ಶ್ರೀಮದ್ ಭಾಗವತಮ್ — 243 — ಜ್ಞಾನಮಾರ್ಗ ಯೋಗಮಾರ್ಗಗಳಲ್ಲಿನ ವ್ಯತ್ಯಾಸ
ಮಾಧ್ವರಲ್ಲಿ ಯೋಗಮಾರ್ಗವನ್ನು ಅನುಸರಿಸುವ ಜನ ತುಂಬ ಕಡಿಮೆ ಎಂಬ ಆಕ್ಷೇಪ ಒಂದಿದೆ. ಯೋಗಮಾರ್ಗದಿಂದ ದೇವರನ್ನು ಪಡೆಯುವದು ಶ್ರೇಷ್ಠವೋ, ಜ್ಞಾನಮಾರ್ಗದಿಂದ ದೇವರನ್ನು ಪಡೆಯುವದು ಶ್ರೇಷ್ಠವೋ, ಎರಡೂ ಮಾರ್ಗಗಳಲ್ಲಿರುವ ವ್ಯತ್ಯಾಸವೇನು ಎಂಬ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ.
ಶ್ರೀಮದ್ ಭಾಗವತಮ್ — 242 — ಭಜಿಸಿ ಬದುಕೆಲೋ ಮಾನವ
ತತ್ವಾಭಿಮಾನಿ ದೇವತೆಗಳು ಬ್ರಹ್ಮಾಂಡದ ನಿರ್ಮಾಣಕ್ಕಾಗಿ ದೇವರನ್ನು ಸ್ತುತಿಸಿದ ಶಕ್ತಿಗೀತೆಯ ಎರಡನೆಯ ಭಾಗ.
ಶ್ರೀಮದ್ ಭಾಗವತಮ್ — 241 — ಪಾದಾರವಿಂದದ ಮಾಹಾತ್ಮ್ಯ
ನಮ್ಮ ಸ್ವರೂಪ ಸಾಮರ್ಥ್ಯವನ್ನು ಅಭಿವ್ಯಕ್ತಿಗೊಳಿಸುವ, ಯಾವ ಕಾರ್ಯ ಮಾಡಬೇಕು ಮಾಡಬಾರದು ಎಂಬ ಜ್ಞಾನವನ್ನು ಕರುಣಿಸುವ, ಕಾರ್ಯವನ್ನು ಮಾಡಲು ಶಕ್ತಿಯನ್ನು ಅನುಗ್ರಹಿಸುವ ಈ ಶಕ್ತಿಗೀತೆಯಲ್ಲಿ ಮೊದಲಿಗೆ ದೇವರ ಪಾದಾರವಿಂದಗಳ ಮಾಹಾತ್ಮ್ಯ ಅದ್ಭುತವಾಗಿ ಚಿತ್ರಣವಾಗಿದೆ. ದೇವರ ಪಾದವನ್ನು ಆಶ್ರಯಿಸಿದರೆ ಮಾತ್ರ ಸುಖ, ಇಲ್ಲದಿದ್ದರೆ ಇಲ್ಲ ಎಂಬ ತತ್ವವನ್ನು ತತ್ವಾಭಿಮಾನಿದೇವತೆಗಳು ಪ್ರತಿಪಾದಿಸಿರುವ ಭಾಗ.
ಶ್ರೀಮದ್ ಭಾಗವತಮ್ — 240 — ತತ್ವದೇವತೆಗಳ ಸೃಷ್ಟಿ
ಬ್ರಹ್ಮಾಂಡದ ಆಚೆಯಲ್ಲಿ ಮಹತ್ ತತ್ವದಿಂದ ಆರಂಭಿಸಿ ಪೃಥಿವೀ ತತ್ವದ ವರೆಗಿನ ಎಲ್ಲ ತತ್ವಗಳಿಗೆ ಅಭಿಮಾನಿಗಳಾದ ದೇವತೆಗಳು ಹುಟ್ಟಿ ಬಂದ ಕ್ರಮದ ನಿರೂಪಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 239 — ಬ್ರಹ್ಮದೇವರ ಸೃಷ್ಟಿ
ಮಹತ್-ತತ್ವಕ್ಕೆ ಅಭಿಮಾನಿಯಾದ ಬ್ರಹ್ಮದೇವರು ಹುಟ್ಟಿಬಂದ ಬಗೆಯ ಅದ್ಭುತ ಚಿತ್ರಣ ಇಲ್ಲಿದೆ. ಮಕ್ಕಳನ್ನು ಪಡೆಯುವದಕ್ಕಿಂತ ಮುಂಚೆಯ ನಮ್ಮಲ್ಲಿರಬೇಕಾದ ಎಚ್ಚರಗಳ ಕುರಿತ ಚಿಂತನೆಯೊಂದಿಗೆ.
