ಅಮಾವಾಸ್ಯೆಯಂದೇ ಸಮರ್ಪಣೆ
ಪುರುಷೋತ್ತಮ ಮಾಸದಲ್ಲಿ ಇಡಿಯ ತಿಂಗಳು ಮಾಡಿರುವ ಏನೆಲ್ಲ ವ್ರತಗಳಿವೆ ಅವನ್ನು ಅಮಾವಾಸ್ಯೆಯಂದು ಮಾಡಬೇಕೋ, ಅಥವಾ ನಿಜಮಾಸದ ಪ್ರತಿಪದೆಯಂದು ಮಾಡಬೇಕೋ? ಮತ್ತು ಕೆಲವರು 33 ದಿವಸ ಮಾಡಬೇಕು ಎನ್ನುತ್ತಿದ್ದಾರೆ, ಇದು ಸರಿಯೇ?
ಶ್ರೀ ವಿದ್ಯಾಪಯೋನಿಧಿ ತೀರ್ಥರ ಸ್ಮರಣೆ
ಶ್ರೀ ವಿದ್ಯಾಪಯೋನಿಧಿ ತೀರ್ಥ ಶ್ರೀಪಾದಂಗಳವರು ನಮ್ಮ ಕುಲದ ಮೇಲೆ ಮಾಡಿದ ಪರಮಾನುಗ್ರಹದ ಸ್ಮರಣೆ, ಅವರ ಮಹಾಗುಣಗಳ ಚಿಂತನೆಯೊಂದಿಗೆ.
ಸ್ಯಮಂತಕೋಪಾಖ್ಯಾನ
ಗಣಪತಿ ಹಬ್ಬದಂದು ಸಂಜೆ ಶ್ರವಣ ಮಾಡಲೇಬೇಕಾದ ಸ್ಯಮಂತಕಮಣಿಯ ಪ್ರಸಂಗದ ಚಿಂತನೆ. ಶ್ರೀಮನ್ ಮಹಾಭಾರತತಾತ್ಪರ್ಯನಿರ್ಣಯದ ವಚನಗಳ ಅರ್ಥಾನುಸಂಧಾನದೊಂದಿಗೆ.
ಶ್ರೇಯಾಂಸಿ ಬಹುವಿಘ್ನಾನಿ
ನನ್ನ ಕಣ್ಣಿಗೆ Major Operation ಆಗಿರುವದರಿಂದ ಸದ್ಯಕ್ಕೆ ರಾಮಾಯಣದ ಉಪನ್ಯಾಸಗಳನ್ನು ನೀಡಲಾಗುವದಿಲ್ಲ. ವಿವರವನ್ನು ಆಡಿಯೋದಲ್ಲಿ ತಿಳಿಸಿದ್ದೇನೆ.
ಲಕ್ಷ್ಮಣನಿಗೆ ಪರೀಕ್ಷೆ
ನಮ್ಮೊಳಗಿನ ಕಳ್ಳ ಮನಸ್ಸನ್ನು ಅನಾವರಣಗೊಳಿಸುವ ಅದ್ಭುತ ಭಾಗವಿದು. ಧರ್ಮಾಚರಣೆ ಮಾಡಲು, ದೇವರಲ್ಲಿ ಭಕ್ತಿಯನ್ನು ಮಾಡಲು ಹೊರಟಾಗ ಮನಸ್ಸಿನಲ್ಲಿ ಲೌಕಿಕ ವಿಷಯದ ಅಪೇಕ್ಷೆಗಳೊಂದಿಗೆ ನಡೆಯುವ ಘರ್ಷಣೆಯನ್ನು ಹೇಗೆ ಮೀರಬೇಕು ಎಂದು ರಾಮಲಕ್ಷ್ಮಣರಿಲ್ಲಿ ಕಲಿಸುತ್ತಾರೆ.
ಸೀತೆಯ ಹರಕೆ
ದೋಣಿಯಲ್ಲಿ ಕುಳಿತ ನಂತರ ಶ್ರೀರಾಮದೇವರು ಮಂತ್ರಗಳ ಜಪ ಮಾಡುತ್ತಾರೆ, ಸೀತಾದೇವಿಯರು ಗಂಗೆಗೆ ಹರಕೆಯನ್ನು ಹೊತ್ತುಕೊಳ್ಳುವ ಪ್ರಸಂಗದ ವಿವರಣೆ ಇಲ್ಲಿದೆ. ಹರಕೆಯ ಕುರಿತ ವಿಶೇಷ ವಿಷಯಗಳೊಂದಿಗೆ.
ರಾಮಕಥೆಯ ಆಧ್ಯಾತ್ಮಿಕತೆ
ರಾಮ-ಲಕ್ಷ್ಮಣ-ಸೀತೆಯರು, ಗುಹ ತರಿಸಿದ ನೌಕೆಯಲ್ಲಿ ಕುಳಿತು ಗಂಗೆಯನ್ನು ದಾಟಿದ ಪ್ರಸಂಗದ ಆಧ್ಯಾತ್ಮಿಕ ಮುಖದ ಚಿತ್ರಣ ಇಲ್ಲಿದೆ.
ಗುಹನ ಭಕ್ತಿ ಲಕ್ಷ್ಮಣನ ಅಂತರಾಳ
ನಡೆದ ಘಟನೆಯ ಕುರಿತು ಸಿಟ್ಟಾಗಿದ್ದ ಲಕ್ಷ್ಮಣನಿಗೆ ದಶರಥರ ಬಗ್ಗೆ ಅದೆಂತಹ ಪ್ರೀತಿಯಿತ್ತು, ಅ ಲಕ್ಷ್ಮಣರ ಮನಸ್ಸು ಅದೆಷ್ಟು ಮೃದುವಾಗಿತ್ತು ಎನ್ನುವದರ ಅನಾವರಣ ಇಲ್ಲಿದೆ. ಗುಹ-ರಾಮರ ಭಾಂದವ್ಯ, ಗುಹನ ಭಕ್ತಿಗಳ ಚಿತ್ರಣದೊಂದಿಗೆ.
ಸುಮಂತ್ರರ ಭಕ್ತಿ
ಸುಮಂತ್ರರ ಭಕ್ತಿ, ರಾಮನ ಭಕ್ತವಾತ್ಸಲ್ಯಗಳನ್ನು ವಾಲ್ಮೀಕಿಮಹರ್ಷಿಗಳು ಚಿತ್ರಿಸುವ ಕ್ರಮ ನಮ್ಮ ಕಣ್ಣಾಲಿಗಳಲ್ಲಿ ಅಪ್ರಯತ್ನವಾಗಿ ನೀರನ್ನು ತರಿಸುತ್ತವೆ, ನಮ್ಮ ಮನಸ್ಸಿನ ಕಶ್ಮಲವನ್ನು ದೂರಮಾಡಿಬಿಡುತ್ತವೆ.
ಗಂಗೆಯ ತೀರದಲ್ಲಿ ಶ್ರೀರಾಮ
ಕಚ್ಚೆ ಸೀರೆ ಪಂಚೆ ಉಟ್ಟರೇ ದೇವರು ಒಲಿಯುತ್ತಾನಾ, ಕೃಷ್ಣ ಅರ್ಜುನರೇನು ಮಡಿ ಉಟ್ಟಿಕೊಂಡು ಭಗವದ್ಗಿತೆಯನ್ನು ನೀಡಿದರೇ ಎನ್ನುವ ಆಧುನಿಕರಿಗೆ ನಮ್ಮ ಸ್ವಾಮಿ ಶ್ರೀರಾಮ ತನ್ನ ಚರ್ಯೆಯಿಂದಲೇ ನೀಡಿರುವ ಉತ್ತರದ ವಿವರಣೆಯೊಂದಿಗೆ
ಅಯೋಧ್ಯೆಗೆ ಗೌರವ
ಆಯುಧ ಪೂಜೆ, ಭೂಮಿ ಪೂಜೆ, ನಮ್ಮ ಬದುಕಿಗೆ ಆಧಾರವಾದ ವಸ್ತುಗಳ ಪೂಜೆಯ ಹಿಂದಿನ ಉದ್ದೇಶದ ವಿವರಣೆಯೊಂದಿಗೆ ನಮ್ಮ ಸ್ವಾಮಿ ಕೋಸಲದ ಎಲ್ಲೆಯಲ್ಲಿ ನಿಂತು ತನ್ನ ರಾಷ್ಟ್ರಕ್ಕೆ ಸಲ್ಲಿಸುವ ಗೌರವದ ಕುರಿತು ನಾವಿಲ್ಲಿ ಕೇಳುತ್ತೇವೆ. ನಮ್ಮ ಬದುಕನ್ನು ಬಂಗಾರಗೊಳಿಸುವ ಪಾಠಗಳೊಂದಿಗೆ.
ಶ್ರೀರಾಮನನ್ನು ಕಳೆದುಕೊಂಡ ಜನರು
ತಮಸಾ ನದಿಯ ತೀರದಲ್ಲಿ ರಾತ್ರಿ ಜನರೆಲ್ಲರೂ ಮಲಗಿದ್ದಾಗ ಮಧ್ಯರಾತ್ರಿಯಲ್ಲಿ ರಾಮ-ಸೀತಾ-ಲಕ್ಷ್ಮಣ-ಸುಮಂತ್ರರು ರಥವನ್ನೇರಿ ಹೊರಡುವ ಪ್ರಸಂಗದ ವಿವರಣೆ ಇಲ್ಲಿದೆ. ಮೂಡುವ ಎಲ್ಲ ಪ್ರಶ್ನೆಗಳ ಉತ್ತರೊಂದಿಗೆ.
ಬ್ರಾಹ್ಮಣರ ಪ್ರಾರ್ಥನೆ
ಇಡಿಯ ಅಯೋಧ್ಯೆಯ ಬ್ರಾಹ್ಮಣಸಂಕುಲ ಧೂಳಿರುವ ಬೀದಿಯಲ್ಲಿ ಶ್ರೀರಾಮನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಹಿಂತಿರುಗಿ ಬಾ ಎಂದು ಪ್ರಾರ್ಥನೆ ಮಾಡುವ ಘಟನೆಯನ್ನಿಲ್ಲಿ ಕೇಳುತ್ತೇವೆ, ವೃಕ್ಷಗಳೂ ಸಹ ಹೇಗೆ ಮೊರೆಯಿಟ್ಟವು ಎನ್ನುವ ವಿವರದೊಂದಿಗೆ.
ಸುಮಿತ್ರಾದೇವಿಯ ಹಿತೋಪದೇಶ
ಮಗ ವನಕ್ಕೆ ಹೋದ ಬಳಿಕ ಕೌಸಲ್ಯಾದೇವಿ ಅಪಾರ ದುಃಖಕ್ಕೊಳಗಾದರೆ, ಸುಮಿತ್ರಾದೇವಿಯರು ಪರಮಾದ್ಭುತವಾದ ಕ್ರಮದಲ್ಲಿ ಅವರನ್ನು ಸಾಂತ್ವನಗೊಳಿಸುವ ಪರಿಯನ್ನಿಲ್ಲಿ ಕೇಳುತ್ತೇವೆ. ನಮ್ಮ ಕಣ್-ತೆರೆಸುವ ಪ್ರಸಂಗ.
ಕೈಕಯಿಯನ್ನು ತೊರೆದ ದಶರಥರು
ದಶರಥ ಮಹಾರಾಜರು ಕೈಕಯಿಯನ್ನು ಶಾಶ್ವತವಾಗಿ ತೊರೆದು ಕೌಸಲ್ಯೆಯ ಮನೆಯನ್ನು ಸೇರುತ್ತಾರೆ. ಅಂತ್ಯವಿಲ್ಲದ ದುಃಖ ಇಡಿಯ ಅಯೋಧ್ಯೆಯನ್ನು ಆವರಿಸುವದನ್ನಿಲ್ಲಿ ಕೇಳುತ್ತೇವೆ.
ಶ್ರೀರಾಮನ ನಿರ್ಗಮನ
ಅಯೋಧ್ಯೆಯ ಸೌಭಾಗ್ಯವಾದ ಶ್ರೀರಾಮಚಂದ್ರ ನಗರವನ್ನು ತೊರೆದು ಹೊರಟು ನಿಂತಾಗ ಸಮಗ್ರ ನಾಗರೀಕರು, ಆನೆ ಕುದುರೆಗಳು ದಶರಥ ಕೌಸಲ್ಯೆಯರು ಅನುಭವಿಸಿದ ಅಪಾರ ನೋವಿನ ಚಿತ್ರಣ ಇಲ್ಲಿದೆ.
ಗಂಡನಿಗೇಕೆ ಅಷ್ಟು ಮಹತ್ತ್ವ
ಹೆಣ್ಣಿಗೆ ಗಂಡನಿಲ್ಲದೇ ಯಾವ ಸಾಧನೆಯಿಲ್ಲ ಎಂದು ಶಾಸ್ತ್ರಗಳು ಮೇಲಿಂದ ಮೇಲೆ ಹೇಳುತ್ತವೆ. ಯಾಕಷ್ಟು ಮಹತ್ತ್ವ ಗಂಡನಿಗೆ ಎಂಬ ಪ್ರಶ್ನೆಗೆ ಸ್ವಯಂ ಸೀತಾದೇವಿಯರು ನೀಡಿದ ಉತ್ತರ ಇಲ್ಲಿದೆ. ತಪ್ಪದೇ ಕೇಳಿ.
ಶೀಲ ಎಂದರೇನು?
ಕೈಕೆಯಿಯನ್ನು ವಸಿಷ್ಠರು ಶೀಲವರ್ಜಿತೆ ಎಂದು ಕರೆಯುತ್ತಾರೆ. ಕೈಕಯಿ ಪರಪುರುಷಸಂಪರ್ಕವನ್ನು ಮಾಡಿದವಳಲ್ಲ. ಹಾಗಾದರೆ ಕೈಕಯಿಯನ್ನು ವಸಿಷ್ಠರು ಹೀಗೇಕೆ ಕರೆದರು ಎಂಬ ಪ್ರಶ್ನೆಗೆ ಹಾರೀತರು ಶೀಲ ಎನ್ನುವ ಶಬ್ದಕ್ಕೆ ತಿಳಿಸಿರುವ ಅದ್ಭುತ ಅರ್ಥಗಳನ್ನಿಲ್ಲಿ ಕೇಳುತ್ತೇವೆ.
ನಾರು ವಸ್ತ್ರದ ಧಾರಣೆ
ರಜಸ್ವಲೆಯಾದ ಪತ್ನಿಯನ್ನು ಹೇಗೆ ನೋಡಿಕೊಳ್ಳಬೇಕು, ಹೆಂಡತಿಯಿಂದ ಹೇಗೆ ಧರ್ಮಾಚರಣೆ ಮಾಡಿಸಬೇಕು ಎಂಬ ವಿಷಯದ ಕುರಿತ ನಿರೂಪಣೆ ಇಲ್ಲಿದೆ.
ಸಿದ್ಧಾರ್ಥರ ಆಕ್ರೋಶ
ಅಜ ಮಹಾರಾಜರ ಕಾಲದಲ್ಲಿ ಅಮಾತ್ಯರಾಗಿದ್ದ, ಅಯೋಧ್ಯೆಯ ಪ್ರಮುಖ ಪುರುಷರಲ್ಲಿ ಒಬ್ಬರಾದ, ದಶರಥರಿಂದ ಆರಂಭಿಸಿ ಸಮಗ್ರ ಜನತೆಯ ಗೌರವಕ್ಕೆ ಪಾತ್ರರಾಗಿದ್ದ ಶೂದ್ರಜಾತಿಯ ಸಿದ್ಧಾರ್ಥರು ಅಸಮಂಜಸನ ವಿಷಯದಲ್ಲಿ ಕೈಕಯಿಗೆ ಬುದ್ಧಿ ಹೇಳುವ ಪ್ರಸಂಗವನ್ನು ನಾವಿಲ್ಲಿ ಕೇಳುತ್ತೇವೆ.
ಸುಮಂತ್ರರ ಆಕ್ರೋಶ
ಪ್ರಾಚೀನ ಭಾರತದಲ್ಲಿ ಶೂದ್ರರ ಸ್ಥಾನ ಮಾನ ಎಷ್ಟಿತ್ತು ಎಂದು ಅರ್ಥಮಾಡಿಸುವ ಭಾಗವಿದು. ಶೂದ್ರರಾದ, ರಾಷ್ಟ್ರದ ಮಹಾಮಂತ್ರಿಗಳಾದ ಸುಮಂತ್ರರು ಪಟ್ಟದ ರಾಣಿ ಕೈಕಯಿಯನ್ನು ಸಮಗ್ರ ಸಭೆಯಲ್ಲಿ ದಿಟ್ಟತನದಿಂದ ಪ್ರಶ್ನಿಸುವ ನಿರ್ಭಯರಾಗಿ ನಿಂದಿಸುವ ಭಾಗವಿದು.
ದಶರಥರ ಅಪಾರ ದುಃಖ
ವನಕ್ಕೆ ತೆರಳಲು ಅನುಜ್ಞೆಯನ್ನು ಬೇಡಲು ಶ್ರೀರಾಮ ದಶರಥರ ಅರಮನೆಗೆ ಬಂದಾಗ ನಡೆಯುವ ಮನಕಲಕುವ ಘಟನೆಗಳ ಚಿತ್ರಣ.
ವನಕ್ಕೆ ಹೋಗಲು ಜನರ ನಿರ್ಧಾರ
ಸರ್ವಸ್ವದಾನ ಮಾಡಿದ ಶ್ರೀರಾಮಚಂದ್ರ ಸೀತಾಮಾತೆ ಲಕ್ಷ್ಮಣರು ಹೊರಟು ನಿಂತರೆ ಸಮಸ್ತ ಅಯೋಧ್ಯಾನಗರ ವಾಸಿಗಳು ಕೈಕಯಿಯ ನಿಂದೆ ಮಾಡುತ್ತ ತಾವೂ ಸಹ ರಾಮನೊಂದಿಗೆ ಹೊರಡುವ ನಿರ್ಧಾರ ಮಾಡುವ, ಪಶು ಪಕ್ಷಿ ಪ್ರಾಣಿಗಳು ರಾಮನಿಗಾಗಿ ಮಾಡುವ ಆಕ್ರಂದನ ಕುರಿತು ನಾವಿಲ್ಲಿ ಕೇಳುತ್ತೇವೆ.
ಯಾವ ಜಾತಿಗೆ ಯಾವ ವೃತ್ತಿ
ಯಾವ ಜಾತಿಯವರು ಯಾವ ವೃತ್ತಿಯನ್ನು ಮಾಡಿದರೆ ಸುಖವಾಗಿರುತ್ತಾರೆ ಎಂಬ ಚರ್ಚೆ ಈ ರಾಮ-ತ್ರಿಜಟಬ್ರಾಹ್ಮಣ ಪ್ರಸಂಗದಲ್ಲಿದೆ.
ರಾಮ ಮಾಡಿದ ಸರ್ವಸ್ವ ದಾನ
ಸಿಂಹಾಸನವನ್ನೇರಿ ರಾಜ್ಯ ಪಾಲನೆ ಮಾಡಬೇಕಿದ್ದ ಸಂದರ್ಭದಲ್ಲಿ ವನಕ್ಕೆ ಹೊರಡುವ ಪರಿಸ್ಥಿತಿ ಬಂದರೂ, ಶ್ರೀರಾಮಚಂದ್ರ ತನ್ನ ವೈಯಕ್ತಿಕ ಸಂಪತ್ತನ್ನೆಲ್ಲ ಬ್ರಾಹ್ಮಣರಿಗೆ ದಾನ ಮಾಡಿ, ತನ್ನ ಭೃತ್ಯರಿಗೆ, ಆವಶ್ಯಕತೆ ಇರುವವರಿಗೆ ಹಂಚಿದ ಘಟನೆಯ ವಿವರವನ್ನಿಲ್ಲಿ ಕೇಳುತ್ತೇವೆ.
ಲಕ್ಷ್ಮಣರ ಭಕ್ತಿ ಊರ್ಮಿಳೆಯ ಧರ್ಮ
“ನೀನು ಅಯೋಧ್ಯೆಯಲ್ಲಿಯೇ ಇದ್ದು ತಂದೆ ತಾಯಿಯರನ್ನು ನೋಡಿಕೋ” ಎನ್ನುವ ಅಣ್ಣನನ್ನು ಲಕ್ಷ್ಮಣರು ಭಕ್ತಿಯಿಂದ ಒಪ್ಪಿಸಿದ ಘಟನೆಯ ಚಿತ್ರಣದೊಂದಿಗೆ ಊರ್ಮಿಳಾದೇವಿಯರನ್ನು ಏಕೆ ವನಕ್ಕೆ ಕರೆದುಕೊಂಡು ಹೋಗಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಶ್ರೀರಾಮನನ್ನು ಒಪ್ಪಿಸಿದ ಸೀತೆ
ಕೇಳಿದರೇ ಭಯವಾಗುವಂತೆ ಕಾಡಿನ ಕಷ್ಟಗಳನ್ನು ರಾಮದೇವರು ವರ್ಣಿಸಿದರೆ, ಪರಮಾದ್ಭುತ ಉತ್ತರದೊಂದಿಗೆ ನಮ್ಮ ಸೀತಮ್ಮ ಗಂಡನನ್ನು ಒಪ್ಪಿಸುವ ಘಟನೆಯ ಚಿತ್ರಣ ಇಲ್ಲಿದೆ.
ಸೀತೆ ತಿಳಿಸಿದ ಸ್ತ್ರೀಧರ್ಮ
ಗಂಡ ಮಾಡುವ ಸತ್ಕಾರ್ಯಗಳಲ್ಲಿ ಹೆಂಡತಿ ಭಾಗಿಯಾದಾಗ ಆ ಸತ್ಕರ್ಮದ ಪೂರ್ಣ ಪಡೆಯುತ್ತಾಳೆ ಎಂಬ ವಿಷಯದೊಂದಿಗೆ, ಗಂಡ ಹೆಂಡತಿಯರ ಮಧ್ಯದಲ್ಲಿರ ಬೇಕಾದ ಅದ್ಭುತ ಬಾಂಧವ್ಯದ ಕುರಿತು ಸೀತಾದೇವಿ ಹೇಳುವ ಮಾತುಗಳನ್ನಿಲ್ಲಿ ಕೇಳುತ್ತೇವೆ.
ಕೌಸಲ್ಯೆಯ ಆಶೀರ್ವಾದ
ದೂರದ ಊರಿಗೆ, ಮಹತ್ತ್ವದ ಕಾರ್ಯಕ್ಕೆ ಹೊರಟ ನಮ್ಮ ಪ್ರೀತಿಪಾತ್ರರನ್ನು ಯಾವ ರೀತಿ ಬೀಳ್ಕೊಡಬೇಕು, ದೇವರಲ್ಲಿ ಯಾವ ರೀತಿ ಪ್ರಾರ್ಥನೆ ಮಾಡಬೇಕು ಎಂದು ತಿಳಿಸುವ ಭಾಗವಿದು.
ದೈವ ದೊಡ್ಡದೋ ಪೌರುಷ ದೊಡ್ಡದೋ
ಎಲ್ಲವೂ ದೈವಾಧೀನ, ಭಗವಂತನ ಇಚ್ಚೆಯನ್ನು ಮೀರಿ ನಡೆಯಲು ಸಾಧ್ಯವಿಲ್ಲ ಎಂದು ಶ್ರೀರಾಮ ಹೇಳಿದರೆ ಪುರುಷಪ್ರಯತ್ನವೇ ಪ್ರಧಾನ ಎಂದು ಲಕ್ಷ್ಮಣರು ಪ್ರತಿಪಾದಿಸುತ್ತಾರೆ. ಶ್ರೀರಾಮದೇವರು ಪರಮಾದ್ಭುತವಾಗಿ ಉತ್ತರಿಸುತ್ತಾರೆ. ದೈವ-ಪೌರುಷಗಳ ಕುರಿತ ಅದ್ಭುತ ಮತ್ತು ನಿರ್ಣಾಯಕ ಚರ್ಚೆಯನ್ನಿಲ್ಲಿ ಕೇಳುತ್ತೇವೆ.
ಶ್ರೀರಾಮ ತಿಳಿಸಿದ ಸ್ತ್ರೀಧರ್ಮ
ಎಂದಿಗೂ ಯಾರೊಂದಿಗೂ ಹೇಳಿಕೊಳ್ಳದ ಅಂತರಂಗದ ದುಃಖವನ್ನು, ಸಮಸ್ಯೆಯನ್ನು ಕೌಸಲ್ಯಾದೇವಿಯರು ಮಗನ ಮುಂದೆ ಹೇಳಿಕೊಂಡು ನಿನ್ನೊಂದಿಗೆ ನನ್ನನ್ನು ಕರೆದುಕೊಂಡು ಹೋಗು ಎಂದು ಹೇಳುತ್ತಾರೆ. ಶ್ರೀರಾಮ ಅದಕ್ಕೆ ನೀಡುವ ಉತ್ತರದ ವಿವರಣೆಯೊಂದಿಗೆ ಮನಕಲಕುವ ಘಟನೆಯ ಚಿತ್ರಣ ಇಲ್ಲಿದೆ.
ರಾಮ ಕೈಕೇಯೀ ಸಂವಾದ
ಹಿರಿಯರು ಅಧರ್ಮ ಮಾಡಿದಾಗ ಹೇಗೆ ಉತ್ತರಿಸಬೇಕು, ಅಧಾರ್ಮಿಕರಾದ ಹಿರಿಯರ ಮುಂದೆ ಹೇಗೆ ಮಾತನಾಡಬೇಕು, ಯಾವುದಕ್ಕೆ ದುಃಖ ಪಡಬೇಕು, ಯಾವುದಕ್ಕೆ ದುಃಖ ಪಡಬಾರದು ಮುಂತಾದ ಹತ್ತಾರು ಪಾಠಗಳನ್ನು ನಮ್ಮ ಸ್ವಾಮಿ ಈ ಪ್ರಸಂಗದಲ್ಲಿ ಕಲಿಸುತ್ತಾನೆ.
ರಾಮನಿಗೆ ಬರಲು ಆದೇಶ
“ಸಾಯುವದರೊಳಗೆ ರಾಮನನ್ನು ನೋಡಬೇಕಾಗಿದೆ, ಕರೆ ತಾ” ಎಂದು ಸುಮಂತ್ರರಿಗೆ ದಶರಥರು ಹೇಳುವ ಹೃದಯವಿದ್ರಾವಕ ಪ್ರಸಂಗದೊಂದಿಗೆ ಈ ಘಟನೆಯ ಬಗ್ಗೆ ತಿಳಿಯದ ರಾಮನ ಅರಮನೆಯಲ್ಲಿ ಯಾವ ಪರಿಸ್ಥಿತಿಯಿತ್ತು ಎಂಬ ಚಿತ್ರಣ ಇಲ್ಲಿದೆ.
ಕೈಕಯಿಯನ್ನು ಏಕೆ ನಿಗ್ರಹಿಸಲಿಲ್ಲ
ಗಂಡನಾಗಿ, ರಾಜನಾಗಿ ದಶರಥ ಮಹಾರಾಜರು ಕೈಕಯಿಯನ್ನು ಸಹಜವಾಗಿ ನಿಗ್ರಹಿಸಬಹುದಿತ್ತಲ್ಲವೇ? ಏಕೆ ನಿಗ್ರಹಿಸಲಿಲ್ಲ ಎಂಬ ಪ್ರಶ್ನೆಗೆ ಶಾಸ್ತ್ರ ನೀಡುವ ಪರಮಾದ್ಭುತ ಉತ್ತರ ಇಲ್ಲಿದೆ. ನಮ್ಮ ಬದುಕನ್ನು ಬಂಗಾರಗೊಳಿಸುವ ಪಾಠಗಳೊಂದಿಗೆ.
ದಶರಥರ ವಿಲಾಪ
ಕೌಸಲ್ಯಾ, ಸುಮಿತ್ರಾ, ಕೈಕಯಿ, ಭರತ ಮುಂತಾದವರ ಬಗ್ಗೆ ದಶರಥರಿಗೆ ಏನೆಲ್ಲ ಭಾವನೆಗಳಿದ್ದವು, ಹಾಗೂ ಕೈಕಯಿಯ ವರದಿಂದ ಏನೆಲ್ಲ ಅನರ್ಥಗಳಾಗುತ್ತವೆ ಇತ್ಯಾದಿ ಅನೇಕ ವಿಷಯಗಳನ್ನು ಈ ಪ್ರಸಂಗದಲ್ಲಿ ಕೇಳುತ್ತೇವೆ.
ಕೈಕಯಿಯ ಎರಡು ವರಗಳು
ದುಷ್ಟರ ವರ್ತನೆ ಯಾವ ರೀತಿ ಇರುತ್ತದೆ, ಶಾಸ್ತ್ರದ ಸೂಕ್ಷ್ಮ ಪ್ರಕ್ರಿಯೆಗಳನ್ನು, ಧರ್ಮವನ್ನು ದುರ್ಜನರು ಯಾವ ರೀತಿ ಉಪಯೋಗಿಸಿಕೊಳ್ಳುತ್ತಾರೆ ಎನ್ನುವದಕ್ಕೊಂದು ಜ್ವಲಂತ ನಿದರ್ಶನವಾದ ಘಟನೆ.
ದಶರಥರ ನಿಷ್ಕಪಟ ಪ್ರೇಮ
ಶ್ರೀರಾಮರ ಪಟ್ಟಾಭಿಷೇಕದ ಸಂಭ್ರಮವನ್ನು ಮೊದಲು ಕೈಕಯಿಯೊಂದಿಗೆ ಹಂಚಿಕೊಳ್ಳಲು ಬಂದ ದಶರಥ ಮಹಾರಾಜರು, ಕೈಕಯಿ ದುಃಖಿತಳಾದದ್ದನ್ನು ಕಂಡು ತಮ್ಮ ನಿಷ್ಕಲ್ಮಷ ಮನಸ್ಸಿನಿಂದ ಅವಳನ್ನು ಒಲಿಸಿಕೊಳ್ಳಲು ಮಾತನಾಡುವ ಪ್ರಸಂಗದ ಚಿತ್ರಣ.
ಮಂಥರೆಯ ದುರ್ಮಂತ್ರಣ
ಎಷ್ಟು ರೀತಿಯಲ್ಲಿ ಹೇಳಿದರೂ ಕೈಕಯಿ ರಾಮಪಟ್ಟಾಭಿಷೇಕವನ್ನು ನಿಲ್ಲಿಸಲು ಸಿದ್ಧಳಾಗದೇ ಇದ್ದಾಗ, ಮಂಥರೆಯ ಒಂದೇ ಮಾತು ಅವಳನ್ನು ಬದಲಾಯಿಸುತ್ತದೆ. ಏನದು, ಏಕೆ ಅದು ಕೈಕಯಿಯ ಮೇಲೆ ಪರಿಣಾಮ ಬೀರಿತು ಎಂಬ ವಿವರ ಇಲ್ಲಿದೆ.
ಮಂಥರೆಯ ದುಷ್ಟಬುದ್ಧಿ
ಅಯೋಧ್ಯೆಯ ಸಂಭ್ರಮವನ್ನು, ಮುಖ್ಯವಾಗಿ ಕೌಸಲ್ಯಾದೇವಿಯರು ಮಾಡುತ್ತಿದ್ದ ದಾನವನ್ನು ಕಂಡು ಕುದ್ದುಹೋದ ಮಂಥರೆ ಮಲಗಿದ್ದ ಕೈಕಯಿಯನ್ನು ಎಬ್ಬಿಸಿ ದುರ್ಬೋಧನೆ ಮಾಡುವ ಪ್ರಸಂಗದ ವಿವರಣೆ.
ಅಯೋಧ್ಯೆಯ ಸಂಭ್ರಮ
ರಾಮಪಟ್ಟಾಭಿಷೇಕಕ್ಕೆ ಸಮಗ್ರ ಅಯೋಧ್ಯೆ ಎಷ್ಟು ಸಂಭ್ರಮದಿಂದ ಸಿದ್ಧವಾಗಿತ್ತು, ಸ್ವಯಂ ಶ್ರೀರಾಮರು ವಸಿಷ್ಠರ ಆದೇಶದಂತೆ ಯಾವೆಲ್ಲ ಸತ್ಕರ್ಮಗಳನ್ನು ಮಾಡಿದ್ದರು ಎನ್ನುವದರ ಚಿತ್ರಣ ಇಲ್ಲಿದೆ.
ದಶರಥರ ಅಂತರಂಗ, ರಾಮನ ದೀಕ್ಷೆ
ದಶರಥರು ಭರತನಿಲ್ಲದಿದ್ದಾಗ ರಾಜ್ಯಾಭಿಷೇಕವನ್ನು ಮಾಡಿದರು ಎಂಬ ಆಧುನಿಕರ ಆಕ್ಷೇಪಕ್ಕೆ ಉತ್ತರದೊಂದಿಗೆ ಶ್ರೀರಾಮಸೀತೆಯರು ಪಟ್ಟಾಭಿಷೇಕಕ್ಕೆ ದೀಕ್ಷಿತರಾದ ವಿವರವಿದೆ.
ಶ್ರೀರಾಮನಿಗೆ ಉಪದೇಶ
ದಶರಥರು ಸಪ್ತದ್ವೀಪವತಿಯಾದ ಭೂಮಿಗೆ ಒಡೆಯ ಎಂದು ಕೇಳುತ್ತೇವೆ, ರಾವಣನೂ ಸಾಮಂತನಾಗಿದ್ದನೇ? ಜನಕಾದಿಗಳ ಜೊತೆಯಲ್ಲಿ ಹೇಗೆ ಸಂಬಂದವಿತ್ತು?
ಸಭೆಯ ನಿರ್ಣಯ
ಸಮಗ್ರ ಸಭೆ, ರಾಮಚಂದ್ರ ಯುವರಾಜನಾಗಲಿ ಎಂದು ಅನುಮೋದಿಸಿದರೆ, ಸ್ವಯಂ ದಶರಥ ಮಹಾರಾಜರು ಅವರೆಲ್ಲರಿಗೆ ಪ್ರಶ್ನೆ ಕೇಳುತ್ತಾರೆ — ನಾನು ಧರ್ಮದಿಂದ ಪಾಲನೆ ಮಾಡುತ್ತಿರುವಾಗ ಯುವರಾಜನ ಆವಶ್ಯಕತೆ ಏನಿದೆ. ಎಂದು ಆಗ ಸಭೆಯಲ್ಲಿದ್ದ ಸಾಮಂತ ರಾಜರಿಂದಾರಂಭಿಸಿ ನಗರ-ಗ್ರಾಮಮುಖ್ಯಸ್ಥರವೆರೆಗೆ ಜನರು ನೀಡುವ ಅದ್ಭುತ ಉತ್ತರಗಳ ಸಂಕಲನ ಇಲ್ಲಿದೆ.
ದಶರಥರ ಮಹಾಸಭೆ
ರಾಜ ಮಹಾರಾಜರ ಆಳ್ವಿಕೆ ಎಷ್ಟು ಶ್ರೇಷ್ಠವಾಗಿರುತ್ತಿತ್ತು ಎಂದು ಮನಗಾಣಿಸಿ, ದಶರಥ ಮಹಾರಾಜರ ಬಗೆಗಿನ ಗೌರವವನ್ನು ನೂರ್ಮಡಿ ಮಾಡುವ ಭಾಗ.
ಶ್ರೀರಾಮ ಗುಣಾಭಿರಾಮ
ನಮ್ಮ ಸ್ವಾಮಿಯ ಗುಣಚಿಂತನೆ. ಕೇಳಿಯೇ ಆನಂದಿಸಬೇಕಾದ ಭಾಗ.
ರಾಜಪದವಿಯ ಅರ್ಹತೆ
ರಾಜನಾಗಬೇಕಾದರೆ ಇರಬೇಕಾದ ಅರ್ಹತೆಗಳೇನು, ಶ್ರೀರಾಮನಲ್ಲಿ ಅವು ಇದ್ದವೆ, ಆ ಗುಣಗಳ ಪರೀಕ್ಷೆಯನ್ನು ಹಿಂದಿನ ಕಾಲದಲ್ಲಿ ಹೇಗೆ ನಿರ್ಣಯಿಸುತ್ತಿದ್ದರು ಎಂಬ ಅಪರೂಪದ ವಿಷಯದ ನಿರೂಪಣೆ ಇಲ್ಲಿದೆ.
ಶ್ರೀರಾಮ ಸೀತೆಯರ ದಾಂಪತ್ಯ
ಪರಮ ಸಂಭ್ರಮದಿಂದ ರಾಜ-ರಾಜಪತ್ನಿಯರು ತಮ್ಮ ಸೊಸೆಯಂದರನ್ನು ಮನೆ ತುಂಬಿಸಿಕೊಂಡದ್ದು, ಶ್ರೀರಾಮಚಂದ್ರ ರಾಜ್ಯದ ಕಾರ್ಯಗಳನ್ನು ನಿರ್ವಹಿಸುತ್ತಿದ್ದ ರೀತಿ, ಸಾಟಿಯಿಲ್ಲದ ಸೀತಾ ರಾಮರ ಪ್ರೇಮದ ಕುರಿತು ನಾವಿಲ್ಲ ಕೇಳುತ್ತೇವೆ. ಶ್ರೀಮದಾಚಾರ್ಯರು ರಾಮಕಥೆಯ ಕುರಿತು ಹೇಳಿದ ಪರಮಾದ್ಭುತ ತತ್ವಗಳ ಚಿಂತನೆಯೊಂದಿಗೆ.
ರಾಮ-ಪರಶುರಾಮ ನಿರ್ಣಯ
ರಾಮ ಪರಶುರಾಮರಿಬ್ಬರೂ ವಿಷ್ಣುವಿನ ಅವತಾರವಾದರೆ ಯುದ್ಧ ಹೇಗಾಗಲು ಸಾಧ್ಯ, ಒಬ್ಬರು ಸೋತು ಒಬ್ಬರು ಗೆಲ್ಲಲು ಹೇಗೆ ಸಾಧ್ಯ, ಪರಶುರಾಮರ ಲೋಕಗಳನ್ನು ರಾಮದೇವರು ಸುಟ್ಟು ಹಾಕಿದರು ಎಂದರೆ ಏನರ್ಥ, ಪರಶುರಾಮರು ದೈನ್ಯಕ್ಕೊಳಗಾಗಿದ್ದು ಸತ್ಯವಲ್ಲವೇ ಎಂಬೆಲ್ಲ ಪ್ರಶ್ನೆಗಳ ಭಗವತ್ಪಾದರು ನೀಡಿದ ಉತ್ತರಗಳ ವಿವರಣೆ ಇಲ್ಲಿದೆ.
ಶ್ರೀರಾಮದೇವರ ವಿಜಯ
ಪರಶುರಾಮ ನೀಡಿದ ವೈಷ್ಣವ ಧನುಷ್ಯವನ್ನು ಅತ್ಯಂತ ಸುಲಭವಾಗಿ ಹೆದೆಯೇರಿಸಿ, ಬಾಣ ಹೂಡಿ ಪರಶುರಾಮದೇವರನ್ನು ಗೆದ್ದ ರಾಮದೇವರ ಮಹಾವಿಜಯದ ವರ್ಣನೆ ಇಲ್ಲಿದೆ.
ಪರಶುರಾಮರ ಆಗಮನ
ಅಯೋಧ್ಯೆಗೆ ಹಿಂತಿರುಗುವ ಮಾರ್ಗಮಧ್ಯದಲ್ಲಿ ಅಪಾರ ಪರಾಕ್ರಮದ ಪರಶುರಾಮದೇವರು ಆಗಮಿಸಿ ರಾಮನ ಪರೀಕ್ಷೆಗೆ ಮುಂದಾಗುವ ಘಟನೆಯ ವಿವರ ಇಲ್ಲಿದೆ.
ಮಗಳಿಗೆ ಬುದ್ಧಿಮಾತು
ಜನಕ ಮಹಾರಾಜರು ಮತ್ತು ಕುಶಧ್ವಜರು ಗಂಡನ ಮನೆಗೆ ಹೊರಟು ನಿಂತ ತಮ್ಮ ಮಕ್ಕಳಿಗೆ ಗಂಡನ ಮನೆಯಲ್ಲಿ ಹೇಗೆ ಬದುಕಬೇಕೆಂದು ತಿಳಿಸಿ ಗಂಡಂದಿರಿಗೆ ಮಕ್ಕಳನ್ನು ಒಪ್ಪಿಸುವ ಭಾಗ.
ಸೀತಾರಾಮಕಲ್ಯಾಣ
ಜಗತ್ತಿನ ತಂದೆ ತಾಯಿಗಳ ಪರಮ ಮಂಗಳ ಮದುವೆಯ ಚಿತ್ರಣ. ಕೇಳಿಯೇ ಆನಂದಿಸಬೇಕಾದ ಭಾಗ.
ವಾಗ್ದಾನ
ಮದುವೆ ಎಂದರೆ ಕೇವಲ ಒಂದು ಗಂಡು ಹೆಣ್ಣಿನ ಜೋಡಿ ಒಂದಾಗುವದಲ್ಲ. ಎರಡು ಕುಲಗಳು ಒಂದಾಗುವದು. ಸೂರ್ಯವಂಶ ಮತ್ತು ವಿದೇಹವಂಶಗಳ ಅದ್ಭುತ ಪರಿಚಯದೊಂದಿಗೆ ಜನಕ ಮಹಾರಾಜರು ದಶರಥ ಮಹಾರಾಜರಿಗೆ ಮಾಡಿದ ಮದುವೆಯ ವಾಗ್ದಾನ
ಮಿಥಿಲೆಗೆ ದಶರಥರ ಆಗಮನ
ಜನಕ ಮಹಾರಾಜರ ಆಹ್ವಾನವನ್ನು ಸ್ವೀಕರಿಸಿ ದಶರಥಮಹಾರಾಜರು ಚತುರಂಗಬಲಸಮೇತರಾಗಿ ವಸಿಷ್ಠ ವಾಮದೇವಾದಿಗಳಿಂದ ಸಹಿತರಾಗಿ ಮಿಥಿಲೆಗೆ ಬರುವ ಸಂಭ್ರಮದ ಘಟನೆಯ ಚಿತ್ರಣ.
ಸೀತಾರಮಣ
ಪರಮಾದ್ಭುತ ಸೌಂದರ್ಯದ ಸೀತಾದೇವಿಯರು ಭಕ್ತಿ, ಪ್ರೇಮ, ನಾಚಿಕೆಗಳಿಂದ ನಡೆದು ಬಂದು ಶೃಂಗಾರವಾರಿಧಿಯಾದ ಶ್ರೀರಾಮಚಂದ್ರದೇವರ ಕೊರಳಿಗೆ ಹಾರ ಹಾಕಿದ ಪರಮಮಂಗಳ ಘಟನೆಯ ಚಿತ್ರಣ ಇಲ್ಲಿದೆ. ಕೇಳಿಯೇ ಆನಂದಿಸಬೇಕಾದ ಭಾಗ.
ಧನುರ್ಭಂಗ
ಸಕಲ ಇಂದ್ರಾದಿ ದೇವತೆಗಳಿಗೂ ಎತ್ತಲಿಕ್ಕೆ ಸಾಧ್ಯವಿಲ್ಲದ, ಮಹಾಬಲಿಷ್ಠವಾದ ಶಿವಧನುಷ್ಯವನ್ನು ಐರಾವತ ಕಬ್ಬಿನ ಜಲ್ಲೆಯನ್ನು ಲೀಲೆಯಿಂದ ಮುರಿಯುವಂತೆ ರಾಮದೇವರು ಮುರಿದು ಹಾಕಿದ ರೋಮಂಚಕಾರಿ ಪ್ರಸಂಗದ ಚಿತ್ರಣ.
ಶಿವ ಧನುಷ್ಯದ ವೈಭವ
ಭೂಮಿಯ ಎಲ್ಲ ರಾಜರೂ, ರಾವಣನೂ ಸಹ ಬಂದು ಶಿವಧನುಷ್ಯವನ್ನು ಅಲ್ಲಾಡಿಸಲು ಸಾಧ್ಯವಾಗದೇ ಹೋದದ್ದು, ಪರಶಿವನ ಪರಮಪ್ರಸಾದದಿಂದಲೇ ಐದು ಸಾವಿರ ಜನ ಮಹಾಬಲಿಷ್ಠರಾದ ಕಿಂಕರರು ಅದನ್ನು ಮಹಾಪ್ರಯತ್ನದಿಂದ ಎಳೆದು ತರುತ್ತಿದ್ದದ್ದು, ಆ ಧನುಷ್ಯದ ಗಾತ್ರ, ರಾಮಚಂದ್ರನಿಗೆ ಆಯುಧಗಳ ಬಗ್ಗೆ ಇದ್ದ ಆಸಕ್ತಿ ಪ್ರೇಮ ಇವೆಲ್ಲದರ ವಿವರಣೆ ಇಲ್ಲಿದೆ.
ಸೀತಾದೇವಿಯ ಪ್ರಾದುರ್ಭಾವ
ಅಗ್ನಿ, ಜಲಗಳಲ್ಲಿ ಅವತರಿಸದೇ ಭೂಮಿಯಲ್ಲೇ ಅವತರಿಸಲು, ಹಾಗೂ ಲೋಕವಿಚಿತ್ರವಾದ ರೀತಿಯಲ್ಲಿ ಅವತರಿಸಲು ವಿಶೇಷ ಕಾರಣವಿದೆಯೇ? ಎಂಬ ಪ್ರಶ್ನೆಗಳಿಗೆ ಉತ್ತರದೊಂದಿಗೆ ಜಗದಂಬಿಕೆಯ ಪ್ರಾದುರ್ಭಾವದ ಚಿತ್ರಣ ಇಲ್ಲಿದೆ.
ಶತಾನಂದರ ಸಂಭ್ರಮ
ತಮ್ಮ ತಂದೆ ತಾಯಿಯರನ್ನು ಒಂದುಗೂಡಿಸಿದ ಶ್ರೀರಾಮಚಂದ್ರನನ್ನು ಕಂಡ ಶತಾನಂದರ ಪರಮಸಂಭ್ರಮದ ಚಿತ್ರಣ ಇಲ್ಲಿದೆ.
ಅಹಲ್ಯಾದೇವಿಯರು ನಿಜವಾಗಿಯೂ ಶಿಲೆಯಾಗಿದ್ದರೆ?
ಚೇತನ ಜಡವಾಗಲು ಸಾಧ್ಯವಿಲ್ಲ, ಜಡ ಚೇತನವಾಗಲು ಸಾಧ್ಯವಿಲ್ಲ. ಹಾಗಾದರೆ ಅಹಲ್ಯೆ ಕಲ್ಲಾಗಿದ್ದರು ಎಂದರೆ ಏನರ್ಥ?
ಗೌತಮರ ತಪ್ಪಿಗೆ ಅಹಲ್ಯೆ ಏಕೆ ಬಲಿಪಶು?
ಗೌತಮ ಮಹರ್ಷಿಗಳು ತಮ್ಮ ಯೋಗ್ಯತೆ ಮೀರಿ ತಪಸ್ಸು ಮಾಡಿದ್ದು ಅವರ ತಪ್ಪು. ಅವರು ಮಾಡಿದ್ದಾರೆ. ಆ ಅಧಿಕ ತಪಸ್ಸಿನ ಪುಣ್ಯವನ್ನು ಅವರಿಂದ ಪಡೆಯುವದು ದೇವತೆಗಳ ಕರ್ತವ್ಯ. ಇದರ ಮಧ್ಯದಲ್ಲಿ ಅಹಲ್ಯೆ ಏಕೆ ಬಲಿಪಶು ಆಗಬೇಕು.
ಅಹಲ್ಯಾದೇವಿಯರ ಉದ್ಧಾರ
ಅಹಲ್ಯಾದೇವಿಯರು ಮಾಡಿದ ಅತ್ಯಂತ ಕಠಿಣವಾದ ತಪಸ್ಸು, ಅವರ ಮೇಲೆ ಶ್ರೀರಾಮಚಂದ್ರದೇವರು ಮಾಡಿದ ಪರಮಾನುಗ್ರಹದ ನಿರೂಪಣೆ ಇಲ್ಲಿದೆ.
ಇಂದ್ರದೇವರ ದೃಷ್ಟಿಯಿಂದ
ಇಂದ್ರದೇವರು ತಾವಾಗಿ ಅಪೇಕ್ಷೆ ಪಟ್ಟು, ಗೌತಮರ ಅಧಿಕ ಪುಣ್ಯವನ್ನು ಪಡೆಯಲು, ಶಾಪವನ್ನು ಸ್ವೀಕರಿಸಿದ್ದೇ ಹೊರತು, ಅವರನ್ನು ಶಾಸಿಸುವ ಅಧಿಕಾರ ಗೌತಮರಿಗಿಲ್ಲ ಎನ್ನುವದನ್ನು ಇಲ್ಲಿ ಸಪ್ರಮಾಣವಾಗಿ ಪ್ರತಿಪಾದಿಸಲಾಗಿದೆ.
ಇಂದ್ರ ಅಹಲ್ಯೆಯರಿಗೆ ಶಾಪ
ಗಂಡ ಹೆಂಡತಿಯರಲ್ಲೊಬ್ಬರು ಲೈಂಗಿಕ ಅಪರಾಧ ಮಾಡಿದಾಗ, ತಪ್ಪಿನ ಎಚ್ಚರ ಇದ್ದಾಗ ಯಾವ ರೀತಿ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವ ಶ್ರೀಮದಾಚಾರ್ಯರ ನಿರ್ಣಯದ ವಿವರಣೆ ಇಲ್ಲಿದೆ.
ಅಹಲ್ಯಾದೇವಿಯರ ಜನ್ಮ
ಅಹಲ್ಯಾದೇವಿಯರ ಜನ್ಮ, ರೂಪ, ಹೆಸರಿನ ಅರ್ಥ, ಮದುವೆಗಳ ವಿವರ.
ಯಜ್ಞರಕ್ಷಣೆ
ಮಾರೀಚನನ್ನು ಹಿಮ್ಮೆಟ್ಟಿಸಿ ಸುಬಾಹು ಮೊದಲಾದ ಸಕಲ ರಾಕ್ಷಸರನ್ನು ಕೊಂದು ವಿಶ್ವಾಮಿತ್ರರ ಯಜ್ಞವನ್ನು ರಾಮಚಂದ್ರ ರಕ್ಷಣೆ ಮಾಡಿದ ಪರಮಮಂಗಳಘಟನೆಯ ಚಿತ್ರಣ.
ಸಿದ್ಧಾಶ್ರಮಕ್ಕೇಕೆ ಅಷ್ಟು ಮಹತ್ತ್ವ
ವಿಶ್ವಾಮಿತ್ರರು ರಾಮಲಕ್ಷ್ಮಣರನ್ನು ಸಿದ್ಧಾಶ್ರಮಕ್ಕೆ ಕರೆದುಕೊಂಡು ಬಂದು ಆ ಆಶ್ರಮಕ್ಕೆ ಆ ಹೆಸರು ಬರಲು ಕಾರಣವೇನು ಎನ್ನುವದನ್ನು ತಿಳಿಸುತ್ತ ವಾಮನದೇವರ ಕಥೆಯನ್ನು ಅದ್ಭುತವಾಗಿ ಹೇಳುತ್ತಾರೆ. ಆ ಪ್ರಸಂಗದ ವಿವರಣೆ ಇಲ್ಲಿದೆ.
ಅಸ್ತ್ರಗಳ ಪ್ರಾಪ್ತಿ
ಅನೇಕ ಸಾವಿರ ವರ್ಷಗಳ ತಪಸ್ಸಿನಿಂದ ಪಡೆದಿದ್ದ ಸಕಲ ಅಸ್ತ್ರಗಳನ್ನೂ ವಿಶ್ವಾಮಿತ್ರರು ಜಗದೊಡೆಯನಿಗೆ ಒಪ್ಪಿಸಿಕೊಂಡ ಪರಿ
ತಾಟಕಾ ಸಂಹಾರ
ಅನಂಗಾಶ್ರಮ ಎಂಬ ಅಪೂರ್ವ ಆಶ್ರಮದ ವಿವರ, ಮತ್ತು ತಾಟಕೆಯನ್ನು ರಾಮ ಕೊಂದು ಹಾಕಿದ ಘಟನೆಗಳ ವಿವರ.
ವಿಶ್ವಾಮಿತ್ರರ ಉಪದೇಶ
ಜಗದೊಡೆಯನಿಗೆ ತಮ್ಮಲ್ಲಿದ್ದ ಅಸ್ತ್ರವಿದ್ಯೆಯನ್ನು ವಿಶ್ವಾಮಿತ್ರರು ಸಮರ್ಪಿಸಿಕೊಂಡ ಘಟನೆಯ ವಿವರ.
ವಿಶ್ವಾಮಿತ್ರರ ಆಗಮನ
ಯಜ್ಞರಕ್ಷಣೆಗಾಗಿ ವಿಶ್ವಾಮಿತ್ರರು ರಾಮಚಂದ್ರನನ್ನು ಕರೆದೊಯ್ಯಲು ಬರುವ ಪ್ರಸಂಗದ ವಿವರಣೆ.
ರಾಮ-ಕೃಷ್ಣಾವತಾರಗಳ ಬಾಲ್ಯ
ರಾಮನ ಬಾಲ್ಯ ಕೃಷ್ಣನಂತೇಕೆ ಇಲ್ಲ ಎಂದು ಅನೇಕರನ್ನು ಕಾಡುವ ಪ್ರಶ್ನೆ. ಬಾಲ್ಯವಷ್ಟೇ ಅಲ್ಲ, ರಾಮ ಏಕಪತ್ನೀವ್ರತಸ್ಥ. ಶ್ರೀಕೃಷ್ಣ ಹದಿನಾರು ಸಾವಿರ ಪತ್ನಿಯರ ನಲ್ಲನಾದ. ಈ ಕುರಿತ ಚರ್ಚೆ ಇಲ್ಲಿದೆ.
ರಾಮದೇವರ ಬಾಲ್ಯ
ರಾಮ ಲಕ್ಷ್ಮಣ, ಭರತ ಶತ್ರುಘ್ನರು ಬೆಳೆದ ಕ್ರಮ, ಅವರ ಮಧ್ಯದಲ್ಲಿದ್ದ ಅಪೂರ್ವ ಬಾಂಧವ್ಯ, ಅವರಿಂದ ಸಕಲರಿಗೂ ದೊರೆಯುತ್ತಿದ್ದ ಪರಮಾನಂದದ ಚಿತ್ರಣ ಇಲ್ಲಿದೆ.
ಲಕ್ಷ್ಮಣ ದೊಡ್ಡವನೋ, ಭರತ ದೊಡ್ಡವನೋ?
ರಾಮನ ತಮ್ಮಂದಿರಲ್ಲಿ ಲಕ್ಷ್ಮಣನೇ ದೊಡ್ಡವನು, ಭರತನಲ್ಲ, ಲಕ್ಷ್ಮಣ ಶತ್ರುಘ್ನರು ಅವಳಿ ಮಕ್ಕಳಲ್ಲ, ನಾಲ್ಕು ಜನರು ಒಂದೂವರೆ ವರ್ಷದ ಅವಧಿಯಲ್ಲಿ ಜನಿಸಿದ್ದು, ಮೂರು ದಿವಸಗಳಲ್ಲಿ ಅಲ್ಲ ಎಂಬೆಲ್ಲ ವಿಷಯಗಳ ನಿರೂಪಣೆ ಇಲ್ಲಿದೆ.
ಶ್ರೀರಾಮಾವತಾರ
ಅನಂತಗುಣಪೂರ್ಣನಾದ ಶ್ರೀಮನ್ನಾರಾಯಣ ಶ್ರೀರಾಮಚಂದ್ರನಾಗಿ ದಶರಥ ಕೌಸಲ್ಯೆಯರ ಮಗನಾಗಿ ಅವತರಿಸಿ ಬಂದ ಪರಮಪವಿತ್ರ ಘಟನೆಯ ಚಿತ್ರಣ. ರಾಮ ಎಂಬ ಶಬ್ದದ ಅರ್ಥದ ವಿವರಣದೊಂದಿಗೆ.
ದೇವತೆಗಳ ಅವತಾರ
ಭಗವಂತನ ಸೇವೆಗೆ ಸಕಲ ದೇವತೆಗಳೂ ಕಪಿಗಳಾಗಿ ಹುಟ್ಟಿಬರುವ ಘಟನೆಯನ್ನಿಲ್ಲಿ ಕೇಳುತ್ತೇವೆ.
ಪುತ್ರಕಾಮೇಷ್ಟಿ
ಕ್ಷೀರಸಾಗರದಲ್ಲಿ ದೇವತೆಗಳು ಮಾಡಿದ ಪ್ರಾರ್ಥನೆ, ಭೂಲೋಕದಲ್ಲಿ ದಶರಥರು ಮಾಡಿದ ಪುತ್ರಕಾಮೇಷ್ಟಿಯ ವರ್ಣನೆ
ಯಜ್ಞ ದಾನಗಳ ವೈಭವ
ದೇವತೆಗಳು ಸಾಕ್ಷಾತ್ತಾಗಿ ಬಂದು ಹವಿಸ್ಸನ್ನು ಸ್ವೀಕರಿಸಿದ ಹಾಗೂ ದಶರಥ ಮಹಾರಾಜರು ಮಾಡಿದ ಸಮಗ್ರ ಭೂಮಂಡಲದ ದಾನದ ವೈಭವದ ಚಿತ್ರಣ ಇಲ್ಲಿದೆ.
2020 ಶಾರ್ವರೀ ಸಂವತ್ಸರದ ಪಂಚಾಂಗಶ್ರವಣ
ಶಾರ್ವರೀ ಸಂವತ್ಸರ ನಿಶ್ಚಿತವಾಗಿ ಉತ್ತಮ ಫಲಗಳನ್ನು ನೀಡುತ್ತದೆ. ಖಾಯಿಲೆ ಪರಿಹಾರವಾಗುವ ಸ್ಪಷ್ಟ ಸೂಚನೆ ಇದೆ. ಮಳೆ, ಬೆಳೆಗಳಿಗೆ ಕೊರತೆ ಇಲ್ಲ,
ಯಜ್ಞದ ಸಿದ್ಧತೆ
ಒಂದು ಯಜ್ಞ ನಡೆಯಬೇಕಾದರೆ ಬ್ರಾಹ್ಮಣರಿಂದ ಆರಂಭಿಸಿ ಶೂದ್ರರವರೆಗಿನ ಸಮಗ್ರ ಜನತೆ ಯಾವ ರೀತಿ ಪಾಲ್ಗೊಳ್ಳಬೇಕು, ಯಜ್ಞ ಮಾಡುವ ರಾಜ ಅವರೆಲ್ಲರನ್ನು ಯಾವ ರೀತಿ ಕಾಣಬೇಕು, ದಶರಥಮಹಾರಾಜರು ಯಾವ ರೀತಿ ನಡೆಸಿಕೊಂಡರು ಎಂಬ ವಿಷಯದ ಕುರಿತು ನಾವಿಲ್ಲಿ ಕೇಳುತ್ತೇವೆ. ಆಗಿನ ಕಾಲದಲ್ಲಿ ಜನರ ಮಧ್ಯದಲ್ಲಿದ್ದ ಬಾಂಧವ್ಯ ಎಷ್ಟು ಅದ್ಭುತವಾಗಿತ್ತು ಎನ್ನುವ ವಿಷಯ ಇಲ್ಲಿ ಮನವರಿಕೆಯಾಗುತ್ತದೆ.
ಅಯೋಧ್ಯೆಗೆ ಋಷ್ಯಶೃಂಗರ ಆಗಮನ
ಸ್ವಯಂ ದಶರಥ ಮಹಾರಾಜರು ಗೆಳೆಯ ರೋಮಪಾದನ ಅಂಗದೇಶಕ್ಕೆ ಆಗಮಿಸಿ ಋಷ್ಯಶೃಂಗರನ್ನು ಅಯೋಧ್ಯೆಗೆ ಬರಲು ಪ್ರಾರ್ಥಿಸಿದ ಘಟನೆಯ ಚಿತ್ರಣ. ನಮ್ಮ ಜೀವನವನ್ನು ಬಂಗಾರಗೊಳಿಸುವ ಪಾಠಗಳೊಂದಿಗೆ.
ಮಳೆ ತರಿಸಿದ ಋಷ್ಯಶೃಂಗರು
ವೃದ್ಧೆ ಉಪಾಯದಿಂದ ಋಷ್ಯಶೃಂಗರನ್ನು ಅಂಗದೇಶಕ್ಕೆ ಕರೆತಂದದ್ದು, ಅವರು ಕಾಲಿಟ್ಟ ತಕ್ಷಣ ಮಳೆ ಸುರಿಯಲಾರಂಭಿಸಿದ್ದು, ಆ ಮಳೆಯನ್ನು ರಾಜನಿಂದಾರಂಭಿಸಿ ಪಶು ಪಕ್ಷಿ ಪ್ರಾಣಿಗಳವರೆಗೆ ಎಲ್ಲರೂ ಆಸ್ವಾದಿಸಿದ್ದು, ರೋಮಪಾದ ನಡೆದ ವೃತ್ತಾಂತವನ್ನೆಲ್ಲ ಋಷ್ಯಶೃಂಗರಿಗೆ ನಿವೇದಿಸಿಕೊಂಡು ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದ್ದು, ಹಾಗೂ ಸಿಟ್ಟಿಗೆ ಬಂದಿದ್ದ ವಿಭಾಂಡಕರನ್ನು ರೋಮಪಾದ ಶಾಂತಗೊಳಿಸಿದ ಅದ್ಭುತ ಕ್ರಮ ಇವೆಲ್ಲವನ್ನೂ ಇಲ್ಲಿ ಕೇಳುತ್ತೇವೆ.
ವೇಶ್ಯೆಯರ ಸಾಹಸ
ಋಷ್ಯಶೃಂಗರನ್ನು ತಮ್ಮ ರಾಜ್ಯಕ್ಕೆ ಕರೆತರಲು ಮುದಿ ವೇಶ್ಯೆಯೊಬ್ಬಳು ಮಾಡಿದ ಸಾಹಸ, ಋಷ್ಯಶೃಂಗರ ಮುಗ್ಧತೆಯ ಚಿತ್ರಣ ಇಲ್ಲಿದೆ.
ಋಷ್ಯಶೃಂಗರ ಜನ್ಮ
ಋಷಿಗಳು ವಿಚಿತ್ರವಾದ ರೀತಿಯಲ್ಲಿ ಮಕ್ಕಳನ್ನು ಪಡೆಯುವದನ್ನು ನಾವು ಪುರಾಣಗಳಲ್ಲಿ ತಿಳಿಯುತ್ತೇವೆ. ಋಷಿಗಳು ಕಾಮಾಂಧರಲ್ಲ ಎನ್ನುವ ತತ್ವದ ನಿರೂಪಣೆಯೊಂದಿಗೆ ಅವರ ಅಪಾರ ಇಂದ್ರಿಯನಿಗ್ರಹದ ಕುರಿತ ಚಿಂತನೆ ಇಲ್ಲಿದೆ.
ಯಜ್ಞ ಮಾಡುವ ನಿರ್ಧಾರ
ಇಡಿಯ ರಾಷ್ಟ್ರವನ್ನು ಸಂಪದ್-ಭರಿತವಾಗಿರಿಸಿದ್ದ ದಶರಥ ಮಹಾರಾಜರಿಗೆ, ಅವರ ಮತ್ತು ಅವರ ಪತ್ನಿಯರ ದೇಹದಲ್ಲಿ ಯಾವ ದೋಷವಿಲ್ಲದಿದ್ದರೂ ಏಕೆ ಮಕ್ಕಳಾಗಿರಲಿಲ್ಲ? ಯಜ್ಞವನ್ನು ಮಾಡಿ ಮಕ್ಕಳನ್ನು ಪಡೆಯುವ ಆವಶ್ಯಕತೆ ಏನಿತ್ತು? ಹಾಗೂ ದಶರಥ ಮಹಾರಾಜರಿಗೆ ಶಾಂತಾ ಎಂಬ ಮಗಳಿದ್ದಳೇ? ಎಂಬ ಪ್ರಶ್ನೆಗಳಿಗೆ ಉತ್ತರ ಪಡೆಯುವದರೊಂದಿಗೆ ಅವರು ಅಶ್ವಮೇಧ ಯಜ್ಞವನ್ನು ಮಾಡಲು ನಿರ್ಧರಿಸಿದ ವಿವರವನ್ನು ಕೇಳುತ್ತೇವೆ.
ಹೇಗಿತ್ತು ಅಂದಿನ ಅಯೋಧ್ಯೆ
ಹಿಂದಿನವರೆಲ್ಲ ದಡ್ಡರು, ಇಂದಿನ ನಾವು ತುಂಬ ಅಭಿವೃದ್ಧಿ ಹೊಂದಿದವರು ಎಂಬ ಭ್ರಮೆ ಅನೇಕರಿಗುಂಟು. ಲಕ್ಷಲಕ್ಷ ವರ್ಷಗಳ ಹಿಂದೆ ಇದ್ದಂತಹ ಅಯೋಧ್ಯಾ ನಗರ ಎಷ್ಟು ಅದ್ಭುತವಾಗಿ ವೈಜ್ಞಾನಿಕವಾಗಿ ನಿರ್ಮಾಣಗೊಂಡಿತ್ತು ಎನ್ನುವದನ್ನು ವಾಲ್ಮೀಕಿ ಋಷಿಗಳು ರಾಮಾಯಣದಲ್ಲಿ ದಾಖಲಿಸಿದ್ದಾರೆ. ರಸ್ತೆಗಳು, ಕಟ್ಟಡಗಳು, ಸೌಲಭ್ಯಗಳು, ಸುರಕ್ಷತೆ ಮುಂತಾದ ಎಲ್ಲ ದೃಷ್ಟಿಗಳಿಂದಲೂ ಪರಿಪೂರ್ಣವಾದ ನಗರ ಹೇಗಿರಬೇಕು ಎನ್ನುವದನ್ನು ನಮಗೆ ಮನದಟ್ಟು ಮಾಡಿಸುತ್ತಾರೆ.
ಕುಶ ಲವರ ರಾಮಾಯಣ ಗಾಯನ
ಕುಶಲವರಿಬ್ಬರೂ ಸಮಗ್ರ ರಾಮಾಯಣವನ್ನು ಋಷಿಗಳ ಸಭೆಯಲ್ಲಿ ಹಾಡಿದಾದ ಆ ಮುನಿಗಳೆಲ್ಲರೂ ತಮ್ಮ ಕಣ್ಣ ಮುಂದೆಯೇ ರಾಮಾಯಣ ನಡೆಯುತ್ತಿದೆ ಎನ್ನುವಂತೆ ಆಸ್ವಾದಿಸುತ್ತಾರೆ. ಗುರುಗಳ ಆಜ್ಙೆಯಂತೆ ಗ್ರಾಮಗ್ರಾಮಗಳಲ್ಲಿ ರಾಮಾಯಣದ ಗಾನವನ್ನು ಮಾಡುವಾಗ, ಸ್ವಯಂ ಶ್ರೀರಾಮಚಂದ್ರನೂ ಅದನ್ನು ಕೇಳಿ, ತನ್ನ ಸಭೆಗೆ ಕರೆಯಿಸಿ ಆ ತನ್ನ ಮಕ್ಕಳಿಂದ ರಾಮಾಯಣವನ್ನು ಶ್ರವಣ ಮಾಡಿದ ಘಟನೆಯ ವಿವರ ಇಲ್ಲಿದೆ.
ರಾಮಾಯಣದ ರಚನೆ
ನಮ್ಮ ಪ್ರಾಚೀನರು ಯಾವ ಕ್ರಮದಲ್ಲಿ ಗ್ರಂಥ ರಚನೆ ಮಾಡುತ್ತಿದ್ದರು, ಏನೆಲ್ಲ ನಿಯಮಗಳನ್ನು ಅನುಸರಿಸುತ್ತಿದ್ದರು ಎಂಬ ಮಹತ್ತ್ವದ ತತ್ವಗಳ ಅನಾವರಣ ಇಲ್ಲಿದೆ. ಲಕ್ಷ ಲಕ್ಷ ವರ್ಷಗಳ ಹಿಂದೆ ರಚಿತವಾಗಿ ಸೂರ್ಯ ಚಂದ್ರರಿರುವವರೆಗೆ ಉಳಿಯಲಿರುವ ಶ್ರೀಮದ್ ರಾಮಾಯಣ ನಿರ್ಮಾಣವಾದ ರೋಮಾಂಚಕಾರಿ ಘಟನೆಯ ವಿವರದೊಂದಿಗೆ.
ಶೋಕ ಶ್ಲೋಕವಾದ ಕಥೆ
ಜಗತ್ತಿನ ಮೊಟ್ಟ ಮೊದಲ ಶ್ಲೋಕ ನಿರ್ಮಾಣವಾದ ಕ್ರಮದ ವಿವರಣೆ. ವೇದಗಳಲ್ಲಿ ಶ್ಲೋಕವಿದ್ದ ಬಳಿಕ ಇದು ಮೊಟ್ಟ ಮೊದಲ ಶ್ಲೋಕ ಹೇಗಾಯಿತು ಎಂಬ ಪ್ರಶ್ನೆಯ ಉತ್ತರದೊಂದಿಗೆ.
ಸಂಕ್ಷಿಪ್ತ ರಾಮಾಯಣ
ನಾರದರು ವಾಲ್ಮೀಕಿಋಷಿಗಳಿಗೆ ಉಪದೇಶ ಮಾಡಿದ ಸಮಗ್ರ ರಾಮಾಯಣದ ಅದ್ಭುತ ಪಕ್ಷಿನೋಟ.
ಶ್ರೀರಾಮನೆಂಬ ಅದ್ಭುತ
ಶ್ರೀರಾಮನ ಕುರಿತು ಏಕೆ ತಿಳಿಯಬೇಕು, ಮನಸ್ಸಿನಲ್ಲಿ ರಾಮನನ್ನು ಏಕೆ ಆರಾಧಿಸಬೇಕು, ಮಂದಿರ ಕಟ್ಟಿ ಏಕೆ ಪೂಜಿಸಬೇಕು ಎಂಬೆಲ್ಲ ಪ್ರಶ್ನೆಗಳಿಗೆ ರಾಮನ ಕುರಿತ ರಾಮಾಯಣ ಮಹಾಗ್ರಂಥವನ್ನು ಬರೆದ ವಾಲ್ಮೀಕಿಋಷಿಗಳು ಪ್ರಥಮಾಧ್ಯಾಯದಲ್ಲಿಯೇ ನೀಡಿದ ಉತ್ತರಗಳ ಸಂಕಲನ.
ದ್ರೌಪದಿಗೆ ಶ್ರೀಕೃಷ್ಣ ವಸ್ತ್ರಗಳನ್ನು ಹೇಗೆ ನೀಡಿದ್ದು? ಹಾಗೂ ಈ ಘಟನೆಯ ಆಧ್ಯಾತ್ಮಿಕ ಮುಖವೇನು?
ನಾವು ಸಿನಿಮಾ ನಾಟಕಗಳಲ್ಲಿ ನೋಡಿದಂತೆ ಕೃಷ್ಣ ಮೇಲೆ ನಿಂತಿರುತ್ತಾನೆ, ಅವನ ಕೈಯಿಂದ ಸೀರೆ ಬರುತ್ತಿರುತ್ತದೆ. ಘಟನೆ ಈ ರೀತಿ ನಡೆಯಲು ಸಾಧ್ಯವೇ ಇಲ್ಲ ಅಲ್ಲವೇ. ದೇವರು ದ್ರೌಪದಿಗೆ ಹೇಗೆ ಸೀರೆಯನ್ನು ನೀಡಿದ ಎನ್ನುವದನ್ನು ತಿಳಿಸಿ.
ತಾಪತ್ರಯಗಳ ಹೊಡೆತ
ಮನುಷ್ಯನಿಗೆ ತೊಂದರೆಗಳು ಏಕಾಗಿ ಉಂಟಾಗುತ್ತವೆ, ಉಂಟಾಗುವ ತೊಂದರೆಗಳಿಂದ ಪಾರಾಗುವ ರೀತಿ ಎನ್ನುವದರ ವಿವರಣೆ
ಸಕಲ ಪಾಪಗಳನ್ನೂ ಕಳೆಯುವ ಒಂದೇ ಪ್ರಾಯಶ್ಚಿತ್ತ
ಶ್ರೀ ಹೃಷೀಕೇಶತೀರ್ಥಸಂಸ್ಥಾನದ (ಶ್ರೀ ಪಲಿಮಾರು ಮಠ) ಭೂಷಾಮಣಿಗಳಾದ ಶ್ರೀ ರಘುವರ್ಯತೀರ್ಥಶ್ರೀಪಾದಂಗಳವರು ಒಂದು ಅದ್ಭುತವಾದ ಮಧ್ವಾಷ್ಟಕವನ್ನು ರಚಿಸಿದ್ದಾರೆ. ಅದರಲ್ಲಿ ಶ್ರೀಮದಾಚಾರ್ಯರ ಚರಿತ್ರೆಯ ಮಹಿಮೆಯನ್ನು ನಮಗೆ ಅರ್ಥ ಮಾಡಿಸುವ ಒಂದು ಶ್ಲೋಕದ ಅರ್ಥವಿವರಣೆ ಇಲ್ಲಿದೆ.
ಶನೈಶ್ಚರ ಸ್ತೋತ್ರ
ಭಾವಿಸಮೀರ ಶ್ರೀ ವಾದಿರಾಜಗುರುಸಾರ್ವಭೌಮರು ರಚಿಸಿರುವ ಶನಿದೋಷವನ್ನು ಪರಿಹಾರ ಮಾಡುವ ಶನಿಸ್ತೋತ್ರ
ಉಡುಪಿ ಕೃಷ್ಣನ ಶ್ಲೋಕ
ಸರ್ವವಿಘ್ನನಿವಾರಕನಾದ ಉಡುಪಿಯ ಶ್ರೀಕೃಷ್ಣನ ರೂಪವನ್ನು ಸದಾ ನೆನೆಯಲು ಭಾವಿಸಮೀರ ಶ್ರೀಮದ್ವಾದಿರಾಜತೀರ್ಥಗುರುಸಾರ್ವಭೌಮರು ರಚಿಸಿ ನೀಡಿರುವ ಶ್ಲೋಕದ ಪಠಣ ಮತ್ತು ಅರ್ಥ.
ಧನುರ್ಮಾಸದ ಕುರಿತ ಪ್ರಶ್ನೆಗಳು
ಧನುರ್ಮಾಸದ ಪೂಜೆ ಸ್ನಾನ ಇತ್ಯಾದಿಗಳ ಕುರಿತ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ.
ಪೂರ್ಣಪ್ರಜ್ಞ ಎಂಬ ಹೆಸರಿನ ಅರ್ಥ
ಆಚಾರ್ಯರು ಸಂನ್ಯಾಸ ಸ್ವೀಕರಿಸಿದಾಗ ಅವರಿಗೆ ಶ್ರೀ ಅಚ್ಯುತಪ್ರೇಕ್ಷಾಚಾರ್ಯರು ನೀಡಿದ ಹೆಸರು ಪೂರ್ಣಪ್ರಜ್ಞ ಎಂದು. ಆ ಹೆಸರಿನ ಅರ್ಥ ಮತ್ತು ಹಿನ್ನೆಲೆಯ ವಿವರಣೆ ಇಲ್ಲಿದೆ.
ಸಂನ್ಯಾಸ ಸ್ವೀಕಾರ
ಶ್ರೀಮದಾಚಾರ್ಯರು ಶ್ರೀ ಅಚ್ಯುತಪ್ರೇಕ್ಷಾಚಾರ್ಯರಿಂದ ಸಂನ್ಯಾಸವನ್ನು ಸ್ವೀಕರಿಸಿದ ಪರಮಮಂಗಳ ಘಟನೆಯ ಚಿತ್ರಣ
ಸಂನ್ಯಾಸ ಸ್ವೀಕರಿಸುವ ಕ್ರಮ
ಸಂನ್ಯಾಸವನ್ನು ಸ್ವೀಕರಿಸುವ ವಿಧಿ ವಿಧಾನಗಳ ಕುರಿತು ಶ್ರೀಮನ್ ಮಧ್ವಾನುಜಾಚಾರ್ಯರು ತಿಳಿಸಿದ ಅಪೂರ್ವ ವಿಷಯಗಳ ವಿವರಣೆ.
ತಾಯಿಯ ಒಪ್ಪಿಗೆ
ಮತ್ತೊಬ್ಬ ಮಗ ಹುಟ್ಟಿದ ಬಳಿಕವೂ ವಾಸುದೇವನಿಗೆ ಸಂನ್ಯಾಸ ಸ್ವೀಕರಿಸಲು ಒಪ್ಪಿಗೆ ನೀಡದ ತಾಯಿಯನ್ನು ಒಪ್ಪಿಸಿದ ಘಟನೆಯ ಚಿತ್ರಣ ಇಲ್ಲಿದೆ.
ಶ್ರೀ ವಿಷ್ಣುತೀರ್ಥರ ಜನನ
ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರ ಪೂರ್ವಾಶ್ರಮದ ಜವಾಬ್ದಾರಿಯನ್ನೂ, ಆಚಾರ್ಯರ ಸಿದ್ಧಾಂತವನ್ನು ಪುನಃ ಪ್ರತಿಷ್ಠಾಪನೆ ಮಾಡುವ ಮಹತ್ತರ ಜವಾಬ್ದಾರಿಯನ್ನೂ ಸ್ವೀಕರಿಸಿ ನಿರ್ವಹಿಸಲೆಂದೆ ಅನೇಕ ಜನ್ಮಗಳಿಂದ ತಪಸ್ಸು ಮಾಡುತ್ತಿದ್ದ ಋಷಿವರ್ಯರು ಆಚಾರ್ಯರ ಅನುಜನಾಗಿ ಅವತಾರ ಮಾಡಿಬಂದ ಪರಮಮಂಗಳ ಘಟನೆಯ ಚಿತ್ರಣ ಇಲ್ಲಿದೆ.
ಶ್ರೀ ಮಧ್ಯಗೇಹಾರ್ಯರ ಅರೆ ಮನಸ್ಸಿನ ಒಪ್ಪಿಗೆ
“ನೀನು ಸಂನ್ಯಾಸ ತೆಗೆದುಕೊಂಡರೆ ನಾನು ಸಾಯುತ್ತೇನೆ” ಎಂದು ಮಧ್ಯಗೇಹಾರ್ಯರು ಮಗನನ್ನು ಬೆದರಿಸುತ್ತಾರೆ, ಆ ಮಾತಿಗೆ ಅದ್ಭುತ ಉತ್ತರ ನೀಡುವ ವಾಸುದೇವ, ಸಾವಿನ ಮಾತಾಡಿದ ತಂದೆಯ ಬಾಯಿಂದಲೆ, “ನಿನ್ನ ವಿರಹದ ದುಃಖವನ್ನು ನಾನು ತಡೆಯಬಲ್ಲೆ” ಎಂಬ ಅಂತರಂಗದ ಮಾತನ್ನು ಹೊರತರಿಸುತ್ತಾನೆ. ಆ ಘಟನೆಯ ಚಿತ್ರಣ ಇಲ್ಲಿದೆ.
