Srimad Bhagavatam — 02Upanyasas - VNU676

ಶ್ರೀಮದ್ ಭಾಗವತಮ್ — 146 — ಅಂತ್ಯಕಾಲದ ಸಾಧನೆ

ಮರಣ ಕಾಲ ಬಂದೊದಗಿದಾಗ ಅದೆಷ್ಟು ಎತ್ತರದ ಸಾಧನೆಯನ್ನು ಮಾಡಬೇಕು ಎಂದು ಶುಕಾಚಾರ್ಯರು ಉಪದೇಶಿಸುತ್ತಾರೆ, ನಮ್ಮ ಶ್ರೀಮದಾಚಾರ್ಯರ ಪವಿತ್ರ ಪರಂಪರಗಳಲ್ಲಿ ಬಂದ ಶ್ರೀಹೃಷೀಕೇಶತೀರ್ಥ ಶ್ರೀಪಾದಂಗಳವರೇ ಮೊದಲಾದ ಮಹಾನುಭಾವರು ಈ ಭಾಗವತಾದೇಶವನ್ನು ಅದೆಷ್ಟು ಅದ್ಭುತವಾಗಿ ಪಾಲಿಸಿದರು, ನಾವೆಷ್ಟು ಕೆಳಮಟ್ಟದಲ್ಲಿದ್ದೇವೆ, ಏರಬೇಕಾದ ಎತ್ತರವೇನು ಎಂಬ ವಿಷಯಗಳ ವಿವರಣೆಯನ್ನೊಳಗೊಂಡ ಭಾಗ. 

540 Views
Upanyasas - VNU675

ಶ್ರೀಮದ್ ಭಾಗವತಮ್ — 145 — ವೃದ್ಧಾಪ್ಯ ಹೇಗಿರಬೇಕು

ಅಂತ್ಯಕಾಲ ಸಮೀಪಿಸಿದಾಗ ಸಾವಿನ ಭಯ ಬಿಡಬೇಕು ಎನ್ನುತ್ತಾರೆ ಶ್ರೀ ಶುಕಾಚಾರ್ಯರು.  ಸಾವಿನ ಭಯ ಹೋಗಬೇಕಾದರೆ ಏನು ಮಾಡಬೇಕು ಎನ್ನುವದಕ್ಕೆ ಭಗವದ್ಗೀತೆ ಮುಂತಾದ ಶಾಸ್ತ್ರಗಳಲ್ಲಿ ಭಗವಂತ ತಿಳಿಸಿದ, ಅನುಭಾವಿಗಳು ತಮ್ಮ ಕೃತಿಗಳಲ್ಲಿ ತಿಳಿಸಿದ ಮಹತ್ತ್ವದ ವಿಷಯಗಳನ್ನು ನಿರೂಪಿಸಿ ನಮ್ಮ ಯೋಗ್ಯತೆಯಂತೆ ನಮ್ಮ ವೃದ್ಧಾಪ್ಯವನ್ನು ನಾವು ಹೇಗೆ ರೂಪಿಸಿಕೊಳ್ಳಬೇಕು ಎನ್ನುವದರ ಕುರಿತು ಚರ್ಚಿಸಲಾಗಿದೆ. 

1812 Views
Upanyasas - VNU669

ಶ್ರೀಮದ್ ಭಾಗವತಮ್ — 144 — ಭಾಗವತವೆಂಬ ಅಯಸ್ಕಾಂತ

ದೇವರ ಕಥೆಯನ್ನು ಯಾಕಾಗಿ ಕೇಳಬೇಕು ಎನ್ನುವದಕ್ಕೆ ಶುಕಾಚಾರ್ಯರು ನೀಡಿರುವ ಅದ್ವಿತೀಯವಾದ, ನಮ್ಮನ್ನು ಕಥಾಶ್ರವಣದಲ್ಲಿ ಆಸಕ್ತರನ್ನಾಗಿ ಮಾಡುವ ಸ್ಫೂರ್ತಿದಾಯಕ ಉತ್ತರಗಳ ವಿವರಣೆ ಇಲ್ಲಿದೆ. ಎಲ್ಲವನ್ನೂ ತೊರೆದ ಮಹಾಸಾಧಕರಾದ ಶುಕಾಚಾರ್ಯರು ತಾವೇಕೆ ಭಾಗವತವನ್ನು ಅಧ್ಯಯನವನ್ನು ಮಾಡಿದೆವು ಎಂದು ವಿವರಿಸಿರುವ ಭಾಗ. 