ಶ್ರೀಮದ್ ಭಾಗವತಮ್ — 238 — ಮಾಯಾದೇವಿಯಲ್ಲಿ ವೀರ್ಯಾಧಾನ
ವಾಸುದೇವ, ಪುರುಷ ನಾಮಕನಾದ ಶ್ರೀಮನ್ನಾರಾಯಣ ಮಹತ್-ತತ್ವ ಸೃಷ್ಟಿಯಾಗುವದಕ್ಕಿಂತ ಮುಂಚೆ ಅದರ ಅಭಿಮಾನಿಯಾದ ಬ್ರಹ್ಮದೇವರನ್ನು ಸೃಷ್ಟಿ ಮಾಡುವ ಪ್ರಕ್ರಿಯೆಯ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 237 — ಮಾಯಾ ದೇವಿಯ ಮಹಿಮೆ
ಸೃಷ್ಟಿಯ ಮಹತ್ತರದ ಕಾರ್ಯದಲ್ಲಿ ತನ್ನ ಪ್ರಧಾನ ಕಿಂಕರಿಯನ್ನಾಗಿ ಭಗವಂತ ಸ್ವೀಕರಿಸುವದು ಮಹಾಲಕ್ಷ್ಮೀದೇವಿಯರನ್ನು. ಆ ಕಾರಣಕ್ಕಾಗಿ ಲಕ್ಷ್ಮೀದೇವಿಗೆ ಮಾಯಾ ಎಂಬ ಹೆಸರು ಬಂದದ್ದು ಎಂಬ ತತ್ವದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 236 — ಸುಪ್ತಶಕ್ತಿಃ
ಸೃಷ್ಟಿಯ ಆರಂಭದ ದೇವರನ್ನು ಪರಿಚಯಿಸುವಾಗ ಶ್ರೀಮದ್ ಭಾಗವತ ದೇವರನ್ನು ಸುಪ್ತಶಕ್ತಿಃ, ಅಸುಪ್ತದೃಕ್ ಎಂಬ ಶಬ್ದಗಳನ್ನು ಬಳಸುತ್ತದೆ. ಮೇಲ್ನೋಟದ ಅರ್ಥಕ್ಕೆ ದೇವರು ಕಣ್ಣು ಮುಚ್ಚಿರಲಿಲ್ಲ, ಆದರೆ, ಅವನ ಶಕ್ತಿ ಸುಪ್ತವಾಗಿತ್ತು ಎಂದು ತೋರುತ್ತದೆ. ಇದು ಶಾಸ್ತ್ರವಿರುದ್ಧವಾದ ತತ್ವ, ಕಾರಣ ದೇವರು ಪ್ರಲಯಕಾಲದಲ್ಲಿ ಕಣ್ಗಳನ್ನು ಮುಚ್ಚಿದ್ದ ಮತ್ತು ಅವನ ಶಕ್ತಿ ಸಾಮರ್ಥ್ಯಗಳು ಎಂದಿಗೂ ಯಾವ ಕಾರಣಕ್ಕೂ ಸುಪ್ತವಾಗುವದಿಲ್ಲ. ಹಾಗಾದರೆ ಭಾಗವತದ ಮಾತಿಗೆ ಅರ್ಥವೇನು ಎಂಬ ಪ್ರಶ್ನೆಗೆ ಶ್ರೀಮದಾಚಾರ್ಯರು ಪ್ರಮಾಣ ಸಮೇತವಾಗಿ ಅದ್ಭುತ ಪ್ರಮೇಯಗಳೊಂದಿಗೆ ನಮಗೆ ಅರ್ಥವನ್ನು ತಿಳಿಸುತ್ತಾರೆ.
