ಸ್ಯಮಂತಕೋಪಾಖ್ಯಾನ
ಗಣಪತಿ ಹಬ್ಬದಂದು ಸಂಜೆ ಶ್ರವಣ ಮಾಡಲೇಬೇಕಾದ ಸ್ಯಮಂತಕಮಣಿಯ ಪ್ರಸಂಗದ ಚಿಂತನೆ. ಶ್ರೀಮನ್ ಮಹಾಭಾರತತಾತ್ಪರ್ಯನಿರ್ಣಯದ ವಚನಗಳ ಅರ್ಥಾನುಸಂಧಾನದೊಂದಿಗೆ.
ಗಣಪತಿ ಪೂಜಾ ಪದ್ಧತಿ
ಮಂತ್ರ ಮತ್ತು ತಂತ್ರಗಳ ವಿವರಣೆಯೊಂದಿಗೆ, ಮನಸ್ಸಿನಲ್ಲಿ ಗಣಪತಿಯನ್ನು ಪೂಜಿಸುವ ಕ್ರಮದೊಂದಿಗೆ ವರಸಿದ್ಧಿವಿನಾಯಕವ್ರತದ ಪದ್ಧತಿಯ ವಿವರಣೆ ಈ ಉಪನ್ಯಾಸದಲ್ಲಿದೆ. VNU199ನೆಯ ಉಪನ್ಯಾಸ ಕೇಳಿದ ನಂತರ ಇದನ್ನು ಕೇಳಿ.
ಗಣಪತಿ ಪೂಜಾ ಸಿದ್ಧತೆ
ಗಣಪತಿಯ ಪೂಜೆಯನ್ನು ಮಾಡಬೇಕಾದರೆ ಮಾಡಿಕೊಳ್ಳಬೇಕಾದ ಸಿದ್ಧತೆಗಳ ಕುರಿತ ಉಪನ್ಯಾಸ. ಗಣಪತಿಯ ಪೂಜಾಕ್ರಮದ ಕುರಿತ ಉಪನ್ಯಾಸ ಮುಂದಿನದು. ಅದನ್ನು ಕೇಳುವದಕ್ಕಿಂತ ಮಂಚೆ ಇದನ್ನು ಕೇಳಿ ಎಲ್ಲ ಸಿದ್ಧತೆಯನ್ನು ಮಾಡಿಕೊಳ್ಳಿ.
ಗೌರಿ ಗಣಪತಿಯನ್ನು ಹೇಗೆ ಮತ್ತು ಏಕೆ ಆಚರಿಸಬೇಕು?
ಪೂಜ್ಯಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು. ತಮ್ಮ ವಿಶ್ವನಂದಿನಿ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಪ್ರತಿಯೊಂದು ಕರ್ಮವನ್ನೂ ಏಕೆ ಮತ್ತು ಹೇಗೆ ಆಚರಿಸಬೇಕು ಎನ್ನುವದನ್ನು ತಾವು ತುಂಬ ಪರಿಣಾಮಕಾರಿಯಾಗಿ ತಿಳಿಸುತ್ತಿದ್ದೀರಿ. ನಿಮ್ಮ ದೆಸೆಯಿಂದ ನಮ್ಮ ಮಕ್ಕಳಿಗೆ ನಾವು ಉತ್ತರ ನೀಡಲು ಸಾಧ್ಯವಾಗಿದೆ. ಧನ್ಯವಾದಗಳು. ಹೀಗೆಯೇ ಗೌರೀ ಗಣಪತಿ ವ್ರತಗಳನ್ನು ಏಕೆ ಆಚರಿಸಬೇಕು ಮತ್ತು ಹೇಗೆ ಆಚರಿಸಬೇಕು ಎನ್ನುವದನ್ನು ತಿಳಿಸಬೇಕಾಗಿ ವಿನಂತಿಸುತ್ತೇನೆ. — ರಘೂತ್ತಮರಾವ್, ಬೆಂಗಳೂರು.
ಸಂಕಷ್ಟೀವ್ರತ
ಆಚಾರ್ಯರೇ ನಮಸ್ಕಾರಗಳು. ಮಾಧ್ವರು ಸಂಕಷ್ಟ ಗಣಪತಿ ಪೂಜೆ ಮಾಡಬಹುದೇ? ಮಾಡಬಾರದೆ? — ಪ್ರವೀಣ್ ಕೃಷ್ಣ
ಗಣಪತಿಗೆ ತುಳಸಿಯನ್ನು ಸಮರ್ಪಿಸಬಹುದೇ?
ಗುರುಗಳಿಗೆ ನಮಸ್ಕಾರಗಳು. ಶ್ರೀ ಗಣೇಶದೇವರಿಗೆ ತುಳಸೀ ಎಲೆ ಸಮರ್ಪಿಸಬಾರದು, ನಿಷಿದ್ಧ ಎನ್ನುತ್ತಾರೆ. ಇದು ನಿಜವೇ?