ತಂದೆ ತಾಯಿಯರಿಗೆ ಆದ ಆಘಾತ
ವಾಸುದೇವ ಸಂನ್ಯಾಸ ತೆಗೆದುಕೊಳ್ಳುವ ನಿರ್ಧಾರವನ್ನು ಮಾಡಿ ಅಚ್ಯುತಪ್ರೇಕ್ಷಾಚಾರ್ಯರ ಸೇವೆಯನ್ನು ಮಾಡಲಾರಂಭಿಸಿದ್ದು ಮಧ್ಯಗೇಹಾರ್ಯ ದಂಪತಿಗಳಿಗೆ ಆಘಾತವನ್ನುಂಟು ಮಾಡುತ್ತದೆ. ಮಗನನ್ನು ತಮ್ಮ ಬಳಿಯೇ ಉಳಿಸಿಕೊಳ್ಳಲು ಅವರು ಮಾಡಿದ ಪ್ರಯತ್ನಗಳ ಕುರಿತು ನಾವಿಲ್ಲಿ ಕೇಳುತ್ತೇವೆ.
ಆಚಾರ್ಯರ ವೇದವ್ಯಾಖ್ಯಾನದ ಕ್ರಮ
ನಿಮ್ಮ ಶ್ರೀಮದಾಚಾರ್ಯರು ಮಾಡಿರುವ ಯಾವುದಾದರೂ ಒಂದು ವೇದಮಂತ್ರದ ವ್ಯಾಖ್ಯಾನವನ್ನು ನೀವು ನೀಡಬಹುದೇ? ಆಚಾರ್ಯರ ವ್ಯಾಖ್ಯಾನಕ್ರಮವನ್ನು ತಿಳಿಯುವ ಆಸೆ. ಭಾಸ್ಕರಶಾಸ್ತ್ರಿ, ಬೆಂಗಳೂರು.
ಶ್ರೀ ಪದ್ಮನಾಭ ತೀರ್ಥರ ಪ್ರವಚನ
ಮಾಧ್ವರು ಪಡೆದಿರುವ ಬೆಲೆಕಟ್ಟಲಾಗದ ಮಹೋನ್ನತ ಸೌಭಾಗ್ಯಗಳಲ್ಲಿ ಒಂದು — ಸಾಕ್ಷಾತ್ ಶ್ರೀ ಪದ್ಮನಾಭತೀರ್ಥರ ಪ್ರವಚನ. ಸಭೆಗಳಲ್ಲಿ ಅವರು ಮಾಡುತ್ತಿದ್ದ ಪ್ರವಚನವೊಂದನ್ನು ಶ್ರೀನಾರಾಯಣಪಂಡಿತಾಚಾರ್ಯರು ದಾಖಲಿಸಿ ನೀಡಿದ್ದಾರೆ. ನಿಜವಾದ ಅರ್ಥದಲ್ಲಿ ಅಮೃತೋಪದೇಶ ಎಂದು ಕರೆಸಿಕೊಳ್ಳುವ ಮಾಧ್ವಯತಿಕುಲಸಾರ್ವಭೌಮರ ಅಮೃತವಾಣಿಗಳನ್ನು ತಪ್ಪದೇ ಕೇಳಿ.
ಶ್ರೀ ಪದ್ಮನಾಭತೀರ್ಥರ ಚರಿತ್ರೆ
ಶ್ರೀ ಪದ್ಮನಾಭತೀರ್ಥಶ್ರೀಪಾದಂಗಳವರು ಪೂರ್ವಾಶ್ರಮದಲ್ಲಿ ಆಚಾರ್ಯರ ಜೊತೆಯಲ್ಲಿ ವಾದವನ್ನು ಮಾಡಿ ಅವರ ಶಿಷ್ಯರಾದವರು. ಆ ಘಟನೆಯ ವಿವರ ಇಲ್ಲಿದೆ.
ಅಶ್ರದ್ಧೆಯಿಂದ ಮಾಡಿದ ಕರ್ಮ ನಾಶಕರ
ಯಾವುದೇ ಕಾರ್ಯವನ್ನು ಮಾಡಬೇಕಾದರೂ ಅವಜ್ಞೆಯಿಂದ ಮಾಡಬಾರದು, ಶ್ರದ್ಧೆಯಿಂದ ಮಾಡಬೇಕು, ತಿರಸ್ಕಾರದಿಂದ ಮಾಡಿದ ಕರ್ಮವೇ ನಮ್ಮ ನಾಶಕ್ಕೆ ಕಾರಣವಾಗುತ್ತದೆ
ಗುರು ಶಿಷ್ಯರ ಸಮಾಗಮ
ವೇದಾಂತಪೀಠದ ಪರಂಪರೆಯಲ್ಲಿ ಬಂದ ಶ್ರೀ ಅಚ್ಯುತಪ್ರೇಕ್ಷಾಚಾರ್ಯರ ಬಳಿಗೆ ಸರ್ವದೇವತಾಗುರುವಾದ ಮುಖ್ಯಪ್ರಾಣದೇವರು ಸಂನ್ಯಾಸವನ್ನು ಸ್ವೀಕರಿಸಲಿಕ್ಕಾಗಿ ಬಂದ ಘಟನೆಯ ಚಿತ್ರಣ ಇಲ್ಲಿದೆ.
ಅಚ್ಯುತಪ್ರೇಕ್ಷಾಚಾರ್ಯರ ಅಧ್ಯಯನ ತಪಸ್ಸು
ಶ್ರೀ ಅಚ್ಯುತಪ್ರೇಕ್ಷಾಚಾರ್ಯರು ಅಧ್ಯಯನ ಮಾಡಿದ ರೀತಿ, ಮಾಯಾವಾದದಲ್ಲಿ ಅವರಿಗಿದ್ದ ನಿತಾಂತ ಪಾಂಡಿತ್ಯ, ಅವರ ಗುರುಗಳು ಅಂತ್ಯಕಾಲದಲ್ಲಿ ಅವರಿಗೆ ಮಾಡಿದ ಉಪದೇಶ, ಶುದ್ಧ ತತ್ವಜ್ಞಾನಕ್ಕಾಗಿ ಆ ಮಹಾಗುರುಗಳು ಮಾಡಿದ ಅದ್ಭುತ ತಪಸ್ಸಿನ ವಿವರಣೆ ಇಲ್ಲಿದೆ.
ವೇದಾಂತಪೀಠದ ಇತಿಹಾಸ
ಶ್ರೀ ಅಚ್ಯುತಪ್ರೇಕ್ಷಾಚಾರ್ಯರು ಯಾವ ಪರಂಪರೆಯ ಪೀಠಕ್ಕೆ ಅಧಿಪತಿಗಳಾಗಿದ್ದಾರೆಯೋ, ಯಾವ ಪೀಠದ ಅಧಿಪತಿಗಳಾಗಿ ಆಚಾರ್ಯರು ಬ್ರಹ್ಮಸೂತ್ರಗಳಿಗೆ ವ್ಯಾಖ್ಯಾನವನ್ನು ರಚಿಸಿದರೋ ಆ ವೇದಾಂತಪೀಠದ ಇತಿಹಾಸದ ಚಿತ್ರಣ ಇಲ್ಲಿದೆ.
ಅಚ್ಯುತಪ್ರೇಕ್ಷಾಚಾರ್ಯರ ಪೂರ್ವಜನ್ಮ
ಆಚಾರ್ಯರಿಗೆ ಸಂನ್ಯಾಸ ನೀಡಿದ ಮಹಾನುಭಾವರು ಶ್ರೀಮದಚ್ಯುತಪ್ರೇಕ್ಷಾಚಾರ್ಯರು. ಇಂತಹ ಮಹಾಸೌಭಾಗ್ಯ ಅವರಿಗೆ ಯಾವ ರೀತಿ ಬಂದಿತು ಎನ್ನುವದರ ವಿವರಣೆ ಇಲ್ಲಿದೆ.
ದೇವರ ಪ್ರಾರ್ಥನೆ ಮತ್ತು ಗುರುಗಳ ಅನ್ವೇಷಣೆ
ಸಂನ್ಯಾಸ ಪಡೆಯಲು ದೇವರ ಆಜ್ಞೆಯನ್ನು ಪಡೆಯಲು ಆಚಾರ್ಯರು ಅನುಸರಿಸಿದ ಶ್ರೇಷ್ಠ ಮಾರ್ಗ ಮತ್ತು ಸಂನ್ಯಾಸವನ್ನು ನೀಡುವಂತಹ ಗುರುಗಳಿಗಾಗಿ ಅವರು ಅನ್ವೇಷಿಸದ ಕ್ರಮವನ್ನು ನಾವಿಲ್ಲಿ ತಿಳಿಯುತ್ತೇವೆ.
ಸಂನ್ಯಾಸ ಸ್ವೀಕರಿಸಲು ಮತ್ತೊಂದು ಕಾರಣ
ಸಕಲ ದುಷ್ಟ ಶಕ್ತಿಗಳನ್ನೂ ನಿಗ್ರಹಿಸುವ ಸಾಮರ್ಥ್ಯವುಳ್ಳ ವಾಯುದೇವರು, ದುಷ್ಟವಿಷಯಗಳನ್ನು ಹರಡುವ ದೈತ್ಯರನ್ನು ಸಂಹಾರ ಮಾಡದೇ ಬಿಟ್ಟುದ್ದು ತಪ್ಪಲ್ಲವೇ? ಸಂನ್ಯಾಸವನ್ನು ಸ್ವೀಕರಿಸದೇ ದುಷ್ಟನಿಗ್ರಹದ ಮಾರ್ಗವನ್ನು ಅನುಸರಿಸಬೇಕಿತ್ತಲ್ಲವೇ ಎಂಬ ಪ್ರಶ್ನೆಗೆ ಉತ್ತರವನ್ನು ನಾವಿಲ್ಲಿ ಕೇಳುತ್ತೇವೆ.
ಸಂನ್ಯಾಸ ಸ್ವೀಕರಿಸುವ ನಿಶ್ಚಯ
ತತ್ವಸ್ಥಾಪನೆಯನ್ನು ಆಚಾರ್ಯರು ಬ್ರಹ್ಮಚಾರಿಯಾಗಿಯೂ, ಗೃಹಸ್ಥರಾಗಿಯೂ ಮಾಡಬಹುದಿತ್ತಲ್ಲವೇ ಎಂಬ ಪ್ರಶ್ನೆಗೆ ಸ್ವಯಂ ಆಚಾರ್ಯರು ನೀಡಿದ ಉತ್ತರವನ್ನು ಶ್ರೀ ನಾರಾಯಣಪಂಡಿತಾಚಾರ್ಯರು ಇಲ್ಲಿ ಅದ್ಭುತವಾಗಿ ಸಂಗ್ರಹಿಸಿದ್ದಾರೆ. ತಪ್ಪದೇ ಕೇಳಿ.
ವಾಸುದೇವನ ಆಲೋಚನಾ ವೈಖರಿ
ಕಲಿಯುಗದ ಸಜ್ಜನರ ಒಳಿತಿಗಾಗಿ ಅವತರಿಸಿ ಬಂದ ವಾಯುದೇವರು, ಬ್ರಹ್ಮಚಾರಿಯಾಗಿ ಗುರುಕುಲವಾಸವನ್ನು ಮುಗಿಸಿ ಮುಂದೇನು ಮಾಡಬೇಕು ಎಂದು ಆಲೋಚಿಸುತ್ತಾರೆ. ಅವರ ಅಲೋಚಿಸಿದ ಪರಿಯೇ ಎಷ್ಟು ಅದ್ಭುತ ಎನ್ನುವದನ್ನು ನಾರಾಯಣಪಂಡಿತಾಚಾರ್ಯರು ಅದ್ಭುತವಾಗಿ ಮನಗಾಣಿಸುತ್ತಾರೆ.
ಗುರುದಕ್ಷಿಣೆ
ಪಾಠ ಹೇಳಿದ ತೋಟಂತಿಲ್ಲಾಯರಿಗೆ ಅಪಾರ ವಿಸ್ಮಯವನ್ನುಂಟು ಮಾಡಿದ ಹಾಗೂ ಅವರಿಗೆ ಗುರುದಕ್ಷಿಣೆಯಾಗಿ ಜ್ಞಾನ ಭಕ್ತಿಗಳನ್ನನುಗ್ರಹಿಸಿದ ಘಟನೆಯ ಚಿತ್ರಣ ಇಲ್ಲಿದೆ.
ಗುರುಪುತ್ರನ ಖಾಯಿಲೆ ಪರಿಹರಿಸಿದ ಘಟನೆ
ಹುಟ್ಟಿನಿಂದ ಬಂದ ಖಾಯಿಲೆಗಳನ್ನು, ಯಾರಿಗೂ ಪರಿಹರಿಸಲು ಸಾಧ್ಯವಾಗದ ಖಾಯಿಲೆಗಳನ್ನು ಪರಿಹರಿಸುವ ಚರಿತ್ರೆ.
ವಾಸುದೇವನ ಗುರುಕುಲವಾಸ
ಗುರುಗಳಾದ ತೋಟಂತಿಲ್ಲಾಯರ ಮನೆಯಲ್ಲಿ ವಾಸುದೇವ ವಾಸ ಮಾಡಿದ ಬಗೆಯನ್ನು, ಅಲ್ಲಿ ತೋರಿದ ಅದ್ಭುತ ಲೀಲೆಗಳ ಚಿತ್ರಣ
ವಾಯುದೇವರ ಜ್ಞಾನ ಮಾಹಾತ್ಮ್ಯ
ಸಮಗ್ರ ದೇವತಾ ಪ್ರಪಂಚದಲ್ಲಿಯೇ ಯಾವ ದೇವತೆಯಲ್ಲಿಯೂ ಇಲ್ಲದ ಮಾಹಾತ್ಮ್ಯ ವಾಯುದೇವರ ಜ್ಞಾನದ ಮಾಹಾತ್ಮ್ಯ. ಚಿಂತನೆ ಮಾಡುವ ಪ್ರತಿಯೊಬ್ಬ ಸಜ್ಜನನಿಗೂ ಪರಿಶುದ್ಧ ಜ್ಞಾನವನ್ನು ಕರುಣಿಸುವ ಚರಿತ್ರೆ.
ಶತ್ರುನಾಶವನ್ನು ಮಾಡುವ ಚರಿತ್ರೆ
ನಮ್ಮ ಏಳಿಗೆಯನ್ನು ಸಹಿಸಲಾಗದ ಶತ್ರುಗಳು ಅನೇಕ ಇರುತ್ತಾರೆ. ವಿಧವಿಧವಾಗಿ ಕಾಟ ಕೊಡುತ್ತಾರೆ, ಹಲವು ಬಾರಿ ನಮ್ಮ ಸಾವನ್ನೇ ಬಯಸುವ ಹಂತಕ್ಕೆ ತಲುಪಿಬಿಡುತ್ತಾರೆ. ಅಂತಹ ಶತ್ರುಗಳ ನಾಶ ಈ ಚರಿತ್ರೆಯ ಶ್ರವಣದಿಂದ ಉಂಟಾಗುತ್ತದೆ.
ವಾಸುದೇವನ ಉಪನಯನ
ಮಕ್ಕಳಿಗೆ ಎಷ್ಟು ದಿವಸವಾದರೂ ಉಪನಯನವಾಗದೇ ಇದ್ದಲ್ಲಿ, ಉಪನಯನ ಮಾಡಲು ಸೂಕ್ತ ಮುಹೂರ್ತ, ಸಮಯ, ಸಂಪತ್ತು ದೊರೆಯದೇ ಇದ್ದಲ್ಲಿ, ಈ ಚರಿತ್ರೆಯನ್ನು ಕೇಳಿ. ಇನ್ನು ಮನೆಯಲ್ಲಿ ಉಪನಯನ ನಡೆಯುವ ಮುನ್ನ ತಪ್ಪದೇ ಆಲಿಸಿ, ಹರಿಪ್ರೀತಿಯಾಗುವ ಕ್ರಮದಲ್ಲಿ ಉಪನಯನ ನಡೆಯುತ್ತ
ವಾಮನ ಬಲಿಯನ್ನು ಬೇಡಲು ಏನು ಕಾರಣ?
ಲಕ್ಷ್ಮೀಪತಿಯಾದ ಶ್ರೀಹರಿ ವಾಮನನಾಗಿ ಬಲಿಯನ್ನು ಬೇಡಿದ್ದೇಕೆ ಎಂಬ ಪ್ರಶ್ನೆಗೆ ಬ್ರಹ್ಮದೇವರು ನೀಡಿದ ಅದ್ಭುತ ಉತ್ತರ ಇಲ್ಲಿದೆ.
ಲಿಕುಚ ಶಬ್ದದ ಅರ್ಥ
ಶ್ರೀ ಮಧ್ಯಗೇಹಾರ್ಯರು ಪುರಾಣ ಹೇಳುವ ಸಂದರ್ಭದಲ್ಲಿ ನಡೆದ ಒಂದು ಸುಂದರ ಘಟನೆಯ ಚಿತ್ರಣ.
ಗೋಸಾವಿತ್ರೀ ಸ್ತೋತ್ರಮ್
ಭೀಷ್ಮ ಯುಧಿಷ್ಠಿರ ಸಂವಾದದಲ್ಲಿನ ಗೋಸಾವಿತ್ರೀಸ್ತೋತ್ರ
ಮೊಟ್ಟ ಮೊದಲ ಮಧ್ವವಿಜಯ
ನಮ್ಮ ಭ್ರಾಂತಿ ಅಹಂಕಾರಗಳನ್ನು ನಾಶ ಮಾಡುವ ಮಧ್ವಚರಿತ್ರೆ
ವಾಸುದೇವನ ಅಕ್ಷರಾಭ್ಯಾಸ
ಮಕ್ಕಳಿಗೆ ವಿದ್ಯೆಯನ್ನು ಪ್ರತಿಭೆಯನ್ನು ಕರುಣಿಸುವ ಚರಿತ್ರೆ. ಆ ಪ್ರತಿಭೆಯನ್ನು ಹೇಗೆ ಕಾಪಾಡಿಕೊಳ್ಳಬೇಕಾದ ಕ್ರಮದ ವಿವರಣೆಯೊಂದಿಗೆ.
ವಾಸುದೇವನ ಜೊತೆಯಲ್ಲಿ ಆಟವಾಡಿದ ದುರ್ಗಾದೇವಿ
ಕುಂಜಾರುಗಿರಿಯಲ್ಲಿ ಪುಟ್ಟ ವಾಸುದೇವನ ಜೊತೆಯಲ್ಲಿ ದುರ್ಗಾದೇವಿಯರು ಆಟವಾಡುತ್ತಿದ್ದ ಪ್ರಸಂಗದ ವಿವರಣೆ ಇಲ್ಲಿದೆ.
ವಾಸುದೇವನ ಜೊತೆಯಲ್ಲಿ ನಡೆದಾಡಿದ ದೇವರು
ಏಕಾಂತ ಸಾಧನೆಯ ಸಂದರ್ಭದಲ್ಲಿ ಶ್ರೀಹರಿ ನಮ್ಮನ್ನು ಕೈಬಿಡದೇ ಅನುಗ್ರಹಿಸುತ್ತಾನೆ ಎಂದು ಮನಗಾಣಿಸುವ ಚರಿತ್ರೆ.
ವಾಸುದೇವನ ನಮಸ್ಕಾರ
ನಮಸ್ಕಾರದ ಶ್ರೇಷ್ಠತೆ, ಆವಶ್ಯಕತೆ ಅದರಿಂದ ದೊರೆಯುವ ಫಲಗಳು.
ವಾಸುದೇವನ ಏಕಾಂಗಿ ಯಾತ್ರೆ
ಲೌಕಿಕದ ಜಂಜಾಟದಿಂದ ದೂರ ಮಾಡಿಸಿ ಸಾಧನೆ ಮಾಡುವ ಧೈರ್ಯ ಅರ್ಹತೆಗಳನ್ನು ಭಕ್ತರಿಗೆ ಕರುಣಿಸುವ ಚರಿತ್ರೆ.
ದೇಹದ ಚಕ್ರಗಳ, ಪದ್ಮಗಳ ಕುರಿತು ಮಧ್ವಶಾಸ್ತ್ರದಲ್ಲಿ ಮಾಹಿತಿಯಿದೆಯೇ?
ಯೋಗಶಾಸ್ತ್ರದ ಪ್ರಕಾರ ನಮ್ಮ ದೇಹದಲ್ಲಿ ಮೂಲಾಧಾರ ಮುಂತಾದ ಚಕ್ರಗಳಿವೆ, ಷಡ್-ದಳ ಅಷ್ಟದಳ ಪದ್ಮಗಳಿವೆ ಎನ್ನುತ್ತಾರೆ. ಇದರ ಕುರಿತು ಶ್ರೀಮದಾಚಾರ್ಯರ ಸಿದ್ಧಾಂತ ಏನು ಹೇಳುತ್ತದೆ?
ಶ್ರೀ ನಾರಾಯಣಪಂಡಿತಾಚಾರ್ಯರ ಸ್ತೋತ್ರ
ಶ್ರೀ ಮಧ್ವವಿಜಯ, ಸಂಗ್ರಹರಾಮಾಯಾಣ, ಯೋಗದೀಪಿಕಾ, ನಯಚಂದ್ರಿಕಾ ಮುಂತಾದ ಸರ್ವಶ್ರೇಷ್ಠ ಕೃತಿಗಳನ್ನು ಅನುಗ್ರಹಿಸಿದ ಶ್ರೀಮನ್ ನಾರಾಯಣಪಂಡಿತಾಚಾರ್ಯರನ್ನು ನೆನೆಯಲು ನಾನು ರಚಿಸುತ್ತಿರುವ ವಿಷ್ಣುಗಾಥಾಮೃತದ ಒಂದು ಪದ್ಯ ಹಾಗೂ ಸಂಸ್ಕೃತದ ಒಂದು ಶ್ಲೋಕ. ಅರ್ಥವಿವರಣೆಯೊಂದಿಗೆ.
ಸಾಲದ ಬಾಧೆಯನ್ನು ಪರಿಹರಿಸುವ ಚರಿತ್ರೆ
ಕೊಟ್ಟ ಸಾಲ ತಿರುಗಿ ಬಾರದೇ ಇದ್ದಾಗ, ಅಥವಾ ವಿಪರೀತ ಸಾಲವಾಗಿ ತೀರಿಸಲು ಸಾಧ್ಯವಾಗದೇ ಇದ್ದಾಗ ಆ ಸಾಲದಬಾಧೆಯಿಂದ ಹೊರಬರಲು ಆಚಾರ್ಯರ ಚರಿತ್ರೆಯನ್ನು ಪ್ರತಿದಿವಸ ಮೂರು ಬಾರಿ ಶ್ರವಣ ಮಾಡಿ. ಭಾವಿಮುಖ್ಯಪ್ರಾಣ ಶ್ರೀ ವಾದಿರಾಜತೀರ್ಥಗುರುಸಾರ್ವಭೌಮರು ಅನುಗ್ರಹಿಸಿರುವ ಋಣಮೋಚನ ಸ್ತೋತ್ರವೂ ವಿಶ್ವನಂದಿನಿಯಲ್ಲಿ ಉಪಲಬ್ಧವಿದೆ. ಅದನ್ನು ಪಠಣ ಮಾಡಿ. ಋಣಬಾಧೆ ಪರಿಹಾರವಾಗುತ್ತದೆ.
ಕಳೆದುಕೊಂಡದ್ದನ್ನು ಮತ್ತೆ ದೊರಕಿಸಿಕೊಡುವ ಚರಿತ್ರೆ
ಅತ್ಯಂತ ಪ್ರೀತಿಪಾತ್ರರಾದ ವ್ಯಕ್ತಿಯನ್ನೊ, ಅಥವಾ ಅತ್ಯಂತ ಮಹತ್ತ್ವದ ವಸ್ತುವನ್ನೋ ಕಳೆದುಕೊಂಡು ಬಿಟ್ಟಿರುತ್ತೇವೆ. ಎಷ್ಟು ಪ್ರಯತ್ನ ಪಟ್ಟರೂ ದೊರೆಯದಾಗ ಆಚಾರ್ಯರ ಈ ಚರಿತ್ರೆಯನ್ನು ಕೇಳುವದರಿಂದ ಅದನ್ನು ಪಡೆಯುತ್ತೇವೆ. ಮುಖ್ಯವಾಗಿ ಸಂಸಾರಕ್ಕೆ ಬಂದು ನಾವೇ ಕಳೆದುಹೋಗಿದ್ದೇವೆ. ಕಳೆದುಹೋಗಿರುವ ನಮ್ಮ ನೈಜತೆ ಈ ಕಥಾಶ್ರವಣದಿಂದ ದೊರೆಯುತ್ತದೆ.
ಮಾತಿನ ಶಕ್ತಿಯನ್ನು ಕರುಣಿಸುವ ಮಧ್ವಚರಿತ್ರೆ
ಮಕ್ಕಳಿಗೆ ಎಷ್ಟು ದಿವಸವಾದರೂ ಮಾತು ಬಾರದಿದ್ದಲ್ಲಿ, ಮಗುವಿಗೆ ನಡೆ ಬಾರದಿದ್ದಲ್ಲಿ ಈ ಪ್ರಸಂಗವನ್ನು ನಿತ್ಯವೂ ಆ ಮಗುವಿನ ಕಿವಿಗೆ ಕೇಳುವಂತೆ ಮಾಡಿ. ಇಲ್ಲಿನ ಶ್ಲೋಕವನ್ನು ಪಠಿಸಿ. ಮಾತು ಬರುತ್ತದೆ. ನಡೆಯುತ್ತದೆ. ಅಷ್ಟೆ ಅಲ್ಲ, ಇಡಿಯ ಜೀವನದಲ್ಲಿ ಆ ಮಗುವಿನ ನಡೆ ನುಡಿಗಳು ಪರಿಶುದ್ಧವಾಗಿರುತ್ತವೆ.
ಅಜೀರ್ಣದೋಷವನ್ನು ಪರಿಹಾರ ಮಾಡುವ ಚರಿತ್ರೆ
ನಿಮಗಾಗಲೀ, ನಿಮ್ಮ ಹಿರಿಯರಿಗಾಗಾಲಿ, ಮಕ್ಕಳಿಗಾಗಲೀ, ನಿಮ್ಮ ಪ್ರೀತಿಪಾತ್ರರಿಗಾಗಲೀ ದೇಹದಲ್ಲಿ ಆನಾರೋಗ್ಯವಾಗಿದ್ದಾಗ, ಮುಖ್ಯವಾಗಿ ಅಜೀರ್ಣದೋಷದಿಂದ ಬಳಲುವಾಗ, ಯಾವ ಪದಾರ್ಥವನ್ನೂ ತಿನ್ನಲು ಸಾಧ್ಯವಾಗದೇ ಇದ್ದಾಗ ಆಚಾರ್ಯರ ಈ ಚರಿತ್ರೆಯನ್ನು ಪ್ರತೀನಿತ್ಯವೂ ಊಟ ಮಾಡುವ ಮುನ್ನ ಕೇಳುತ್ತಿರಿ. ಆ ಸಕಲ ದೇಹದೋಷಗಳೂ ಪರಿಹಾರವಾಗುತ್ತವೆ.
ದುಷ್ಟಶಕ್ತಿಗಳಿಂದ ಪಾರು ಮಾಡುವ ಚರಿತ್ರೆ
ಪಿಶಾಚಿಗಳು ನಿಜವಾಗಿಯೂ ಇದ್ದಾವೆಯಾ, ಇದ್ದರೆ ಎಲ್ಲಿರುತ್ತವೆ, ಹೇಗಿರುತ್ತವೆ, ನಮಗೆ ಪ್ರೇತಬಾಧೆ ಉಂಟಾಗಿದೆ ಎಂದು ತಿಳಿಯುವ ಬಗೆ ಹೇಗೆ ಎಂಬ ಪ್ರಶ್ನೆಗಳಿಗೆ ಶಾಸ್ತ್ರಗಳು ನೀಡುವ ಉತ್ತರದ ಸಂಕಲನದೊಂದಿಗೆ ಆಚಾರ್ಯರು ಸಣ್ಣ ಕೂಸಾಗಿದ್ದಾಗಲೇ ತೋರಿದ ಮಹತ್ತರ ಮಾಹಾತ್ಮ್ಯದ ಚಿಂತನೆ ಇಲ್ಲಿದೆ.
ಮಾಡುವ ದಾನ ಸಫಲವಾಗುವಂತೆ ಕರುಣಿಸುವ ಚರಿತ್ರೆ
ಶಾಸ್ತ್ರ ತಿಳಿಸಿದ ರೀತಿಯಲ್ಲಿ ದಾನ ಮಾಡುವದಕ್ಕೂ ವಿಶಿಷ್ಟ ಪುಣ್ಯ ಬೇಕು. ಸತ್ಪಾತ್ರರಿಗೆ, ಶಾಸ್ತ್ರೋಕ್ತವಾದ ಕ್ರಮದಲ್ಲಿ ದಾನ ನೀಡುವ ಅರ್ಹತೆಯನ್ನು ನಮಗೆ ಕರುಣಿಸುವ, ನಾವು ಮಾಡುವ ದಾನದಿಂದ ಜ್ಞಾನ ಭಕ್ತಿ ವೈರಾಗ್ಯಗಳ ಮಹಾಫಲವನ್ನು ದೊರೆಯುವಂತೆ ಅನುಗ್ರಹಿಸುವ ಆಚಾರ್ಯರ ಶ್ರೇಷ್ಠವಾದ ಚರಿತ್ರೆ.
ಜಾತಕರ್ಮ ಹಾಗೂ ನಾಮಕರಣ
ನಿಮ್ಮ ಮನೆಯಲ್ಲಿ ಮಗು ಹುಟ್ಟುವ ಮುನ್ನ, ಆ ಮಗುವಿಗೆ ಜಾತಕರ್ಮ ನಾಮಕರಣ ಮಾಡುವ ದಿನಗಳಲ್ಲಿ ಆಚಾರ್ಯರಿಗೆ ಅವರ ತಂದೆ ಮಾಡಿದ ಜಾತಕರ್ಮ ನಾಮಕರಣಗಳ ಈ ಚರಿತ್ರೆಯನ್ನು ತಪ್ಪದೇ ಕೇಳಿ. ಮಾಡುವ ಕರ್ಮದಲ್ಲಿರುವ ನ್ಯೂನತೆಗಳು ಪರಿಹಾರವಾಗುತ್ತವೆ, ನಿಮ್ಮ ಮಕ್ಕಳು ಶಾಶ್ವತವಾದ ಯಶಸ್ಸನ್ನು ಪಡೆಯುತ್ತಾರೆ.
ಶ್ರೀಮದಾಚಾರ್ಯರ ಅವತಾರ
ಆಶ್ವೀನ ಶುದ್ಧ ದಶಮಿ ಯಂದು ಸಕಲ ಸಜ್ಜನರ ಉದ್ಧಾರಕ್ಕಾಗಿ ಮುಖ್ಯಪ್ರಾಣದೇವರು ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರಾಗಿ ಅವತರಿಸಿ ಬಂದ ಪರಮ ಮಂಗಳ ಪ್ರಸಂಗದ ಚಿಂತನೆ.
ಸೂತರು ಹೇಳಿದ ಬುದ್ಧನ ಚರಿತ್ರೆ
ಶ್ರೀಮದ್ ಭಾಗವತದ ಪ್ರಥಮಸ್ಕಂಧದ ಮೂರನೆಯ ಅಧ್ಯಾಯದಲ್ಲಿ ಸೂತಾಚಾರ್ಯರು ಮಾಡಿರುವ ಬುದ್ಧಾವತಾರದ ಚರಿತ್ರೆಯ ಸಂಗ್ರಹ.
ಬ್ರಹ್ಮದೇವರು ಹೇಳಿದ ಬುದ್ಧನ ಚರಿತ್ರೆ
ಬ್ರಹ್ಮದೇವರು ನಾರದರಿಗೆ ಉಪದೇಶ ಮಾಡುವಾಗ ಹೇಳಿದ ಬುದ್ಧನ ಚರಿತ್ರೆಯ ನಿರೂಪಣೆ.
ಉದ್ಯೋಗಕ್ಕಾಗಿ ಪ್ರಾರ್ಥನೆ
ಉತ್ತಮ ಉದ್ಯೋಗವನ್ನು ಪಡೆಯುವದಕ್ಕಾಗಿ ಮತ್ತು ಉದ್ಯೋಗದಲ್ಲಿನ ಕಿರಿಕಿರಿ ಸಮಸ್ಯೆಗಳ ಪರಿಹಾರಕ್ಕಾಗಿ ಮಾಡಬೇಕಾದ ಪ್ರಾರ್ಥನೆ.
ಡಾರ್ವಿನ್ನಿನ ವಿಕಾಸವಾದವನ್ನು ಒಪ್ಪಬಹುದೇ?
“ಮತ್ಸ್ಯ ಜಲಚರ, ಕೂರ್ಮ ಉಭಯಚರ, ವರಾಹ ಸ್ಥಲಚರ, ನರಸಿಂಹ ಅರ್ಧಮೃಗ, ಅರ್ಧಪುರುಷ, ವಾಮನ ಪೂರ್ಣ ಬೆಳೆಯದ ಕುಳ್ಳ, ಪರಶುರಾಮ ಒರಟಾದ ಮನುಷ್ಯ, ರಾಮ ಸಮಸ್ಯೆಗೀಡಾದ ಮನುಷ್ಯ, ಕೃಷ್ಣ ತುಂಟ ಮನುಷ್ಯ, ಬುದ್ಧ ಬುದ್ಧಿ ಇರುವ ಮನುಷ್ಯ, ಕಲ್ಕಿ ಎಲ್ಲರನ್ನೂ ಕೊಂದು ಹಾಕುವವನು” ಹೀಗೆ ಡಾರ್ವಿನ್ನಿನ ವಿಕಾಸವಾದದೊಂದಿಗೆ ಶಾಸ್ತ್ರವನ್ನು ಸಮನ್ವಯ ಮಾಡುವದು ಶಾಸ್ತ್ರೀಯವೇ ಅಲ್ಲವೇ ಎನ್ನುವದರ ಕುರಿತ ಚರ್ಚೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 243 — ಜ್ಞಾನಮಾರ್ಗ ಯೋಗಮಾರ್ಗಗಳಲ್ಲಿನ ವ್ಯತ್ಯಾಸ
ಮಾಧ್ವರಲ್ಲಿ ಯೋಗಮಾರ್ಗವನ್ನು ಅನುಸರಿಸುವ ಜನ ತುಂಬ ಕಡಿಮೆ ಎಂಬ ಆಕ್ಷೇಪ ಒಂದಿದೆ. ಯೋಗಮಾರ್ಗದಿಂದ ದೇವರನ್ನು ಪಡೆಯುವದು ಶ್ರೇಷ್ಠವೋ, ಜ್ಞಾನಮಾರ್ಗದಿಂದ ದೇವರನ್ನು ಪಡೆಯುವದು ಶ್ರೇಷ್ಠವೋ, ಎರಡೂ ಮಾರ್ಗಗಳಲ್ಲಿರುವ ವ್ಯತ್ಯಾಸವೇನು ಎಂಬ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ.
ಶ್ರೀಮದ್ ಭಾಗವತಮ್ — 242 — ಭಜಿಸಿ ಬದುಕೆಲೋ ಮಾನವ
ತತ್ವಾಭಿಮಾನಿ ದೇವತೆಗಳು ಬ್ರಹ್ಮಾಂಡದ ನಿರ್ಮಾಣಕ್ಕಾಗಿ ದೇವರನ್ನು ಸ್ತುತಿಸಿದ ಶಕ್ತಿಗೀತೆಯ ಎರಡನೆಯ ಭಾಗ.
ಶ್ರೀಮದ್ ಭಾಗವತಮ್ — 241 — ಪಾದಾರವಿಂದದ ಮಾಹಾತ್ಮ್ಯ
ನಮ್ಮ ಸ್ವರೂಪ ಸಾಮರ್ಥ್ಯವನ್ನು ಅಭಿವ್ಯಕ್ತಿಗೊಳಿಸುವ, ಯಾವ ಕಾರ್ಯ ಮಾಡಬೇಕು ಮಾಡಬಾರದು ಎಂಬ ಜ್ಞಾನವನ್ನು ಕರುಣಿಸುವ, ಕಾರ್ಯವನ್ನು ಮಾಡಲು ಶಕ್ತಿಯನ್ನು ಅನುಗ್ರಹಿಸುವ ಈ ಶಕ್ತಿಗೀತೆಯಲ್ಲಿ ಮೊದಲಿಗೆ ದೇವರ ಪಾದಾರವಿಂದಗಳ ಮಾಹಾತ್ಮ್ಯ ಅದ್ಭುತವಾಗಿ ಚಿತ್ರಣವಾಗಿದೆ. ದೇವರ ಪಾದವನ್ನು ಆಶ್ರಯಿಸಿದರೆ ಮಾತ್ರ ಸುಖ, ಇಲ್ಲದಿದ್ದರೆ ಇಲ್ಲ ಎಂಬ ತತ್ವವನ್ನು ತತ್ವಾಭಿಮಾನಿದೇವತೆಗಳು ಪ್ರತಿಪಾದಿಸಿರುವ ಭಾಗ.
ಶ್ರೀಮದ್ ಭಾಗವತಮ್ — 240 — ತತ್ವದೇವತೆಗಳ ಸೃಷ್ಟಿ
ಬ್ರಹ್ಮಾಂಡದ ಆಚೆಯಲ್ಲಿ ಮಹತ್ ತತ್ವದಿಂದ ಆರಂಭಿಸಿ ಪೃಥಿವೀ ತತ್ವದ ವರೆಗಿನ ಎಲ್ಲ ತತ್ವಗಳಿಗೆ ಅಭಿಮಾನಿಗಳಾದ ದೇವತೆಗಳು ಹುಟ್ಟಿ ಬಂದ ಕ್ರಮದ ನಿರೂಪಣೆ ಇಲ್ಲಿದೆ.
ಮೂರು ಮದಗಳು
ಮನುಷ್ಯನನ್ನು ನಾಶ ಮಾಡು ಮೂರು ತರಹದ ಅಹಂಕಾರಗಳ ವಿವರಣೆ ಇಲ್ಲಿದೆ.
ದೇವರ ಅಸ್ತಿತ್ವ
ದೇವರ ಅಸ್ತಿತ್ವವನ್ನು ಒಪ್ಪದ ನಾಸ್ತಿಕನಿಗೆ ವಿಜ್ಞಾನಿಯೊಬ್ಬರು ನೀಡಿದ ಉತ್ತರ.
ಶ್ರೀಮದ್ ಭಾಗವತಮ್ — 239 — ಬ್ರಹ್ಮದೇವರ ಸೃಷ್ಟಿ
ಮಹತ್-ತತ್ವಕ್ಕೆ ಅಭಿಮಾನಿಯಾದ ಬ್ರಹ್ಮದೇವರು ಹುಟ್ಟಿಬಂದ ಬಗೆಯ ಅದ್ಭುತ ಚಿತ್ರಣ ಇಲ್ಲಿದೆ. ಮಕ್ಕಳನ್ನು ಪಡೆಯುವದಕ್ಕಿಂತ ಮುಂಚೆಯ ನಮ್ಮಲ್ಲಿರಬೇಕಾದ ಎಚ್ಚರಗಳ ಕುರಿತ ಚಿಂತನೆಯೊಂದಿಗೆ.
ಶ್ರೀಮದ್ ಭಾಗವತಮ್ — 238 — ಮಾಯಾದೇವಿಯಲ್ಲಿ ವೀರ್ಯಾಧಾನ
ವಾಸುದೇವ, ಪುರುಷ ನಾಮಕನಾದ ಶ್ರೀಮನ್ನಾರಾಯಣ ಮಹತ್-ತತ್ವ ಸೃಷ್ಟಿಯಾಗುವದಕ್ಕಿಂತ ಮುಂಚೆ ಅದರ ಅಭಿಮಾನಿಯಾದ ಬ್ರಹ್ಮದೇವರನ್ನು ಸೃಷ್ಟಿ ಮಾಡುವ ಪ್ರಕ್ರಿಯೆಯ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 237 — ಮಾಯಾ ದೇವಿಯ ಮಹಿಮೆ
ಸೃಷ್ಟಿಯ ಮಹತ್ತರದ ಕಾರ್ಯದಲ್ಲಿ ತನ್ನ ಪ್ರಧಾನ ಕಿಂಕರಿಯನ್ನಾಗಿ ಭಗವಂತ ಸ್ವೀಕರಿಸುವದು ಮಹಾಲಕ್ಷ್ಮೀದೇವಿಯರನ್ನು. ಆ ಕಾರಣಕ್ಕಾಗಿ ಲಕ್ಷ್ಮೀದೇವಿಗೆ ಮಾಯಾ ಎಂಬ ಹೆಸರು ಬಂದದ್ದು ಎಂಬ ತತ್ವದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 236 — ಸುಪ್ತಶಕ್ತಿಃ
ಸೃಷ್ಟಿಯ ಆರಂಭದ ದೇವರನ್ನು ಪರಿಚಯಿಸುವಾಗ ಶ್ರೀಮದ್ ಭಾಗವತ ದೇವರನ್ನು ಸುಪ್ತಶಕ್ತಿಃ, ಅಸುಪ್ತದೃಕ್ ಎಂಬ ಶಬ್ದಗಳನ್ನು ಬಳಸುತ್ತದೆ. ಮೇಲ್ನೋಟದ ಅರ್ಥಕ್ಕೆ ದೇವರು ಕಣ್ಣು ಮುಚ್ಚಿರಲಿಲ್ಲ, ಆದರೆ, ಅವನ ಶಕ್ತಿ ಸುಪ್ತವಾಗಿತ್ತು ಎಂದು ತೋರುತ್ತದೆ. ಇದು ಶಾಸ್ತ್ರವಿರುದ್ಧವಾದ ತತ್ವ, ಕಾರಣ ದೇವರು ಪ್ರಲಯಕಾಲದಲ್ಲಿ ಕಣ್ಗಳನ್ನು ಮುಚ್ಚಿದ್ದ ಮತ್ತು ಅವನ ಶಕ್ತಿ ಸಾಮರ್ಥ್ಯಗಳು ಎಂದಿಗೂ ಯಾವ ಕಾರಣಕ್ಕೂ ಸುಪ್ತವಾಗುವದಿಲ್ಲ. ಹಾಗಾದರೆ ಭಾಗವತದ ಮಾತಿಗೆ ಅರ್ಥವೇನು ಎಂಬ ಪ್ರಶ್ನೆಗೆ ಶ್ರೀಮದಾಚಾರ್ಯರು ಪ್ರಮಾಣ ಸಮೇತವಾಗಿ ಅದ್ಭುತ ಪ್ರಮೇಯಗಳೊಂದಿಗೆ ನಮಗೆ ಅರ್ಥವನ್ನು ತಿಳಿಸುತ್ತಾರೆ.
ಶ್ರೀಮದ್ ಭಾಗವತಮ್ — 235 — ದೇವರ ಅಗಾಧತೆ
ದೇವರು ಎಂಬ ವಸ್ತುವನ್ನು ಯಾರಿಗೂ ಎಂದಿಗೂ ಪರಿಪೂರ್ಣವಾಗಿ ತಿಳಿಯಲು ಸಾಧ್ಯವಿಲ್ಲ ಎಂಬ ಪ್ರಮೇಯದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 234 — ದೇವರ ಸಾಮರ್ಥ್ಯ
ಎಷ್ಟೇ ಸಮರ್ಥನಾದ ಅಡಿಗೆಯವನಾದರೂ ಅಡಿಗೆಗೆ ಬೇಕಾದ ಪದಾರ್ಥಗಳು ಹಾಗೂ ಅಡಿಗೆ ಮಾಡಲು ಸ್ಥಳ ಇಲ್ಲದೇ ಇದ್ದರೆ ಅಡಿಗೆ ಮಾಡಲು ಸಾಧ್ಯವಿಲ್ಲ. ಹಾಗೆ, ದೇವರು ಪರಮಸಮರ್ಥನಾಗಿದ್ದರೂ ಅವ್ಯಾಕೃತ ಆಕಾಶ-ಪ್ರಕೃತಿಗಳಿಲ್ಲದೇ ಸೃಷ್ಟಿ ಮಾಡಲು ಸಾಧ್ಯವಿಲ್ಲ ಅಲ್ಲವೇ ಎಂಬ ಪ್ರಶ್ನೆಗೆ ಭಾಗವತ ನೀಡಿದ ಉತ್ತರದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 233 — ಇಚ್ಛಾಮಾತ್ರಂ ಪ್ರಭೋಃ ಸೃಷ್ಟಿಃ
ಕೇವಲ ದೇವರ ಇಚ್ಛೆಯಿಂದ ಸೃಷ್ಟಿಯಾಗುತ್ತದೆ ಎಂತಾದರೆ, ಸೃಷ್ಟಿಯಾಗುವ ಸಂದರ್ಭದ ಅನೇಕ ಪ್ರಕ್ರಿಯೆಗಳಿಗೆ ಏನರ್ಥ. ದೇವರು ಮಾಡುವ ಸೃಷ್ಟಿಯಲ್ಲಿ ದೇವರ ಮಾಡಿದ ಪ್ರಯತ್ನ — ಕ್ರಿಯೆಗಳೂ — ಕಂಡಿವೆ. ಕೇವಲ ಇಚ್ಚೆಯಿಂದ ಸೃಷ್ಟಿ ಆಗಿಲ್ಲ. ಹಾಗಾದರೆ ಉಪನಿಷತ್ತಿನ “ಇಚ್ಛಾಮಾತ್ರಂ ಪ್ರಭೋಃ ಸೃಷ್ಟಿಃ” ಎಂಬ ಮಾತಿಗೆ ಅರ್ಥವೇನು? ಎಂಬ ಪ್ರಶ್ನೆಗೆ ಭಾಗವತ ನೀಡಿದ ಉತ್ತರದ ಸಂಗ್ರಹ ಇಲ್ಲಿದೆ.
ಶ್ರೀಮದ್ ಭಾಗವತಮ್ — 232 — ದೇವರು ಯಾರು
ಯಾವುದೋ ಒಬ್ಬ ಚೇತನನನ್ನು ದೇವರು ಎಂದು ನಿರ್ಧರಿಸಿ ಅವನ ಉಪಾಸನೆ ಮಾಡುವದು ಸರ್ವಥಾ ತಪ್ಪು, ದೇವರು ಎಂದಾಗಬೇಕಾದರೆ ಯಾವ ಲಕ್ಷಣಗಳಿರಬೇಕು ಆ ಲಕ್ಷಣಗಳು ಯಾರಲ್ಲಿವಿಯೋ ಅವನನ್ನೇ ದೇವರು ಎಂದು ಒಪ್ಪಬೇಕು ಎಂಬ ಪರಮ ವೈದಿಕ ಸಿದ್ಧಾಂತದ ನಿರೂಪಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 231 — ವಿದುರರ ಮಾಹಾತ್ಮ್ಯ
ವಿದುರರು ಕಷ್ಟ ಸುಖಗಳನ್ನು ಸ್ವೀಕರಿಸಿದ ರೀತಿ, ಸಜ್ಜನರ ಮೇಲೆ ಅವರಿಗಿರು ಕಾರುಣ್ಯ, ಪ್ರತಿಯೊಬ್ಬರಿಗೂ ಒಳಿತನ್ನು ಬಯಸುವ ಹೃದಯವಂತಿಕೆ, ಶತ್ರುಗಳನ್ನೂ ಶಾಂತಗೊಳಿಸುವ ಅವರ ಪ್ರಸನ್ನವಾದ ನಡವಳಿಕೆ, ದೇವರನ್ನು ಅನನ್ಯವಾಗಿ ನಂಬಿದ್ದ ಅವರ ಪರಿಶುದ್ಧ ಭಕ್ತಿ ಮುಂತಾದ ಮಹಾಗುಣಗಳ ವರ್ಣನೆಯೊಂದಿಗೆ ವೇದವ್ಯಾಸದೇವರ ಮಗನಾಗಿ ಹುಟ್ಟಿಬಂದ ಅವರ ಮಾಹಾತ್ಮ್ಯದ ಚಿಂತನೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 230 — ವ್ಯಸನಗಳಿಂದ ದೂರವಾಗಲು ಏನು ಮಾಡಬೇಕು
ಮನುಷ್ಯನನ್ನು ಭಗವಂತನಿಂದ ದೂರ ಮಾಡುವ ವ್ಯಸನಗಳಿಂದ ದೂರವಾಗುವ ಬಗೆಯನ್ನು ತಿಳಿಸುತ್ತಲೇ ವಿದುರರು ಮೈತ್ರೇಯರನ್ನು ಪ್ರಶ್ನೆ ಮಾಡುವ ಭಾಗದ ವಿವರಣೆ ಇಲ್ಲಿದೆ. ವಿದುರರಿಗೆ ಮನುಷ್ಯಸಂಕುಲದ ಮೇಲೆ ಇರುವ ಕಾರುಣ್ಯವನ್ನು ಮನಗಾಣಿಸುವ ಭಾಗ.
ತೊಂದರೆಗಳಿಂದ ಪಾರಾಗಲು ಉಪಾಸನೆ
ಜಗತ್ತಿನಿಂದ ದೇವರಿಗೆ ಪ್ರಯೋಜನವಿಲ್ಲ ನಿಜ, ಆದರೆ ಜೀವರಿಗೆ ಉಪಕಾರ ಮಾಡಲು ಹೋಗಿ ದೇವರಿಗೆ ತೊಂದರೆಯಾಗಲಿಲ್ಲವೇ, ಸೃಷ್ಟಿಯಿಲ್ಲದ ಸ್ವಾಮಿ ಹುಟ್ಟಬೇಕಾಯಿತು, ರಾಮ-ಕೃಷ್ಣಾದಿ ರೂಪಗಳಲ್ಲಿ ತೊಂದರೆ ಅನುಭವಿಸಬೇಕಾಯಿತು, ಅಪಘಾತವಾದವನಿಗೆ ಸಹಾಯ ಮಾಡಲು ಹೋಗಿ ನಾವು ಸಮಸ್ಯೆಯಲ್ಲಿ ಸಿಲುಕಿಕೊಂಡಹಾಗೆ ಎಂಬ ಆಧುನಿಕರ ಪ್ರಶ್ನೆಗೆ ಸ್ವಯಂ ಭಗವಂತನೇ ನೀಡಿದ ಉತ್ತರ ಇಲ್ಲಿದೆ. ನಾವು ಜಗತ್ತಿನಿಂದ ಉಂಟಾಗುವ ತೊಂದರೆಗಳಿಂದ ಪಾರಾಗುವ ಉಪಾಸನೆಯನ್ನು ತಿಳಿಸುತ್ತಾನೆ.
ಶ್ರೀಮದ್ ಭಾಗವತಮ್ — 229 — ಭಾರತ ಭಾಗವತಗಳ ಸಂಬಂಧ
ಬ್ರಹ್ಮಸೂತ್ರಗಳಿಂದಾರಂಭಿಸಿ ಸಕಲ ಸಚ್ಚಾಸ್ತ್ರಗಳಿಗೂ ಇರುವ ಸಂಬಂಧದ ಚಿಂತನೆಯೊಂದಿಗೆ ಶ್ರೀಮದ್ ಭಾಗವತ ಮತ್ತು ಶ್ರೀಮನ್ ಮಹಾಭಾರತಗಳ ಅಪೂರ್ವ ಸಂಬಂಧದ ನಿರೂಪಣೆ ಈ ಭಾಗದಲ್ಲಿ. ಶ್ರೀಮನ್ ಮಹಾಭಾರತದ ಅದ್ಭುತ ವೈಶಿಷ್ಟ್ಯದ ಚಿತ್ರಣದೊಂದಿಗೆ.
ಶ್ರೀಮದ್ ಭಾಗವತಮ್ — 228 — ಗುರುಗಳ ಅನುಗ್ರಹ ಪಡೆಯುವ ಕ್ರಮ
ಯಾವುದೇ ವಿದ್ಯೆ ಅಪರೋಕ್ಷಜ್ಞಾನಿಗಳಾದ ಗುರುಗಳಿಂದ ಉಪದಿಷ್ಟವಾದಾಗಲೇ ಫಲಪ್ರದವಾಗುವದು. ಆ ಗುರೂಪದೇಶವನ್ನು ಪಡೆಯುವ ಕ್ರಮವನ್ನು ಇಲ್ಲಿ ವಿವರಿಸಲಾಗಿದೆ. ಅನುವ್ಯಾಖ್ಯಾನ-ನ್ಯಾಯಸುಧಾಗ್ರಂಥಗಳಲ್ಲಿ ಭಗವತ್ಪಾದರು, ಟೀಕಾಕೃತ್ಪಾದರು ನೀಡಿದ ನಿರ್ಣಯಗಳೊಂದಿಗೆ, ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ತಿಳಿಸಿದ ಅಪೂರ್ವ ಅರ್ಥಗಳೊಂದಿಗೆ.
ಶ್ರೀಮದ್ ಭಾಗವತಮ್ — 227 — ಉದ್ಧವರ ಭಾಗ್ಯ
ಪರಂಧಾಮ ಪ್ರವೇಶ ಮಾಡುವ ನಿಶ್ಚಯ ಮಾಡಿದ ಶ್ರೀಕೃಷ್ಣ ತಮ್ಮ ಮೇಲೆ ಮಾಡಿದ ಪರಮಾನುಗ್ರಹವನ್ನು ಉದ್ಧವರು ವಿದುರರ ಮುಂದೆ ದಿವ್ಯವಾದ ಕ್ರಮದಲ್ಲಿ ನೆನೆಸಿಕೊಳ್ಳುತ್ತಾರೆ. ಭಕ್ತರ ಮನಸ್ಸನ್ನು ಆರ್ದ್ರಗೊಳಿಸುವ ಭಾಗ.
ಶ್ರೀಮದ್ ಭಾಗವತಮ್ — 226 — ಯಾದವರ ನಾಶ
ಕುರುಕ್ಷೇತ್ರ ಯುದ್ಧದ ಮುಖಾಂತರ ಸಮಗ್ರ ದುಷ್ಟರನ್ನು ನಾಶ ಮಾಡಿದ ನಂತರವೂ, ಯಾದವರ ಮರಣವಾಗದಿದ್ದಲ್ಲಿ ಭೂಭಾರ ಇಳಿದಂತಾಗಲಿಲ್ಲ ಎಂದು ಭಗವಂತ ಆಲೋಚಿಸುತ್ತಾನೆ. ಹಾಗಾದರೆ ಯಾದವರು ಭೂಭಾರವೇ ಎಂಬ ಪ್ರಶ್ನೆಗೆ ಆಚಾರ್ಯರು ನೀಡಿದ ಉತ್ತರಗಳ ಸಂಗ್ರಹ ಇಲ್ಲಿದೆ.
ಶ್ರೀಮದ್ ಭಾಗವತಮ್ — 225 — ಶ್ರೀಕೃಷ್ಣಾವತಾರ
ಯಮುನಾನದಿಯ ತೀರದಲ್ಲಿ ವಿದುರರ ಮುಂದೆ ಮಹಾಭಾಗವತೋತ್ತಮರಾದ ಉದ್ಧವರು ಮಾಡಿದ ಶ್ರೀಕೃಷ್ಣಾವತಾರದ ಚಿಂತನೆ.
ದೇವರ ಮೂರು ರಹಸ್ಯ ರೂಪಗಳು
ಶ್ರೀಮದ್ ಭಾಗವತ ತಿಳಿಸಿದ ಮೂರು ಅಪೂರ್ವ ಹೆಸರುಳ್ಳ ಮೂರು ರೂಪಗಳ ವಿವರಣೆ ಇಲ್ಲಿದೆ.
ನಮ್ಮ ನಿಯತ ಗುರುಗಳ ಅನುಗ್ರಹ ಪಡೆಯಲು ಏನು ಮಾಡಬೇಕು?
ನಮಗೆ ದೇವರ ಸಾಕ್ಷಾತ್ಕಾರವನ್ನು ಅನುಗ್ರಹಿಸುವ ಗುರುಗಳೇ ನಮ್ಮ ನಿಯತ ಗುರುಗಳು. ಆ ಮಹಾಗುರುಗಳ ಕಾರುಣ್ಯವನ್ನು ಪಡೆಯಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ.
ಗರ್ಭಿಣಿಯರಿಗೊಂದು ಕಿವಿಮಾತು
ಪ್ರತಿಭೆ, ವಿನಯ, ಬುದ್ಧಿವಂತಿಕೆ, ಧರ್ಮಶ್ರದ್ಧೆ ಉಳ್ಳ ಮಕ್ಕಳು ಹುಟ್ಟಿ ಬರಲು ಏನು ಮಾಡಬೇಕು?
ಜನನೇಂದ್ರಿಯದ ಮಹತ್ತ್ವ
ಭಗವಂತ ನಿರ್ಮಾಣ ಮಾಡಿದ ಮೊಟ್ಟ ಮೊದಲ ಶರೀರದಲ್ಲಿ ಶಿಶ್ನೇಂದ್ರಿಯದ ನಿರ್ಮಾಣವಾಗುವ ಸಂದರ್ಭದಲ್ಲಿ ಭಾಗವತ ತಿಳಿಸಿದ ಮಹತ್ತ್ವದ ಪ್ರಮೇಯಗಳ ವಿವರಣೆ ಇಲ್ಲಿದೆ.
ಮಳೆಯ ಕುರಿತ ಪ್ರಾರ್ಥನೆ
अतिवृष्टि अनावृष्टिगळ परिहारक्कागि हागू क्षेमवन्नुंटु माडुव मळॆगागि प्रार्थनॆ
ಶ್ರೀಮದ್ ಭಾಗವತಮ್ — 224 — ಅಸುರಾವೇಶವಾಗದಿರಲು ಏನು ಮಾಡಬೇಕು
ಯಾರೇ ಸಜ್ಜೀವರೂ ತಪ್ಪು ಮಾಡಬೇಕಾದರೆ ಅವರಲ್ಲಿ ಅಸುರಾವೇಶವಾಗಿದ್ದಾಗ ಮಾತ್ರ ಮಾಡಲು ಸಾಧ್ಯ. ನಮ್ಮನ್ನು ಪ್ರಪಾತಕ್ಕೆ ಬೀಳಿಸುವ ಈ ಅಸುರಾವೇಶದಿಂದ ತಪ್ಪಿಸಿಕೊಳ್ಳುವ ಉಪಾಯವನ್ನು ಶ್ರೀಮದ್ ಭಾಗವತ ತಿಳಿಸುತ್ತದೆ.
ಶ್ರೀಮದ್ ಭಾಗವತಮ್ — 223 — ತತ್ವವನ್ನು ನೆನಪಿಟ್ಟುಕೊಳ್ಳಲು ಏನು ಮಾಡಬೇಕು
ಪ್ರವಚನ ಕೇಳಬೇಕಾದರೆ, ಪಾಠ ಕಲಿಯಬೇಕಾದರೆ ತತ್ವ ತಿಳಿಯುತ್ತದೆ, ಆದರೆ ಅದು ನೆನಪಿನಲ್ಲುಳಿಯುವದಿಲ್ಲ. ಕಲಿತ, ತಿಳಿದ ಎಲ್ಲ ಭಗವತ್-ತತ್ವಗಳೂ ಸದಾ ನೆನಪಿನಲ್ಲುಳಿಯಲು ಏನು ಮಾಡಬೇಕು ಎನ್ನುವ ಪ್ರಶ್ನೆಗೆ ಶ್ರೀಮದ್ ಭಾಗವತ ನೀಡಿದ ಉತ್ತರದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 222 — ದೇವರನ್ನು ತಪ್ಪಾಗಿ ತಿಳಿಯಬಾರದು
ಎಂದಿಗೂ, ಯಾವ ಸಂದರ್ಭದಲ್ಲಿಯೂ ದೇವರನ್ನು ತಪ್ಪಾಗಿ ತಿಳಿಯತಕ್ಕದ್ದಲ್ಲ ಎನ್ನುವ ತತ್ವವನ್ನು ಶ್ರೀಮದ್ ಬಾಗವತ ಅದೆಷ್ಟು ಅದ್ಭುತವಾಗಿ ನಿರೂಪಣೆ ಮಾಡುತ್ತದೆ ಎನ್ನುವದನ್ನು ಈ ಭಾಗದಲ್ಲಿ ಕೇಳುತ್ತೇವೆ.
ಶ್ರೀಮದ್ ಭಾಗವತಮ್ — 221 — ದೇವರು ತನಗೆ ತಾನು ಆಶ್ಚರ್ಯ
ದೇವರು ಮತ್ತೊಬ್ಬರಿಗೆ ಆಶ್ಚರ್ಯಕರರಾಗಿರಬಹುದು, ಆದರೆ ಅವನಿಗೆ ಅವನು ಆಶ್ಚರ್ಯಸ್ವರೂಪ ಎಂದು ಭಾಗವತ ಹೇಳುತ್ತದೆ — “ವಿಸ್ಮಾಪನಂ ಸ್ವಸ್ಯ ಚ” ಎಂದು. ಒಬ್ಬ ವ್ಯಕ್ತಿ ತನಗೆ ತಾನೇ ಹೇಗೆ ಆಶ್ಚರ್ಯಕರನಾಗಲು ಸಾಧ್ಯ ಎಂಬ ವಿಷಯದ ಚರ್ಚೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 220 — ದೃಢವಾದ ಜ್ಞಾನದ ಲಕ್ಷಣ
ಇವತ್ತಿನ ಕಲಿಯುಗದಲ್ಲಿ ಕಂಡ ಕಂಡ ಜನರ ಮಾತನ್ನು ಕೇಳುವದರಿಂದ ನಮ್ಮ ಬುದ್ಧಿ ವಿಚಲಿತವಾಗುತ್ತಿರುತ್ತದೆ. ಆ ರೀತಿ ಆಗಬಾರದು ಎಂದರೆ ಏನು ಮಾಡಬೇಕು, ಯಾರನ್ನು ಗುರು ಎಂದು ಸ್ವೀಕರಿಸಬೇಕು ಎನ್ನುವದರ ಕುರಿತು ಶ್ರೀಮದ್ ಭಾಗವತ ತಿಳಿಸುವ ಪ್ರಮೇಯರತ್ನಗಳ ನಿರೂಪಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 219— ಉದ್ಧವರ ಭಕ್ತ್ಯುದ್ರೇಕ
ಉತ್ಕಂಠತೆ, ಉತ್ಸುಕತೆ ಎಂಬ ಶಬ್ದಗಳ ಅರ್ಥದ ವ್ಯತ್ಯಾಸ, ಉತ್ಕಂಠತೆ ಎಂಬ ಶಬ್ದಕ್ಕೆ ಶ್ರೀಮದ್ ವಿಜಯಧ್ವಜತೀರ್ಥಶ್ರೀಪಾದಂಗಳವರು ತಿಳಿಸಿದ ದಿವ್ಯ ಅರ್ಥದ ವಿವರಣೆಯೊಂದಿಗೆ ಶ್ರೀಕೃಷ್ಣನ ಸ್ಮರಣೆಯಾದ ತಕ್ಷಣ ಉದ್ಧವರು ಭಕ್ತ್ಯುದ್ರೇಕದಿಂದ ಅಸಂಪ್ರಜ್ಞಾತಸಮಾಧಿಯ ಅವಸ್ಥೆಯನ್ನು ಮುಟ್ಟಿದ್ದರ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 218— ಅವತಾರದ ಕಥೆಗಳ ಮಹತ್ತ್ವ
ಪರೀಕ್ಷಿದ್ರಾಜರು ಪ್ರಶ್ನೆ ಮಾಡಿದ್ದು ಸೃಷ್ಟಿಯ ಕುರಿತು. ಅದಕ್ಕೆ ಉತ್ತರ ನೀಡುವ ಮುನ್ನ ಶುಕಾಚಾರ್ಯರು ವಿದುರ-ಉದ್ಧವ,ಮೈತ್ರೇಯ ಸಂವಾದದ ಮುಖಾಂತರ ಶ್ರೀಕೃಷ್ಣನ ಕಥೆಯನ್ನು ಹೇಳುತ್ತಾರೆ. ಅದಕ್ಕೆ ಅದ್ಭುತಕಾರಣವನ್ನು ಸ್ವಯಂ ಭಾಗವತವೇ ನೀಡುತ್ತದೆ. ಆ ವಚನಗಳ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 217— ದುರ್ಯೋಧನನನ್ನು ದೇವರು ಮೊದಲೇ ಏಕೆ ಕೊಲ್ಲಲಿಲ್ಲ
ಪಾಂಡವರು ನನ್ನ ಪ್ರಾಣ ಎಂದು ಹೇಳಿದ ಭಗವಂತ, ಭೀಮನಿಗೆ ದುರ್ಯೋಧನ ವಿಷ ಹಾಕಿದಾಗಲೇ, ಅರಗಿನ ಮನೆಯಲ್ಲಿ ಅವರೆಲ್ಲರನ್ನೂ ಸುಡಲು ಪ್ರಯತ್ನಿಸಿದಾಗಲೇ, ದ್ಯೂತದಲ್ಲಿ ದ್ರೌಪದಿಗೆ ಅವಮಾನ ಮಾಡಿದಾಗಲೇ ಏಕೆ ದುರ್ಯೋಧನಾದಿಗಳನ್ನು ಕೊಲ್ಲಲಿಲ್ಲ. ದ್ವೇಷ ಮಾಡಲೂ ಸಹ ದುರ್ಯೋಧನನಿಗೆ ಅಷ್ಟು ಸಮಯ ನೀಡುವದಾದರೆ, ಪೂತನೀ ಮುಂತಾದವರಿಗೆ ಏಕಾಗಿ ಸಮಯ ಕೊಡಲಿಲ್ಲ.
ಶ್ರೀಮದ್ ಭಾಗವತಮ್ — 216— ಕುಶಲಪ್ರಶ್ನೆ-3
ಧರ್ಮ, ಭೀಮ, ಅರ್ಜುನ, ನಕುಲ, ಸಹದೇವ. ಕುಂತಿಯರನ್ನು ವಿದುರರು ನೆನೆಸಿಕೊಳ್ಳುವ ರೀತಿಯೇ ಅದ್ಭುತ. ಎಲ್ಲರ ಕುರಿತೂ ಚನ್ನಾಗಿದ್ದಾರಾ ಎಂದು ಪ್ರಶ್ನೆ ಮಾಡುವ ವಿದುರರು ಧೃತರಾಷ್ಟ್ರನ ಕುರಿತು ಮಾತ್ರ ಕುಶಲಪ್ರಶ್ನೆ ಮಾಡದೆ ಅವನ ಕುರಿತು ದುಃಖ ಪಡುತ್ತಾರೆ. ನಾವು ಕಲಿಯಬೇಕಾದ ಅದ್ಭುತ ಪಾಠವನ್ನು ಆ ಮುಖಾಂತರ ತಿಳಿಸುತ್ತಾರೆ.
ಶ್ರೀಮದ್ ಭಾಗವತಮ್ — 215— ಕುಶಲಪ್ರಶ್ನೆ 2
ಅಂಗಾರ ಅಕ್ಷತೆಗಳನ್ನು ಧರಿಸಬೇಕೋ ಧರಿಸಬಾರದೋ ಎಂಬ ಚರ್ಚೆ ಇಲ್ಲಿದೆ. ಆಧಿ ಎಂಬ ಶಬ್ದಕ್ಕೆ ವ್ಯಾಖ್ಯಾನವನ್ನು ಮಾಡುತ್ತ, ದೇವರಲ್ಲಿ ಎಂದಿಗೂ ದೋಷಲೇಶದ ಚಿಂತನೆಯನ್ನೂ ಮಾಡಬಾರದು ಎಂಬ ಪರಮಮಂಗಲ ಪಾಠವನ್ನು ಶ್ರೀಮದಾಚಾರ್ಯರು ನಮಗಿಲ್ಲಿ ಕಲಿಸುತ್ತಾರೆ.
ಭಾರತವೇ ಕರ್ಮಭೂಮಿ
ವಿದೇಶಗಮನದ ಕುರಿತು ನಿರ್ಣಯ ತೆಗೆದುಕೊಳ್ಳುವ ಮುನ್ನ ಭಾಗವತದ ಈ ಮಾತನ್ನೊಮ್ಮೆ ಕೇಳಿ
ಶ್ರೀಮದ್ ಭಾಗವತಮ್ — 214 — ಕುಶಲಪ್ರಶ್ನೆಯನ್ನು ಮಾಡುವ ಕ್ರಮ
ಇಬ್ಬರು ಪರಿಚಿತರು ಭೇಟಿಯಾದಾಗ ಪರಸ್ಪರರ ಕುಟುಂಬದವರ ಕ್ಷೇಮದ ಕುರಿತು ಪ್ರಶ್ನೆಯನ್ನು ಮಾಡುವದು ಲೋಕದಲ್ಲಿ ಸಹಜ, ಕಾರಣ ಮನುಷ್ಯರಿಗೆ ಯಾವ ಕ್ಷಣದಲ್ಲಿ ಏನು ಸಮಸ್ಯೆ ಬೇಕಾದರೂ ಉಂಟಾಗಬಹುದು. ವಿದುರ-ಉದ್ಧವರು ಭೇಟಿಯಾದಾಗ ವಿದುರರು ಶ್ರೀಕೃಷ್ಣ ಮುಂತಾದ ಸಕಲರ ಕುರಿತು ಪ್ರಶ್ನೆಯನ್ನು ಮಾಡುತ್ತಾರೆ. ಆದರೆ, ಶ್ರೀಕೃಷ್ಣನಿಗೆ ಅಸೌಖ್ಯದ, ಅನರ್ಥದ ಪ್ರಸಕ್ತಿಯೇ ಇಲ್ಲ. ಸಾಮಾನ್ಯರು ಪ್ರಶ್ನೆ ಮಾಡಿದರೆ ಅವರಿಗೆ ತತ್ವ ತಿಳಿದಿಲ್ಲ ಎನ್ನಬಹುದು. ಆದರೆ ವಿದುರರಂತಹ ಮಹಾನುಭಾವರು, ಉದ್ಧವರಂತಹ ಭಾಗವತೋತ್ತಮರಿಗೆ ಈ ರೀತಿ ಪ್ರಶ್ನೆ ಮಾಡುವದು ತತ್ವಶಾಸ್ತ್ರದ ದೃಷ್ಟಿಯಿಂದ ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಯನ್ನು ಕೈಗೆತ್ತಿಕೊಂಡು ಭಗವತ್ಪಾದರು ಕಾರುಣ್ಯದಿಂದ ಉತ್ತರಿಸಿದ್ದಾರೆ. ಆ ವಚನಗಳ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 213 — ತೀರ್ಥಯಾತ್ರೆಯ ಮಹತ್ತ್ವ
ಮನುಷ್ಯ ಸುಖ ದುಃಖಗಳಿಗೆ ಅತೀತನಲ್ಲ. ಅವು ಆಗಿಯೇ ಅಗುತ್ತವೆ. ಆದರೆ ಸುಖ ದುಃಖಗಳ ಪರಿಣಾಮಕ್ಕೊಳಗಾಗಬಾರದು ಎನ್ನುವದು ಗೀತಾಸಿದ್ಧಾಂತ. “ದುಃಖವಾಗುತ್ತದೆ, ಆದರೆ ಅದರ ಪರಿಣಾಮಕ್ಕೊಳಗಾಗಬಾರದು” ಎನ್ನುವ ಮಾತು ನಮಗೆ ಅರ್ಥವಾಗುವದು ತುಂಬ ಕಷ್ಟ. ಆದರೆ ವಿದುರರು ಸ್ವಯಂ ಆ ಗೀತಾತತ್ವವನ್ನು ಆಚರಿಸಿ ತೋರಿಸಿ ಅತ್ಯಂತ ಸುಲಭವಾಗಿ ಅದನ್ನು ಅರ್ಥ ಮಾಡಿಸುತ್ತಾರೆ.
ಶ್ರೀಮದ್ ಭಾಗವತಮ್ — 212 — ವಿದುರರ ತೀರ್ಥಯಾತ್ರೆ
ತೀರ್ಥಯಾತ್ರೆಯನ್ನು ಏಕೆ ಮಾಡಬೇಕು, ಹೇಗೆ ಮಾಡಬೇಕು ಎಂಬ ಪ್ರಶ್ನೆಗೆ ಉತ್ತರವನ್ನು ನೀಡುತ್ತ ವಿದುರರ ಮಾಡಿದ ಅದ್ಭುತ ತೀರ್ಥಯಾತ್ರೆಯ ವರ್ಣನೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 211 — ವಿದುರರು ಕಲಿಸುವ ಪಾಠ
ಇಡಿಯ ಜೀವನವನ್ನು ಹಸ್ತಿನಾವತಿಯ ಸಿಂಹಾಸನದ ಸೇವೆಯಲ್ಲಿ ಕಳೆದ ವಿದುರರಿಗೆ ದುರ್ಯೋಧನ ತೀವ್ರವಾದ ಅವಮಾನ ಮಾಡುತ್ತಾನೆ, ಧೃತರಾಷ್ಟ್ರ ಅದನ್ನು ತಡೆಯದೇ ಮತ್ತಷ್ಟು ಅವಮಾನ ಮಾಡುತ್ತಾನೆ. ಇಂತಹ ಪ್ರಸಂಗದಲ್ಲಿ ವಿದುರರು ನಡೆದುಕೊಂಡ ರೀತಿ ಪ್ರತಿಯೊಬ್ಬ ಸಾಧಕನ ಜೀವನಕ್ಕೆ ಮಾದರಿ. ಆ ವಿಷಯದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 210 — ವಿದುರರ ಕಥೆಯ ಆವಶ್ಯಕತೆ
ಅಪರೋಕ್ಷಜ್ಞಾನ, ಉತ್ಕ್ರಾಂತಿ, ಮಹಾಪ್ರಳಯ ಮುಂತಾದವುಗಳನ್ನು ನಿರೂಪಿಸಿ ಸೃಷ್ಟಿಯನ್ನು ನಿರೂಪಿಸಲು ಹೊರಟ ಭಾಗವತದ ಈ ಸಂದರ್ಭದಲ್ಲಿ ವಿದುರರ ಕಥೆಯ ನಿರೂಪಣೆ ಬರುತ್ತದೆ. ಈ ತತ್ವಗಳ ಪ್ರತಿಪಾದನೆಯ ಮಧ್ಯದಲ್ಲಿ ಯಾಕಾಗಿ ಈ ಕಥೆಯನ್ನು ಹೇಳಬೇಕು ಎಂಬ ಪ್ರಶ್ನೆಗೆ ನಮ್ಮ ಶ್ರೀಮದ್ ವಿಜಯಧ್ವಜತೀರ್ಥಶ್ರೀಪಾದಂಗಳವರು ನೀಡಿದ ಅದ್ಭುತ ಉತ್ತರದ ವಿವರಣೆ ಇಲ್ಲಿದೆ.
ಚಾತುರ್ಮಾಸ್ಯದ ಸಂಕಲ್ಪ
ಚಾತುರ್ಮಾಸ್ಯಸಂಕಲ್ಪವನ್ನು ಮಾಡುವ ಕ್ರಮ, ಮಂತ್ರ ಮತ್ತು ಅದರ ಅರ್ಥವಿವರಣೆಯೊಂದಿಗೆ. ಇದನ್ನು ಕೇಳುತ್ತ ನೀವು ಸಂಕಲ್ಪವನ್ನು ಮಾಡಬಹುದು.
ಅತೃಪ್ತಿ ಏಕೆ ಕಾಡುತ್ತದೆ
ಜೀವನದಲ್ಲಿ ಸಾಕಷ್ಟು ಹಣ ಸಂಪಾದನೆ ಮಾಡಿದ್ದರೂ, ಜವಾಬ್ದಾರಿಗಳನ್ನೆಲ್ಲ ಮುಗಿಸಿದ್ದರೂ, ಅನುಭವಿಸಬೇಕಾದ ಸೌಲಭ್ಯಗಳನ್ನೆಲ್ಲ ಅನುಭವಿಸಿದ್ದರೂ, ಜೀವನದ ಕಡೆಯಲ್ಲಿ ಯಾವ ಸಮಸ್ಯೆ ಇಲ್ಲದಿದ್ದರೂ ಮನುಷ್ಯರಿಗೆ ಅತೃಪ್ತಿ ಕಾಡುತ್ತದೆ. ಏಕೆ
ದೇವರ ಮತ್ತು ಪರಶುಕ್ಲತ್ರಯರ ಸೌಂದರ್ಯಕ್ಕೂ ಇರುವ ವ್ಯತ್ಯಾಸ
ಭಗವಂತನಲ್ಲಿ, ಮಹಾಲಕ್ಷ್ಮೀದೇವಿಯರಲ್ಲಿ, ಋಜು-ಋಜುಪತ್ನಿಯರ ದೇಹಗಳಲ್ಲಿ ಯಾವ ದುರ್ಲಕ್ಷಣಗಳಿಲ್ಲ, ಎಲ್ಲರಲ್ಲಿಯೂ ಮೂವತ್ತೆರಡು ಲಕ್ಷಣಗಳಿವೆ ಎಂದು ಶಾಸ್ತ್ರ ಹೇಳುತ್ತದೆ. ಹಾಗಾದರೆ ಈ ವಿಷಯದಲ್ಲಿ ಎಲ್ಲರೂ ಸಮಾನರಾದರಲ್ಲ, ಏನು ವ್ಯತ್ಯಾಸ ಎಂಬ ಪ್ರಶ್ನೆಗೆ ಶ್ರೀಮದಾಚಾರ್ಯರು ನೀಡಿದ ಉತ್ತರದ ವಿವರಣೆ ಇಲ್ಲಿದೆ.
ಶ್ರೀ ವಿಜಯೀಂದ್ರತೀರ್ಥರ ಸ್ಮರಣೆ
ಪ್ರತೀನಿತ್ಯವೂ ಸ್ಮರಣೆಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ “ಚಾತುರ್ಯೈಕಾಕೃತಿಃ” ಎಂಬ ಶ್ಲೋಕದ ಸಂಕ್ಷಿಪ್ತ ಅರ್ಥಾನುಸಂಧಾನ.
ಶಿಲೆ, ಅತಿರಿಕ್ತ ತಪಸ್ಸು, ಭಕ್ತಿ
ಅಹಲ್ಯಾದೇವಿಯರು ನಿಜವಾಗಿಯೂ ಶಿಲೆಯಾಗಿದ್ದರೆ? ಅತಿರಿಕ್ತ ತಪಸ್ಸಿನ ವಿವರಣೆ ಮತ್ತು ವಿಷ್ಣುಭಕ್ತಿಯ ಮಹಾಮಾಹಾತ್ಮ್ಯದ ಚಿಂತನೆ ಇಲ್ಲಿದೆ.
ಗೌತಮರ ತಪ್ಪಿಗೆ ಅಹಲ್ಯೆ ಏಕೆ ಬಲಿಪಶು?
ಗೌತಮ ಮಹರ್ಷಿಗಳು ತಮ್ಮ ಯೋಗ್ಯತೆ ಮೀರಿ ತಪಸ್ಸು ಮಾಡಿದ್ದು ಅವರ ತಪ್ಪು. ಅವರು ಮಾಡಿದ್ದಾರೆ. ಆ ಅಧಿಕ ತಪಸ್ಸಿನ ಪುಣ್ಯವನ್ನು ಅವರಿಂದ ಪಡೆಯುವದು ದೇವತೆಗಳ ಕರ್ತವ್ಯ. ಇದರ ಮಧ್ಯದಲ್ಲಿ ಅಹಲ್ಯೆ ಏಕೆ ಬಲಿಪಶು ಆಗಬೇಕು.