ಶ್ರೀಮದ್ ಭಾಗವತಮ್ — 235 — ದೇವರ ಅಗಾಧತೆ
ದೇವರು ಎಂಬ ವಸ್ತುವನ್ನು ಯಾರಿಗೂ ಎಂದಿಗೂ ಪರಿಪೂರ್ಣವಾಗಿ ತಿಳಿಯಲು ಸಾಧ್ಯವಿಲ್ಲ ಎಂಬ ಪ್ರಮೇಯದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 234 — ದೇವರ ಸಾಮರ್ಥ್ಯ
ಎಷ್ಟೇ ಸಮರ್ಥನಾದ ಅಡಿಗೆಯವನಾದರೂ ಅಡಿಗೆಗೆ ಬೇಕಾದ ಪದಾರ್ಥಗಳು ಹಾಗೂ ಅಡಿಗೆ ಮಾಡಲು ಸ್ಥಳ ಇಲ್ಲದೇ ಇದ್ದರೆ ಅಡಿಗೆ ಮಾಡಲು ಸಾಧ್ಯವಿಲ್ಲ. ಹಾಗೆ, ದೇವರು ಪರಮಸಮರ್ಥನಾಗಿದ್ದರೂ ಅವ್ಯಾಕೃತ ಆಕಾಶ-ಪ್ರಕೃತಿಗಳಿಲ್ಲದೇ ಸೃಷ್ಟಿ ಮಾಡಲು ಸಾಧ್ಯವಿಲ್ಲ ಅಲ್ಲವೇ ಎಂಬ ಪ್ರಶ್ನೆಗೆ ಭಾಗವತ ನೀಡಿದ ಉತ್ತರದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 233 — ಇಚ್ಛಾಮಾತ್ರಂ ಪ್ರಭೋಃ ಸೃಷ್ಟಿಃ
ಕೇವಲ ದೇವರ ಇಚ್ಛೆಯಿಂದ ಸೃಷ್ಟಿಯಾಗುತ್ತದೆ ಎಂತಾದರೆ, ಸೃಷ್ಟಿಯಾಗುವ ಸಂದರ್ಭದ ಅನೇಕ ಪ್ರಕ್ರಿಯೆಗಳಿಗೆ ಏನರ್ಥ. ದೇವರು ಮಾಡುವ ಸೃಷ್ಟಿಯಲ್ಲಿ ದೇವರ ಮಾಡಿದ ಪ್ರಯತ್ನ — ಕ್ರಿಯೆಗಳೂ — ಕಂಡಿವೆ. ಕೇವಲ ಇಚ್ಚೆಯಿಂದ ಸೃಷ್ಟಿ ಆಗಿಲ್ಲ. ಹಾಗಾದರೆ ಉಪನಿಷತ್ತಿನ “ಇಚ್ಛಾಮಾತ್ರಂ ಪ್ರಭೋಃ ಸೃಷ್ಟಿಃ” ಎಂಬ ಮಾತಿಗೆ ಅರ್ಥವೇನು? ಎಂಬ ಪ್ರಶ್ನೆಗೆ ಭಾಗವತ ನೀಡಿದ ಉತ್ತರದ ಸಂಗ್ರಹ ಇಲ್ಲಿದೆ.
ಶ್ರೀಮದ್ ಭಾಗವತಮ್ — 232 — ದೇವರು ಯಾರು
ಯಾವುದೋ ಒಬ್ಬ ಚೇತನನನ್ನು ದೇವರು ಎಂದು ನಿರ್ಧರಿಸಿ ಅವನ ಉಪಾಸನೆ ಮಾಡುವದು ಸರ್ವಥಾ ತಪ್ಪು, ದೇವರು ಎಂದಾಗಬೇಕಾದರೆ ಯಾವ ಲಕ್ಷಣಗಳಿರಬೇಕು ಆ ಲಕ್ಷಣಗಳು ಯಾರಲ್ಲಿವಿಯೋ ಅವನನ್ನೇ ದೇವರು ಎಂದು ಒಪ್ಪಬೇಕು ಎಂಬ ಪರಮ ವೈದಿಕ ಸಿದ್ಧಾಂತದ ನಿರೂಪಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 231 — ವಿದುರರ ಮಾಹಾತ್ಮ್ಯ
ವಿದುರರು ಕಷ್ಟ ಸುಖಗಳನ್ನು ಸ್ವೀಕರಿಸಿದ ರೀತಿ, ಸಜ್ಜನರ ಮೇಲೆ ಅವರಿಗಿರು ಕಾರುಣ್ಯ, ಪ್ರತಿಯೊಬ್ಬರಿಗೂ ಒಳಿತನ್ನು ಬಯಸುವ ಹೃದಯವಂತಿಕೆ, ಶತ್ರುಗಳನ್ನೂ ಶಾಂತಗೊಳಿಸುವ ಅವರ ಪ್ರಸನ್ನವಾದ ನಡವಳಿಕೆ, ದೇವರನ್ನು ಅನನ್ಯವಾಗಿ ನಂಬಿದ್ದ ಅವರ ಪರಿಶುದ್ಧ ಭಕ್ತಿ ಮುಂತಾದ ಮಹಾಗುಣಗಳ ವರ್ಣನೆಯೊಂದಿಗೆ ವೇದವ್ಯಾಸದೇವರ ಮಗನಾಗಿ ಹುಟ್ಟಿಬಂದ ಅವರ ಮಾಹಾತ್ಮ್ಯದ ಚಿಂತನೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 230 — ವ್ಯಸನಗಳಿಂದ ದೂರವಾಗಲು ಏನು ಮಾಡಬೇಕು
ಮನುಷ್ಯನನ್ನು ಭಗವಂತನಿಂದ ದೂರ ಮಾಡುವ ವ್ಯಸನಗಳಿಂದ ದೂರವಾಗುವ ಬಗೆಯನ್ನು ತಿಳಿಸುತ್ತಲೇ ವಿದುರರು ಮೈತ್ರೇಯರನ್ನು ಪ್ರಶ್ನೆ ಮಾಡುವ ಭಾಗದ ವಿವರಣೆ ಇಲ್ಲಿದೆ. ವಿದುರರಿಗೆ ಮನುಷ್ಯಸಂಕುಲದ ಮೇಲೆ ಇರುವ ಕಾರುಣ್ಯವನ್ನು ಮನಗಾಣಿಸುವ ಭಾಗ.