2340 Views
Upanyasas - VNU667

ಶ್ರೀಮದ್ ಭಾಗವತಮ್ — 143 — ಅಂತಿಮ ಸ್ಮರಣೆಯ ಮಾಹಾತ್ಮ್ಯ

ಅಂತಿಮಕಾಲದ ಸ್ಮರಣೆಯಲ್ಲಿನ ವೈವಿಧ್ಯಗಳು, ಆ ವಿವಿಧ ಕ್ರಮಗಳಿಂದ ಉಂಟಾಗುವ ವಿವಿಧ ಫಲಗಳು, ಕಟ್ಟ ಕಡೆಯಲ್ಲಿ ಸ್ಮರಣೆ ಬರಬೇಕಾದರೆ ಏನು ಮಾಡಬೇಕು ಎನ್ನುವ ವಿಷಯಗಳ ವಿವರಣೆ ಇಲ್ಲಿದೆ. ಮಹಾ ಪ್ರಯತ್ನ ಮಾಡಿ ಕಡೆಯಲ್ಲಿ ಸ್ಮರಣೆ ಮಾಡಿದರೆ ಸಾಕಲ್ಲವೇ, ಇಡಿಯ ಜನ್ಮ ಯಾಕಾಗಿ ಪ್ರಯತ್ನ  ಪಡಬೇಕು ಎಂಬ ಪ್ರಶ್ನೆಗೆ ಆಚಾರ್ಯರು ಗೀತಾತಾತ್ಪರ್ಯನಿರ್ಣಯದಲ್ಲಿ ನೀಡಿರುವ ದಿವ್ಯ ಉತ್ತರದ ಚಿಂತನೆಯೊಂದಿಗೆ. 

2620 Views
Upanyasas - VNU666

ಶ್ರೀಮದ್ ಭಾಗವತಮ್ — 142 — ಸ್ವಧರ್ಮನಿಷ್ಠೆ

ಅಂತ್ಯಕಾಲದಲ್ಲಿ ಹರಿಯ ಸ್ಮರಣೆ ಬರಬೇಕಾದರೆ ಬೇಕಾದ ಸ್ವಧರ್ಮ ನಿಷ್ಠೆಯ ಕುರಿತು ನಾವಿಲ್ಲಿ ಕೇಳುತ್ತೇವೆ. ಬ್ರಾಹ್ಮಣ ಶೂದ್ರ ನಂತೆ ಬದುಕುವದು, ಶೂದ್ರ ಬ್ರಾಹ್ಮಣನಂತೆ ಬದುಕುವದು, ಸಂನ್ಯಾಸಿ ಗೃಹಸ್ಥನಂತೆ, ಗೃಹಸ್ಥ ಸಂನ್ಯಾಸಿಯಂತೆ ಬದುಕುವದು ಅಂತ್ಯಕಾಲದ ಹರಿಸ್ಮರಣೆಗೆ ವಿರೋಧಿಯಾದದ್ದು ಎನ್ನುವದನ್ನು ಶ್ರೀ ಶುಕಾಚಾರ್ಯರು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸುತ್ತಾರೆ. ಆ ಭಾಗದ ವಿವರಣೆ ಇಲ್ಲಿದೆ. 

2366 Views
Upanyasas - VNU665

ಶ್ರೀಮದ್ ಭಾಗವತಮ್ — 141 — ಶುಕಾಚಾರ್ಯರ ಉತ್ತರ

ತನ್ನ ಉದ್ಧಾರಕ್ಕಾಗಿ ಮನುಷ್ಯ ಅರಿಯಬೇಕಾದ್ದೇನು ಎಂಬ ಪ್ರಶ್ನೆಗೆ, ದೇವರನ್ನು ಅರಿಯಬೇಕು ಎಂಬ ಉತ್ತರವನ್ನು ಶುಕಾಚಾರ್ಯರು ನೀಡುವ ರೀತಿಯೇ ಅದ್ಭುತ. ಹಾಳು ಹರಟೆಯಿಂದ, ಕೆಲಸಕ್ಕೆ ಬಾರದ ವಿಷಯಗಳಲ್ಲಿನ ಆಸಕ್ತಿಯಿಂದ ಬದುಕು ಹಾಳಾಗುತ್ತದೆ ಎಂದು ನಾವು ಭಾವಿಸಿದ್ದರೆ, ಧರ್ಮನಿಷ್ಠವಾದ ಬದುಕನ್ನು ಕಂಡು ಬೆರಗಾಗುತ್ತಿದ್ದರೆ, ದೇವರ ಚಿಂತನೆಯಿಲ್ಲದ ಧಾರ್ಮಿಕತೆಯಿಂದ ಯಾವ ಉಪಯೋಗವೂ ಇಲ್ಲ ಎನ್ನುವದನ್ನು ಆ ಬಾದರಾಯಣಪುತ್ರರು ಅದ್ಭುತವಾಗಿ ಮನಗಾಣಿಸುತ್ತಾರೆ. ಅವರ ಪವಿತ್ರ ವಚನಗಳ ಅರ್ಥಾನುಸಂಧಾನ ಇಲ್ಲಿದೆ. 

2391 Views