಳ ಪಾದೋದಕದ ಬಗ್ಗೆ ಕೇಳಿದಾಗ , ನೀವು ಗುರುಗಳ( ರಾಯರು ಇತ್ಯಾದಿ ಯತಿಗಳ), ರುದ್ರ ದೇವರ ತೀರ್ಥ ಸೇವಿಸಬಾರದು, ಕೇವಲ ತಲೆತಲೆಯಮೇಲೆ ಹಾಕಿಕೊಳ್ಳಬೇಕು ಎಂದಿದ್ದಿರಿ..ಈಗ ಸ್ವೀಕರಿಸಬೇಕು ಎನ್ನುತ್ತಿದ್ದೀರಿ. — ರಾಮಮೂರ್ತಿ ಕುಲಕರ್ಣಿ.
ಸಂಧ್ಯಾವಂದನೆಯ ನೀರನ್ನು ಎಲ್ಲಿ ಹಾಕಬೇಕು
ಆಚಾರ್ಯರಿಗೆ ನಮಸ್ಕಾರಗಳು, ಸಂಧ್ಯಾವಂದನೆ ಆದ ನಂತರ, ನೀರನ್ನು ವಿಸರ್ಜನೆ ಮಾ ಡುವ ಬಗೆ ಹೇಗೆ? ಗಿಡಗಳು ಇಲ್ಲದಿದ್ದಲ್ಲಿ ಏನು ಮಾಡಬೇಕು. — ಶ್ರೀನಿವಾಸ್.
ವೃಂದಾವನದ ಮೃತ್ತಿಕೆ ಧರಿಸಬಹುದೇ?
ಆಚಾರ್ಯರಿಗೆ ನಮಸ್ಕಾರ. ಶ್ರೀಮಂತ್ರಾಲಯ ಪ್ರಭುಗಳ ಶ್ರೀಮದ್ವಾದಿರಾಜ-ಗುರುಸಾರ್ವಭೌಮರ ಗುರುಗಳ ವೃಂದಾವನದ ಮೃತ್ತಿಕೆ ಧಾರಣೆ ಮಾಡುವದು ಸರಿಯೇ? ಮೃತ್ತಿಕೆ ಯಾವಾಗ ಸ್ವೀಕರಿಸಬೇಕು. ಹೇಗೆ ಧಾರಣೆ ಮಾಡಬೇಕು? ಧನ್ಯವಾದಗಳೊಂದಿಗೆ — Ravi Kadagali
ಕಾಷ್ಠ ಎಲ್ಲಿ ದೊರೆಯುತ್ತದೆ.
ಆಚಾರ್ಯರಿಗೆ ನಮಸ್ಕಾರ. ದಂತಧಾವನದ ಉಪನ್ಯಾಸ ಅದ್ಭುತ. ನಮ್ಮ ಹಿರಿಯರು ಆರೋಗ್ಯದ ಬಗ್ಗೆ ಎಂತಹ ಮಾಹಿತಿ ಕೊಟ್ಟಿದ್ದಾರೆ! ನಾವು ಯುವಕರು ಬ್ರಷ್ ಬಿಟ್ಟು ಕಡ್ಡಿಗಳನ್ನು ಉಪಯೋಗಿಸಲಿಕ್ಕೆ ಸಿದ್ಧ. ಆದರೆ ಇವುಗಳು ಎಲ್ಲಿ ಸಿಗ್ತವೆ. — ರಾಘವೇಂದ್ರನ್, ಚೆನ್ನೈ
ಸಂಧ್ಯಾವಂದನೆಯ ನಂತರವೇ ಅಕ್ಷತೆ ಧರಿಸಬಹುದೇ?
ಆಚಾರ್ಯರಿಗೆ ನಮಸ್ಕಾರಗಳು. ಅಂಗಾರ ಅಕ್ಷತಿಯನ್ನು ಸಂಧ್ಯಾ ನಂತರ ಅಥವಾ ಭೋಜನ ಸಮಯದಲ್ಲಿ ಯಾವಾಗ ಹಚ್ಚಬೇಕು.— ಪವನ ಸಂಡೂರು.
ದಂತಕಾಷ್ಠಕ್ಕೆ ಪರ್ಯಾಯವಿದೆಯೇ?
🙏🙏🙏 ನಮಸ್ಕಾರ ಆಚಾರ್ಯರೇ, ನಿಮ್ಮ ಸದಾಚಾರ ಸ್ಮೃತಿಯ ಉಪನ್ಯಾಸಗಳನ್ನು ಕೇಳುತ್ತಿದ್ದೇನೆ. ತುಂಬ ಚನ್ನಾಗಿ ಮೂಡಿ ಬರುತ್ತಿವೆ. ದಂತಧಾವನದ ಕುರಿತು ನನಗೆ ಎರಡು ಪ್ರಶ್ನೆಗಳಿವೆ. ಉಜ್ಜಿದ ಕಡ್ಡಿಯನ್ನು ತೊಳೆದು ಎತ್ತಿಟ್ಟು ಮತ್ತೆ ಉಪಯೋಗಿಸಬಹುದೇ? ದಂತಕಾಷ್ಠಕ್ಕೆ ಮತ್ತೇನಾದರೂ ಪರ್ಯಾಯ ಇದೆಯೇ? — ಪ್ರಮೋದ್, ಬೆಂಗಳೂರು.