ಶ್ರೀಮದ್ ಭಾಗವತಮ್ — 229 — ಭಾರತ ಭಾಗವತಗಳ ಸಂಬಂಧ
ಬ್ರಹ್ಮಸೂತ್ರಗಳಿಂದಾರಂಭಿಸಿ ಸಕಲ ಸಚ್ಚಾಸ್ತ್ರಗಳಿಗೂ ಇರುವ ಸಂಬಂಧದ ಚಿಂತನೆಯೊಂದಿಗೆ ಶ್ರೀಮದ್ ಭಾಗವತ ಮತ್ತು ಶ್ರೀಮನ್ ಮಹಾಭಾರತಗಳ ಅಪೂರ್ವ ಸಂಬಂಧದ ನಿರೂಪಣೆ ಈ ಭಾಗದಲ್ಲಿ. ಶ್ರೀಮನ್ ಮಹಾಭಾರತದ ಅದ್ಭುತ ವೈಶಿಷ್ಟ್ಯದ ಚಿತ್ರಣದೊಂದಿಗೆ.
ಶ್ರೀಮದ್ ಭಾಗವತಮ್ — 228 — ಗುರುಗಳ ಅನುಗ್ರಹ ಪಡೆಯುವ ಕ್ರಮ
ಯಾವುದೇ ವಿದ್ಯೆ ಅಪರೋಕ್ಷಜ್ಞಾನಿಗಳಾದ ಗುರುಗಳಿಂದ ಉಪದಿಷ್ಟವಾದಾಗಲೇ ಫಲಪ್ರದವಾಗುವದು. ಆ ಗುರೂಪದೇಶವನ್ನು ಪಡೆಯುವ ಕ್ರಮವನ್ನು ಇಲ್ಲಿ ವಿವರಿಸಲಾಗಿದೆ. ಅನುವ್ಯಾಖ್ಯಾನ-ನ್ಯಾಯಸುಧಾಗ್ರಂಥಗಳಲ್ಲಿ ಭಗವತ್ಪಾದರು, ಟೀಕಾಕೃತ್ಪಾದರು ನೀಡಿದ ನಿರ್ಣಯಗಳೊಂದಿಗೆ, ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ತಿಳಿಸಿದ ಅಪೂರ್ವ ಅರ್ಥಗಳೊಂದಿಗೆ.
ಶ್ರೀಮದ್ ಭಾಗವತಮ್ — 227 — ಉದ್ಧವರ ಭಾಗ್ಯ
ಪರಂಧಾಮ ಪ್ರವೇಶ ಮಾಡುವ ನಿಶ್ಚಯ ಮಾಡಿದ ಶ್ರೀಕೃಷ್ಣ ತಮ್ಮ ಮೇಲೆ ಮಾಡಿದ ಪರಮಾನುಗ್ರಹವನ್ನು ಉದ್ಧವರು ವಿದುರರ ಮುಂದೆ ದಿವ್ಯವಾದ ಕ್ರಮದಲ್ಲಿ ನೆನೆಸಿಕೊಳ್ಳುತ್ತಾರೆ. ಭಕ್ತರ ಮನಸ್ಸನ್ನು ಆರ್ದ್ರಗೊಳಿಸುವ ಭಾಗ.
ಶ್ರೀಮದ್ ಭಾಗವತಮ್ — 226 — ಯಾದವರ ನಾಶ
ಕುರುಕ್ಷೇತ್ರ ಯುದ್ಧದ ಮುಖಾಂತರ ಸಮಗ್ರ ದುಷ್ಟರನ್ನು ನಾಶ ಮಾಡಿದ ನಂತರವೂ, ಯಾದವರ ಮರಣವಾಗದಿದ್ದಲ್ಲಿ ಭೂಭಾರ ಇಳಿದಂತಾಗಲಿಲ್ಲ ಎಂದು ಭಗವಂತ ಆಲೋಚಿಸುತ್ತಾನೆ. ಹಾಗಾದರೆ ಯಾದವರು ಭೂಭಾರವೇ ಎಂಬ ಪ್ರಶ್ನೆಗೆ ಆಚಾರ್ಯರು ನೀಡಿದ ಉತ್ತರಗಳ ಸಂಗ್ರಹ ಇಲ್ಲಿದೆ.