ಅಹಲ್ಯಾದೇವಿಯರ ಉದ್ಧಾರ
ಅಹಲ್ಯಾದೇವಿಯರು ಮಾಡಿದ ಅತ್ಯಂತ ಕಠಿಣವಾದ ತಪಸ್ಸು, ಅವರ ಮೇಲೆ ಶ್ರೀರಾಮಚಂದ್ರದೇವರು ಮಾಡಿದ ಪರಮಾನುಗ್ರಹದ ನಿರೂಪಣೆ ಇಲ್ಲಿದೆ.
ಇಂದ್ರ ದೇವರ ದೃಷ್ಟಿಯಿಂದ..
ಶಾಪದಿಂದ ವೃಷಣಗಳನ್ನು ಕಳೆದುಕೊಂಡ ಇಂದ್ರದೇವರಿಗೆ ಮೇಕೆಯ ವೃಷಣಗಳನ್ನು ಪಿತೃಗಳು ಜೋಡಿಸುತ್ತಾರೆ. ಮೇಕೆಯನ್ನೇ ಏಕೆ ಆರಿಸಿಕೊಂಡರು, ಅಶ್ವಿನೀ, ವರುಣ, ಧನ್ವಂತರಿಗಳು ಈ ಕಾರ್ಯವನ್ನು ಮಾಡದೇ, ಪಿತೃದೇವತೆಗಳೇ ಏಕೆ ಮಾಡಿದರು, ಆ ಮೇಕೆಯ ಗತಿಯೇನು ಇತ್ಯಾದಿ ವಿಷಯಗಳ ನಿರೂಪಣೆ ಇಲ್ಲಿದೆ.
ಇಂದ್ರ ಅಹಲ್ಯೆಯರಿಗೆ ಶಾಪ
ಗೌತಮರು ನದಿಯ ಸ್ನಾನಕ್ಕಾಗಿ ತೆರಳಿದ್ದಾಗ ಗೌತಮರ ವೇಷದಲ್ಲಿಯೇ ಇಂದ್ರದೇವರು ಬರುತ್ತಾರೆ. ಬಂದಿರುವದು ಗಂಡನಲ್ಲ, ಇಂದ್ರ ಎಂದು ತಿಳಿದಿದ್ದರೂ, ಆ ಕ್ಷಣದ ದೌರ್ಬಲ್ಯದಿಂದ, ದುಷ್ಟಬುದ್ಧಿಯಿಂದ ಅಹಲ್ಯೆಯೂ ತಪ್ಪನ್ನೆಸಗುತ್ತಾರೆ. ಆ ನಂತರ ಇಂದ್ರದೇವರು ಆಶ್ರಮದಿಂದ ಸರಸರನೇ ನಡೆದು ಹೋಗುವಾಗ, ಗೌತಮರು ಬಂದು, ತಮ್ಮ ಜ್ಞಾನದೃಷ್ಟಿಯಿಂದ ಎಲ್ಲವನ್ನೂ ಕಂಡು ಇಂದ್ರ-ಅಹಲ್ಯೆ ಇಬ್ಬರಿಗೂ ಶಾಪವನ್ನು ನೀಡುತ್ತಾರೆ. ತಮ್ಮ ತಪ್ಪನ್ನರಿತು ಕಾಲಿಗೆ ಬಿದ್ದು ಕ್ಷಮೆ ಕೇಳಿದ ಅಹಲ್ಯೆಗೆ ಶಾಪವಿಮೋಚನೆಯನ್ನೂ ಅನುಗ್ರಹಿಸುತ್ತಾರೆ, ಪಾಪಪ್ರಕ್ಷಾಲನೆಯ ನಂತರ ಸ್ವೀಕರಿಸುತ್ತೇನೆ ಎಂಬ ಅಭಯವನ್ನೂ ನೀಡುತ್ತಾರೆ. ಕುಳಿತಿದ್ದಕ್ಕೆ ನಿಂತದ್ದಕ್ಕೆ ವಿಚ್ಛೇದನವನ್ನು ತೆಗೆದುಕೊಳ್ಳುವ, ಅಗ್ನಿಸಾಕ್ಷಿಯಾಗಿ ಆದ ಮದುವೆಯನ್ನು ಮುರಿಯುವ ಇಂದಿನ ಜನರಿಗೆ ಗೌತಮರು ಕಲಿಸುವ ಅದ್ಬುತ ಪಾಠ ಇಲ್ಲಿದೆ.
ಅಹಲ್ಯಾದೇವಿಯರ ಜನ್ಮ
ಬ್ರಹ್ಮದೇವರ ಪುತ್ರಿಯಾಗಿ ಅಹಲ್ಯಾದೇವಿಯರ ಜನ್ಮ, ಅವರ ಅದ್ಭುತ ರೂಪ, ಅವರ ಹೆಸರಿನ ಅರ್ಥ, ಇಂದ್ರದೇವರಿಗೆ ಅವರನ್ನು ಮದುವೆಯಾಗಲು ಉಂಟಾದ ಬಯಕೆ, ಆದರೆ ಗೌತಮರ ಆಶ್ರಮದಲ್ಲಿ ಅಹಲ್ಯೆಯನ್ನು ಬಹುಕಾಲದವರೆಗೆ ಇರಿಸಿ ಗೌತಮರ ತಪಃಸಿದ್ಧಿಯನ್ನು ಕಂಡು ಬ್ರಹ್ಮದೇವರು ಅವರಿಗೆ ಮದುವೆಮಾಡಿಕೊಟ್ಟ ವಿವರ ಈ ಪ್ರವಚನದಲ್ಲಿದೆ, ಅಹಲ್ಯಾದೇವಿಯರ ವೃತ್ತಾಂತವನ್ನು ಕೇಳುವ ಮುನ್ನ ಯಾವ ಎಚ್ಚರವಿರಬೇಕು ಎಂಬ ವಾಲ್ಮೀಕಿಯ ವಚನದ ಅರ್ಥಾನುಸಂಧಾನದೊಂದಿಗೆ.
ಶ್ರೀಮದ್ ಭಾಗವತಮ್ — 209 — ರತ್ನಮಾಲಾ
ಶೌನಕರು ಸೂತರಿಗೆ ಮಾಡಿದ ಪ್ರಶ್ನೆ, ಅದಕ್ಕೆ ಉತ್ತರಗಳು, ವೇದವ್ಯಾಸದೇವರು ನಾರದರಿಗೆ ಮಾಡಿದ ಪ್ರಶ್ನೆ, ಅವರು ನೀಡಿದ ಉತ್ತರಗಳು, ಪರೀಕ್ಷಿದ್ರಾಜರು ಋಷಿಗಳಿಗೆ ಮಾಡಿದ ಪ್ರಶ್ನೆ, ಶುಕಾಚಾರ್ಯರ ಆಗಮನ, ಆ ಶುಕಾಚಾರ್ಯರು ನೀಡಿದ ಉತ್ತರ, ಆ ನಂತರ ನಾರದರು ಬ್ರಹ್ಮದೇವರ ಬಳಿಯಲ್ಲಿ ಮಾಡಿದ ಪ್ರಶ್ನೆಗಳು ಅವುಗಳಿಗೆ ಬ್ರಹ್ಮದೇವರು ನೀಡಿದ ಉತ್ತರ, ಆ ನಂತರ ಆ ನಂತರ ಮತ್ತೆ ಪರೀಕ್ಷಿದ್ರಾಜರು ಮಾಡಿದ ಪ್ರಶ್ನೆಗಳು ಹೀಗೆ ಮೊದಲನೆಯ ಸ್ಕಂಧದಿಂದ ಆರಂಭಿಸಿ ಎರಡನೆಯ ಸ್ಕಂಧದ ಕಡೆಯವರೆಗೆ ಭಾಗವತ ಪ್ರಶ್ನೋತ್ತರಗಳಲ್ಲಿ ಬೆಳೆದು ಬಂದ ಬಗೆಯ ಸಿಂಹಾವಲೋಕನ ಇಲ್ಲಿದೆ.
ಶ್ರೀಮದ್ ಭಾಗವತಮ್ — 208 — ದೇವರು ಸರ್ವರಿಗೂ ಆಧಾರ
ದೇವರನ್ನು ಏಕೆ ಅಚಿಂತ್ಯ ಎಂದು ಶಾಸ್ತ್ರ ಕರೆಯುತ್ತದೆ ಎಂಬ ಪ್ರಶ್ನೆಗೆ ಇಲ್ಲಿ ಉತ್ತರ ದೊರೆಯುತ್ತದೆ. ಸಾತ್ವಿಕ-ಸಾತ್ವಿಕ, ಸಾತ್ವಿಕ-ರಾಜಸ, ಸಾತ್ವಿಕ-ತಾಮಸ, ರಾಜಸ-ಸಾತ್ವಿಕ, ರಾಜಸ-ರಾಜಸ, ರಾಜಸ-ತಾಮಸ, ತಾಮಸ-ಸಾತ್ವಿಕ, ತಾಮಸ-ರಾಜಸ, ತಾಮಸ-ತಾಮಸ ಎಂಬ ವಿಭಾಗದ ವಿವರಣೆಯೊಂದಿಗೆ.
ಶ್ರೀಮದ್ ಭಾಗವತಮ್ — 207 — ನವರಂಧ್ರಗಳ ನಿರ್ಮಾಣ
ಪುರುಷಶರೀರದಲ್ಲಿ ಕಣ್ಣು ಕಿವಿ ಮುಂತಾದ ನವರಂಧ್ರಗಳು, ನಾಭಿ ಉತ್ಪನ್ನವಾದ ಪ್ರಕ್ರಿಯೆಯನ್ನು ನಾವಿಲ್ಲಿ ಕೇಳುತ್ತೇವೆ. ಕೈಗಳ ಮಹತ್ವ, ಜನನೇಂದ್ರಿಯದ ಮಹತ್ತ್ವ ಹಾಗೂ ನಾಭಿಯ ಮಹತ್ತ್ವವನ್ನು ಭಾಗವತ ಈ ಸಂದರ್ಭದಲ್ಲಿ ಅದ್ಭುತವಾಗಿ ಮನಗಾಣಿಸುತ್ತದೆ.
ಶ್ರೀಮದ್ ಭಾಗವತಮ್ — 206 — ಪಿಂಡಾಂಡದ ಸೃಷ್ಟಿ
ಇವತ್ತಿನ ಕಾಲದಲ್ಲಿ ಯಾವುದಾದರೂ ಹೊಸ ಪದಾರ್ಥವನ್ನು ನಿರ್ಮಾಣ ಮಾಡಬೇಕಾದರೆ ಲ್ಯಾಬ್ ಗಳಲ್ಲಿ ಅನೇಕ ವರ್ಷಗಳ ವರೆಗೆ ಪರೀಕ್ಷೆ ನಡೆಯುತ್ತದೆ. ಹಾಗೆ, ಸಮಗ್ರ ಗರ್ಭೋದಕದಲ್ಲಿ ಮೊದಲು ಒಂದು ಪಿಂಡವನ್ನು (ದೇಹದಲ್ಲಿರುವ ಎಲ್ಲ ವಸ್ತುಗಳ ಮುದ್ದೆಯನ್ನು) ಭಗವಂತ ನಿರ್ಮಿಸುತ್ತಾನೆ. ಆ ಪಿಂಡದಲ್ಲಿ ಸ್ವಯಂ ಬ್ರಹ್ಮದೇವರು ‘ಜೀವ’ನಾಗಿ ಪ್ರವೇಶಿಸುತ್ತಾರೆ. ಪರಮಾತ್ಮ ಆ ದೇಹದ ಒಳಗೆಲ್ಲ ಓಡಾಡುತ್ತ ಎಲುಬು, ಮಾಂಸ, ರಕ್ತ, ನರ, ನಾಡಿಗಳನ್ನೆಲ್ಲ ಸೃಷ್ಟಿ ಮಾಡಿ ಆ ನಂತರ ಒಂದೊಂದೇ ಇಂದ್ರಿಯವನ್ನು ಸೃಷ್ಟಿ ಮಾಡುವ ಪ್ರಕ್ತಿಯೆಯ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 205 — ಪುರಾಣದ ಹತ್ತು ಲಕ್ಷಣಗಳು
ಪ್ರತೀನಿತ್ಯ ಪೂಜೆ ಮಾಡುವ ವ್ಯಕ್ತಿ, ವಿಶೇಷವಾದ ಸಂದರ್ಭಗಳಲ್ಲಿ ಅಥವಾ ವಿಶೇಷ ಫಲಕ್ಕಾಗಿ ವಿಶೇಷ ಪೂಜಾದಿಗಳನ್ನು ಮಾಡಬೇಕೆ ಮಾಡಬಾರದೆ ಎಂಬ ಪ್ರಶ್ನೆಗೆ ಭಾಗವತ ನೀಡಿದ ಉತ್ತರ, ನಾರದರ ಕಾರುಣ್ಯ ಮಾಹಾತ್ಮ್ಯದ ಚಿಂತನೆಗಳೊಂದಿಗೆ.
ಶ್ರೀಮದ್ ಭಾಗವತಮ್ — 204 — ಸರ್ವದಾ ಚಿಂತನೆ ಮಾಡಲೇಬೇಕಾದ ಭಗವಂತನ ಗುಣ
ಮನಸ್ಸು ಗಾಸಿಗೊಂಡಾಗಲೂ, ದೇಹದಲ್ಲಿ ಆರೋಗ್ಯ ಇಲ್ಲದಾಗಲೂ ಯಾವ ಭಗವಂತನ ಗುಣದ ಚಿಂತನೆಯನ್ನು ಸರ್ವಥಾ ಬಿಡಬಾರದೋ ಅಂತಹ ಮಹತ್ತ್ವದ ಚಿಂತನೆಯನ್ನು ಭಗವಂತ ಬ್ರಹ್ಮದೇವರಿಗೆ ಉಪದೇಶಿಸುತ್ತಾನೆ. ಹಿಂದಿನ ಉಪನ್ಯಾಸಗಳಲ್ಲಿ ವಿಸ್ತಾರವಾಗಿ ತಿಳಿದಂತಹ ಚತುಃಶ್ಲೋಕೀ ಭಾಗವತದ ಸಂಗ್ರಹ ಇಲ್ಲಿದೆ.
ಶ್ರೀಮದ್ ಭಾಗವತಮ್ — 203 — ದೇವರ ವ್ಯಾಪ್ತಿ
ಸಕಲ ಪದಾರ್ಥಗಳೂ ಭಗವಂತನಲ್ಲಿ ಇವೆ, ಭಗವಂತ ಅವುಗಳಲ್ಲಿ ಇಲ್ಲ ಎಂಬ ಮಾತನ್ನು ಭಗವದ್ಗೀತೆ ಮುಂತಾದ ಶಾಸ್ತ್ರಗಳಲ್ಲಿ ಕೇಳುತ್ತೇವೆ. ಇಲ್ಲಿಯೂ ಸಹ — ನ ತೇಷು ಅಹಮ್, ಎಂದು. ಈ ತತ್ವವನ್ನು ಅರ್ಥ ಮಾಡಿಸುತ್ತ ಶ್ರೀಮದಾಚಾರ್ಯರು ದೇವರ ವ್ಯಾಪ್ತಿಯ ಕುರಿತ ಅತ್ಯಪೂರ್ವ ಪ್ರಮೇಯಗಳನ್ನು ತಿಳಿಸುತ್ತಾರೆ. ಆ ವಚನಗಳ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 202 — ಎರಡು ರಹಸ್ಯ ಉಪಾಸನೆಗಳು
ನಾವು ಪ್ರತೀದಿವಸ ಪ್ರತಿಯೊಂದು ಪದಾರ್ಥದಿಂದ ತೊಂದರೆಗೆ ಒಳಗಾಗುತ್ತಿರುತ್ತೇವೆ. ಆ ರೀತಿಯ ತೊಂದರೆ ಆಗಬಾರದು ಎಂದರೆ ಯಾವ ಜ್ಞಾನವನ್ನು ಪಡೆಯಬೇಕು, ದೇವರ ಯಾವ ಗುಣವನ್ನು ಉಪಾಸನೆ ಮಾಡಬೇಕೆಂಬ ವಿವರ ಇಲ್ಲಿದೆ.
ಶ್ರೀಮದ್ ಭಾಗವತಮ್ — 201 — ದೇವರ ಸ್ವಾತಂತ್ರ್ಯ
ಒಬ್ಬ ಚೇತನನನ್ನು ದೇವರು ಎಂದು ನಿಗದಿ ಮಾಡಿಕೊಂಡು ಅವನೇ ದೇವರು ಎಂದು ವಾದಿಸುವದಲ್ಲ, ದೇವರು ಎಂದಾಗಬೇಕಾದರೆ ಯಾವ ಲಕ್ಷಣಗಳಿರಬೇಕೋ ಆ ಲಕ್ಷಣಗಳುಳ್ಳ ಚೇತನನನ್ನು ದೇವರು ಎಂದು ಒಪ್ಪಬೇಕು ಎಂದು ಸಾರಿದವರು ಶ್ರೀಮದಾಚಾರ್ಯರು. ದೇವರು ಎಂದಾಗಬೇಕಾದರೆ ಇರಬೇಕಾದ ಮೊಟ್ಟ ಮೊದಲ ಲಕ್ಷಣ, ಸ್ವಾತಂತ್ರ್ಯ. ಆ ಗುಣದ ಕುರಿತು ಭಾಗವತ ಭಾಗವತ ತಾತ್ಪರ್ಯಗಳು ತಿಳಿಸಿರುವ ಅದ್ಭುತ ವಿಷಯಗಳ ನಿರೂಪಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 200 — ಬ್ರಹ್ಮದೇವರ ಪ್ರಾರ್ಥನೆ
ನಮ್ಮ ಸಾಧನೆಯ ಜೀವನದಲ್ಲಿ ನಮಗಿರಬೇಕಾದ ಎಚ್ಚರಗಳೇನು ಎನ್ನುವದನ್ನು ಸ್ವಯಂ ಭಗವಂತ ತಿಳಿಸಿಕೊಟ್ಟು, ತಾನು ಯಾವುದರಿಂದ ಪ್ರೀತನಾಗುತ್ತೇನೆ, ಯಾವ ತಪಸ್ಸಿನಿಂದ ಪ್ರೀತನಾಗುವದಿಲ್ಲ ಎಂದು ತಿಳಿಸಿ ಹೇಳಿ ವರವನ್ನು ಬೇಡಲು ಬ್ರಹ್ಮದೇವರಿಗೆ ಆದೇಶಿಸುತ್ತಾನೆ. ಆ ಬ್ರಹ್ಮದೇವರು, ಸಮಗ್ರ ಸಜ್ಜೀವಪ್ರಪಂಚಕ್ಕೆ ಪಾಠ ಕಲಿಸುತ್ತ, ನಾಲ್ಕು ಅದ್ಭುತವಾದ ವರಗಳನ್ನು ಕೇಳುತ್ತಾರೆ. ನಮ್ಮ ಬದುಕನ್ನು ಬದಲಾಯಿಸುವ ಬ್ರಹ್ಮದೇವರ ವಚನಗಳಿವು. ತಪ್ಪದೇ ಕೇಳಿ
ಶ್ರೀಮದ್ ಭಾಗವತಮ್ — 199 — ದೇವರ ದರ್ಶನ
ಬ್ರಹ್ಮದೇವರು ಶ್ವೇತದ್ವೀಪದಲ್ಲಿರುವ ಮುಕ್ತರನ್ನು ಕಾಣುತ್ತ, ಮಹಾಲಕ್ಷ್ಮೀದೇವಿಯರು ಭಕ್ತಿಯಿಂದ ಪತಿಯ ಸೇವೆ ಮಾಡುತ್ತಿರುವದನ್ನು ಕಾಣುತ್ತ, ಆ ಅನಂದನಿಲಯದಲ್ಲಿ ಪರಮಾನಂದನಾದ ಶ್ರೀಮನ್ನಾರಾಯಣನನ್ನು ಕಂಡು ಚರಣಕ್ಕೆರಗಿದ ರೋಮಾಂಚಕಾರಿ ಘಟನೆಯ ಚಿತ್ರಣ ಇಲ್ಲಿದೆ. ಕೇಳಿಯೇ ಆನಂದಿಸಬೇಕಾದ ಭಾಗ
ಶ್ರೀಮದ್ ಭಾಗವತಮ್ — 198 — ಶ್ವೇತದ್ವೀಪದ ವೈಭವ
ಬ್ರಹ್ಮದೇವರ ತಪಸ್ಸಿಗೆ ಒಲಿದ ಭಗವಂತ ತನ್ನ ಶ್ವೇತದ್ವೀಪವನ್ನು ಬ್ರಹ್ಮದೇವರಿಗೆ ತೋರಗೊಡುತ್ತಾನೆ. ಆ ಶ್ವೇತದ್ವೀಪದ ವೈಭವ ಇಲ್ಲಿದೆ.
ಶ್ರೀಮದ್ ಭಾಗವತಮ್ — 197 — ಬ್ರಹ್ಮದೇವರ ತಪಸ್ಸು
ಸತ್ವ-ರಜಸ್-ತಮೋಗುಣಗಳಿಂದ ಆರಂಭಿಸಿ ಬ್ರಹ್ಮಾಂಡದವರೆಗೆ ಸೃಷ್ಟಿಯಾಗಿರುತ್ತದೆ. ಬ್ರಹ್ಮಾಂಡದಲ್ಲಿ ಪರಮಾತ್ಮನ ನಾಭಿಕಮಲದಿಂದ ಬ್ರಹ್ಮದೇವರು ಹುಟ್ಟಿ ಬರುತ್ತಾರೆ. ಆ ಬ್ರಹ್ಮದೇವರಿಗೆ ಭಗವಂತ ತನ್ನನ್ನು ಮೊದಲಿಗೆ ತೋರಗೊಡುವದಿಲ್ಲ. ತನ್ನ ಜನಕನನ್ನು ತಿಳಿಯ ಹೊರಟ ಬ್ರಹ್ಮದೇವರಿಗೆ ತಪಸ್ಸು ಮಾಡು ಎಂದು ಎರಡು ಬಾರಿ ಆದೇಶ ದೊರೆಯುತ್ತದೆ. ಬ್ರಹ್ಮದೇವರು ಮಾಡಿದ ತಪಸ್ಸು ಎಂತಹುದು, ಎಷ್ಟು ದೀರ್ಘವಾದದ್ದು ಎನ್ನುವದರ ವಿವರ ಇಲ್ಲಿದೆ.
ಶ್ರೀಮದ್ ಭಾಗವತಮ್ — 196 — ಜೀವನಿಗೆ ದೇಹ ಬರಲು ಕಾರಣ
ಜೀವ ಅಪ್ರಾಕೃತನಾದವನು, ಅವನಿಗೆ ಪ್ರಾಕೃತ ಪದಾರ್ಥಗಳ ಸಂಪರ್ಕ ಹೇಗೆ ಉಂಟಾಗಲು ಸಾಧ್ಯ, ಆ ಸಂಪರ್ಕದಿಂದ ದೂರವಾಗುವ ಕ್ರಮವೇನು ಎನ್ನುವದನ್ನು ತಿಳಿಸುತ್ತ ಶುಕಾಚಾರ್ಯರು ಪ್ರಕೃತಿ ನಮ್ಮ ಮೇಲೆ ಮಾಡುವ ವಿಕಾರವನ್ನು ಅದ್ಭುತವಾಗಿ ಮನಗಾಣಿಸುತ್ತಾರೆ, ದೇಹ ಇಂದ್ರಿಯಗಳ ಮೇಲೆ ಅಭಿಮಾನವನ್ನು ತ್ಯಾಗ ಮಾಡಿದರೆ ಮಾತ್ರ ಮುಕ್ತಿ ದೊರೆಯಲು ಸಾಧ್ಯ ಎಂಬ ತತ್ವವನ್ನು ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತೆ ತಿಳಿಸುತ್ತಾರೆ.
ಶ್ರೀಮದ್ ಭಾಗವತಮ್ — 195 — ಪರೀಕ್ಷಿದ್ರಾಜರು ಮಾಡಿದ ಪ್ರಶ್ನೆಗಳು
ಮತ್ತೊಮ್ಮೆ ಭೂಮಿಯಲ್ಲಿ ಹುಟ್ಟಿ ಬರದೇ ಇರುವ, ಚರಮದೇಹದಲ್ಲಿರುವ ಶ್ರೀ ಪರೀಕ್ಷಿದ್ರಾಜರು ನಮ್ಮ ಮೇಲೆ ಎಂತಹ ಪರಮಾನುಗ್ರಹ ಮಾಡಿ ಹೋಗಿದ್ದಾರೆ ಎನ್ನುವದು ಅರ್ಥವಾಗುವದು ಅವರು ಶುಕಾಚಾರ್ಯರಲ್ಲಿ ಮಾಡಿದ ಪ್ರಶ್ನೆಗಳಿಂದ. ಯಾವುದಕ್ಕೆ ಉತ್ತರವಾಗಿ ನಮಗೆ ಸಮಗ್ರ ಶ್ರೀಮದ್ ಭಾಗವತ ದೊರೆಯಿತೋ ಅಂತಹ ಪರೀಕ್ಷಿತರ ಪ್ರಶ್ನೆಗಳ ಪಟ್ಟಿ ಇಲ್ಲಿದೆ.
ಶ್ರೀಮದ್ ಭಾಗವತಮ್ — 194— ದೇವರ ದಯೆಯ ಮಹತ್ತ್ವ
ದೇವರಲ್ಲಿ ಭಕ್ತಿ ಮಾಡಿ ದೇವರನ್ನು ಪಡೆದವರು ಯಾರಾದರೂ ಇದ್ದಾರೆಯೇ? ದೇವರು ದೊರೆತ ಬಳಿಕವೂ ಮತ್ತೆ ನಾವು ಸಂಸಾರದಲ್ಲಿ ಆಸಕ್ತರಾದರೆ ಗತಿಯೇನು, ದೇವರು ಕೈಬಿಡುವದಿಲ್ಲವೇ? ಈ ಜನ್ಮದಲ್ಲೇನೋ ದೇವರ ದಯೆ ಕಿಂಚಿತ್ ದೊರಕಿದೆ, ಸತ್ತ ಬಳಿಕ ದೂರವಾದರೆ, ಈ ಜನ್ಮದಲ್ಲಿ ದೊರೆತ ದೇವರ ದಯೆ ಮುಂದಿನ ಜನ್ಮದಲ್ಲಿಯೂ ಇರುತ್ತದೆಯೇ? ಮುಂತಾದ ಅನೇಕ ಪ್ರಶ್ನೆಗಳಿಗೆ ಬ್ರಹ್ಮದೇವರು ನೀಡಿದ ಉತ್ತರಗಳು ಇಲ್ಲಿವೆ. ಭಕ್ತಿ ಮತ್ತು ಭಾಗವತಗಳ ಮಾಹಾತ್ಮ್ಯದೊಂದಿಗೆ.
ಶ್ರೀಮದ್ ಭಾಗವತಮ್ — 193 — ಸಂಸಾರವೆಂಬ ದೇವರ ಆಟ
ದೇವರ ದಯೆಯಾಗಬೇಕಾದರೆ ನಾವು ಸಾಧನೆ ಮಾಡಬೇಕು, ಸಾಧನೆ ಮಾಡಬೇಕೆಂದರೆ ದೇವರು ದಯ ತೋರಬೇಕು. ಅಂದರೆ ದಯೆಯಾಗದೇ ಸಾಧನೆಯಾಗುವಿದಿಲ್ಲ, ಸಾಧನೆಯಾಗದೇ ದಯೆಯಾಗುವದಿಲ್ಲವಲ್ಲ ಎಂಬ ಜ್ವಲಂತ ಪ್ರಶ್ನೆಗೆ ಶ್ರೀಮದ್ ಭಾಗವತ ನೀಡುವ ಅದ್ಭುತ ಉತ್ತರದ ವಿವರಣೆ ಇಲ್ಲಿದೆ. ಈ ಪ್ರಸಂಗದಲ್ಲಿ ಮೂಡಿ ಬರುವ ಪ್ರಶ್ನೆಗಳಿಗೂ ಉತ್ತರ ನೀಡುವದರೊಂದಿಗೆ.
ಶ್ರೀಮದ್ ಭಾಗವತಮ್ — 192 — ದೇವರ ಅವತಾರಗಳು - 5
ಬುದ್ಧಾವತಾರ, ಕಲ್ಕ್ಯವತಾರಗಳ ಕಥೆಗಳನ್ನು ಹೇಳಿದ ಬ್ರಹ್ಮದೇವರು ದೇವರು ಅನಂತ ಎನ್ನುವದನ್ನು ಅದ್ಭುತವಾಗಿ ನಿರೂಪಿಸುತ್ತಾರೆ.
ಶ್ರೀಮದ್ ಭಾಗವತಮ್ — 191 — ದೇವರ ಅವತಾರಗಳು - 04
ಬ್ರಹ್ಮದೇವರ ಮುಖದಿಂದ ಹೊರಹೊಮ್ಮಿದ ಶ್ರೀಕೃಷ್ಣಾವತಾರದ ಮತ್ತು ವೇದವ್ಯಾಸಾವಾತಾರದ ಅದ್ಭುತ ವರ್ಣನೆ.
ಶ್ರೀಮದ್ ಭಾಗವತಮ್ — 190 — ದೇವರ ಅವತಾರಗಳು — 3
ರಾಜ, ಮಹಾರಾಜ, ಚಕ್ರವರ್ತಿ ಎಂಬ ಶಬ್ದಗಳ ಅರ್ಥವನ್ನು ತಿಳಿಯುವದರೊಂದಿಗೆ ಭಗವಂತನ ಅದ್ಭುತವಾದ ರಾಜರಾಜೇಶ್ವರರೂಪದ ಚಿಂತನೆ ಇಲ್ಲಿದೆ. ಧನ್ವಂತರಿ, ಪರಶುರಾಮ, ಶ್ರೀರಾಮಚಂದ್ರ ಅವತಾರಗಳ ವಿವರಣೆಯೊಂದಿಗೆ.
ಶ್ರೀರಾಮನೆಂಬ ಅದ್ಭುತ
ಬ್ರಹ್ಮದೇವರು ಹೇಳಿದ ರಾಮದೇವರ ದಿವ್ಯ ಕಥೆ. ಬ್ರಹ್ಮದೇವರ ವಚನಗಳಿಗೆ ಭಾವಿಬ್ರಹ್ಮರ ವ್ಯಾಖ್ಯಾನದೊಂದಿಗೆ.. ತಪ್ಪದೇ ಕೇಳಿ. 👆
ಶ್ರೀಮದ್ ಭಾಗವತಮ್ — 189 — ದೇವರ ಅವತಾರಗಳು-2
ಧ್ರುವರಾಜರಿಗೊಲಿದ ವಾಸುದೇವಾವತಾರ, ಪೃಥುಮಹಾರಾಜರಲ್ಲಿರುವ ಪೃಥು ಎಂಬ ರೂಪ, ನಾಭಿರಾಜರ ಮಗನಾಗಿ ಬಂದ ಋಷಭಾವತಾರ, ಬ್ರಹ್ಮದೇವರಿಗಾಗಿ ಅವತರಿಸಿದ ಹಯಗ್ರೀವಾವತಾರ, ವೈವಸ್ವತಮನುವನ್ನು ರಕ್ಷಿಸಿದ ಮತ್ಸ್ಯಾವತಾರ, ಮಂದರವನ್ನು ಹೊತ್ತ ಕೂರ್ಮಾವತಾರ, ಪ್ರಹ್ಲಾದರಾಜರ ದೈವ ನರಸಿಂಹಾವತಾರ, ಗಜೇಂದ್ರನನ್ನುದ್ಧರಿಸಿದ ಹರಿ ಎಂಬ ಅವತಾರ, ಬಲಿಯನ್ನು ತುಳಿದು ಉಳಿಸಿದ ವಾಮನಾವತಾರ, ನಾರದರಿಗೆ ತತ್ವೋಪದೇಶ ಮಾಡಿದ ಮಹಿದಾಸಾವತಾರ, ಇಷ್ಟು ಅವತಾರಗಳ ಕುರಿತ ಅಪೂರ್ವ ಚಿಂತನೆಗಳು ಈ ಭಾಗದಲ್ಲಿವೆ.
ಶ್ರೀಮದ್ ಭಾಗವತಮ್ — 188 — ದೇವರ ಅವತಾರಗಳು-1
ಸಾಧನೆ ಮಾಡುವ ಜನರಿಗೆ ದೇವತೆಗಳು ವಿಘ್ನವನ್ನು ನೀಡಲು ಮೂರು ಕಾರಣಗಳಿವೆ. ಅವುಗಳ ವಿವರಣೆಯೊಂದಿಗೆ ವರಾಹ, ಯಜ್ಞ, ಕಪಿಲ, ದತ್ತ, ವಿಷ್ಣು ,ಹರಿ, ಕೃಷ್ಣ, ನಾರಾಯಣ ರೂಪಗಳ ಚಿಂತನೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 187 — ದೇವರ ವಿಭೂತಿ ರೂಪಗಳು
ಸೃಷ್ಟಿಯನ್ನು ಮಾಡಿದ ಪುರುಷಾವತಾರದಿಂದ ಅರಂಭಿಸಿ ಬ್ರಹ್ಮಾದಿ ಸಮಸ್ತ ಚೇತನರಲ್ಲಿ ನಿಂತು ಪರಮಾದ್ಭುತ ಕಾರ್ಯಗಳನ್ನು ಮಾಡುವ ಭಗವಂತನ ದಿವ್ಯ ವಿಭೂತಿರೂಪಗಳ ಚಿಂತನೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 186 — ಬ್ರಹ್ಮದೇವರು ನೀಡಿದ ನಿರ್ಣಯ
ಬ್ರಹ್ಮದೇವರೇನೋ ಶ್ರೀಹರಿ ಸರ್ವೋತ್ತಮ ಎಂದು ಹೇಳಿದರು, ಬ್ರಹ್ಮದೇವರೇಕೆ ತಪ್ಪು ತಿಳಿದಿರಬಾರದು? ಬ್ರಹ್ಮದೇವರಿಗೆ ಅವರು ಸರ್ವೋತ್ತಮ ಅಥವಾ ರುದ್ರ ಸರ್ವೋತ್ತಮ ಎಂಬ ಜ್ಞಾನವಿಲ್ಲದೇ ಇರಬಹುದಲ್ಲ? ಇದ್ದರೂ ನಾರದರಿಗೆ ಮೋಸ ಮಾಡುವ ಉದ್ದೇಶದಿಂದ ಹೇಳದೇ ಇರಬಹುದಲ್ಲ? ಎಂಬಿತ್ಯಾದಿ ಪ್ರಶ್ನೆಗಳಿಗೆ ಬ್ರಹ್ಮದೇವರೇ ನೀಡಿದ, ಯುಕ್ತಿಯುಕ್ತವಾದ ಮನಸ್ಸಿಗೆ ಸರಿತೋರುವಂತಹ ಉತ್ತರಗಳನ್ನು ನಾವಿಲ್ಲಿ ಕೇಳುತ್ತೇವೆ.
ಶ್ರೀಮದ್ ಭಾಗವತಮ್ — 185 — ಬ್ರಹ್ಮದೇವರ ಜೀವೋತ್ತಮತ್ವ ಮತ್ತು ಯಜ್ಞ
ಬ್ರಹ್ಮದೇವರು ಯಾವ ಕಾರಣಕ್ಕಾಗಿ ಸಕಲ ಜೀವನಿಕಾಯದಿಂದಲೂ ಉತ್ತಮರು, ಅವರಿಗಿಂತಲೂ ಭಗವಂತ ಹೇಗೆ ಉತ್ತಮ ಎನ್ನುವದನ್ನು ಪುರುಷ ಸೂಕ್ತ ಭಾಗವತಗಳು ಅತ್ಯದ್ಭುತವಾಗಿ ನಿರೂಪಣೆ ಮಾಡುತ್ತೇವೆ. ಬ್ರಹ್ಮದೇವರು ಮಾಡಿದ ಯಜ್ಞದ ಸಂಕ್ಷಿಪ್ತ ಚಿತ್ರಣದೊಂದಿಗೆ ಆ ವಚನಗಳ ಅರ್ಥಾನುಸಂಧಾನ ಇಲ್ಲಿದೆ.
ಶ್ರೀಮದ್ ಭಾಗವತಮ್ — 184 — ಯಜ್ಞಪುರುಷನ ನಾಲ್ಕು ರೂಪಗಳು
ಬ್ರಹ್ಮಚರ್ಯಾಶ್ರಮ, ಗೃಹಸ್ಥಾಶ್ರಮ, ವನಪ್ರಸ್ಥಾಶ್ರಮ, ಸಂನ್ಯಾಸಾಶ್ರಮಗಳಲ್ಲಿ ಸರ್ವಶ್ರೇಷ್ಠವಾದ ಆಶ್ರಮ ಯಾವುದು ಎನ್ನುವದರ ಕುರಿತ ಚರ್ಚೆ ನಿರ್ಣಯಗಳು ಇಲ್ಲಿವೆ.
2019 ವಿಕಾರಿ ಸಂವತ್ಸರದ ಪಂಚಾಂಗ ಶ್ರವಣ
ವಿಶ್ವನಂದಿನಿಯ ಸಕಲ ಬಾಂಧವರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು. ಹರಿವಾಯುದೇವತಾಗುರುಗಳು ನಿಮ್ಮ ಮತ್ತು ನಿಮ್ಮ ತಾಯಿಯವರ ಮೇಲೆ ಪೂರ್ಣಾನುಗ್ರಹವನ್ನು ಮಾಡಿ ದೀರ್ಘ ಆರೋಗ್ಯ, ಸಾತ್ವಿಕ ಸಂಪತ್ತು, ಪೂರ್ಣ ನೆಮ್ಮದಿಗಳನ್ನು ನೀಡಿ ಶ್ರೇಷ್ಠ ಸಾಧನೆಯನ್ನು ಮಾಡಿಸಲಿ ಎಂದು ಅವರನ್ನು ಪ್ರಾರ್ಥಿಸುತ್ತೇನೆ.
ಶ್ರೀಮದ್ ಭಾಗವತಮ್ — 183 — ದೇವರ ಮೂರು ಅಪೂರ್ವ ನಾಮಗಳು
ಶ್ವೇತದ್ವೀಪ, ಅನಂತಾಸನ, ವೈಕುಂಠಗಳ ಕುರಿತ ಅಪೂರ್ವ ಮತ್ತು ರಹಸ್ಯ ವಿಷಯಗಳ ನಿರೂಪಣೆ ಈ ಭಾಗದಲ್ಲಿದೆ. ದೇವರ ಅಮೃತ, ಕ್ಷೇಮ, ಅಭಯ ಎಂಬ ರೂಪ-ನಾಮಗಳ ಚರ್ಚೆಯೊಂದಿಗೆ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು —
ಪೈತೃಕ ಸುಳಾದಿ
"नरकोद्धार सत्य इदरिंद पितृगळिगॆ" ऎंदु नम्म कुलदवरन्नु सकल तापगळिंद उद्धार माडुव, श्री विजयदासार्यरु रचिसिरुव पैतृक सुळादिय पठण इल्लिदॆ. श्राद्ध नडॆयुव संदर्भदल्लि, मुख्यवागि ब्राह्मणभोजन, पिंडप्रदान कालगळल्लि इदन्नु पठिसबेकु. तंदॆ इरुववरु, स्त्रीयरु, मक्कळू सह इदन्नु पठिसबेकु.
ಲಘುಶಿವಸ್ತುತಿಃ
ಶ್ರೀಮಚ್ಚಂದ್ರಿಕಾಚಾರ್ಯರು ರಚಿಸಿರುವ ಲಘುಶಿವಸ್ತುತಿಯ ಪಠಣ.
ವಿದ್ಯೆ ಯಶಸ್ಸು ಧೈರ್ಯಗಳಿಗಾಗಿ ಪ್ರಾರ್ಥನೆ
ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ನಾವು ಎಲ್ಲ ಕಾರ್ಯಗಳಲ್ಲಿ ನಾವು ಯಶಸ್ಸು ಗಳಿಸಲು ನಮ್ಮಲ್ಲಿರಬೇಕಾದ ಎಂಟು ಗುಣಗಳನ್ನು ಕರುಣಿಸುವ ಹನುಮಂತದೇವರ ಪ್ರಾರ್ಥನೆ. ಬುದ್ಧಿರ್ಬಲಂ ಎಂಬ ಶ್ಲೋಕದ ಅರ್ಥಾನುಸಂಧಾನ.
ಆಚಾರ್ಯರ ಮೇಲೆ ದೇವತೆಗಳು ಮಾಡಿದ ಪುಷ್ಪವೃಷ್ಟಿ
ಶ್ರೀಮದಾಚಾರ್ಯರು ಐತರೇಯೋಪನಿಷತ್ತಿನ ಅರ್ಥವನ್ನು ತಿಳಿಸಿ ಹೇಳುವ ಸಂದರ್ಭದಲ್ಲಿ ಎಲ್ಲ ದೇವತೆಗಳು ಆಕಾಶದಲ್ಲಿ ನೆರೆನಿಂತು ಆಚಾರ್ಯರ ಸ್ತೋತ್ರ ಮಾಡಿ ಮನುಷ್ಯರ ಕಣ್ಣಿಗೆ ಕಾಣುವಂತೆ ಆಚಾರ್ಯರ ಮೇಲೆ ಪುಷ್ಪವೃಷ್ಟಿಯನ್ನು ಮಾಡಿದ ಪರಮಮಂಗಳವಾದ ಅಪೂರ್ವಘಟನೆಯ ಚಿತ್ರಣ ಇಲ್ಲಿದೆ. ಆಚಾರ್ಯರ ಬದರಿಕಾಶ್ರಮಪ್ರವೇಶದ ಕುರಿತು ನಾವು ತಿಳಿಯಬೇಕಾದ ಮಹತ್ತ್ವದ ವಿಚಾರದ ನಿರೂಪಣೆಯೊಂದಿಗೆ.
ರಥಸಪ್ತಮೀ ಮಂತ್ರಗಳ ಪಠಣ ಮತ್ತು ವಿವರಣೆ
ರಥಸಪ್ತಮೀ ಮಂತ್ರಗಳ ಪಠಣ ಮತ್ತು ವಿವರಣೆ
ಐದು ತಿಂಗಳ ಸಮಯ ಬೇಕಾಗಿದೆ
ವಿಶ್ವನಂದಿನಿಯ 200 ಪ್ರವಚನ ಮತ್ತು ಸಂಸ್ಕೃತಸುರಭಿಯ 100 ಪಾಠಗಳ ನಿರ್ಮಾಣಕ್ಕಾಗಿ ಕುಳಿತುಕೊಳ್ಳುತ್ತಿದ್ದೇನೆ. ಅದಕ್ಕಾಗಿ ಸುಮಾರು ಐದು ತಿಂಗಳ ಕಾಲಾವಕಾಶವನ್ನು ಎಲ್ಲ ಜಿಜ್ಞಾಸುಗಳು ನೀಡಬೇಕೆಂದು ಅಪೇಕ್ಷಿಸುತ್ತಿದ್ದೇನೆ.
ಶ್ರೀಮದ್ ಭಾಗವತಮ್ — 182 — ಪುರುಷಸೂಕ್ತ — 3
ಜೀವರೇಕೆ ದೇವರಲ್ಲ ಎಂಬ ಪ್ರಶ್ನೆಗೆ ಪುರುಷಸೂಕ್ತ ನೀಡುವ ದಿವ್ಯ ಉತ್ತರದ ಅರ್ಥಾನುಸಂಧಾನ.
ಶ್ರೀಮದ್ ಭಾಗವತಮ್ — 181 — ಪುರುಷಸೂಕ್ತ — 2
ನಮ್ಮ ಸ್ವಾಮಿಯ ಮಹಾಮಹಿಮೆಯನ್ನು ತಿಳಿಸುವ “ಮರ್ತ್ಯಮನ್ನಂ ಯದತ್ಯಗಾತ್” “ಏತಾವಾನಸ್ಯ ಮಹಿಮಾ” ಎಂಬ ಮಾತಿನ ಅರ್ಥಾನುಸಂಧಾನವಿದೆ, ಇಲ್ಲಿ. ಕೇಳಿ. ಆನಂದಿಸಿ. ಯುಕ್ತಿಮಲ್ಲಿಕಾದಲ್ಲಿ ಪುರುಷಸೂಕ್ತಕ್ಕೆ ಅರ್ಥ ಮಾಡುತ್ತ ಶ್ರೀವಾದಿರಾಜತೀರ್ಥಗುರುಸಾರ್ವಭೌಮರು ತಿಳಿಸಿದ ಅಪೂರ್ವ ವಿಷಯ, ಶ್ರೀ ಮಂತ್ರಾಲಯಪ್ರಭುಗಳು, ಶ್ರೀ ಕಾಶೀ ತಿಮ್ಮಣಾಚಾರ್ಯರು ಮುಂತಾದ ಮಹಾನುಭಾವರು ತಿಳಿಸಿದ ಅರ್ಥವಿಶೇಷಗಳ ನಿರೂಪಣೆಯೂ ಇಲ್ಲಿದೆ.
ಶ್ರೀಮದ್ ಭಾಗವತಮ್ — 180 — ಪುರುಷಸೂಕ್ತ — 1
ಇಸ್ಲಾಮ್ ಮತ್ತು ಕ್ರಿಶ್ಚಿಯಾನಿಟಿ ಮುಂತಾದ ಮತಗಳು ಹೇಳುವಂತೆ ದೇವರು ನಿರಾಕರನೋ, ಅಥವಾ ಸಾಕಾರನೋ ಎಂಬ ಪ್ರಶ್ನೆಗೆ ಪುರುಷ ಸೂಕ್ತ ನೀಡುವ ಉತ್ತರ ಇಲ್ಲಿದೆ. ವೇದ-ವೇದಾಂತಗಳನ್ನೂ ನಾವೂ ಓದುತ್ತೇವೆ, ತಪ್ಪೇನು ಎಂಬ ಆಧುನಿಕ ಸ್ತ್ರೀ ಶೂದ್ರರಿಗೊಂದು ಕಿವಿಮಾತು ಇಲ್ಲಿದೆ. ತಪ್ಪದೇ ಕೇಳಿ.
ಶ್ರೀಮದ್ ಭಾಗವತಮ್ — 179 — ಆಚಾರ್ಯರ ಅದ್ಭುತ ತತ್ವನಿಷ್ಠೆ
ವಿರಾಡ್ರೂಪದ ಯಾವ ಅವಯವಗಳಿಂದ ಯಾವೆಲ್ಲ ತತ್ವಗಳು ಸೃಷ್ಟಿಯಾದವು ಎಂದು ತಿಳಿಸುವ ಸಂದರ್ಭದಲ್ಲಿ ಶ್ರೀಮದಾಚಾರ್ಯರು ವ್ಯಾಖ್ಯಾನ ಮಾಡುವ ರೀತಿ ತತ್ವದ ಮಾರ್ಗದಲ್ಲಿ ನಡೆಯುವ ಜನರಿಗೆ ಬಹಳ ದೊಡ್ಡ ಪಾಠಗಳನ್ನು ಕಲಿಸುತ್ತದೆ. ಆ ಕುರಿತ ಚಿಂತನೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 178 — ಅನೇಕ ಬಾರಿ ಸೃಷ್ಟಿ ಏಕೆ?
ಬ್ರಹ್ಮಾಂಡದ ಆಚೆಯಲ್ಲಿ, ಬ್ರಹ್ಮಾಂಡದ ಒಳಗೆ, ಲೋಕಗಳಲ್ಲಿ ಹೀಗೆ ಅನೇಕ ಸಂದರ್ಭಗಳಲ್ಲಿ ದೇವತೆಗಳು ಸೃಷ್ಟಿಯಾದರು, ಪದಾರ್ಥಗಳು ಸೃಷ್ಟಿಯಾದವು ಎಂದು ಕೇಳುತ್ತೇವೆ. ಅದಕ್ಕೆ ಕಾರಣವನ್ನು ತಿಳಿಸುವದರೊಂದಿಗೆ ಆರಂಭವಾಗುವ ಈ ಪ್ರವಚನದಲ್ಲಿ ವಿರಾಡ್ರೂಪದ ಭಗವಂತನ ದೇಹದಿಂದ ಸೃಷ್ಟಿಯಾದ ಪದಾರ್ಥಗಳ ಕುರಿತು ತಿಳಿಯುತ್ತೇವೆ.
ಶ್ರೀಮದ್ ಭಾಗವತಮ್ — 177 — ಬ್ರಹ್ಮಾಂಡ ಮತ್ತು ಲೋಕಗಳ ಸೃಷ್ಟಿ
ತತ್ವಗಳ ನಿರ್ಮಾಣವಾದ ನಂತರ ಬ್ರಹ್ಮಾಂಡ ಮತ್ತು ಅದರೊಳಗೆ ಲೋಕಗಳು ನಿರ್ಮಾಣವಾಗುವ ರೋಚಕ ಘಟನೆಯ ವಿವರ ಇಲ್ಲಿದೆ. ನಾಲ್ಕು ರೀತಿಯ ವಿರಡ್ರೂಪಗಳ ನಿರೂಪಣೆಯೊಂದಿಗೆ. ತ್ರಿಮೂರ್ತಿಗಳಾದ ಬ್ರಹ್ಮ-ವಿಷ್ಣು-ಮಹೇಶ್ವರರ ಕುರಿತ ವಿವರ ಇಲ್ಲಿದೆ.
ಶ್ರೀಮದ್ ಭಾಗವತಮ್ — 176 — ಅಹಂಕಾರತತ್ವ-ಇಂದ್ರಿಯತತ್ವಗಳ ಸೃಷ್ಟಿ
ಮಹತ್ ತತ್ವದಿಂದ ಅಹಂಕಾರ ತತ್ವದ ಸೃಷ್ಟಿಯಾಗುವ ಕ್ರಮ, ಅಹಂಕಾರ ತತ್ವದಲ್ಲಿನ ಮೂರು ವಿಭಾಗಗಳು, ಇಂದ್ರಿಯಗಳ ಸೃಷ್ಟಿಯ ವಿವರಣೆ ಇಲ್ಲಿದೆ, ಯಾವ ಇಂದ್ರಿಯಗಳಿಗೆ ಯಾವ ದೇವತೆಗಳು ಅಭಿಮಾನಿಗಳು ಎಂಬ ಚರ್ಚೆಯೊಂದಿಗೆ. ದೇವತೆಗಳ ಅಸ್ತಿತ್ವವನ್ನು ಯಾಕಾಗಿ ಒಪ್ಪಬೇಕು ಎನ್ನುವದಕ್ಕೆ ಇಲ್ಲಿ ಕಾರಣಗಳನ್ನು ತಿಳಿಸಲಾಗಿದೆ. ತಪ್ಪದೇ ಕೇಳಿ.
ಶ್ರೀಮದ್ ಭಾಗವತಮ್ — 175 — ಮಹತ್ತತ್ವದ ಸೃಷ್ಟಿ
ಬ್ರಹ್ಮಾಂಡದ ಆಚೆಯಲ್ಲಿರುವ ಮಹತ್ತತ್ವ, ಅಹಂಕಾರ ತತ್ವ ಎಂದರೇನು ಎಂದು ಅರ್ಥ ಮಾಡಿಸುವದರೊಂದಿಗೆ ಆರಂಭವಾಗುವ ಈ ಪ್ರವಚನದಲ್ಲಿ ಭಗವಂತ ಮಹತ್ ತತ್ವವನ್ನು ಏಕಾಗಿ ಸೃಷ್ಟಿ ಮಾಡಿದ, ಹೇಗೆ ಸೃಷ್ಟಿ ಮಾಡಿದ ಎನ್ನುವದನ್ನು ಇಲ್ಲಿ ತಿಳಿಯುತ್ತೇವೆ.
ಶ್ರೀಮದ್ ಭಾಗವತಮ್ — 174 — ಸೃಷ್ಟಿಯ ಆರಂಭ
ದೇವರು ಮಾಡುವ ಸೃಷ್ಟಿಯ ಕ್ರಮವನ್ನು ತಿಳಿಸಲು ಆರಂಭಿಸುವ ಬ್ರಹ್ಮದೇವರು ಮೊಟ್ಟಮೊದಲಿಗೆ ಪರಮಾತ್ಮನ ಸ್ವಾತಂತ್ರ್ಯದ ಕುರಿತು ಅದ್ಭುತವಾಗಿ ತಿಳಿಸುತ್ತಾರೆ. ನಮ್ಮ ಸ್ವಾಮಿ ಯಾರ ಅಧೀನನೂ ಅಲ್ಲ, ಎಲ್ಲವೂ ಅವನಧೀನ ಎಂಬ ಚಿಂತನೆಯ ದಿವ್ಯ ನಿರೂಪಣೆ ಇಲ್ಲಿದೆ. ಕಾಲದ ಕುರಿತ ಸ್ವಾರಸ್ಯಕರ ಚರ್ಚೆಯೊಂದಿಗೆ.
ಶ್ರೀಮದ್ ಭಾಗವತಮ್ — 173 — ಬಂಧನ ಕಳೆದುಕೊಳ್ಳುವ ರೀತಿ
ದೇಹದಲ್ಲಿ ತಮೋಗುಣ, ಕರ್ಮೇಂದ್ರಿಯಗಳಲ್ಲಿ ರಜೋಗುಣ, ಜ್ಞಾನೇಂದ್ರಿಯಗಳಲ್ಲಿ ಸತ್ವಗುಣವಿದ್ದು ನಮ್ಮನ್ನು ಬಂಧಿಸುತ್ತವೆ ಎಂದು ತಿಳಿದೆವು. ಇವುಗಳಿಂದಲೇ ಉದ್ಧಾರವಾಗುವ ಬಗೆಯನ್ನು ನಾವಿಲ್ಲಿ ತಿಳಿಯುತ್ತೇವೆ.
ಶ್ರೀಮದ್ ಭಾಗವತಮ್ — 172 — ತ್ರಿಗುಣಗಳ ಬಂಧನ
ನಾವು ಹೇಗೆ ಬಂಧನಕ್ಕೊಳಗಾಗಿದ್ದೇವೆ ಎಂದು ಗೊತ್ತಾದರೆ ಬಂಧನದಿಂದ ಬಿಡಿಸಿಕೊಳ್ಳಲು ಸಾಧ್ಯ. ದೇವರು ಮೂರುಗುಣಗಳಿಂದ ನಮ್ಮನ್ನು ಕಟ್ಟಿಹಾಕಿರುವದರ ವಿವರಣೆ ಇಂದಿನ ಭಾಗವತದ ವಿಷಯ. ಇಂದು “ಬಂಧಕೋ ಭವಪಾಶೇನ” ಮುಂದಿನ ಉಪನ್ಯಾಸದಲ್ಲಿ “ಭವಪಾಶಾಚ್ಚ ಮೋಚಕಃ” ತಪ್ಪದೇ ಕೇಳಿ.
ಶ್ರೀಮದ್ ಭಾಗವತಮ್ — 171 — ಬ್ರಹ್ಮದೇವರು ದೇವರಲ್ಲ
ಶ್ರೀಹರಿಯೇ ದೇವರು ಎಂದು ಒಪ್ಪುವ ವೈಷ್ಣವಸಿದ್ಧಾಂತ ಎಂದಿಗೂ ಆಗ್ರಹಯುಕ್ತವಾದದ್ದಲ್ಲ, ಸಕಲ ಪ್ರಮಾಣಗಳನ್ನು ಆಗ್ರಹರಹಿತವಾಗಿ ವಿಚಾರ ಮಾಡಿದಾಗ ಸಿದ್ಧವಾಗುವ ತತ್ವ ಶ್ರೀಮನ್ನಾರಾಯಣನೇ ದೇವರು ಎನ್ನುವದು. ಬ್ರಹ್ಮದೇವರು ಏಕೆ ದೇವರಲ್ಲ ಎನ್ನುವದಕ್ಕೆ ಬ್ರಹ್ಮಸೂತ್ರಗಳು ನೀಡುವ ಅದ್ಭುತ ಕಾರಣಗಳನ್ನು ಶ್ರೀಮದ್ ಭಾಗವತ ಅದ್ಭುತವಾಗಿ ಸಂಗ್ರಹಿಸುತ್ತದೆ. ಆ ವಚನಗಳ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 170 — ನಾರದರ ಪೂರ್ವಪಕ್ಷ
ಭಗವತ್ ತತ್ವವನ್ನು ಯಾವುದೇ ಆಗ್ರಹದಿಂದ ತಿಳಿಯತಕ್ಕದ್ದಲ್ಲ, ಎಲ್ಲ ಕೋನಗಳಿಂದಲೂ ವಿಚಾರ ಮಾಡಿ ನಿರ್ಣಯ ಮಾಡಿಕೊಳ್ಳತಕ್ಕದ್ದು ಎಂಬ ಪರಿಶುದ್ಧ ಕ್ರಮದ ಅನುಸಾರವಾಗಿ ಶ್ರೀ ನಾರದರು ಬ್ರಹ್ಮದೇವರ ಮುಂದೆ ಮಾಡಿದ “ನೀವೇ ಸರ್ವೋತ್ತಮರು” ಎಂದು ಪೂರ್ವಪಕ್ಷದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 169 — ವೇದವ್ಯಾಸದೇವರ ಶಬ್ದಗಳ ಗಾಂಭೀರ್ಯ
ಬ್ರಹ್ಮದೇವರಿಂದ ತತ್ವೋಪದೇಶವನ್ನು ಬಯಸಿ ಬಂದಿರುವ ನಾರದರು “ತತ್ವವನ್ನು ತಿಳಿಸಿರಿ” ಎಂದು ಹೇಳುವ ಬದಲು “ತತ್ವವನ್ನು ತಿಳಿಯಿರಿ” ಎಂದು ಹೇಳುತ್ತಾರೆ. ಈ ರೀತಿ ಗ್ರಂಥ ಬರೆದಿರುವ ವೇದವ್ಯಾಸದೇವರಿಗೆ ಸಂಸ್ಕೃತದ ಜ್ಞಾನವಿಲ್ಲ ಎಂದು ಕೆಲವರು ಪುಸ್ತಕಗಳನ್ನೂ ಬರೆದದ್ದುಂಟು. ಆದರೆ, ಈ ಪ್ರಯೋಗದ ಹಿಂದೆ ಇರುವ ಅದ್ಭುತ ತತ್ವರಾಶಿಯನ್ನು ತಿಳಿಸಿಕೊಟ್ಟವರು ಶ್ರೀಮದಾಚಾರ್ಯರು. ಶಾಸ್ತ್ರಗ್ರಂಥಗಳಲ್ಲಿನ ಒಂದೊಂದು ಶಬ್ದದ ಹಿಂದೆಯೂ ಅದೆಂತಹ ಗಾಂಭೀರ್ಯವಿರುತ್ತದೆ ಎಂದು ಮನಗಾಣಿಸುವ ಭಾಗ.
ಶ್ರೀಮದ್ ಭಾಗವತಮ್ — 168 — ಶುಕಗೀತೆ-04
ಮನೆಯಲ್ಲಿ ಧರ್ಮಾಚರಣೆ ಮಾಡಲು ಸಾಧ್ಯವಾಗುತ್ತಿಲ್ಲ, ಮನಸ್ಸಿನಲ್ಲಿ ಹರಿಯ ಚಿಂತನೆ ಮೂಡುತ್ತಿಲ್ಲ, ಭಕ್ತಿಯ ಒರತೆ ಬತ್ತುತ್ತಿದೆ ಎಂದಾಗ ಪಠಿಸಬೇಕಾದ ದಿವ್ಯವಾದ ಸೋತ್ರ ಈ ಶುಕಗೀತೆ. ಆ ಪವಿತ್ರ ಸ್ತುತಿಯ ಅರ್ಥಾನುಸಂಧಾನದ ಕಡೆಯ ಭಾಗ ಇಲ್ಲಿದೆ.
ಪ್ರಥಮಸ್ಕಂಧ ನವಮಾಧ್ಯಾಯ
ಶ್ರೀಮದ್ ಭಾಗವತದ ಮೊದಲನೆಯ ಸ್ಕಂಧದ ಒಂಭತ್ತನೆಯ ಅಧ್ಯಾಯದ ಪಾರಾಯಣ.
ಪ್ರಥಮಸ್ಕಂಧ ಅಷ್ಟಮಾಧ್ಯಾಯ
ಶ್ರೀಮದ್ ಭಾಗವತದ ಮೊದಲನೆಯ ಸ್ಕಂಧದ ಎಂಟನೆಯ ಅಧ್ಯಾಯದ ಪಾರಾಯಣ.
ಶ್ರೀಮದ್ ಭಾಗವತಮ್ — 167 — ಶುಕಗೀತೆ ೦೩ ಪತಿತಪಾವನ
ಸ್ತ್ರೀ ಶೂದ್ರರನ್ನು ಭಗವದ್ಗೀತೆ ಪಾಪಿಗಳು ಎಂದು ಕರೆಯುತ್ತದೆ. ಭಾಗವತ ಕಿರಾತ-ಹೂಣ ಮುಂತಾದವರನ್ನು ಭಾಗವತ ಪಾಪಿಗಳು ಎಂದು ಕರೆಯುತ್ತದೆ. ಈ ಮಾತುಗಳ ಅರ್ಥದ ಕುರಿತ ಚರ್ಚೆಯಿದೆ. ತಪ್ಪದೇ ಕೇಳಿ.
ಶ್ರೀಮದ್ ಭಾಗವತಮ್ — 166 — ಶುಕಗೀತೆ ೦೨ ಸರ್ವಸಮರ್ಪಣೆ
ದೇವರಿಗೆ ಮಾಡುವ ಸರ್ವಸಮರ್ಪಣೆಯ ಮಹತ್ತ್ವವನ್ನು ಮನಗಾಣಿಸುವ ದಿವ್ಯವಚನಗಳ ಅರ್ಥಾನುಸಂಧಾನ.
ಶ್ರೀಮದ್ ಭಾಗವತಮ್ — 165 — ಶುಕಗೀತೆ-1-ನಮಸ್ಕಾರದ ಮಹತ್ತ್ವ
ದೇವರ ಸೃಷ್ಟಿಕರ್ತೃತ್ವದ ಮಹಾಮಾಹಾತ್ಮ್ಯವನ್ನು ತಿಳಿಸಲು ಉದ್ಯುಕ್ತರಾದ ಶ್ರೀ ಶುಕಾಚಾರ್ಯರು ಬಹುಭಕ್ತಿಯಿಂದ ದೇವರ ಸ್ಮರಣೆಯನ್ನು ಮಾಡಿ ನಮಸ್ಕಾರಗಳನ್ನು ಸಲ್ಲಿಸುತ್ತಾರೆ. ಶುಕಗೀತೆಯೆಂದು ಪ್ರಸಿದ್ಧವಾದ ಆ ಸ್ತೋತ್ರದ ಮೊದಲ ಭಾಗದ ಅರ್ಥಾನುಸಂಧಾನ ಇಲ್ಲಿದೆ.
ಶ್ರೀಮದ್ ಭಾಗವತಮ್ — 164 — ಜಗತ್ತಿಗೂ ದೇವರಿಗೂ ಇರುವ ಸಂಬಂಧ
ದೇವರ ಅಸ್ತಿತ್ವವನ್ನು ತಿಳಿಯುವದರಿಂದ ಆರಂಭಿಸಿ, ದೇವರ ಗುಣಗಳನ್ನು ತಿಳಿಯುವದಕ್ಕೆ, ದೇವರ ಅನುಗ್ರಹವನ್ನು ಪಡೆಯುವದಕ್ಕೆ, ಮೋಕ್ಷವನ್ನು ಪಡೆಯುವವರೆಗೆ ನಮಗೆ ಆವಶ್ಯಕವಾದದ್ದು ಈ ಜಗತ್ತು. ಅ ಸಮಗ್ರ ಪ್ರಪಂಚ ಯಾವ ಕಾರಣಕ್ಕಾಗಿ ಸೃಷ್ಟಿಯಾಗಿದೆಯೋ ಆ ಕಾರಣವನ್ನು ತಿಳಿದು ಭಜಿಸಬೇಕು ಎನ್ನುವ ಮಹತ್ತ್ವದ ಅಂಶವನ್ನು ನಾವಿಲ್ಲಿ ತಿಳಿಯುತ್ತೇವೆ. ಜಗತ್ತಿನ ಸತ್ಯತ್ವವನ್ನು ಆಚಾರ್ಯರೇಕೆ ತಮ್ಮ ಸಿದ್ಧಾಂತದಲ್ಲಿ ಅಷ್ಟು ಆದರದಿಂದ ಪ್ರತಿಪಾದಿಸುತ್ತಾರೆ ಎಂಬ ವಿಷಯದ ನಿರೂಪಣೆಯೊಂದಿಗೆ.
ಶ್ರೀಮದ್ ಭಾಗವತಮ್ — 163 — ಶೌನಕರು ಕಲಿಸುವ ಪಾಠ
“ಶ್ರೇಯಾಂಸಿ ಬಹುವಿಘ್ನಾನಿ” ಯಾವುದೇ ಒಳ್ಳೆಯ ಕೆಲಸ ಮಾಡಬೇರಕಾದರೂ ವಿಘ್ನಗಳು ಇದ್ದೇ ಇರುತ್ತವೆ. ಇನ್ನು ಈ ಕಲಿಗಾಲದಲ್ಲಿ ಸಾಧನೆಯ ಮಾರ್ಗದಲ್ಲಂತೂ ವಿಘ್ನಗಳು ತುಂಬಿರುತ್ತವೆ. ಆ ವಿಘ್ನಗಳು ತಲೆದೋರಿದಾಗ ನಾವು ಅನುಸರಿಸಬೇಕಾದ ಮಾರ್ಗವನ್ನು ಶೌನಕರು ತೋರಿಸಿಕೊಡುತ್ತಾರೆ. ಆವರ ವಚನಗಳ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 162 — ಬೇಡಿದರೆ ಎನ್ನೊಡೆಯನ ಬೇಡುವೆ
ಯಾವಯಾವ ದೇವತೆಯನ್ನು ಉಪಾಸನೆ ಮಾಡುವದರಿಂದ ಯಾವಯಾವ ಫಲಗಳುಂಟಾಗುತ್ತವೆ ಎನ್ನುವದನ್ನು ವಿಸ್ತಾರವಾಗಿ ತಿಳಿಸುವ ಶುಕಾಚಾರ್ಯರು ಪರಮಾತ್ಮನಲ್ಲಿ ಮಾಡುವ ಭಕ್ತಿಯಿಂದ ಸಕಲ ಐಹಿಕ ಫಲಗಳನ್ನೂ ಪಡೆಯಬಹುದು ಎನ್ನುವದನ್ನು ನಿರೂಪಿಸಿ ಶ್ರೀಮನ್ ನಾರಾಯಣನೇ ಸರ್ವಾರ್ಥಪ್ರದ, ಏನನ್ನು ಬೇಡಿದರೂ ಅವನಲ್ಲಿಯೇ ಬೇಡುವದೇ ಸರ್ವಶ್ರೇಷ್ಠ ಎನ್ನುವದನ್ನು ಮನೋಜ್ಞವಾಗಿ ನಿರೂಪಿಸುತ್ತಾರೆ.
ಶ್ರೀಮದ್ ಭಾಗವತಮ್ — 161 — ಮುಕ್ತಿಯ ಮಾರ್ಗ
“ನೀನು ಪ್ರಶ್ನೆ ಮಾಡಿದ ಎರಡು ಮುಕ್ತಿಯ ಮಾರ್ಗಗಳು ಇವು” ಎಂದು ಶುಕಾಚಾರ್ಯರು ಹೇಳುತ್ತಾರೆ. ಪರೀಕ್ಷಿತರು ಯಾವಾಗ ಈ ಪ್ರಶ್ನೆಯನ್ನು ಮಾಡಿದರು, ಉತ್ತರದಲ್ಲಿ ಎರಡು ಮಾರ್ಗಗಳ ಉಲ್ಲೇಖ ಎಲ್ಲಿದೆ ಎಂಬ ಪ್ರಶ್ನೆಗೆ ಉತ್ತರ ದೊರೆಯುವದು ಟೀಕಾಕೃತ್ಪಾದರ ನ್ಯಾಯಸುಧಾಗ್ರಂಥದಿಂದ. ಆ ವಚನಗಳ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 160 — ಮಹಾಪ್ರಳಯ
ಭೂಮಿ ಮುಂತಾದ ಲೋಕಗಳು, ಬ್ರಹ್ಮಾಂಡ, ಅದರ ಆವರಣಗಳು ನಾಶವಾಗುವ ಕ್ರಮ, ಮುಕ್ತರು ನಿರ್ಭಯರಾಗಿ ಪ್ರಳಯವನ್ನು ಕಾಣುತ್ತಲೇ ಭಗವಂತನನ್ನು ಮುಕ್ತರಾದ ಜ್ಞಾನಿಗಳು ಪ್ರವೇಶ ಮಾಡುವ ಕ್ರಮದ ನಿರೂಪಣೆ ಇಲ್ಲಿದೆ. ಇಲ್ಲಿಗೆ ಎರಡನೆಯ ಸ್ಕಂಧದ ಎರಡನೆಯ ಅಧ್ಯಾಯದ ಅರ್ಥಾನುಸಂಧಾನ ಮುಗಿಯುತ್ತದೆ.
ಶ್ರೀಮದ್ ಭಾಗವತಮ್ — 159 — ಮಹರಾದಿ ಲೋಕಗಳ ಮಾಹಾತ್ಮ್ಯ
ಶಾಸ್ತ್ರಗಳು ಶೇಷದೇವರನ್ನು, ಕೂರ್ಮನನ್ನೂ ಜಗದಾಧಾರ ಎನ್ನುತ್ತವೆ, ಶಿಂಶುಮಾರನನ್ನೂ ಜಗದಾಧಾರ ಎನ್ನುತ್ತವೆ. ಈ ವಿರೋಧವನ್ನು ಪರಿಹಾರ ಮಾಡಿಕೊಳ್ಳುವ ಬಗೆಯೊಂದಿಗೆ ಆರಂಭವಾಗುವ ಈ ಉಪನ್ಯಾಸದಲ್ಲಿ ಮಹರ್ಲೋಕ, ಜನಲೋಕ, ತಪೋಲೋಕ, ಸತ್ಯಲೋಕಗಳ ಮಾಹಾತ್ಮ್ಯವನ್ನು ಕೇಳುತ್ತೇವೆ. ಮಹರ್ಲೋಕದಲ್ಲಿ ಮೂರು ತರಹದ ಆಯುಷ್ಯವುಳ್ಳ ಜನರಿರುತ್ತಾರೆ. ಅದರ ವಿವರಣೆಯೊಂದಿಗೆ ಬ್ರಹ್ಮಜ್ಞಾನಿಗಳ ಶರೀರ ಯಾವ ರೀತಿ ಇರುತ್ತದೆ ಎನ್ನುವದರ ನಿರೂಪಣೆಯೂ ಇಲ್ಲಿದೆ.
ಶ್ರೀಮದ್ ಭಾಗವತಮ್ — 158 — ವೈಶ್ವಾನರ ಲೋಕದಲ್ಲಿ ಪಾಪನಾಶ
ಅಪರೋಕ್ಷ ಜ್ಞಾನವಾಗುವಾಗಲೇ ಪಾಪಗಳು ನಾಶವಾಗುತ್ತವೆ ಎಂದು ತಿಳಿದೆವು. ಈಗ ಮತ್ತೆ ವೈಶ್ವಾನರಲೋಕ-ದೇವಲೋಕ-ಸೂರ್ಯಲೋಕ-ಅಥವಾ ಭೂಲೋಕದಲ್ಲಿಯೇ ಪಾಪ ನಾಶವನ್ನು ಮಾಡಿಕೊಳ್ಳಬೇಕು ಎಂದು ಭಾಗವತ ಹೇಳುತ್ತದೆ. ಯಾವ ಪಾಪ ಅದು ಹೇಗೆ ನಾಶವಾಗುತ್ತದೆ ಎನ್ನುವದರ ಪೂರ್ಣ ಇಲ್ಲಿದೆ. ದೇವಯಾನ, ಪಿತೃಯಾನ, ಬ್ರಹ್ಮಯಾನ ಎಂಬ ಮೂರು ಮಾರ್ಗಗಳ ಮತ್ತು ಇಡಾ, ಪಿಂಗಳಾ, ಸುಷುಮ್ನಾ ನಾಡಿಗಳ ವಿವರಣೆಯೂ ಇಲ್ಲಿದೆ.
ಶ್ರೀಮದ್ ಭಾಗವತಮ್ — 157 — ಜ್ಞಾನಿಗಳು ಪಡೆಯುವ ಲೋಕಗಳು
ಜೀವರು ಉತ್ಕ್ಕಾಂತರಾದ ಬಳಿಕ ಯಾವ ಲೋಕಗಳಿಗೆ ತೆರಳುತ್ತಾರೆ, ಯಾವ ರೀತಿ ಇರುತ್ತಾರೆ, ಯಾವಯಾವ ಲೋಕಗಳಿಗೆ ಹೋಗಲು ಯಾವರೀತಿಯ ಅರ್ಹತೆ ಈ ಜ್ಞಾನಿಗಳಿಗೆ ಇರಬೇಕು? ಆ ಲೋಕಗಳಲ್ಲಿ ಯಾವ ರೀತಿಯಾದ ಶರೀರವಿರುತ್ತದೆ? ಎನ್ನುವ ಪ್ರಶ್ನೆಗಳಿಗೆ ಅಪೂರ್ವ ವಿಷಯಗಳನ್ನೊಳಗೊಂಡ ಉತ್ತರಗಳನ್ನು ಇಲ್ಲಿ ತಿಳಿಯುತ್ತೇವೆ.
ಶ್ರೀಮದ್ ಭಾಗವತಮ್ — 156 — ಉತ್ಕ್ರಾಂತಿ
ಮೂಲಾಧಾರದಿಂದ ಆರಂಭಿಸಿ ತಲೆಯವರೆಗೆ ಇರುವ ಕಮಲಗಳು, ಆ ಕಮಲಗಳ ಬಣ್ಣ, ಅವುಗಳ ದಳಗಳ ಸಂಖ್ಯೆ, ಅಲ್ಲಿರುವ ದೇವತೆಗಳು ಮತ್ತು ಪರಮಾತ್ಮನ ರೂಪಗಳ ನಿರೂಪಣೆಯೊಂದಿಗೆ ಜ್ಞಾನಿಗಳು ಉತ್ಕ್ರಾಂತಿಯಾಗುವ ಬಗೆಯನ್ನು ಇಲ್ಲಿ ವಿವರಿಸಲಾಗಿದೆ. ಶ್ರೀ ವಿಜಯದಾಸಾರ್ಯರ ದಿವ್ಯವಾದ ಸುಳಾದಿಗಳ ಉಲ್ಲೇಖ ಇಲ್ಲಿದೆ. ತಪ್ಪದೇ ಕೇಳಿ.
ಶ್ರೀಮದ್ ಭಾಗವತಮ್ — 155 — ಲಯಚಿಂತನೆ
ಪುಷ್ಕರನಿಂದ ಆರಂಭಿಸಿ ಮುಖ್ಯಪ್ರಾಣದೇವರವರೆಗೆ ಸಕಲ ಕಲಾಭಿಮಾನಿ-ತತ್ವಾಭಿಮಾನಿ ದೇವತೆಗಳನ್ನು ಯಾವ ರೀತಿ ಚಿಂತನೆ ಮಾಡಬೇಕು, ಶ್ರೀಹರಿಯ ರೂಪಗಳನ್ನು ಯಾವ ರೀತಿ ಚಿಂತನೆ ಮಾಡಬೇಕು ಎಂಬ ವಿವರ ಇಲ್ಲಿದೆ, ಶ್ರೀ ವಿಜಯಧ್ವಜತೀರ್ಥಗುರುಸಾರ್ವಭೌಮರು ತಿಳಿಸಿರುವ ದಿವ್ಯವಾದ ಅರ್ಥವಿಶೇಷಗಳೊಂದಿಗೆ.
ಶ್ರೀಮದ್ ಭಾಗವತಮ್ — 154 — ನರಕ ಭಯ ನಿವಾರಣ
ನರಕದ ಘೋರ ಭಯದಿಂದ ಪಾರು ಮಾಡಿ ಮೋಕ್ಷವನ್ನು ಕರುಣಿಸುವ ನಮ್ಮ ಅಂತರ್ಯಾಮಿಯನ್ನು ಹೇಗೆ ಧ್ಯಾನ ಮಾಡಬೇಕು ಎನ್ನುವದರ ವಿವರಣೆ ಇಲ್ಲಿದೆ. ವೈತರಣೀ ಎಂಬ ಶಬ್ದಕ್ಕೆ ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ಮಾಡಿರುವ ಅದ್ಭುತ ವ್ಯಾಖ್ಯಾನ ಮತ್ತು ದಾಸಸಾಹಿತ್ಯ ನಮ್ಮ ಮೇಲೆ ಮಾಡುವ ದಿವ್ಯ ಪರಿಣಾಮದ ಚಿತ್ರಣದೊಂದಿಗೆ.
ಶ್ರೀಮದ್ ಭಾಗವತಮ್ — 153 — ಆನಂದನಿಧಿ
ಧ್ಯಾನವನ್ನು ಮಾಡುವ ಮುನ್ನ ನಮಗಿರಬೇಕಾದ ಎಚ್ಚರಗಳು ಮತ್ತು ಮಾಡಬೇಕಾದರೆ ಇರಲೇಬೇಕಾದ ಅನುಸಂಧಾನಗಳನ್ನು, ಹಾಗೂ ಅವಶ್ಯವಾಗಿ ಉಪಾಸನೆ ಮಾಡಬೇಕಾದ ಗುಣಗಳನ್ನು ಈ ಭಾಗದಲ್ಲಿ ತಿಳಿಯುತ್ತೇವೆ. ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರ ಅದ್ಭುತ ವ್ಯಾಖ್ಯಾನ ಕೌಶಲವನ್ನು ಮನಗಾಣಿಸುವಂತಹ ಅನೇಕ ಅಂಶಗಳನ್ನು ಇಲ್ಲಿ ಕೇಳುತ್ತೇವೆ.
ಶ್ರೀಮದ್ ಭಾಗವತಮ್ — 152 — ದೇವರೆಂಬ ಪ್ರಿಯ ವಸ್ತು
ದೇವರ ಮತ್ತು ನಮ್ಮ ಮಧ್ಯದಲ್ಲಿರುವ ಪ್ರೇಮ ಎಂಬ ಭಾವನೆಯ ಕುರಿತ ದಿವ್ಯಚಿತ್ರಣದೊಂದಿಗೆ ದೇವರನ್ನು ಯಾಕಾಗಿ ಮತ್ತು ಹೇಗೆ ಧ್ಯಾನ ಮಾಡಬೇಕು ಎನ್ನುವ ವಿಷಯಗಳ ಪ್ರತಿಪಾದನೆ ಇಲ್ಲಿದೆ. ಅವಧೂತರೇಕೆ ಅನ್ನ ಆಹಾರ ಬಟ್ಟೆಗಳನ್ನೂ ತ್ಯಜಿಸಿ ಬದುಕುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಭಗವಾನ್ ಎಂಬ ಶಬ್ದದ ಅರ್ಥದ ಚಿತ್ರಣದೊಂದಿಗೆ.
