ದೇವರಿಗೆ ಅರ್ಪಿಸಿದ ಕರ್ಮವನ್ನು ಜೀವರಿಗೆ ನೀಡುವದು ಹೇಗೆ?
ನಾವು ಕರ್ಮಫಲವನ್ನು ಕೂಡ ಕೃಷ್ಣಾರ್ಪಣ ಎಂದು ಬಿಡುತ್ತೀವಿ. ಆ ಫಲ ಕೂಡ ನಮ್ಮ ಬಳಿ ಇರುವದಿಲ್ಲ ಅಂತ ಕೇಳಿದ್ದೀವಿ. ನಮಗೆ ಅಧಿಕಾರ ಹೇಗೆ ಬರುತ್ತದೆ. M ಶ್ರೀನಾಥ್, ಬೆಂಗಳೂರು
ಧರ್ಮೋದಕವನ್ನು ಯಾರು ಹೇಗೆ ನೀಡಬೇಕು?
ಆಚಾರ್ಯರಿಗೆ ನಮಸ್ಕಾರಗಳು. ಧರ್ಮೋದಕ ಅಂದರೆ ಏನು. ಪುರೋಹಿತರು ಮಹಿಳೆಯರು ಮತ್ತು ಚಿಕ್ಕ ಹುಡುಗರಿಂದ (ಅನುಪನೀತರಿಂದ) ಧರ್ಮೋದಕವನ್ನು ಬಿಡಿಸುತ್ತಾರೆ. ಇದು ಸರಿಯೇನಾ? ಧರ್ಮೋದಕವನ್ನು ಬಿಡುವಾಗ ಅನುಸಂಧಾನ ಏನು ಮಾಡಬೇಕು? ತಿಳಿಸಿರಿ. - ಮುದಿಗಲ್ ಶ್ರೀನಾಥ್
ಯಾವ ಶ್ರಾದ್ಧವನ್ನು ಎಲ್ಲಿ ಮಾಡಬೇಕು?
ಆಚಾರ್ಯರಿಗೆ ನಮಸ್ಕಾರಗಳು. ಪಿತೃಕಾಯರ್ಯವನ್ನು (ತಿಲ ತರ್ಪಣ/ಪಿಂಡಪ್ರದಾನ) ಕತೃಗಳೇ ನದಿ ಅಥವಾ ಮನೆಯಲ್ಲಿ ಮಾಡಬಹುದಾ... ದಯವಿಟ್ಟು ವಿಧಿ ವಿದಾನಗಳನ್ನು ತಿಳಿಸಿ. — ನರಸಿಂಹ ಮೂರ್ತಿ
ಕ್ಷೇತ್ರಗಳಲ್ಲಿ ಮೃತರಾದರೆ ಅಂತ್ಯಸಂಸ್ಕಾರ ಹೇಗೆ?
ಪವಿತ್ರ ಕ್ಷೇತ್ರ ದರ್ಶನಕ್ಕೆ ಹೋಗಿ ಮೃತರಾದರವರಿಗೆ ವಿಧಿಗಳು ಏನಾಗಿರುತ್ತದೆ. ಮೃತಶರೀರ ದಾಹಾದಿಗಳು ಬೇಕಿಲ್ಲವೇ? ದಯವಿಟ್ಟು ತಿಳಿಸಿ — ಎನ್. ವಿ. ಪದ್ಮನಾಭ
ತಂದೆ ಬದುಕಿದ್ದಾಗ ಮಾವನ ಶ್ರಾದ್ಧ ಮಾಡಬಹುದೇ?
ನಮಸ್ಕಾರ ಗುರುಗಳಿಗೆ ನನಗೆ ತಂದೆ ಇದ್ದಾರೆ. ತಾಯಿ ಇಲ್ಲ. ನಾನು ನನ್ನ ಹೆಂಡತಿಯ ತಂದೆಯವರ ಶ್ರಾದ್ಧ ಮಾಡಬಹುದಾ ದಯವಿಟ್ಟು ತಿಳಿಸಿರಿ. — ವಿನಾಯಕ ಕುಲಕರ್ಣಿ
ಪವಿತ್ರದ ಉಂಗುರದ ಧಾರಣೆ ಹೇಗೆ?
ನಮಸ್ಕಾರ. ಪವಿತ್ರದ ಉಂಗುರವನ್ನು ಯಾವ ಬೆರಳಿಗೆ ಧರಿಸಬೇಕು ??ದಿನದ ಯಾವ ಸಮಯದಲ್ಲಿ ಪವಿತ್ರದ ಉಂಗುರ ದರಿಸಬೇಕು ? — ಶ್ರೀನಿವಾಸ್
ಕುತಪಕಾಲ ಎಂಬ ಶಬ್ದದ ಅರ್ಥವೇನು?
ಕುತಪಕಾಲ ಎಂಬ ಶಬ್ದದ ಅರ್ಥವೇನು, ಗುರುಗಳೇ? — ಜಯಶ್ರೀ ಕರುಣಾಕರ
ಪುನರ್ಜನ್ಮ ಪಡೆದ ವ್ಯಕ್ತಿಗೆ ಶ್ರಾದ್ಧ ಹೇಗೆ ತಲುಪುತ್ತದೆ?
ಗುರುಗಳಿಗೆ ನಮಸ್ಕಾರ. ನನ್ನ ಪ್ರಶ್ನೆ, ಶ್ರಾದ್ಧ ಕರ್ಮಗಳ ಬಗ್ಗೆ. ನಾವು ಪಿತೃದೇವತೆಗಳಿಗೆ ಶ್ರಾದ್ಧಾದಿ ಕರ್ಮಗಳನ್ನು ಮಾಡುತ್ತೇವೆ. ಆದರೆ ನಮ್ಮಲ್ಲಿ ಪುನರ್ಜನ್ಮದ ಸಿದ್ಧಾಂತ ದ ಪ್ರಕಾರ ಅಳಿದ ವ್ಯಕ್ತಿ ಕರ್ಮಾನುಸಾರವಾಗಿ ಬೇರೆಯ ದೇಹ ಪಡೆಯುತ್ತಾನೆ. ಹಾಗಾದರೆ ನಾವು ಮಾಡುವ ಶ್ರಾದ್ಧಾದಿ ಕರ್ಮಗಳು ಯಾರಿಗೆ ಸೇರುತ್ತವೆ. — ಶ್ರೀಕಾಂತ್ ಜೋಷಿ.