ಶ್ರೀಮದ್ ಭಾಗವತಮ್ — 225 — ಶ್ರೀಕೃಷ್ಣಾವತಾರ
ಯಮುನಾನದಿಯ ತೀರದಲ್ಲಿ ವಿದುರರ ಮುಂದೆ ಮಹಾಭಾಗವತೋತ್ತಮರಾದ ಉದ್ಧವರು ಮಾಡಿದ ಶ್ರೀಕೃಷ್ಣಾವತಾರದ ಚಿಂತನೆ.
ಶ್ರೀಮದ್ ಭಾಗವತಮ್ — 224 — ಅಸುರಾವೇಶವಾಗದಿರಲು ಏನು ಮಾಡಬೇಕು
ಯಾರೇ ಸಜ್ಜೀವರೂ ತಪ್ಪು ಮಾಡಬೇಕಾದರೆ ಅವರಲ್ಲಿ ಅಸುರಾವೇಶವಾಗಿದ್ದಾಗ ಮಾತ್ರ ಮಾಡಲು ಸಾಧ್ಯ. ನಮ್ಮನ್ನು ಪ್ರಪಾತಕ್ಕೆ ಬೀಳಿಸುವ ಈ ಅಸುರಾವೇಶದಿಂದ ತಪ್ಪಿಸಿಕೊಳ್ಳುವ ಉಪಾಯವನ್ನು ಶ್ರೀಮದ್ ಭಾಗವತ ತಿಳಿಸುತ್ತದೆ.
ಶ್ರೀಮದ್ ಭಾಗವತಮ್ — 223 — ತತ್ವವನ್ನು ನೆನಪಿಟ್ಟುಕೊಳ್ಳಲು ಏನು ಮಾಡಬೇಕು
ಪ್ರವಚನ ಕೇಳಬೇಕಾದರೆ, ಪಾಠ ಕಲಿಯಬೇಕಾದರೆ ತತ್ವ ತಿಳಿಯುತ್ತದೆ, ಆದರೆ ಅದು ನೆನಪಿನಲ್ಲುಳಿಯುವದಿಲ್ಲ. ಕಲಿತ, ತಿಳಿದ ಎಲ್ಲ ಭಗವತ್-ತತ್ವಗಳೂ ಸದಾ ನೆನಪಿನಲ್ಲುಳಿಯಲು ಏನು ಮಾಡಬೇಕು ಎನ್ನುವ ಪ್ರಶ್ನೆಗೆ ಶ್ರೀಮದ್ ಭಾಗವತ ನೀಡಿದ ಉತ್ತರದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 222 — ದೇವರನ್ನು ತಪ್ಪಾಗಿ ತಿಳಿಯಬಾರದು
ಎಂದಿಗೂ, ಯಾವ ಸಂದರ್ಭದಲ್ಲಿಯೂ ದೇವರನ್ನು ತಪ್ಪಾಗಿ ತಿಳಿಯತಕ್ಕದ್ದಲ್ಲ ಎನ್ನುವ ತತ್ವವನ್ನು ಶ್ರೀಮದ್ ಬಾಗವತ ಅದೆಷ್ಟು ಅದ್ಭುತವಾಗಿ ನಿರೂಪಣೆ ಮಾಡುತ್ತದೆ ಎನ್ನುವದನ್ನು ಈ ಭಾಗದಲ್ಲಿ ಕೇಳುತ್ತೇವೆ.