ಶ್ರೀಮದ್ ಭಾಗವತಮ್ — 151 — ಅವಧೂತರ ಚರ್ಯೆ
ವೈರಾಗ್ಯದ ಉತ್ತುಂಗಾವಸ್ಥೆ ಎಂದರೆ ಅವಧೂತಚರ್ಯೆ. ಅಂತಹ ಅವಧೂತಶಿರೋಮಣಿಗಳು ಯಾವ ರೀತಿ ದೇಹದ ಮೇಲೆ ಸಕಲಾಭಿಮಾನವನ್ನೂ ತೊರೆದು ಬದುಕುತ್ತಾರೆ ಎನ್ನುವದರ ಚಿತ್ರಣ ಇಲ್ಲಿದೆ. ಅವಧೂತಚರ್ಯೆ ಎನ್ನುವದು ಸಂನ್ಯಾಸಿಗಳಿಗೆ ಮಾತ್ರ, ಗೃಹಸ್ಥರಿಗಲ್ಲ, ಸ್ತ್ರೀಯರಿಗಂತೂ ಸರ್ವಥಾ ಅಲ್ಲ ಎಂಬಿತ್ಯಾದಿ ಅಂಶಗಳ ವಿವರಣೆಯೂ ಇಲ್ಲಿದೆ.
ಶ್ರೀಮದ್ ಭಾಗವತಮ್ — 150 — ಮಾತು ಅಧಿಕವಾದರೆ ಆತ್ಮಘಾತ
ಮಾತಿನಿಂದಲೇ ಮೋಕ್ಷ, ಮಾತಿನಿಂದಲೇ ಸಂಸಾರ, ಮಾತಿನಿಂದಲೇ ತಮಸ್ಸು ಎನ್ನುವ ತತ್ವವನ್ನು ನಾವಿಲ್ಲಿ ವಿಸ್ತಾರವಾಗಿ ತಿಳಿಯುತ್ತೇವೆ. ದುಷ್ಟ ವಿಷಯಗಳ ಕುರಿತು ಮಾತನಾಡುವದು ದೂರ ಉಳಿಯಿತು, ಆವಶ್ಯಕತೆಗಿಂತ ಹೆಚ್ಚು ಮಾತನಾಡುವದೇ ಆತ್ಮನಾಶಕ್ಕೆ ದಾರಿ ಎನ್ನುವ ಭಾಗವತದ ರಹಸ್ಯದ ಪ್ರಮೇಯವನ್ನು ನಾವಿಲ್ಲಿ ತಿಳಿಯುತ್ತೇವೆ.
ಶ್ರೀಮದ್ ಭಾಗವತಮ್ — 149 — ದೇವರ ಸರ್ವಶಬ್ದವಾಚ್ಯತ್ವ
ಎಲ್ಲ ಶಬ್ದಗಳೂ ದೇವರ ಹೆಸರು ಹೇಗಾಗಲು ಸಾಧ್ಯ ಎನ್ನುವದಕ್ಕೆ ಶಾಸ್ತ್ರ ತಿಳಿಸುವ ಆರು ಕಾರಣಗಳ ವಿವರಣೆಯೊಂದಿಗೆ ದೇವರನ್ನು ಸರ್ವಶಬ್ದವಾಚ್ಯ ಎಂದು ಒಪ್ಪುವದರಿಂದ ಉಂಟಾಗುವ ಮಹತ್ತರ ಪ್ರಯೋಜನದ ಕುರಿತು ನಾವಿಲ್ಲಿ ಕೇಳುತ್ತೇವೆ. ವೇದಗಳು ಕೋಟಿ ಕೋಟಿ ದೇವರನ್ನು ಹೇಳುತ್ತವೆ ಎಂದು ಲೇವಡಿ ಮಾಡುವ ಜನರಿಗೆ, ವೇದಗಳಲ್ಲಿ ಕೋಟಿ ದೇವರು ದೂರ ಉಳಿಯಿತು ಇಬ್ಬರು ದೇವರನ್ನೂ ಸಹ ವೇದಗಳು ಉಲ್ಲೇಖಿಸುವದಿಲ್ಲ, ವೇದಗಳು ಹೇಳುವದು ಕೇವಲ ಒಬ್ಬ ದೇವರನ್ನು ಮಾತ್ರ ಎನ್ನುವ ಉತ್ತರದ ವಿವರಣೆ ಇಲ್ಲಿದೆ.
ಶ್ರೀ ರಾಘವೇಂದ್ರಸ್ತೋತ್ರದ ಪಠಣ
ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರ ಪರಮಾನುಗ್ರಹದಿಂದ ಶ್ರೀಮದಪ್ಪಣಾಚಾರ್ಯರ ಮುಖದಿಂದ ಹೊರಹೊಮ್ಮಿದ ‘ದಿವ್ಯ’ ಸ್ತೋತ್ರ (ಸ್ತ್ರೋತ್ರಂ ದಿವ್ಯಮಿದಮ್), ಸಕಲ ಆಪತ್ತುಗಳನ್ನು ಪರಿಹರಿಸುವ, ಸಕಲ ಸಾತ್ವಿಕ ಸಂಪತ್ತನ್ನು ನೀಡಿ ನಮ್ಮನ್ನು ಅನುಗ್ರಹಿಸುವ ಶ್ರೀರಾಘವೇಂದ್ರಸ್ತೋತ್ರದ ಪಠಣ ಇಲ್ಲಿದೆ.
ಸಮಗ್ರ ಸ್ತೋತ್ರದ ಅರ್ಥಸಂಗ್ರಹ
ಶ್ರೀಮದಪ್ಪಣಾಚಾರ್ಯರು ರಚಿಸಿರುವ ರಾಯರ ಸ್ತೋತ್ರವನ್ನು ಪೂರ್ಣವಾಗಿ ಪಠಿಸಿ ಹಿಂದೆ ತಿಳಿದ ಎಲ್ಲ ಅರ್ಥಗಳ ಸಂಗ್ರಹ ಇಲ್ಲಿದೆ. ನಿತ್ಯದಲ್ಲಿ ಅನುಂಧಾನಕ್ಕೆ ಅನುಕೂಲವಾಗಲೆಂದು ಪಠಣ ಮತ್ತು ಅರ್ಥವನ್ನು ಒಟ್ಟೊಟ್ಟಿಗೆ ನೀಡಲಾಗಿದೆ.
ಶ್ರೀ ಲಕ್ಷ್ಮೀವಲ್ಲಭತೀರ್ಥರ ಶಿಲೆಯ ರಕ್ಷಣೆ ಕಳ್ಳತನವಂತೆ!
ಆತ್ಮೀಯರಾದ ವಿಶ್ವನಂದಿನಿಯ ಬಾಂಧವರ ಗಮನಕ್ಕೆ, ಶ್ರೀ ಲಕ್ಷ್ಮೀವಲ್ಲಭತೀರ್ಥರ ವೃಂದಾವನದ ಶಿಲೆಯನ್ನು ಶ್ರೀರಂಗಕ್ಕೆ ತೆಗೆದುಕೊಂಡು ಹೋಗಿ ರಕ್ಷಿಸಿಟ್ಟಿರುವದನ್ನು ವಿದ್ಯಾಶ್ರೀಶರು ಕಳ್ಳತನ ಎಂದು ನಿರ್ಣಯಿಸಿ ತಮ್ಮ ಮ್ಯಾನೇಜರಿನ ಮುಖಾಂತರ ನನ್ನ ಮೇಲೆ ಕಂಪ್ಲೇಂಟನ್ನು ಕೊಡಿಸಿದ್ದಾರೆ. ಇದರ ಕುರಿತು ವಿಚಿತ್ರವಾದ ವದಂತಿಗಳನ್ನೂ ಹರಡಿಸುತ್ತಿದ್ದಾರೆ. ಗುರ್ವನುಗ್ರಹದಿಂದ ನಾನು ಮತ್ತು ನನ್ನ ಕುಟುಂಬದವರು ಸುರಕ್ಷಿತವಾಗಿದ್ದೇವೆ. ಯಾವುದೇ ರೀತಿಯ ಆತಂಕ ಪಡುವ ಆವಶ್ಯಕತೆಯಿಲ್ಲ. ವಿವರವನ್ನು ಆಡಿಯೋದಲ್ಲಿ ತಿಳಿಸಿದ್ದೇನೆ. ಕೇಳಿ.
ರಾಯರ ಸ್ತೋತ್ರದ ಮಾಹಾತ್ಮ್ಯ
ಯಾವ ಪ್ರಾರ್ಥನೆಯನ್ನು ನಮ್ಮಿಂದ ಕೇಳುವದಕ್ಕಾಗಿ ರಾಯರು ವೃಂದಾವನದಲ್ಲಿ ಕುಳಿತಿದ್ದಾರೆಯೋ ಆ ಪರಮಾದ್ಭುತವಾದ ಪ್ರಾರ್ಥನೆಯನ್ನು ಶ್ರೀಮದಪ್ಪಣಾಚಾರ್ಯರು ಕಾರುಣ್ಯದಿಂದ ತಿಳಿಸಿಕೊಡುತ್ತಾರೆ. ಈ ರಾಯರ ಸ್ತೋತ್ರ ಎನ್ನುವದು ಕುಳಿತುಕೊಂಡು ಶಬ್ದಗಳನ್ನು ಕೂಡಿಸಿ ರಚಿಸಿದ್ದಲ್ಲ. ದೈವಪ್ರೇರಣೆಯಿಂದ ನಿರ್ಮಿತವಾದ ದಿವ್ಯಸ್ತೋತ್ರವಿದು ಎಂಬ ಅಂಶವನ್ನು ತಿಳಿಸುವ ಶ್ರೀಮದಪ್ಪಣಾಚಾರ್ಯರು ಈ ಸ್ತೋತ್ರದ ಮಾಹಾತ್ಮ್ಯವನ್ನು ತಿಳಿಸುತ್ತಾರೆ. ಆ ವಚನಗಳ ವಿವರಣೆ ಇಲ್ಲಿದೆ. ಸ್ವಯಂ ಶ್ರೀ ರಾಘವೇಂದ್ರತೀರ್ಥಗುರುಸಾರ್ವಭೌಮರು ಈ ಸ್ತೋತ್ರದ ಮೇಲೆ ಮಾಡಿರುವ ಪರಮಾನುಗ್ರಹದ ನಿರೂಪಣೆಯೊಂದಿಗೆ.
ಶ್ರೀ ರಾಘವೇಂದ್ರ ಅಷ್ಟಾಕ್ಷರ ಮಂತ್ರ
ಶ್ರೀ ರಾಘವೇಂದ್ರ ಮಂತ್ರ, ಯಾರಿಂದ ಉಪದೇಶ ತೆಗೆದುಕೊಳ್ಳಬೇಕು, ಯಾರಿಂದ ಉಪದೇಶ ತೆಗೆದುಕೊಳ್ಳಬಾರದು, ಯಾರಿಂದ ತೆಗೆದುಕೊಳ್ಳಬೇಕು, ಮಂತ್ರೋಪದೇಶ ಮಾಡಬಲ್ಲ ಉತ್ತಮ ಗುರುಗಳನ್ನು ಪಡೆಯಲು ಏನು ಮಾಡಬೇಕು, ನಮ್ಮ ರಾಯರನ್ನು ಧ್ಯಾನ ಮಾಡಬೇಕಾದ ಕ್ರಮವೇನು ಎಂಬೆಲ್ಲ ವಿಷಯಗಳ ಚಿಂತನೆಯೊಂದಿಗೆ ಭಕ್ತರ ಸಮಸ್ತ ಅಭೀಷ್ಟಗಳನ್ನು ಪೂರೈಸುವ, ಸಕಲ ಕಷ್ಟಗಳನ್ನು ಕಳೆಯುವ ಶ್ರೀಮದ್ ರಾಘವೇಂದ್ರ ಅಷ್ಟಾಕ್ಷರ ಮಂತ್ರದ ಕುರಿತ ಯಥಾಮತಿ ವಿವರಣೆ ಇಲ್ಲಿದೆ.
ರಾಯರ ಕಾರುಣ್ಯ
ಶ್ರೀಮದ್ ರಾಘವೇಂದ್ರತೀರ್ಥಗುರುಸಾರ್ವಭೌಮರ ದಿವ್ಯವಾದ ಕಾರುಣ್ಯ, ಅಪಾರವಾದ ಶಾಪಾನುಗ್ರಹಸಾಮರ್ಥ್ಯ, ನಮ್ಮ ಲೌಕಿಕ ಮತ್ತು ಆಧ್ಯಾತ್ಮಿಕ ಜೀವನ ಅವರ ಅನುಗ್ರಹವಿಲ್ಲದೇ ನಡೆಯಲು ಸಾಧ್ಯವಿಲ್ಲ ಎಂಬ ತತ್ವಗಳ ಚಿಂತನೆ ಇಲ್ಲಿದೆ.
ರಾಯರ ಭಕ್ತರ ಮಾಹಾತ್ಮ್ಯ
ಶ್ರೀಮದ್ ರಾಘವೇಂದ್ರತೀರ್ಥಗುರುಸಾರ್ವಭೌಮರ ಪಾದಪದ್ಮಗಳ ಸ್ಪರ್ಶ ಪಡೆದ ಧೂಳಿಯಿಂದ ದೇಹವನ್ನು ಅಲಂಕರಿಸಿಕೊಳ್ಳುವ ಶ್ರೀ ಯೋಗೀಂದ್ರತೀರ್ಥರೇ ಮೊದಲಾದ ಮಹಾನುಭಾವರ, ಅವರ ಪಾದಕಮಲಗಳಲ್ಲಿಯೇ ಮನಸ್ಸನ್ನು ನೆಟ್ಟಂತಹ ಶ್ರೀ ಜಗನ್ನಾಥದಾಸಾರ್ಯರೇ ಮೊದಲಾದ ಮಹಾನುಭಾವರ, ಅವರ ಗುಣಗಳನ್ನು ಸ್ತೋತ್ರಮಾಡುವದಕ್ಕಾಗಿಯೇ ತಮ್ಮ ವಾಕ್-ಶಕ್ತಿಯನ್ನು ಬಳಸುವ ಶ್ರೀ ವಾದೀಂದ್ರತೀರ್ಥರೇ ಮೊದಲಾದ ಮಹಾನುಭಾವರ ಮಾಹಾತ್ಮ್ಯವನ್ನು ನಾವಿಲ್ಲಿ ತಿಳಿಯುತ್ತೇವೆ.
09_ ರಾಯರ ಪಾದೋದಕದ ಮಾಹಾತ್ಮ್ಯ
ಗುರುಗಳ ಪಾದೋದಕ ಹಸ್ತೋದಕಗಳನ್ನು ಸ್ವೀಕಾರ ಮಾಡಬೇಕೆ ಮಾಡಬಾರದೆ ಎಂಬ ಚರ್ಚೆ, ಸ್ವೀಕಾರ ಮಾಡುವದರಿಂದ ಉಂಟಾಗುವ ಫಲಗಳ ವಿವರಣೆ ಇಲ್ಲಿದೆ.
08 ರಾಯರ ಮಹಾಗುಣಗಳು
ಶ್ರೀರಾಘವೇಂದ್ರಸ್ತೋತ್ರ — ಶ್ಲೋಕ 06 ನಿರಸ್ತದೋಷೋ ನಿರವದ್ಯವೇಷಃ ಪ್ರತ್ಯರ್ಥಿಮೂಕತ್ವನಿದಾನಭಾಷಃ । ವಿದ್ವತ್ಪರಿಜ್ಞೇಯಮಹಾವಿಶೇಷೋ ವಾಗ್ವೈಖರೀನಿರ್ಜಿತಭವ್ಯಶೇಷಃ ।।
ನಿಷಿದ್ಧ ಪದಾರ್ಥಗಳನ್ನು ದೇವರು ಏಕೆ ಸೃಷ್ಠಿಸಿದ?
ನಿಷಿದ್ಧ ಪದಾರ್ಥಗಳನ್ನು ದೇವರು ಏಕೆ ಸೃಷ್ಠಿಸಿದ?
ಈರುಳ್ಳಿಯನ್ನು ಏಕೆ ತಿನ್ನಬಾರದು?
ಗುರುಗಳಿಗೆ ಪ್ರಣಾಮಗಳು 🙏.ಬ್ರಾಹ್ಮಣರು ಈರುಳ್ಳಿಯನ್ನು ಉಪಯೋಗಿಸಲೇ ಬಾರದೆ? ಉಪಯೋಗಿಸುವವರಿಗೆ ಏನು ಹೇಳುವಿರಿ? ದಯಮಾಡಿ ತಿಳಿಸಿಕೊಡಿ,🙏ಮೈತ್ರೇಯಿ, ಬೆಂಗಳೂರು
ಇವರು ಇಂತಹವರ ಅವತಾರ ಎಂದು ತಿಳಿಯುವ ಕ್ರಮ ಹೇಗೆ?
ಮಹಾನುಭಾವರ ಸ್ವರೂಪವನ್ನು ನಿರ್ಣಯ ಮಾಡುವ ಶಾಸ್ತ್ರೀಯವಾದ ಕ್ರಮಗಳು ಯಾವುವು? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ
ಡಾ. ವಿಠೋಬಾಚಾರ್ಯರಿಗೆ ಉತ್ತರ
ಆರಾಧನೆ ಮತ್ತು ಪೂರ್ವಾಶ್ರಮಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ. ಉಳಿದ ಉತ್ತರಗಳು ಲೇಖನದಲ್ಲಿವೆ. VNA267
ಶ್ರೀ ವಿದ್ಯಾಶ್ರೀಶತೀರ್ಥರಿಗೆ ಬಹಿರಂಗ ಪ್ರಶ್ನೆಗಳು
ಶ್ರೀ ವ್ಯಾಸರಾಜಮಠದ ವಿದ್ಯಾಶ್ರೀಶತೀರ್ಥರಿಗೆ ಹಲವು ಬಹಿರಂಗ ಪ್ರಶ್ನೆಗಳು.
ಮುಟ್ಟಬೇಡಿ ಮುಟ್ಟಬೇಡಿ ಮುರಹರನ ದಾಸರನು
ಸಾವಿನ ಭಯವನ್ನು ಕಳೆದುಕೊಳ್ಳಬೇಕು ಎಂದು ಭಾಗವತ ಆದೇಶಿಸುತ್ತದೆ — “ಅಂತಕಾಲೇ ತು ಪುರಷ ಆಗತೇ ಗತಸಾಧ್ವಸಃ” ಎಂದು. ಗೆಲ್ಲಲ್ಲಿಕ್ಕೆ ಸಾಧ್ಯವಿಲ್ಲದ ಈ ಸಾವಿನ ಭಯವನ್ನು ಗೆಲ್ಲುವ ಕ್ರಮವನ್ನು ಭಗವದ್ಗೀತೆ ಮತ್ತು ದಾಸಸಾಹಿತ್ಯ ತಿಳಿಸಿರುವ ಸುಲಭ ಉಪಾಯಗಳನ್ನು ಇಲ್ಲಿ ವಿವರಿಸಲಾಗಿದೆ. ಶ್ರೀ ಕನಕದಾಸಾರ್ಯರ “ಮುಟ್ಟಬೇಡಿ ಮುಟ್ಟಬೇಡಿ” ಎಂಬ ಹಾಡಿನ ಅರ್ಥಾನುಸಂಧಾನದೊಂದಿಗೆ.
ಮತ್ತೊಬ್ಬರ ಪಾಪದ ಕುರಿತು
ಸಜ್ಜನರು ಮಾಡಿದ ಪಾಪವನ್ನು ಹೇಳಬಾರದು ಎನ್ನುತ್ತದೆ ಶಾಸ್ತ್ರ. ಆದರೆ ಅದೇ ಶಾಸ್ತ್ರ ದೇವತೋತ್ತಮರು, ಋಷಿಪುಂಗವರು ಮುಂತಾದ ಸಜ್ಜನೋತ್ತಮರು ಮಾಡಿದ ಪಾಪಗಳನ್ನು ದಾಖಲಿಸುತ್ತದೆ. ಆಚಾರ್ಯರು ನಿರ್ಣಯಿಸುತ್ತಾರೆ. ಇದನ್ನು ಹೇಗೆ ಅರ್ಥ ಮಾಡಿಕೊಳ್ಳುವದು ಎನ್ನುವ ಪ್ರಶ್ನೆಗೆ ಶ್ರೀಮದಾಚಾರ್ಯರು ನೀಡಿದ ದಿವ್ಯ ಉತ್ತರಗಳ ಸಂಕಲನ ಇಲ್ಲಿದೆ, ತಪ್ಪದೇ ಕೇಳಿ.
ದೇವರಲ್ಲಿ ನೆನಪು ದೋಷವಲ್ಲವೇ?
ದೇವರಲ್ಲಿ ಸ್ಮೃತಿ ಎಂಬ ಗುಣವಿದೆ ಎಂದು ಭಾಗವತ ಹೇಳುತ್ತದೆ. ನಾವು ಮಾಡಿದ್ದನ್ನು ನೆನಪಿಸಿಕೊ ಸ್ವಾಮಿ ಎಂದು ಈಶಾವಾಸ್ಯೋಪನಿಷತ್ತಿನಲ್ಲಿ ಪ್ರಾರ್ಥನೆಯೂ ಇದೆ. ನೆನಪು ಬರಬೇಕಾದರೆ ಮರೆವಿರಬೇಕು. ಮರೆವು ಅನ್ನುವದೊಂದು ದೋಷ. ದೇಷವಿಲ್ಲದ ದೇವರಲ್ಲಿ ಮರೆವೂ ಇರಲು ಸಾಧ್ಯವಿಲ್ಲ, ಮರೆವಿದ್ದರೆ ಸರ್ವಜ್ಞನಲ್ಲ, ಮರೆವಿಲ್ಲದೆ ನೆನಪಿರಲು ಸಾಧ್ಯವಿಲ್ಲ ಎಂಬ ಪ್ರಶ್ನೆಗಳ ಸರಮಾಲೆಗೆ ಶ್ರೀಮದಾಚಾರ್ಯರು ಟೀಕಾಕೃತ್ಪಾದರು ಮತ್ತು ವಿಜಯಧ್ವಜತೀರ್ಥಗುರುಸಾರ್ವಭೌಮರು ನೀಡಿದ ಅತ್ಯಪೂರ್ವ ಉತ್ತರಗಳು ಇಲ್ಲಿವೆ.
ಮೋಹವನ್ನು ಕಳೆದುಕೊಳ್ಳುವದು ಹೇಗೆ
ನಮ್ಮ ಎಲ್ಲ ದುಃಖಕ್ಕೂ ಅಭಿಮಾನವೇ ಮೂಲ ಎಂದು ಶಾಸ್ತ್ರವನ್ನು ಹೇಳುತ್ತದೆ. ಆ ಅಭಿಮಾನ, ಮೋಹಗಳನ್ನು ಕಳೆದುಕೊಳ್ಳುವ ಬಗೆ ಹೇಗೆ ಎನ್ನುವದನ್ನು ಭಾಗವತ ಅದ್ಭುತವಾಗಿ ವಿವರಿಸುತ್ತದೆ. ತಪ್ಪದೇ ಕೇಳಿ.
ದೇವರಲ್ಲಿರುವ ಆಸ್ತಿಕತೆ
ದೇವರ ಅಸ್ತಿತ್ವವನ್ನು ನಂಬುವವನು ಆಸ್ತಿಕ ಎನ್ನುವದು ನಾವು ತಿಳಿದ ಅರ್ಥ. ಆದರೆ, ಆದರೆ ಶ್ರೀಮದ್ ಭಾಗವತ ದೇವರಲ್ಲಿ ಆಸ್ತಿಕತೆ ಇದೆ ಎಂದು ಎನ್ನುತ್ತದೆ. ದೇವರಲ್ಲಿರುವ ಆಸ್ತಿಕತೆ ಯಾವ ರೀತಿಯಾದದ್ದು ಎನ್ನುವದನ್ನು ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ನಾವು ಬೆರಗಾಗುವಂತೆ ಅದ್ಭುತವಾಗಿ ವಿವರಿಸುತ್ತಾರೆ. ತಪ್ಪದೇ ಕೇಳಿ.
ಕಲಿಯ ಪ್ರಭಾವ
ಅಂತ್ಯಕಾಲದಲ್ಲಿ ಬರುವ ಹರಿಸ್ಮರಣೆಯನ್ನು ತಪ್ಪಿಸಲು ಕಲಿ ಯಾವ ರೀತಿ ಪ್ರಭಾವ ಬೀರುತ್ತಾನೆ, ನಮ್ಮ ‘ಸ್ವಧರ್ಮ’ ವನ್ನು ತಪ್ಪಿಸಲು ಪ್ರಯತ್ನಿಸುತ್ತಾನೆ ಎನ್ನುವದರ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 148 — ವಿರಾಡ್ರೂಪದ ಚಿಂತನೆಯ ಫಲ
ಬ್ರಹ್ಮದೇವರು ಸಮಗ್ರ ಹದಿನಾಲ್ಕು ಲೋಕಗಳನ್ನು ಸೃಷ್ಟಿ ಮಾಡು ಜ್ಞಾನ-ಸಾಮರ್ಥ್ಯಗಳನ್ನು ಪಡೆದದ್ದು ಈ ವೈರಾಜಪುರುಷದ ಧ್ಯಾನದಿಂದಲೇ ಎಂಬ ಅತ್ಯಪೂರ್ವಪ್ರಮೇಯವನ್ನು ಶುಕಾಚಾರ್ಯರು ತಿಳಿಸುತ್ತಾರೆ. ಮನುಷ್ಯನ ಸಮಸ್ತ ಮನೋದೋಷಗಳ ವಿನಾಶ ಮತ್ತು ಸಕಲ ಕರ್ಮಗಳಿಗೂ ಅನಂತಫಲ ಉಂಟಾಗುವದು ವಿರಾಡ್ರೂಪದ ಚಿಂತನೆಯಿಂದ ಎನ್ನುವ ತತ್ವದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 147 — ವಿರಾಡ್ರೂಪದ ವರ್ಣನೆ
ಹದಿನಾಲ್ಕು ಲೋಕಗಳಲ್ಲಿ ವ್ಯಾಪಿಸಿ ನಿಂತ ಶ್ರೀಮನ್ನಾರಾಯಣನ ಪರಮಮಂಗಳ ವೈರಾಜ ರೂಪದ ವರ್ಣನೆ ಇಲ್ಲಿದೆ. ಇಲ್ಲಿಗೆ ಎರಡನೆಯ ಸ್ಕಂಧದ ಪ್ರಥಮಾಧ್ಯಾಯ ಮುಗಿಯುತ್ತದೆ.
ಶ್ರೀಮದ್ ಭಾಗವತಮ್ — 146 — ಅಂತ್ಯಕಾಲದ ಸಾಧನೆ
ಮರಣ ಕಾಲ ಬಂದೊದಗಿದಾಗ ಅದೆಷ್ಟು ಎತ್ತರದ ಸಾಧನೆಯನ್ನು ಮಾಡಬೇಕು ಎಂದು ಶುಕಾಚಾರ್ಯರು ಉಪದೇಶಿಸುತ್ತಾರೆ, ನಮ್ಮ ಶ್ರೀಮದಾಚಾರ್ಯರ ಪವಿತ್ರ ಪರಂಪರಗಳಲ್ಲಿ ಬಂದ ಶ್ರೀಹೃಷೀಕೇಶತೀರ್ಥ ಶ್ರೀಪಾದಂಗಳವರೇ ಮೊದಲಾದ ಮಹಾನುಭಾವರು ಈ ಭಾಗವತಾದೇಶವನ್ನು ಅದೆಷ್ಟು ಅದ್ಭುತವಾಗಿ ಪಾಲಿಸಿದರು, ನಾವೆಷ್ಟು ಕೆಳಮಟ್ಟದಲ್ಲಿದ್ದೇವೆ, ಏರಬೇಕಾದ ಎತ್ತರವೇನು ಎಂಬ ವಿಷಯಗಳ ವಿವರಣೆಯನ್ನೊಳಗೊಂಡ ಭಾಗ.
ಶ್ರೀಮದ್ ಭಾಗವತಮ್ — 145 — ವೃದ್ಧಾಪ್ಯ ಹೇಗಿರಬೇಕು
ಅಂತ್ಯಕಾಲ ಸಮೀಪಿಸಿದಾಗ ಸಾವಿನ ಭಯ ಬಿಡಬೇಕು ಎನ್ನುತ್ತಾರೆ ಶ್ರೀ ಶುಕಾಚಾರ್ಯರು. ಸಾವಿನ ಭಯ ಹೋಗಬೇಕಾದರೆ ಏನು ಮಾಡಬೇಕು ಎನ್ನುವದಕ್ಕೆ ಭಗವದ್ಗೀತೆ ಮುಂತಾದ ಶಾಸ್ತ್ರಗಳಲ್ಲಿ ಭಗವಂತ ತಿಳಿಸಿದ, ಅನುಭಾವಿಗಳು ತಮ್ಮ ಕೃತಿಗಳಲ್ಲಿ ತಿಳಿಸಿದ ಮಹತ್ತ್ವದ ವಿಷಯಗಳನ್ನು ನಿರೂಪಿಸಿ ನಮ್ಮ ಯೋಗ್ಯತೆಯಂತೆ ನಮ್ಮ ವೃದ್ಧಾಪ್ಯವನ್ನು ನಾವು ಹೇಗೆ ರೂಪಿಸಿಕೊಳ್ಳಬೇಕು ಎನ್ನುವದರ ಕುರಿತು ಚರ್ಚಿಸಲಾಗಿದೆ.
ಪ್ರಥಮಸ್ಕಂಧ ಸಪ್ತಮಾಧ್ಯಾಯ
ಶ್ರೀಮದ್ ಭಾಗವತದ ಮೊದಲನೆಯ ಸ್ಕಂಧದ ಏಳನೆಯ ಅಧ್ಯಾಯದ ಪಾರಾಯಣ.
ಪ್ರಥಮಸ್ಕಂಧ ಷಷ್ಠಾಧ್ಯಾಯ
ಶ್ರೀಮದ್ ಭಾಗವತದ ಮೊದಲನೆಯ ಸ್ಕಂಧದ ಆರನೆಯ ಅಧ್ಯಾಯದ ಪಾರಾಯಣ.
ಪ್ರಥಮಸ್ಕಂಧ ಪಂಚಮಾಧ್ಯಾಯ
ಶ್ರೀಮದ್ ಭಾಗವತದ ಮೊದಲನೆಯ ಸ್ಕಂಧದ ಐದನೆಯ ಅಧ್ಯಾಯದ ಪಾರಾಯಣ.
ಪ್ರಥಮಸ್ಕಂಧ ಚತುರ್ಥಾಧ್ಯಾಯ
ಶ್ರೀಮದ್ ಭಾಗವತದ ಮೊದಲನೆಯ ಸ್ಕಂಧದ ನಾಲ್ಕನೆಯ ಅಧ್ಯಾಯದ ಪಾರಾಯಣ.
ಪ್ರಥಮಸ್ಕಂಧ ತೃತೀಯಾಧ್ಯಾಯ
ಶ್ರೀಮದ್ ಭಾಗವತದ ಮೊದಲನೆಯ ಸ್ಕಂಧದ ಮೂರನೆಯ ಅಧ್ಯಾಯದ ಪಾರಾಯಣ
ಶ್ರೀಮದ್ ಭಾಗವತಮ್ — 144 — ಭಾಗವತವೆಂಬ ಅಯಸ್ಕಾಂತ
ದೇವರ ಕಥೆಯನ್ನು ಯಾಕಾಗಿ ಕೇಳಬೇಕು ಎನ್ನುವದಕ್ಕೆ ಶುಕಾಚಾರ್ಯರು ನೀಡಿರುವ ಅದ್ವಿತೀಯವಾದ, ನಮ್ಮನ್ನು ಕಥಾಶ್ರವಣದಲ್ಲಿ ಆಸಕ್ತರನ್ನಾಗಿ ಮಾಡುವ ಸ್ಫೂರ್ತಿದಾಯಕ ಉತ್ತರಗಳ ವಿವರಣೆ ಇಲ್ಲಿದೆ. ಎಲ್ಲವನ್ನೂ ತೊರೆದ ಮಹಾಸಾಧಕರಾದ ಶುಕಾಚಾರ್ಯರು ತಾವೇಕೆ ಭಾಗವತವನ್ನು ಅಧ್ಯಯನವನ್ನು ಮಾಡಿದೆವು ಎಂದು ವಿವರಿಸಿರುವ ಭಾಗ.
ಅಧಿಕಮಾಸದ ದಾನದ ಮಂತ್ರ ಮತ್ತು ವಿಧಿ
ಸಂಕಲ್ಪ ಮತ್ತು ಸಮರ್ಪಣೆಯಿಲ್ಲದ ಕರ್ಮ ಫಲಪ್ರದವಾಗುವದಿಲ್ಲ. ಹೀಗಾಗಿ ಸಜ್ಜನರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಸಮಗ್ರ ದಾನದ ವಿಧಿಯನ್ನು ಇಲ್ಲಿ ಆಡಿಯೋ ರೂಪದಲ್ಲಿ ನೀಡಲಾಗಿದೆ. 31 ನಿಮಿಷಗಳು.
ಶ್ರೀಮದ್ ಭಾಗವತಮ್ — 143 — ಅಂತಿಮ ಸ್ಮರಣೆಯ ಮಾಹಾತ್ಮ್ಯ
ಅಂತಿಮಕಾಲದ ಸ್ಮರಣೆಯಲ್ಲಿನ ವೈವಿಧ್ಯಗಳು, ಆ ವಿವಿಧ ಕ್ರಮಗಳಿಂದ ಉಂಟಾಗುವ ವಿವಿಧ ಫಲಗಳು, ಕಟ್ಟ ಕಡೆಯಲ್ಲಿ ಸ್ಮರಣೆ ಬರಬೇಕಾದರೆ ಏನು ಮಾಡಬೇಕು ಎನ್ನುವ ವಿಷಯಗಳ ವಿವರಣೆ ಇಲ್ಲಿದೆ. ಮಹಾ ಪ್ರಯತ್ನ ಮಾಡಿ ಕಡೆಯಲ್ಲಿ ಸ್ಮರಣೆ ಮಾಡಿದರೆ ಸಾಕಲ್ಲವೇ, ಇಡಿಯ ಜನ್ಮ ಯಾಕಾಗಿ ಪ್ರಯತ್ನ ಪಡಬೇಕು ಎಂಬ ಪ್ರಶ್ನೆಗೆ ಆಚಾರ್ಯರು ಗೀತಾತಾತ್ಪರ್ಯನಿರ್ಣಯದಲ್ಲಿ ನೀಡಿರುವ ದಿವ್ಯ ಉತ್ತರದ ಚಿಂತನೆಯೊಂದಿಗೆ.
ಶ್ರೀಮದ್ ಭಾಗವತಮ್ — 142 — ಸ್ವಧರ್ಮನಿಷ್ಠೆ
ಅಂತ್ಯಕಾಲದಲ್ಲಿ ಹರಿಯ ಸ್ಮರಣೆ ಬರಬೇಕಾದರೆ ಬೇಕಾದ ಸ್ವಧರ್ಮ ನಿಷ್ಠೆಯ ಕುರಿತು ನಾವಿಲ್ಲಿ ಕೇಳುತ್ತೇವೆ. ಬ್ರಾಹ್ಮಣ ಶೂದ್ರ ನಂತೆ ಬದುಕುವದು, ಶೂದ್ರ ಬ್ರಾಹ್ಮಣನಂತೆ ಬದುಕುವದು, ಸಂನ್ಯಾಸಿ ಗೃಹಸ್ಥನಂತೆ, ಗೃಹಸ್ಥ ಸಂನ್ಯಾಸಿಯಂತೆ ಬದುಕುವದು ಅಂತ್ಯಕಾಲದ ಹರಿಸ್ಮರಣೆಗೆ ವಿರೋಧಿಯಾದದ್ದು ಎನ್ನುವದನ್ನು ಶ್ರೀ ಶುಕಾಚಾರ್ಯರು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸುತ್ತಾರೆ. ಆ ಭಾಗದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 141 — ಶುಕಾಚಾರ್ಯರ ಉತ್ತರ
ತನ್ನ ಉದ್ಧಾರಕ್ಕಾಗಿ ಮನುಷ್ಯ ಅರಿಯಬೇಕಾದ್ದೇನು ಎಂಬ ಪ್ರಶ್ನೆಗೆ, ದೇವರನ್ನು ಅರಿಯಬೇಕು ಎಂಬ ಉತ್ತರವನ್ನು ಶುಕಾಚಾರ್ಯರು ನೀಡುವ ರೀತಿಯೇ ಅದ್ಭುತ. ಹಾಳು ಹರಟೆಯಿಂದ, ಕೆಲಸಕ್ಕೆ ಬಾರದ ವಿಷಯಗಳಲ್ಲಿನ ಆಸಕ್ತಿಯಿಂದ ಬದುಕು ಹಾಳಾಗುತ್ತದೆ ಎಂದು ನಾವು ಭಾವಿಸಿದ್ದರೆ, ಧರ್ಮನಿಷ್ಠವಾದ ಬದುಕನ್ನು ಕಂಡು ಬೆರಗಾಗುತ್ತಿದ್ದರೆ, ದೇವರ ಚಿಂತನೆಯಿಲ್ಲದ ಧಾರ್ಮಿಕತೆಯಿಂದ ಯಾವ ಉಪಯೋಗವೂ ಇಲ್ಲ ಎನ್ನುವದನ್ನು ಆ ಬಾದರಾಯಣಪುತ್ರರು ಅದ್ಭುತವಾಗಿ ಮನಗಾಣಿಸುತ್ತಾರೆ. ಅವರ ಪವಿತ್ರ ವಚನಗಳ ಅರ್ಥಾನುಸಂಧಾನ ಇಲ್ಲಿದೆ.
ಅಧಿಕಮಾಸದ ದಾನಗಳು
ದಾನವನ್ನು ಮಾಡಬೇಕಾದರೆ ನಮಗಿರಬೇಕಾದ ಎಚ್ಚರಗಳು, ಮಾಡುವ ತಪ್ಪುಗಳು, ಅಪೂಪ ದಾನ, ದೀಪದಾನ, ಭಾಗವತದಾನ, ತೀರ್ಥಸ್ನಾನ, ಅಧಿಕ ಮಾಸದ ನಿತ್ಯಧರ್ಮಗಳು, ರಾಧಾಪುರುಷೋತ್ತಮಪೂಜಾ, ಭಾಗವತಶ್ರವಣ ಮುಂತಾದ ವಿಷಯಗಳ ನಿರೂಪಣೆ ಇಲ್ಲಿದೆ.
ಅಧಿಕಮಾಸದ ವ್ರತಗಳು
ಪುರುಷೋತ್ತಮಮಾಸದಲ್ಲಿ ಮಾಡಬೇಕಾದ ನಿತ್ಯವ್ರತಗಳು, ಉಪವಾಸದ ಮಹತ್ತ್ವ, ಉಪವಾಸದ ವ್ರತಗಳು, ಕ್ರಮಧಾನ್ಯತ್ಯಾಗವ್ರತ, ರಾತ್ರಿಭೋಜನವ್ರತ, ಭೂಮಿಶಯನವ್ರತ, ಮೌನವ್ರತ, ಅಖಂಡದೀಪವ್ರತ ಮುಂತಾದವುಗಳ ಕುರಿತ ವಿವರಣೆ ಇಲ್ಲಿದೆ.
ಪುರುಷೋತ್ತಮಮಾಸದ ತಿರಸ್ಕಾರದ ಫಲ
ಶ್ರೀ ಪುರುಷೋತ್ತಮಮಾಸದ ತಿರಸ್ಕಾರದಿಂದಲೇ ದ್ರೌಪದಿಯ ವಸ್ತ್ರಾಪಹರಣವಾದದ್ದು ಎಂಬ ಅಪೂರ್ವ ಇತಿಹಾಸದ ವಿವರಣೆ ಇಲ್ಲಿದೆ. ಆಚಾರ್ಯರ ನಿರ್ಣಯಗಳೊಂದಿಗೆ.
ಮಲಮಾಸ ಪುರುಷೋತ್ತಮಮಾಸವಾದ ರೋಚಕ ಇತಿಹಾಸ
ಸಕಲರಿಂದಲೂ ಮಲಮಾಸ ಎಂದು ನಿಂದಿತವಾಗಿದ್ದ ಮಾಸ, ಸಕಲ ಮಾಸಗಳಿಂದಲೂ ಶ್ರೇಷ್ಠವಾಗಿ ಪುರುಷೋತ್ತಮಮಾಸವಾಗಿ ಪರಿವರ್ತನೆಯಾದ ಘಟನೆಯ ಚಿತ್ರಣ
ಅಧಿಕಮಾಸದ ದೇವತೆಯ ದುಃಖ
ಶುಭಕರ್ಮಗಳಿಗೆ ವರ್ಜ್ಯವಾಗಿ ಮಲ ಎಂಬ ನಿಂದೆಗೆ ಗುರಿಯಾಗಿದ್ದ ಅಧಿಕಮಾಸದ ದೇವತೆ ತನ್ನ ನೋವನ್ನು ಪರಿಹರಿಸಿಕೊಳ್ಳಲು ಶ್ರೀಹರಿಯನ್ನು ಮೊರೆ ಹೋದ ಘಟನೆಯ ವಿವರಣೆ
ಪುರುಷೋತ್ತಮ ಮಾಸದ ಮಾಹಾತ್ಮ್ಯ
ಭೂಲೋಕದಲ್ಲಿ ಕಷ್ಟ ಪಡುವ ಸಜ್ಜನರನ್ನು ಉದ್ಧಾರ ಮಾಡಲೆಂದೇ ಸಂಚಾರ ಮಾಡುವ, ಅಪಾರ ಕಾರುಣ್ಯದ ನಾರದರು, ಬದರಿಯ ನಾರಾಯಣನ ಬಳಿಗೆ ಬಂದು ಸಜ್ಜನರ ಕಷ್ಟಗಳನ್ನು ವಿಜ್ಞಾಪಿಸಿಕೊಂಡು ಎಲ್ಲ ಕಷ್ಟಗಳ ಪರಿಹಾರಕ್ಕಾಗಿ ಉಪಾಯವನ್ನು ಪ್ರಾರ್ಥಿಸುತ್ತಾರೆ. ಆಗ ಆ ಬದರೀನಾಥ ಪುರುಷೋತ್ತಮ ಮಾಸದ ಮಾಹಾತ್ಮ್ಯವನ್ನು ನಾರದರಿಗೆ ಉಪದೇಶಿಸುತ್ತಾನೆ. ಭಗವಂತನ ವಾಣಿಯಲ್ಲಿ ಬಂದ ಅಧಿಕ ಮಾಸದ ಮಾಹಾತ್ಮ್ಯದ ವಿವರಣೆ ಇಲ್ಲಿದೆ.
ಪುರುಷೋತ್ತಮ ಮಾಸದ ಪರಿಚಯ
ಅಧಿಕಮಾಸಕ್ಕೆ ನಿಯಾಮಕವಾದ ಭಗವದ್ರೂಪ ಗೋಲೋಕದ ಶ್ರೀ ಪುರುಷೋತ್ತಮ ಎನ್ನುವ ರೂಪ. ಹೀಗಾಗಿ ಈ ಮಾಸವನ್ನು ಪುರುಷೋತ್ತಮ ಮಾಸ ಎಂದು ಶಾಸ್ತ್ರಗಳು ದೊಡ್ಡವರು ಕರೆಯುತ್ತಾರೆ. ಈ ಮಾಸದ ಆವಶ್ಯಕತೆ, ಇದರ ಪರಿಚಯಗಳು ಈ ಉಪನ್ಯಾಸದಲ್ಲಿವೆ. ಪುರುಷೋತ್ತಮ ಮಾಸದ ಮಾಹಾತ್ಮ್ಯವನ್ನು ಕೇಳಲಿಕ್ಕಾಗಿ ಋಷಿಗಳ ಸಮುದಾಯವೇ ನೈಮಿಷಾರಣ್ಯಕ್ಕೆ ಧಾವಿಸಿ ಬರುತ್ತದೆ. ಈ ಮಾಹಾತ್ಮ್ಯವನ್ನು ಹೇಳಬರುವ ಸೂತಾಚಾರ್ಯರ ಅಪೂರ್ವ ವರ್ಣನೆಯೂ ಇಲ್ಲಿದೆ.
ಶ್ರೀಮದ್ ಭಾಗವತಮ್ — 140 — ಶುಕಾಚಾರ್ಯರ ಆಗಮನ
ಗಂಗೆಯ ತೀರದಲ್ಲಿ, ಸಮಸ್ತ ಋಷಿಗಳ ಸಭೆಯಲ್ಲಿ ಪ್ರಾಯೋಪವೇಶಕ್ಕಾಗಿ ಕುಳಿತ ಪರೀಕ್ಷಿದ್ರಾಜರು ಪ್ರಶ್ನೆಯೊಂದನ್ನು ಆ ಎಲ್ಲ ಋಷಿಗಳಿಗೆ ಕೇಳುತ್ತಾರೆ. ಆ ಪ್ರಶ್ನೆ ಮುಗಿಯುವ ಕ್ಷಣಕ್ಕೆ, ಉತ್ತರ ನೀಡಲು ಸಾಕ್ಷಾತ್ ಶುಕಾಚಾರ್ಯರೇ ಆಗಮಿಸುತ್ತಾರೆ. ಆ ಮಹಾನುಭಾವರ ದಿವ್ಯವಾದ ರೂಪದ ವರ್ಣನೆ ಮತ್ತು ಪರೀಕ್ಷಿದ್ರಾಜರು ಅವರಿಗೆ ಮಾಡುವ ಪ್ರಶ್ನೆಯ ಉಲ್ಲೇಖದೊಂದಿಗೆ ಲಿ ಶ್ರೀಮದ್ ಭಾಗವತದ ಪ್ರಥಮಸ್ಕಂಧದ ಪ್ರವಚನ ಸಮಾಪ್ತವಾಗುತ್ತದೆ.
ಶ್ರೀಮದ್ ಭಾಗವತಮ್ — 139 — ಪರೀಕ್ಷಿದ್ರಾಜರ ಪ್ರಾಯೋಪವೇಶ
ಮಾಡಿದ ತಪ್ಪಿಗೆ ಪರಿತಪಿಸಲು ಆರಂಭಿಸಿದ ಪರೀಕ್ಷಿದ್ರಾಜರು ಶಾಪದ ಸುದ್ದಿ ಕೇಳಿದೊಡನೆಯೇ ತಮ್ಮ ಪಾಪಕ್ಕೆ ತಕ್ಕ ಶಾಸ್ತಿಯಾಯಿತು ಎಂದು ಸಂತುಷ್ಟರಾಗಿ, ಸಕಲ ಭಾರವನ್ನೂ ಮಗನಿಗೆ ವಹಿಸಿ ಗಂಗಾತೀರದಲ್ಲಿ ಅನಶನವ್ರತವನ್ನು ಕೈಗೊಳ್ಳುತ್ತಾರೆ. ಅಲ್ಲಿಗೆ ವೇದವ್ಯಾಸದೇವರು, ಪರಶುರಾಮದೇವರು, ನಾರದರು, ವಸಿಷ್ಠರು ಮುಂತಾದ ಸಮಸ್ತ ಋಷಿಗಳು ತಮ್ಮ ಶಿಷ್ಯರ ಸಮೇತವಾಗಿ ಅಲ್ಲಿಗೆ ಆಗಮಿಸುತ್ತಾರೆ. ಆ ದಿವ್ಯವಾದ ಘಟನೆಯ ಚಿತ್ರಣ ಇಲ್ಲಿದೆ.
ಶ್ರೀಮದ್ ಭಾಗವತಮ್ — 138 — ಶಮೀಕರ ಎತ್ತರ
ಪರೀಕ್ಷಿದ್ರಾಜರಿಗೆ ಶಾಪ ಕೊಟ್ಟು ಬಂದ ಮಗನನ್ನು ಶಮೀಕರು ಅಭಿನಂದಿಸುವದಿಲ್ಲ, ಸಮಗ್ರ ಭೂಮಿಯ ಜನರ ಧರ್ಮಾಚರಣೆಗೆ ಆಧಾರನಾದ ರಾಜನ ಸಾವಿನಿಂದ ಎಂತಹ ಪಾಪವನ್ನು ಪಡೆದಿದ್ದೇವೆ ಎಂದು ಮಗನಿಗೆ ಮನಗಾಣಿಸಿ ಮಾಡಿದ ತಪ್ಪಿಗೆ ದೇವರ ಕ್ಷಮೆಯನ್ನು ಕೇಳುತ್ತಾರೆ. ಒಟ್ಟಾರೆ ಈ ಪ್ರಸಂಗದಲ್ಲಿ ಶೃಂಗಿ, ಶಮೀಕರು, ಪರೀಕ್ಷಿದ್ರಾಜರು ನಮಗೆ ಕಲಿಸುವ ಬದುಕಿನ ದಿವ್ಯ ಪಾಠಗಳ ವಿವರಣೆ ಇಲ್ಲಿದೆ. ನೀವೂ ಕೇಳಿ. ಮಕ್ಕಳಿಗೂ ತಪ್ಪದೇ ಕೇಳಿಸಿ.
ಶ್ರೀಮದ್ ಭಾಗವತಮ್ — 137 — ಶೃಂಗಿಯ ಶಾಪ
ಬೇಟೆಯನ್ನಾಡಿ ಹಸಿವು ಬಾಯಾರಿಕೆ ಶ್ರಮದಿಂದ ಬಳಲುತ್ತಿದ್ದ ಪರೀಕ್ಷಿದ್ರಾಜರು ನೀರನ್ನು ಅರಸುತ್ತ ಶಮೀಕರ ಆಶ್ರಮಕ್ಕೆ ಬಂದು ನೀರನ್ನು ಕೇಳುತ್ತಾರೆ. ಆದರೆ ಸಮಸ್ತ ಜಗತ್ತಿನ ಪರಿವೆಯನ್ನು ಮರೆತು ಶಮೀಕರು ಅಂತರ್ಯಾಮಿಯನ್ನು ಕಾಣುತ್ತ ಕುಳಿತಿರುತ್ತಾರೆ. ಪ್ರಾರಬ್ಧಕರ್ಮದ ವಶದಿಂದ ಇದನ್ನು ಅರಿಯದ ಮಹಾರಾಜರು, ಸಿಟ್ಟಿನಿಂದ ಅವರ ಕೊರಳಿಗೆ ಸತ್ತ ಹಾವೊಂದನ್ನು ಹಾಕಿ ಹೊರಟುಬಿಡುತ್ತಾರೆ. ಸುದ್ದಿಯನ್ನು ಕೇಳಿದ ಶೃಂಗಿ — ಶಮೀಕರ ಮಗ — ಇನ್ನೇಳು ದಿವಸಗಳಲ್ಲಿ ರಾಜನನ್ನು ತಕ್ಷಕ ಕೊಲ್ಲಲಿ ಎಂದು ಭಯಂಕರ ಶಾಪನ್ನು ನೀಡಿಬಿಡುತ್ತಾನೆ.
ಶ್ರೀಮದ್ ಭಾಗವತಮ್ — 136 — ಸತ್ಸಂಗತಿಯ ಮಾಹಾತ್ಮ್ಯ
ಮೋಕ್ಷವೂ ಸಜ್ಜನರ ಸಂಪರ್ಕಕ್ಕೆ ಸಮಾನವಾದುದದಲ್ಲ ಎನ್ನುತ್ತದೆ ಭಾಗವತ. ಈ ಮಾತನ್ನು ಒಪ್ಪುವದು ಹೇಗೆ. ಸಜ್ಜನರ ಸಂಪರ್ಕವೇ ಮೋಕ್ಷಕ್ಕಿಂತ ದೊಡ್ಡದಾಗುವದಾದರೆ, ಮೋಕ್ಷವನ್ನು ಬಯಸಬೇಕೇಕೆ, ಇಲ್ಲಿಯೇ ಸತ್ಸಂಪರ್ಕದಲ್ಲಿದ್ದರಾಯಿತಲ್ಲ ಎಂಬ ಪ್ರಶ್ನೆಗೆ ಅತೀ ಸೂಕ್ಷ್ಮ ಪ್ರಮೇಯಗಳನ್ನೊಳಗೊಂಡ ಉತ್ತರವನ್ನು ಶ್ರೀಮದಾಚಾರ್ಯರು ನೀಡುತ್ತಾರೆ. ಈ ಸಾಧನೆಯ ಸಂದರ್ಭದಲ್ಲಿ ನಮಗಿರಬೇಕಾದ ಎಚ್ಚರವೇನು ಎನ್ನುವದನ್ನು ಮನಗಾಣಿಸುವ ಭಾಗ.
ಶ್ರೀಮದ್ ಭಾಗವತಮ್ — 135 — ಸೂತರ ಅದ್ಭುತ ವಚನಗಳು
ಸೂತಾಚಾರ್ಯರು ಹೇಳುತ್ತಿರುವ ಕಥೆಗಳನ್ನು ಕೇಳುತ್ತಿರುವ ಶೌನಕರು ಸಂತುಷ್ಟರಾಗಿ ಸೂತಾಚಾರ್ಯರನ್ನು ಅಭಿನಂದಿಸುತ್ತಾರೆ, ದೀರ್ಘಾಯುಷ್ಯದ ಆಶೀರ್ವಾದವನ್ನು ಮಾಡುತ್ತಾರೆ. ಅದಕ್ಕೆ ಪ್ರತಿಯಾಗಿ ಸೂತರು ಆಡುವ ಮಾತು ಅವರೆಡೆಗೆ ನಮಗಿರುವ ಗೌರವವನ್ನು ನೂರ್ಮಡಿ ಮಾಡಿಬಿಡುತ್ತದೆ. ಇದರ ಜೊತೆಯಲ್ಲಿಯೇ “ನಾರಾಯಣನೇ ಏಕೆ ಸರ್ವೋತ್ತಮ” ಎಂಬ ಪ್ರಶ್ನೆಗೆ ಅದ್ಭುತವಾದ ಉತ್ತರಗಳನ್ನು ನೀಡುತ್ತಾರೆ. ತಪ್ಪದೇ ಆಲಿಸಿ.
ಶ್ರೀಮದ್ ಭಾಗವತಮ್ — 134 — ಶ್ರೀಹರಿಯ ಸೇವೆಯ ಮಾಹಾತ್ಮ್ಯ
ದೇವರ ಸೇವೆಯನ್ನು ಮಾಡುವದರಿಂದ ಉಂಟಾಗುವ ಅನಂತ ಪ್ರಯೋಜನಗಳಲ್ಲಿ ಒಂದು ನಿರ್ಭೀತಿ. ಹರಿಭಕ್ತನಾದ ಮನುಷ್ಯ ನಿರ್ಭೀತನಾಗಿ ಬದುಕುತ್ತಾನೆ. ಎಲ್ಲರನ್ನೂ ಕಾಡಿಸುವ ಸಾವೂ ಸಹ ಅವರನ್ನು ಕಾಡಿಸುವದಿಲ್ಲ. ಸಾವುಂಟಾಗುತ್ತದೆ ಎಂದು ತಿಳಿದರೂ ಪರೀಕ್ಷಿದ್ರಾಜರು ವಿಚಲಿತರಾಗದೆ ಅವರು ತೆಗೆದುಕೊಂಡ ನಿರ್ಧಾರ ಅದೆಷ್ಟು ಅದ್ಭುತ ಎನ್ನುವದನ್ನು ಈ ಉಪನ್ಯಾಸದಲ್ಲಿ ಕೇಳುತ್ತೇವೆ.
ಶ್ರೀಮದ್ ಭಾಗವತಮ್ — 133 — ಪರೀಕ್ಷಿದ್ರಾಜರು ಮಾಡಿದ್ದೇನು
ಗೋವಿನ ರೂಪದಲ್ಲಿ ದುಃಖವನ್ನನುಭವಿಸುತ್ತಿದ್ದ ಭೂತಾಯಿಯನ್ನು ಪರೀಕ್ಷಿದ್ರಾಜರು ಸಂತೈಸಿದರು ಎಂದು ಭಾಗವತ ತಿಳಿಸುತ್ತದೆ. ಶ್ರೀಕೃಷ್ಣ ಈಗ ಭೂಮಿಯಲ್ಲಿಲ್ಲ ಎಂದು ದುಃಖಿಸುತ್ತಿದ್ದ ಭೂದೇವಿಯನ್ನು ಹೇಗೆ ತಾನೆ ಸಂತೈಸಲು ಸಾಧ್ಯ ಎಂಬ ಪ್ರಶ್ನೆಗೆ ಶ್ರೀ ಸೂತಾಚಾರ್ಯರು ದಿವ್ಯವಾದ ಉತ್ತರವನ್ನು ನೀಡಿದ್ದಾರೆ. ತಪ್ಪದೇ ಕೇಳಿ. ಪರೀಕ್ಷಿದ್ರಾಜರ ಬಗೆಗಿನ ನಮ್ಮ ಭಕ್ತಿಯನ್ನು ನೂರ್ಮಡಿಗೊಳಿಸುವ ದಿವ್ಯ ಪ್ರಮೇಯದ ಚಿತ್ರಣ ಇಲ್ಲಿದೆ.
ಶ್ರೀಮದ್ ಭಾಗವತಮ್ — 132 — ಕಲಿನಿಗ್ರಹ
ಹಸು-ಎತ್ತುಗಳನ್ನು ಹಿಂಸಿಸುತ್ತಿದ್ದ ದುಷ್ಟ ಕಲಿಯನ್ನು ಕೊಲ್ಲಲು ಪರೀಕ್ಷಿದ್ರಾಜರು ಕತ್ತಿಯೆತ್ತಿದೊಡನೆ, ನೀಚ ಕಲಿ ಪರೀಕ್ಷಿದ್ರಾಜರ ಕಾಲಿಗೆರಗುತ್ತಾನೆ. ಕಲಿಯುಗದ ಪ್ರವರ್ತನೆಗೆ ಕಾರಣವನ್ನರಿತಿದ್ದ ಪರೀಕ್ಷಿದ್ರಾಜರು, ಅವನನ್ನು ಕೊಲ್ಲದೆ ಅವನಿಗೆ ಇರಲು ಐದು ಸ್ಥಾನಗಳನ್ನು ನೀಡುತ್ತಾರೆ. ಶ್ರೀಮದಾಚಾರ್ಯರು ತಿಳಿಸಿರುವ ಅತ್ಯಪೂರ್ವ ಪ್ರಮೇಯಗಳೊಂದಿಗೆ ಆ ಭಾಗದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 131 — ಮತ್ತೊಬ್ಬರ ಪಾಪದ ಕುರಿತು
ಮಾಡಿದವರ ಪಾಪ ಆಡಿದವರ ಬಾಯಲ್ಲಿ ಎಂದು ಭಾಗವತ ಹೇಳುತ್ತದೆ ಯದಧರ್ಮಕೃತಃ ಸ್ಥಾನಂ ಸೂಚಕಸ್ಯಾಪಿ ತದ್ ಭವೇತ್ ಎಂದು. ಹಾಗಾದರೆ ಮಹಾಭಾರತ ರಾಮಾಯಣ ತಾತ್ಪರ್ಯನಿರ್ಣಯ ಮಧ್ವವಿಜಯ ಮುಂತಾದ ಗ್ರಂಥಗಳಲ್ಲಿ ದುಷ್ಟರು ಮತ್ತು ಸಜ್ಜನರು ಇಬ್ಬರೂ ಮಾಡಿದ ಪಾಪಗಳನ್ನು ದಾಖಲಿಸಲಾಗಿದೆ. ಇದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂಬ ಪ್ರಶ್ನೆಗೆ ಸಜ್ಜನರು ಮತ್ತು ದುರ್ಜನರು ಇಬ್ಬರೂ ಮಾಡಿದ ಪಾಪಗಳ ಕುರಿತು ಮಾತನಾಡುವ ಮುನ್ನ ನಮಗಿರಬೇಕಾದ ಎಚ್ಚರಗಳ ಕುರಿತು ಶ್ರೀಮದಾಚಾರ್ಯರು ನಿರ್ಣಯಿಸಿ ತಿಳಿಸಿದ ಸೂಕ್ಷ್ಮ ಪ್ರಮೇಯಗಳ ವಿವರಣೆ ಇಲ್ಲಿದೆ. ತಪ್ಪದೇ ಕೇಳಿ.
ಶ್ರೀಮದ್ ಭಾಗವತಮ್ — 130 — ಧರ್ಮ-ಪರೀಕ್ಷಿತ್ ಸಂವಾದ
ಜೀವನ ದುಃಖಕ್ಕೆ ಕಾರಣ ಯಾರು ಎಂಬ ಮಹತ್ತ್ವದ ಪ್ರಮೇಯದ ಚರ್ಚೆಯನ್ನೊಳಗೊಂಡ ಈ ಧರ್ಮಪುರುಷ ಮತ್ತು ಪರೀಕ್ಷಿತರ ಸಂವಾದದಲ್ಲಿ ಯಾರೊಡನೆ ಯಾವ ರೀತಿ ಮಾಡಬೇಕು ಎನ್ನುವ ಪಾಠವನ್ನು ಭಾಗವತ ಕಲಿಸುತ್ತದೆ.
ಶ್ರೀಮದ್ ಭಾಗವತಮ್ — 129 — ದೇವರ ಗುಣಗಳು — 09
ನಾವು ಬಿಡಬೇಕಾದ ಅಭಿಮಾನ ಯಾವುದು, ಇರಬೇಕಾದ ಅಭಿಮಾನ ಯಾವುದು ಎನ್ನುವದರ ವಿವರಣೆ, ದೇವರಲ್ಲಿನ ಅನಂಹಕಾರ ಎಂಬ ಗುಣದ ಚಿಂತನೆ ಉಪಾಸನೆಗಳಿಂದ ಜೀವ ಪಡೆಯುವ ಶ್ರೇಷ್ಠ ಪ್ರಯೋಜನದ ವಿವರಣೆ ಮುಂತಾದ ವಿಷಯಗಳು ಇಲ್ಲಿವೆ.
ಶ್ರೀಮದ್ ಭಾಗವತಮ್ — 128 — ದೇವರ ಗುಣಗಳು — 08
ಆಸ್ತಿಕ ಎನ್ನುವ ಶಬ್ದಕ್ಕೆ ವೇದಗಳಲ್ಲಿರುವ ತತ್ವ ಸತ್ಯವಾದದ್ದು, ಅಸ್ತಿ ಎಂದು ತಿಳಿಯುವವನು ಎಂದರ್ಥ. ದೇವರಲ್ಲಿ ಆಸ್ತಿಕತೆ ಇದೆ ಎಂದು ಭಾಗವತ ಹೇಳುತ್ತದೆ. ಯಾವ ದೃಷ್ಟಿಯಿಂದ ಎಂಬ ಪ್ರಶ್ನೆಗೆ ಆಚಾರ್ಯರು ನೀಡಿರುವ ಉತ್ತರವನ್ನು ಅತ್ಯಂತ ಸೂಕ್ಷ್ಮಪ್ರಮೇಯಗಳೊಂದಿಗೆ ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ನಮಗೆ ಅರ್ಥ ಮಾಡಿಸುತ್ತಾರೆ. ಆ ವಿಷಯದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 127 — ದೇವರ ಗುಣಗಳು — 07
ಬಲ ಎಂದರೇನು, ಬಲದ ಸೂಕ್ಷ್ಮ ವೈವಿಧ್ಯಗಳಾವುವು, ಅವುಗಳ ಉಪಾಸನೆಯಿಂದ ಉಂಟಾಗುವ ಮಹತ್ತರ ಫಲಗಳೇನು ಎಂಬಿತ್ಯಾದಿ ವಿಷಯಗಳನ್ನು ದೃಷ್ಟಾಂತದ ಸಮೇತವಾಗಿ ಇಲ್ಲಿ ವಿವರಿಸಲಾಗಿದೆ.
ಶ್ರೀಮದ್ ಭಾಗವತಮ್ — 126 — ದೇವರ ಗುಣಗಳು — 06
ದೇವರ ಪರಮಾದ್ಭುತವಾದ ಕಾಂತಿ, ಅದರ ಚಿಂತನದಿಂದ ನಾವು ಪಡೆಯುವ ಅಲೌಕಿಕವಾದ ಮತ್ತು ಬೆಲೆಕಟ್ಟಲಾಗದ ಪ್ರಯೋಜನ, ಯಾರಾದರೂ ತಪ್ಪು ಮಾಡಿದ ತಕ್ಷಣ ದೇವರು ಶಿಕ್ಷೆ ಕೊಡಬೇಕು ಎಂಬ ಮಂದಬುದ್ಧಿಯ ವಿಚಾರಕ್ಕೆ ಭಾಗವತ ನೀಡುವ ಉತ್ತರ, ಪ್ರಾಗಲ್ಭ್ಯ ಎಂದರೇನು, ಅದರ ಉಪಾಸನೆಯಿಂದ ಭಕ್ತರಲ್ಲುಂಟಾಗುವ ದಿವ್ಯ ಪರಿಣಾಮದ ಕುರಿತ ವಿವರಣೆ, ಅನಂತ ಸಾಮರ್ಥ್ಯದ ಶ್ರೀಹರಿಯಲ್ಲಿರುವ ವಿನಯ ಎಂಬ ಗುಣದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 125 — ದೇವರ ಗುಣಗಳು — 05
ದೇವರಲ್ಲಿ ಸ್ಮೃತಿ ಎಂಬ ಗುಣವಿದೆ ಎಂದು ಭಾಗವತ ಹೇಳುತ್ತದೆ. ಸ್ಮೃತಿ ಎಂದರೆ ನೆನಪು. ನೆನಪು ಎಂಬ ಗುಣವಿರಬೇಕಾದರೆ ಮರೆವು ಎಂಬ ದೋಷವೂ ಇರಬೇಕು. ಅಂದಮೇಲೆ ದೇವರಲ್ಲಿ ನೆನಪು ಎಂಬ ಗುಣ ಹೇಗಿರಲು ಸಾಧ್ಯ ಎಂಬ ಪ್ರಶ್ನೆಗೆ ಶ್ರೀಮದಾಚಾರ್ಯರು ಟೀಕಾಕೃತ್ಪಾದರು ಈಶಾವಾಸ್ಯದ ಭಾಷ್ಯ ಟೀಕಾ ಗ್ರಂಥಗಳಲ್ಲಿ ನೀಡಿರುವ ಉತ್ತರದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 124 — ದೇವರ ಗುಣಗಳು — 04
ದೇವರಲ್ಲಿ ವೈರಾಗ್ಯ ಎಂಬ ಗುಣವಿದೆ ಎನ್ನುವದು ವೇದಗಳ ಸಿದ್ಧಾಂತ. ಸಂಸಾರವನ್ನು ಬಿಡಲು ಜೀವರಿಗೆ ವೈರಾಗ್ಯ ಆವಶ್ಯಕ, ದೇವರಲ್ಲೇಕೆ ವೈರಾಗ್ಯ ಎಂಬ ಗುಣವನ್ನು ಒಪ್ಪಬೇಕು ಎನ್ನುವದಕ್ಕೆ ಶ್ರೀಮಟ್ಟೀಕಾಕೃತ್ಪಾದರು ಮತ್ತು ಶ್ರೀಮದ್ ವಿಜಯಧ್ವಜತೀರ್ಥಗುರುಸಾರ್ವಭೌಮರು ನೀಡಿರುವ ಉತ್ತರಗಳ ವಿವರಣೆ ಇಲ್ಲಿದೆ. ತಪ್ಪದೇ ಕೇಳಿ.
ಶ್ರೀಮದ್ ಭಾಗವತಮ್ — 123 — ದೇವರ ಗುಣಗಳು — 03
ದೇವರು ಭಕ್ತಾಪರಾಧಸಹಿಷ್ಣು ಎನ್ನುವದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಎಲ್ಲ ಸಂದರ್ಭಗಳಲ್ಲಿಯೂ ದೇವರು ತನ್ನ ಭಕ್ತರ ಅಪರಾಧಗಳನ್ನು ಮನ್ನಿಸಿಲ್ಲ. ಭಕ್ತರ ಅಪರಾಧಗಳಿಗೂ ದೇವರು ಶಿಕ್ಷೆ ನೀಡಿದ್ದಿದೆ. ಹಾಗಾದರೆ ದೇವರು ಯಾವಾಗ ಭಕ್ತರ ಅಪರಾಧಗಳನ್ನು ಮನ್ನಿಸುತ್ತಾನೆ, ಅವನು ಮನ್ನಿಸಲು ಮಾಡಬೇಕಾದ ಪ್ರಾರ್ಥನೆ ಮತ್ತು ಅನುಸಂಧಾನಗಳೇನು ಎನ್ನುವದನ್ನು ಚಂದ್ರಿಕಾಚಾರ್ಯರು ಮುಂತಾದ ಮಹಾನುಭಾವರು ತಿಳಿಸಿರುವ ಪ್ರಮೇಯಗಳ ವಿವರಣೆ ಇಲ್ಲಿದೆ.
2018 ವಿಲಂಬಿ ಸಂವತ್ಸರದ ಪಂಚಾಂಗಶ್ರವಣ
ಸಮಸ್ತ ವಿಶ್ವನಂದಿನಿಯ ಬಾಂಧವರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು. ಶ್ರೀಹರಿ ವಾಯು ದೇವತಾ ಗುರುಗಳು ನಿಮಗೆಲ್ಲರಿಗೂ ಸಂಪೂರ್ಣ ಆಯುಷ್ಯ, ಉತ್ತಮ ಆರೋಗ್ಯ, ಸಾತ್ವಿಕ ಸಂಪತ್ತು, ಪರಿಶುದ್ಧ ಜ್ಞಾನ, ಪ್ರಾಮಾಣಿಕ ವೈರಾಗ್ಯ, ಪರಿಪೂರ್ಣ ಭಕ್ತಿಯನ್ನು ಕರುಣಿಸಿ ಸದಾ ಮಧ್ವಶಾಸ್ತ್ರಾಸಕ್ತರನ್ನಾಗಿ ಮಾಡಲಿ ಎಂದು ಹಾರೈಸುತ್ತೇನೆ. Watch the original video on YouTube. https://www.youtube.com/watch?v=76MAyDJqVDk
ಶ್ರೀಮದ್ ಭಾಗವತಮ್ — 122 — ದೇವರ ಗುಣಗಳು - 02
ದೇವರಲ್ಲಿ ಯಾವ ಕಾರಣಕ್ಕೆ ದುಃಖವಿಲ್ಲ, ಜೀವರಿಗೆ ಯಾಕಾಗಿ ದುಃಖ ಉಂಟಾಗುತ್ತದೆ, ಆ ದುಃಖವನ್ನು ಕಳೆದುಕೊಳ್ಳಲು ಮಾಡಬೇಕಾದ ಉಪಾಸನೆ ಏನು ಎಂಬ ಪ್ರಶ್ನೆಗೆ ಉತ್ತರ ನೀಡುವ ಮಹತ್ತ್ವದ ಪ್ರಮೇಯದ ವಿವರಣೆ, ದೇವರ ಮನಸ್ಸು, ಮಾತು, ಕೃತಿಗಳು ಎಂದಿಗೂ ಏಕಪ್ರಕಾರವಾದದ್ದು, ದೇವರ ರೂಪಗಳಲ್ಲಿ ಸರ್ವಥಾ ಭೇದವಿಲ್ಲ, ದೇವರ ಯಾವ ಗುಣವನ್ನು ಉಪಾಸಿಸುವದರಿಂದ ನಮಗೆ ಇಂದ್ರಿಯನಿಗ್ರಹ ದೊರೆಯುತ್ತದೆ ಮುಂತಾದ ವಿಷಯಗಳ ನಿರೂಪಣೆ ಇಂದಿನ ಉಪನ್ಯಾಸದಲ್ಲಿ.
ಶ್ರೀಮದ್ ಭಾಗವತಮ್ — 121 — ದೇವರ ಗುಣಗಳು-01
ಭಗವಂತನಲ್ಲಿರುವ ಯಾವ ಗುಣಗಳ ಜ್ಞಾನ ಸ್ಮರಣೆ ಉಪಾಸನೆಗಳಿಂದ ಜೀವ ಆ ಗುಣಗಳ ಪ್ರತಿಫಲನವನ್ನು ತನ್ನಲ್ಲಿ ಪಡೆಯುತ್ತಾನೆಯೋ ಅಂತಹ ಶ್ರೇಷ್ಠ ಗುಣಗಳ ಚಿಂತನೆಯೊಂದಿಗೆ ಭೂದೇವಿ ಧರ್ಮಪುರುಷನ ಪ್ರಶ್ನೆಗೆ ಉತ್ತರಗಳನ್ನು ನೀಡುತ್ತಾರೆ. ಈ ಸಂದರ್ಭದಲ್ಲಿ ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ಬಿಂಬಗುಣ-ಪ್ರತಿಬಿಂಬಗುಣಗಳ ಕುರಿತು ಅದ್ಭುತವಾಗಿ ತಿಳಿಸಿ ಹೇಳುತ್ತಾರೆ. ಅವರ ಪವಿತ್ರ ವಚನಗಳ ಅರ್ಥಾನುಸಂಧಾನ ಇಲ್ಲಿದೆ. ದಾನದ ಕುರಿತ ಮಹತ್ತ್ವದ ಪ್ರಮೇಯಗಳ ವಿವರಣೆಯೊಂದಿಗೆ.
ಶ್ರೀಮದ್ ಭಾಗವತಮ್ — 120 — ಧರ್ಮಪುರುಷನ ಪ್ರಶ್ನೆಗಳು
ಕಲಿಯನ್ನು ನಿಗ್ರಹ ಮಾಡಲು ಹೊರಟ ಪರೀಕ್ಷಿದ್ರಾಜರು ಹೋದೆಡೆಯಲ್ಲ ತಮ್ಮ ತಾತಂದಿರ ಗುಣಗಳನ್ನು, ಶ್ರೀಕೃಷ್ಣನ ಮಾಹಾತ್ಮ್ಯವನ್ನು, ಅವರ ಸಖ್ಯವನ್ನು ಕೇಳಿ ಆನಂದಿಸುತ್ತಾರೆ. ಹೀಗೆ ಸಂಚಾರ ಮಾಡುವ ಸಂದರ್ಭದಲ್ಲಿ, ಕಾಲದ ಪರಿಣಾಮದಿಂದ ಮೂರು ಕಾಲು ಕುಂಟಾಗಿ ಒಂದು ಕಾಲಿನ ಮೇಲೆ ಎಲ್ಲ ದೇಹದ ಭಾರ ಹಾಕಿ ಎತ್ತಿನ ರೂಪದಲ್ಲಿರುವ ಧರ್ಮಪುರುಷನನ್ನು, ಗೋವಿನ ರೂಪದಲ್ಲಿ ದುಃಖಿತರಾಗಿ ನಿಂತಿರುವ ಭೂದೇವಿಯನ್ನು ಕಾಣುತ್ತಾರೆ. ಮಹಾಲಕ್ಷ್ಮಿಯ ಸ್ವರೂಪರಾದ ಭೂದೇವಿ ಬೇರೆ, ಭೂಮಿಗೆ ಅಭಿಮಾನಿಯಾದ ಭೂದೇವಿ ಬೇರೆ ಎಂಬ ತತ್ವವನ್ನು ನಿರೂಪಿಸಿ, ಆ ಭೂದೇವಿಗೆ ಧರ್ಮಪುರುಷ ಮಾಡುವ ಪ್ರಶ್ನೆಗಳನ್ನು ಇಲ್ಲಿ ವಿವರಿಸಲಾಗಿದೆ.
ಶ್ರೀಮದ್ ಭಾಗವತಮ್ — 119 — ಹ್ಯಾಂಗೆ ಮಾಡಲಯ್ಯ ಕೃಷ್ಣ ಪೋಗುತಿದೆ ಆಯುಷ್ಯ
“ಪರೀಕ್ಷಿದ್ರಾಜರು ಕಲಿಯನ್ನು ನಿಗ್ರಹಿಸಿದ ಘಟನೆಯನ್ನು ವಿವರಿಸಿ” ಎಂದು ಪ್ರಾರ್ಥಿಸುವ ಶೌನಕರು, ಈ ಘಟನೆಯಲ್ಲಿ ಶ್ರೀಹರಿಯ ಭಾಗವತೋತ್ತಮರ ಮಾಹಾತ್ಮ್ಯವಿದ್ದರೆ ಮಾತ್ರ ತಿಳಿಸಿ ಎಂದು ಸೂತಾಚಾರ್ಯರನ್ನು ಕೇಳಿಕೊಳ್ಳುತ್ತಾರೆ. ಈ ಮುಖಾಂತರ ದೇವರ, ಭಾಗವತೋತ್ತಮರ ಪ್ರಸಂಗವಿಲ್ಲದೇ ಅಸಜ್ಜನರ ವಿಷಯವನ್ನು ಸರ್ವಥಾ ಕೇಳತಕ್ಕದ್ದಲ್ಲ ಎಂಬ ಪಾಠವನ್ನು ನಮಗೆ ಕಲಿಸುತ್ತಾರೆ.
ಶ್ರೀಮದ್ ಭಾಗವತಮ್ — 118 — ಪಾಂಡವರ ಮಹಾಪ್ರಸ್ಥಾನ
ಶ್ರೀಕೃಷ್ಣ ತೊರೆದ ಭೂಮಿ ನಮ್ಮಿಂದ ರಕ್ಷಣೀಯವೂ ಅಲ್ಲ, ಅನುಭವಿಸಲಕ್ಕೂ ಅರ್ಹವಲ್ಲ ಎಂದು ನಿರ್ಣಯಿಸಿದ ಪಾಂಡವರು, ತಮ್ಮ ಮೊಮ್ಮಗ ಪರೀಕ್ಷಿದ್ರಾಜರನ್ನು ಸಿಂಹಾಸನದ ಮೇಲೆ ಕೂಡಿಸಿ ಪಟ್ಟಾಭಿಷೇಕ ಮಾಡಿ, ಹಿರಿಯರಿಗೆ ಶ್ರಾದ್ಧಾದಿಗಳನ್ನು ಮಾಡಿ, ರಾಜಚಿಹ್ನೆಗಳನ್ನು ತ್ಯಾಗ ಮಾಡಿ ಲಯಚಿಂತನೆಯನ್ನು ಮಾಡಿ, ಅದ್ಭುತ ಯೋಗ ಸಾಮರ್ಥ್ಯದಿಂದ ಸಮಗ್ರ ಏಳು ಸಮುದ್ರಗಳಿಗೆ ಪ್ರದಕ್ಷಿಣೆಯನ್ನು ಮಾಡಿ ದೇಹತ್ಯಾಗ ಮಾಡಿದ ಘಟನೆಗಳ ವಿವರಣೆ ಇಲ್ಲಿದೆ. ನಾಯಿಯ ಘಟನೆ ಸೂಚಿಸುವ ಆಧ್ಯಾತ್ಮಿಕ ಅರ್ಥದ ಚಿಂತನೆಯೊಂದಿಗೆ.
ರುದ್ರ ರಥದ ವೈಭವ
ಸೂರ್ಯ ಚಂದ್ರರನ್ನು ಚಕ್ರಗಳನ್ನಾಗಿ, ವೇದಗಳನ್ನೇ ಅಶ್ವಗಳನ್ನಾಗಿ, ಬ್ರಹ್ಮದೇವರನ್ನೇ ಸಾರಥಿಯನ್ನಾಗಿ ಉಳ್ಳ ರುದ್ರರಥದ ವೈಭವದ ಚಿತ್ರಣ ಇಲ್ಲಿದೆ.
ಶ್ರೀಮದ್ ಭಾಗವತಮ್ — 117 — ಜ್ಞಾನಿಗಳಿಗೂ ಏಕೆ ಮೋಹವುಂಟಾಗುತ್ತದೆ
ಧೃತರಾಷ್ಟ್ರ, ಧರ್ಮರಾಜ, ಅರ್ಜುನ ಮುಂತಾದವರು ದೇವರ ಸಾಕ್ಷಾತ್ಕಾರವನ್ನು ಪಡೆದ ಮಹಾ ದೇವತೆಗಳು. ಇವರಿಗೂ ಸಹ ಯಾವ ಕಾರಣಕ್ಕೆ ಮೋಹ, ಶೋಕಗಳುಂಟಾಗುತ್ತದೆ, ಉಂಟಾದಾಗ ಅವರು ಕಳೆದುಕೊಳ್ಳುವ ಬಗೆ ಹೇಗೆ ಎನ್ನುವ ಪ್ರಶ್ನೆಗಳಿಗೆ ಆಚಾರ್ಯರು ಭಾಗವತತಾತ್ಪರ್ಯದಲ್ಲಿ ನೀಡಿರುವ ಉತ್ತರಗಳ ಅರ್ಥಾನುಸಂಧಾನ ಇಲ್ಲಿದೆ.
ಶ್ರೀಮದ್ ಭಾಗವತಮ್ — 116 — ದೇವರ ವಿರಹವೆಂಬ ಅಗ್ನಿ
ಶ್ರೀಕೃಷ್ಣ ಪರಂಧಾಮಪ್ರವೇಶ ಮಾಡಿದ ಬಳಿಕ ಅರ್ಜುನ ಅನುಭವಿಸಿದ ದುಃಖವನ್ನು ಮನಕಲಕುವಂತೆ ವೇದವ್ಯಾಸದೇವರು ಚಿತ್ರಿಸಿದ್ದಾರೆ. ಈ ಘಟನೆಯ ಆಧ್ಯಾತ್ಮಿಕ ಅರ್ಥದ ವಿಶ್ಲೇಷಣೆಯೊಂದಿಗೆ ಇಲ್ಲಿ ಅದರ ವಿವರಣೆಯಿದೆ.
ಶ್ರೀಮದ್ ಭಾಗವತಮ್ — 115 — ಅಪಶಕುನಗಳು
ಶ್ರೀಕೃಷ್ಣ ಪರಂಧಾಮನವನ್ನು ಪ್ರವೇಶ ಮಾಡುವ ಮುನ್ನ ದಾರುಕನನ್ನು ಹಸ್ತಿನಾವತಿಗೆ ಕಳುಹಿಸುತ್ತಾನೆ, ಅರ್ಜುನ ಬರಬೇಕೆಂದು ತಿಳಿಸಿರುತ್ತಾನೆ. ವೇಗದಿಂದ ಅರ್ಜುನ ಅಲ್ಲಿಗೆ ಹೊರಟ ತಕ್ಷಣ ಧರ್ಮರಾಜನಿಗೆ ಹತ್ತಾರು ರೀತಿಯ ಅಪಶಕುನಗಳು ಕಾಣಲು ಆರಂಭಿಸುತ್ತವೆ. ಅವುಗಳ ಕುರಿತ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 114 — ಧೃತರಾಷ್ಟ್ರನ ನಿರ್ಯಾಣ
ಧೃತರಾಷ್ಟ್ರ ತನ್ನ ಯೋಗಾಗ್ನಿಯಿಂದ ದೇಹತ್ಯಾಗ ಮಾಡಿದ ಸುದ್ದಿಯನ್ನು ಧರ್ಮರಾಜ ಸಂಜಯನಿಂದ ಕೇಳುತ್ತಾನೆ. ಆಗ ಆಗಮಿಸುವ ನಾರದರು, ಸಾವಿನ ಕುರಿತು ಮನುಷ್ಯರಿಗಿರಬೇಕಾದ ಎಚ್ಚರಗಳನ್ನು ತಿಳಿಸಿ ಹೇಳಿ ಧೃತರಾಷ್ಟ್ರ ದೇಹತ್ಯಾಗ ಮಾಡಿದ ರೀತಿ ಮತ್ತು ಅವನ ಪರಲೋಕದ ವಾಸದ ಕುರಿತು ಅದ್ಭುತವಾಗಿ ತಿಳಿಸಿ ಹೇಳುತ್ತಾರೆ. ಆ ಮಾತುಗಳ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 113 — ಪುರಾಣಗಳಲ್ಲೇಕೆ ವಿರುದ್ಧ ವಚನಗಳು
ಧೃತರಾಷ್ಟ್ರ ಧರ್ಮರಾಜನ ಅನುಮತಿಯನ್ನು ಪಡೆದು ವನಕ್ಕೆ ತೆರಳಿದ ಎಂದು ಮಹಾಭಾರತ ತಿಳಿಸಿದರೆ, ಪಾಂಡವರಿಗೆ ತಿಳಿಯದಂತೆ ಧೃತರಾಷ್ಟ್ರ ವನಕ್ಕೆ ತೆರಳಿದ ಎಂದು ಭಾಗವತ ಹೇಳುತ್ತದೆ. ಎರಡೂ ಸತ್ಯವಾಗಿರಲು ಸಾಧ್ಯವಿಲ್ಲ. ಪುರಾಣಗಳಲ್ಲಿ ಹೀಗೆ ಪರಸ್ಪರವಿರುದ್ಧವಾಗಿ ಏಕೆ ಕಥೆಗಳನ್ನು ನಿರೂಪಣೆ ಮಾಡುತ್ತಾರೆ ಎಂಬ ಪ್ರಶ್ನೆಗೆ ಆಚಾರ್ಯರು ನೀಡಿದ ಉತ್ತರದ ನಿರೂಪಣೆಯೊಂದಿಗೆ ಎರಡೂ ಗ್ರಂಥಗಳನ್ನು ಅರ್ಥ ಮಾಡಿಕೊಳ್ಳುವ ಕ್ರಮವನ್ನು ಇಲ್ಲಿ ವಿವರಿಸಲಾಗಿದೆ. ಋಷಿಗಳು ಕಾಮುಕರು, ಕುಂತಿ ಮುಂತಾದವರು ವ್ಯಭಿಚಾರಿಣಿಯರು ಎಂಬ ಇಂದಿನ ಜನರ ಆಕ್ಷೇಪಗಳಿಗೆ ಇಲ್ಲಿ ಉತ್ತರಗಳಿವೆ, ತಪ್ಪದೇ ಕೇಳಿ. ನಿಮ್ಮ ಮಕ್ಕಳಿಗೂ ಕೇಳಿಸಿ.
ಶ್ರೀಮದ್ ಭಾಗವತಮ್ — 112 — ವನಕ್ಕೆ ತೆರಳಿದ ಧೃತರಾಷ್ಟ್ರ
ನಮ್ಮವರೊಬ್ಬರು ಸಾಧನೆಯನ್ನು ಮಾಡುತ್ತಿರುವಾಗ ನಾವವರನ್ನು ತಡೆಯಬಾರದು, ಅಷ್ಟೇ ಅಲ್ಲ, ಎಷ್ಟು ರೀತಿಯಲ್ಲಿ ಸಾಧ್ಯವೋ ಅಷ್ಟು ರೀತಿಯಲ್ಲಿ ಅವರ ಸಾಧನೆಗೆ ಹೆಗಲಾಗಿ ನಿಲ್ಲಬೇಕು ಎನ್ನುವದನ್ನು ವಿದುರ, ಧರ್ಮರಾಜ, ಕುಂತಿಯರ ಚರ್ಯೆಯಿಂದ ಭಾಗವತ ತಿಳಿಸುತ್ತದೆ. ತಾನು ಮಾಡಿದ ಸಕಲ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ಕಟ್ಟ ಕಡೆಯ ವಯಸ್ಸಿನಲ್ಲಿ ಧೃತರಾಷ್ಟ್ರ ತಪಸ್ಸಿಗೆ ತೆರಳಿದ ವಿವರ ಇಂದಿನ ಉಪನ್ಯಾಸದಲ್ಲಿ.
ಶ್ರೀಮದ್ ಭಾಗವತಮ್ — 111 — ಧೃತರಾಷ್ಟ್ರನ ವೈರಾಗ್ಯ
ವನಪ್ರಸ್ಥನಾಗಿ ತಪಸ್ಸನ್ನು ಮಾಡಿ, ಮಾಡಿದ ಪಾಪಗಳನ್ನು ಕಳೆದುಕೊಳ್ಳಬೇಕಾಗಿದ್ದ ಧೃತರಾಷ್ಟ್ರ ವಿಷಯಾಸಕ್ತನಾಗಿಯೇ ಉಳಿದಿರುತ್ತಾನೆ. ಅವನಲ್ಲಿ ಭೀಮಸೇನದೇವರು ವೈರಾಗ್ಯ ಮೂಡಿಸಿದ ಪ್ರಸಂಗವನ್ನು, ಆ ವೈರಾಗ್ಯವನ್ನು ವಿದುರರು ಧೃಢತರವನ್ನಾಗಿ ಮಾಡಿದ ಸಂದರ್ಭವನ್ನಿಲ್ಲಿ ಕೇಳುತ್ತೇವೆ. ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು ಹೇಳಿಕೊಟ್ಟು ಒಂದು ದಿವ್ಯ ಪ್ರಾರ್ಥನೆಯ ಅರ್ಥಾನುಸಂಧಾನದೊಂದಿಗೆ.
ಕೆಟ್ಟ ಸುದ್ದಿಯನ್ನು ಹೇಳುವ ಮುನ್ನ
ನಮ್ಮ ಜೀವನದಲ್ಲಿ ಅನೇಕ ಬಾರಿ ಕೆಟ್ಟ ಸುದ್ದಿಯನ್ನು ಹೇಳುವ ಪ್ರಸಂಗ ಒದಗುತ್ತದೆ. ಆದರೆ, ಕೆಟ್ಟ ಸುದ್ದಿಯನ್ನು ಹೇಳುವ ಮುನ್ನು ಯಾವೆಲ್ಲ ಎಚ್ಚರಗಳಿರಬೇಕು ಎನ್ನುವದನ್ನು ನಾವಿಲ್ಲಿ ತಿಳಿಯುತ್ತೇವೆ. “ಮತ್ತೆ ಮದುವೆ ಮುಂಜಿ ಸಮಯಕ್ಕೆ ನಾ ಪೋಗಿ ಸತ್ತ ಸುದ್ದಿಯ ಪೇಳಿದೆ” ಎಂಬ ಶ್ರೀ ಜಗನ್ನಾಥದಾಸಾರ್ಯರ ವಚನದ ಚಿಂತನೆಯೊಂದಿಗೆ. ಜಾತಕದ ಸಮಸ್ಯೆಗಳನ್ನು ಹೇಳುವ ಮುನ್ನ ಜ್ಯೋತಿಷಿಗಳಿಗೆ ಯಾವ ಎಚ್ಚರ ಇರಬೇಕು ಎಂಬ ವಿವರಣೆಯೊಂದಿಗೆ.
ಶ್ರೀಮದ್ ಭಾಗವತಮ್ — 110 — ವಿದುರರ ತೀರ್ಥಯಾತ್ರೆ
ವಿದುರರು ತೀರ್ಥಯಾತ್ರೆ ಮಾಡಿಕೊಂಡು ಬಂದು ಧರ್ಮರಾಜನ ಬಳಿಯಲ್ಲಿ ಮಾತನಾಡುವಾಗ, ಧರ್ಮರಾಜನಿಗೆ ನೋವುಂಟಾಗುತ್ತದೆ ಎಂಬ ಕಾರಣಕ್ಕೆ ಯದುಕುಲವಿನಾಶದ ಬಗ್ಗೆ ಹೇಳಲಿಲ್ಲ ಎಂಬ ಮಾತನ್ನು ಭಾಗವತದಲ್ಲಿ ಕೇಳುತ್ತೇವೆ. ಆದರೆ, ಯದುಕುಲವಿನಾಶವಾಗುವದಿಕ್ಕಂತಲೂ 21 ವರ್ಷಗಳ ಮುಂಚೆಯೇ ವಿದುರರ ದೇಹತ್ಯಾಗವಾಗಿರುತ್ತದೆ. ಅಂದ ಮೇಲೆ ಈ ಭಾಗವತದ ಮಾತನ್ನು ಹೇಗೆ ಒಪ್ಪುವದು ಎಂಬ ಪ್ರಶ್ನೆಗೆ ಆಚಾರ್ಯರು ಪದ್ಮಪುರಾಣದ ವಚನದಿಂದ ನಮಗೆ ಉತ್ತರವನ್ನು ನೀಡುತ್ತಾರೆ. ಆಚಾರ್ಯರ ವಚನದಲ್ಲಿಯೂ ಸಹ ಬನ್ನಂಜೆ ಒಂದು ಕಡೆಗೆ ಗೊಂದಲವನ್ನುಂಟು ಮಾಡಿದ್ದಾರೆ. ಈ ವಿಷಯಗಳ ಚರ್ಚೆ ಇಂದಿನ ಉಪನ್ಯಾಸದಲ್ಲಿ.
ಬಂಧುಗಳೇ ಶತ್ರುಗಳಾದಾಗ
ಅನೇಕ ಬಾರಿ ನಾವು ಪ್ರೀತಿಸುವ, ಗೌರವಿಸುವ ಜನರೇ ನಮ್ಮನ್ನು ನಿಕೃಷ್ಟವಾಗಿ ಕಾಣುತ್ತಾರೆ. ತಂದೆ ತಾಯಿಯರು ಎಷ್ಟೇ ಪ್ರೀತಿ ತೋರಿದರೂ ಮಕ್ಕಳು ತಿರಸ್ಕರಿಸುತ್ತಾರೆ. ಮಕ್ಕಳು ಎಷ್ಟೈ ಗೌರವ ತೋರಿದರೂ ತಂದೆ ತಾಯಿಗಳು ಅವಜ್ಞೆ ಮಾಡುತ್ತಾರೆ. ನಾವು ಭಾಗವತರು, ಪರಮಾತ್ಮನಿಗೆ ಪ್ರಿಯರು, ಎಂದು ಕರೆಸಿಕೊಳ್ಳಬೇಕಾದರೆ ಇಂತಹ ಸಂದರ್ಭಗಳಲ್ಲಿ ನಮ್ಮ ವ್ಯವಹಾರ ಹೇಗಿರಬೇಕು ಎನ್ನುವದನ್ನು ವಿವರಿಸುವ ಭಾಗ. ತಪ್ಪದೇ ಕೇಳಿ.
ಶ್ರೀಮದ್ ಭಾಗವತಮ್ — 109 — ವಿದುರ ಧರ್ಮರಾಜ ಸಂವಾದ
ಕುರುಕ್ಷೇತ್ರ ಯುದ್ಧ ಮುಗಿದು ದೇಹತ್ಯಾಗ ಮಾಡುವವರೆಗಿನ ಹದಿನೈದು ವರ್ಷಗಳ ಅವಧಿಯಲ್ಲಿ ವಿದುರರು ಬಹುತೇಕ ತೀರ್ಥಯಾತ್ರೆಯಲ್ಲಿಯೇ ಕಾಲವನ್ನು ಕಳೆಯುತ್ತಿರುತ್ತಾರೆ. ಆಗಾಗ ಹಸ್ತಿನಾವತಿಗೂ ಬರುತ್ತಿರುತ್ತಾರೆ. ಆ ರೀತಿಯಾಗಿ ಒಂದು ಸಂದರ್ಭದಲ್ಲಿ ಬಂದಾಗ ನಡೆದ ವಿದುರರಿಗೂ ಧರ್ಮರಾಜರಿಗೂ ನಡೆದ ಸಂವಾದವನ್ನು ಭಾಗವತ ದಾಖಲಿಸುತ್ತದೆ. ಅದರ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 108 — ಪರೀಕ್ಷಿತರ ಜನ್ಮ
108Kಶ್ರೀಮದ್ ಭಾಗವತ ನಮಗೆಲ್ಲ ದೊರೆಯಲು ಕಾರಣಕರ್ತರಾದ, ಮಹಾ ಭಾಗವತೋತ್ತಮರಾದ ಶ್ರೀ ಪರೀಕ್ಷಿದ್ರಾಜರ ಜನ್ಮವಾದ ಪರಮಪಾವನ ಕಥೆಯ — ಶ್ರೀಕೃಷ್ಣನ ಕಾರುಣ್ಯದ — ಚಿತ್ರಣ ಇಲ್ಲಿದೆ. ಪರೀಕ್ಷಿದ್ರಾಜರ ಜಾತಕವನ್ನು ಕಂಡು ಅಂದಿನ ಬ್ರಾಹ್ಮಣೋತ್ತಮರು ತಿಳಿಸಿದ ಅವರ ಮಾಹಾತ್ಮ್ಯದ ಚಿತ್ರಣದೊಂದಿಗೆ. ಆಚಾರ್ಯರ ಅಪೂರ್ವ ನಿರ್ಣಯಗಳ ಸಮೇತವಾಗಿ.
ಶ್ರೀಮದ್ ಭಾಗವತಮ್ — 107 — ಶ್ರೀಕೃಷ್ಣ ಸ್ತ್ರೀಲೋಲುಪನಲ್ಲ
ದ್ವಾರಕೆಗೆ ಬಂದ ಶ್ರೀಕೃಷ್ಣ, ತನ್ನ ಮಡದಿಯರನ್ನು ಕಂಡು ಅವರನ್ನು ಅನುಗ್ರಹಿಸಿದ ಪರಿಯನ್ನು ವರ್ಣನೆ ಮಾಡತ್ತ, ಶ್ರೀಮದ್ಭಾಗವತ, ಶ್ರೀಕೃಷ್ಣ ಸ್ತ್ರೀಲೋಲುಪನೇ ಎಂಬ ಪ್ರಶ್ನೆಯನ್ನು ಕೈಗೆತ್ತೆಕೊಂಡು ಅದ್ಬುತವಾದ ಉತ್ತರಗಳನ್ನು ನೀಡುತ್ತದೆ. ಆ ಮಾತುಗಳ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 106 — ದ್ವಾರಕೆಗೆ ಬಂದ ಶ್ರೀಕೃಷ್ಣ
ಶ್ರೀಕೃಷ್ಣಪರಮಾತ್ಮ ದ್ವಾರಕೆಗೆ ಬಂದಾಗ ಅಲ್ಲಿನ ಜನ ತಮ್ಮ ಒಡೆಯನನ್ನು ಸ್ವಾಗತಿಸಿದ ರೀತಿ, ಸ್ತೋತ್ರ ಮಾಡಿದ ಬಗೆ, ದೇವರ ಬಗೆಗೆ ಅವರಿಗಿದ್ದ ಪ್ರೀತಿ, ದೇವರಿಗೆ ಅವರ ಬಗ್ಗೆ ಇದ್ದ ಪ್ರೇಮ ಎಲ್ಲವನ್ನೂ ಸಹ ಸೂತಾಚಾರ್ಯರು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. ಆ ಭಾಗದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 105 — ಸ್ತ್ರೀಗೀತ
ಶ್ರೀಕೃಷ್ಣ ಹಸ್ತಿನಾವತಿಯಿಂದ ಹೊರಟು ನಿಂತಾಗ, ತಮ್ಮತಮ್ಮ ಮನೆಗಳ ಪ್ರಾಸಾದಗಳ ಮೇಲೆ ನಿಂತ ಸ್ತ್ರೀಯರು ಮಾಡಿದ ಶ್ರೀಕೃಷ್ಣಸ್ತೋತ್ರದ ಅರ್ಥಾನುಸಂಧಾನ ಇಲ್ಲಿದೆ. ದೇವರನ್ನು ಯಾವ ರೀತಿ ಸ್ಮರಣೆ ಮಾಡಬೇಕು ಎಂದು ಕಲಿಸುವ ಪರಮಪವಿತ್ರ ಸ್ತೋತ್ರವಿದು.
ಶ್ರೀಮದ್ ಭಾಗವತಮ್ — 104 — ಶ್ರೀಕೃಷ್ಣನ ವಿರಹ
ಯುಧಿಷ್ಠಿರನನ್ನು ರಾಜ್ಯದಲ್ಲಿ ಕೂಡಿಸಿದ ಶ್ರೀಕೃಷ್ಣ, ಪಾಂಡವರ ಸುಭದ್ರೆ ಮುಂತಾದವರ ಪ್ರಾರ್ಥನೆಯಂತೆ ಅನೇಕ ತಿಂಗಳುಗಳ ಕಾಲ ಹಸ್ತಿನಾವತಿಯಲ್ಲಿಯೇ ಉಳಿಯುತ್ತಾನೆ. ಆ ನಂತರ, ಎಲ್ಲರನ್ನೂ ಒಪ್ಪಿಸಿ ಶ್ರೀಕೃಷ್ಣ ದ್ವಾರಕೆಗೆ ಹೊರಟು ನಿಂತಾಗ ಆ ಎಲ್ಲ ಸಜ್ಜನೋತ್ತಮರು ಒಲ್ಲದ ಮನಸ್ಸಿನಿಂದ ಶ್ರೀಕೃಷ್ಣನನ್ನು ಬೀಳ್ಕೊಡುವ ಪ್ರಸಂಗದ ವಿವರಣೆ ಇಲ್ಲಿದೆ. ಅನಂತ ರೂಪದ ಶ್ರೀಹರಿಯಲ್ಲಿ ಸವಿಶೇಷಾಭೇದವಿದೆ ಎಂಬ ಪ್ರಮೇಯದ ಚಿಂತನೆಯೊಂದಿಗೆ.
ಶ್ರೀಮದ್ ಭಾಗವತಮ್ — 103 — ಧರ್ಮರಾಜರ ಧರ್ಮರಾಜ್ಯ
“ದುರ್ಯೋಧನನೂ ಉತ್ತಮ ಪ್ರಜಾಪಾಲಕನಾಗಿದ್ದ” ಎಂಬ ಬನ್ನಂಜೆ ಮುಂತಾದ ಆಧುನಿಕರ ಮಾತಿಗೆ ಭಾಗವತ ನೀಡುವ ಉತ್ತರದ ವಿವರಣೆ, ಧರ್ಮರಾಜನ ಅದ್ಭುತ ಧರ್ಮನಿಷ್ಠೆ, ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ತಿಳಿಸಿರುವ ಅಪೂರ್ವ ವಿಷಯಗಳೊಂದಿಗೆ ಧರ್ಮರಾಜರ ಪರಮಾದ್ಭುತವಾದ ಧರ್ಮರಾಜ್ಯದ ವರ್ಣನೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 102 — ಭೀಷ್ಮಸ್ತೋತ್ರ 02
ಕುರುಕ್ಷೇತ್ರದ ಯುದ್ಧದಲ್ಲಿ ನಾನು ಆಯುಧವನ್ನು ಹಿಡಿಯುವದಿಲ್ಲ ಎಂದು ಶ್ರೀಕೃಷ್ಣ ತಿಳಿಸಿರುತ್ತಾನೆ. ಆದರೆ, ಕೃಷ್ಣನ ಕೈಯಲ್ಲಿ ಆಯುಧವನ್ನು ನಾನು ಹಿಡಿಸಿಯೇ ಹಿಡಿಸುತ್ತೇನೆ ಎಂದು ಭೀಷ್ಮಾಚಾರ್ಯರು ಪ್ರತಿಜ್ಞೆ ಮಾಡಿರುತ್ತಾರೆ. ತನ್ನ ಭಕ್ತನ ಪ್ರತಿಜ್ಞೆಯನ್ನು ಪೂರ್ಣ ಮಾಡಲೋಸುಗ ಶ್ರೀಕೃಷ್ಣ, ಮೃದುವಾಗಿ ಯುದ್ಧ ಮಾಡುತ್ತಿದ್ದ ಅರ್ಜುನನನ್ನು ಎಚ್ಚರಿಸಲು, ಒಮ್ಮೆ ಚಕ್ರವನ್ನು ಹಿಡಿದು ಭೀಷ್ಮರನ್ನು ಕೊಲ್ಲ ಹೋಗುತ್ತಾನೆ. ಆ ಪ್ರಸಂಗವನ್ನು ನೆನೆಯುತ್ತ ಭೀಷ್ಮಾಚಾರ್ಯರು ದೇವರ ಕಾರುಣ್ಯ ಮಾಹಾತ್ಮ್ಯಗಳನ್ನ ಚಿಂತಿಸುತ್ತಾರೆ. ಮಹಾಭಾರತದ ವಚನಗಳ ಉಲ್ಲೇಖದೊಂದಿಗೆ ಆ ಪ್ರಸಂಗವನ್ನು ನಿರೂಪಿಸಿ, ದೇವರನ್ನು ಕಾಣುತ್ತಲೇ ಭೀಷ್ಮರು ದೇಹತ್ಯಾಗ ಮಾಡುವ ಸಂದರ್ಭದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 101 — ಭೀಷ್ಮಸ್ತೋತ್ರ 01
ತಮ್ಮೆದುರಿಗೆ ಬಂದು ನಿಂತಿರುವ ಶ್ರೀಕೃಷ್ಣನೇ ಸರ್ವರಂತರ್ಯಾಮಿಯಾದ ಸರ್ವನಿಯಾಮಕನಾದ ಸರ್ವಸ್ರಷ್ಟಾರನಾದ ಪರಮಾತ್ಮ ಎಂದು ಧರ್ಮರಾಜರಿಗೆ ತಿಳಿಸಿ ಹೇಳಿ, ಎಲ್ಲ ಧರ್ಮಗಳ ಉಪದೇಶವನ್ನು ಮಾಡಿ ಕಡೆಯ ಕಾಲ ಬಂದಾಗ ಶ್ರೀಕೃಷ್ಣನ ಸ್ತೋತ್ರವನ್ನು ಮಾಡುತ್ತಾರೆ. ಅನುರಾಗ ತುಂಬಿದ ನೋಟದಿಂದ ಶ್ರೀಕೃಷ್ಣ ಅವರನ್ನು ಕಂಡಾಗ ಅವರ ದೇಹದ ಎಲ್ಲ ನೋವೂ ಸಹ ಮರೆಯಾಗುತ್ತದೆ. ಆಗ ಭೀಷ್ಮಾಚಾರ್ಯರು ಮಾಡಿದ ಅಪೂರ್ವಸ್ತೋತ್ರದ — ಯಾವ ಸ್ತೋತ್ರದ ಪಠಣ-ಚಿಂತನಗಳಿಂದ ಅಂತ್ಯಕಾಲದಲ್ಲಿ ನಮಗೆ ದೇವರ ಸ್ಮರಣೆ ಒದಗಿ ಬರುತ್ತದೆಯೋ ಅಂತಹ ಸ್ತೋತ್ರದ — ಅರ್ಥಾನುಸಂಧಾನದ ಮೊದಲ ಭಾಗ ಇಲ್ಲಿದೆ.
ಶ್ರೀಮದ್ ಭಾಗವತಮ್ — 100 — ಭೀಷ್ಮರ ಉಪದೇಶ
ಯುದ್ದವನ್ನು ಮಾಡಿ ಪ್ರಜಾದ್ರೋಹವನ್ನು ಮಾಡಿದ್ದೇನೆ ಎಂದು ಸಂಶಯಕ್ಕೀಡಾದ ಧರ್ಮರಾಜರು, ಶ್ರೀಕೃಷ್ಣನ ಮಾತಿನಂತೆ, ತಾನು ಮಾಡಿದ್ದು ತಪ್ಪೋ ಸರಿಯೋ ಎಂದು ತಿಳಿಯಲು, ಯುದ್ಧಭೂಮಿಯಲ್ಲಿ ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮಾಚಾರ್ಯರ ಬಳಿಗೆ ಬರುತ್ತಾರೆ. ಭೀಷ್ಮಾಚಾರ್ಯರ ಮುಖದಿಂದ ಹೊರಹೊಮ್ಮಿ ಬರಲಿರುವ ಧರ್ಮಸುಧೆಯನ್ನು ಪಾನ ಮಾಡಲು ಸಕಲ ಋಷಿಗಳೂ ಆಗಮಿಸುತ್ತಾರೆ. ಧರ್ಮರಾಜ ಮಾತನ್ನಾರಂಭಿಸುವ ಮೊದಲೇ ಅವನ ಮನಸ್ಸಿನಲ್ಲಿದ್ದ ಪ್ರಶ್ನೆಗೆ ಉತ್ತರವನ್ನಿತ್ತುಬಿಡುತ್ತಾರೆ ಭೀಷ್ಮಾಚಾರ್ಯರು. ಅವರ ಮಾತಿನ ಅನುವಾದ ಇಲ್ಲಿದೆ.
ಶ್ರೀಮದ್ ಭಾಗವತಮ್_99_ಧರ್ಮರಾಜರ ಸಂಶಯ
ಭೀಷ್ಮ-ದುರ್ಯೋಧನ ಮೊದಲಾದವರನ್ನು ಕೊಲ್ಲುವದು ತಪ್ಪಲ್ಲವೇ ಎಂದು ಯುದ್ಧಕ್ಕಿಂತ ಮೊದಲು ಅರ್ಜುನ ಸಂಶಯಕ್ಕೀಡಾದರೆ, ಯುದ್ಧ ಮುಗಿದ ನಂತರ ಕೊಂದದ್ದು ತಪ್ಪಲ್ಲವೇ ಎಂದು ಧರ್ಮರಾಜರು ಸಂಶಯಕ್ಕೀಡಾಗುತ್ತಾರೆ. ವಿದೇಶಪ್ರವಾಸ, ಯಜ್ಞದಲ್ಲಿ ಪಶುಬಲಿ, ನಿಷಿದ್ಧವಾದುದದನ್ನು ತಿನ್ನುವದು ಮುಂತಾದ ದೃಷ್ಟಾಂತಗಳ ಮುಖಾಂತರ, ದಿನನಿತ್ಯದ ಜೀವನದಲ್ಲಿ ನಾವೆಷ್ಟು ಸಂಶಯಕ್ಕೀಡಾಗುತ್ತಿರುತ್ತೇವೆ ಎನ್ನುವದನ್ನು ನಿರೂಪಿಸು ನಮಗಿಷ್ಟವಾದುದು ಧರ್ಮ, ನಮಗಿಷ್ಟವಿಲ್ಲದ್ದು ಅಧರ್ಮ ಎಂಬ ವಿಚಿತ್ರ ಮನೋಭಾವ ತಪ್ಪು, ಶಾಸ್ತ್ರ ಹೇಳುವದು ಧರ್ಮ, ಶಾಸ್ತ್ರ ನಿಷೇಧಿಸುವದು ಅಧರ್ಮ ಎನ್ನುವದೇ ಸರಿಯಾದದದ್ದು ಎನ್ನುವದನ್ನು ಇಲ್ಲಿ ಪ್ರತಿಪಾದಿಸಲಾಗಿದೆ.
ಶ್ರೀಮದ್ ಭಾಗವತಮ್—98— ಕುಂತೀಸ್ತೋತ್ರ 03
“ಪಾಂಡವರಲ್ಲಿ, ಯಾದವರಲ್ಲಿ ನನಗಿರುವ ಸ್ನೇಹಪಾಶವನ್ನು ನಾಶಮಾಡಿಬಿಡು” ಎಂಬ ಕುಂತೀದೇವಿಯರ ಮತ್ತೊಂದು ಉದಾತ್ತ ಚಿಂತನೆಯ ಪ್ರಾರ್ಥನೆಯ ವಿವರಣೆ ಇಲ್ಲಿದೆ. ಗೋಪಿಕಾದಿಗಳ ಮೇಲೆ ದೇವರು ಮಾಡಿದ ಮಹಾನುಗ್ರಹದ ಚಿಂತನೆಯೊಂದಿಗೆ ಕುಂತೀದೇವಿ ಮಾಡಿದ ದೇವರ ಮಾಹಾತ್ಮ್ಯವನ್ನು ಚಿಂತನೆಯ ವಿವರಣೆಯೊಂದಿಗೆ.
ಶ್ರೀಮದ್ ಭಾಗವತಮ್ — 97 — ಕುಂತೀಸ್ತೋತ್ರ 02
“ಆಗಾಗ ನಮಗೆ ಕಷ್ಟಗಳನ್ನು ನೀಡುತ್ತಿರು” ಎಂದು ಕುಂತೀದೇವಿ ಮಾಡಿದ ಅತ್ಯಪೂರ್ವವಾದ ಪ್ರಾರ್ಥನೆಯ ನಿರೂಪಣೆ ಇಲ್ಲಿದೆ. ಕುಂತಿಯ ಈ ಮಾತು ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರ ಮೇಲೆ ಮಾಡಿದ ಮಹತ್ತರ ಪರಿಣಾಮದ ಚಿಂತನೆಯೊಂದಿಗೆ.
ಶ್ರೀಮದ್ ಭಾಗವತಮ್ — 96 — ಕುಂತೀಸ್ತೋತ್ರ_01
ಉತ್ತರೆಯ ಗರ್ಭವನ್ನು ರಕ್ಷಿಸಿ ದ್ವಾರಕೆಗೆ ಹೊರಟು ನಿಂತ ಶ್ರೀಕೃಷ್ಣನನ್ನು ಕುಂತಿದೇವಿಯರು ಅದ್ಭುತವಾದ ಕ್ರಮದಲ್ಲಿ ಸ್ತೋತ್ರವನ್ನು ಮಾಡುತ್ತಾರೆ. ಆ ಸ್ತೋತ್ರದ ಅರ್ಥಾನುಸಂಧಾನದ ಮೊದಲ ಭಾಗವಿದು.
ಶ್ರೀಮದ್ ಭಾಗವತಮ್ — 95 — ಉತ್ತರಾ-ಗರ್ಭ-ರಕ್ಷಣೆ
ಪಾಂಡವರನ್ನು ರಾಜ್ಯದಲ್ಲಿ ಕೂಡಿಸಿದ ಶ್ರೀಕೃಷ್ಣ ಸಾತ್ಯಕಿ ಉದ್ಧವರೊಡಗೂಡಿ ರಥದಲ್ಲಿ ಕುಳಿತು ಇನ್ನೇನು ಹೊರಡಬೇಕನ್ನಷ್ಟರಲ್ಲಿ “ಕೃಷ್ಣಾ ಕಾಪಾಡು” ಎಂದು ಹೆಣ್ಣಿನ ಧ್ವನಿಯೊಂದು ಕೇಳುತ್ತದೆ. ಗರ್ಭಿಣಿಯಾದ ಉತ್ತರೆ ರಕ್ಷಣೆಗಾಗಿ ತನ್ನ ಬಳಿಗೆ ಧಾವಿಸಿ ಬರುತ್ತಿರುವದನ್ನು ಕಂಡ ಭಗವಂತ ರಥದಿಂದ ಥಟ್ಟನೆ ಹಾರಿ ಅವರ ಬಳಿಗೆ ಬಂದು, ಭಯದಿಂದ ಥರಥರನೆ ನಡುಗುತ್ತಿದ್ದ ಉತ್ತರಾದೇವಿಯನ್ನು ಸಾಂತ್ವನಗೊಳಿಸುತ್ತಾನೆ. ಅಶ್ವತ್ಥಾಮರ ಅಸ್ತ್ರದ ಭಯದಿಂದ ಗರ್ಭವನ್ನು ರಕ್ಷಿಸುತ್ತಾನೆ.
ಶ್ರೀಮದ್ ಭಾಗವತಮ್ — 94 — ಅಶ್ವತ್ಥಾಮಾಚಾರ್ಯರ ಕನಸು
ಅಶ್ವತ್ಥಾಮಾಚಾರ್ಯರು ದುರ್ಯೋಧನನಿಗಾಗಿ ಪಾಂಡವರ ಮಕ್ಕಳನ್ನು ಕೊಂದು, ಭೀಮನಿಂದ ಪರಾಜಿತರಾಗಿ, ಬ್ರಹ್ಮಶಿರೋಸ್ತ್ರವನ್ನು ಉಪಶಮನ ಮಾಡಲಾಗದೇ, ಶ್ರೀಕೃಷ್ಣನ ಮೇಲೂ ಸಿಟ್ಟಾಗಿ, ಉತ್ತರೆಯ ಗರ್ಭವನ್ನು ಕೊಂದೇ ಕೊಲ್ಲುತ್ತೇನೆ ಎಂದಾಗ ಶ್ರೀಕೃಷ್ಣ ವೇದವ್ಯಾಸರು ಅಶ್ವತ್ಥಾಮರನ್ನು ನಿಗ್ರಹಿಸಿದ ಪರಿಯ ನಿರೂಪಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 93 — ಭಾಗವತದ ರಚನೆ
ನಾರದರು ನಿರ್ಗಮಿಸಿದ ನಂತರ ಯಾವ ಕ್ರಮದಲ್ಲಿ ಶ್ರೀಮದ್ ಭಾಗವತದ ರಚನೆಯನ್ನು ಮಾಡಿದರು ಎನ್ನುವದನ್ನು ತಿಳಿಸುವ ಸೂತಾಚಾರ್ಯರು ಭಾಗವತದ ಕುರಿತ ಕೆಲವು ಅತ್ಯಪೂರ್ವ ವಿಷಯಗಳನ್ನು ನಿರೂಪಿಸುತ್ತ “ಎಲ್ಲವನ್ನೂ ತೊರೆದ ಶುಕಾಚಾರ್ಯರು ಭಾಗವತವನ್ನೇಕೆ ಅಧ್ಯಯನ ಮಾಡಿದರು” ಎಂಬ ಶೌನಕರ ಪ್ರಶ್ನೆಗೆ ಸೂತಾಚಾರ್ಯರು ನೀಡಿರುವ ಅದ್ಭುತವಾದ ಉತ್ತರದ ವಿವರಣೆ ಇಲ್ಲಿದೆ. ಶ್ರೀಮದ್ ಭಾಗವತವೆಂಬ ಕಲ್ಪವೃಕ್ಷದ ಮಹಾಮಾಹಾತ್ಮ್ಯದ ಚಿಂತನೆಯೊಂದಿಗೆ.
ಶ್ರೀಮದ್ ಭಾಗವತಮ್ — 92 — ನಾರದರು ಪಡೆದ ಪೂರ್ಣಾನುಗ್ರಹ
ನಾರದರು ತಮ್ಮ ಅದ್ಭುತವಾದ ಸಾಧನೆಯಿಂದ ಪಡೆದ ಶ್ರೀಹರಿಯ ಪೂರ್ಣಾನುಗ್ರಹ, ನಾರದರಾಗಿ ಅವರು ಮಾಡುವ ಮಹತ್ತರ ಸಾಧನೆಯ ಕುರಿತ ವಿವರ ಇಲ್ಲಿದೆ.
ಶ್ರೀಮದ್ ಭಾಗವತಮ್ — 91 — ನಾರದರಿಗೆ ದೇವರ ದರ್ಶನ
“ಕೋಶ ಓದಬೇಕು, ದೇಶ ಸುತ್ತಬೇಕು” ಎಂಬ ನಾಣ್ಣುಡಿಯ ವಿವರಣೆಯೊಂದಿಗೆ, ಮನುಷ್ಯ ತನ್ನ ಅಹಂಕಾರವನ್ನು ಕತ್ತರಿಸಿಕೊಳ್ಳಲು ಪಶು, ಪಕ್ಷಿ, ಪ್ರಾಣಿ, ಪ್ರಕೃತಿಗಳನ್ನು ಗಮನಿಸಬೇಕು ಎನ್ನುವದನ್ನು ನಾರದರ ಸಂಚಾರದ ಮುಖಾಂತರ ಅರ್ಥ ಮಾಡಿಕೊಳ್ಳುತ್ತ ನಾರದರಿಗಾದ ದೇವರ ಸಾಕ್ಷಾತ್ಕಾರದ ಪರಮಾದ್ಭುತ ಚಿತ್ರಣವನ್ನು ಅವರ ಮುಖದಿಂದಲೇ ಕೇಳುತ್ತೇವೆ. ಮೈ ಮನಗಳನ್ನು ಪುಲಕಗೊಳಿಸುವ ಭಾಗ.
ಶ್ರೀಮದ್ ಭಾಗವತಮ್ — 90 — ಕುಟುಂಬವೋ ಸಾಧನೆಯೋ?
ಸಾಧನೆಯ ಹಾದಿಯಲ್ಲಿ ನಡೆಯುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೆ ಒಂದಲ್ಲ ಒಂದು ಬಾರಿ ಎದುರಾಗುವ ಪ್ರಶ್ನೆ — ಕುಟುಂಬವನ್ನು ಪೋಷಿಸುವದೋ, ಸಾಧನೆಯನ್ನು ಮಾಡುವದೋ? ಭಗವಂತನಿಂದಲೇ ಸಾಕ್ಷಾತ್ತಾಗಿ ಉಪದೇಶ ಪಡೆದ ಮಹಾನುಭಾವರು ನಾರದರಿಗೆ ತತ್ವೋಪದೇಶ ಮಾಡಿದ್ದಾರೆ. ಅಂದರೆ ಪರೋಕ್ಷಜ್ಞಾನ ಸಿದ್ಧಿಸಿದೆ. ಐದು ವರ್ಷದ ಆ ಸಣ್ಣ ಕೂಸಿಗೆ ಜಗತ್ತೆಲ್ಲ ಸುತ್ತಾಡುತ್ತ ಹರಿಯ ಆರಾಧನೆ ಮಾಡಬೇಕೆಂಬ ಅದಮ್ಯ ಬಯಕೆಯಿದೆ. ನಿಂತಲ್ಲಿ ನಿಲ್ಲದೆ, ಕುಂತಲ್ಲಿ ಕೂಡದೆ ಸಂನ್ಯಾಸಿಗಳಂತೆ ಬದುಕಬೇಕೆಂಬ ಆಸೆ ಆ ಹುಡುಗನಿಗೆ. ಆದರೆ, ವೃದ್ಧಳಾದ ತಾಯಿ. ತನ್ನೊಂದಿಗೆ ಬರಲಿಕ್ಕೆ ಸಾಧ್ಯವಿಲ್ಲ. ತನಗಿಲ್ಲೇ ಇರಲು ಅಪೇಕ್ಷೆ ಇಲ್ಲ. ತಮ್ಮ ಅದಮ್ಯ ಬಯಕೆಯನ್ನೂ ದಮಿಸಿ ನಾರದರು ತಾಯಿ ಬದುಕಿರುವವರೆಗೆ ತಾಯಿಯ ಸೇವೆಯನ್ನೇ ಮಾಡಿಕೊಂಡಿರುತ್ತಾರೆ.
ಶ್ರೀಮದ್ ಭಾಗವತಮ್ — 89 — ನಾರದರ ಕರ್ಮಸಿದ್ಧಾಂತ
ಅತ್ಯಂತ ಗಹನವಾದ ಶಾಸ್ತ್ರೀಯ ತತ್ವವನ್ನು ಅತ್ಯಂತ ಸರಳ ಮತ್ತು ಸುಲಭವಾಗಿ ಹೇಳಬಲ್ಲ ಶ್ರೇಷ್ಠ ದೇವತೆಗಳು ನಮ್ಮ ನಾರದರು. ಮೋಕ್ಷಸಾಧನವಾದ ಕರ್ಮ ಎಂದರೆ ಅದೇನೋ ವಿಶಿಷ್ಟವಾದ ಕರ್ಮ ಎಂದು ತಿಳಿದಿರುವ ಸಾಮಾನ್ಯ ಜನರಿಗೆ, ಶಾಸ್ತ್ರಪ್ರಪಂಚದ ಅತಿ ಗಹನ ಕರ್ಮತತ್ವವನ್ನು ಅತ್ಯಂತ ಸರಳವಾಗಿ, ಅದ್ಭುತವಾದ ದೃಷ್ಟಾಂತದೊಂದಿಗೆ ನಾರದರು ಮನವರಿಗೆ ಮಾಡಿಸುತ್ತಾರೆ. ಅವರ ಪವಿತ್ರ ವಚನಗಳ ವಿವರಣೆ ಇಲ್ಲಿದೆ. ಅಪರೋಕ್ಷಜ್ಞಾನಸಾಧನವಾದ ಕರ್ಮಕ್ಕೆ ಫಲ ದೊರೆಯುವದು ಪವಿತ್ರವಾದ ಭರತಭೂಮಂಡಲದಲ್ಲಿ ಮಾತ್ರ ಎಂಬ ಪ್ರಮೇಯದ ವಿವರಣೆಯೂ ಸಹ ಇಲ್ಲಿದೆ.
ಶ್ರೀಮದ್ ಭಾಗವತಮ್ — 88 — ನಾರದರು ಮಾಡಿದ ಸೇವೆ
ಮಹಾನುಭಾವರ ಸೇವೆ ಎನ್ನುವದು ಒಂದು ಅದ್ಭುತವಾದ ಸುಖವನ್ನು ನೀಡುವ ಮಹಾಸತ್ಕರ್ಮ. ಅನುಭವಿಸುವ ಕಾಲದಲ್ಲಿ ಸುಖವನ್ನು ನೀಡುವದಷ್ಟೇ ಅಲ್ಲ, ಅದರಿಂದ ಉಂಟಾಗುವ ಫಲ ಮೇರೆ ಇಲ್ಲದ್ದು. ನಾರದರು ಶೂದ್ರಬಾಲಕನಾಗಿದ್ದಾಗ ತಮ್ಮ ಧಣಿಯ ಮನೆಗೆ ಬಂದ ಯತಿವರೇಣ್ಯರ ಸೇವೆಯನ್ನು ಮಾಡಿದ ಬಗೆಯನ್ನು ಅದ್ಭತವಾದ ಚಿತ್ರಣ ಇಲ್ಲಿದೆ.
ನೈವೇದ್ಯದ ಅನುಸಂಧಾನ
ಭಗವಂತನಿಗೆ ನೈವೇದ್ಯವನ್ನು ಸಮರ್ಪಿಸಬೇಕಾದರೆ ಯಾವ ಎಚ್ಚರ, ಅನುಸಂಧಾನಗಳಿರಬೇಕು ಎನ್ನುವದನ್ನು ವಿವರಿಸುವ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ ವಚನಗಳ ಅರ್ಥಾನುಸಂಧಾನ.
ಸ್ತ್ರೀಯರು ಭಾರತ-ಭಾಗವತಗಳನ್ನು ಓದಬಹುದು
ಹೆಣ್ಣುಮಕ್ಕಳು ಶ್ರೀಮದ್ ಭಾಗವತ ಮತ್ತು ಶ್ರೀಮನ್ ಮಹಾಭಾರತಗಳನ್ನು ಗ್ರಂಥಪುರಸ್ಸರವಾಗಿ ಅಧ್ಯಯನ ಮಾಡಬಹುದು ಎಂದು ತಿಳಿಸುವ ಭಾಗವತದ ನಿರ್ಣಾಯಕ ವಚನದ ವಿವರಣೆ ಇಲ್ಲಿದೆ.
ಯಾವುದು ಕಾಕಶಾಸ್ತ್ರ, ಯಾವುದು ಹಂಸಶಾಸ್ತ್ರ?
ಇವತ್ತು ಓದಲಿಕ್ಕೆ ನೂರಾರು ರೀತಿಯ ವಿಷಯಗಳಿವೆ. ಆದರೆ ಯಾವುದು ಕಾಕಶಾಸ್ತ್ರ ಯಾವುದು ಹಂಸಶಾಸ್ತ್ರ ಎಂದು ಶ್ರೀ ನಾರದರು ಅದ್ಭುತವಾಗಿ ವಿಭಾಗ ಮಾಡಿ ನೀಡಿದ್ದಾರೆ. ತಪ್ಪದೇ ಕೇಳಿ.
ಎಲ್ಲರನೂ ಸಲುಹವವನು
ಬಡವ ಬಲ್ಲಿದ ಎಂದು ಭೇದ ಮಾಡದೇ, ಬ್ರಾಹ್ಮಣ ಶೂದ್ರ ಎಂಬ ಭೇದ ಮಾಡದೇ, ಗಂಡು, ಹೆಣ್ಣು, ತಿಳಿದವ, ತಿಳಿಯದವ ಮುಂತಾದ ಯಾವ ಬೇದವನ್ನೂ ಮಾಡದೇ ಭಗವಂತ ಎಲ್ಲರನ್ನೂ ಕಾಪಾಡುವ ದೇವರಲ್ಲಿ ನಾವು ಮಾಡಬೇಕಾದ ಒಂದು ಪ್ರಾರ್ಥನೆಯ ವಿವರಣೆ ಇಲ್ಲಿದೆ.
ಶ್ರೀಮದ್ವಾದಿರಾಜರ ಸ್ತೋತ್ರರಚನಾಕೌಶಲ
ಕವಿಕುಲತಿಲಕರಾದ ನಮ್ಮ ಶ್ರೀಮದ್ವಾದಿರಾಜಗುರುಸಾರ್ವಭೌಮರ ಅದ್ಭುತ ಕವಿತಾಕೌಶಲದ ಒಂದು ಚಿತ್ರಣ. “ಬಳಸುವರು ಸತ್ಕವಿಗಳವರು, ಅವರಗ್ಗಳಿಕೆ ಎನಗಿಲ್ಲ” ಎಂಬ ಶ್ರೀ ಕನಕದಾಸಾರ್ಯರ ವಚನದ ಅರ್ಥಾನುಸಂಧಾನದ ಸಂದರ್ಭದಲ್ಲಿ.
ಸರ್ವಕರ್ತಾ ಅಕರ್ತೃವೇ?
ಶಾಸ್ತ್ರಗಳು ಒಂದು ಕಡೆಯಲ್ಲಿ ಭಗವಂತನನ್ನು ಸರ್ವಕರ್ತಾ ಎಂದು ಕರೆಯುತ್ತದೆ. ಮತ್ತೊಂದೆಡೆ ಕರ್ತೃವೇ ಅಲ್ಲ ಎಂದು ಕರೆಯುತ್ತದೆ. ಇದನ್ನು ಅರ್ಥ ಮಾಡಿಕೊಳ್ಳುವದು ಹೇಗೆ ಎಂಬ ಪ್ರಶ್ನೆಗೆ ಶ್ರೀಮದಾಚಾರ್ಯರು ನೀಡಿದ ಉತ್ತರದ ವಿವರಣೆ ಇಲ್ಲಿದೆ.
ಬಾಣಾಸುರನ ಕಥೆ
ಬಾಣಾಸುರ ರುದ್ರದೇವರ ಅನುಗ್ರಹವನ್ನು ಪಡೆದದ್ದು, ಶ್ರೀಕೃಷ್ಣ ರೂಪದ ಭಗವಂತ ಅವನನ್ನು ಶಾಸನ ಮಾಡಿದ ಕ್ರಮ, ಶೈವಜ್ವರ ವೈಷ್ಣವಜ್ವರಗಳ ರೋಚಕ ಸಂಗ್ರಾಮ ಮುಂತಾದವುಗಳ ಚಿತ್ರಣ ಇಲ್ಲಿದೆ.
ದೇವರ ತೀರ್ಥವನ್ನು ತೆಗೆದುಕೊಳ್ಳುವ ಮುಂಚೆ
ಸಾಲಿಗ್ರಾಮ ಪ್ರತಿಮೆಗಳಿಗೆ ಮಾಡಿದ ಅಭಿಷೇಕದ ತೀರ್ಥವನ್ನು ತೆಗೆದುಕೊಳ್ಳುವದಕ್ಕಿಂತ ಮುಂಚೆ ನಮಗಿರಬೇಕಾದ ಅನುಸಂಧಾನ, ತೀರ್ಥದ ಮಾಹಾತ್ಮ್ಯ, ತೀರ್ಥದ ಮುಖಾಂತರ ದೇವರು ಮಾಡುವ ಅನುಗ್ರಹದ ಚಿಂತನೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 87 — ನಾರದರ ಪೂರ್ವಜನ್ಮ
ನಾರದರು ತಮ್ಮ ಪೂರ್ವಜನ್ಮದಲ್ಲಿ ಬ್ರಾಹ್ಮಣರ ಮನೆಯಲ್ಲಿ ಮನೆಗೆಲಸ ಮಾಡಿಕೊಂಡಿದ್ದ ದಾಸಿಯೊಬ್ಬಳ ಮಗನಾಗಿ ಹುಟ್ಟಿ ಬಂದಿರುತ್ತಾರೆ. ಆ ಬ್ರಾಹ್ಮಣರ ಮನೆಗೆ ಚಾತುರ್ಮಾಸ್ಯಕ್ಕಾಗಿ ಬಂದ ಯತಿವರೇಣ್ಯರ ಸೇವೆಯಿಂದ ಜ್ಞಾನ ಭಕ್ತಿ ವೈರಾಗ್ಯಗಳನ್ನು ಪಡೆದು ಮುಂದಿನ ಜನ್ಮದಲ್ಲಿ ನಾರದರಾಗಿ ಹುಟ್ಟಿ ಬರುತ್ತಾರೆ. ಅಂತಹ ಪವಿತ್ರತಮಳಾದ ತಾಯಿಯ ಹೊಟ್ಟೆಯಲ್ಲಿ ಹುಟ್ಟಲು ಮಾಡಬೇಕಾದ ಪ್ರಾರ್ಥನೆ, ದೊಡ್ಡವರ ಸೇವೆ, ಅವರ ಉಂಡು ಉಳಿದದ್ದನ್ನು ಉಣ್ಣುವದರಿಂದ ಉಂಟಾಗುವ ಫಲ, ಹಸ್ತೋದಕ ಪಾದೋದಕಗಳ ಪ್ರಭಾವ, ಸ್ವೀಕಾರ ಮಾಡಬಹುದೇ ಎಂಬ ಪ್ರಶ್ನೆಗೆ ಉತ್ತರ ಮುಂತಾದ ವಿಷಯಗಳು ಈ ಉಪನ್ಯಾಸದಲ್ಲಿದೆ.
ಶ್ರೀಮದ್ ಭಾಗವತಮ್ — 06 — ನಾರದರ ಆರು ಕಾರಣಗಳು
ಈ ದಿವಸದ ವಿಜ್ಞಾನಿಗಳು ಇಷ್ಟು ತಂತ್ರಜ್ಞಾನವನ್ನು ಕಂಡು ಹಿಡಿದಿದ್ದಾರೆ, ನಮ್ಮ ಪ್ರಾಚೀನ ಋಷಿಮುನಿಗಳೇಕೆ ಇವನ್ನು ಕಂಡು ಹಿಡಿಯಲಿಲ್ಲ ಎಂಬ ಪ್ರಶ್ನೆಗೆ ಶ್ರೀ ನಾರದರು ನೀಡಿರುವ ಸ್ವಾರಸ್ಯಕರವಾದ ಉತ್ತರದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 85 — ನಾರದರ ಪ್ರಾರ್ಥನೆ
ಶ್ರೀಮದ್ ಭಾಗವತ ರಚನೆಗೆ ಪ್ರೇರಣೆ ನೀಡಿದ ಯಶಸ್ಸನ್ನು ನಾರದರಿಗೆ ಅನುಗ್ರಹಿಸಬೇಕು ಎಂಬ ಕಾರಣದಿಂದ ಸರಸ್ವತೀತೀರದ ತಮ್ಮ ಆಶ್ರಮದಲ್ಲಿ ಶ್ರೀ ವೇದವ್ಯಾಸದೇವರು, ಖಿನ್ನರಂತೆ ನಟನೆ ಮಾಡುತ್ತ ಕುಳಿತಿರುತ್ತಾರೆ. ಅಲ್ಲಿಗೆ ನಾರದರು ಬಂದು ಯಾಕೆ ಹೀಗಿದ್ದೀರಿ ಎಂದು ಪ್ರಶ್ನೆ ಮಾಡಿದಾಗ ಕಾರಣವೇನಿರಬಹುದು ಎಂದು ನೀವೇ ಹೇಳಿ ಎಂದು ವೇದವ್ಯಾಸದೇವರು ವಿಡಂಬನೆ ಮಾಡುತ್ತಾರೆ. ಆಗ ನಾರದರು ಅತ್ಯಂತ ರೋಚಕವಾದ ಕ್ರಮದಲ್ಲಿ ಭಾಗವತವನ್ನು ರಚಿಸುವಂತೆ ಪ್ರಾರ್ಥಿಸುತ್ತಾರೆ. ಆ ಭಾಗದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 84 — ಭಾಗವತದ ಮೇಲೆ ವೇದವ್ಯಾಸದೇವರ ಪ್ರೀತಿ
ಶ್ರೀಮದ್ ಭಾಗವತದ ರಚನೆ ಹೇಗಾಯಿತು ಎಂಬ ಶೌನಕರ ಪ್ರಶ್ನೆಗೆ ಉತ್ತರ ನೀಡುತ್ತ ಸೂತಾಚಾರ್ಯರು ವೇದವ್ಯಾಸದೇವರ ಅಪಾರ ಕಾರುಣ್ಯದ ಪರಿಚಯವನ್ನು ನಮಗೆ ಮಾಡಿಸುತ್ತಾರೆ. ಸಜ್ಜನರ ಉದ್ಧಾರಕ್ಕಾಗಿಯೇ ಅವತಾರ ಮಾಡಿದ ವೇದವ್ಯಾಸದೇವರು ವೇದಗಳ ವಿಭಾಗ, ಭಾರತ ಪುರಾಣಗಳ ರಚನೆಯನ್ನು ಮಾಡಿದರೂ ಸಜ್ಜನರ ಉದ್ಧಾರಕ್ಕಾಗಿ ಮತ್ತಷ್ಟು ಮಾಡಬೇಕೆಂಬ ಕೃಪೆಯನ್ನು ಭಾಗವತವನ್ನು ರಚಿಸುತ್ತಾರೆ. ಈ ಎಲ್ಲ ಗ್ರಂಥಗಳಿಗಿಂತಲೂ ವಿಭಿನ್ನವಾಗಿ ಭಾಗವತದ ಮೇಲಿರುವ ಅವರ ಪ್ರೇಮವನ್ನು ಇಲ್ಲಿ ಸೂತಾಚಾರ್ಯರು ತಿಳಿಸಿ ಹೇಳುತ್ತಾರೆ. ಸ್ತ್ರೀಯರು ಮಹಾಭಾರತ ಮತ್ತು ಭಾಗವತವನ್ನು ಗ್ರಂಥಪುರಸ್ಸರವಾಗಿಯೇ ಅಧ್ಯಯನ ಮಾಡಬೇಕು ಎಂಬ ಚರ್ಚೆಯಲ್ಲಿ ನಿರ್ಣಾಯಕವಾದ ವಚನವಿರುವದು ಇದೇ ಪ್ರಸಂಗದಲ್ಲಿ. ಆ ಮಾತಿನ ವಿವರಣೆಯೊಂದಿಗೆ ಭಾಗವತದ ಶ್ರೇಷ್ಠತೆಯ ನಿರೂಪಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 83 — ಪ್ರಥಮಸ್ಕಂಧ ಭಾಗವತದ ಭಾಗವೇ?
ಶುಕಾಚಾರ್ಯರು ಪರೀಕ್ಷಿದ್ರಾಜರಿಗೆ ಉಪದೇಶಿಸಿದ ಗ್ರಂಥ ಭಾಗವತ. ಶುಕಾಚಾರ್ಯರ ಉಪದೇಶ ಆರಂಭವಾಗುವದೇ ಎರಡನೆಯ ಸ್ಕಂಧದಿಂದ. ಅಂದಮೇಲೆ ಮೊದಲನೆಯ ಸ್ಕಂಧದಲ್ಲಿ ಬಂದಿರುವ ವಿಷಯಗಳನ್ನು ಶುಕಾಚಾರ್ಯರು ಪರೀಕ್ಷಿದ್ರಾಜರಿಗೆ ಹೇಳಲೇ ಇಲ್ಲ. ಹೀಗಾಗಿ ಈ ಪ್ರಥಮಸ್ಕಂಧ ಭಾಗವತ ಅಲ್ಲವೇ ಅಲ್ಲ. ಅಕಸ್ಮಾತ್ ಭಾಗವತವೇ ಆಗಿದ್ದರೆ, ಶುಕಾಚಾರ್ಯರು ಯಾಕೆ ಇದನ್ನು ಪರೀಕ್ಷಿದ್ರಾಜರಿಗೆ ಹೇಳಲೇ ಇಲ್ಲ, ಅಪೂರ್ಣವಾಗಿ ಭಾಗವತವನ್ನು ಹೇಳಿದಂತಾಯಿತಲ್ಲವೇ ಎಂಬ ಪ್ರಶ್ನೆಗಳಿಗೆ ಸ್ವಯಂ ವೇದವ್ಯಾಸದೇವರೇ ಸೂಚಿಸಿರುವ ಉತ್ತರದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 82 — ಸಜ್ಜನರನ್ನು ಪೋಷಿಸುವ ಮಹಾರಾಜ ಶ್ರೀಮದ್ ಭಾಗವತ
ಧರ್ಮ ಉಳಿಯಬೇಕಾದರೆ ಎರಡು ಶಕ್ತಿಗಳು ಆವಶ್ಯಕ. ಮೊದಲನೆಯದು ಜ್ಞಾನಶಕ್ತಿ. ಕಾರಣ ಯಾವುದು ಧರ್ಮ ಯಾವುದು ಅಧರ್ಮ ಎಂದು ನಿರ್ಣಯಿಸುವ ಸಾಮರ್ಥ್ಯ ಬರುವದೇ ಜ್ಞಾನದಿಂದ. ಎರಡನೆಯದು ದೇಹಶಕ್ತಿ. ದೇಹ-ಇಂದ್ರಿಯ-ಮನಸ್ಸುಗಳಲ್ಲಿ ಶಕ್ತಿ ಇಲ್ಲದಿದ್ದರೆ ಧರ್ಮದ ಆಚರಣೆಯನ್ನು ಮಾಡಲು ಸಾಧ್ಯವಿಲ್ಲ. ಇದು ವೈಯಕ್ತಿಕ ಮಟ್ಟದಲ್ಲಾಯಿತು. ಇನ್ನು ಸಮಗ್ರ ರಾಷ್ಟ್ರದ ದೃಷ್ಟಿಯಿಂದ ಕಂಡಾಗ, ಈಗ ಅನುಸರಿಸಬೇಕಾದ ಧರ್ಮ ಯಾವುದು ಎಂದು ನಿರ್ಣಯಿಸಬೇಕಾದವರು ಸರ್ವಜ್ಞರಾದ ಗುರುಗಳು. ದುಷ್ಟರ ಆಕ್ರಮಣದಿಂದ ಆ ಧಾರ್ಮಿಕರನ್ನು ರಕ್ಷಣೆ ಮಾಡಲು, ಅವರನ್ನು ಪೋಷಿಸಲು, ಮಹಾಪರಾಕ್ರಮಿಯಾದ ಕರುಣಾಳುವಾದ ರಾಜನಿರಬೇಕು. ಸರ್ವಜ್ಞಗುರುಗಳ ಮತ್ತು ಈ ಮಹಾರಾಜರ ಕಾರ್ಯವನ್ನು ಕಲಿಯುಗದಲ್ಲಿ ನಿಭಾಯಿಸಲು ರಚಿತವಾದ ಗ್ರಂಥವೇ ಶ್ರೀಮದ್ ಭಾಗವತ. ಇದನ್ನು ಆಶ್ರಯಿಸಿರುವದರಿಂದ ನಮಗೆ ನಮ್ಮನಮ್ಮ ಧರ್ಮದ ಜ್ಞಾನ ನಮಗೆ ದೊರೆಯುತ್ತದೆ. ತಿಳಿದ ಧರ್ಮದ ಆಚರಣೆಯನ್ನು ಮಾಡಲು ದೇಹ-ಮನಸ್ಸು-ಇಂದ್ರಿಯಗಳಿಗೆ ಶಕ್ತಿಯನ್ನು ನೀಡುವ, ಆವಶ್ಯಕವಾದ ಸಂಪತ್ತನ್ನು ಕರುಣಿಸುವ ರಾಜ ಶ್ರೀಮದ್ ಭಾಗವತ ಎಂಬ ದಿವ್ಯತತ್ವದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 81 — ದೇವರ ಅವತಾರಗಳ ಮುಖ್ಯ ಉದ್ದೇಶ
ಜೀವ ಎಂದರೇನು? ಜೀವನಿಗೆ ಮತ್ತೆಮತ್ತೆ ಹುಟ್ಟು ಸಾವುಗಳು ಬರಲು ಕಾರಣವೇನು? ದೇವರು ಯಾಕಾಗಿ ಅವತಾರಗಳನ್ನು ಸ್ವೀಕರಿಸುತ್ತಾನೆ? ಯಾವುದೇ ಕಾರಣಕ್ಕೆ ಸ್ವೀಕರಿಸಿದರೂ ಅನಂತ ರೂಪಗಳನ್ನು ಸ್ವೀಕಾರ ಮಾಡಲು ಕಾರಣವೇನು? ಅಪರೋಕ್ಷ ಜ್ಞಾನವೆಂದರೇನು? ದೇವರನ್ನು ತಿಳಿಯಲು ಇರಬೇಕಾದ ಅರ್ಹತೆಗಳೇನು ಸರ್ವಕರ್ತನಾದ ಭಗವಂತನನ್ನು ಭಾಗವತ ಅಕರ್ತಾ ಎಂದೇಕೆ ಕರೆಯುತ್ತಾರೆ? ಎಂಬ ಪ್ರಶ್ನೆಗಳಿಗೆ ಶ್ರೀ ವೇದವ್ಯಾಸದೇವರು ನೀಡಿದ ಉತ್ತರಗಳ ವಿವರಣೆ ಇಲ್ಲಿದೆ. ಹಿಂದಿನ ಕಾಲದಲ್ಲಿ ನಡೆಯುತ್ತಿದ್ದ ನಾಟಕಗಳ ಕುರಿತ ಸ್ವಾರಸ್ಯಕರ ವಿಷಯಗಳ ನಿರೂಪಣೆಯೊಂದಿಗೆ.
ಶ್ರೀಮದ್ ಭಾಗವತಮ್ — 80 — ದೇವರ ಮೂರು ಶರೀರಗಳು
ದೇವರಿಗೆ ಸ್ವರೂಪಭೂತವಾದ ಶರೀರವಿರುವಂತೆ, ಸಮಗ್ರ ಜೀವರಾಶಿಗಳನ್ನು, ಮತ್ತು ಸಮಗ್ರ ಅಚೇತನವಸ್ತುಗಳನ್ನೂ ಸಹ ದೇವರ ಶರೀರ ಎಂದು ಶಾಸ್ತ್ರಗಳು ತಿಳಿಸುತ್ತಾವೆ. ಅದಕ್ಕೆ ಕಾರಣ ಮತ್ತು ಅದರ ಕುರಿತ ಪ್ರಶ್ನೆಗಳಿಗೆ ಉತ್ತರ ಈ ಉಪನ್ಯಾಸದಲ್ಲಿದೆ.
ಶ್ರೀಮದ್ ಭಾಗವತಮ್ — 79 — ಎಲ್ಲ ರೂಪಗಳೂ ಪರಿಪೂರ್ಣ
ಶ್ರೀಕೃಷ್ಣರೂಪವೊಂದೇ ಪರಿಪೂರ್ಣ, ಉಳಿದ ರೂಪಗಳು ಅಪರಿಪೂರ್ಣ, ಅವತಾರಿಗಳು ಎಂಬ ಒಂದು ದುರ್ವಾದ. ಮೊದಲಿನಿಂದಲೂ ಇದೆ. ಭಾಗವತದ “ಏತೇ ಸ್ವಾಂಶಕಲಾಃ ಪುಂಸಃ ಕೃಷ್ಣಸ್ತು ಭಗವಾನ್ ಸ್ವಯಮ್” ಎಂಬ ಮಾತು ತಪ್ಪಾಗಿ ಅರ್ಥೈಸಿಕೊಂಡು ಈ ವಾದವನ್ನು ಕೆಲವರು ಸಮರ್ಥಿಸುತ್ತಾರೆ. ಭಾಗವತದ ವಾಕ್ಯದ ಸರಿಯಾದ ಅರ್ಥಚಿಂತನೆಯೊಂದಿಗೆ ಭಗವಂತನ ರೂಪಗಳಲ್ಲಿ ಭೇದ ಮಾಡುವದು ಅಂಧಂತಮಸ್ಸನ್ನು ನೀಡುವ ದುಷ್ಟ ಚಿಂತನೆ ಎನ್ನುವದನ್ನು ವೇದ-ಸೂತ್ರಗಳ ವಚನದಿಂದ ಇಲ್ಲಿ ಸಮರ್ಥಿಸಲಾಗಿದೆ. “ನೇಹ ನಾನಾಸ್ತಿ ಕಿಂಚನ” ಎಂಬ ವೇದಮಂತ್ರದ ಅರ್ಥವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 78 — ಅವತಾರದ ಕ್ರಮ
ಭಾಗವತದಲ್ಲಿ 22 ಅವತಾರಗಳನ್ನು ಹೇಳುವಾಗ, ಮೊದಲು ಅವತಾರ ಮಾಡಿದ ನರಸಿಂಹರೂಪವನ್ನು ನಂತರ ಉಲ್ಲೇಖ ಮಾಡಿ, ನಂತರ ಅವತಾರ ಮಾಡಿದ ಕೂರ್ಮ, ಧನ್ವಂತರಿ, ಮೋಹನಿರೂಪಗಳನ್ನು ಮೊದಲು ಉಲ್ಲೇಖ ಮಾಡಲಾಗಿದೆ. ವರಾಹ ರೂಪದ ನಂತರ ಮತ್ಸ್ಯರೂಪವನ್ನು ಉಲ್ಲೇಖಿಸಲಾಗಿದೆ. ಹಾಗೆಯೇ ದಶಾವತರಗಳ ಉಲ್ಲೇಖದಲ್ಲಿಯೂ ಕೂರ್ಮ ಮೊದಲು ನರಸಿಂಹ ನಂತರ. ಈ ರೀತಿಯಾಗಿ ಕ್ರಮವನ್ನು ವ್ಯತ್ಯಾಸ ಮಾಡಿ ಉಲ್ಲೇಖಿಸುವ ಹಿಂದಿನ ಕಾರಣವನ್ನು ಆಚಾರ್ಯರು ತಂತ್ರಸಾರಸಂಗ್ರಹದಲ್ಲಿ ತಿಳಸಿದ್ದಾರೆ. ಶ್ರೀ ಶೇಷಚಂದ್ರಿಕಾಚಾರ್ಯರ ವಚನಗಳ ವಿವರಣೆಯೊಂದಿಗೆ ಆ ಪ್ರಮೇಯವನ್ನು ಇಲ್ಲಿ ನಿರೂಪಿಸಲಾಗಿದೆ. ಡಾರ್ವಿನ್ನಿನ ವಿಕಾಸವಾದವನ್ನು ಶಾಸ್ತ್ರವೂ ಒಪ್ಪಿದೆ ಎನ್ನುವ ಭರದಲ್ಲಿ ದಶಾವತಾರಗಳನ್ನು ವಿಕಾಸವಾದದೊಂದಿಗೆ ಸಮೀಕರಿಸುವ ಆಧುನಿಕರ ವಾದದ ವಿಮರ್ಶೆಯೊಂದಿಗೆ.
ಶ್ರೀಮದ್ ಭಾಗವತಮ್ — 77 — ದೇವರ ಇಪ್ಪತ್ತೆರಡು ಅವತಾರಗಳು.
ಮಹಾಭಾರತ-ಭಾಗವತ ರಚನೆಯಾಗುವದಿಕ್ಕಿಂತ ಮುಂಚೆ ಸ್ತ್ರೀಯರು ಯಾವ ಗ್ರಂಥವನ್ನು ಅಧ್ಯಯನವನ್ನು ಮಾಡುತ್ತಿದ್ದರು? ಎಂಬ ಪ್ರಶ್ನೆಗೆ ಉತ್ತರ ನೀಡುವದರೊಂದಿಗೆ ಸಚ್ಛಾಸ್ತ್ರಗಳ ಮೇಲೆ ಸೃಷ್ಟಿಯ ಆದಿಕಾಲದಿಂದಲೇ ಆಗುತ್ತಿರುವ ಆಕ್ರಮಣಗಳ ಕುರಿತ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 76 — ಪುರುಷರೂಪ
ಶ್ರೀ ಅನಂತತೀರ್ಥಶ್ರೀಪಾಂದಂಗಳವರು (ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರಿಗಿಂತ ಪ್ರಾಚೀನರು) ತಿಳಿಸಿರುವ ಅಪೂರ್ವ ಪ್ರಮೇಯಗಳೊಂದಿಗೆ ಪರಮಾತ್ಮನ ಮೂರು ಪುರುಷ ರೂಪಗಳ ಮಾಹಾತ್ಮ್ಯದ ಚಿಂತನೆ ಇಲ್ಲಿದೆ.
ಪ್ರಥಮಸ್ಕಂಧ ದ್ವಿತೀಯಾಧ್ಯಾಯ
ಶ್ರೀಮದ್ ಭಾಗವತದ ಮೊದಲನೆಯ ಸ್ಕಂಧದ ಎರಡನೆಯ ಅಧ್ಯಾಯದ ಪಾರಾಯಣ.
ಶ್ರೀಮದ್ ಭಾಗವತಮ್ — 75 — ದೇವರ ದೇಹ ಪ್ರಾಕೃತವಲ್ಲ
ದೇವರ ಶರೀರರವನ್ನು “ಮಹದಾದಿಭಿಃ ಸಂಭೂತಂ” ಎಂದು ಭಾಗವತ ಹೇಳುತ್ತದೆ. ಸಂಭೂತ ಎಂದರೆ ಉತ್ಪನ್ನವಾದದ್ದು. ದೇವರ ಶರೀರ ಅಪ್ರಾಕೃತ ಎಂದಾದಲ್ಲಿ, ಇಲ್ಲಿ ಸಂಭೂತ ಎಂಬ ಶಬ್ದವನ್ನು ಯಾವ ಕಾರಣಕ್ಕೆ ಬಳಸಲಾಗಿದೆ ಎಂಬ ಪ್ರಶ್ನೆಗೆ ಆಚಾರ್ಯರು ಉತ್ತರವನ್ನು ನೀಡುತ್ತ, ದೇವರ ರೂಪಗಳ ಕುರಿತು ತಿಳಿಯಬೇಕಾದ ಅಪೂರ್ವ ಮತ್ತು ರಹಸ್ಯದ ತತ್ವಗಳನ್ನು ಶಾಸ್ತ್ರಗಳ ವಚನಗಳ ಮುಖಾಂತರ ನಮಗೆ ಅರ್ಥ ಮಾಡಿಸುತ್ತಾರೆ. ಅವರ ಪವಿತ್ರ ವಚನಗಳ ಅರ್ಥಾನುಸಂಧಾನ ಇಲ್ಲಿದೆ.
ಶ್ರೀಮದ್ ಭಾಗವತಮ್ — 74 — ದೇವರ ಅವತಾರಗಳ ವೈಶಿಷ್ಟ್ಯ
“ಜಗೃಹೇ ಪೌರುಷಮ್” ಎಂಬ ಶ್ಲೋಕವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅನೇಕ ಸಮಸ್ಯೆಗಳು ಎದುರಾಗುತ್ತವೇ. ದೇವರು ರೂಪವನ್ನು ಸ್ವೀಕಾರ ಮಾಡುತ್ತಾನೆ ಎಂದಿದೆ. ಅಂದ ಮೇಲೆ ದೇವರಿಗೂ ದೇವರ ಅವತಾರಕ್ಕೂ ಭೇದವಿದೆ ಎಂದಾಯಿತು. ಕಾರಣ ಸ್ವೀಕಾರ ಮಾಡುವವನು, ಸ್ವೀಕರಿಸಲ್ಪಡುವ ವಸ್ತುವಿನಲ್ಲಿ ಭೇದವಿರಬೇಕಲ್ಲವೇ. ಹಾಗೆಯೇ “ಮಹದಾದಿಭಿಃ ಸಂಭೂತಮ್” ಎಂದಿದೆ. ಸಂಭೂತ ಎಂದರೆ ಹುಟ್ಟಿದ್ದು. ದೇವರ ರೂಪ ಮಹತ್ತತ್ವ ಮುಂತಾದ ತತ್ವಗಳಿಂದ ಹುಟ್ಟಿದ್ದು ಎಂದು ಭಾಗವತದಲ್ಲಿಯೇ ಇದೆಯಲ್ಲ ಎಂದು. ದೇವರ ರೂಪಗಳಲ್ಲಿ ಭೇದವಿದೆ ಎಂದು ತಿಳಿದರೆ, ದೇವರಿಗೆ ಪ್ರಾಕೃತರೂಪವಿದೆ ಎಂದು ತಿಳಿದರೆ ತಮಸ್ಸಾಗುತ್ತದೆ ಎಂದು ಕಾಠಕೋಪನಿಷತ್ತು ಹೇಳುತ್ತದೆ. ಹೀಗೆ ಭಾಗವತ ಅರ್ಥವಾಗದೇ ನಿಂತಾಗ, ತಪ್ಪು ದಾರಿಯಲ್ಲಿ ನಡೆಯುವ ಪ್ರಸಂಗ ಬಂದಾಗ ಗೆಳೆಯನಂತೆ ಜೊತೆಯಲ್ಲಿ ಬಂದು ಸರಿದಾರಿಯಲ್ಲಿ ನಡೆಸುವ ನಮ್ಮ ಗೆಳೆಯ ಭಾಗವತತಾತ್ಪರ್ಯದ ರೂಪದಲ್ಲಿರುವ ಶ್ರೀಮದಾಚಾರ್ಯರು.
ಶ್ರೀಮದ್ ಭಾಗವತಮ್ — 73 — ಜೀವಬ್ರಹ್ಮಭೇದವೇ ಬ್ರಹ್ಮಸೂತ್ರಗಳ ಸಿದ್ಧಾಂತ
ಮಹಾಭಾರತ ಪುರಾಣಗಳ ವಚನಗಳಿಂದಲೇ ಭೇದವೇ ಅವುಗಳ ಸಿದ್ಧಾಂತ ಎನ್ನುವದನ್ನು ಸಮರ್ಥಿಸಿ ಸಮಸ್ತ ಶಾಸ್ತ್ರಾರ್ಥನಿರ್ಣಾಯಕವಾದ ಬ್ರಹ್ಮಸೂತ್ರಗಳಲ್ಲಿಯೂ ಶ್ರೀ ವೇದವ್ಯಾಸದೇವರು ಜೀವಬ್ರಹ್ಮಭೇದವನ್ನೇ ಸಮರ್ಥಿಸಿದ್ದಾರೆ ಎಂದು ಆಚಾರ್ಯರು ತೋರಿಸಿಕೊಡುತ್ತಾರೆ. ಜೀವಬ್ರಹ್ಮಭೇದವೇ ಶಾಸ್ತ್ರಗಳ ಸಿದ್ಧಾಂತವಾಗಿದ್ದರೆ, ಅಲ್ಲಲ್ಲಿ, ಅಭೇದ ತೋರುವಂತಹ ವಾಕ್ಯಗಳು ಯಾಕಾಗಿ ಇವೆ ಎಂಬ ಪ್ರಶ್ನೆಗೆ ಶಾಸ್ತ್ರವೇ ನೀಡಿರುವ ಉತ್ತರದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 72 — ಜೀವಬ್ರಹ್ಮಭೇದವೇ ವೇದಗಳ ಸಿದ್ಧಾಂತ
ವೇದಗಳಲ್ಲಿ ತತ್ವಮಸಿ, ಅಹಂ ಬ್ರಹ್ಮಾಸ್ಮಿ ಇತ್ಯಾದಿಯಾಗಿ ಅಭೇದವನ್ನು ಹೇಳಿದ್ದಾರಲ್ಲ ಎಂದು ಪ್ರಶ್ನೆ ಮಾಡಿದರೆ, ಆ ವಾಕ್ಯಗಳು ಅಭೇದವನ್ನು ತಿಳಿಸುವದಿಲ್ಲ ಎನ್ನುವದನ್ನು ತೋರಿಸಲೋಸುಗ, ವೇದಗಳು ಅತ್ಯಂತ ಸ್ಪಷ್ಟವಾಗಿ ಭೇದವನ್ನೇ ಪ್ರತಿಪಾದಿಸುತ್ತವೆ ಎಂದು ಆಚಾರ್ಯರು ವೇದವಾಕ್ಯಗಳಿಂದಲೇ ಪ್ರತಿಪಾದಿಸುತ್ತಾರೆ. ಆ ವಾಕ್ಯಗಳ ಅರ್ಥಾನುಸಂಧಾನ ಇಲ್ಲಿದೆ. ಒಂಭತ್ತು ವೇದಮಂತ್ರಗಳ ಅರ್ಥವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 71 — ಜೀವಬ್ರಹ್ಮಭೇದವೇ ಭಾಗವತದ ಸಿದ್ಧಾಂತ
“ದೃಷ್ಟ ಏವಾsತ್ಮನೀಶ್ವರೇ” ಎಂಬ ಮಾತಿಗೆ ಜೀವನನ್ನೇ ಪರಬ್ರಹ್ಮ ಎಂದು ತಿಳಿದಾಗ ಮತ್ತು ಜೀವನಲ್ಲಿ ಪರಬ್ರಹ್ಮನನ್ನು ತಿಳಿದಾಗ ಎಂಬ ಎರಡೂ ಅರ್ಥವನ್ನು ಹೇಳಲು ಸಾಧ್ಯ. ಹಾಗಾದರೆ ಇಲ್ಲಿ ಜೀವಬ್ರಹ್ಮೈಕ್ಯದ ಅರ್ಥವನ್ನು ಸ್ವೀಕರಿಸಬೇಕೋ, ಜೀವಬ್ರಹ್ಮಭೇದದ ಅರ್ಥವನ್ನು ಸ್ವೀಕರಿಸಬೇಕೋ ಎನ್ನುವ ಪ್ರಶ್ನೆಯನ್ನು ಕೈಗೆತ್ತಿಕೊಂಡು ಚರ್ಚೆಯನ್ನು ಆರಂಭಿಸುವ ಶ್ರೀ ಭಗವತ್ಪಾದರು ಭೇದದ ಅರ್ಥವನ್ನೇ ಸ್ವೀಕರಸಿಬೇಕು ಎನ್ನುವದನ್ನು ಸರಳವಾದ ಕ್ರಮದಲ್ಲಿ ಆರ್ಥ ಮಾಡಿಸುತ್ತಾರೆ.
ಶ್ರೀಮದ್ ಭಾಗವತಮ್ — 70 — ನಮ್ಮ ನೈವೇದ್ಯ ದೇವರು ಸ್ವೀಕರಿಸುತ್ತಾನೆಯೇ?
ನಾವು ದೇವರಿಗೆ ನೈವೇದ್ಯ ಮಾಡುತ್ತೇವೆ. ಅದನ್ನು ದೇವರು ಸ್ವೀಕರಿಸುತ್ತಾನೆಯೋ ಇಲ್ಲವೋ? ಸ್ವೀಕರಿಸುವದಿಲ್ಲ ಎಂದಾದಲ್ಲಿ, ನಾವೇಕೆ ನೈವೇದ್ಯ ಮಾಡಬೇಕು ಮತ್ತು ನೈವೇದ್ಯ ಮಾಡಿದ್ದು ಪ್ರಸಾದ ಎಂದು ಹೇಗಾಗಲು ಸಾಧ್ಯ? ಸ್ವೀಕರಿಸುತ್ತಾನೆ ಎಂದರೆ, ಈ ಪ್ರಾಕೃತ ಪದಾರ್ಥಗಳನ್ನು ದೇವರು ಉಣ್ಣುತ್ತಾನೆ ಎಂದಾಯಿತು. ಅಂದ ಮೇಲೆ ಅದರಿಂದ ಸುಖ ದುಃಖಗಳಿವೆ ಎಂದಾಯಿತು. ದುಃಖವಿಲ್ಲ ಕೇವಲ ಸುಖವಿದೆ ಎಂದರೂ, ದೇವರಿಗೆ ಇದರಿಂದ ಸುಖ ‘ಉಂಟಾಯಿತು’ ಹೊಸದಾಗಿ ಉತ್ಪನ್ನವಾಯಿತು ಎಂದಾಯಿತು. ಅಂದರೆ ದೇವರಿಗೂ ನಮ್ಮಂತೆ ಹೊಸದಾಗಿ ಸುಖ ನಿರ್ಮಾಣವಾಗುತ್ತದೆ ಎಂದಾಯಿತು. ದೇವರಲ್ಲಿ ಹೊಸದಾಗಿ ಸುಖ ಬಂದರೆ ಅವನು ವಸ್ತು, ವಾಸ್ತವ ಹೇಗಾದ? ಅವನು ಅನಾದಿಕಾಲದಿಂದಲೂ ಒಂದೇ ರೀತಿಯಲ್ಲಿ ಇರುವವನಲ್ಲವೇ ?
ಶರಣಾಗತಿಯ ಮಾಹಾತ್ಮ್ಯ
ಮಾಡಿದ ದುಷ್ಕರ್ಮಕ್ಕೆ ದುಷ್ಫಲ ತಪ್ಪಿದ್ದಲ್ಲ, ಬಂದೇ ಬರುತ್ತದೆ ಎಂದಾದ ಬಳಿಕ ದೇವರಿಗೆ ಶರಣಾಗಿ ಉಪಯೋಗವೇನು ಎಂಬ ಪ್ರಶ್ನೆಗೆ ಶ್ರೀ ಕನಕದಾಸಾರ್ಯರು ಕರ್ಣನ ದೃಷ್ಟಾಂತದ ಮೂಲಕ ನೀಡಿದ ದಿವ್ಯವಾದ ಉತ್ತರದ ವಿವರಣೆ ಇಲ್ಲಿದೆ.
ದೇವರೇಕೆ ನಮಗೆ ನೇರವಾಗಿ ಉಪದೇಶಿಸುವದಿಲ್ಲ?
ರಾಮಚಂದ್ರನ ಜೊತೆಯಲ್ಲಿದ್ದರೂ ಸುಗ್ರೀವ ಯಾಕಾಗಿ ಅಣ್ಣನ ಹೆಂಡತಿಯನ್ನು ಅಪಹರಿಸುವಂತಹ ತಪ್ಪು ಮಾಡಿದ? ದೇವರು ತಡೆಯಬಹುದಿತ್ತಲ್ಲವೇ? ನಮಗೂ ಸಹ ದೇವರು, ಗುರುಗಳು ನೇರವಾಗಿ ಉಪದೇಶ ಮಾಡಿ ಸಂಸಾರದಿಂದ ಉದ್ದಾರ ಮಾಡಿಬಿಡಬಹುದಲ್ಲವೇ ಎಂಬ ಪ್ರಶ್ನೆಗೆ ಶಾಸ್ತ್ರ ನೀಡಿದ ಉತ್ತರದ ವಿವರಣೆ ಇಲ್ಲಿದೆ.
ಪೂತನಾ ಸಂಹಾರ
ಪೂತನೆಯ ಸ್ವರೂಪ, ಅವಳು ಶ್ರೀಕೃಷ್ಣನನ್ನು ಕೊಲ್ಲಲು ಬಂದದ್ದು, ಅವಳಲ್ಲಿದ್ದ ತಾಟಕೆಯನ್ನು ನಿಗ್ರಹಿಸಿ, ಊರ್ವಶಿಯನ್ನು ಭಗವಂತ ಅನುಗ್ರಹಿಸಿದ ಕಥೆಯ ವಿವರಣೆ ಇಲ್ಲಿದೆ.
ವಸುದೇವ ದೇವಕಿಯರ ಎತ್ತರ
ವಸುದೇವ ದೇವಕಿಯರ ಕಾಲಿಗೆ ಸಂಕೋಲೆಗಳನ್ನು ಹಾಕಿ, ಅವರ ಆರು ಮಕ್ಕಳನ್ನು ಕೊಂದು, ಈ ಹೆಣ್ಣು ಮಗುವನ್ನಾದರೂ ಬಿಡು ಎಂದು ಗೋಗರೆದರೂ ದುರ್ಗೆಯನ್ನು ಕೊಲ್ಲಲು ಪ್ರಯತ್ನಿಸಿ ವಿಫಲನಾದ ನಂತರ ಕಂಸ ವಸುದೇವ ದೇವಕಿಯರನ್ನು ಕರೆಯಿಸಿ ಕ್ಷಮೆ ಬೇಡುತ್ತಾನೆ. ಆ ಪರಿ ಅಪರಾಧ ಅವನು ಮಾಡಿದ್ದರೂ ಅವನ ಮೇಲೆ ಸಿಟ್ಟಾಗದೇ ವಸುದೇವ ದೇವಕಿಯರು ಆಡುವ ಮಾತು ಅವರು ಎಂತಹ ಭಾಗವತೋತ್ತಮರು ಎನ್ನುವದನ್ನು ತೋರಿಕೊಡುತ್ತದೆ. ಆ ಕಥೆಯ ಚಿಂತನೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 69 — ದೇವರ ಯಶಸ್ಸು
ಕಲಿಯುಗದ ಸಮಸ್ತ ದುಷ್ಟ ಪ್ರಭಾವವನ್ನೂ ನಾಶ ಮಾಡುವ ದೇವರ ಯಶಸ್ಸನ್ನು ಹೇಳಿ ಎನ್ನುವ ಶೌನಕರ ನಾಲ್ಕನೆಯ ಪ್ರಶ್ನೆಗೆ ಸೂತಾಚಾರ್ಯರು ನೀಡಿದ ಉತ್ತರವೇ ಪರಮಾದ್ಭುತ. ಕೇಳಿಯೇ ಆನಂದಿಸಬೇಕಾದ ಭಾಗವಿದು.
ಶ್ರೀಮದ್ ಭಾಗವತಮ್ — 68 — ಸತ್ವಗುಣವೇ ಏಕೆ ಉತ್ತಮ
ಸತ್ವಗುಣ, ರಜೋಗುಣ, ತಮೋಗುಣ ಮೂರೂಗುಣಗಳು ದೇವರಿಂದಲೇ ಸೃಷ್ಟಿಯಾದದ್ದು. ಅದರಲ್ಲಿ ಸತ್ವಗುಣ ಮಾತ್ರ ಏಕೆ ಶ್ರೇಷ್ಠ ಎನ್ನುವ ಪ್ರಶ್ನೆಗೆ ಭಾಗವತ ದಿವ್ಯವಾದ ಉತ್ತರವನ್ನು — ಸತ್ವಗುಣದಿಂದಲೇ ದೇವರ ಸಾಕ್ಷಾತ್ಕಾರ ಎಂಬ ಉತ್ತರವನ್ನು — ನೀಡುತ್ತದೆ. ಆ ನಂತರ ಜಗತ್ತಿನ ಎಲ್ಲವೂ ಸಾತ್ವಿಕ, ರಾಜಸ, ತಾಮಸ ಎಂಬ ವಿಭಾಗದಲ್ಲಿ ಸೇರಿದೆ ಎಂದು ಪ್ರತಿಪಾದಿಸುತ್ತ, ದೇವರ ಪೂಜೆಯಲ್ಲಿಯೂ ಈ ವಿಭಾಗವಿದೆ ಎಂದು ಭಾಗವತ ಪ್ರತಿಪಾದಿಸುತ್ತದೆ. ಯಾವ ರೀತಿ ನಮ್ಮಿಂದ ಭಗವದಾರಾಧನೆ ನಡೆಯಬೇಕು ಎನ್ನುವದದನ್ನು ಅರ್ಥ ಮಾಡಿಸುವ ಭಾಗ.
ಗುರ್ವನುಗ್ರಹ
ಈಗ ನಡೆಯುತ್ತಿರುವ ಶ್ರೀಮದ್ ಭಾಗವತದ ಪ್ರವಚನದ ಮಾಲಿಕೆಯ ಮೇಲೆ ಶ್ರೀಮದ್ ವಾದಿರಾಜಗುರುಸಾರ್ವಭೌಮರ ಮತ್ತು ಶ್ರೀ ವಿದ್ಯಾವಾರಿಧಿತೀರ್ಥಗುರುವರೇಣ್ಯರ ಅನುಗ್ರಹದ ಸ್ಮರಣೆ.
ಶ್ರೀಮದ್ ಭಾಗವತಮ್ — 67 — ಭಕ್ತಿ ಅಭಿವ್ಯಕ್ತವಾಗಲು ಏನು ಮಾಡಬೇಕು
ಇಂತಹ ಬಟ್ಟೆಯನ್ನೇ ಏಕೆ ಹಾಕಬೇಕು, ಇಂತಹುದನ್ನು ಏಕೆ ತಿನ್ನಬಾರದು ಎಂದು ಇವತ್ತಿನ ಜನ ಕೇಳುವ ಪ್ರಶ್ನೆಗಳಿಗೆ ಶ್ರೀ ವೇದವ್ಯಾಸದೇವರೇ ಸಾಕ್ಷಾತ್ತಾಗಿ ನೀಡಿದ ಉತ್ತರ ಇಲ್ಲಿದೆ. ಶ್ರೇಯಸ್ಸನ್ನು ನಿಶ್ಚಿತವಾಗಿ ನೀಡುವ ಸಾಧನ ಭಕ್ತಿ. ಭಕ್ತಿ ಎಂದಿಗೂ ದುಷ್ಫಲ ನೀಡುವದಿಲ್ಲ, ವಿಫಲವಾಗುವದಿಲ್ಲ ಎನ್ನುವದನ್ನು ಹಿಂದೆ ನಿರೂಪಿಸಿದ ಸೂತಾಚಾರ್ಯರು, ಆ ಭಕ್ತಿ ನಮ್ಮಲ್ಲಿ ಹೇಗೆ ಬೆಳೆಯಲು ಸಾಧ್ಯ ಎನ್ನುವ ಮಹತ್ತ್ವದ ಪ್ರಶ್ನೆಗೆ ಉತ್ತರ ನೀಡುತ್ತಾರೆ.
ಶ್ರೀಪಾದರಾಜಮಠದ ಗುರುಪರಂಪರಾಸ್ತೋತ್ರ
ಶ್ರೀ ಶ್ರೀಪಾದರಾಜಸಂಸ್ಥಾನದ ಪರಂಪರೆಯಲ್ಲಿ ಬಂದಿರುವ ಪೀಠಾಧಿಪತಿಗಳ ಚರಮಶ್ಲೋಕಗಳ ಪಠಣ.
ಶ್ರೀಮದ್ ಭಾಗವತಮ್ — 66 — ಅಪರೋಕ್ಷ ಜ್ಞಾನ
ಭಕ್ತಿಯ ಫಲ ದೇವರ ಅಪರೋಕ್ಷ ಜ್ಞಾನ. ಆ ಸಾಕ್ಷಾತ್ಕಾರ ಯಾವ ರೀತಿಯಾಗಿ ಆಗುತ್ತದೆ, ಮತ್ತು ಅಪರೋಕ್ಷಜ್ಞಾನವಾದಾಗ ಏನೆಲ್ಲ ಪರಿಣಾಮಗಳುಂಟಾಗುತ್ತದೆ ಎನ್ನುವದನ್ನು ವಿವರಿಸುವ ಭಾಗ.
ಶ್ರೀಮದ್ ಭಾಗವತಮ್ — 65 — ಸಾತ್ವಿಕ ರಾಜಸ ತಾಮಸ ಕಾಮಕ್ರೋಧಾದಿಗಳು
ಕಾಮ-ಕ್ರೋಧ-ಲೋಭ-ಮೋಹ-ಮದ-ಮಾತ್ಸರ್ಯ ಎಂಬ ಆರು ಗುಣಗಳೂ ಹೌದು, ದೋಷಗಳೂ ಹೌದು. ಅವು ಕೇವಲ ಅರಿಷಡ್ವರ್ಗವಲ್ಲ, ಮಿತ್ರಷಡ್ವರ್ಗವೂ ಹೌದು. ಹರಿಗುರುಸೇವೆಯಿಂದ ದೊರೆತ ದೇವರ ಭಕ್ತಿ ನಮ್ಮಲ್ಲಿರುವ ರಾಜಸ-ತಾಮಸ ಷಡ್ವರ್ಗಗಳನ್ನು ನಾಶ ಮಾಡುತ್ತದೆ. ಶ್ರೀ ವಾದಿರಾಜಗುರುಸಾರ್ವಭೌಮರು ರುಗ್ಮಿಣೀಶವಿಜಯದಲ್ಲಿ ನಿರ್ಣಯಿಸಿದ ಕ್ರಮದಲ್ಲಿ ಇಲ್ಲಿ ಮೂರೂ ತರಹದ ಗುಣಗಳ ವಿಶ್ಲೇಷಣೆಯಿದೆ.
ಶ್ರೀಮದ್ ಭಾಗವತಮ್ — 64 — ಮಹಾನುಭಾವರ ಸೇವೆಯ ಫಲ
ಭಗವಂತನ ಸಾಕ್ಷಾತ್ಕಾರದಲ್ಲಿ ಮಹಾನುಭಾವರ ಸೇವೆಯ ಪಾತ್ರವೇನು ಎನ್ನುವದನ್ನು ತಿಳಿಸುವ ಶ್ರೀ ವೇದವ್ಯಾಸದೇವರ ಪರಮಮಂಗಲ ವಚನದ ಅರ್ಥಾನುಸಂಧಾನ ಇಲ್ಲಿದೆ.
ಶ್ರೀಮದ್ ಭಾಗವತಮ್ — 63 — ಕರ್ಮನಾಶಕ್ಕೆ ಸುಲಭೋಪಾಯ
ತತ್ವ ಎಂದರೇನು ಎಂದು ನಿರೂಪಣೆ ಮಾಡಿದ ಸೂತಾಚಾರ್ಯರು ಆ ತತ್ವದ ಸಾಕ್ಷಾತ್ಕಾರ ಅರ್ಥಾತ್ ಹರಿಯ ದರ್ಶನ ಆಗುವ ಬಗೆಯನ್ನು ನಿರೂಪಿಸಲು ಆರಂಭಿಸುತ್ತಾರೆ. ನಮ್ಮ ಸಾಧನಮಾರ್ಗದಲ್ಲಿ ಅತೀ ದೊಡ್ಡ ತೊಡಕು ನಮ್ಮ ಕರ್ಮಗಳು. ಆ ಕರ್ಮಗಳು ಗಂಟುಗಳ ಗೋಜಲಿನಲ್ಲಿ ಬಿದ್ದ ನಾವು ಅದರಿಂದ ಪಾರಾಗುವ ಅತ್ಯಂತ ಸುಲಭದ ಉಪಾಯವನ್ನು ನಿರೂಪಿಸುತ್ತಾರೆ. ಅ ಪವಿತ್ರ ವಚನಗಳ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 62 — ದೇವರೆಂಬ ಅದ್ಭುತ ತತ್ವ
ದೇವರನ್ನು ಜ್ಞಾನ-ಆನಂದಶರೀರ ಎನ್ನುತ್ತೇವೆ. ಹಾಗಂದರೇನು? ಮುಕ್ತರೂ, ಲಕ್ಷ್ಮಿಯೂ ಜ್ಞಾನಾನಂದಶರೀರವನ್ನೇ ಹೊಂದಿದ್ದಾರೆ, ಅವರಿಗೂ ದೇವರಿಗೂ ವ್ಯತ್ಯಾಸವೇನು? ವಸ್ತುವಿದ್ದರೆ ವಸ್ತುವಿನ ಜ್ಞಾನ ಬರಲು ಸಾಧ್ಯ. ಮತ್ತೊಬ್ಬರಿದ್ದರೆ ಅವರಿಂದ ಆನಂದ ಉಂಟಾಗಲು ಸಾಧ್ಯ. ಹೀಗೆ ಜ್ಞಾನ ಅನಂದಗಳು ವಸ್ತುವಿನ ಅಧೀನ, ದೇವರು ಜ್ಞಾನಾನಂದಶರೀರರಾನದರೆ ಅವನು ಪರಾಧೀನನಾಗಲೇಬೇಕಲ್ಲವೇ? ಎಂಬ ಪ್ರಶ್ನೆಗಳಿಗೆ ಶ್ರೀ ವೇದವ್ಯಾಸದೇವರು ನೀಡಿರುವ ಉತ್ತರಗಳನ್ನು ಭಗವತ್ಪಾದರು ಅದ್ಭುತವಾದ ಕ್ರಮದಲ್ಲಿ ವಿವರಿಸಿ ನಮ್ಮ ದೇವರು ಅದೆಷ್ಟು ಅದ್ಭುತ ಎನ್ನುವದನ್ನು ಮನಗಾಣಿಸುತ್ತಾರೆ. ಜೀವಚೈತನ್ಯವನ್ನು ಅನಂದದಲ್ಲಿ ಮುಳುಗಿಸುವ ಈ ಪವಿತ್ರ ತತ್ವಗಳ ಅರ್ಥಾನುಸಂಧಾನ ಇಲ್ಲಿದೆ.
ನಿನ್ನ ಬಂಧಕ ಶಕ್ತಿಗೆ ನಮೋ ಎಂಬೆ
ದೇವರು ಜೀವರನ್ನು ಯಾವ ರೀತಿ ಸಂಸಾರದಲ್ಲಿ ಬಂಧಿಸಿದ್ದಾನೆ ಎನ್ನುವದರ ಒಂದು ವಿವರಣೆ.
ಶ್ರೀಮದ್ ಭಾಗವತಮ್ — 61 — ಧರ್ಮಾರ್ಥಕಾಮಗಳ ಪ್ರಯೋಜನ
ನಿಶ್ಚಿತವಾಗಿ ಶ್ರೇಯಸ್ಸನ್ನು ಕರುಣಿಸುವ ಸಾಧನ, ಭಕ್ತಿ ಎಂದು ಶ್ರೀ ಸೂತಾಚಾರ್ಯರು ಹೇಳಿದರು. ಆದರೆ ವೇದಗಳಲ್ಲಿ “ಯಜ್ಞೇನ ದಾನೇನ ತಪಸಾ ಅನಾಶಕೇನ” ಎಂದು ಯಜ್ಞಾದಿಗಳಿಂದ ಶ್ರೇಯಸ್ಸುಂಟಾಗುತ್ತದೆ ಎಂದು ಹೇಳಿದ್ದಾರೆ, ವಿರೋಧವುಂಟಾಯಿತಲ್ಲ ಎಂಬ ಆಕ್ಷೇಪಕ್ಕೆ ಸೂತಾಚಾರ್ಯರು ಉತ್ತರ ನೀಡುತ್ತ ಧರ್ಮ-ಅರ್ಥ-ಕಾಮಗಳ ನಿಖರ ಪ್ರಯೋಜನವನ್ನು ತಿಳಿಸಿ ಹೇಳುತ್ತಾರೆ. ಕಡೆಯಲ್ಲಿ ದೇವರ ಕುರಿತು ತಿಳಿಯಬೇಕೆಂಬ ಹಂಬಲವಿಲ್ಲದೆ ಮಾಡುವ ಸಕಲ ಕರ್ಮಗಳೂ ವ್ಯರ್ಥ ಎಂಬ ಶಾಸ್ತ್ರದ ನಿರ್ಣಯವನ್ನು ಅದ್ಭುತವಾದ ಕ್ರಮದಲ್ಲಿ ನಿರೂಪಿಸುತ್ತಾರೆ. ಆ ಪವಿತ್ರ ವಚನಗಳ ಅರ್ಥಾನುಸಂಧಾನ ಇಲ್ಲಿದೆ.
ಶ್ರೀಮದ್ ಭಾಗವತಮ್ — 60 — ಭಕ್ತಿ ಹೇಗಿರಬೇಕು
ಎಲ್ಲ ಶಾಸ್ತ್ರಗಳನ್ನು ಅಧ್ಯಯನ ಮಾಡಿ ಶ್ರೀಮದ್ ಭಾಗವತವನ್ನು ಅಧ್ಯಯನ ಮಾಡದೇ ಇದ್ದಲ್ಲಿ ಮನುಷ್ಯ ಏನು ಕಳೆದುಕೊಳ್ಳುತ್ತಾನೆ ಎನ್ನುವದನ್ನು ಸೂತಾಚಾರ್ಯರು ನಮಗಿಲ್ಲಿ ಮನದಟ್ಟು ಮಾಡಿಸುತ್ತ, ಸಮಗ್ರ ಶಾಸ್ತ್ರಪ್ರಪಂಚದ ರಹಸ್ಯತತ್ವವನ್ನು ತಿಳಿಸಲಾರಂಭಿಸುತ್ತಾರೆ.
ಶ್ರೀಮದ್ ಭಾಗವತಮ್ — 59 — ಶುಕಾಚಾರ್ಯರ ಕಾರುಣ್ಯ
ದೇವರನ್ನು ತಿಳಿಯಲು ವೇದಾದಿಗಳು ಅತ್ಯವಶ್ಯಕ, ಅಂದಮೇಲೆ ದೇವರಿಗೆ ತಾನಾಗಿ ನಮಗೆ ತೋರಿಕೊಳ್ಳಲು ಸಾಧ್ಯವಿಲ್ಲದಂತಾಯಿತು, ಆ ದೋಷ ದೇವರಲ್ಲಿದೆಯಲ್ಲವೇ? ಎಂಬ ಪ್ರಶ್ನೆಗೆ ಉತ್ತರವನ್ನು ಆರಂಭಿಸುವ ಸೂತಾಚಾರ್ಯರು, ಭಾಗವತದ ಮಹಾಮಹಾತ್ಮ್ಯವನ್ನು, ಅದನ್ನು ನೀಡಿದ ಶುಕಾಚಾರ್ಯರ ಅಪಾರ ಕಾರುಣ್ಯವನ್ನು ಅದ್ಭುತವಾದ ಕ್ರಮದಲ್ಲಿ ಕೊಂಡಾಡುತ್ತಾರೆ. ಆ ಪವಿತ್ರ ವಚನಗಳ ಅರ್ಥಾನುಸಂಧಾನ ಇಲ್ಲಿದೆ.
ಶ್ರೀಮದ್ ಭಾಗವತಮ್ — 58 — ವೇದವ್ಯಾಸದೇವರ ವಿಡಂಬನೆ
ಶುಕಾಚಾರ್ಯರು ಸಂನ್ಯಾಸ ಸ್ವೀಕರಿಸುವ ಸಂದರ್ಭದಲ್ಲಿ ವೇದವ್ಯಾಸದೇವರು ಧೈರ್ಯ ಕಳೆದುಕೊಂಡ ಒಬ್ಬ ಸಾಮಾನ್ಯ ಮನುಷ್ಯ ತಂದೆಯಂತೆ ವಿಡಂಬನೆ ಮಾಡುತ್ತಾರೆ. ಭಾಗವತದಲ್ಲಿ “ದ್ವೈಪಾಯನೋ ವಿರಹಕಾತರಃ” ಎಂಬ ಶಬ್ದವಿದೆ. ಮಗನ ವಿರಹದಿಂದ ಅಧೀರರಾಗಿ ಎಂದು ಅದರ ಮೇಲ್ನೋಟದ ಅರ್ಥ. ಆದರೆ, ಆಚಾರ್ಯರು “ಅಧೀರರಾದರು” ಎಂದು ಅರ್ಥ ಮಾಡಬಾರದು, “ಅಧೀರರಾದಂತೆ ನಟಿಸಿದರು” ಎಂದು ಅರ್ಥವನ್ನು ಮಾಡಬೇಕು ಎಂದು ಪ್ರತಿಪಾದಿಸುತ್ತಾರೆ. ಭಾಗವತದ ಶಬ್ದಗಳಲ್ಲಿ ತೋರದ ಈ ಅರ್ಥವನ್ನು ಹೇಗೆ ಗ್ರಹಿಸಬಹುದು ಎಂಬ ಪ್ರಶ್ನೆಗೆ ಅದ್ಭುತವಾದ ಎರಡು ಉತ್ತರಗಳನ್ನು ನೀಡಿದ್ದಾರೆ. ಆಚಾರ್ಯರ ತತ್ವನಿರ್ಣಯ ಕೌಶಲ ಎಷ್ಟು ಅದ್ಭುತವಾದದ್ದು ಎಂದು ನಮಗೆ ಮನಗಾಣಿಸುವ ಭಾಗ.
ಶ್ರೀಮದ್ ಭಾಗವತಮ್ — 57 — ಶುಕಾಚಾರ್ಯರ ವೈರಾಗ್ಯ
ಶ್ರೀಮದ್ ಭಾಗವತದ ಶ್ರವಣದ ಫಲವಾಗಿ ಶ್ರೇಷ್ಠ ವೈರಾಗ್ಯವನ್ನು ಪಡೆದ ಶುಕಾಚಾರ್ಯರು ಭಗವಂತನ ಪ್ರೀತ್ಯರ್ಥವಾಗಿ ಸಂನ್ಯಾಸಾಶ್ರಮವನ್ನು ಸ್ವೀಕರಿಸುತ್ತಾರೆ. ಈ ಸಂದರ್ಭದಲ್ಲಿನ “ಯಂ ಪ್ರವ್ರಜಂತಮನುಪೇತಮ್” ಎನ್ನುವ ಶಬ್ದಗಳಿಗೆ ಶ್ರೀಮದಾಚಾರ್ಯರು ತಿಳಿಸಿರುವ ಅರ್ಥಗಳು ಹೇಗೆ ವೇದ, ಪುರಾಣಗಳಿಗೆ ಸಮ್ಮತವಾಗಿವೆ, ಶ್ರೀ ವೇದವ್ಯಾಸದೇವರಿಗೆ ಸಮ್ಮತವಾಗಿವೆ ಎನ್ನುವದನ್ನು ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ಪ್ರತಿಪಾದಿಸುತ್ತಾರೆ. ಆ ವಚನಗಳ ಅರ್ಥಾನುಸಂಧಾನ ಇಲ್ಲಿದೆ.
ಶ್ರೀಮದ್ ಭಾಗವತಮ್ — 56 — ಪುರಾಣದಲ್ಲಿ ಬರುವ ಎಲ್ಲವೂ ವೇದವ್ಯಾಸದೇವರ ವಾಕ್ಯಗಳೇ?
ಶೌನಕರ ಷಟ್-ಪ್ರಶ್ನೆಗಳಿಗೆ ಉತ್ತರವಾಗಿ ಭಾಗವತವೆಂಬ ಷಟ್-ಪ್ರಶ್ನೋಪನಿಷತ್ತು ಆರಂಭವಾಗುತ್ತದೆ. ಮೊಟ್ಟ ಮೊದಲ ಸೂತ ಉವಾಚ ಎಂಬ ಶಬ್ದದ ಅಭಿಪ್ರಾಯವನ್ನು ತಿಳಿಸುವಾಗ ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ನಾವು ಪುರಾಣಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಮೊಟ್ಟಮೊದಲಿಗೆ ಮೂಡುವ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ. ಆ ಮಾತಿನ ವಿವರಣೆ ಇಲ್ಲಿದೆ.
ಪ್ರಥಮಸ್ಕಂಧ ಪ್ರಥಮಾಧ್ಯಾಯ
ಶ್ರೀಮದ್ ಭಾಗವತದ ಮೊದಲನೆಯ ಸ್ಕಂಧದ ಮೊದಲನೆಯ ಅಧ್ಯಾಯದ ಪಾರಾಯಣ.
ಶ್ರೀಮದ್ ಭಾಗವತಮ್ — 55 — ಶೌನಕರ ದೀಕ್ಷೆ
ದೇವರನ್ನು ತಿಳಿಯಬೇಕು ಎಂಬ ಅಪೇಕ್ಷೆ ಎಲ್ಲರಿಗೂ ಇರುತ್ತದೆ. ಆದರೆ ಇದೇ ಜನ್ಮವನ್ನು ಪೂರ್ಣ ಉಪಯೋಗಿಸಿಕೊಂಡು ಅಂತರ್ಯಾಮಿಯ ಜ್ಞಾನವನ್ನು ಪಡೆಯಲು ಪರಮಾದ್ಭುತವಾದ ದೀಕ್ಷೆ ಬೇಕಾಗುತ್ತದೆ. ಆ ದೀಕ್ಷೆ ಹೇಗಿರಬೇಕು, ಜೀವನದ ಪ್ರತಿಯೊಂದು ವೈರುದ್ಧ್ಯದಲ್ಲಿ ಅದನ್ನು ಹೇಗೆ ಉಳಿಸಿಕೊಳ್ಳಬೇಕು ಎನ್ನುವದಕ್ಕೆ ಒಂದು ಜ್ವಲಂತ ದೃಷ್ಟಾಂತ ಶೌನಕ ಮಹರ್ಷಿಗಳು. ಸಾಧನೆ ಮಾಡಬೇಕೆಂಬ ಜೀವಕ್ಕೆ ಹುಮ್ಮಸ್ಸು ನೀಡುವ ಆ ಮಹಾಮಹಿಮರ ದೀಕ್ಷೆಯ ಕುರಿತ ವಿವರ ಇಲ್ಲಿದೆ.
ಶ್ರೀಮದ್ ಭಾಗವತಮ್ — 54 — ವಿಷ್ಣುಸ್ಮರಣೆಯ ರಹಸ್ಯಗಳು
ನಾವು ಪ್ರತಿನಿತ್ಯವೂ ವಿಷ್ಣುಸ್ಮರಣೆ ಮಾಡುತ್ತಲೇ ಇರುತ್ತೇವೆ. ಆದರೂ ಸಂಸಾರ ಕಳೆಯುತ್ತಿಲ್ಲ. ಹಾಗಾದರೆ ಸಂಸಾರವನ್ನು ಕಳೆಯುವ ವಿಷ್ಣುಸ್ಮರಣೆ ಯಾವ ರೀತಿ ಇರುತ್ತದೆ, ಈಗ ಮಾಡುತ್ತಿರುವ ವಿಷ್ಣುಸ್ಮರಣೆಯಿಂದ ಏನಾಗುತ್ತದೆ ಎಂಬೆಲ್ಲ ವಿಷಯಗಳನ್ನು ನಮ್ಮ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ಅದ್ಭುತವಾಗಿ ಅರ್ಥ ಮಾಡಿಸುತ್ತಾರೆ.
ಶ್ರೀಮದ್ ಭಾಗವತಮ್ — 53 — ಮೊದಲ ಮೂರು ಪ್ರಶ್ನೆಗಳು
ಕಲಿಯುಗದ ಸಜ್ಜನರ ಮೇಲಿನ ಅಪಾರ ಕೃಪೆಯಿಂದ ಅವರ ಉದ್ಧಾರಕ್ಕಾಗಿ ಶೌನಕಾದಿ ಮಹರ್ಷಿಗಳು ಸೂತಾಚಾರ್ಯರಿಗೆ ಆರು ಪ್ರಶ್ನೆಗಳನ್ನು ಮಾಡುತ್ತಾರೆ. ಅದರಲ್ಲಿ ಮೂರು ಪ್ರಶ್ನೆಗಳ ವಿವರಣೆ ಇಲ್ಲಿದೆ. ಆಯುಷ್ಮನ್ ಎನ್ನುವ ಶಬ್ದಕ್ಕೆ ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ತಿಳಿಸಿರುವ ಅರ್ಥದಿಂದ ಅವರಿಗಿರುವ ಟೀಕಾಗ್ರಂಥಗಳ ಜ್ಞಾನ ಎಷ್ಟು ಆಳ ಮತ್ತು ವಿಸ್ತಾರವಾದದ್ದು ಎನ್ನುವದು ತಿಳಿಯುತ್ತದೆ. ಆ ಮಹಾನುಭಾವರ ತಿಳಿಸಿದ ಅರ್ಥಗಳ ವಿವರಣೆ ಈ ಭಾಗದಲ್ಲಿದೆ.
ಶ್ರೀಮದ್ ಭಾಗವತಮ್ — 52 — ಸೂತಾಚಾರ್ಯರ ಜ್ಞಾನ
ಪುರಾಣಪ್ರಪಂಚದಲ್ಲಿ ಶ್ರೀ ಸೂತಾಚಾರ್ಯರನ್ನು ಮೇಲಿಂದಮೇಲೆ ಅನಘ ಎಂಬ ಶಬ್ದದಿಂದ ಕರೆಯಲಾಗಿದೆ. ಭಾಗವತದಲ್ಲಿಯೂ ಸಹ ಆ ಪ್ರಯೋಗವಿದೆ. ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ಆಚಾರ್ಯರು ತಿಳಿಸಿದ ದಿವ್ಯಪ್ರಮೇಯದ ಆಧಾರದ ಮೇಲೆ ಹೇಳಿದ ಅರ್ಥದ ವಿವರಣೆಯೊಂದಿಗೆ ಶ್ರೀ ಸೂತಾಚಾರ್ಯರ ಜ್ಞಾನದ ಕುರಿತ ಶ್ರೇಷ್ಠ ಚಿತ್ರಣ ಇಲ್ಲಿದೆ. ಆಚಾರ್ಯರಿಲ್ಲದಿದ್ದರೆ ಶ್ರೀಮದ್ ಭಾಗವತದ ಅಪಾರ್ಥವನ್ನು ಮಾಡಿಕೊಂಡು ಪ್ರಪಾತಕ್ಕೆ ಬೀಳುತ್ತಿದ್ದೇವು ಎಂಬ ಮಾತನ್ನು ನಮಗೆ ಮನದಟ್ಟು ಮಾಡಿಸುವ ಭಾಗ.
ಶ್ರೀಮದ್ ಭಾಗವತಮ್ — 51 — ಸೂತಾಚಾರ್ಯರ ಮಾಹಾತ್ಮ್ಯ
ಶೂದ್ರರಾದ ಸೂತಾಚಾರ್ಯರ ವೇಷ, ಭೂಷಣಗಳು ಹೇಗಿದ್ದವು, ಬ್ರಾಹ್ಮಣೋತ್ತಮರಾದ ಶೌನಕರು ಅವರಲ್ಲಿ ಯಾವ ರೀತಿ ಆದರ ಮಾಡುತ್ತಿದ್ದರು ಮಂತಾದವನ್ನು ತಿಳಿಸುವದರೊಂದಿಗೆ ಯಾವ ವರ್ಣಕ್ಕೆ ಯಾವ ರೀತಿ ಗೌರವ ನೀಡಬೇಕು ಎನ್ನುವದಕ್ಕೆ ಶ್ರೀಮದಾಚಾರ್ಯರು ತಾತ್ಪರ್ಯನಿರ್ಣಯದಲ್ಲಿ ನೀಡಿರುವ ನಿರ್ಣಯದೊಂದಿಗೆ. ಬ್ರಾಹ್ಮಣ-ಶೂದ್ರರ ಸಂಬಂಧ ಹೇಗಿದ್ದವು ಎನ್ನುವದನ್ನು ಅರಿಯಬಯಸುವ ಪ್ರತಿಯೊಬ್ಬರೂ ಕೇಳಬೇಕಾದ ಭಾಗ.
ಶ್ರೀಮದ್ ಭಾಗವತಮ್ — 50 — ಶೌನಕರ ಜ್ಞಾನಸತ್ರ
ಇವತ್ತಿಗೆ ನಮಗೆ ಭಾರತ-ಭಾಗವತ-ಪುರಾಣಾದಿಗಳು ದೊರೆತಿರುವದೇ ಶ್ರೀ ಶೌನಕಮಹರ್ಷಿಗಳು ಮಾಡಿದ ಮಹಾಜ್ಞಾನಸತ್ರದಿಂದ. ಕಲಿಯುಗ ಆರಂಭವಾಗುತ್ತಿದ್ದಂತೆಯೇ ಒಂದು ಸಾವಿರ ವರ್ಷಗಳ ದೀರ್ಘಕಾಲದ ಸತ್ರವನ್ನು ಆರಂಭಿಸುವ ಶೌನಕಾದಿ ಹತ್ತು ಸಾವಿರ ಋಷಿಗಳು ಸೂತಾಚಾರ್ಯರಿಂದ ಸಕಲ ಪುರಾಣವಾಙ್ಮಯವನ್ನು ಕೇಳುತ್ತಾರೆ. ಈ ಸಂದರ್ಭದಲ್ಲಿ ಶ್ರೀಮದಾಚಾರ್ಯರು ಮತ್ತು ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ತಿಳಿಸಿರುವ ಅತ್ಯಪೂರ್ವವಾದ ವಿಷಯಗಳ ನಿರೂಪಣೆ ಇಲ್ಲಿದೆ. ನಮಗೆ ಅಪಾರ ಜ್ಞಾನಸಂಪತ್ತನ್ನು ನೀಡಿದ ಶೌನಕರಿಗೆ ಯಾವ ರೀತಿ ಗೌರವ ಭಕ್ತಿಗಳನ್ನು ಸಲ್ಲಿಸಬೇಕು ಎನ್ನುವದರ ನಿರೂಪಣೆಯೊಂದಿಗೆ.
ಕಲಿಯುಗಕ್ಕೇಕೆ ಅವಕಾಶ?
ಕಲಿಯುಗದಲ್ಲಿ ಎಲ್ಲ ರೀತಿಯ ಅಪಚಾರಗಳು ಸಂಭವಿಸುತ್ತವೆ, ಕಲಿಯುಗ ನೀಚವಾದ ಯುಗ ಎಂದೆಲ್ಲ ನಾವು ಪ್ರತ್ಯಕ್ಷವಾಗಿ ಕಾಣುತ್ತಿದ್ದೇವೆ, ಶಾಸ್ತ್ರದಲ್ಲಿಯೂ ಕೇಳುತ್ತೇವೆ. ಅಂದ ಮೇಲೆ ಕಲಿಯುಗಕ್ಕೇ ಭಗವಂತ ಏಕೆ ಅವಕಾಶ ನೀಡಬೇಕು ಎಂಬ ಪ್ರಶ್ನೆಗೆ ನಾರದರು ನೀಡಿದ ಅದ್ಭುತವಾದ ಉತ್ತರದ ವಿವರಣೆ ಇಲ್ಲಿದೆ.
ಲಕ್ಷ್ಮಿಯ ಅನುಗ್ರಹಕ್ಕೆ ಯಾರು ಪಾತ್ರರು?
ಮಹಾಲಕ್ಷ್ಮೀದೇವಿ ಯಾರ ಮೇಲೆ ಅನುಗ್ರಹ ಮಾಡುತ್ತಾರೆ ಎನ್ನುವದನ್ನು ಸ್ವಯಂ ಲಕ್ಷ್ಮೀದೇವಿಯೇ ವೇದಗಳಲ್ಲಿ ತಿಳಿಸಿದ್ದಾರೆ. ಆ ಮಾತಿನ ಚಿಂತನೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 49 — ಧ್ಯಾನ-೨
ಎರಡನೆಯ ಮತ್ತು ಮೂರನೆಯ ಪದ್ಯದ ಅರ್ಥಾನುಸಂಧಾನವನ್ನು ನಮ್ಮ ಅಂತರ್ಯಾಮಿಗೆ ಒಪ್ಪಿಸಿಕೊಳ್ಳುವ ಕ್ರಮದ ವಿವರಣೆ.
ಶ್ರೀಮದ್ ಭಾಗವತಮ್ — 48 — ಪಿಬತ ಭಾಗವತಮ್
ಸ್ವಯಂ ಶ್ರೀ ವೇದವ್ಯಾಸದೇವರು ಶ್ರೀಮದ್ ಭಾಗವತದ ಮಾಹಾತ್ಮ್ಯವನ್ನು ತಿಳಿಸಿ ಹೇಳಿ, ಈ ಭಾಗವತದ ಫಲದ ರಸವನ್ನು ಮೋಕ್ಷವಾಗುವವರಿಗೆ ಆಸ್ವಾದಿಸಿ ಎಂದು ಆದೇಶ ಮಾಡುತ್ತಾರೆ. “ನಾವು ಮಾಡುವ ಭಾಗವತಾಧ್ಯಯನವನ್ನು ನೋಡುತ್ತ ಅನುಗ್ರಹ ಮಾಡುತ್ತಾರೆ” ಮುಂತಾದ ವಿಶೇಷಗಳನ್ನು ಶ್ರೀಮದಾಚಾರ್ಯರು ತಿಳಿಸಿ ಹೇಳುತ್ತಾರೆ. ವೇದವೃಕ್ಷದ ವರ್ಣನೆಯೊಂದಿಗೆ, ಭಗವಂತನ ಆದೇಶ, ಭಗವತ್ಪಾದರು ತಿಳಿಸಿದ ಮಹತ್ತರ ಪ್ರಮೇಯಗಳ ಚಿಂತನೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 47 — ದೇವರ ಸಾಕ್ಷಾತ್ಕಾರವೇ ಭಾಗವತದ ಫಲ
ಶ್ರೀಮದ್ ಭಾಗವತವನ್ನು ಕೇಳುವದರಿಂದ ಉಂಟಾಗುವ ಫಲವೇನು ಎನ್ನುವದನ್ನು “ಸದ್ಯೋ ಹೃದ್ಯವರುದ್ಧ್ಯತೇತ್ರ ಕೃತಿಭಿಃ ಶುಶ್ರೂಷುಭಿಸ್ತತ್-ಕ್ಷಣಾತ್” ಎಂದು ಶ್ರೀವೇದವ್ಯಾಸದೇವರು ಆದರದಿಂದ ತಿಳಿಸುತ್ತಾರೆ. ಭಗವಂತನ ಮಾತುಗಳಲ್ಲಿರುವ ದಿವ್ಯಾರ್ಥಗಳನ್ನು ಭಗವತ್ಪಾದರು ದಿವ್ಯವಾದ ಕ್ರಮದಲ್ಲಿ ವಿವರಿಸುತ್ತಾರೆ. ಅವುಗಳ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 46 — ಪುರುಷಾರ್ಥವಿಚಾರ
ಧರ್ಮ-ಅರ್ಥ-ಕಾಮ-ಮೋಕ್ಷಗಳಲ್ಲಿ ಎರಡು ವಿಧ. ಒಂದು ಗ್ರಾಹ್ಯ ಮತ್ತೊಂದು ಅಗ್ರಾಹ್ಯ. ಆ ಎರಡು ರೀತಿಯ ಪುರುಷಾರ್ಥಗಳ ಕುರಿತ ವಿವರಣೆ ಇಲ್ಲಿದೆ. ಗ್ರಾಹ್ಯವಾದ ಧರ್ಮ-ಮೋಕ್ಷಗಳಿಗಾಗಿ ಪ್ರವೃತ್ತವಾದ ಭಾಗವತ ಸಾಧನೋಪಯೋಗಿಯಾದ ಸಂಪತ್ತನ್ನು, ಹಾಗೂ ವಿಹಿತವಾದ ಅಪೇಕ್ಷೆಗಳನ್ನೂ ಪೂರೈಸುತ್ತದೆ ಎಂಬ ತತ್ವದ ನಿರೂಪಣೆಯೊಂದಿಗೆ.
ಶ್ರೀಮದ್ ಭಾಗವತಮ್ — 45 — ವಸ್ತು ಶಬ್ದದ ಅರ್ಥ
ಶ್ರೀಮದ್ ಭಾಗವತದಿಂದ ಪ್ರತಿಪಾದ್ಯವಾದದ್ದು “ವಾಸ್ತವ-ವಸ್ತು” ಎನ್ನುತ್ತಾರೆ ಶ್ರೀ ವೇದವ್ಯಾಸದೇವರು. ದೇವರನ್ನು ವಸ್ತು ಎನ್ನುವ ಶಬ್ದದಿಂದ ಕರೆಯಲು ಕಾರಣವೇನು, ಆ ಶಬ್ದದ ಅರ್ಥವೇನು ಎಂದು ತಿಳಿಸುತ್ತ ಭಗವತ್ಪಾದರು ಅಪೂರ್ವ ಪ್ರಮೇಯಗಳನ್ನು ನಮಗೆ ತಿಳಿಸುತ್ತಾರೆ. ಆ ತತ್ವಗಳ ಅರ್ಥಾನುಸಂಧಾನ ಇಲ್ಲಿದೆ. ಶಿವದಮ್, ತಾಪತ್ರಯೋನ್ಮೂಲನಂ ಎಂಬ ಶಬ್ದಗಳ ವಿವರಣೆಯೊಂದಿಗೆ.
ಶ್ರೀಮದ್ ಭಾಗವತಮ್ — 44 — ವಾಸ್ತವ ಶಬ್ದದ ಅರ್ಥ
ಶ್ರೀ ವೇದವ್ಯಾಸದೇವರು ವಾಸ್ತವ ಎಂಬ ಶಬ್ದದ ಮುಖಾಂತರ ತಿಳಿಸಿರುವ ಭಗವಂತನ “ಅಸ್ತಿತ್ವ” ಎಂಬ ಗುಣದ ಲಕ್ಷಣವನ್ನು ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ಪರಮಾದ್ಭುತವಾದ ಕ್ರಮದಲ್ಲಿ ವಿವರಿಸಿದ್ದಾರೆ. ಮನಸ್ಸನ್ನು ಏಕಾಗ್ರಗೊಳಿಸಿ ಶ್ರವಣ ಮಾಡಿ. ಜೀವಚೈತನ್ಯ ಪುಳಕಗೊಳ್ಳುವಂತಹ ಪರಮಾತ್ಮನ ಗುಣದ ಮಾಹಾತ್ಮ್ಯ ಇಲ್ಲಿದೆ.
ಶ್ರೀ ರಾಘವೇಂದ್ರಸ್ತೋತ್ರ — ಶ್ಲೋಕ — 5A
ದೇವಸ್ವಭಾವಃ. ಭವ್ಯಸ್ವರೂಪಃ ಎಂಬ ಶಬ್ದಗಳ ಅರ್ಥಾನುಸಂಧಾನ.
ಶ್ರೀಮದ್ ಭಾಗವತಮ್ — 43 — ಮಾತ್ಸರ್ಯವೆಂಬ ಮಹಾದೋಷ
ಭಾಗವತ ರಚನೆಯಾಗಿರುವದು ಮಾತ್ಸರ್ಯವಿಲ್ಲದ ಸಜ್ಜನರಿಗಾಗಿ ಎನ್ನುತ್ತಾರೆ ಶ್ರೀ ವೇದವ್ಯಾಸದೇವರು. ಸಕಲ ಸಜ್ಜನಿಕೆಯನ್ನು ತಿಂದು ಹಾಕುವ ಕೆಟ್ಟ ಕಿಚ್ಚಾದ ಈ ಮಾತ್ಸರ್ಯದ ಸ್ವರೂಪವನ್ನು ಭಗವತ್ಪಾದರು ತಿಳಿಸುತ್ತಾರೆ. ಈ ಮಾತ್ಸರ್ಯವನ್ನು ಪರಿಹಾರ ಮಾಡಿಕೊಳ್ಳುವ ಮಾರ್ಗದ ಚಿಂತನೆಯೊಂದಿಗೆ ಇದರ ನಿರೂಪಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 42 — ಸಜ್ಜನರ ಲಕ್ಷಣ
ಶ್ರೀಮದ್ ಭಾಗವತವನ್ನು ನಿರ್ಮತ್ಸರಿಗಳಾದ ಸಜ್ಜನರಿಗಾಗಿ ರಚನೆ ಮಾಡಿದ್ದೇನೆ ಎನ್ನುತ್ತಾರೆ ಶ್ರೀ ವೇದವ್ಯಾಸದೇವರು. ಅವರ ದೃಷ್ಟಿಯಲ್ಲಿ ಸಜ್ಜನರು ಎಂದರೆ ಯಾರು ಎಂಬ ಪ್ರಶ್ನೆಗೆ ತೃತೀಯಸ್ಕಂಧದ ಕಪಿಲ-ದೇವಹೂತಿ ಸಂವಾದದಲ್ಲಿ ಅವರೇ ತಿಳಿಸಿದ ಸಜ್ಜನರ ಲಕ್ಷಣವನ್ನು ಆಚಾರ್ಯರು ವಿವರಿಸುತ್ತಾರೆ. ಭಗವಂತನ-ಭಗವತ್ಪಾದರ ಆ ಮಂಗಳವಚನಗಳ ಅರ್ಥಾನುಸಂಧಾನ ಇಲ್ಲಿದೆ.
ಶ್ರೀಮದ್ ಭಾಗವತಮ್ — 41 — ಭಾಗವತ ಧರ್ಮ ಎಂದರೇನು
ಗೃಹಸ್ಥಧರ್ಮ, ಸಂನ್ಯಾಸಿಧರ್ಮ, ಸ್ತ್ರೀಧರ್ಮ, ಪುರುಷಧರ್ಮ ಎಂದೆಲ್ಲ ಇರುವಂತೆ ಭಾಗವತಧರ್ಮ ಎನ್ನುವದು ಪ್ರತ್ಯೇಕವಾದ ಧರ್ಮವಲ್ಲ. ಹಾಗಾದರೆ ಭಾಗವತಧರ್ಮವೆಂದರೇನು ಎಂಬ ಪ್ರಶ್ನೆಗೆ ಶ್ರೀ ವೇದವ್ಯಾಸದೇವರು ಪ್ರೋಜ್ಝಿತಕೈತವಃ ಮತ್ತು ಪರಮಃ ಎಂಬ ಶಬ್ದಗಳಿಂದ ಉತ್ತರ ನೀಡಿದ್ದಾರೆ. ಶ್ರೀಮದಾಚಾರ್ಯರು ಟೀಕಾಕೃತ್ಪಾದರು ತಿಳಿಸಿದ ತತ್ವರತ್ನಗಳ ಸಂಗ್ರಹದೊಂದಿಗೆ ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ಅದ್ಭುತವಾಗಿ ಈ ಶಬ್ದಗಳ ಅರ್ಥಗಳನ್ನು ವಿವರಿಸುತ್ತಾರೆ. ಅವರ ಪವಿತ್ರವಚನಗಳ ಅರ್ಥಾನುಸಂಧಾನ ಇಲ್ಲಿದೆ.
ಶ್ರೀಮದ್ ಭಾಗವತಮ್ — 40 — ಧರ್ಮ ಎಂದರೇನು
“ಧರ್ಮಃ ಪ್ರೋಜ್ಝಿತಕೈತವಃ” ಎಂಬ ವೇದವ್ಯಾಸದೇವರ ಮಾತಿಗೆ ಅರ್ಥವನ್ನು ಹೇಳುತ್ತ ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ಧರ್ಮವೆಂದರೇನು, ಧರ್ಮದ ಸ್ವರೂಪವೇನು, ಧರ್ಮದಿಂದ ಉಂಟಾಗುವ ಪ್ರಯೋಜನವೇನು ಎಂಬ ಪ್ರಶ್ನೆಗಳಿಗೆ ಧರ್ಮ ಎಂಬ ಶಬ್ದದಲ್ಲಿಯೇ ಉತ್ತರ ಅಡಗಿದೆ ಎಂದು ತೋರಿಸಿ ಕೊಡುತ್ತಾರೆ. ಆಚಾರ್ಯರು ತಿಳಿಸಿರುವ ತತ್ವಗಳನ್ನು ಹೃದಯಂಗಮವಾಗಿ ಸಂಗ್ರಹಿಸಿರುವ ಆ ಮಹಾಗುರುಗಳ ಪವಿತ್ರ ವಚನಗಳ ಅರ್ಥಾನುಸಂಧಾನ ಇಲ್ಲಿದೆ.
ಶ್ರೀಮದ್ ಭಾಗವತಮ್ — 39 — ಭಾಗವತದ ಶ್ರೀಮಂತಿಕೆ
ವೇದವ್ಯಾಸದೇವರು ಭಾಗವತವನ್ನು ಉಲ್ಲೇಖಿಸಬೇಕಾದರೆ ಕೇವಲ ಭಾಗವತ ಎನ್ನುವದಲ್ಲ, ಶ್ರೀಮದ್ ಭಾಗವತ ಎನ್ನುತ್ತಾರೆ. ಭಾಗವತದಲ್ಲಿ ಇರುವ ಆ ಶ್ರಿಮಂತಿಕೆ ಎಂತಹುದು ಎನ್ನುವದನ್ನು ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ಬಹಳ ಅದ್ಭುತವಾದ ಕ್ರಮದಲ್ಲಿ ನಿರೂಪಿಸುತ್ತಾರೆ. ಆವರ ಪವಿತ್ರ ವಚನಗಳ ವಿವರಣೆ ಇಲ್ಲಿದೆ, ವಿಜಯಧ್ವಜತೀರ್ಥಶ್ರೀಪಾದಂಗಳವರ ಮಾಹಾತ್ಮ್ಯದ ಚಿಂತನೆಯೊಂದಿಗೆ.
ಶ್ರೀಮದ್ ಭಾಗವತಮ್ — 38 — ಧ್ಯಾನ
ಸತ್ಯಂ ಪರಂ ಧೀಮಹಿ ಎಂಬ ಶ್ರೀ ವೇದವ್ಯಾಸದೇವರ ಆದೇಶದ ಅನುಸಾರವಾಗಿ ಮೊದಲ ಪದ್ಯದ ಅರ್ಥಾನುಸಂಧಾನವನ್ನೇನು ಮಾಡಿದ್ದೇವೆ ಅದರ ಧ್ಯಾನದ ಕ್ರಮವನ್ನು ಇಲ್ಲಿ ನೀಡಲಾಗಿದೆ.
ಶ್ರೀಮದ್ ಭಾಗವತಮ್ — 37 — ಸತ್ಯಂ ಪರಂ ಧೀಮಹಿ
ಭಗವಂತ ಜ್ಞಾನ-ಆನಂದಸ್ವರೂಪ, ಅನಂತಗುಣಪರಿಪೂರ್ಣ ಎಂಬ ದಿವ್ಯ ವಿಷಯಗಳ ಕುರಿತು ನಾವಿಲ್ಲಿ ತಿಳಿಯುತ್ತೇವೆ. ಧೀಮಹಿ ಎಂಬ ಪ್ರಯೋಗಕ್ಕೆ ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ನೀಡಿರುವ ಐದು ಕಾರಣಗಳ ಚಿಂತನೆಯೊಂದಿಗೆ.
ಶ್ರೀಮದ್ ಭಾಗವತಮ್ — 36 — ದೇವರಲ್ಲಿ ಕುಹಕವಿಲ್ಲ
ಇಂದ್ರಜಾಲವಿದ್ಯೆಯನ್ನು ಬಲ್ಲವರು ನೂರಾರು ಜನರ ಕಣ್ಕಟ್ಟು ಮಾಡಿ, ಇಲ್ಲದ್ದನ್ನು ಇರುವಂತೆ ತೋರಿಸುತ್ತಾರೆ. ಹಾಗೆಯೇ ದೇವರೂ ಸಹ. ಇವೆಲ್ಲವೂ ಅವನ ಮಾಯೆ. ಇಲ್ಲದ್ದನ್ನು ಇದೆ ಎಂದು ತೋರಿಸುತ್ತಾನೆ ಎಂದು ಕೆಲವರು ದೇವರ ಸೃಷ್ಟಿಯನ್ನು ಇಂದ್ರಜಾಲಕ್ಕೆ ಹೋಲಿಸುತ್ತಾರೆ. ಶ್ರೀ ವೇದವ್ಯಾಸದೇವರು ಅದಕ್ಕೆ ನೀಡಿರುವ ದಿವ್ಯವಾದ ಉತ್ತರ, ಶ್ರೀಮದಾಚಾರ್ಯರ ಪರಮಾದ್ಭುತ ಪ್ರತಿಪಾದನೆಗಳ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 35 — ಜೀವರ ದೇಹದ ಸೃಷ್ಟಿ ಕ್ರಮ
ಜೀವರ ದೇಹದ ಸೃಷ್ಟಿಯ ಕ್ರಮದ ಕುರಿತು ಅಪೂರ್ವವಾದ ವಿಷಯಗಳನ್ನು ಶ್ರೀಮದಾಚಾರ್ಯರು ಈ ಸಂದರ್ಭದಲ್ಲಿ ತಿಳಿಸುತ್ತಾರೆ. ಕಾಠಕ, ಬೃಹದಾರಣ್ಯ, ಬ್ರಹ್ಮಸೂತ್ರಗಳ ಭಾಷ್ಯಗಳಲ್ಲಿ ಶ್ರೀಮದಾಚಾರ್ಯರು, ನ್ಯಾಯಸುಧಾದಿಗಳಲ್ಲಿ ಟೀಕಾಕೃತ್ಪಾದರು ತಿಳಿಸಿರುವ ಅಪೂರ್ವವಿಷಯಗಳ ನಿರೂಪಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 34 — ದೇವರ ಪ್ರಾದುರ್ಭಾವದ ಕ್ರಮ
ಮೂಲರೂಪದ ಪರಮಾತ್ಮ ಏನು ಅನಂತ ರೂಪಗಳನ್ನು ಸ್ವೀಕರಿಸುತ್ತಾನೆ ಅದನ್ನು ಶುದ್ಧಸೃಷ್ಟಿ ಎನ್ನುತ್ತಾರೆ. ನಾವು ಹಿಂದೆ ತಿಳಿದ ನಾಲ್ಕು ವಿಧವಾದ ಸೃಷ್ಟಿಯೂ ದೇವರಲ್ಲಿಲ್ಲ, ಅವನದು ಕೇವಲ ಪ್ರಾದುರ್ಭಾವ. ಆ ಪ್ರಾದುರ್ಭಾವದ ಬಗೆಯನ್ನು ಆಚಾರ್ಯರು ಅದ್ಭುತವಾದ ಕ್ರಮದಲ್ಲಿ ನಿರೂಪಿಸುತ್ತಾರೆ. ಅದರ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 33 — ‘ಮೃಷಾ’ ಶಬ್ದದ ಅರ್ಥ
ಮೃಷಾ ಎನ್ನುವಶಬ್ದಕ್ಕೆ ವ್ಯರ್ಥ ಎನ್ನುವ ಅರ್ಥವನ್ನು ಹೇಳಿ ಆಚಾರ್ಯರು ದೇವರಿಗೆ ಸೃಷ್ಟಿಯಿಂದ ಪ್ರಯೋಜನವಿಲ್ಲ ಎನ್ನುವದನ್ನು ಪ್ರತಿಪಾದಿಸುತ್ತಾರೆ. ಮೃಷಾ ಎನ್ನುವದಕ್ಕೆ ಸುಳ್ಳು ಎನ್ನುವ ಅರ್ಥ ಪ್ರಸಿದ್ಧ, ವ್ಯರ್ಥ ಎನ್ನುವದು ಹೇಗೆ ಅರ್ಥವಾಗಲು ಸಾಧ್ಯ ಎಂಬ ಪ್ರಶ್ನೆಗೆ ಶ್ರೀಮದ್ ಭಾಗವತದಿಂದಲೇ ಆಚಾರ್ಯರು ನಮಗೆ ಉತ್ತರ ನೀಡುತ್ತಾರೆ. ಆ ವಾಕ್ಯದ ವಿವರಣೆ ಹಾಗೂ ಈ ಜಗತ್ತೆಲ್ಲವೂ ಸುಳ್ಳು ಯಾಕಾಗಿರಬಾರದು ಎನ್ನುವ ಪ್ರಶ್ನಗೆ ಮೊದಲಶ್ಲೋಕ ನೀಡುವ ಉತ್ತರಗಳ ಸಂಗ್ರಹ ಇಲ್ಲಿದೆ.
ಶ್ರೀಮದ್ ಭಾಗವತಮ್ — 32 — ಜನ್ಮಾದಿಗಳನ್ನು ನೀಡುವದು ದೇವರ ಸ್ವಭಾವ
ದೇವರು ತನಗಾಗಿ ಸೃಷ್ಟಿ ಮಾಡಿದರೆ ಅಪರಿಪೂರ್ಣನಾಗುತ್ತಾನೆ, ಮತ್ತೊಬ್ಬರಿಗಾಗಿ ಸೃಷ್ಟಿ ಮಾಡುತ್ತಾನೆ ಎಂದಾದರೆ, ಮತ್ತೊಬ್ಬರಿಗೆ ಸುಲಭವಾಗಿ ಫಲವನ್ನು ನೀಡಲಿಕ್ಕಾಗದೆ ಇಷ್ಟೆಲ್ಲ ಮಹಾಪ್ರಯತ್ನದ ಸೃಷ್ಟ್ಯಾದಿಗಳನ್ನು ಮಾಡುತ್ತಾನೆ ಎಂದಾಗುತ್ತದೆ. ಎರಡೂ ಪಕ್ಷದಲ್ಲಿಯೂ ಅವನು ಅಪರಿಪೂರ್ಣ, ಅಸ್ವತಂತ್ರ, ಅಸರ್ವಜ್ಞ ಎಂದೇ ಸಿದ್ಧವಾಗುತ್ತದೆ ಎಂಬ ಪ್ರಶ್ನೆಗಳಿಗೆ ಭಾಗವತ ನೀಡಿರುವ ದಿವ್ಯ ಉತ್ತರಗಳ ಸಂಗ್ರಹ ಇಲ್ಲಿದೆ.
ಶ್ರೀಮದ್ ಭಾಗವತಮ್ — 31 — ದೇವರ ಅನುಗ್ರಹವಿಲ್ಲದೇ ದೇವರ ಜ್ಞಾನ ಬರುವದಿಲ್ಲ
ದೇವರ ಪ್ರಸಾದವಿಲ್ಲದೇ ದೇವರ ಜ್ಞಾನ ಉಂಟಾಗಲು ಸಾಧ್ಯವಿಲ್ಲ ಎನ್ನುವ ಪರಮಮಂಗಳ ತತ್ವದ ನಿರೂಪಣೆ. ತಮ್ಮ ಪ್ರತಿಭಾಬಲದಿಂದಲೇ ಸರ್ವವನ್ನೂ ತಿಳಿದ, ಅಧ್ಯಯನದ ಆವಶ್ಯಕತೆಯೇ ಇಲ್ಲದ ಋಜುದೇವತೆಗಳೂ ಪರಮಾತ್ಮನ ಬಳಿಯಲ್ಲಿ ಅಧ್ಯಯನ ಮಾಡುವದು ಅವನ ಅನುಗ್ರಹವನ್ನು ಪಡೆಯಲು. ಅಂದರೆ ಅನುಗ್ರಹವಿಲ್ಲದೇ ಇರುವ ಜ್ಞಾನವೂ ಫಲಪ್ರದವಲ್ಲ, ಜ್ಞಾನ, ಭಕ್ತಿ, ವೈರಾಗ್ಯ, ಮಹಾನುಭಾವರ ಸೇವೆ, ತೀರ್ಥಯಾತ್ರೆ ಮುಂತಾದ ಸಕಲ ಸಾಧನಗಳಿಗಿಂತಲೂ ದೇವರ ಅನುಗ್ರಹವೇ ಮಿಗಿಲಾದ ಸಾಧನ. ಅದಿದ್ದರೆ ಉಳಿದವು ಫಲಪ್ರದ ಎನ್ನುವದನ್ನು ಭಾಗವತ ನಮಗಿಲ್ಲಿ ಮನಗಾಣಿಸುತ್ತದೆ.
ಶ್ರೀಮದ್ ಭಾಗವತಮ್ — 30 — ಬ್ರಹ್ಮದೇವರಿಗೂ ಉಪದೇಶಕ
ಬ್ರಹ್ಮದೇವರಿಗೆ ಜ್ಞಾನ ಪಡೆಯುವದಕ್ಕಾಗಿ ಅಧ್ಯಯನದ ಆವಶ್ಯಕತೆಯೂ ಇಲ್ಲ. ಶಾಸ್ತ್ರಗಳು ತಿಳಿಸುವ ಸಕಲ ತತ್ವಗಳನ್ನೂ ಅವರು ಅಧ್ಯಯನ ಮಾಡದೆಯೇ ತಿಳಿದಿದ್ದಾರೆ. ಅಂತಹ ಆದಿಸರ್ವಜ್ಞರಾದ, ಸಕಲಸುರರಿಗೂ ಗುರುಗಳಾದ ಬ್ರಹ್ಮದೇವರಿಗೆ ಅಧ್ಯಯನದ ಆವಶ್ಯಕತೆಯೇ ಇಲ್ಲ ಎಂದು ಶಾಸ್ತ್ರಗಳು ಸಾರುತ್ತವೆ. ಹಾಗಾದರೆ ದೇವರಿಂದ ಉಪದೇಶ ಪಡೆಯುವ ಆವಶ್ಯಕತೆಯೇನು ಎನ್ನುವದರ ನಿರೂಪಣೆ ಇಲ್ಲಿದೆ. ಆಚಾರ್ಯರು ಗೀತಾತಾತ್ಪರ್ಯನಿರ್ಣಯದಲ್ಲಿ ತಿಳಿಸಿದ ತತ್ವರತ್ನಗಳ ಚಿಂತನೆಯೊಂದಿಗೆ.
ಶ್ರೀಮದ್ ಭಾಗವತಮ್ — 29 — ದೇವರ ಸ್ವಾತಂತ್ರ್ಯ
ಒಂದು ಮಡಿಕೆ ನಿರ್ಮಾಣ ಮಾಡಲು ಗಾಳಿ ಮಳೆ ಚಳಿಯಿಂದಾರಂಭಿಸಿ ನೂರು ವಿಘ್ನಗಳಿವೆ. ಒಂದು ಸಣ್ಣ ಮನೆ ಕಟ್ಟಲು ಸಾವಿರ ಸಮಸ್ಯೆಗಳಿವೆ. ಕೇವಲ ಮನುಷ್ಯರಿಗಲ್ಲ, ದೇವತೆಗಳಿಗೂ ಸಹ ವಿಘ್ನಗಳು ಸಮಸ್ಯೆಗಳು ಇದ್ದದ್ದು ಕಂಡಿದೆ. ಎಲ್ಲರೂ ಮತ್ತೊಬ್ಬರ ಅಧೀನರೇ. ಅಂದಮೇಲೆ ಇಂತಹ ದೊಡ್ಡ ಬ್ರಹ್ಮಾಂಡವನ್ನು ನಿರ್ಮಾಣ ಮಾಡಿದ ದೇವರು ಎಲ್ಲರಿಗಿಂತ ಹೆಚ್ಚು ಕಷ್ಟ ಪಟ್ಟಿರಬೇಕಲ್ಲವೇ? ಎನ್ನುವ ಪ್ರಶ್ನೆಗೆ ಶ್ರೀ ವೇದವ್ಯಾಸದೇವರು ನೀಡಿದ, ಶ್ರೀಮದಾಚಾರ್ಯರು ವಿವರಿಸಿದ ಉತ್ತರದ ನಿರೂಪಣೆ ಇಲ್ಲಿದೆ. ದೇವರ ಸ್ವಾತಂತ್ರ್ಯವನ್ನು ಪ್ರತೀನಿತ್ಯ ಚಿಂತನೆ ಮಾಡುವ ಕ್ರಮ, ಅದರಿಂದ ಉಂಟಾಗುವ ಮಹತ್ತರ ಪ್ರಯೋಜನಗಳ ವಿವರಣೆಯೊಂದಿಗೆ.
ಶ್ರೀಮದ್ ಭಾಗವತ — 28 — ಸರ್ವಜ್ಞನಾದ್ದರಿಂದ ದೇವರು ಸರ್ವಕರ್ತಾ
ದೇವರು ಎಲ್ಲದರ ಸೃಷ್ಟ್ಯಾದಿಗಳನ್ನು ಮಾಡುತ್ತಾನೆಯಾದ್ದರಿಂದಲೇ ಅವನು ಸರ್ವಜ್ಞ ಎಂದು ಸಿದ್ಧವಾಗುತ್ತದೆ ಎಂದು ತಿಳಿದೆವು. ಸರ್ವಜ್ಞನಾದ್ದರಿಂದಲೂ ದೇವರನ್ನು ಸರ್ವಕರ್ತಾ ಎಂದು ಒಪ್ಪಬೇಕು ಎನ್ನುವದನ್ನು ಇಲ್ಲಿ ತಿಳಿಯುತ್ತೇವೆ. ಒಂದು ಕಾರ್ಯವನ್ನು ಮಾಡುವ ಜ್ಞಾನವಿದ್ದ ಮಾತ್ರಕ್ಕೆ ಜನರು ಆ ಕಾರ್ಯವನ್ನು ಮಾಡುವದಿಲ್ಲವಲ್ಲ, ದೇವರು ಹೇಗೆ ಮಾಡಲು ಸಾಧ್ಯ ಎಂಬ ಪ್ರಶ್ನೆಗೆ ಉತ್ತರ ಪಡೆಯುವದರೊಂದಿಗೆ.
ಶ್ರೀಮದ್ ಭಾಗವತಮ್ — 27 — ದೇವರನ್ನು ಸರ್ವಜ್ಞ ಎಂದೇಕೆ ಒಪ್ಪಬೇಕು?
ಬೇರೆಯವರ ಸರ್ವಜ್ಞತ್ವವನ್ನು ಯುಕ್ತಿಯಿಂದ ಪ್ರತಿಪಾದಿಸಲು ಸಾಧ್ಯವಿಲ್ಲ, ಆದರೆ ವೇದಗಳು ತಿಳಿಸುವ ಭಗವಂತನ ಸರ್ವಜ್ಞತ್ವವನ್ನು ಯುಕ್ತಿಯಿಂದಲೂ ನಿರ್ಣಯ ಮಾಡಿಕೊಳ್ಳಲು ಸಾಧ್ಯ ಎಂಬ ವಿಷಯದ ನಿರೂಪಣೆ ಇಲ್ಲಿದೆ. ಜಗತ್ತಿನ ಎಲ್ಲ ಮತದವರು ಹೇಳುವ ಮಾತು — ನಮ್ಮ ಮೂಲಪುರುಷರಾದ ಗುರುಗಳು ಸರ್ವಜ್ಞರು, ಆದ್ದರಿಂದ ನಮ್ಮ ಮತ ಸತ್ಯ ಎಂದು. ಈ ಮಾತಿಗೆ ಭಗವತ್ಪಾದರು ಅನುವ್ಯಾಖ್ಯಾನದಲ್ಲಿ ನೀಡಿರುವ ಉತ್ತರದ ಸಂಗ್ರಹ ಇಲ್ಲಿದೆ.
ಶ್ರೀಮದ್ ಭಾಗವತಮ್ — 26 — ದೇವರ ಸರ್ವಜ್ಞತ್ವ
ದೇವರು ಜಗತ್ತಿಗೆ ಸೃಷ್ಟ್ಯಾದಿಗಳನ್ನು ನೀಡುತ್ತಾನೆ ಎನ್ನುವದನ್ನು ಶಾಸ್ತ್ರಗಳ ಬೆಂಬಲವಿರುವ ಯುಕ್ತಿಗಳಿಂದ ತಿಳಿಯಬಹುದು ಎಂದು ವೇದವ್ಯಾಸದೇವರು ತಿಳಿಸಿದರು. ಆಗ ಪ್ರಶ್ನೆ ಮೂಡುತ್ತದೆ — ಕುಂಬಾರನಿಗೆ ಮಡಿಕೆ ನಿರ್ಮಾಣ ಮಾಡುವ ಜ್ಞಾನ ಮಾತ್ರ ಇರುತ್ತದೆ. ಆ ಮಡಿಕೆಯನ್ನು ಯಾರು ಕೊಳ್ಳುತ್ತಾರೆ, ಏನು ಮಾಡುತ್ತಾರೆ, ಆ ಮಡಿಕೆ ಮುಂದೇನಾಗುತ್ತದೆ ಇತ್ಯಾದಿ ಜ್ಞಾನಗಳಿರುವದಿಲ್ಲ. ದೇವರು ಕುಂಬಾರನಂತಾದರೆ ಅವನೂ ಸಹ ಕುಂಬಾರನಂತೆ ಅಸರ್ವಜ್ಞನಾಗಬೇಕಾಗುತ್ತದೆ ಎಂದು. ಈ ಪ್ರಶ್ನೆಗೆ ಭಾಗವತ ಮತ್ತು ಭಾಗವತತಾತ್ಪರ್ಯಗಳು ನೀಡುವ ಉತ್ತರದ ಅನುಸಂಧಾನ ಈ ಉಪನ್ಯಾಸದಲ್ಲಿದೆ.
ಶ್ರೀಮದ್ ಭಾಗವತಮ್ — 25 — ಆಚಾರ್ಯರು ತಿಳಿಸಿದ ಶುದ್ಧ ತರ್ಕ
ವೇದಗಳಲ್ಲಿನ ತತ್ವಗಳನ್ನು ಯುಕ್ತಿಯಿಂದ ನಿರ್ಣಯ ಮಾಡಿಕೊಳ್ಳಬೇಕು ಎನ್ನುವದು ಆಚಾರ್ಯರ ಸಿದ್ಧಾಂತ. ವೇದಗಳ ಬೆಂಬಲವುಳ್ಳ ತರ್ಕದಿಂದ ಆಚಾರ್ಯರು ಜಗತ್ತಿನ ನಿರ್ಮಾತೃವಾದ ದೇವರೊಬ್ಬನಿದ್ದಾನೆ ಎಂದು ಪ್ರತಿಪಾದಿಸುತ್ತಾರೆ. ಆ ವಿಷಯದ ನಿರೂಪಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 24 — ಇತರತಃ ಎಂಬ ಶಬ್ದದ ಅರ್ಥ
ಸರಿಯಾಗಿ ನಿರ್ಣಯಿಸಲ್ಪಟ್ಟ ವೇದಾದಿಶಾಸ್ತ್ರಗಳಿಂದ ದೇವರನ್ನು ತಿಳಿಯಬೇಕು, ಆ ವೇದಶಾಸ್ತ್ರದ ಬೆಂಬಲವಿರುವ ಯುಕ್ತಿಯಿಂದಲೂ ದೇವರನ್ನು ತಿಳಿಯಬಹುದು ಎಂದು ಶ್ರೀ ವೇದವ್ಯಾಸದೇವರು ಅನ್ವಯಾತ್ ಇತರತಃ ಎಂಬ ಶಬ್ದಗಳಿಂದ ತಿಳಿಸುತ್ತಿದ್ದಾರೆ. ಇಲ್ಲಿ ಯುಕ್ತಿ ಎಂದು ಹೇಳಲು ಬಳಸಿದ ಶಬ್ದ ಇತರತಃ ಎಂದು. ಇತರ ಎಂದರೆ ಬೇರೆಯದು ಎಂದರ್ಥ. ಇಲ್ಲಿ ಯುಕ್ತಿಯೇ ಎಂದು ಆ ಶಬ್ದಕ್ಕೆ ಹೇಗೆ ಅರ್ಥವಾಗುತ್ತದೆ ಮತ್ತು ತರ್ಕವನ್ನು ಪ್ರಮಾಣ ಎಂದು ಹೇಗೆ ಒಪ್ಪುವದು ಎನ್ನುವ ಪ್ರಶ್ನೆಗಳಿಗೆ ಉತ್ತರವಿದೆ.
ಶ್ರೀಮದ್ ಭಾಗವತಮ್ — 23 — ಅನ್ವಯಾತ್ ಎಂಬ ಶಬ್ದದ ಅರ್ಥ
ಜಗಜ್ಜನ್ಮಾದಿಕಾರಣನಾದ ಶ್ರೀಹರಿಯನ್ನು ಧ್ಯಾನ ಮಾಡೋಣ ಎಂದು ವೇದವ್ಯಾಸದೇವರು ಹೇಳಿದರು. ದೇವರು ಹೀಗಿದ್ದಾನೆ ಎನ್ನುವದಕ್ಕೆ ಏನು ಆಧಾರ ಎಂದರೆ ಅವರು ನೀಡಿದ ಉತ್ತರ — ಅನ್ವಯಾತ್ ಎಂದು. ಬ್ರಹ್ಮಸೂತ್ರಗಳಲ್ಲಿ ಪ್ರಯುಕ್ತವಾದ ಈ ಶಬ್ದದ ಅರ್ಥವನ್ನು ಮುನಿತ್ರಯರು ಅತ್ಯಂತ ವಿಸ್ತೃತವಾಗಿ ತಮ್ಮ ಗ್ರಂಥಗಳಲ್ಲಿ ನಿರ್ಣಯ ಮಾಡಿ ಹೇಳಿದ್ದಾರೆ. ಆ ವಿಷಯದ ಸಂಗ್ರಹ ಇಲ್ಲಿದೆ.
ಶ್ರೀಮದ್ ಭಾಗವತಮ್ — 22 — ಜನ್ಮ ಆದ್ಯಸ್ಯ ಎಂಬ ವಿಭಾಗ ತಪ್ಪು
“ಜನ್ಮಾದ್ಯಸ್ಯ” ಎನ್ನುವದನ್ನು ಕೆಲವು ಮಾಯಾವಾದಿಗಳು “ಜನ್ಮ ಆದ್ಯಸ್ಯ” ಎಂದು ವಿಭಾಗ ಮಾಡುತ್ತಾರೆ. ಟೀಕಾಕೃತ್ಪಾದರು ಅದನ್ನು ಖಂಡಿಸಿ “ಜನ್ಮಾದಿ ಅಸ್ಯ” ಎಂಬ ವಿಭಾಗವೇ ವೇದವ್ಯಾಸದೇವರಿಗೆ ಸಮ್ಮತವಾದದ್ದು ಎಂದು ಪ್ರತಿಪಾದಿಸುತ್ತಾರೆ. ಅದರ ವಿವರಣೆ ಇಲ್ಲಿದೆ. ಟೀಕಾಕೃತ್ಪಾದರ ವ್ಯಾಖ್ಯಾನ ಏಕೆ ತಪ್ಪಾಗಿರಬಾರದು ಎಂಬ ಆಧುನಿಕರ ಪ್ರಶ್ನೆಗೂ ಇಲ್ಲಿ ಉತ್ತರವಿದೆ. ಅವರ ಮಾತಿನ ಪರಿಶುದ್ಧಿಯ ಸಮರ್ಥನೆಯೊಂದಿಗೆ. ಶಾಸ್ತ್ರಗಳ ಸರಿಯಾದ ಅರ್ಥವನ್ನು ತಿಳಿದರೆ ಸಾಕು, ತಪ್ಪಾದದ್ದನ್ನು ಏಕೆ ಖಂಡಿಸಬೇಕು ಎನ್ನುವದಕ್ಕೆ ಉಪನಿಷತ್ತು ಮತ್ತು ಶ್ರೀಮದಾಚಾರ್ಯರು ನೀಡಿದ “ಭಯಂಕರ” ಉತ್ತರದ ವಿವರಣೆಯೂ ಈ ಉಪನ್ಯಾಸದಲ್ಲಿ ಉಪಲಬ್ಧವಿದೆ. ತಪ್ಪನ್ನು ಖಂಡಿಸಬಾರದು ಎಂದು ತಿಳಿದಿರುವ ಜನ ಕೇಳಲೇಬೇಕಾದ ಪರಮತತ್ವವನ್ನು ಆಚಾರ್ಯರು ಪ್ರತಿಪಾದಿಸಿದ್ದಾರೆ. ತಪ್ಪದೇ ಕೇಳಿ.
ಶ್ರೀಮದ್ ಭಾಗವತಮ್ — 21 — “ವ್ಯಸ್ತ-ಸಮಸ್ತ” ಎಂಬ ಶಬ್ದಗಳ ಅರ್ಥ
ಜನ್ಮಾದ್ಯಸ್ಯ ಎನ್ನುವ ಮಾತಿಗೆ ವ್ಯಾಖ್ಯಾನ ಮಾಡುತ್ತ ಆಚಾರ್ಯರು “ವಿಷ್ಣೋರ್ವ್ಯಸ್ತಾಃ ಸಮಸ್ತಾಃ” ಎನ್ನುವ ಶಬ್ದಗಳನ್ನು ಬಳಸುತ್ತಾರೆ. ಆಚಾರ್ಯರ ಈ ವ್ಯಾಖ್ಯಾನಕ್ಕೆ ಆಧಾರವೇನು, ಈ ಶಬ್ದಗಳ ಅರ್ಥವೇನು, ಇದನ್ನು ಇಲ್ಲಿ ತಿಳಿಸುವ ಆವಶ್ಯಕತೆಯೇನು ಎಂಬ ಪ್ರಶ್ನೆಗಳಿಗೆ ಶ್ರೀಮಟ್ಟೀಕಾಕೃತ್ಪಾದರು, ಶ್ರೀಮದ್ವಾದಿರಾಜಗುರುಸಾರ್ವಭೌಮರು, ಶ್ರೀಮಂತ್ರಾಲಯಪ್ರಭುಗಳು, ಶ್ರೀಭಾಷ್ಯದೀಪಿಕಾಚಾರ್ಯರು, ಶ್ರೀ ಯಾದವಾರ್ಯರು ನೀಡಿದ ಉತ್ತರಗಳನ್ನು ನಾವಿಲ್ಲಿ ತಿಳಿಯುತ್ತೇವೆ.
ಶ್ರೀಮದ್ ಭಾಗವತಮ್ — 20 — ಈಹಾ ಶಬ್ದದ ಅರ್ಥ
ಈಹಾ ಎಂದರೇನು? ಭಾಗವತಕ್ಕೆ ಸಂಬಂಧಪಟ್ಟ ಗ್ರಂಥಗಳಲ್ಲಿ ಮಾತ್ರ ಏಕೆ ಸೃಷ್ಟ್ಯಾದಿಗಳ ಜೊತೆಯಲ್ಲಿ ಅದರ ಉಲ್ಲೇಖವಿದೆ? ಮಂತ್ರಾಲಯಪ್ರಭುಗಳೇ ಮೊದಲಾದ ಮಹಾನುಭಾವರು ಆ ಶಬ್ದಕ್ಕೆ ಏನು ಅರ್ಥವನ್ನು ಹೇಳಿದ್ದಾರೆ? ಪ್ರಾಚೀನಗ್ರಂಥಗಳಲ್ಲಿ ಯಾವ ಅರ್ಥಗಳಲ್ಲಿ ಆ ಶಬ್ದದ ಪ್ರಯೋಗವಾಗಿದೆ? ಆ ಅರ್ಥವನ್ನು ನಮ್ಮ ಜೀವನದಲ್ಲಿ ಅನುಷ್ಠಾನ ಮಾಡುವದು ಹೇಗೆ? ಇತ್ಯಾದಿಗಳ ಕುರಿತ ವಿವರಣೆಯೊಂದಿಗೆ ಶ್ರೀಮದ್ ಭಾಗವತ ಅದೆಷ್ಟು ದುರ್ಲಭ ಎನ್ನುವದನ್ನು, ಸಮಗ್ರ ಭಾಗವತಮಾಹಾತ್ಮ್ಯದ ಕಥಾಭಾಗದ ತಾತ್ಪರ್ಯವನ್ನು ಭಗವತ್ಪಾದರು ಸಂಗ್ರಹ ಮಾಡಿರುವ ಅತ್ಯದ್ಭುತ ರೀತಿಯ ಚಿತ್ರಣ ಇಲ್ಲಿದೆ.
ಶ್ರೀಮದ್ ಭಾಗವತಮ್ — 19 — ಜ್ಞಾನಮೋಕ್ಷಪ್ರದ
ಜೀವ ಏಳು ಆವರಣಗಳನ್ನು ಕಳೆದುಕೊಂಡು ಮೋಕ್ಷವನ್ನು ಪಡೆಯುವ ಕ್ರಮದ ವಿವರಣೆ ಇಲ್ಲಿದೆ. ಪರಮಾತ್ಮ ಯಾವ ರೀತಿ ಜ್ಞಾನ ಮತ್ತು ಮೋಕ್ಷಗಳನ್ನು ನೀಡುತ್ತಾನೆ ಎನ್ನುವದನ್ನು ನಾವಿಲ್ಲಿ ತಿಳಿಯುತ್ತೇವೆ.
ಶ್ರೀಮದ್ ಭಾಗವತಮ್ — 18 — ಅಜ್ಞಾನಬಂಧಪ್ರದ
ಜೀವರಾಶಿಗಳಿಗಿರುವ ಭಾವರೂಪ ಅಜ್ಞಾನ ಮತ್ತು ಏಳು ಆವರಣಗಳನ್ನು ಭಗವಂತ ಯಾವ ರೀತಿ ನೀಡಿ ಬಂಧಕನಾಗುತ್ತಾನೆ ಎನ್ನುವ ತತ್ವದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 17 — ಸಮಸ್ತರಿಗೂ ಜನ್ಮಾದಿಪ್ರದ
ಭಗವಂತನೇ ಸರ್ವಪ್ರದ ಎನ್ನುವ ತತ್ವವನ್ನು ಭಾಗವತೋತ್ತಮರಾದ ಶ್ರೀ ವಸುದೇವ ದೇವಕಿಯರು ಯಾವ ರೀತಿ ಅನುಷ್ಠಾನ ಮಾಡುತ್ತಿದ್ದರು ಎಂಬ ಮಾತಿನ ನಿರೂಪಣೆಯೊಂದಿಗೆ “ಜನ್ಮಾದ್ಯಸ್ಯ ಯತಃ” ಎಂಬ ವಾಕ್ಯ ಹೇಳುವ ತತ್ವವನ್ನು ಯಾವ ರೀತಿ ಅನುಸಂಧಾನಕ್ಕೆ ತರಬೇಕು ಎನ್ನುವದರ ಕುರಿತ ಚಿಂತನೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 16 — ಮಹಾಲಕ್ಷ್ಮಿಗೂ ಜನ್ಮಾದಿಪ್ರದ
ಜನ್ಮಮರಣಗಳಿಲ್ಲದ, ಬಂಧ, ಅಜ್ಞಾನಗಳಿಲ್ಲದ ನಿತ್ಯಮುಕ್ತರಾದ ಮಹಾಲಕ್ಷ್ಮಿಗೆ ಯಾವಕ್ರಮದಲ್ಲಿ ಭಗವಂತ ಜನ್ಮ-ಸ್ಥಿತಿ-ಲಯ-ನಿಯಮನ-ಜ್ಞಾನ-ಅಜ್ಞಾನ-ಬಂಧ-ಮೋಕ್ಷಗಳನ್ನು ನೀಡುತ್ತಾನೆ ಎನ್ನುವ ವಿಷಯವನ್ನು ನಾವಿಲ್ಲಿ ಕೇಳುತ್ತೇವೆ.
ಶ್ರೀಮದ್ ಭಾಗವತಮ್ — 15 — ಜನ್ಮಾದಿ ಎಂಬ ಶಬ್ದದ ಅರ್ಥ
ಜನ್ಮಾದಿ ಎಂದರೆ ಸೃಷ್ಟಿ ಸ್ಥಿತಿ ಲಯಗಳು ಎಂದು ಅನೇಕರ ವಾದ. ಆದರೆ ಶ್ರೀಮದಾಚಾರ್ಯರು ಜನ್ಮಾದಿ ಎಂದರೆ ಕೇವಲ ಮೂರಲ್ಲ, ಸೃಷ್ಟಿ, ಸ್ಥಿತಿ, ಸಂಹಾರ, ನಿಯಮನ, ಅಜ್ಞಾನ, ಜ್ಞಾನ, ಬಂಧ, ಮೋಕ್ಷ ಎಂಬ ಎಂಟು ಪದಾರ್ಥಗಳು ಎಂದು ಅರ್ಥ ಮಾಡುತ್ತಾರೆ. ಈ ಎಂಟನ್ನು ಒಪ್ಪಬೇಕಾದ ಅನಿವಾರ್ಯತೆಯೇನು ಎನ್ನುವದಕ್ಕೆ ಶ್ರೀಮಚ್ಚಂದ್ರಿಕಾಚಾರ್ಯರು ತಾತ್ಪರ್ಯಚಂದ್ರಿಕಾಗ್ರಂಥದಲ್ಲಿ ಅದ್ಭುತವಾದ ಉತ್ತರಗಳನ್ನು ನೀಡಿದ್ದಾರೆ. ಆ ಉತ್ತರಗಳ ಸಂಗ್ರಹ ಇಲ್ಲಿದೆ. ಜನ್ಮಾದ್ಯಸ್ಯ ಎಂಬ ಶಬ್ದಗಳ ಅರ್ಥ ಮತ್ತು ನಿತ್ಯಜೀವನದಲ್ಲಿ ಅದರ ಅನುಸಂಧಾನ ಹೇಗಿರಬೇಕು ಎನ್ನುವದನ್ನು ವಿವರಿಸುವ ಉಪನ್ಯಾಸ.
ಶ್ರೀಮದ್ ಭಾಗವತಮ್ — 14 — ದೇವರ ಲಕ್ಷಣಗಳನ್ನು ಏಕೆ ತಿಳಿಸಬೇಕು
ಮೊಲದ ಕೋಡು ಅತ್ಯಂತ ಅಸತ್ಯವಾದ ಪದಾರ್ಥ. ಜಗತ್ತಿನ ಯಾವ ವ್ಯಕ್ತಿಯೂ ಅದನ್ನು ಕಂಡಿಲ್ಲ. ಹಾಗೆ ದೇವರನ್ನೂ ಸಹ ಯಾರೂ ಕಂಡಿಲ್ಲ. ಅಂದಮೇಲೆ ದೇವರಿಗೂ ಮೊಲದ ಕೋಡಿಗೂ ಏನು ವ್ಯತ್ಯಾಸ ಎಂಬ ಪ್ರಶ್ನೆಗೆ ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ನೀಡಿದ ಅದ್ಭುತವಾದ ಉತ್ತರ ಇಲ್ಲಿದೆ. ತಪ್ಪದೇ ಕೇಳಿ.
ಶ್ರೀಮದ್ ಭಾಗವತಮ್ — 13 — ಮಂಗಳಾಚಾರಣೆಯನ್ನು ಏಕೆ ಮಾಡಬೇಕು?
ಶ್ರೀಮದ್ ಭಾಗವತದ ಮೊದಲ ಶ್ಲೋಕದ ಅನುವಾದ ಇಲ್ಲಿಂದ ಆರಂಭ. ಮಂಗಲಾಚರಣೆ ಎಂದರೇನು, ಏಕೆ ಮಾಡಬೇಕು, ಪ್ರಯೋಜನವಿದ್ದದ್ದಕ್ಕಾಗಿ ನಾವು ಮಾಡುವದು ಸರಿಯಾದರೂ ನಿತ್ಯತೃಪ್ತರಾದ ವೇದವ್ಯಾಸದೇವರಿಗೆ ಮಂಗಳಾಚರಣೆಯಿಂದಲೂ ಏನೂ ಪ್ರಯೋಜನವಿಲ್ಲ, ಅಂದಮೇಲೆ ಅವರೇಕೆ ಮಂಗಳಾಚರಣೆ ಮಾಡುತ್ತಾರೆ, ದೇವರ ಮಂಗಳಾಚರಣೆಗೂ ಶ್ರೀಮದಾಚಾರ್ಯರು ಮಾಡಿರುವ ಮಂಗಳಾಚರಣೆಗೂ ಏನು ವ್ಯತ್ಯಾಸ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. “ಜನ್ಮಾದ್ಯಸ್ಯ ಯತಃ” ಎಂಬ ಭಾಗವತದ ಮೊಟ್ಟಮೊದಲ ಶಬ್ದಪ್ರಯೋಗದಲ್ಲಿಯೇ ವೇದವ್ಯಾಸದೇವರ ಎಂತಹ ಕಾರುಣ್ಯ ಅಡಗಿದಿ ಎನ್ನುವದನ್ನು ನಾವಿಲ್ಲಿ ಮನಗಾಣುತ್ತೇವೆ.
ಶ್ರೀಮದ್ ಭಾಗವತಮ್ — 12 — ಗುರುವಂದನೆ
ಸಮಸ್ತಗುರುಗಳಿಗೆ ವಂದನೆ ಸಲ್ಲಿಸಿ ಶ್ರೀ ಭಾಗವತದ ಕೀರ್ತನ-ಶ್ರವಣಗಳು ನಿರ್ವಿಘ್ನವಾಗಿ ನಡೆಯಲೆಂದು ಪ್ರಾರ್ಥಿಸುವ ಶ್ಲೋಕಗಳ ಅರ್ಥಾನುಸಂಧಾನ.
ಶ್ರೀಮದ್ ಭಾಗವತಮ್ — 11 — ದೇವತಾವಂದನೆ
ಶ್ರೀಹರಿ-ವೇದವ್ಯಾಸದೇವರು-ಮಹಾಲಕ್ಷ್ಮೀದೇವಿ-ಮುಖ್ಯಪ್ರಾಣದೇವರು-ಭಾರತೀದೇವಿ-ತತ್ವಾಭಿಮಾನಿದೇವತೆಗಳು-ಶ್ರೀ ಶುಕಾಚಾರ್ಯರು-ಕಾವೇರಿ ಮೊದಲಾದ ಸಮಸ್ತದೇವತೋತ್ತಮರಿಗೆ ಮಾಡಿ ಶ್ರೀ ಭಾಗವತದ ಕೀರ್ತನ-ಶ್ರವಣಗಳು ನಿರ್ವಿಘ್ನವಾಗಿ ನಡೆಯಲೆಂದು ಪ್ರಾರ್ಥಿಸುವ ಶ್ಲೋಕಗಳ ಅರ್ಥಾನುಸಂಧಾನ.
ಶ್ರೀಮದ್ ಭಾಗವತಮ್ — 10 — ನಾರದರ ಸಪ್ತಾಹದ ವೈಭವ
ಕೃಶರಾಗಿದ್ದ ಭಕ್ತಿ ಜ್ಞಾನ ವೈರಾಗ್ಯಗಳು ಪುಷ್ಟಗೊಳ್ಳಬೇಕೆಂದು, ಸಮಸ್ತ ಕಲಿಯುಗದ ಸಜ್ಜನರ ಮೇಲಿನ ಕಾರುಣ್ಯದಿಂದ ಶ್ರೀ ನಾರದರು ಸನಕಾದಿಯೋಗಿವರ್ಯರಿಂದ ಶ್ರೀಮದ್ ಭಾಗವತಸಪ್ತಾಹವನ್ನು ಮಾಡಿಸುತ್ತಾರೆ. ಪರಮಾದ್ಭುತವಾದ ಕ್ರಮದಲ್ಲಿ ನಡೆಯುವ ಆ ಸಪ್ತಾಹವನ್ನು ಅನುಗ್ರಹಿಸಲು ಭಾಗವತಾಚಾರ್ಯರಾದ ಶುಕಾಚಾರ್ಯರೇ ಆಗಮಿಸುತ್ತಾರೆ. ಪ್ರಹ್ಲಾದರಾಜರು-ಉದ್ಧವ ಮುಂತಾದ ಭಾಗವತೋತ್ತಮರೊಡಗೂಡಿ ಸ್ವಯಂ ಭಗವಂತ ಅಲ್ಲಿ ಪ್ರಾದುರ್ಭೂತನಾಗುತ್ತಾನೆ. ಪ್ರಹ್ಲಾದ-ಉದ್ಧವ-ನಾರದ-ಸನಕಾದಿಗಳೊಡಗೂಡಿ ಅರ್ಜುನ ಸಂಕೀರ್ತನೋತ್ಸವವನ್ನು ಆರಂಭಿಸುತ್ತಾನೆ. ಆ ಸಂಕೀರ್ತನೋತ್ಸವವನ್ನು ಕಾಣಲು ಬ್ರಹ್ಮ ರುದ್ರಾದಿದೇವತೆಗಳು ಸಪತ್ನೀಕರಾಗಿ ಆಗಮಿಸುತ್ತಾರೆ. ಸಪ್ತಾಹ-ಸಂಕೀರ್ತನಗಳಿಂದ ಭಕ್ತಿ-ಜ್ಞಾನ-ವೈರಾಗ್ಯಗಳು ಪರಮತಾರುಣ್ಯವನ್ನು ಪಡೆದುಕೊಳ್ಳುತ್ತವೆ. ಸಂಪ್ರೀತನಾದ ಭಗವಂತ ಅವರಿಗೆ ವರಪ್ರದನಾಗುತ್ತಾನೆ. ಆ ವರವೇನು, ವರವನ್ನು ಪಡೆದವರ ಕಾರುಣ್ಯ ಎಂತಹುದು ಎನ್ನುವದನ್ನು ಕೇಳಿಯೇ ಆನಂದಿಸಬೇಕು, ಅನುಭವಿಸಬೇಕು. ನಮಗಾಗಿ ವರವನ್ನು ಪಡೆದ ಆ ಮಹಾನುಭಾವರಿಗೆ ಸಾಷ್ಟಾಂಗಪ್ರಣತಿಗಳನ್ನರ್ಪಿಸಬೇಕು. ಅದರ ವಿವರಣೆ ಇಲ್ಲಿದೆ. ತಪ್ಪದೇ ಕೇಳಿ. ಎಲ್ಲ ಸಜ್ಜನರಿಗೂ ಕೇಳಿಸಿ.
ಶ್ರೀ ರಾಘವೇಂದ್ರಸ್ತೋತ್ರ — ಶ್ಲೋಕ — 4B
ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರ ಅನಭೀಷ್ಟಪುಣ್ಯದ ಕುರಿತು ಹಿಂದಿನ ಉಪನ್ಯಾಸದಲ್ಲಿ ತಿಳಿದೆವು. ಶ್ರೀಗುರುಗಳು ಅದೆಷ್ಟು ಅದ್ಭುತವಾದ ಕ್ರಮದಲ್ಲಿ ಶ್ರೀಹರಿ ವಾಯು ದೇವತೆಗಳನ್ನು ಮೆಚ್ಚಿಸಿ ಅವರ ಅನುಗ್ರಹವನ್ನು ಪಡೆದಿದ್ದಾರೆ, ಎಂತ ದಿವ್ಯ ಸಾಧನೆಯನ್ನು ಮಾಡಿದ್ದಾರೆ ಎನ್ನುವದರ ಕುರಿತು ಇಲ್ಲಿ ತಿಳಿಯುತ್ತೇವೆ.
ಶ್ರೀಮದ್ ಭಾಗವತಮ್ — 9 — ಸಪ್ತಾಹದ ಪರಿಶುದ್ಧಕ್ರಮ
ಸಪ್ತಾಹ ಎಂದರೆ ಸುಮ್ಮನೆ ಆಚಾರ್ಯರೊಬ್ಬರನ್ನು ಕರೆಸಿ ಏಳು ದಿವಸ ಏಳು ಗಂಟೆಗಳ ಕಾಲ ಉಪನ್ಯಾಸ ಮಾಡಿಸುವದಲ್ಲ. ಅದಕ್ಕೊಂದು ಪರಿಶುದ್ಧವಾದ ವಿಧಿಯಿದೆ. ಮೋಕ್ಷಪ್ರದವಾದ ಮಹಾಸತ್ಕರ್ಮವದು. ವಿವಾಹ ಉಪನಯನಗಳಿಗೆ ಎಷ್ಟು ಆದರ ಶ್ರದ್ಧೆಗಳಿಂದ ಮುಹೂರ್ತ ನೋಡುತ್ತೇವೆಯೋ ಅದಕ್ಕಿಂತಲೂ ಮಿಗಿಲಾದ ಶ್ರದ್ಧೆಯಿಂದ ಮುಹೂರ್ತವನ್ನು ನೋಡಬೇಕು ಎಂದು ಸ್ವಯಂ ಸನಕಾದಿಗಳು ಹೇಳುತ್ತಾರೆ. ಹಾಗೆಯೇ ಯಾವ ಮಾಸಗಳಲ್ಲಿ ಸಪ್ತಾಹವನ್ನು ಮಾಡುವದರಿಂದ ಮೋಕ್ಷ ದೊರೆಯುತ್ತದೆಯೋ ಆ ಮಾಸಗಳನ್ನು ತಿಳಿಸಿ, ಸಪ್ತಾಹಕ್ಕೆ ಯಾರನ್ನು ಕರೆಯಬೇಕು, ಯಾವ ರೀತಿ ಕರೆಯಬೇಕು, ಎಲ್ಲಿ ಸಪ್ತಾಹ ಮಾಡಬೇಕು, ವೇದಿಕೆ ಹೇಗಿರಬೇಕು, ಮಂಟಪ ಹೇಗಿರಬೇಕು, ಭಾಗವತ ಹೇಳುವವರಲ್ಲಿ ಯಾವ ಲಕ್ಷಣಗಳಿರಬೇಕು, ಕೇಳುವವರ ನಿಯಮವೇನು, ಸಪ್ತಾಹವನ್ನು ಯಾರುಯಾರು ಕೇಳುವದರಿಂದ ಯಾವಯಾವ ಫಲವನ್ನು ಪಡೆಯುತ್ತಾರೆ, ಸಪ್ತಾಹದ ಅಂತ್ಯದಲ್ಲಿ ಏನೆಲ್ಲ ಸತ್ಕರ್ಮಗಳನ್ನು ಆಚರಿಸಬೇಕು, ಎನ್ನುವದನ್ನೂ ತಿಳಿಸುತ್ತಾರೆ.
ಶ್ರೀಮದ್ ಭಾಗವತಮ್ — 8 — ಧುಂಧುಕಾರಿಯ ಉದ್ಧಾರ
ಧುಂಧುಕಾರಿ ಐದು ಜನ ವೇಶ್ಯೆಯರನ್ನು ಮನೆಯಲ್ಲಿ ತಂದಿಟ್ಟುಕೊಂಡು ಪರಮಪಾಪಿಷ್ಠನಾಗಿ ಬದುಕುತ್ತಿರುತ್ತಾನೆ. ಅವನು ಮಾಡುತ್ತಿದ್ದ ಕಳ್ಳತನ ಕೊಲೆಗಳು ರಾಜನಿಗೆ ತಿಳಿದರೆ ಇವನ ಜೊತೆಯಲ್ಲಿ ತಮ್ಮನ್ನೂ ರಾಜ ಕೊಲ್ಲುತ್ತಾನೆ ಎಂದು ಆಲೋಚನೆ ಮಾಡಿದ ವೇಶ್ಯೆಯರು ರಾತ್ರಿಯಲ್ಲಿ ಧುಂಧುಕಾರಿಯನ್ನು ಕೊಂದು ಹಾಕುತ್ತಾರೆ. ತನ್ನ ಮಹತ್ತರ ಪಾಪಕರ್ಮಗಳಿಂದ ಪಿಶಾಚಜನ್ಮವನ್ನು ಪಡೆದ ಧುಂಧುಕಾರಿಯನ್ನು ಗೋಕರ್ಣ ಭಾಗವತಸಪ್ತಾಹದಿಂದ ಉದ್ಧಾರ ಮಾಡುವ ದಿವ್ಯ ಘಟನೆ ಮತ್ತು ಗೋಕರ್ಣ ಹಾಗೂ ಎಲ್ಲ ಶ್ರೋತೃಗಳ ಉದ್ಧಾರವಾಗುವ ಘಟನೆಗಳ ಚಿತ್ರಣ ಇಲ್ಲಿದೆ. ಆಚಾರ್ಯರ ವಾಕ್ಯಗಳ ಆಧಾರದ ಮೇಲೆ ಭಾಗವತಶ್ರವಣದಿಂದ ಮುಕ್ತಿಯಾಗುವದು ಎಂದರೇನು ಎನ್ನುವ ತತ್ವದ ವಿವರಣೆಯೂ ಇಲ್ಲಿದೆ.
ಶ್ರೀಮದ್ ಭಾಗವತಮ್ — 7 — ಆತ್ಮದೇವನ ಉದ್ಧಾರ
ಯತಿವರೇಣ್ಯರು ನೀಡಿದ ಫಲವನ್ನು ಹಸು ತಿನ್ನುತ್ತದೆ. ಗೋಕರ್ಣ ಎಂಬ ಸಜ್ಜೀವ ಅವತರಿಸಿ ಬರುತ್ತಾನೆ. ಆತ್ಮದೇವನ ಹೆಂಡತಿ ಧುಂಧುಲೀ ತನ್ನ ತಂಗಿಯ ಮಗುವನ್ನು ಕೊಂಡುಕೊಂಡು ತನ್ನ ಮಗ ಎಂದು ಸುಳ್ಳು ಹೇಳುತ್ತಾಳೆ. ಅವನೇ ಪಾಪಕರ್ಮರತನಾದ ಧುಂಧುಕಾರಿ. ದುಷ್ಟಕಾರ್ಯಗಳನ್ನು ಮಾಡುತ್ತಲೇ ಬೆಳೆದು ಬಲಿಷ್ಠನಾಗುವ ಅವನು ತನ್ನ ತಂದೆಯನ್ನೇ ಹೊಡೆದು ಹಣ ಕಸಿದುಕೊಂಡು ಹೋಗುತ್ತಾನೆ. ಗೋಕರ್ಣನಿಂದ ತತ್ವದ ಉಪದೇಶ ಪಡೆದ ಆತ್ಮದೇವ ಭಾಗವತದ ದಶಮಸ್ಕಂಧದಲ್ಲಿ ಆಸಕ್ತನಾಗಿ ಉದ್ಧೃತಿಯನ್ನು ಕಂಡುಕೊಳ್ಳುವ ಭಾಗದ ವಿವರಣೆ ಈ ಉಪನ್ಯಾಸದಲ್ಲಿದೆ.
ಶ್ರೀಮದ್ ಭಾಗವತಮ್ — 6 — ಆತ್ಮದೇವನ ಕಥೆ
ದೇವ-ಋಷಿ ಮೊದಲಾದ ಸಮಸ್ತ ಸಜ್ಜನ ಸಮೂಹದ ಸಭೆಯ ಮಧ್ಯದಲ್ಲಿ ಭಾಗವತದ ಮಾಹಾತ್ಮ್ಯವನ್ನು ಸನಕಾದಿಗಳು ಹೇಳಲು ಆರಂಭಿಸಿದಾಗ ಭಕ್ತಿ-ಜ್ಞಾನ-ವೈರಾಗ್ಯಗಳು ಅಲ್ಲಿಗೆ ಬರುತ್ತಾರೆ. ಸ್ವಯಂ ಭಗವಂತ ತಾನು ಎಲ್ಲ ಶ್ರೋತೃಗಳ ಮನಸ್ಸಿನಲ್ಲಿ ಕುಳಿತು ಭಾಗವತವನ್ನು ಆಸ್ವಾದಿಸಲು ಬರುತ್ತಾನೆ. ಭಾಗವತದ ಶ್ರವಣದಿಂದ ಎಂತಹ ಪಾಪಗಳು ನಾಶವಾಗುತ್ತವೆ ಎಂದು ಶ್ರೀ ನಾರದರು ಸನಕಾದಿಯೋಗಿವರ್ಯರನ್ನು ಪ್ರಶ್ನೆ ಮಾಡಿದಾಗ ಅವರು ಆತ್ಮದೇವ ಎನ್ನುವ ಬ್ರಾಹ್ಮಣನ ಕಥೆಯನ್ನು ಹೇಳಲು ಆರಂಭಿಸುತ್ತಾರೆ. ಆ ಕಥೆಯ ನಿರೂಪಣೆ ಈ ಭಾಗದಲ್ಲಿದೆ. ಮನುಷ್ಯನ ಮೋಹ ಅದೆಷ್ಟು ಗಟ್ಟಿಯಾಗಿರುತ್ತದೆ ಮತ್ತು ಆ ಮೋಹದಿಂದ ಎಂತಹ ಅನರ್ಥ ಉಂಟಾಗುತ್ತದೆ ಎಂಬ ತತ್ವವನ್ನು ಪ್ರತಿಪಾದಿಸುವ ಭಾಗ.
ಶ್ರೀಮದ್ ಭಾಗವತಮ್ — 5 — ಸನಕಾದಿಗಳು ತಿಳಿಸಿದ ಭಾಗವತದ ಮಾಹಾತ್ಮ್ಯ
ನಾರದರು ಏರ್ಪಡಿಸಿದ ಸಪ್ತಾಹ ಭಾಗವತಯಜ್ಞದಲ್ಲಿ ಮೊದಲಿಗೆ ಸನಕಾದಿಗಳು ಶ್ರೀಮದ್ ಭಾಗವತದ ಮಹಾಮಾಹಾತ್ಮ್ಯವನ್ನು ತಿಳಿಸಿ ಹೇಳುತ್ತಾರೆ. ಭಾಗವತವನ್ನು ಕೇಳಲು ಏಳು, ಒಂಭತ್ತು ಮಂತಾದ ದಿವಸಗಳ ನಿಯಮವಿಲ್ಲ, ಅದು ಅಶಕ್ತರಿಗೆ ಮಾತ್ರ. ಪ್ರತೀನಿತ್ಯ ಭಾಗವತವನ್ನು ಕೇಳಬೇಕು ಎನ್ನುವ ಮಹತ್ತ್ವದ ವಿಷಯದೊಂದಿಗೆ ಲಕ್ಷ್ಮೀ, ಬ್ರಹ್ಮ, ರುದ್ರಾದಿಗಳು ಮಾಡಿದ ಭಾಗವತ ಶ್ರವಣದ ಕುರಿತು ನಾವಿಲ್ಲಿ ಕೇಳುತ್ತೇವೆ. ಭಾಗವತ ಸ್ವಯಂ ಭಗವಂತನ ಸನ್ನಿಧಾನಪಾತ್ರವಾದ ಗ್ರಂಥ ಎಂಬ ಮಾತಿನ ಚಿಂತನೆಯೊಂದಿಗೆ.
ಶ್ರೀಮದ್ ಭಾಗವತಮ್ — 4 — ಭಾಗವತದ ಮಹಾವೈಶಿಷ್ಟ್ಯ
ಭಕ್ತಿ ಜ್ಞಾನ ವೈರಾಗ್ಯಗಳನ್ನು ಸಂಪೂರ್ಣವಾಗಿ ಪುಷ್ಟಿಗೊಳಿಸಲು ಭಾಗವತಸಪ್ತಾಹವನ್ನು ಮಾಡಬೇಕೆಂದು ಸನಕಾದಿಗಳು ನಾರದರಿಗೆ ತಿಳಿಸಿದಾಗ “ನಾನು ವೇದ, ವೇದಾಂತ, ಗೀತೆಗಳನ್ನು ಹೇಳಿದಾಗಲೂ ಭಕ್ತಿ-ಜ್ಞಾನ-ವೈರಾಗ್ಯಗಳು ಶಕ್ತಿಯನ್ನು ಪಡೆಯಲಿಲ್ಲ, ಅಂದ ಮೇಲೆ ಪ್ರತೀಶ್ಲೋಕ, ಪ್ರತಿಪದದಲ್ಲಿಯೂ ವೇದ-ವೇದಾಂತದ ಅರ್ಥವನ್ನೇ ತುಂಬಿಕೊಂಡಿರುವ ಭಾಗವತಶ್ರವಣದಿಂದ ಹೇಗೆ ಈ ಕಾರ್ಯವಾಗಲು ಸಾಧ್ಯ” ಎಂದು ನಾರದರು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಸನಕಾದಿಗಳು ನೀಡುವ ದಿವ್ಯ ಉತ್ತರದ ವಿವರಣೆ — ಕೇಳಿಯೇ ಆಸ್ವಾದಿಸಬೇಕಾದ ಭಾಗವತದ ಮಾಹಾತ್ಮ್ಯದ ಚಿತ್ರಣ —ಇಲ್ಲಿದೆ. ಬ್ರಹ್ಮಸೂತ್ರ, ಗೀತಾ, ಭಾರತ, ವೇದಗಳಿಗಿಂತ ಕೆಳಗಿನ ಸ್ತರದಲ್ಲಿಯೇ ಭಾಗವತ ಇರುವದು, ಸಂಶಯವಿಲ್ಲ. ಆದರೆ, ಇವುಗಳ ಮಧ್ಯದಲ್ಲಿ ಭಾಗವತಕ್ಕಿರುವ ಬೆಲೆಯ ಕುರಿತು ನಾವಿಲ್ಲಿ ಕೇಳುತ್ತೇವೆ.
ಶ್ರೀಮದ್ ಭಾಗವತಮ್ — 3 — ಭಕ್ತಿಯ ಮಾಹಾತ್ಮ್ಯ, ನಾರದರ ಪ್ರತಿಜ್ಞೆ
ಭಕ್ತಿದೇವತೆಯೊಂದಿಗೆ ಮಾತನಾಡುತ್ತಿರುವ ಶ್ರೀನಾರದರು, ಕಲಿಯುಗದ ದೋಷಗಳನ್ನೂ ಹೇಳಿ, ಭಕ್ತಿಯ ಮಾಹಾತ್ಮ್ಯವನ್ನೂ ತಿಳಿಸಿ ಈ ದುಷ್ಟ ಕಲಿಯುಗದಲ್ಲಿಯೂ ಸರ್ವಸಜ್ಜನರ ಮನಸ್ಸಿನಲ್ಲಿ ಭಕ್ತಿಯನ್ನು ಸ್ಥಾಪಿಸುತ್ತೇನೆ ಎಂಬ ದಿವ್ಯವಾದ ಪ್ರತಿಜ್ಞೆಯನ್ನು ಮಾಡುತ್ತಾರೆ. ಭಕ್ತಿಯ ಮಾಹಾತ್ಮ್ಯವರ್ಣನೆಯಿಂದ ಭಕ್ತಿದೇವತೆಗೆ ಪುಷ್ಟಿ ದೊರೆಯುತ್ತದೆ. ಆದರೆ, ಆ ಭಕ್ತಿಯ ಮಕ್ಕಳಾದ ಜ್ಞಾನ, ವೈರಾಗ್ಯಗಳನ್ನು ಎಬ್ಬಿಸಲು ಸಾಧ್ಯವಾಗದೇ ಇದ್ದಾಗ, “ಮಹಾಸತ್ಕರ್ಮದ ಆಚರಣೆಯಿಂದ ಇವರು ಪುಷ್ಟರಾಗುತ್ತಾರೆ, ಜ್ಞಾನಿವರೇಣ್ಯರು ನಿಮಗೆ ಆ ಸತ್ಕರ್ಮವೇನು ಎನ್ನುವದನ್ನು ತಿಳಿಸುತ್ತಾರೆ” ಎಂಬ ಅಶರೀರವಾಣಿಯಾಗುತ್ತದೆ. ಆ ಸಾಧುಗಳು ಯಾರು ಎಂದು ಅರಸಿಕೊಂಡು ಶ್ರೀನಾರದರು ಬದರಿಕಾಶ್ರಮಕ್ಕೆ ಬಂದು ಸನಕಾದಿಯೋಗಿವರ್ಯರನ್ನು ಭೇಟಿಯಾಗುವ ಪ್ರಸಂಗದವರೆಗಿನ ಚಿತ್ರಣ ಇಲ್ಲಿದೆ.
ಶ್ರೀ ರಾಘವೇಂದ್ರಸ್ತೋತ್ರ — ಶ್ಲೋಕ — 4A
ಸಕಾಮ ಕರ್ಮ ಎಂದರೇನು, ಅದರ ಫಲದ ವಿನಿಯೋಗ ಹೇಗೆ, ದುಷ್ಟರೂ ಸಕಾಮಕರ್ಮ ಮಾಡುತ್ತಾರೆ, ಸಜ್ಜನರೂ ಸಕಾಮ ಕರ್ಮ ಮಾಡುತ್ತಾರೆ, ಎರಡಕ್ಕೂ ವ್ಯತ್ಯಾಸವೇನು? ರಾಯರಲ್ಲಿನ ಅನಭೀಷ್ಟಪುಣ್ಯಕ್ಕೂ ಬೇರೆಯವರ ಪುಣ್ಯಕ್ಕೂ ಇರುವ ವ್ಯತ್ಯಾಸವೇನು ಎನ್ನುವ ಪ್ರಶ್ನೆಗಳಿಗೆ ಇಲ್ಲಿ ಉತ್ತರಗಳಿವೆ.
ಶ್ರೀಮದ್ ಭಾಗವತಮ್ — 2 — ಕಲಿಯುಗದಲ್ಲಿ ಭಕ್ತಿ-ಜ್ಞಾನ-ವೈರಾಗ್ಯಗಳ ಪರಿಸ್ಥಿತಿ
ಕಲಿಯುಗ ಆರಂಭವಾಗಿ ಸುಮಾರು ಇನ್ನೂರೈವತ್ತು ವರ್ಷಗಳಾಗಿದ್ದಾಗ ಶ್ರೀ ನಾರದರು ಭೂಲೋಕದಲ್ಲಿ ಕಲಿಯ ಪ್ರಾಬಲ್ಯವನ್ನು ಕಾಣುತ್ತ ವೃಂದಾವನಕ್ಕೆ ಬರುತ್ತಾರೆ. ಅಲ್ಲಿ ಭಕ್ತಿ ಜ್ಞಾನ ವೈರಾಗ್ಯಗಳಿಗೆ ಅಭಿಮಾನಿಗಳಾದ ದೇವತೆಗಳ ದೀನ ಪರಿಸ್ಥಿತಿಯನ್ನು ಕಾಣುತ್ತಾರೆ. ಈ ಅವಸ್ಥೆಗೆ ಕಾರಣ ಕಲಿಯುಗವೇ ಎಂದು ಹೇಳಿದಾಗ, ಭಕ್ತಿದೇವತೆಯು ಕೇಳುವ “ಪರೀಕ್ಷಿದ್ರಾಜ ಮುಂತಾದವರು ಯಾಕಾಗಿ ಕಲಿಯುಗಕ್ಕೆ ಅವಕಾಶ ಮಾಡಿಕೊಟ್ಟರು” ಎಂಬ ಪ್ರಶ್ನೆಗೆ ನಾರದರು ದಿವ್ಯವಾದ ಉತ್ತರಗಳನ್ನು ನೀಡುತ್ತಾರೆ. ಆಚಾರ್ಯರ ನಿರ್ಣಯದೊಂದಿಗೆ ಆ ಉತ್ತರದ ವಿವರಣೆ ಈ ಭಾಗದಲ್ಲಿದೆ.
ಶ್ರೀಮದ್ ಭಾಗವತಮ್ — 1 — ಭಾಗವತದ ಮಾಹಾತ್ಮ್ಯ
ಪರೀಕ್ಷಿದ್ರಾಜರು ಪ್ರಾಯೋಪವೇಶಕ್ಕೆ ಕುಳಿತಿದ್ದಾರೆ. ಅಲ್ಲಿಗೆ ಸಮಸ್ತ ಋಷಿಗಳೂ ಆಗಮಿಸುತ್ತಾರೆ. ಶುಕಾಚಾರ್ಯರೂ ಬರುತ್ತಾರೆ. ಪರೀಕ್ಷಿದ್ರಾಜ ಅವರನ್ನು ಪ್ರಶ್ನೆ ಮಾಡಿದಾಗ ಉತ್ತರವಾಗಿ ಭಾಗವತವನ್ನು ಹೇಳಲು ಶುಕಾಚಾರ್ಯರು ಉಪಕ್ರಮಿಸುತ್ತಾರೆ. ಆಗ ಸಮಸ್ತ ದೇವತೆಗಳೂ ಅಮೃತದ ಕೊಡವನ್ನೇ ತೆಗೆದುಕೊಂಡು ಬಂದು ಪರೀಕ್ಷಿತರಿಗೆ ಈ ಅಮೃತ ಕೊಡಿ, ನಮಗೆ ಕಥಾಮೃತವನ್ನು ನೀಡಿ ಎಂದು ಕೇಳುತ್ತಾರೆ. ಆಗ ಶುಕಾಚಾರ್ಯರು क्व सुधा क्व कथा लोके क्व काचः क्व मणिर्महान् । ಎಲ್ಲಿಯ ಅಮೃತ, ಎಲ್ಲಿಯ ಭಾಗವತ, ಗಾಜಿಗೂ ರತ್ನಕ್ಕೂ ಸಾಮ್ಯವೇ ಎಂದು ಭಾಗವತದ ಮಾಹಾತ್ಮ್ಯವನ್ನು ತಿಳಿಸುವ ಅಪೂರ್ವ ಘಟನೆಯ ವಿವರ ಇಲ್ಲಿದೆ.
ವಿಭೀಷಣ ಮಹಾರಾಜರ ಕಥೆ
ರಾವಣನನ್ನು ತೊರೆದು ಬಂದ ವಿಭೀಷಣ, ಶ್ರೀರಾಮಚಂದ್ರನ ಬಳಿಗೆ ಬಂದು ಆಶ್ರಯ ಪಡೆಯುವ ಕ್ರಮವನ್ನು ಶ್ರೀ ನಾರಾಯಣಪಂಡಿತಾಚಾರ್ಯರು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. ಸುಗ್ರೀವ, ಜಾಂಬವಂತ ಮೊದಲಾಗಿ ಎಲ್ಲರೂ ವಿಭೀಷಣನನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲೇಬಾರದು ಎಂದು ವಾದಿಸುತ್ತಾರೆ. ಅವರ ಎಲ್ಲ ಮಾತಿಗೆ ಉತ್ತರವನ್ನು ಕೊಡುವ ಹನುಮಂತದೇವರು ವಿಭೀಷಣರನ್ನು ಪರಮಾತ್ಮನ ಪಾದದಡಿಯಲ್ಲಿ ಸೇರಿಸುವ ಕ್ರಮವೇ ಅದ್ಭುತ. ಭಗವಂತನ ಮತ್ತು ಭಗವದ್ಭಕ್ತರ ದಿವ್ಯಸಂಬಂಧ ಹೇಗಿರಬೇಕು ಎಂದು ಪ್ರತಿಪಾದಿಸುವ ಕಥೆ ವಿಭೀಷಣರ ಕಥೆ. ತಪ್ಪದೇ ಕೇಳಿ.
ಕಾಲ ಚಿಂತನೆ
ದೇವಕೀದೇವಿ ಚಿಂತನೆ ಮಾಡಿದ ಕಾಲನಾಮಕ ಭಗವಂತನ ಮಹಾಮಾಹಾತ್ಮ್ಯದ ವಿವರಣೆ.
ಭಾಗವತವನ್ನು ಏಕೆ ಕೇಳಬೇಕು?
ಶ್ರೀಮದ್ ಭಾಗವತದ ಶ್ರವಣವನ್ನು ಏಕೆ ಮಾಡಬೇಕು ಎನ್ನುವದಕ್ಕೆ ಪದ್ಮಪುರಾಣದಲ್ಲಿ ಶ್ರೀ ವೇದವ್ಯಾಸದೇವರು ಅದ್ಭುತವಾದ ಉತ್ತರಗಳನ್ನು ನೀಡಿದ್ದಾರೆ. ನಮ್ಮನ್ನು ಭಾಗವತಶ್ರವಣದಲ್ಲಿ ರತರನ್ನಾಗಿ ಮಾಡಿಸುವ ಆ ವಚನಗಳ ಅರ್ಥಾನುಸಂಧಾನ ಇಲ್ಲಿದೆ. ತಪ್ಪದೇ ಕೇಳಿ.
ಶ್ರೀ ರಾಘವೇಂದ್ರಸ್ತೋತ್ರ — ಶ್ಲೋಕ — 3
ಶ್ರೀರಾಘವೇಂದ್ರಃ ಸಕಲಪ್ರದಾತಾ ಸ್ವಪಾದಕಂಜದ್ವಯಭಕ್ತಿಮಧ್ಭ್ಯಃ ಅಘಾದ್ರಿಸಂಭೇದನದೃಷ್ಟಿವಜ್ರಃ ಕ್ಷಮಾಸುರೇಂದ್ರೋವತು ಮಾಂ ಸದಾಯಮ್ ।। ೩ ।।
ಭೂತರಾಜರ ಅನುಗ್ರಹ
ನಮ್ಮ ಗುರುಗಳು ನಂಬಿದವರನ್ನು ಕೈಬಿಡುವದಿಲ್ಲ ಎನ್ನುವದಕ್ಕೊಂದು ನನ್ನ ಮನೆಯಲ್ಲಿಯೇ ನಡೆದ ಘಟನೆಯ ಉದಾಹರಣೆ.
ರಾಯರ ಗ್ರಂಥ-ಗಂಗೆ
ಜೀವೇಶಬೇಧಗುಣಪೂರ್ತಿಜಗತ್ಸುಸತ್ವ- ನೀಚೋಚ್ಚಭಾವಮುಖನಕ್ರಗಣೈಃ ಸಮೇತಾ ದುರ್ವಾದ್ಯಜಾಪತಿಗಿಲೈರ್ಗುರುರಾಘವೇಂದ್ರ- ವಾಗ್ದೇವತಾಸರಿದಮುಂ ವಿಮಲೀಕರೋತು ।। ೨ ।। ಈ ಶ್ಲೋಕದ ಅರ್ಥಾನುಸಂಧಾನ ಈ ಉಪನ್ಯಾಸದಲ್ಲಿದೆ.
ರಾಯರ ವಾಗ್-ವೈಭವ
ಶ್ರೀಪೂರ್ಣಬೋಧಗುರುತೀರ್ಥಪಯೋಧಿಪಾರಾ ಕಾಮಾರಿಮಾಕ್ಷವಿಷಮಾಕ್ಷಶಿರಃಸ್ಪೃಶಂತೀ ಪೂರ್ವೋತ್ತರಾಮಿತತರಂಗಚರತ್ಸುಹಂಸಾ ದೇವಾಲಿಸೇವಿತಪರಾಂಘ್ರಿಪಯೋಜಲಗ್ನಾ ।। ೧ ।। ಈ ಶ್ಲೋಕದ ಮೂರು ಪಾದಗಳ ಅರ್ಥಾನುಸಂಧಾನ ಈ ಉಪನ್ಯಾಸದಲ್ಲಿದೆ.
ರಾಯರ ಮಾಹಾತ್ಮ್ಯ
ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರು ಪ್ರಹ್ಲಾದರಾಜರ ಅವತಾರ ಎಂದು ಶ್ರೀ ವಿಜಯದಾಸಾರ್ಯರಾದಿಯಾಗಿ ಎಲ್ಲ ಮಹಾನುಭಾವರೂ ಉಪಾಸನೆ ಮಾಡಿದ್ದಾರೆ. ಶ್ರೀರಾಘವೇಂದ್ರಸ್ವಾಮಿಗಳೇ ವ್ಯಾಸರಾಜರಾಗಿದ್ದರೆ ಅವರ ಗ್ರಂಥಕ್ಕೆ ಇವರೇಕೆ ವ್ಯಾಖ್ಯಾನ ಮಾಡುತ್ತಿದ್ದರು, ಮತ್ತು ಗೌರವ ಮಾಡುತ್ತಿದ್ದರು ಎಂಬ ಪ್ರಶ್ನೆಗೆ ಶ್ರೀಮದಾಚಾರ್ಯರು ಕೊಟ್ಟ ಉತ್ತರದ ನಿರೂಪಣೆಯೊಂದಿಗೆ ಶ್ರೀರಾಘವೇಂದ್ರಸ್ವಾಮಿಗಳು ಪಂಡಿತ-ಪಾಮರರ ಮೇಲೆ ಮಾಡುವ ಪರಮಾನುಗ್ರಹದ ಚಿತ್ರಣ ಇಲ್ಲಿದೆ.
ಗುರುದೇವತಾಭಿಷೇಕ
ನಮ್ಮ ಮನೆಯಲ್ಲಿ ಯಾವ ಗುರುಗಳ ಹಾಗೂ ಯಾವ ದೇವತೆಗಳ ಪ್ರತೀಕಗಳಿರಬೇಕು, ಅವುಗಳಲ್ಲಿ ಸಾನ್ನಿಧ್ಯವನ್ನು ತುಂಬುವ ಸಂಕ್ಷಿಪ್ತಕ್ರಮದ ವಿವರಣೆ, ಗುರು ದೇವತೆಗಳಿಗೆ ನಿರ್ಮಾಲ್ಯಾಭಿಷೇಕವನ್ನು ಅಭಿಷೇಕವನ್ನು ಮಾಡುವ ಆರೋಹಣ ಹಾಗೂ ಅವರೋಹಣಕ್ರಮಗಳು, ಅತೀಸಂಕ್ಷಿಪ್ತ, ಸಂಕ್ಷಿಪ್ತ, ವಿಸ್ತೃತ, ಪರಿಪೂರ್ಣವಾಗಿ ಮಾಡುವ ಅಭಿಷೇಕಾದಿಗಳ ವಿವರಣೆಯನ್ನು ಈ ಉಪನ್ಯಾಸದಲ್ಲಿ ನೀಡಲಾಗಿದೆ.
ನಾಗರಚೌತಿ 27ರಂದು, 26ರಂದಲ್ಲ
26-7-2017 ರಂದು ಚತುರ್ಥಿ ಮಧ್ಯಾಹ್ನವ್ಯಾಪಿನಿಯಾಗಿದ್ದರೂ, ತೃತೀಯಾವೇಧ ಎನ್ನುವ ದೋಷ ಇರುವದರಿಂದ ನಾಗರಚತುರ್ಥಿಯನ್ನು ಆಚರಿಸಬಾರದು. 27ರಂದೇ ಆಚರಿಸಬೇಕು ಎನ್ನುವದನ್ನು ಇಲ್ಲಿ ಸಪ್ರಮಾಣವಾಗಿ ಪ್ರತಿಪಾದಿಸಲಾಗಿದೆ.
ಪೂಜೆಗೆ ನೀರನ್ನು ತರುವ ಕ್ರಮ
ದೇವರ ಪೂಜೆಗೆ ನೀರು ತರಬೇಕಾದರೆ ವಿಶಿಷ್ಟ ಕ್ರಮಗಳನ್ನು ಅನುಸರಿಸಬೇಕು. ನದೀ ಸರೋವರಗಳಲ್ಲಿ ಸ್ನಾನ ಮಾಡಿದಾಗ ನೀರು ತರುವ ಕ್ರಮ, ಬಾವಿಯಲ್ಲಿ ಸ್ನಾನ ಮಾಡಿದಾಗ ನೀರು ತರುವ ಕ್ರಮ ಮತ್ತು ಮನೆಯಲ್ಲಿ ಸ್ನಾನ ಮಾಡಿದಾಗ ನೀರು ತರುವ ಕ್ರಮ ಇವುಗಳನ್ನು ಇಲ್ಲಿ ತಿಳಿಸಲಾಗಿದೆ. ದೇವರ ಪೂಜೆಗೆ ಬೇಕಾದ ಕಮಂಡಲು ಮತ್ತು ದೇವರ ಪೂಜೆಯಲ್ಲಿ ಬಳಸಲ್ಪಡುವ ಆರು ವಸ್ತ್ರಗಳ ಕುರಿತ ವಿವರಣೆ ಈ ಉಪನ್ಯಾಸದಲ್ಲಿದೆ.
ನೀರಿನ ಮಹತ್ತ್ವ ಮತ್ತು ಗುಣಲಕ್ಷಣಗಳು
ದೇವರನ್ನು ಪೂಜೆ ಮಾಡಲು ನೀರೇ ಯಾಕೆ ಬೇಕು, ಹಾಲು ಎಳನೀರು ಮುಂತಾದ ಪದಾರ್ಥಗಳಿಂದ ದೇವರ ಪೂಜೆಯನ್ನು ಮಾಡಬಾರದೇ? ಎಂಬ ಪ್ರಶ್ನೆಗೆ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ಬೃಹದಾರಣ್ಯೋಕಪನಿಷತ್ತಿನ ಭಾಷ್ಯದಲ್ಲಿ ತಿಳಿಸಿದ, ಶ್ರೀ ಮಂತ್ರಾಲಯಪ್ರಭುಗಳು ವಿವರಿಸಿರುವ ತತ್ವವನ್ನು ಇಲ್ಲಿ ನಿರೂಪಿಸಿ ನೀರಿಲ್ಲದೇ ಪೂಜೆಯಿಲ್ಲ ಎಂಬ ಮಾತನ್ನು ಪ್ರತಿಪಾದಿಸಲಾಗಿದೆ.
10/10 ಮಹಾಲಕ್ಷ್ಮಿಯೂ ದೇವರ ಅಧೀನ
ತಮ್ಮ ಮಹಾಮಾಹಾತ್ಮ್ಯವನ್ನು ಸಾಧಕವರ್ಗಕ್ಕೆ ಆರು ಮಂತ್ರಗಳಲ್ಲಿ ತಿಳಿಸಿ ಹೇಳಿದ ಲಕ್ಷ್ಮೀದೇವಿ ಪರಮಾದ್ಭುತಕ್ರಮದಲ್ಲಿ ತಾವು ಶ್ರೀಹರಿಯ ಅಧೀನ ಎನ್ನುವದನ್ನು ನಿರೂಪಿಸುತ್ತಾರೆ. ಕೇಳಿಯೇ ಆನಂದಿಸಬೇಕಾದ ಶ್ರೇಷ್ಠ ಭಾಗ. ಹೆಂಡತಿ ಏಕೆ ಗಂಡನ ಹೆಸರನ್ನು ತೆಗೆದುಕೊಳ್ಳಬಾರದು ಎನ್ನುವದರ ನಿರೂಪಣೆ ಇಲ್ಲಿದೆ. ಸಮಗ್ರ ಸೂಕ್ತಾರ್ಥದ ಸಂಕ್ಷಿಪ್ತ ವಿವರಣೆಯೊಂದಿಗೆ.
09/10 ರುದ್ರನನ್ನೂ ಸಂಹಾರ ಮಾಡುವ ದೇವತೆ
ಸಮಗ್ರ ಮೂರು ಲೋಕಗಳನ್ನು ತಮ್ಮ ನೋಟದ ಬೆಂಕಿಯಲ್ಲಿ ಪತಂಗದಂತೆ ಸುಟ್ಟು ಹಾಕುವ, ತಮ್ಮ ನರ್ತನದ ಪಾದಾಘಾತದಿಂದ ಸಮಸ್ತ ಲೋಕಗಳಲ್ಲಿ ಕಂಪವನ್ನುಂಟುಮಾಡುವ, ಸರ್ವಸಂಹಾರಕಾರದ ಮಹಾರುದ್ರದೇವರನ್ನೂ ಕೊಲ್ಲುವ ಅಪರಿಮಿತ ಸಾಮರ್ಥ್ಯದ ದೇವತೆ ಮಹಾಲಕ್ಷ್ಮೀದೇವಿ ಎನ್ನುವ ಮಹಾಮಾಹಾತ್ಮ್ಯವನ್ನು ನಾವಿಲ್ಲಿ ಕೇಳುತ್ತೇವೆ.
08/10 ಎಲ್ಲರಿಗೂ ಪದವಿ ನೀಡುವ ದೇವತೆ
ನಾನು ಯಾರನ್ನು ಅಪೇಕ್ಷೆ ಪಡುತ್ತೇನೆಯೋ ಅವರನ್ನು ಬ್ರಹ್ಮ-ರುದ್ರರನ್ನಾಗಿ ಮಾಡುತ್ತೇನೆ ಎಂದು ಲಕ್ಷ್ಮೀದೇವಿಯ ವಚನವಿದೆ. ಹಾಗಾದರೆ ಬ್ರಹ್ಮ-ರುದ್ರಾದಿಗಳ ಪದವಿಗೆ ಅನರ್ಹರಾದವರನ್ನೂ ಲಕ್ಷ್ಮೀದೇವಿ ಆ ಪದವಿಯಲ್ಲಿ ಕೂಡಿಸುತ್ತಾರೆಯೇ? ಹೌದು ಎಂದಾದರೆ ಬ್ರಹ್ಮಸೂತ್ರಗಳ ಸಿದ್ಧಾಂತಕ್ಕೆ ವಿರೋಧವುಂಟಾಯಿತು. ಇಲ್ಲ ಎಂದಾದಲ್ಲಿ ಈ ಮಾತಿಗೆ ಅರ್ಥವಿಲ್ಲದಂತಾಯಿತು ಎಂಬ ಪ್ರಶ್ನಗೆ ಶ್ರೀಮದಾಚಾರ್ಯರು ಮಹಾಭಾರತತಾತ್ಪರ್ಯನಿರ್ಣಯದಲ್ಲಿ ನೀಡಿರುವ ಉತ್ತರದ ಅರ್ಥಾನುಸಂಧಾನ ಇಲ್ಲಿದೆ. ತಪ್ಪದೇ ಕೇಳಿ.
07/10 ಮಹಾಲಕ್ಷ್ಮಿಯಿಲ್ಲದೆ ಜಗತ್ತಿಲ್ಲ
ಸಮಸ್ತ ಜೀವಸಂಕುಲದ ಸಕಲ ವ್ಯಾಪಾರಗಳೂ ಮಹಾಲಕ್ಷ್ಮೀದೇವಿಯ ಅಧೀನ ಎನ್ನುವ ಪ್ರಮೇಯದ ನಿರೂಪಣೆ ಅಂಭೃಣೀಸೂಕ್ತದ ನಾಲ್ಕನೆಯ ಮಂತ್ರದಲ್ಲಿದೆ. ತ್ರಿವಿಧ ಜೀವರಾಶಿಗಳೂ ಸಹ ಲಕ್ಷ್ಮೀದೇವಿಯ ಅಧೀನವಾಗಿದ್ದಾಗ, ಯಾಕೆ ಒಬ್ಬರಿಗೆ ಅನುಗ್ರಹವುಂಟಾಗುತ್ತದೆ ಮತ್ತಿಬ್ಬರಿಗೆ ನಿಗ್ರಹ ಎನ್ನುವದನ್ನು ಶ್ರೀ ಪದ್ಮನಾಭತೀರ್ಥಗುರುಸಾರ್ವಭೌಮರು, ಶ್ರೀಮಟ್ಟೀಕಾಕೃತ್ಪಾದರು, ಶ್ರೀಮದ್ವಾದಿರಾಜಗುರುಸಾರ್ವಭೌಮರು ಮತ್ತು ಶ್ರೀ ಮಂತ್ರಾಲಯಪ್ರಭುಗಳು ನಿರೂಪಿಸಿದ್ದಾರೆ. ಆ ಪರಮಮಂಗಳ ಪ್ರಮೇಯಗಳ ವಿವರಣೆ ಈ ಉಪನ್ಯಾಸದಲ್ಲಿದೆ.
ಪೇಜಾವರರು ಮತ್ತು ಇಫ್ತಾರ್ ಕೂಟ
ಸಮಗ್ರ ಹಿಂದೂಗಳ ಶ್ರದ್ಧಾಕೇಂದ್ರವಾದ ಶ್ರೀಮದುಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀ ಪೇಜಾವರ ಸ್ವಾಮಿಗಳು ಮುಸಲ್ಮಾನರಿಗೆ ಇಫ್ತಾರ್ ಕೂಟ ನೀಡಿದ್ದು ಒಬ್ಬ ಸಾಮಾನ್ಯ ಹಿಂದೂವಿನ ಮತ್ತು ಭಗವದ್ಗೀತೆಯ ದೃಷ್ಟಿಯಿಂದ ಯಾಕಾಗಿ ತಪ್ಪು ಎನ್ನುವದರ ನಿರೂಪಣೆ ಇಲ್ಲಿದೆ. ವೇದಧರ್ಮಗಳಲ್ಲಿ ವಿಶ್ವಾಸವಿಟ್ಟ ಒಬ್ಬ ಸಾಮಾನ್ಯ ಮನುಷ್ಯನಿಗೆ ಇದರಿಂದ ಯಾಕಾಗಿ ಆಘಾತವಾಗಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
06/10 ಜಗತ್ತಿನ ಸಮ್ರಾಜ್ಞೀ
ಸರ್ವಸ್ವಾಮಿನಿಯಾಗಿ ಶ್ರೀಹರಿಯ ಮಹಾರಾಣಿಯಾಗಿರುವ ಭೂರೂಪದಿಂದ ರಾಷ್ಟ್ರದಲ್ಲಿ ವ್ಯಾಪಿಸಿನಿಂತಿರುವ ಸಾಧನೆಗೆ ಬೇಕಾದ ಸಕಲ ಪದಾರ್ಥಗಳನ್ನು ಸಾಧಕರಿಗೆ ಹೊಂದಿಸಿನೀಡುವ ಅನಾದಿಕಾಲದಿಂದ ಸಮಸ್ತ ದೇಶ ಕಾಲಗಳಲ್ಲಿ ವ್ಯಾಪ್ತರಾದ ಸಮಸ್ತಜಗತ್ತನ್ನು ಸೃಷ್ಟಿ ಮಾಡುವ ಯಜ್ಞಕ್ಕೆ ಬೇಕಾದ ಪದಾರ್ಥಗಳನ್ನು ಮೊದಲಿಗೆ ಸೃಷ್ಟಿ ಮಾಡುವ ದೇವತೆಗಳಿಂದ ಸಂಪ್ರಾರ್ಥಿತರಾಗಿ ಅನೇಕ ಕ್ಷೇತ್ರಗಳಲ್ಲಿ ನೆಲೆಸಿರುವ ಸಾಧಕರಿಗೆ ಬೇಕಾದ ಎಲ್ಲವನ್ನೂ ಕರುಣಿಸುವ ಮಹಾಲಕ್ಷ್ಮಿಯ ಕಾರುಣ್ಯ ಮಾಹಾತ್ಮ್ಯಗಳ ಚಿಂತನೆ ಇಲ್ಲಿದೆ.
05/10 ಲಕ್ಷ್ಮೀದೇವಿ ಯಾರಿಗೆ ಸಂಪತ್ತನ್ನು ನೀಡುತ್ತಾರೆ?
ಲಕ್ಷ್ಮೀದೇವಿಯ ಅನುಗ್ರಹ ನಮ್ಮ ಮೇಲಾಗಬೇಕು ಎಂದು ಎಲ್ಲರೂ ಬಯಸುತ್ತಾರೆ. ತಾನು ಯಾರ ಮೇಲೆ ಅನುಗ್ರಹ ಮಾಡುತ್ತೇನೆ ಎಂದು ಸ್ವಯಂ ಮಹಾಲಕ್ಷ್ಮೀದೇವಿಯೇ ಹೇಳಿರುವ ಮಾತಿನ ವಿವರಣೆ ಇಲ್ಲಿದೆ.
04/10 ಲಕ್ಷ್ಮಿಯ ಸರ್ವಾಶ್ರಯತ್ವ
ಬೃಹದಾರಣ್ಯಕೋಪನಿಷತ್ತಿನ ಯಾಜ್ಞವಲ್ಕ್ಯ ಮತ್ತು ಗಾರ್ಗಿಯರ ಪ್ರಶ್ನೋತ್ತರದಲ್ಲಿ — ಅಕ್ಷರಬ್ರಾಹ್ಮಣದಲ್ಲಿ — ಪ್ರತಿಪಾದಿತವಾದ ಲಕ್ಷ್ಮೀದೇವಿಯ ಮಹಾಮಾಹಾತ್ಮ್ಯದ ಚಿಂತನೆಯೊಂದಿಗೆ ಲಕ್ಷ್ಮೀದೇವಿಯರು ಸಮಸ್ತ ಚೇತನ-ಅಚೇತನಪ್ರಪಂಚಕ್ಕೆ ಆಧಾರರಾಗಿದ್ದಾರೆ ಎಂಬ ತತ್ವ ಇಲ್ಲಿ ನಿರೂಪಿತವಾಗಿದೆ. ಶ್ರೀಮದ್ವಾದಿರಾಜರ, ಶ್ರೀ ರಾಮಚಂದ್ರತೀರ್ಥಗುರುರಾಜರ, ಶ್ರೀಮನ್ ಮಂತ್ರಾಲಯಪ್ರಭುಗಳ ವ್ಯಾಖ್ಯಾನಗಳಲ್ಲಿನ ಅಪೂರ್ವ ವಿಶೇಷಗಳ ನಿರೂಪಣೆಯೊಂದಿಗೆ.
03/10 ಮಹಾಲಕ್ಷ್ಮೀ ವೈಭವ
ಸಮಸ್ತ ದೇವತಾಸಮುದಾಯದಿಂದ ಸಂಸೇವ್ಯಮಾನರಾದವರು ಶ್ರೀ ಮಹಾಲಕ್ಷ್ಮೀದೇವಿಯರು, ಮತ್ತು ಸಮಸ್ತ ದೇವತೆಗಳಿಗೂ ವಿಜಯಪ್ರದರು ಎಂಬ ಅವರ ಮಹಾಮಹಾತ್ಮ್ಯದ ಚಿಂತನೆ ಇಲ್ಲಿದೆ.
02/10 ಅಂಭೃಣೀಸೂಕ್ತದ ಋಷಿ ದೇವತೆ ಛಂದಸ್ಸು
ಅಂಭೃಣೀ ಸೂಕ್ತದ ದ್ರಷ್ಟಾರರಾದ ಋಷಿ ಯಾರು, ಪ್ರತಿಪಾದ್ಯದೇವತೆ ಯಾರು, ಛಂದಸ್ಸುಗಳು ಯಾವುವು ಮತ್ತು ಅಂಭೃಣೀ ಸೂಕ್ತದ ಪಠಣ-ಪಾಠಣ ಶ್ರವಣ ಅಧ್ಯಯನ ಅಧ್ಯಾಪನಗಳಿಂದ ದೊರೆಯುವ ಫಲಗಳ ಕುರಿತ ವಿವರಣೆ ಇಲ್ಲಿದೆ.
01/10 ಅಂಭೃಣೀಶಬ್ದದ ಚರ್ಚೆ
ಅಂಭೃಣಿ, ಅಂಭ್ರಣಿ, ಆಂಭ್ರಣಿ ಶಬ್ದಗಳು ತಪ್ಪುಶಬ್ದಗಳೆಂದೂ, ಅಂಭ್ರಿಣೀ ಎಂಬ ಶಬ್ದವೇ ಸರಿಯಾದ ಶಬ್ದವೆಂದೂ ಬನ್ನಂಜೆ ತನ್ನ ಪುಸ್ತಕಗಳಲ್ಲಿ ಬರೆದುಕೊಂಡಿದ್ದಾರೆ. ಆದರೆ ಅಂಭ್ರಿಣೀ ಎಂಬ ಶಬ್ದವಿದೆ ಎನ್ನುವದಕ್ಕೆಯಾವ ಆಧಾರವೂ ಇಲ್ಲ ಮತ್ತು ಬನ್ನಂಜೆ ಹೇಳುವ ಅರ್ಥವೂ ಸಹ ವ್ಯಾಕರಣಕ್ಕೆ ವಿರುದ್ಧ ಎಂದು ಇಲ್ಲಿ ಪ್ರತಿಪಾದಿಸಿ ಶ್ರೀವಾದಿರಾಜಗುರುಸಾರ್ವಭೌಮರೇ ಮುಂತಾದ ಮಹನೀಯರು ತಿಳಿಸಿರುವ ಅಂಭೃಣೀ ಎಂಬ ಶಬ್ದದ ಅರ್ಥವನ್ನು ಇಲ್ಲಿ ವಿವರಿಸಲಾಗಿದೆ. ಇದರ ಲೇಖನ — VNA247
08/08 ಶ್ರೀಪಾದರಾಜರ ವೃಂದಾವನದ ಮಾಹಾತ್ಮ್ಯ
ಶ್ರೀಪಾದರಾಜರ ವೃಂದಾವನದ ಸೇವೆಯಿಂದ ದೊರೆಯುವ ಶ್ರೇಷ್ಠಫಲಗಳ ನಿರೂಪಣೆಯೊಂದಿಗೆ ಆ ವೃಂದಾನವನಗ ಮಾಹತ್ಮ್ಯವನ್ನು ಶ್ರೀಮಚ್ಚಂದ್ರಿಕಾಚಾರ್ಯರು ಪಂಚರತ್ನಮಾಲಿಕಾಸ್ತೋತ್ರದ ಕಡೆಯ ಎರಡು ಪದ್ಯಗಳಲ್ಲಿ ನಿರೂಪಿಸುತ್ತಾರೆ. ಕೇದಾರಕ್ಷೇತ್ರದ ಕುರಿತು ತಿಳಿಯಬೇಕಾದ ಮಹತ್ತ್ವದ ತತ್ವದ ನಿರೂಪಣೆ ಇಲ್ಲಿದೆ. ತಪ್ಪದೇ ಕೇಳಿ.
07/08 ಶ್ರೀಪಾದರಾಜರ ಯೋಗಸಾಮರ್ಥ್ಯ
ಅಣ್ಣನಿಗೆ ಮದುವೆಯಾಗದೇ ಇದ್ದಾಗ ತಮ್ಮ ಮದುವೆ ಮಾಡಿಕೊಳ್ಳುವದು ಅಧರ್ಮ. ಆದರೆ, ಸಾಕ್ಷಾದ್ ವೇದವ್ಯಾಸದೇವರೇ ಹೇಳಿದ ಕಾರಣಕ್ಕೆ ಭೀಮಸೇನದೇವರು ಹಿಡಿಂಬೆಯನ್ನು ಮದುವೆಯಾದದ್ದು ಧರ್ಮವೇ. ಅಧರ್ಮವಲ್ಲ. ಕಾರಣ ಅದು ಭಗವಂತನಿಗೆ ಪ್ರಿಯ. ಹಾಗೆ, ಶ್ರೀಪಾದರಾಜರು ರಾಜವೈಭವವನ್ನು ಅನುಭವಿಸುತ್ತಿದ್ದದ್ದು ಪರಮಾತ್ಮನಿಗೆ ಪ್ರಿಯ ಎಂಬ ಕಾರಣಕ್ಕೆ ಅದು ಮಹತ್ತರ ಧರ್ಮವೇ ಹೊರತು ಅಧರ್ಮವಲ್ಲ ಎಂಬ ಉತ್ತರವನ್ನು ಹಿಂದಿನ ಉಪನ್ಯಾಸದಲ್ಲಿ ಪಡೆದುಕೊಂಡೆವು. ಆದರೆ, ಅದು ದೇವರಿಗೆ ಪ್ರಿಯ ಎಂದು ನಿರ್ಣಯಿಸುವದು ಹೇಗೆ, ಯಾರೋ ಏನೋ ಅಧರ್ಮ ಮಾಡಿ ಅದು ದೇವರಿಗೆ ಪ್ರಿಯ ಎಂದು ಹೇಳಬಹುದಲ್ಲವೇ ಎಂಬ ಪ್ರಶ್ನೆಗೆ ಶ್ರೀಮಚ್ಚಂದ್ರಿಕಾಚಾರ್ಯರು, ಶ್ರೀ ವಿಜಯೀಂದ್ರಗುರುರಾಜರು ಮತ್ತು ಶ್ರೀ ಶ್ರೀನಿಧಿತೀರ್ಥಶ್ರೀಪಾದಂಗಳವರು ನೀಡಿರುವ ಉತ್ತರಗಳ ಸಂಗ್ರಹ ಇಲ್ಲಿದೆ.
06/08 ಶ್ರೀಪಾದರಾಜರ ರಾಜವೈಭವ
ಬೆರಳುಗಳಿಗೆ ಉಂಗುರ, ಕೈಗಳಿಗೆ ಕಂಕಣ, ತೊಳುಗಳಿಗೆ ಕೇಯೂರ, ಕೊರಳಿಗೆ ಕಂಠೀಹಾರ, ವಿಧವಿಧದ ರತ್ನಹಾರಗಳು, ಮುತ್ತಿನ ಕವಚ, ಕಿರೀಟ, ಅಶ್ವ, ಗಜ, ಪಲ್ಲಕ್ಕಿ, ರಥ ಮುಂತಾದ ವಾಹನಗಳನ್ನು ಮುಂತಾದವುಗಳಿಂದ ಪರಿಶೋಭಿತರಾದ ಯತಿಕುಲವರೇಣ್ಯರು ವೈರಾಗ್ಯನಿಧಿಗಳು ಶ್ರೀ ಶ್ರೀಪಾದರಾಜಗುರುಸಾರ್ವಭೌಮರು. ಯತಿಧರ್ಮಕ್ಕೆ ವಿರುದ್ಧವಾದ ಇವನ್ನು ಶ್ರೀಪಾದರಾಜರು ಹೇಗೆ ಸ್ವೀಕರಿಸಿದರು, ತಪ್ಪಲ್ಲವೇ ಎಂಬ ಪ್ರಶ್ನೆಗೆ ಶ್ರೀಮನ್ ಮಧ್ವಸಿದ್ಧಾಂತ ನೀಡಿದ ಉತ್ತರದ ಸಂಗ್ರಹ ಇಲ್ಲಿದೆ. ತಪ್ಪದೇ ಕೇಳಿ.
05/08 ಶ್ರೀಪಾದರಾಜರ ವಾದವೈಭವ
ಸಮಗ್ರ ಮಾಧ್ವಜ್ಞಾನಿಪರಂಪರೆಯ ಗುರುಗಳಾದ ಶ್ರೀಮಚ್ಚಂದ್ರಿಕಾಚಾರ್ಯರು ಮಾಡಿರುವ ಶ್ರೀ ಶ್ರೀಪಾದರಾಜಗುರುಸಾರ್ವಭೌಮರ ಪರಮಾದ್ಭುತವಾದ ವಿದ್ಯಾವೈಭವ, ವಾದವೈಭವಗಳ ಚಿತ್ರಣ ಈ ಉಪನ್ಯಾಸದಲ್ಲಿ.
04/08 ಶ್ರೀಪಾದರಾಜರ ಕಾರುಣ್ಯ
ಶ್ರೀಪಾದರಾಜರು ತಮ್ಮ ಭಕ್ತರ ಮೇಲೆ ತೋರುತ್ತಿದ್ದ, ಇಂದಿಗೂ ತೋರುತ್ತಿರುವ ಅಪಾರ ಕಾರುಣ್ಯದ ಚಿತ್ರಣ ಇಲ್ಲಿದೆ. ಅವರ ಭವ್ಯದೇಹದ ಚಿಂತನೆಯೊಂದಿಗೆ.
03/08 ಶ್ರೀಪಾದರಾಜರ ಪೂಜಾವೈಭವ
ಶ್ರೀ ಪದ್ಮನಾಭತೀರ್ಥಶ್ರೀಪಾದಂಗಳವರು ತಮ್ಮ ಶಿಷ್ಯರಾದ ಶ್ರೀ ಲಕ್ಷ್ಮೀಧರತೀರ್ಥರಿಗೆ ಆಚಾರ್ಯಕರಾರ್ಚಿತವಾದ ಒಂದೂ ಪ್ರತಿಮೆಯನ್ನೂ ನೀಡಲಿಲ್ಲವೆಂದೂ, ಶ್ರೀಪಾದರಾಜ ಮಠದಲ್ಲಿ ಯಾವುದೂ ಆಚಾರ್ಯಕರಾರ್ಚಿತ ಪ್ರತಿಮೆ ಇಲ್ಲವೆಂದೂ, ತಾವೇ ದೊಡ್ಡವರು ಎಂಬ ಭ್ರಾಂತಿಯಲ್ಲಿರುವ ಕೆಲವರು ತಮ್ಮ ಪುಸ್ತಕಗಳಲ್ಲಿ ಬರೆದುಕೊಂಡಿದ್ದಾರೆ. ಸುಳ್ಳನ್ನೇ ಪರಂಪರೆಯಾಗುಳ್ಳ ಈ ಜನರಿಗೆ ಶ್ರೀ ವಾದಿರಾಜಗುರುಸಾರ್ವಭೌಮರು ಉತ್ತರ ನೀಡಿದ್ದಾರೆ. ಗೋಪೀನಾಥಪ್ರತಿಮೆ ಕೇವಲ ಆಚಾರ್ಯಕರಾರ್ಚಿತವಲ್ಲ, ಶ್ರೀ ವೇದವ್ಯಾಸದೇವರಿಂದಲೇ ನೀಡಲ್ಪಟ್ಟಿದ್ದು ಎಂಬ ಐತಿಹಾಸಿಕ ನಿರ್ಣಯವನ್ನು ಶ್ರೀ ರಾಜರು ನೀಡಿದ್ದಾರೆ. ಅದರ ವಿವರಣೆ ಮತ್ತು ಶ್ರೀ ಶ್ರೀಪಾದರಾಜಗುರುಸಾರ್ವಭೌಮರ ಪೂಜಾವೈಭವದ ಚಿತ್ರಣ ಈ ಉಪನ್ಯಾಸದಲ್ಲಿದೆ. “ಪೂಜಿತಶ್ರೀಸಹಾಯಮ್” ಎಂಬ ಚಂದ್ರಿಕಾಚಾರ್ಯರ ವಚನದ ಅರ್ಥಾನುಸಂಧಾನರೂಪವಾಗಿ.
02/08 ಶ್ರೀಪಾದರಾಜರ ವಾತ್ಸಲ್ಯ ಮತ್ತು ಆಕರ್ಷಕ ವ್ಯಕ್ತಿತ್ವ
ಶ್ರೀ ಶ್ರೀಪಾದರಾಜರ ಗುಣಮಾಹಾತ್ಮ್ಯಗಳನ್ನು ಚಿಂತನೆ ಮಾಡಹೊರಟಿರುವ ಶ್ರೀಮಚ್ಚಂದ್ರಿಕಾಚಾರ್ಯರು ತಮ್ಮ ಗುರುಗಳಲ್ಲಿ ಮೊದಲು ಸ್ತೋತ್ರ ಮಾಡಿದ ಗುಣ — ರುಚಿತಮಹೃದಯಮ್ ಎಂದು. ತಮ್ಮ ಶಿಷ್ಯರ ಮೇಲೆ ವಾತ್ಸಲ್ಯದ ಪೂರವನ್ನು ಹರಿಸುತ್ತಿದ್ದ ಶ್ರೀಪಾದರಾಜರು, ತಮ್ಮ ಗುರುಗಳ ಪೂರ್ಣ ಅನುಗ್ರಹಕ್ಕೆ ಪಾತ್ರರಾಗಿದ್ದವರು. ಸ್ವರ್ಣವರ್ಣತೀರ್ಥಶ್ರೀಪಾದಂಗಳವರು, ವಿಬುಧೇಂದ್ರತೀರ್ಥಶ್ರೀಪಾದಂಗಳವರು ಮುಂತಾದ ತಮಗಿಂತ ದೊಡ್ಡವರ ವಾತ್ಸಲ್ಯವನ್ನು ಪಡೆದು, ಚಂದ್ರಿಕಾಚಾರ್ಯರಾದಿ ಶಿಷ್ಯರಿಗೆ ಆ ವಾತ್ಸಲ್ಯವನ್ನು ಧಾರೆಯೆರೆದ ಘಟನೆಯನ್ನು ನಾವಿಲ್ಲಿ ಕೇಳುತ್ತೇವೆ.
01/08 ಶ್ರೀಪಾದರಾಜ ಎಂಬ ಶಬ್ದದ ಅರ್ಥ
ತಮ್ಮ ವಿದ್ಯಾಗುರುಗಳಾದ ಶ್ರೀ ಶ್ರೀಪಾದರಾಜಗುರುಸಾರ್ವಭೌಮರ ಮಹಾಮಾಹಾತ್ಮ್ಯಗಳನ್ನು ಶಿಷ್ಯರಿಗೆ ತಿಳಿಸಲೋಸುಗ ಶ್ರೀಮಚ್ಚಂದ್ರಿಕಾಚಾರ್ಯರು ಶ್ರೀಪಾದರಾಜಪಂಚರತ್ನಮಾಲಿಕಾ ಸ್ತೋತ್ರ ಎಂಬ ಪರಮಮಂಗಳ ಕೃತಿಯನ್ನು ರಚಿಸಿದ್ದಾರೆ. ಈ ಸ್ತೋತ್ರದ “ವಂದೇ ಶ್ರೀಪಾದರಾಜಮ್” ಎಂಬ ಮೊದಲ ಎರಡು ಶಬ್ದಗಳ ವಿವರಣೆ ಈ ಉಪನ್ಯಾಸದಲ್ಲಿದೆ. ಶ್ರೀಪಾದರಾಜ ಎಂಬ ಶಬ್ದಕ್ಕೆ ಶ್ರೀ ವಿಜಯದಾಸಾರ್ಯರು ತಮ್ಮ ಸುಳಾದಿಯಲ್ಲಿ ಹೇಳಿದ ಅರ್ಥದ ಅನುಸಂಧಾನದೊಂದಿಗೆ.
PN09 ನಿರ್ಮಾಲ್ಯವಿಸರ್ಜನೆಯ ಕ್ರಮ
ನಿರ್ಮಾಲ್ಯ ವಿಸರ್ಜನೆಯ ಉಂಟಾಗುವ ಮಹತ್ತರ ಫಲಗಳು, ಆ ಫಲಕ್ಕಾಗಿ ಸಂಕಲ್ಪ ಮಾಡಬೇಕೆ ಎಂಬ ಪ್ರಶ್ನೆಗೆ ಶ್ರೀ ಮಂತ್ರಾಲಯಪ್ರಭುಗಳು ನೀಡಿದ ಉತ್ತರ, ನಿರ್ಮಾಲ್ಯ ವಿಸರ್ಜನೆಯ ಕ್ರಮ, ಇರಬೇಕಾದ ಎಚ್ಚರಗಳು, ಮಾಡಬೇಕಾದ ಅನುಸಂಧಾನಗಳ ಕುರಿತ ವಿವರಣೆ ಈ ಉಪನ್ಯಾಸದಲ್ಲಿದೆ. ಇದರ ಲೇಖನ — VNA246
PN08 ನಿರ್ಮಾಲ್ಯವಿಸರ್ಜನೆಯ ಸಮಯ
ಪದ್ಯಮಾಲಾ ಗ್ರಂಥದಲ್ಲಿ ಶ್ರೀಮಟ್ಟೀಕಾಕೃತ್ಪಾದರು ಮಧ್ಯಾಹ್ನಕಾಲದಲ್ಲಿ ನಿರ್ಮಾಲ್ಯವಿಸರ್ಜನೆಯನ್ನು ವಿಧಿಸಿದಂತೆ ತೋರುತ್ತದೆ. ಇದು ಪಂಚರಾತ್ರಾಗಮ, ಸಂನ್ಯಾಸಪದ್ಧತಿ ಮತ್ತು ಶ್ರೀ ಮಧ್ವವಿಜಯಗಳಿಗೆ ವಿರುದ್ಧ. ಆದರೆ ವಸ್ತುಸ್ಥಿತಿಯಲ್ಲಿ ವಿರೋಧವೇ ಇಲ್ಲ. ಅರುಣೋದಯಕಾಲದಲ್ಲಿಯೇ ನಿರ್ಮಾಲ್ಯವಿಸರ್ಜನೆ ಎನ್ನುವದು ಟೀಕಾಕೃತ್ಪಾದರಿಗೂ ಅಭಿಪ್ರೇತ. ಆದರೆ ಇಲ್ಲಿ ಮಧ್ಯಾಹ್ನಕಾಲದಲ್ಲಿ ನಿರ್ಮಾಲ್ಯವಿಸರ್ಜನೆಯನ್ನು ಹೇಳುತ್ತಿರುವ ಟೀಕಾಕೃತ್ಪಾದರು ಅನೇಕ ಅಪೂರ್ವ ತತ್ವಗಳನ್ನು ತಿಳಿಸಿ ಹೇಳುತ್ತಿದ್ದಾರೆ. ಪ್ರಮಾಣಗಳ ಸಮೇತವಾಗಿ ಆ ತತ್ವಗಳ ನಿರೂಪಣೆ ಇಲ್ಲಿದೆ. ಇದರ ಲೇಖನ — VNA245
PN07 ನಿರ್ಮಾಲ್ಯತೀರ್ಥ ಮತ್ತು ಊರ್ಧ್ವಪುಂಡ್ರಧಾರಣೆ
ಕೆಲವರು, “ಕೇವಲ ನೀರಿನಿಂದ ಗೋಪೀಚಂದನ ಹಚ್ಚಿಕೊಳ್ಳಬಾರದು, ಕಾರಣ ಕೇವಲ ನೀರಿನಲ್ಲಿ ಕಲಿಯ ಸನ್ನಿಧಾನವಿರುತ್ತದೆ. ಅದಕ್ಕಾಗಿ ನಿರ್ಮಾಲ್ಯತೀರ್ಥದಿಂದಲೇ ಗೋಪಿಯನ್ನು ತೇಯಬೇಕು” ಎಂದು ತಿಳಿದು ಸ್ನಾನ ಮಾಡಿ, ನಿರ್ಮಾಲ್ಯವಿಸರ್ಜನೆ, ಅಭಿಷೇಕಗಳನ್ನು ಮುಗಿಸಿ, ಆ ನಂತರ ಗೋಪಿಯನ್ನು ಹಚ್ಚಿಕೊಂಡು ಸಂಧ್ಯಾವಂದನೆ ಮಾಡುವ ಕ್ರಮ ಇಟ್ಟುಕೊಂಡಿದ್ದಾರೆ. ಇದು ಶ್ರೀಮದಾಚಾರ್ಯರ ಆಚರಣೆಗೆ ಮತ್ತು ಪರಂಪರೆಯ ಜ್ಞಾನಿಗಳು ತಿಳಿಸಿದ ಕ್ರಮಕ್ಕೆ ವಿರುದ್ದ ಎನ್ನುವದನ್ನು ಇಲ್ಲಿ ಸಪ್ರಮಾಣವಾಗಿ ಪ್ರತಿಪಾದಿಸಲಾಗಿದೆ. ಇದರ ಲೇಖನ VNA244
ಅಜಾಮಿಳನ ಕಥೆ
ಅಜಾಮಿಳನ ಕಥೆಯನ್ನು ನಾವೆಲ್ಲರೂ ಕೇಳಿದ್ದೇವೆ. ಹತ್ತಾರು ಜನ ಹೇಳಿರಬಹುದು. ಆದರೆ ಶ್ರೀ ಕನಕದಾಸಾರ್ಯರ ವಾಣಿಯಲ್ಲಿ ಬರುವ ಕಥೆಯ ನಿರೂಪಣೆಯೇ ಅದ್ಭುತ. ನಮ್ಮ ಮನಸ್ಸು ಚೈತನ್ಯಗಳ ಮೇಲೆ ಅದ್ಭುತವಾದ ಪರಿಣಾಮವನ್ನು ಬೀರುವ ಅವರ ವಚನಗಳ ಅರ್ಥಾನುಸಂಧಾನ ಇಲ್ಲಿದೆ.
ಕೃಷ್ಣಾವತಾರ
ಶ್ರೀಕೃಷ್ಣನ ಅವತಾರದಿಂದ ಆರಂಭಿಸಿ ಪರಂಧಾಮಪ್ರವೇಶದವರೆಗಿನ ಘಟನೆಗಳ ಸ್ಮರಣೆ.
ಭಕ್ತರ ತಾಯಿ ದೇವರು
ದೇವರಿಗೂ ಭಕ್ತರಿಗೂ ಇರುವ ತಾಯಿ ಮಕ್ಕಳ ಸಂಬಂಧದ ನಿರೂಪಣೆ, ಶ್ರೀ ಕನಕದಾಸಾರ್ಯರ ವಾಣಿಯಲ್ಲಿ. ತಪ್ಪದೇ ಕೇಳಿ.
ದೇವರು ಭಕ್ತರ ಬಾಂಧವ್ಯ
ನಾವು ಎಷ್ಟು ಬ್ಯಾಂಕಿನಲ್ಲಿ ಹಣ ಇಟ್ಟಿದ್ದೇವೆಯೋ ಅಷ್ಟನ್ನು ಮಾತ್ರ ಬ್ಯಾಂಕು ತಿರುಗಿಸಿ ಕೊಡುತ್ತದೆ. ದೇವರೂ ಸಹ ನಾವು ಎಷ್ಟು ಸೇವೆಯನ್ನು ಮಾಡುತ್ತೇವೆಯೋ ಅಷ್ಟು ಮಾತ್ರ ಫಲ ನೀಡುತ್ತಾನೆ. ಅಂದಮೇಲೆ, ದೇವರಿಗೂ ಒಂದು ಬ್ಯಾಂಕಿಗೂ ಏನು ವ್ಯತ್ಯಾಸ? ಎಂಬ ಪ್ರಶ್ನೆಗೆ ನಮ್ಮ ಶ್ರೀಕನಕದಾಸರು ಅದ್ಭುತವಾದ ಉತ್ತರವನ್ನು ನೀಡಿದ್ದಾರೆ. ಕೇಳಿ.
ಹನುಮನ ಭಾಗ್ಯ
ದೇವರು ಕೇವಲ ಕರ್ಮದ ಅನುಸಾರವಾಗಷ್ಟೇ ಅಲ್ಲ, ಸ್ವಭಾವದ ಅನುಸಾರವಾಗಿಯೂ ಫಲ ನೀಡುತ್ತಾನೆ, ಸ್ವಭಾವ ಅಧಿಕವಾದಷ್ಟೂ ಫಲ ಅಧಿಕವಾಗುತ್ತದೆ ಎಂಬ ತತ್ವವನ್ನು ಹನುಮಂತದೇವರ ಮೇಲೆ ಪರಮಾತ್ಮ ಮಾಡಿದ ಪರಮಾನುಗ್ರಹದ ಚಿತ್ರಣದ ಮುಖಾಂತರ ಶ್ರೀ ಕನಕದಾಸಾರ್ಯರು ಪ್ರತಿಪಾದಿಸುತ್ತಾರೆ. ಆ ತತ್ವದ ವಿವರಣೆ ಇಲ್ಲಿದೆ.
ಪೂಜೆಯಿಂದ ಉದ್ವಿಗ್ನತೆಯ ಪರಿಹಾರ
ದೇವರ ಪೂಜೆಯನ್ನು ನಿರಂತರ ಮಾಡುವದರಿಂದ ಅದೆಂತಹ ಕಷ್ಟಗಳು ಎದುರಾದರೂ ಉದ್ವೇಗಕ್ಕೆ ಒಳಗಾಗದೆ ಬದುಕುವ ಎತ್ತರವನ್ನು ದೇವರ ಪೂಜೆ ನೀಡುತ್ತದೆ ಎನ್ನುವ ವಿಷಯದ ನಿರೂಪಣೆ ಇಲ್ಲಿದೆ. ತಪ್ಪದೇ ಕೇಳಿ.
ವಿಭೀಷಣಪಾಲ
ಒಬ್ಬ ಮನುಷ್ಯನಿಗೆ ಮತ್ತೊಬ್ಬನು ತೊಂದರೆ ಮಾಡಿದರೆ ತೊಂದರೆ ಮಾಡಿದವನ ಇಡಿಯ ಕುಲವನ್ನು ಮನುಷ್ಯರು ದೂರ ಇಡುತ್ತಾರೆ, ದ್ವೇಷ ಮಾಡುತ್ತಾರೆ. ಅಂತಹುದರಲ್ಲಿ ತನ್ನ ಹೆಂಡತಿಯನ್ನೇ ಅಪಹಾರ ಮಾಡಿದ ರಾವಣನ ತಮ್ಮನನ್ನು ತನ್ನವನ್ನಾಗಿ ಭಗವಂತ ಸ್ವೀಕಾರ ಮಾಡಿದ, ಹೀಗಾಗಿ “ಎಷ್ಟು ಮಾಡಿದರೇನು ಮುನ್ನ ತಾ ಪಡೆಯವಷ್ಟೆಯೆಂಬುದ ಲೋಕದೊಳು ಮತಿಗೆಟ್ಟ ಮಾನವಾರುಡುತಿಹರು” ಎಂಬ ಜನರ ಆಕ್ಷೇಪ ಹುರುಳಿಲ್ಲದ್ದು. ನಮ್ಮ ಸ್ವಾಮಿಗೆ ಮನುಷ್ಯರ ಹೋಲಿಕೆ, ಧಣಿಗಳ ಹೋಲಿಕೆ ಸಲ್ಲ ಎಂಬ ತತ್ವವನ್ನು ಶ್ರೀ ಕನಕದಾಸಾರ್ಯರು ಇಲ್ಲಿ ನಿರೂಪಿಸುತ್ತಾರೆ. ಶ್ರೀಮನ್ನಾರಾಯಣಪಂಡಿತಾಚಾರ್ಯರ ಸಂಗ್ರಹರಾಮಾಯಣದ ವಚನಗಳ ಉಲ್ಲೇಖದೊಂದಿಗೆ ಇಲ್ಲಿ ವಿಭೀಷಣಮಹಾರಾಜರ ಕಥೆಯ ನಿರೂಪಣೆಯಿದೆ.
ಶ್ರೀ ತ್ರಿವಿಕ್ರಮಪಂಡಿತಾಚಾರ್ಯರ ಕೌಶಲ
ಶ್ರೀ ತ್ರಿವಿಕ್ರಮಪಂಡಿತಾಚಾರ್ಯರ ಶಬ್ದಪ್ರಯೋಗಕೌಶಲವೇ ಅದ್ಭುತ. ಅವರು ರಚಿಸಿರುವ ದಿವ್ಯಸ್ತೋತ್ರವಾದ ಶ್ರೀ ವಿಷ್ಣುಸ್ತುತಿಯ ಮಾಧುರ್ಯಸಮದ್ರದಿಂದ ತಂದಿರುವ ಒಂದು ಸಣ್ಣ ಬೊಗಸೆಯಿದು.
ಗಂಗೆಯ ವ್ಯಾಪ್ತತ್ವ
ಆಚಾರ್ಯರು ಹಸ್ತಿನಾವತಿಯಲ್ಲಿ ಚಾತುರ್ಮಾಸ್ಯಕ್ಕಾಗಿ ಕುಳಿತಾಗ ಗಂಗೆ ಆಚಾರ್ಯರಿದ್ದಲ್ಲಿಗೇ ಹರಿದು ಬಂದ ಘಟನೆಯನ್ನು ಕೇಳುತ್ತೇವೆ. ಉಡುಪಿಯ ಮಧ್ವಸರೋವರಕ್ಕೆ ಬರುವ ಘಟನೆಯನ್ನು ಕೇಳುತ್ತೇವೆ. ಶ್ರೀಪಾದರಾಜಗುರುಸಾರ್ವಭೌಮರಿಗಾಗಿ ನರಸಿಂಹತೀರ್ಥಕ್ಕೆ ಗಂಗೆ ಬಂದ ಘಟನೆಯನ್ನು ಕೇಳುತ್ತೇವೆ. ಅತೀ ಕ್ಷುದ್ರರಾದ ನಾವು ನಮ್ಮ ಮನೆಯಲ್ಲಿ ಸ್ನಾನ ಮಾಡುವಾಗಲೂ ಗಂಗೆಯ ಸ್ಮರಣೆ ಮಾಡಿದರೆ, ಸ್ನಾನದ ನೀರಿನಲ್ಲಿ ಗಂಗೆಯ ಸನ್ನಿಧಾನ ಉಂಟಾಗುತ್ತದೆ ಎಂದು ಶಾಸ್ತ್ರ ತಿಳಿಸುತ್ತದೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ, ಶ್ರೀ ವಿಜಯದಾಸಾರ್ಯರು ತಮ್ಮ ಸುಳಾದಿಯಲ್ಲಿ ಉತ್ತರ ನೀಡಿದ್ದಾರೆ. ಆ ಪರಮಪವಿತ್ರ ಪ್ರಮೇಯದ ಚಿಂತನೆ ಇಲ್ಲಿದೆ.
ಧನ್ಯೋ ಗೃಹಸ್ಥಾಶ್ರಮಃ
ಗೃಹಸ್ಥಾಶ್ರಮದಲ್ಲಿ ಮಾಡಬೇಕಾದ ಸಾಧನೆ, ಆ ಸಾಧನೆಯನ್ನು ಮಾಡಲು ಮಾಡಬೇಕಾದ ಪ್ರಾರ್ಥನೆ, ಸಾಧನೆ ಮಾಡಿದವರ ಚರಿತ್ರೆಯ ನಿರೂಪಣೆ ಇಲ್ಲಿದೆ.
ಕನಕದಾಸರು ಹೇಳಿದ ಒಂದು ಗಿಳಿಯ ಕಥೆ
ದೇವರಿಗೆ ನಮ್ಮನ್ನು ನಾವು ನಿವೇದಿಸಿಕೊಳ್ಳುವದು ಹೇಗೆ, ಆತ್ಮಸಮರ್ಪಣೆ ಎಂದರೇನು, ನಿವೇದಿಸಿಕೊಂಡು ಯಾವ ಪ್ರಾರ್ಥನೆ ಸಲ್ಲಿಸಬೇಕು, ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ತಪ್ಪದೇ ಕೇಳಿ.
ದೇವರನ್ನು ಒಲಿಸಿಕೊಳ್ಳಲು ಏನು ಮಾಡಬೇಕು?
ಶಾಸ್ತ್ರ ತಿಳಿಸುವ ಸರಳ ಮತ್ತು ಪರಿಣಾಮಕಾರಿ ಮಾರ್ಗದ ನಿರೂಪಣೆ ಇಲ್ಲಿದೆ. ನೀವೂ ಕೇಳಿ. ಎಲ್ಲ ಸಜ್ಜನರಿಗೂ ಕೇಳಿಸಿ.
ತೀರ್ಥಪ್ರಾಶನದ ಮಾಹಾತ್ಮ್ಯ
ದೇವರಿಗೆ ಅಭಿಷೇಕ ಮಾಡಿದ ತೀರ್ಥವನ್ನು ಸ್ವೀಕರಿಸುವದರಿಂದ ಹನ್ನೆರಡು ವರ್ಷಗಳ ಉಪವಾಸದ ಫಲ ದೊರೆಯುತ್ತದೆ ಎಂಬ ಮಾಹಾತ್ಮ್ಯವನ್ನು ಸ್ವಯಂ ಶ್ರೀಮದಾಚಾರ್ಯರು ಕೃಷ್ಣಾಮೃತಮಹಾರ್ಣವದಲ್ಲಿ ತಿಳಿಸಿದ್ದಾರೆ. ಅದರ ವಿವರಣೆ ಇಲ್ಲಿದೆ.
ಗೋಪಿಗೀತೆ
ದೇವರ ಬಗೆಗೆ ನಮಗಿರುವ ಭಕ್ತಿಯನ್ನು ನೂರ್ಮಡಿ ಗೊಳಿಸುವ ಗೀತೆ ಗೋಪಿಗೀತೆ. ದೇವರ ಕಾರುಣ್ಯದ ಮಹಾರೂಪವನ್ನ ಪರಿಚಯಿಸುವ ಹಾಡುಗಬ್ಬ.
ವಾಲ್ಮೀಕಿ ಋಷಿಗಳ ಕಥೆ
ಶ್ರೀ ವಾಲ್ಮೀಕಿ ಋಷಿಗಳನ್ನು ಭಗವಂತ ಉದ್ಧಾರ ಮಾಡಿದ ರೋಮಾಂಚಕಾರಿ ಇತಿಹಾಸದ ನಿರೂಪಣೆ. ನೀವೂ ಕೇಳಿ. ನಿಮ್ಮ ಮಕ್ಕಳಿಗಂತೂ ತಪ್ಪದೇ ಕೇಳಿಸಿ.
ಒಬ್ಬ ಧಣಿಗೂ ದೇವರಿಗೂ ಏನು ವ್ಯತ್ಯಾಸ?
ಫಲ ನೀಡಲಿಕ್ಕಾಗದ ಕರ್ಮಗಳಿಗೆ ಭಗವಂತ ಫಲ ನೀಡುತ್ತಾನೆ ಎನ್ನುವದನ್ನು ಬಿಟ್ಟರೆ ಮತ್ತೇನು ದೊಡ್ಡಸ್ತಿಕೆ ದೇವರಲ್ಲಿದೆ ? “ಎಷ್ಟು ಮಾಡಿದರೇನು ಮುನ್ನ ತಾ ಪಡೆವಷ್ಟೆ” ನಾವು ಮಾಡಿದ ಕರ್ಮಕ್ಕಷ್ಟೇ ಫಲ ಪಡೆಯಲು ಸಾಧ್ಯ. ದುಡಿಸಿಕೊಂಡು ಸಂಬಳ ನೀಡುವ ಒಬ್ಬ ಧಣಿಗೂ, ದೇವರಿಗೂ ಏನೂ ವ್ಯತ್ಯಾಸ ಉಳಿಯಲಿಲ್ಲ ಎಂಬ ಪ್ರಶ್ನೆಗೆ ಶ್ರೀ ಕನಕದಾಸಾರ್ಯರು ಅದ್ಭುತವಾದ ಮೂರು ಉತ್ತರಗಳನ್ನು ನೀಡಿದ್ದಾರೆ. ಕೇಳಿ ಆಸ್ವಾದಿಸಿ.
ಭ್ರಮರಕೀಟನ್ಯಾಯ
ಭ್ರಮರಕೀಟನ್ಯಾಯದಂದದಲಿ ನಮ್ಮನು ರಕ್ಷಿಸು ಎಂದು ಶ್ರೀ ಕನಕದಾಸಾರ್ಯರು ಆದಿಕೇಶವನನ್ನು ಬೇಡಿದ್ದಾರೆ. ಈ ಭ್ರಮರಕೀಟನ್ಯಾಯ ಎನ್ನುವದು ದೇವರಿಗೂ ಜೀವರಿಗೂ ಇರುವ ಸಂಬಂಧವನ್ನು ಅದ್ಭುತವಾಗಿ ನಿರೂಪಿಸುವ ಒಂದು ದೃಷ್ಟಾಂತ. ನಾವು ಯಾರು, ನಾವು ಹೇಗೆ ಸಾಧನೆ ಮಾಡಬೇಕು ಎನ್ನುವದನ್ನು ಕಲಿಸುವ, ಬಸವಳಿದು ನಿಂತವರನ್ನು ಹುರಿದುಂಬಿಸುವ ಈ ಅದ್ಭುತ ಭ್ರಮರಕೀಟನ್ಯಾಯದ ಕುರಿತ ವಿವರಣೆ ಇಲ್ಲಿದೆ. ತಪ್ಪದೇ ಕೇಳಿ.
ಸಂಕಲ್ಪ ಸಮರ್ಪಣೆ ಏಕೆ ಬೇಕು?
ನಮ್ಮಿಂದ ಕರ್ಮ ಮಾಡಿಸುವವನು ದೇವರೇ, ಅವನಿಗೆ ತಿಳಿಯದ್ದು ಯಾವುದೂ ಇಲ್ಲ. ಅಂದ ಮೇಲೆ ಸಂಕಲ್ಪ ಏಕೆ ಮಾಡಬೇಕು, ಸಮರ್ಪಣೆ ಏಕೆ ಮಾಡಬೇಕು ಎನ್ನುವ ಪ್ರಶ್ನೆಗಳಿಗೆ ನಮ್ಮ ಆದಿಕೇಶವನ ದಾಸರಾದ ಶ್ರೀ ಕನಕದಾಸಾರ್ಯರು ನಮ್ಮ ಮನಸ್ಸಿನಲ್ಲಿ ನಾಟಿ ಉಳಿಯುವಂತಹ ಅದ್ಭುತ ಉತ್ತರವನ್ನು ನೀಡಿದ್ದಾರೆ. ಕೇಳಿ ಅಸ್ವಾದಿಸಿ.
ಉಡುಪಿಯ ಕೃಷ್ಣನ ಇತಿಹಾಸ
ಉಡುಪಿಗೆ ಕೃಷ್ಣನ ಪ್ರತಿಮೆ ನಿರ್ಮಾಣವಾದದ್ದು ಹೇಗೆ, ಉಡುಪಿಗೆ ಬಂದದ್ದು ಹೇಗೆ, ಆಚಾರ್ಯರಿಗೆ ದೊರೆತದ್ದು ಹೇಗೆ ಎನ್ನುವದರ ಕುರಿತು ಶ್ರೀ ಪಲಿಮಾರು ಮಠದ ಶ್ರೀ ರಘುವರ್ಯತೀರ್ಥಶ್ರೀಪಾದಂಗಳವರು ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ. ಅಲ್ಲಿನ ವಿಷಯದ ಅನುವಾದ ಇಲ್ಲಿದೆ.
ಮಹಾಮಹಿಮ
ಗಾಯತ್ರಿಯ ಜಪ ಮಾಡುವಾಗ, ಸಾಲಿಗ್ರಾಮ ಪ್ರತಿಮೆಗಳ ಪೂಜೆ ಮಾಡುವಾಗ, ಶ್ರೀಹರಿಯನ್ನು ಭಕ್ತಿಯಿಂದ ನೆನೆವಾಗ, ಅವನ ಪರಮಪವಿತ್ರಪಾದಗಳಿಗೆ ಹಣೆಮಣಿದು ನಮಸ್ಕರಿಸುವಾಗ ನಮ್ಮ ಮನಸ್ಸಿನಲ್ಲಿ ಮೂಡಲೇಬೇಕಾದ ಹರಿಮಾಹಾತ್ಮ್ಯದ ಚಿಂತನೆ. ತಪ್ಪದೇ ಕೇಳಿ.
ದ್ರೌಪದಿ ವಸ್ತ್ರಾಪಹರಣದ ಆಧ್ಯಾತ್ಮಿಕ ಅರ್ಥ
ದ್ರೌಪದೀದೇವಿಯರ ವಸ್ತ್ರಾಪಹರಣ ಪ್ರಸಂಗದ ಕುರಿತು ಸಮಾಜದಲ್ಲಿರುವ ಒಂದು ಭ್ರಾಂತಿಯನ್ನು ಆಚಾರ್ಯರ ನಿರ್ಣಯದ ಆಧಾರದ ಮೇಲೆ ನಿವಾರಿಸಿ ಇಡಿಯ ದ್ರೌಪದೀ ವಸ್ತ್ರಾಪಹರಣದ ಪ್ರಸಂಗ ನಮ್ಮೊಳಗೆ ಹೇಗೆ ನಡೆಯುತ್ತದೆ, ಎನ್ನುವದನ್ನು ವಿವರಿಸುತ್ತ, ನಾವು ಕಲಿಯಿಂದ ಕಲಿಯ ಪ್ರಭಾವದಿಂದ ಹೇಗೆ ಪಾರಾಗುವದು ಎನ್ನುವದನ್ನು ವಿವರಿಸುವ ಭಾಗ.
PN06 ದೇವರ ಮನೆಯ ಸ್ವಚ್ಛತೆ
ದೇವರ ಮನೆಯನ್ನು ಸ್ವಚ್ಛ ಮಾಡಬೇಕಾದ ಸಮಯ, ಮಾಡುವ ಕ್ರಮ, ಸ್ವಚ್ಛ ಮಾಡಬೇಕಾದರೆ ಇರಬೇಕಾದ ಎಚ್ಚರಗಳು, ಮನಸ್ಸಿಗೆ ಬರಬೇಕಾದ ಅನುಸಂಧಾನಗಳು, ಸ್ವಚ್ಛ ಮಾಡುವ ಈ ಸಾಮಾನ್ಯ ಕ್ರಿಯೆಗೆ ನಮ್ಮ ಸ್ವಾಮಿ ನೀಡುವ ಅಸಾಮಾನ್ಯ ಫಲಗಳು ಇವೆಲ್ಲದರ ಕುರಿತ ವಿವರಣೆ ಈ ಉಪನ್ಯಾಸದಲ್ಲಿದೆ.
ನಮ್ಮೊಳಗಿನ ಮಹಾಭಾರತ
ಮಹಾಭಾರತ ಎನ್ನುವದು ಕೇವಲ ಎಂದೋ ನಡೆದು ಹೋದ ಇತಿಹಾಸವಲ್ಲ. ಪ್ರತಿಯೊಬ್ಬನ ಚೇತನನಲ್ಲಿಯೂ ಮಹಾಭಾರತ ಯಾವಾಗಲೂ ನಡೆಯುತ್ತದೆ. ನಮ್ಮೊಳಗೆ ನಡೆಯುವ ಆಧ್ಯಾತ್ಮಿಕ ಮಹಾಭಾರತವನ್ನು ಅನಾವರಣಗೊಳಿಸಿದವರು ಶ್ರೀಮದಾಚಾರ್ಯರು. ಆ ಉತ್ತುಂಗ ಚಿಂತನೆಯ ವಿವರಣೆ ಇಲ್ಲಿದೆ.
ಗೋಪೀ-ಕೃಷ್ಣರ ಶೃಂಗಾರ
“ಬಗೆಬಗೆಯ ರತಿಕಲೆಯಲಿ ಕೂರುಗುರ ನಾಟಿಸಿ ಈ ಜಗಕೆ ಪಾವನನಾದೆ” ಎನ್ನುತ್ತಾರೆ ಶ್ರೀ ಕನಕದಾಸಾರ್ಯರು. ಭಗವಂತನೆಡೆಗೆ ನಮಗಿರುವ ಭಕ್ತಿಯನ್ನು ನೂರ್ಮಡಿ ಮಾಡುವ ಭಾಗ, ದೇವರ ಮಹಾಮಾಹಾತ್ಮ್ಯವನ್ನು ನಮಗೆ ಪರಿಚಯಿಸುವ ಭಾಗ ಗೋಪಿಕಾ-ಕೃಷ್ಣರ ರಾಸಲೀಲೆಯ ಪ್ರಸಂಗ. ಗೋಪಿಗೀತೆಯ ಅನೇಕ ಪದ್ಯಗಳ ಅರ್ಥಾನುಸಂಧಾನವೂ ಇಲ್ಲಿದೆ. ತಪ್ಪದೇ ಕೇಳಿ.
ಶ್ರೀಕೃಷ್ಣ ಕರ್ಣನನ್ನು ಪಾಂಡವರ ಪಾಳೆಯಕ್ಕೆ ಕರೆದದ್ದು ಸರಿಯೇ?
ಕರ್ಣ ಹಿಂದೆ ಸುಗ್ರೀವನಾಗಿದ್ದಾಗ ಮಾಡಿದ ಪಾಪಕ್ಕೆ ಶ್ರೀಕೃಷ್ಣ ಶಿಕ್ಷೆಯನ್ನು ನೀಡುತ್ತಿದ್ದಾನೆ, ಸರಿ. ಆದರೆ, ಅವನನ್ನು “ಕೊಲ್ಲ ಬಗೆದವನಗಾಗಿ” ಪಾಂಡವರ ಪಾಳೆಯಕ್ಕೆ ಬಾ ಎಂದು ಕರೆದದ್ದು ಎಷ್ಟು ಸರಿ ಎಂಬ ಪ್ರಶ್ನೆಗೆ ಶ್ರೀ ಕನಕದಾಸಾರ್ಯರು ಅದ್ಭುತವಾದ ಉತ್ತರವನ್ನು ನೀಡಿದ್ದಾರೆ, ತಪ್ಪದೇ ಕೇಳಿ. ದೇವರ ಶರಣಾಗತಿಯಿಂದ ದೊರೆಯುವ ಫಲವೇನು ಎನ್ನುವದನ್ನು ಅತ್ಯದ್ಭುತವಾಗಿ ಶ್ರೀ ಕನಕದಾಸಾರ್ಯರು ಇಲ್ಲಿ ನಿರೂಪಿಸಿದ್ದಾರೆ.
ಪಾಪ ಕಳೆದುಕೊಳ್ಳದೇ ಉದ್ಧಾರವಿಲ್ಲ
ಸಾಕಷ್ಟು ಕೆಟ್ಟ ಕೆಲಸಗಳನ್ನು ಮೊದಲು ಮಾಡಿದ ವ್ಯಕ್ತಿ, ಆ ನಂತರ ದಲ್ಲಿ ಒಳ್ಳೆಯ ಮಾರ್ಗದಲ್ಲಿ ಬಂದ ಮಾತ್ರಕ್ಕೆ ಅವನಿಗೆ ಎಲ್ಲವೂ ಒಳ್ಳೆಯದೇ ಆಗುವದಿಲ್ಲ, ಹಿಂದೆ ಮಾಡಿದ ಪಾಪದ ಪ್ರಕ್ಷಾಲನೆಯನ್ನು ಮಾಡಿಕೊಳ್ಳದೇ ಅವನಿಗೆ ದುಃಖ ತಪ್ಪಿದ್ದಲ್ಲ ಎನ್ನುವ ಮಹತ್ತ್ವದ ಪ್ರಮೇಯದ ಚಿಂತನೆ ಇಲ್ಲಿದೆ. ಕರ್ಣ ಮಹಾಭಾರತದ ದುರಂತ ನಾಯಕ. ಅವನ ಆ ರೀತಿಯ ಬದುಕಿಗೆ ಕಾರಣವೇನು ಎನ್ನುವದನ್ನು ತಿಳಿಯಲು ಅವನ ಹಿಂದಿನ ಜನ್ಮವಾದ ಸುಗ್ರೀವನ ಜನ್ಮದ ಚರ್ಯೆಗಳ ಚಿಂತನೆ ಇಲ್ಲಿದೆ. ಸುಗ್ರೀವನ ಜೀವನ ಅರ್ಥವಾದರೆ ಕರ್ಣನ ಜೀವನ ನಮಗರ್ಥವಾಗುತ್ತದೆ ಎನ್ನುವದನ್ನು ನಾವಿಲ್ಲಿ ತಿಳಿಯುತ್ತೇವೆ. ಸುಗ್ರೀವನ ಜೊತೆಯಲ್ಲಿ ಶ್ರೀರಾಮಚಂದ್ರನೇ ಇದ್ದರೂ ಸಹ ಅವನು ಹೇಗೆ ತಪ್ಪು ಮಾಡಲು ಸಾಧ್ಯ? ಮಾಡಿದ್ದು ತಪ್ಪಾಗಲು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ತಪ್ಪದೇ ಕೇಳಿ.
PN05 ಪೂಜೆಯ ಪಕ್ಷಿನೋಟ
ದೇವರ ಮನೆಯ ಸ್ವಚ್ಛತೆಯಿಂದ ಆರಂಭಿಸಿ ಸಮಗ್ರ ದೇವರ ಪೂಜೆಯ ಒಂದು ಪಕ್ಷಿನೋಟ ಇಲ್ಲಿದೆ. ಯಾವುದರ ನಂತರ ಯಾವ ಕ್ರಿಯೆಯನ್ನು ಮಾಡಬೇಕು ಎಂದು ತಿಳಿಸುವ ಉಪನ್ಯಾಸ. ಇದರ ಲೇಖನ VNA239.
PN04 ಪೂಜೆಯಿಂದ ಉಂಟಾಗುವ ಪ್ರಯೋಜನಗಳು
ಶ್ರೀಹರಿಯ ಅನಂತ ಪ್ರೀತಿಯನ್ನು ಕರುಣಿಸುವ, ಮಹಾಪಾತಕಗಳನ್ನೂ ಪರಿಹರಿಸುವ, ವಿಷ್ಣುಮಾಯೆಯನ್ನೂ ನಮ್ಮಿಂದ ಗೆಲ್ಲಿಸುವ ದೇವರ ಪೂಜೆಯ ಮಹಾಮಾಹಾತ್ಮ್ಯಗಳನ್ನು ಹಿಂದಿನ ಲೇಖನಗಳಲ್ಲಿ ತಿಳಿದೆವು. ನಮ್ಮ ಮನಸ್ಸಿನ ಸಣ್ಣಸಣ್ಣ ಅಪೇಕ್ಷೆಗಳನ್ನೂ ಸಹ ಪೂರೈಸುವ ಕಾಮಧೇನು ಈ ದೇವರಪೂಜೆ ಎನ್ನುವದನ್ನು ಶ್ರೀಮದಾಚಾರ್ಯರು ಪ್ರತಿಪಾದಿಸುತ್ತಾರೆ. ಅವರ ಪವಿತ್ರವಚನಗಳ ಅರ್ಥಾನುಸಂಧಾನ ಇಲ್ಲಿದೆ. ಇದರ ಲೇಖನ VNA238
PN03 ಪೂಜೆಯ ಮಾಹಾತ್ಮ್ಯ
ಶ್ರೀಕೃಷ್ಣಾಮೃತಮಹಾರ್ಣವ ಮುಂತಾದ ಕೃತಿಗಳಲ್ಲಿ ದೇವರ ಪೂಜೆಯ ಮಾಹಾತ್ಮ್ಯವನ್ನು ದಿವ್ಯವಾದ ಕ್ರಮದಲ್ಲಿ ತಿಳಿಸಿ ಹೇಳಿದ್ದಾರೆ. ದೇವರ ಪೂಜೆಯ ಕುರಿತು ನಮಗೆ ಶ್ರದ್ಧೆ ಮೂಡಿಸುವ, ಇರುವ ಶ್ರದ್ಧೆಯನ್ನು ನೂರ್ಮಡಿ ಮಾಡುವ ಆ ಭಗವತ್ಪಾದರ ಪರಮಪವಿತ್ರ ವಚನಗಳ ಅರ್ಥಾನುಸಂಧಾನ ಇಲ್ಲಿದೆ.
ಸೋದರಳಿಯನನ್ನೇ ಕಾಪಾಡದ ದೇವರನ್ನು ನಂಬಬೇಕೆ?
ದೇವರು ಸರ್ವಪ್ರಕಾರದಲ್ಲಿಯೂ ನಮ್ಮನ್ನು ರಕ್ಷಿಸುತ್ತಾನೆ ಎಂದು ಶಾಸ್ತ್ರ ಹೇಳುತ್ತದೆ. ಆದರೆ ಅಭಿಮನ್ಯುವಿಗೆ ಸೋದರಮಾವನಾಗಿಯೂ ಶ್ರೀಕೃಷ್ಣ ಅವನನ್ನು ರಕ್ಷಿಸಲಿಲ್ಲ. ಅಂದಮೇಲೆ ದೇವರನ್ನು ನಂಬಬೇಕೇಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಅಭಿಮನ್ಯುವಿನ ಪ್ರಸಂಗ
ಕುರುಕ್ಷೇತ್ರಯುದ್ಧದಲ್ಲಿನ ಒಂದು ಮನಕಲಕುವ ಘಟನೆ ಅಭಿಮನ್ಯುವಿನ ಮರಣ. ಶ್ರೀ ಕನಕದಾಸಾರ್ಯರು “ಅಭಿಮನ್ಯುವನು ಕೊಲ್ಲಿಸಿದೆ ಕೊಳಗುಳದಿ” ಎಂದು ಶ್ರೀಕೃಷ್ಣನೇ ಅಭಿಮನ್ಯುವಿನ ಮರಣಕ್ಕೆ ಕಾರಣ ಎನ್ನುತ್ತಾರೆ. ಈ ಮಾತಿನ ಅಭಿಪ್ರಾಯದ ವಿವರಣೆಯೊಂದಿಗೆ, ಅಭಿಮನ್ಯುವಿನ ಮರಣ ಮತ್ತು ಸುಭದ್ರೆಯನ್ನು ಶ್ರೀಕೃಷ್ಣ ಸಾಂತ್ವನಗೊಳಿಸಿದ ರೀತಿಯ ವಿವರಣೆ ಇಲ್ಲಿದೆ. ಅಭಿಮಾನತ್ಯಾಗ ಮಾಡಬೇಕು ತತ್ವವನ್ನು ಶ್ರೀಕೃಷ್ಣ ಅರ್ಜುನನಿಗೆ ಉಪದೇಶಿಸಿದ್ದ. ಆ ಅಭಿಮಾನತ್ಯಾಗದ ತತ್ವವನ್ನು ಈಗ ತನ್ನ ತಂಗಿಯಿಂದಲೇ ಅನುಷ್ಠಾನ ಮಾಡಿಸಬೇಕಾದ ಕರ್ತವ್ಯ ಶ್ರೀಕೃಷ್ಣನಿಗೊದಗಿ ಬರುತ್ತದೆ. ಭಗವಂತ ಅದನ್ನು ಯಾವ ರೀತಿ ಮಾಡಿದ ಎನ್ನುವದರ ವಿವರಣೆ ಇಲ್ಲಿದೆ. ಈ ವಿಷಯ ಮುಂದಿನ ಉಪನ್ಯಾಸಕ್ಕೂ ಮುಂದುವರೆಯುತ್ತದೆ.
PN02 ದೇವರ ಪೂಜೆಯಿಂದ ದೊರೆಯುವ ಪುಣ್ಯ
ಫಲದ ಅಪೇಕ್ಷೆ ಇಲ್ಲದೆ ಕರ್ಮ ಮಾಡು ಎನ್ನುವದು ಗೀತಾಸಿದ್ಧಾಂತ. ಫಲವನ್ನು ಅಪೇಕ್ಷಿಸಬಾರದು ಎಂದಾದ ಮೇಲೆ, ಫಲದ ಕುರಿತು ಏಕೆ ತಿಳಿಯಬೇಕು ಎಂಬ ಪ್ರಶ್ನೆಗೆ ಶ್ರೀಮದಾಚಾರ್ಯರು ಭಾಗವತತಾತ್ಪರ್ಯನಿರ್ಣಯದಲ್ಲಿ ನೀಡಿದ ಉತ್ತರದೊಂದಿಗೆ ಆರಂಭವಾಗುವ ಈ ಉಪನ್ಯಾಸದಲ್ಲಿ ಶಾಸ್ತ್ರ ತಿಳಿಸುವ ಸಾಧನೆಗಳಲ್ಲಿ ದೇವರ ಪೂಜೆಯ ಸ್ಥಾನ ಎಷ್ಟನೆಯದು ಎನ್ನುವದನ್ನು ನಿರೂಪಿಸಲಾಗಿದೆ. ವಿಷ್ಣುಪ್ರೇರಣಯಾ ವಿಷ್ಣುಪ್ರೀತ್ಯರ್ಥಂ ಎಂದು ಸಂಕಲ್ಪ ಮಾಡುತ್ತೇವೆ, ದೇವರ ಪೂಜೆ ಮಾಡುವದರಿಂದ ಆ ವಿಷ್ಣುಪ್ರೀತಿ ಎಷ್ಟು ದೊರೆಯುತ್ತದೆ, ನಮ್ಮ ಸ್ವಾಮಿ ಎಷ್ಟು ಕರುಣಾಳು, ಪ್ರತೀನಿತ್ಯ ನಾವು ಮಾಡುವ ಈ ದೇವರಪೂಜೆ ಅದೆಂತ ಮಹೋತ್ಕೃಷ್ಟ ಸಾಧನೆ ಎನ್ನುವದನ್ನು ಮನದಟ್ಟು ಮಾಡಿಸುವ ಉಪನ್ಯಾಸವಿದು. ತಪ್ಪದೇ ಕೇಳಿ.
PN01 ಪೂಜೆಯನ್ನು ಏಕೆ ಮಾಡಬೇಕು?
ದೇವರ ಪೂಜೆಯನ್ನು ಯಾಕಾಗಿ ಮಾಡಬೇಕು ಎನ್ನುವ ಪ್ರಶ್ನೆಗೆ ಭಗವದ್ಗೀತೆ ನಾಲ್ಕು ಉತ್ತರಗಳನ್ನು ನೀಡಿದೆ. ಶ್ರೀಮದಾಚಾರ್ಯರು ತಂತ್ರಸಾರಸಂಗ್ರಹದಲ್ಲಿ ಒಂದು ಉತ್ತರವನ್ನು ನೀಡಿದ್ದಾರೆ. ಪ್ರಧಾನವಾದ ಈ ಐದು ಉತ್ತರಗಳ ವಿವರಣೆ ಈ ಉಪನ್ಯಾಸದಲ್ಲಿದೆ. ಕೇಳಿದ ನಂತರ ದೇವರ ಪೂಜೆಯನ್ನು ಮಾಡದೆ ಇರಲು ಸಾಧ್ಯವಿಲ್ಲದಂತಹ ಮನಃಸ್ಥಿತಿಯನ್ನು ಕರುಣಿಸುವ ಅದ್ಭುತವಾದ ಉತ್ತರಗಳು. ನೀವು ಕೇಳುವದಷ್ಟೇ ಅಲ್ಲ, ನಿಮ್ಮ ಮಕ್ಕಳಿಗೂ ತಪ್ಪದೇ ಈ ಉಪನ್ಯಾಸವನ್ನು ಕೇಳಿಸಿ.
2017 ಹೇಮಲಂಬ ಸಂವತ್ಸರದ ಪಂಚಾಂಗ ಶ್ರವಣ
ಚೈತ್ರ ಶುದ್ಧ ಪ್ರತಿಪದೆಯಂದು ಬೆಳಗಿನ ಹೊತ್ತು ಪಂಚಾಂಗಶ್ರವಣವನ್ನು ಮಾಡುವದರಿಂದ, ದುರಿತಗಳಿಂದ ವಿಮುಕ್ತಿ, ಉತ್ತಮ ಸಂಪತ್ತು, ಆರೋಗ್ಯ ಮತ್ತು ಆಯುಷ್ಯ ದೊರೆಯುತ್ತದೆ ಎಂದು ಶಾಸ್ತ್ರಗಳು ತಿಳಿಸಿ ಹೇಳುತ್ತವೆ. ಕಾಲಗಳ ವಿಭಾಗ, ಕಾಲನಾಮಕ ಭಗವಂತನ ಮಹಾಮಾಹಾತ್ಮ್ಯ, ತಿಥಿ, ವಾರ, ನಕ್ಷತ್ರ, ಯೋಗ, ಕರಣಗಳಿಗೆ ನಿಯಾಮಕರಾದ ದೇವತೆಗಳು, ಹೇಮಲಂಬ ಸಂವತ್ಸರದ ನವನಾಯಕರು, ಅವರಿಂದ ಉಂಟಾಗುವ ಫಲಗಳು, ಅವರಲ್ಲಿ ನಾವು ಮಾಡಬೇಕಾದ ಪ್ರಾರ್ಥನೆ ಈ ಎಲ್ಲವೂ ಈ ಉಪನ್ಯಾಸದಲ್ಲಿವೆ.
ಕುರುಕ್ಷೇತ್ರ ಯುದ್ಧದ ಒಂದು ವಿಚಿತ್ರ ಘಟನೆ
ಪರ್ಣಾಶಾ ಎಂಬ ನದಿಯ ಮತ್ತು ವರುಣನ ಮಗ ಶ್ರುತಾಯುಧ ಎಂಬ ರಾಜ. ಅವನ ಬಳಿ ಒಂದು ಅದ್ಭುತವಾದ ಗದೆಯಿರುತ್ತದೆ. ಯುದ್ಧದಲ್ಲಿ ಅರ್ಜುನನಿಂದ ಬಸವಳಿದು ಹೋದ ಶ್ರುತಾಯುಧ ತನ್ನ ಗದೆಯನ್ನು ತೆಗೆದುಕೊಂಡು ಬಂದು ಅರ್ಜುನನ ರಥವೇರಿ ಅರ್ಜುನನನ್ನು ಹೊಡೆಯುವ ಬದಲು ಶ್ರೀಕೃಷ್ಣನನ್ನು ಹೊಡೆಯುತ್ತಾನೆ. ಆಗ ಆ ಗದೆ ಅವನ ತಲೆಗೇ ತಿರುಗಿ ಅಪ್ಪಳಿಸಿ ಹೊಡೆಯುತ್ತದೆ. ತಲೆ ನೂರು ಹೋಳಾಗಿ ಶ್ರುತಾಯುಧ ಸತ್ತು ಬೀಳುತ್ತಾನೆ. ಈ ಘಟನೆ ಮತ್ತು ಇದು ಸೂಚನೆ ಮಾಡುವ ಆಧ್ಯಾತ್ಮಿಕ ಅರ್ಥದ ಕುರಿತ ಚಿಂತನೆ ಈ ಭಾಗದಲ್ಲಿದೆ. “ವಿವರವೇನೋ ತಿಳಿಯೆ” ಎಂಬ ಶ್ರೀ ಕನಕದಾಸಾರ್ಯರ ಮಾತಿನ ಅಭಿಪ್ರಾಯದ ಸಮರ್ಥನೆಯೊಂದಿಗೆ.
ದೇವರೊಡ್ಡುವ ಪರೀಕ್ಷೆಯನ್ನು ಗೆಲ್ಲುವ ಬಗೆ
ಸಾಧನೆಯ ಮಾರ್ಗದಲ್ಲಿ ದೇವರು ಕಣ್ಣಿಗೆ ಕಾಣಿಸುವಂತೆ ನಮ್ಮ ಜೊತೆಯಲ್ಲಿ ಇರುವದಿಲ್ಲ, ಅಥವಾ ಇಂತಿಂತಹ ಘಟನೆಗಳು ನಡೆಯುತ್ತವೆ, ಸಿದ್ಧನಾಗಿರು ಎಂದೂ ತಿಳಿಸುವದಿಲ್ಲ. ಪ್ರತೀಕ್ಷಣ ಹೊಸ ಸವಾಲುಗಳು ಜೀವನದಲ್ಲಿ ಎದುರಾಗುತ್ತವೆ. ನಾವು ದೇವರಲ್ಲಿ ವಿಶ್ವಾಸವಿಟ್ಟೇ ಮುಂದುವರೆಯಬೇಕು. ಆ ವಿಶ್ವಾಸ ಹೇಗಿರಬೇಕು ಮತ್ತು ದೇವರು ಆ ವಿಶ್ವಾಸವನನ್ನು ಪರೀಕ್ಷಿಸುವ ಬಗೆ, ನಾವು ಅದನ್ನು ದಾಟುವ ಕ್ರಮ ಎಲ್ಲವನ್ನೂ ಸ್ವಯಂ ಶ್ರೀಕೃಷ್ಣ ಈ ಘಟನೆಯ ಮುಖಾಂತರ ತಿಳಿಸುತ್ತಾನೆ, ತಪ್ಪದೇ ಕೇಳಿ.
ಕೃಷ್ಣಾರ್ಜುನರ ರಣ ವೈಭವ
ಘನಘೋರವಾದ ಕುರುಕ್ಷೇತ್ರದ ಯುದ್ಧ. ಜಯದ್ರಥನನ್ನು ಇಂದು ಸಂಜೆಯ ಒಳಗೆ ಕೊಂದೇ ಕೊಲ್ಲುತ್ತೇನೆ, ಎಂದು ಅರ್ಜುನ ಪ್ರತಿಜ್ಞೆ ಮಾಡಿ ಹೊರಟಿರುತ್ತಾನೆ. ಜಯದ್ರಥನನ್ನು ಕೊಲ್ಲಲಿಕ್ಕಾಗದಿದ್ದರೆ ಅರ್ಜುನ ಅಗ್ನಿಪ್ರವೇಶ ಮಾಡುತ್ತಾನೆ, ಸುಲಭವಾಗಿ ಅವನ ಸಾವಾಗುತ್ತದೆ ಎಂದು ಎಣಿಸಿದ ಕೌರವರು ಮಹಾಪ್ರಯತ್ನ ಮಾಡಿ ಅರ್ಜುನನ್ನು ಎಲ್ಲ ಕಡೆಯಿಂದಲೂ ತಡೆಹಿಡಿದಿರುತ್ತಾರೆ. ಅಂತಹ ಭೀಕರ ಪರಿಸ್ಥಿತಿಯಲ್ಲಿಯೂ ರಥಕ್ಕೆ ಸ್ಥಳ ಮಾಡಿಕೊಳ್ಳುತ್ತ ಕೃಷ್ಣ ರಥ ಮುನ್ನಡೆಸುತ್ತಿರುತ್ತಾನೆ. ಬಳಲಿದ ಕುದುರೆಗಳು ಬಾಯಾರಿ ಬಿಡುತ್ತವೆ. ಆಗ ಯುದ್ಧದ ಮಧ್ಯದಲ್ಲಿಯೇ ರಥವನ್ನು ನಿಲ್ಲಿಸಿ, ರಥದಿಂದ ಕುದುರೆಗಳನ್ನು ಬಿಚ್ಚಿ, ಅವುಗಳಿಂದ ತಗುಲಿದ್ದ ಬಾಣಗಳನ್ನು ತೆಗೆದು, ಮುಲಾಮು ಹಚ್ಚಿ, ನೀರು ಕುಡಿಸಿ, ಆಹಾರ ತಿನ್ನಿಸಿ ಅವುಗಳ ಶ್ರಮವನ್ನು ಶ್ರೀಕೃಷ್ಣ ಪರಿಹಾರ ಮಾಡುತ್ತಾನೆ. ನೀರು ಸಾಲದು ಎಂದಾಗ ಅರ್ಜುನ ಸರೋವರವನ್ನೇ ನಿರ್ಮಿಸುತ್ತಾನೆ. ರಣರಂಗದ ಮಧ್ಯದಲ್ಲಿ ಒಂದು ಉದ್ಯಾನವನದಲ್ಲಿ ಇದ್ದಂತೆ ವರ್ತಿಸಿದ ಆ ಕೃಷ್ಣಾರ್ಜುನರ ಅದ್ಭುತ ಸಾಹಸದ ಚಿತ್ರಣ ಈ ಭಾಗದಲ್ಲಿದೆ.
ಶ್ರೀಹರಿಭಕ್ತಿಸಾರದ 32-33ನೇ ಪದ್ಯಗಳು
ಜೀವ ಮತ್ತು ಪರಮಾತ್ಮರ ಸಂಬಂಧವನ್ನು ನಿರೂಪಿಸುವ ಸಂದರ್ಭದಲ್ಲಿ ಶ್ರೀ ಕನಕದಾಸಾರ್ಯರು ಇದ್ದಕ್ಕಿದ್ದಂತೆ ಮಹಾಭಾರತದ ಕುರಿತು ಮಾತನಾಡುತ್ತಾರೆ. ಆ ಮಹಾನುಭಾವರ ಉಕ್ತಿಯ ಅಭಿಪ್ರಾಯವನ್ನು ಶ್ರೀಮದಾಚಾರ್ಯರ ತಾತ್ಪರ್ಯನಿರ್ಣಯದ ಆಧಾರದೊಂದಿಗೆ ಇಲ್ಲಿ ವಿವರಿಸಲಾಗಿದೆ. ನಮ್ಮೊಳಗೇ ನಡೆಯುವ ಮಹಾಭಾರತವನ್ನು, ಅರ್ಥಾತ್ ಮಹಾಭಾರತದ ಆಧ್ಯಾತ್ಮಿಕ ಮುಖವನ್ನು ಪರಿಚಯಿಸುವದರೊಂದಿಗೆ.
ಸತ್ಯಾತ್ಮರು ಹೇಳಿದ ಸುಳ್ಳುಕಥೆ
ಶ್ರೀವ್ಯಾಸರಾಜರಿಗೆ ವೃದ್ಧಾಪ್ಯವಾಗಿದ್ದಾಗ ನ್ಯಾಯಾಮೃತಕ್ಕೆ ಖಂಡನೆ ಬಂದಿತೆಂದೂ, ಅದನ್ನು ಓದುವಷ್ಟೂ ಸ್ಥಿತಿ ಶ್ರೀ ವ್ಯಾಸರಾಜರಿಗೆ ಇರಲಿಲ್ಲವೆಂದೂ, ಅವರ ಶಿಷ್ಯರಿಗೂ ಖಂಡನೆ ಬರೆಯಲು ಆಗಲಿಲ್ಲವೆಂದೂ, ಅದಕ್ಕಾಗಿ ಶ್ರೀ ವ್ಯಾಸರಾಜರು ತಮ್ಮ ಶಿಷ್ಯರನ್ನು ಶ್ರೀ ರಘೂತ್ತಮರ ಬಳಿಗೆ ಕಳುಹಿಸಿದರೆಂದೂ ಉತ್ತರಾದಿ ಮಠದ ಸತ್ಯಾತ್ಮರು ಹೇಳಿದ ಕಟ್ಟುಕತೆಯ ಖಂಡನೆ ಇಲ್ಲಿದೆ.
ಶತ್ರುಗಳನ್ನು ಗೆಲ್ಲುವ ಕ್ರಮ
ಆಂತರಿಕ ಶತ್ರು, ಬಾಹ್ಯಶತ್ರು, ಹಿತಶತ್ರು, ಸಮೂಹಶತ್ರು ಎಂಬ ಶತ್ರುಗಳನ್ನು ಸಾಧಕನು ಗೆಲ್ಲುವ ಬಗೆಯ ವಿವರಣೆ ಇಲ್ಲಿದೆ.
HGM13 ಭಕ್ತರ ಮೇಲೆ ಶ್ರೀ ವಿದ್ಯಾರತ್ನಾಕರತೀರ್ಥರ ಅನುಗ್ರಹ
ಶ್ರೀ ವಿದ್ಯಾರತ್ನಾಕರತೀರ್ಥಗುರುಸಾರ್ವಭೌಮರು ಈ ಹರಿಗುರುಮಂಗಳಾಷ್ಟಕದ ಕಡೆಯ ಪದ್ಯದಲ್ಲಿ ತುಂಬು ಕಾರುಣ್ಯದಿಂದ ನಮ್ಮನ್ನು ಆಶೀರ್ವದಿಸುತ್ತಾರೆ. ಅವರ ಪರಮಪವಿತ್ರ ಆಶೀರ್ವಚನಗಳ ಅನುವಾದ ಈ ಭಾಗದಲ್ಲಿದೆ.
HGM12 ಶ್ರೀ ವಿದ್ಯಾಸಮುದ್ರತೀರ್ಥರ ಕಾರುಣ್ಯದ ವರ್ಣನೆ
ಹರಿಗುರುಮಂಗಳಾಷ್ಟಕದ ಎಂಟನೆಯ ಪದ್ಯದಲ್ಲಿ ಶ್ರೀ ವಿದ್ಯಾರತ್ನಾಕರತೀರ್ಥಗುರುರಾಜರು ತಮ್ಮ ಗುರುಗಳಾದ ಶ್ರೀ ವಿದ್ಯಾಸಮುದ್ರತೀರ್ಥಗುರುಸಾರ್ವಭೌಮರ ಕಾರುಣ್ಯ ಮಾಹಾತ್ಮ್ಯಗಳನ್ನು ಮೈಯುಬ್ಬಿ ವರ್ಣನೆ ಮಾಡಿ ಅವರಿಂದ ಮಂಗಳವನ್ನು ಪ್ರಾರ್ಥಿಸುತ್ತಾರೆ. ಆ ಪರಮಪವಿತ್ರ ಶ್ಲೋಕದ ವಿವರಣೆ ಈ ಭಾಗದಲ್ಲಿದೆ.
HGM11 ಶ್ರೀ ವಿದ್ಯಾ ಶ್ರೀನಿವಾಸತೀರ್ಥಶ್ರೀಪಾದರ ವರೆಗಿನ ಪರಂಪರೆ
ಶ್ರೀವಿದ್ಯಾನಿಧಿತೀರ್ಥಶ್ರೀಪಾದಂಗಳವರು, ಶ್ರೀವಿದ್ಯಾಪೂರ್ಣತೀರ್ಥಶ್ರೀಪಾಂದಗಳವರು, ಶ್ರೀವಿದ್ಯಾಸಿಂಧುತೀರ್ಥಶ್ರೀಪಾದಂಗಳವರು, ಶ್ರೀವಿದ್ಯಾಶ್ರೀಧರತೀರ್ಥಶ್ರೀಪಾದಂಗಳವರು, ಶ್ರೀವಿದ್ಯಾಶ್ರೀನಿವಾಸತೀರ್ಥಶ್ರೀಪಾದಂಗಳರು, ಇಷ್ಟು ಗುರುಗಳ ಮಾಹಾತ್ಮ್ಯವನ್ನು ಇಲ್ಲಿ ಸಂಕ್ಷಿಪ್ತವಾಗಿ ಕೇಳುತ್ತೇವೆ.
HGM10 ಶ್ರೀ ವಿದ್ಯಾಕಾಂತೀರ್ಥರ ವರೆಗಿನ ಪರಂಪರೆ
ನಮ್ಮ ಶ್ರೀಮದ್ ವ್ಯಾಸರಾಜಸಂಸ್ಥಾನದಲ್ಲಿ ಮತ್ತೊಬ್ಬ ಶ್ರೀ ವ್ಯಾಸರಾಜರು ಮತ್ತೊಬ್ಬ ಶ್ರೀ ವಿಜಯೀಂದ್ರರು ಎಂದೇ ಖ್ಯಾತರಾದ ಶ್ರೀ ವಿದ್ಯಾವಲ್ಲಭತೀರ್ಥಶ್ರೀಪಾದಂಗಳವರ ಮತ್ತು ಶ್ರೀ ವಿದ್ಯಾಕಾಂತತೀರ್ಥಶ್ರೀಪಾದಂಗಳವರ ಚರಿತ್ರೆಯ ಸಂಕ್ಷಿಪ್ತ ನಿರೂಪಣೆ.
HGM09 ಶ್ರೀ ವಿದ್ಯಾನಾಥತೀರ್ಥಶ್ರೀಪಾದರವರೆಗಿನ ಪರಂಪರೆ
ಶ್ರೀಲಕ್ಷ್ಮೀವಲ್ಲಭತೀರ್ಥಶ್ರೀಪಾದಂಗಳವರು, ಶ್ರೀಲಕ್ಷ್ಮೀನಾಥತೀರ್ಥಶ್ರೀಪಾದಂಗಳವರು, ಶ್ರೀಲಕ್ಷ್ಮೀಪತಿತೀರ್ಥಶ್ರೀಪಾದಂಗಳವರು, ಶ್ರೀಲಕ್ಷ್ಮೀನಾರಾಯಣತೀರ್ಥಶ್ರೀಪಾದಂಗಳವರು, ಶ್ರೀಶೇಷಚಂದ್ರಿಕಾಚಾರ್ಯರು, ಶ್ರೀಭಾಷ್ಯದೀಪಿಕಾಚಾರ್ಯರು, ಶ್ರೀಶ್ರೀನಾಥತೀರ್ಥಶ್ರೀಪಾದಂಗಳವರು, ಶ್ರೀವಿದ್ಯಾನಾಥತೀರ್ಥಶ್ರೀಪಾದಂಗಳವರು, ಇಲ್ಲಿಯವರೆಗಿನ ಪರಂಪರೆಯ ಕುರಿತ ಸಂಕ್ಷಿಪ್ತ ಚಿತ್ರಣವನ್ನು ಈ ಭಾಗದಲ್ಲಿ ಕೇಳುತ್ತೇವೆ.
HGM08 ಶ್ರೀ ರಾಮಚಂದ್ರತೀರ್ಥಶ್ರೀಪಾದಂಗಳವರ ವರೆಗಿನ ಪರಂಪರೆ
ಶ್ರೀಶ್ರೀನಿವಾಸತೀರ್ಥಶ್ರೀಪಾದಂಗಳವರು, ಶ್ರೀರಾಮತೀರ್ಥಶ್ರೀಪಾದಂಗಳವರು, ಶ್ರೀಲಕ್ಷ್ಮೀಕಾಂತತೀರ್ಥಶ್ರೀಪಾದಂಗಳವರು, ಶ್ರೀಶ್ರೀಪತಿತೀರ್ಥಶ್ರೀಪಾದಂಗಳವರು, ಶ್ರೀರಾಮಚಂದ್ರತೀರ್ಥಶ್ರೀಪಾದಂಗಳವರು, ಇಷ್ಟು ಜನ ಮಹಾನುಭಾವರ ಕುರಿತು ಸಂಕ್ಷಿಪ್ತವಾಗಿ ನಾವಿಲ್ಲಿ ತಿಳಿಯುತ್ತೇವೆ.
HGM07 ಶ್ರೀ ವಿದ್ಯಾಧಿರಾಜರಿಂದ ಶ್ರೀ ವ್ಯಾಸರಾಜರವರೆಗೆ
ಶ್ರೀವಿದ್ಯಾರತ್ನಾಕರತೀರ್ಥರು ಶ್ರೀ ವಿದ್ಯಾಧಿರಾಜತೀರ್ಥಗುರುಸಾರ್ವಭೌಮರನ್ನು ಯತಿವಂಶವಾರ್ಧಿಹಿಮಗುಃ ಎಂದು ಕರೆಯುತ್ತಾರೆ. ಆ ಮಾತಿನ ಹಿಂದಿನ ಆಂತರ್ಯವನ್ನು ವಿವರಿಸುತ್ತ ಶ್ರೀ ವಿದ್ಯಾಧಿರಾಜತೀರ್ಥ ಶ್ರೀಪಾದಂಗಳವರು ಬುದ್ಧಿಪೂರ್ವಕವಾಗಿಯೇ ಶ್ರೀ ರಾಜೇಂದ್ರತೀರ್ಥರು ಮತ್ತು ಶ್ರೀ ಕವೀಂದ್ರತೀರ್ಥರು ಇಬ್ಬರಿಗೂ ಸಂನ್ಯಾಸವನ್ನು ನೀಡಿ ಎರಡು ಮಹತ್ತರ ಪರಂಪರೆಗಳನ್ನು ಆರಂಭಿಸಿದರು ಎಂಬ ಇತಿಹಾಸವನ್ನು ನಿರೂಪಿಸಲಾಗಿದೆ. ಹಾಗೂ ರಾಜೇಂದ್ರತೀರ್ಥಗುರುಸಾರ್ವಭೌಮರ ಕುರಿತು ಅವರ ಪಾದಪದ್ಮಾರಾಧಕರಾದ ಶ್ರೀ ವಿಷ್ಣುದಾಸಾಚಾರ್ಯರು ತಮ್ಮ ಗ್ರಂಥ ವಾದರತ್ನಾವಲಿಯಲ್ಲಿ ದಾಖಲಿಸಿರುವ ಮಹತ್ತ್ವದ ಅಂಶದ ಅನುಸಂಧಾನ ಇಲ್ಲಿದೆ. ಶ್ರೀ ವ್ಯಾಸರಾಜರವರೆಗಿನ ಪರಂಪರೆಯ ಸ್ಮರಣೆಯೊಂದಿಗೆ.
HGM06 ಶ್ರೀಮದಾಚಾರ್ಯರಿಂದ ಟೀಕಾಕೃತ್ಪಾದರವರೆಗೆ
ಶ್ರೀ ವಿದ್ಯಾರತ್ನಾಕರತೀರ್ಥಗುರುಸಾರ್ವಭೌಮರ ಶಬ್ದಪ್ರಯೋಗಕೌಶಲದ ಪರಿಚಯ ನಮಗಿಲ್ಲಾಗುತ್ತದೆ. ಶ್ರೀಮದಾಚಾರ್ಯರಿಂದ ಆರಂಭಿಸಿ ಈ ವಿದ್ಯಾ ಪರಂಪರೆಯ ಯತಿಗಳನ್ನು ಅವರು ಉಲ್ಲೇಖಿಸಬೇಕಾದರೆ ಕೇವಲ ಹೆಸರನ್ನು ಉಲ್ಲೇಖಿಸಿಲ್ಲ. ಅವರು ಅಂದು ಮಾಡಿದ ಮಹತ್ತರ ಕಾರ್ಯಗಳು, ಆ ನಂತರವೂ ಪರಂಪರೆಯಲ್ಲಿ ನಿಂತು ಮಾಡಿದ ಅದ್ಭುತ ಕಾರ್ಯಗಳ ಕುರಿತು ಶ್ರೀಗುರುಗಳು ನಮಗೆ ತಿಳಿಸುತ್ತಾರೆ.
ಶ್ರೀ ಹರಿಭಕ್ತಿಸಾರದ 30ನೆಯ ಪದ್ಯದ ಉತ್ತರಾರ್ಧ
ಮೊಲೆಯನುಣಿಸಿದ ಬಾಲಿಕೆಯ ಕರುಣದಿ ಪಿಡಿದಸುವನಪಹರಿಸಿ ಎನ್ನುತ್ತಾರೆ ಶ್ರೀ ಕನಕದಾಸಾರ್ಯರು. ಕೃಷ್ಣನ ಸೋದರಮಾವನನ್ನು ಆಡಿಸಿ ಬೆಳಿಸಿದ ಪೂತನೆ ಬಾಲಿಕೆ ಹೇಗಾಗಲು ಸಾಧ್ಯ? ಮತ್ತು ಅವಳ ಪ್ರಾಣ ಹೀರಿದ್ದು ಕಾರುಣ್ಯ ಹೇಗೆ ಎಂಬ ಪ್ರಶ್ನೆಗೆ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ನೀಡಿರುವ ಪರಮಾದ್ಭುತ ಉತ್ತರಗಳನ್ನು ಶ್ರೀ ಕನಕದಾಸಾರ್ಯರು ಇಲ್ಲಿ ಸಂಗ್ರಹಿಸಿರುವ ಬಗೆಯನ್ನು ವಿವರಿಸಲಾಗಿದೆ. ತ್ರಿಪುರರ ಲಲನೆಯವರ ವ್ರತಗೆಡಿಸಿದ ಕೆಲಸ ಉತ್ತಮವಾಯ್ತು ಎಂಬ ಮಾತಿನ ವಿವರಣೆಯೊಂದಿಗೆ, ಹಾಗೂ ನಾವು ನಮ್ಮೊಡೆಯನಲ್ಲಿ ಸಲ್ಲಿಸಬೇಕಾದ ಪ್ರಾರ್ಥನೆಯೊಂದಿಗೆ.
HGM05 ಸರ್ವಾರ್ಥಪ್ರದ ಪ್ರತಿಮೆಗಳು
ಶ್ರೀ ವಿದ್ಯಾರತ್ನಾಕರತೀರ್ಥಗುರುಸಾರ್ವಭೌಮರು ಕಾರುಣ್ಯದಿಂದ ರಚಿಸಿ ನೀಡಿರುವ ಹರಿ ಗುರು ಮಂಗಳಾಷ್ಟಕದ ಮೂರನೆಯ ಪದ್ಯದ ಅರ್ಥಾನುಸಂಧಾನ. ಶ್ರೀಮದಾಚಾರ್ಯರು ಪೂಜಿಸಿದ ಕೃಷ್ಣ-ರಾಮ-ವ್ಯಾಸಮುಷ್ಟಿಗಳಿಂದಾರಂಭಿಸಿ ಶ್ರೀನಾಥತೀರ್ಥಗುರುಸಾರ್ವಭೌಮರ ಮೇಲೆ ಪರಮಾನುಗ್ರಹ ಮಾಡಿದ ಶ್ರೀ ವೇದವ್ಯಾಸದೇವರ ಪ್ರತಿಮೆಯವರೆಗಿನ ಎಲ್ಲ ಪ್ರತೀಕಗಳ ಮಹಾಮಾಹಾತ್ಮ್ಯವನ್ನು ನಾವಿಲ್ಲಿ ಕೇಳುತ್ತೇವೆ.
HGM04 ಸಂತಾನ ಗೋಪಾಲ ಕೃಷ್ಣ
ಶ್ರೀ ವಿದ್ಯಾರತ್ನಾಕರತೀರ್ಥಗುರುಸಾರ್ವಭೌಮರು ಕಾರುಣ್ಯದಿಂದ ರಚಿಸಿ ನೀಡಿರುವ ಹರಿ ಗುರು ಮಂಗಳಾಷ್ಟಕದ ಎರಡನೆಯ ಪದ್ಯದ ಅರ್ಥಾನುಸಂಧಾನ. ಬ್ರಹ್ಮಣ್ಯತೀರ್ಥರಿಗೆ ಒಲಿದು ಬಂದ ವಿಠ್ಠಲ, ತುಮಕೂರಿನ ಶ್ರೀ ಯತಿರಾಜ ಒಡೆಯರು ಸಂಸ್ಥಾನಕ್ಕೆ ಸಮರ್ಪಿಸಿದ ಬೇಡಿ ಕೃಷ್ಣ, ಯಜ್ಞವರಾಹ, ಭೂವರಾಹ, ವಾಸುದೇವ ಮೂರ್ತಿ, ದಿಗ್ವಿಜಯಗೋಪಾಲಕೃಷ್ಣ, ಸಂತಾನಗೋಪಾಲಕೃಷ್ಣ, ಶ್ರೀ ಭೂ ಸಮೇತ ಶ್ರೀನಿವಾಸ, ಧನ್ವಂತರಿ, ಬಲಮುರಿ ಶಂಖಗಳು ಮತ್ತು ಹಯಗ್ರೀವದೇವರು, ಇಷ್ಟು ಪ್ರತಿಮೆಗಳ ಕುರಿತು ನಾವಿಲ್ಲಿ ಕೇಳುತ್ತೇವೆ.
ಶ್ರೀಹರಿಭಕ್ತಿಸಾರದ 30ನೆಯ ಪದ್ಯದ ಪೂರ್ವಾರ್ಧ
ಬಲಿಯ ಬಂಧಿಸಿದ ಕೆಲಸ ಉತ್ತಮವಾಯ್ತು ಎಂದು ಶ್ರೀ ಕನಕದಾಸಾರ್ಯರು ಹೇಳುತ್ತಾರೆ. ಬಂಧಿಸಿದ್ದು ಕಾರುಣ್ಯ ಹೇಗಾಗಲು ಸಾಧ್ಯ ಎಂಬ ಪ್ರಶ್ನೆಗೆ, ಹಾಗೂ ದ್ರೌಪದೀ ದೇವಿಯರ ವಸ್ತ್ರಾಪಹರಣದ ಕಾಲಕ್ಕೆ ಪಾಂಡವರು ಯಾಕೆ ಸುಮ್ಮನಿದ್ದರು ಎಂಬ ಪ್ರಶ್ನೆಗೆ ಉತ್ತರವನ್ನು ಉಪನ್ಯಾಸದಲ್ಲಿ ