ಶ್ರೀ ರಾಘವೇಂದ್ರಸ್ತೋತ್ರದ ಪಠಣ
ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರ ಪರಮಾನುಗ್ರಹದಿಂದ ಶ್ರೀಮದಪ್ಪಣಾಚಾರ್ಯರ ಮುಖದಿಂದ ಹೊರಹೊಮ್ಮಿದ ‘ದಿವ್ಯ’ ಸ್ತೋತ್ರ (ಸ್ತ್ರೋತ್ರಂ ದಿವ್ಯಮಿದಮ್), ಸಕಲ ಆಪತ್ತುಗಳನ್ನು ಪರಿಹರಿಸುವ, ಸಕಲ ಸಾತ್ವಿಕ ಸಂಪತ್ತನ್ನು ನೀಡಿ ನಮ್ಮನ್ನು ಅನುಗ್ರಹಿಸುವ ಶ್ರೀರಾಘವೇಂದ್ರಸ್ತೋತ್ರದ ಪಠಣ ಇಲ್ಲಿದೆ.
ಸಮಗ್ರ ಸ್ತೋತ್ರದ ಅರ್ಥಸಂಗ್ರಹ
ಶ್ರೀಮದಪ್ಪಣಾಚಾರ್ಯರು ರಚಿಸಿರುವ ರಾಯರ ಸ್ತೋತ್ರವನ್ನು ಪೂರ್ಣವಾಗಿ ಪಠಿಸಿ ಹಿಂದೆ ತಿಳಿದ ಎಲ್ಲ ಅರ್ಥಗಳ ಸಂಗ್ರಹ ಇಲ್ಲಿದೆ. ನಿತ್ಯದಲ್ಲಿ ಅನುಂಧಾನಕ್ಕೆ ಅನುಕೂಲವಾಗಲೆಂದು ಪಠಣ ಮತ್ತು ಅರ್ಥವನ್ನು ಒಟ್ಟೊಟ್ಟಿಗೆ ನೀಡಲಾಗಿದೆ.
ರಾಯರ ಸ್ತೋತ್ರದ ಮಾಹಾತ್ಮ್ಯ
ಯಾವ ಪ್ರಾರ್ಥನೆಯನ್ನು ನಮ್ಮಿಂದ ಕೇಳುವದಕ್ಕಾಗಿ ರಾಯರು ವೃಂದಾವನದಲ್ಲಿ ಕುಳಿತಿದ್ದಾರೆಯೋ ಆ ಪರಮಾದ್ಭುತವಾದ ಪ್ರಾರ್ಥನೆಯನ್ನು ಶ್ರೀಮದಪ್ಪಣಾಚಾರ್ಯರು ಕಾರುಣ್ಯದಿಂದ ತಿಳಿಸಿಕೊಡುತ್ತಾರೆ. ಈ ರಾಯರ ಸ್ತೋತ್ರ ಎನ್ನುವದು ಕುಳಿತುಕೊಂಡು ಶಬ್ದಗಳನ್ನು ಕೂಡಿಸಿ ರಚಿಸಿದ್ದಲ್ಲ. ದೈವಪ್ರೇರಣೆಯಿಂದ ನಿರ್ಮಿತವಾದ ದಿವ್ಯಸ್ತೋತ್ರವಿದು ಎಂಬ ಅಂಶವನ್ನು ತಿಳಿಸುವ ಶ್ರೀಮದಪ್ಪಣಾಚಾರ್ಯರು ಈ ಸ್ತೋತ್ರದ ಮಾಹಾತ್ಮ್ಯವನ್ನು ತಿಳಿಸುತ್ತಾರೆ. ಆ ವಚನಗಳ ವಿವರಣೆ ಇಲ್ಲಿದೆ. ಸ್ವಯಂ ಶ್ರೀ ರಾಘವೇಂದ್ರತೀರ್ಥಗುರುಸಾರ್ವಭೌಮರು ಈ ಸ್ತೋತ್ರದ ಮೇಲೆ ಮಾಡಿರುವ ಪರಮಾನುಗ್ರಹದ ನಿರೂಪಣೆಯೊಂದಿಗೆ.