ಶ್ರೀಮದ್ ಭಾಗವತಮ್ — 221 — ದೇವರು ತನಗೆ ತಾನು ಆಶ್ಚರ್ಯ
ದೇವರು ಮತ್ತೊಬ್ಬರಿಗೆ ಆಶ್ಚರ್ಯಕರರಾಗಿರಬಹುದು, ಆದರೆ ಅವನಿಗೆ ಅವನು ಆಶ್ಚರ್ಯಸ್ವರೂಪ ಎಂದು ಭಾಗವತ ಹೇಳುತ್ತದೆ — “ವಿಸ್ಮಾಪನಂ ಸ್ವಸ್ಯ ಚ” ಎಂದು. ಒಬ್ಬ ವ್ಯಕ್ತಿ ತನಗೆ ತಾನೇ ಹೇಗೆ ಆಶ್ಚರ್ಯಕರನಾಗಲು ಸಾಧ್ಯ ಎಂಬ ವಿಷಯದ ಚರ್ಚೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 220 — ದೃಢವಾದ ಜ್ಞಾನದ ಲಕ್ಷಣ
ಇವತ್ತಿನ ಕಲಿಯುಗದಲ್ಲಿ ಕಂಡ ಕಂಡ ಜನರ ಮಾತನ್ನು ಕೇಳುವದರಿಂದ ನಮ್ಮ ಬುದ್ಧಿ ವಿಚಲಿತವಾಗುತ್ತಿರುತ್ತದೆ. ಆ ರೀತಿ ಆಗಬಾರದು ಎಂದರೆ ಏನು ಮಾಡಬೇಕು, ಯಾರನ್ನು ಗುರು ಎಂದು ಸ್ವೀಕರಿಸಬೇಕು ಎನ್ನುವದರ ಕುರಿತು ಶ್ರೀಮದ್ ಭಾಗವತ ತಿಳಿಸುವ ಪ್ರಮೇಯರತ್ನಗಳ ನಿರೂಪಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 219— ಉದ್ಧವರ ಭಕ್ತ್ಯುದ್ರೇಕ
ಉತ್ಕಂಠತೆ, ಉತ್ಸುಕತೆ ಎಂಬ ಶಬ್ದಗಳ ಅರ್ಥದ ವ್ಯತ್ಯಾಸ, ಉತ್ಕಂಠತೆ ಎಂಬ ಶಬ್ದಕ್ಕೆ ಶ್ರೀಮದ್ ವಿಜಯಧ್ವಜತೀರ್ಥಶ್ರೀಪಾದಂಗಳವರು ತಿಳಿಸಿದ ದಿವ್ಯ ಅರ್ಥದ ವಿವರಣೆಯೊಂದಿಗೆ ಶ್ರೀಕೃಷ್ಣನ ಸ್ಮರಣೆಯಾದ ತಕ್ಷಣ ಉದ್ಧವರು ಭಕ್ತ್ಯುದ್ರೇಕದಿಂದ ಅಸಂಪ್ರಜ್ಞಾತಸಮಾಧಿಯ ಅವಸ್ಥೆಯನ್ನು ಮುಟ್ಟಿದ್ದರ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 218— ಅವತಾರದ ಕಥೆಗಳ ಮಹತ್ತ್ವ
ಪರೀಕ್ಷಿದ್ರಾಜರು ಪ್ರಶ್ನೆ ಮಾಡಿದ್ದು ಸೃಷ್ಟಿಯ ಕುರಿತು. ಅದಕ್ಕೆ ಉತ್ತರ ನೀಡುವ ಮುನ್ನ ಶುಕಾಚಾರ್ಯರು ವಿದುರ-ಉದ್ಧವ,ಮೈತ್ರೇಯ ಸಂವಾದದ ಮುಖಾಂತರ ಶ್ರೀಕೃಷ್ಣನ ಕಥೆಯನ್ನು ಹೇಳುತ್ತಾರೆ. ಅದಕ್ಕೆ ಅದ್ಭುತಕಾರಣವನ್ನು ಸ್ವಯಂ ಭಾಗವತವೇ ನೀಡುತ್ತದೆ. ಆ ವಚನಗಳ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 217— ದುರ್ಯೋಧನನನ್ನು ದೇವರು ಮೊದಲೇ ಏಕೆ ಕೊಲ್ಲಲಿಲ್ಲ
ಪಾಂಡವರು ನನ್ನ ಪ್ರಾಣ ಎಂದು ಹೇಳಿದ ಭಗವಂತ, ಭೀಮನಿಗೆ ದುರ್ಯೋಧನ ವಿಷ ಹಾಕಿದಾಗಲೇ, ಅರಗಿನ ಮನೆಯಲ್ಲಿ ಅವರೆಲ್ಲರನ್ನೂ ಸುಡಲು ಪ್ರಯತ್ನಿಸಿದಾಗಲೇ, ದ್ಯೂತದಲ್ಲಿ ದ್ರೌಪದಿಗೆ ಅವಮಾನ ಮಾಡಿದಾಗಲೇ ಏಕೆ ದುರ್ಯೋಧನಾದಿಗಳನ್ನು ಕೊಲ್ಲಲಿಲ್ಲ. ದ್ವೇಷ ಮಾಡಲೂ ಸಹ ದುರ್ಯೋಧನನಿಗೆ ಅಷ್ಟು ಸಮಯ ನೀಡುವದಾದರೆ, ಪೂತನೀ ಮುಂತಾದವರಿಗೆ ಏಕಾಗಿ ಸಮಯ ಕೊಡಲಿಲ್ಲ.
ಶ್ರೀಮದ್ ಭಾಗವತಮ್ — 216— ಕುಶಲಪ್ರಶ್ನೆ-3
ಧರ್ಮ, ಭೀಮ, ಅರ್ಜುನ, ನಕುಲ, ಸಹದೇವ. ಕುಂತಿಯರನ್ನು ವಿದುರರು ನೆನೆಸಿಕೊಳ್ಳುವ ರೀತಿಯೇ ಅದ್ಭುತ. ಎಲ್ಲರ ಕುರಿತೂ ಚನ್ನಾಗಿದ್ದಾರಾ ಎಂದು ಪ್ರಶ್ನೆ ಮಾಡುವ ವಿದುರರು ಧೃತರಾಷ್ಟ್ರನ ಕುರಿತು ಮಾತ್ರ ಕುಶಲಪ್ರಶ್ನೆ ಮಾಡದೆ ಅವನ ಕುರಿತು ದುಃಖ ಪಡುತ್ತಾರೆ. ನಾವು ಕಲಿಯಬೇಕಾದ ಅದ್ಭುತ ಪಾಠವನ್ನು ಆ ಮುಖಾಂತರ ತಿಳಿಸುತ್ತಾರೆ.
ಶ್ರೀಮದ್ ಭಾಗವತಮ್ — 215— ಕುಶಲಪ್ರಶ್ನೆ 2
ಅಂಗಾರ ಅಕ್ಷತೆಗಳನ್ನು ಧರಿಸಬೇಕೋ ಧರಿಸಬಾರದೋ ಎಂಬ ಚರ್ಚೆ ಇಲ್ಲಿದೆ. ಆಧಿ ಎಂಬ ಶಬ್ದಕ್ಕೆ ವ್ಯಾಖ್ಯಾನವನ್ನು ಮಾಡುತ್ತ, ದೇವರಲ್ಲಿ ಎಂದಿಗೂ ದೋಷಲೇಶದ ಚಿಂತನೆಯನ್ನೂ ಮಾಡಬಾರದು ಎಂಬ ಪರಮಮಂಗಲ ಪಾಠವನ್ನು ಶ್ರೀಮದಾಚಾರ್ಯರು ನಮಗಿಲ್ಲಿ ಕಲಿಸುತ್ತಾರೆ.
ಶ್ರೀಮದ್ ಭಾಗವತಮ್ — 214 — ಕುಶಲಪ್ರಶ್ನೆಯನ್ನು ಮಾಡುವ ಕ್ರಮ
ಇಬ್ಬರು ಪರಿಚಿತರು ಭೇಟಿಯಾದಾಗ ಪರಸ್ಪರರ ಕುಟುಂಬದವರ ಕ್ಷೇಮದ ಕುರಿತು ಪ್ರಶ್ನೆಯನ್ನು ಮಾಡುವದು ಲೋಕದಲ್ಲಿ ಸಹಜ, ಕಾರಣ ಮನುಷ್ಯರಿಗೆ ಯಾವ ಕ್ಷಣದಲ್ಲಿ ಏನು ಸಮಸ್ಯೆ ಬೇಕಾದರೂ ಉಂಟಾಗಬಹುದು. ವಿದುರ-ಉದ್ಧವರು ಭೇಟಿಯಾದಾಗ ವಿದುರರು ಶ್ರೀಕೃಷ್ಣ ಮುಂತಾದ ಸಕಲರ ಕುರಿತು ಪ್ರಶ್ನೆಯನ್ನು ಮಾಡುತ್ತಾರೆ. ಆದರೆ, ಶ್ರೀಕೃಷ್ಣನಿಗೆ ಅಸೌಖ್ಯದ, ಅನರ್ಥದ ಪ್ರಸಕ್ತಿಯೇ ಇಲ್ಲ. ಸಾಮಾನ್ಯರು ಪ್ರಶ್ನೆ ಮಾಡಿದರೆ ಅವರಿಗೆ ತತ್ವ ತಿಳಿದಿಲ್ಲ ಎನ್ನಬಹುದು. ಆದರೆ ವಿದುರರಂತಹ ಮಹಾನುಭಾವರು, ಉದ್ಧವರಂತಹ ಭಾಗವತೋತ್ತಮರಿಗೆ ಈ ರೀತಿ ಪ್ರಶ್ನೆ ಮಾಡುವದು ತತ್ವಶಾಸ್ತ್ರದ ದೃಷ್ಟಿಯಿಂದ ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಯನ್ನು ಕೈಗೆತ್ತಿಕೊಂಡು ಭಗವತ್ಪಾದರು ಕಾರುಣ್ಯದಿಂದ ಉತ್ತರಿಸಿದ್ದಾರೆ. ಆ ವಚನಗಳ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 213 — ತೀರ್ಥಯಾತ್ರೆಯ ಮಹತ್ತ್ವ
ಮನುಷ್ಯ ಸುಖ ದುಃಖಗಳಿಗೆ ಅತೀತನಲ್ಲ. ಅವು ಆಗಿಯೇ ಅಗುತ್ತವೆ. ಆದರೆ ಸುಖ ದುಃಖಗಳ ಪರಿಣಾಮಕ್ಕೊಳಗಾಗಬಾರದು ಎನ್ನುವದು ಗೀತಾಸಿದ್ಧಾಂತ. “ದುಃಖವಾಗುತ್ತದೆ, ಆದರೆ ಅದರ ಪರಿಣಾಮಕ್ಕೊಳಗಾಗಬಾರದು” ಎನ್ನುವ ಮಾತು ನಮಗೆ ಅರ್ಥವಾಗುವದು ತುಂಬ ಕಷ್ಟ. ಆದರೆ ವಿದುರರು ಸ್ವಯಂ ಆ ಗೀತಾತತ್ವವನ್ನು ಆಚರಿಸಿ ತೋರಿಸಿ ಅತ್ಯಂತ ಸುಲಭವಾಗಿ ಅದನ್ನು ಅರ್ಥ ಮಾಡಿಸುತ್ತಾರೆ.
ಶ್ರೀಮದ್ ಭಾಗವತಮ್ — 212 — ವಿದುರರ ತೀರ್ಥಯಾತ್ರೆ
ತೀರ್ಥಯಾತ್ರೆಯನ್ನು ಏಕೆ ಮಾಡಬೇಕು, ಹೇಗೆ ಮಾಡಬೇಕು ಎಂಬ ಪ್ರಶ್ನೆಗೆ ಉತ್ತರವನ್ನು ನೀಡುತ್ತ ವಿದುರರ ಮಾಡಿದ ಅದ್ಭುತ ತೀರ್ಥಯಾತ್ರೆಯ ವರ್ಣನೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 211 — ವಿದುರರು ಕಲಿಸುವ ಪಾಠ
ಇಡಿಯ ಜೀವನವನ್ನು ಹಸ್ತಿನಾವತಿಯ ಸಿಂಹಾಸನದ ಸೇವೆಯಲ್ಲಿ ಕಳೆದ ವಿದುರರಿಗೆ ದುರ್ಯೋಧನ ತೀವ್ರವಾದ ಅವಮಾನ ಮಾಡುತ್ತಾನೆ, ಧೃತರಾಷ್ಟ್ರ ಅದನ್ನು ತಡೆಯದೇ ಮತ್ತಷ್ಟು ಅವಮಾನ ಮಾಡುತ್ತಾನೆ. ಇಂತಹ ಪ್ರಸಂಗದಲ್ಲಿ ವಿದುರರು ನಡೆದುಕೊಂಡ ರೀತಿ ಪ್ರತಿಯೊಬ್ಬ ಸಾಧಕನ ಜೀವನಕ್ಕೆ ಮಾದರಿ. ಆ ವಿಷಯದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 210 — ವಿದುರರ ಕಥೆಯ ಆವಶ್ಯಕತೆ
ಅಪರೋಕ್ಷಜ್ಞಾನ, ಉತ್ಕ್ರಾಂತಿ, ಮಹಾಪ್ರಳಯ ಮುಂತಾದವುಗಳನ್ನು ನಿರೂಪಿಸಿ ಸೃಷ್ಟಿಯನ್ನು ನಿರೂಪಿಸಲು ಹೊರಟ ಭಾಗವತದ ಈ ಸಂದರ್ಭದಲ್ಲಿ ವಿದುರರ ಕಥೆಯ ನಿರೂಪಣೆ ಬರುತ್ತದೆ. ಈ ತತ್ವಗಳ ಪ್ರತಿಪಾದನೆಯ ಮಧ್ಯದಲ್ಲಿ ಯಾಕಾಗಿ ಈ ಕಥೆಯನ್ನು ಹೇಳಬೇಕು ಎಂಬ ಪ್ರಶ್ನೆಗೆ ನಮ್ಮ ಶ್ರೀಮದ್ ವಿಜಯಧ್ವಜತೀರ್ಥಶ್ರೀಪಾದಂಗಳವರು ನೀಡಿದ ಅದ್ಭುತ ಉತ್ತರದ ವಿವರಣೆ ಇಲ್ಲಿದೆ.