ಶ್ರೀ ರಾಘವೇಂದ್ರ ಅಷ್ಟಾಕ್ಷರ ಮಂತ್ರ
ಶ್ರೀ ರಾಘವೇಂದ್ರ ಮಂತ್ರ, ಯಾರಿಂದ ಉಪದೇಶ ತೆಗೆದುಕೊಳ್ಳಬೇಕು, ಯಾರಿಂದ ಉಪದೇಶ ತೆಗೆದುಕೊಳ್ಳಬಾರದು, ಯಾರಿಂದ ತೆಗೆದುಕೊಳ್ಳಬೇಕು, ಮಂತ್ರೋಪದೇಶ ಮಾಡಬಲ್ಲ ಉತ್ತಮ ಗುರುಗಳನ್ನು ಪಡೆಯಲು ಏನು ಮಾಡಬೇಕು, ನಮ್ಮ ರಾಯರನ್ನು ಧ್ಯಾನ ಮಾಡಬೇಕಾದ ಕ್ರಮವೇನು ಎಂಬೆಲ್ಲ ವಿಷಯಗಳ ಚಿಂತನೆಯೊಂದಿಗೆ ಭಕ್ತರ ಸಮಸ್ತ ಅಭೀಷ್ಟಗಳನ್ನು ಪೂರೈಸುವ, ಸಕಲ ಕಷ್ಟಗಳನ್ನು ಕಳೆಯುವ ಶ್ರೀಮದ್ ರಾಘವೇಂದ್ರ ಅಷ್ಟಾಕ್ಷರ ಮಂತ್ರದ ಕುರಿತ ಯಥಾಮತಿ ವಿವರಣೆ ಇಲ್ಲಿದೆ.
ರಾಯರ ಕಾರುಣ್ಯ
ಶ್ರೀಮದ್ ರಾಘವೇಂದ್ರತೀರ್ಥಗುರುಸಾರ್ವಭೌಮರ ದಿವ್ಯವಾದ ಕಾರುಣ್ಯ, ಅಪಾರವಾದ ಶಾಪಾನುಗ್ರಹಸಾಮರ್ಥ್ಯ, ನಮ್ಮ ಲೌಕಿಕ ಮತ್ತು ಆಧ್ಯಾತ್ಮಿಕ ಜೀವನ ಅವರ ಅನುಗ್ರಹವಿಲ್ಲದೇ ನಡೆಯಲು ಸಾಧ್ಯವಿಲ್ಲ ಎಂಬ ತತ್ವಗಳ ಚಿಂತನೆ ಇಲ್ಲಿದೆ.
ರಾಯರ ಭಕ್ತರ ಮಾಹಾತ್ಮ್ಯ
ಶ್ರೀಮದ್ ರಾಘವೇಂದ್ರತೀರ್ಥಗುರುಸಾರ್ವಭೌಮರ ಪಾದಪದ್ಮಗಳ ಸ್ಪರ್ಶ ಪಡೆದ ಧೂಳಿಯಿಂದ ದೇಹವನ್ನು ಅಲಂಕರಿಸಿಕೊಳ್ಳುವ ಶ್ರೀ ಯೋಗೀಂದ್ರತೀರ್ಥರೇ ಮೊದಲಾದ ಮಹಾನುಭಾವರ, ಅವರ ಪಾದಕಮಲಗಳಲ್ಲಿಯೇ ಮನಸ್ಸನ್ನು ನೆಟ್ಟಂತಹ ಶ್ರೀ ಜಗನ್ನಾಥದಾಸಾರ್ಯರೇ ಮೊದಲಾದ ಮಹಾನುಭಾವರ, ಅವರ ಗುಣಗಳನ್ನು ಸ್ತೋತ್ರಮಾಡುವದಕ್ಕಾಗಿಯೇ ತಮ್ಮ ವಾಕ್-ಶಕ್ತಿಯನ್ನು ಬಳಸುವ ಶ್ರೀ ವಾದೀಂದ್ರತೀರ್ಥರೇ ಮೊದಲಾದ ಮಹಾನುಭಾವರ ಮಾಹಾತ್ಮ್ಯವನ್ನು ನಾವಿಲ್ಲಿ ತಿಳಿಯುತ್ತೇವೆ.
09_ ರಾಯರ ಪಾದೋದಕದ ಮಾಹಾತ್ಮ್ಯ
ಗುರುಗಳ ಪಾದೋದಕ ಹಸ್ತೋದಕಗಳನ್ನು ಸ್ವೀಕಾರ ಮಾಡಬೇಕೆ ಮಾಡಬಾರದೆ ಎಂಬ ಚರ್ಚೆ, ಸ್ವೀಕಾರ ಮಾಡುವದರಿಂದ ಉಂಟಾಗುವ ಫಲಗಳ ವಿವರಣೆ ಇಲ್ಲಿದೆ.
08 ರಾಯರ ಮಹಾಗುಣಗಳು
ಶ್ರೀರಾಘವೇಂದ್ರಸ್ತೋತ್ರ — ಶ್ಲೋಕ 06 ನಿರಸ್ತದೋಷೋ ನಿರವದ್ಯವೇಷಃ ಪ್ರತ್ಯರ್ಥಿಮೂಕತ್ವನಿದಾನಭಾಷಃ । ವಿದ್ವತ್ಪರಿಜ್ಞೇಯಮಹಾವಿಶೇಷೋ ವಾಗ್ವೈಖರೀನಿರ್ಜಿತಭವ್ಯಶೇಷಃ ।।
ಶ್ರೀ ರಾಘವೇಂದ್ರಸ್ತೋತ್ರ — ಶ್ಲೋಕ — 5A
ದೇವಸ್ವಭಾವಃ. ಭವ್ಯಸ್ವರೂಪಃ ಎಂಬ ಶಬ್ದಗಳ ಅರ್ಥಾನುಸಂಧಾನ.
ಶ್ರೀ ರಾಘವೇಂದ್ರಸ್ತೋತ್ರ — ಶ್ಲೋಕ — 4B
ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರ ಅನಭೀಷ್ಟಪುಣ್ಯದ ಕುರಿತು ಹಿಂದಿನ ಉಪನ್ಯಾಸದಲ್ಲಿ ತಿಳಿದೆವು. ಶ್ರೀಗುರುಗಳು ಅದೆಷ್ಟು ಅದ್ಭುತವಾದ ಕ್ರಮದಲ್ಲಿ ಶ್ರೀಹರಿ ವಾಯು ದೇವತೆಗಳನ್ನು ಮೆಚ್ಚಿಸಿ ಅವರ ಅನುಗ್ರಹವನ್ನು ಪಡೆದಿದ್ದಾರೆ, ಎಂತ ದಿವ್ಯ ಸಾಧನೆಯನ್ನು ಮಾಡಿದ್ದಾರೆ ಎನ್ನುವದರ ಕುರಿತು ಇಲ್ಲಿ ತಿಳಿಯುತ್ತೇವೆ.
ಶ್ರೀ ರಾಘವೇಂದ್ರಸ್ತೋತ್ರ — ಶ್ಲೋಕ — 4A
ಸಕಾಮ ಕರ್ಮ ಎಂದರೇನು, ಅದರ ಫಲದ ವಿನಿಯೋಗ ಹೇಗೆ, ದುಷ್ಟರೂ ಸಕಾಮಕರ್ಮ ಮಾಡುತ್ತಾರೆ, ಸಜ್ಜನರೂ ಸಕಾಮ ಕರ್ಮ ಮಾಡುತ್ತಾರೆ, ಎರಡಕ್ಕೂ ವ್ಯತ್ಯಾಸವೇನು? ರಾಯರಲ್ಲಿನ ಅನಭೀಷ್ಟಪುಣ್ಯಕ್ಕೂ ಬೇರೆಯವರ ಪುಣ್ಯಕ್ಕೂ ಇರುವ ವ್ಯತ್ಯಾಸವೇನು ಎನ್ನುವ ಪ್ರಶ್ನೆಗಳಿಗೆ ಇಲ್ಲಿ ಉತ್ತರಗಳಿವೆ.
ಶ್ರೀ ರಾಘವೇಂದ್ರಸ್ತೋತ್ರ — ಶ್ಲೋಕ — 3
ಶ್ರೀರಾಘವೇಂದ್ರಃ ಸಕಲಪ್ರದಾತಾ ಸ್ವಪಾದಕಂಜದ್ವಯಭಕ್ತಿಮಧ್ಭ್ಯಃ ಅಘಾದ್ರಿಸಂಭೇದನದೃಷ್ಟಿವಜ್ರಃ ಕ್ಷಮಾಸುರೇಂದ್ರೋವತು ಮಾಂ ಸದಾಯಮ್ ।। ೩ ।।
ರಾಯರ ಗ್ರಂಥ-ಗಂಗೆ
ಜೀವೇಶಬೇಧಗುಣಪೂರ್ತಿಜಗತ್ಸುಸತ್ವ- ನೀಚೋಚ್ಚಭಾವಮುಖನಕ್ರಗಣೈಃ ಸಮೇತಾ ದುರ್ವಾದ್ಯಜಾಪತಿಗಿಲೈರ್ಗುರುರಾಘವೇಂದ್ರ- ವಾಗ್ದೇವತಾಸರಿದಮುಂ ವಿಮಲೀಕರೋತು ।। ೨ ।। ಈ ಶ್ಲೋಕದ ಅರ್ಥಾನುಸಂಧಾನ ಈ ಉಪನ್ಯಾಸದಲ್ಲಿದೆ.
ರಾಯರ ವಾಗ್-ವೈಭವ
ಶ್ರೀಪೂರ್ಣಬೋಧಗುರುತೀರ್ಥಪಯೋಧಿಪಾರಾ ಕಾಮಾರಿಮಾಕ್ಷವಿಷಮಾಕ್ಷಶಿರಃಸ್ಪೃಶಂತೀ ಪೂರ್ವೋತ್ತರಾಮಿತತರಂಗಚರತ್ಸುಹಂಸಾ ದೇವಾಲಿಸೇವಿತಪರಾಂಘ್ರಿಪಯೋಜಲಗ್ನಾ ।। ೧ ।। ಈ ಶ್ಲೋಕದ ಮೂರು ಪಾದಗಳ ಅರ್ಥಾನುಸಂಧಾನ ಈ ಉಪನ್ಯಾಸದಲ್ಲಿದೆ.
ರಾಯರ ಮಾಹಾತ್ಮ್ಯ
ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರು ಪ್ರಹ್ಲಾದರಾಜರ ಅವತಾರ ಎಂದು ಶ್ರೀ ವಿಜಯದಾಸಾರ್ಯರಾದಿಯಾಗಿ ಎಲ್ಲ ಮಹಾನುಭಾವರೂ ಉಪಾಸನೆ ಮಾಡಿದ್ದಾರೆ. ಶ್ರೀರಾಘವೇಂದ್ರಸ್ವಾಮಿಗಳೇ ವ್ಯಾಸರಾಜರಾಗಿದ್ದರೆ ಅವರ ಗ್ರಂಥಕ್ಕೆ ಇವರೇಕೆ ವ್ಯಾಖ್ಯಾನ ಮಾಡುತ್ತಿದ್ದರು, ಮತ್ತು ಗೌರವ ಮಾಡುತ್ತಿದ್ದರು ಎಂಬ ಪ್ರಶ್ನೆಗೆ ಶ್ರೀಮದಾಚಾರ್ಯರು ಕೊಟ್ಟ ಉತ್ತರದ ನಿರೂಪಣೆಯೊಂದಿಗೆ ಶ್ರೀರಾಘವೇಂದ್ರಸ್ವಾಮಿಗಳು ಪಂಡಿತ-ಪಾಮರರ ಮೇಲೆ ಮಾಡುವ ಪರಮಾನುಗ್ರಹದ ಚಿತ್ರಣ ಇಲ್ಲಿದೆ.
ಶ್ರೀ ರಾಘವೇಂದ್ರದಂಡಕಮ್
ಶ್ರೀ ಅಪ್ಪಣಾಚಾರ್ಯರು ರಚಿಸಿರುವ ರಾಘವೇಂದ್ರದಂಡಕದ ಪಠಣೆ ಇಲ್ಲಿದೆ.
ರಾಯರ ದಿನಚರಿ
ಶ್ರೀರಾಘವೇಂದ್ರ ಗುರುಸಾರ್ವಭೌಮರ ಸಾಕ್ಷಾತ್ ಶಿಷ್ಯರಾದ ಅವರ ಪೂರ್ಣಾನುಗ್ರಹವನ್ನು ಪಡೆದ ಶ್ರೀ ಅಪ್ಪಣಾಚಾರ್ಯರು ತಮ್ಮ ಗುರುಗಳು ಯಾವ ರೀತಿಯಾಗಿ ಪ್ರತೀನಿತ್ಯವೂ ಭಗವದಾರಾಧನೆಯನ್ನು ಮಾಡುತ್ತಿದ್ದರು ಎಂದು ತಮ್ಮ ರಾಘವೇಂದ್ರದಂಡಕ ಎಂಬ ಅದ್ಭುತ ಕೃತಿಯಲ್ಲಿ ದಾಖಲಿಸಿಟ್ಟಿದ್ದಾರೆ. ನಮ್ಮೆಲ್ಲರ ಗುರುಗಳಾದ ಶ್ರೀ ರಾಘವೇಂದ್ರಸ್ವಾಮಿಗಳು ಅದೆಷ್ಟು ಅದ್ಭುತವಾಗಿ ಜೀವನವನ್ನು ನಡೆಸುತ್ತಿದ್ದರು ಎನ್ನುವದನ್ನು ಸ್ಮರಣೆ ಮಾಡಿದಾಗ ನಾವು ಸದಾಚಾರಿಗಳಾಗಲು ಸಾಧ್ಯ. ಆ ರಾಘವೇಂದ್ರದಂಡಕದ ಅನುವಾದ ಇಲ್ಲಿದೆ. ತಪ್ಪದೇ ಕೇಳಿ. ಲೇಖನ VNA194.
ಪೂಜ್ಯಾಯ ಎಂಬ ಶ್ಲೋಕ ಅಪರಿಪೂರ್ಣವೇ?
ಪೂಜ್ಯಾಯ ಎಂಬ ಶ್ಲೋಕದಲ್ಲಿ ನಮಃ ಎನ್ನುವದಿಲ್ಲ ಎನ್ನುವ ಕಾರಣಕ್ಕೆ ಅದನ್ನು ಅಪರಿಪೂರ್ಣ ಎನ್ನುತ್ತಾರೆ. ಆ ಶ್ಲೋಕ ಹೇಳುವಾಗಲೆಲ್ಲ ದುರ್ವಾದಿಧ್ವಾಂತರವಯೇ ಎಂಬ ಮುಂದಿನ ಶ್ಲೋಕವನ್ನು ಹೇಳಲೇಬೇಕು ಎನ್ನುತ್ತಾರೆ. ಇದು ಸರಿಯೇ? ಎರಡನೆಯ ಪ್ರಶ್ನೆ — ದುರ್ವಾದಿಧ್ವಾಂತರವಯೇ ವೈಷ್ಣವೇಂದೀವರೇಂದವೇ ಎನ್ನುವದನ್ನು ಸಜ್ಜನೇಂದೀವರೇಂದವೇ ಎಂದು ಹೇಳುತ್ತಾರೆ. ನನಗಿರುವ ಅಲ್ಪಜ್ಞಾನದಲ್ಲಿ, ವೈಷ್ಣವನಾಗಿರಲಿ ಬಿಡಲಿ, ರಾಯರ ಭಕ್ತನಾಗಲು, ಅವರಿಂದ ಅನುಗ್ರಹ ಪಡೆಯಲು ತೊಂದರೆಯಿಲ್ಲ ಅಲ್ಲವೇ? ದಯವಿಟ್ಟು ತಿಳಿಸಿ. — ಪರಿಮಳ ರಾವ್.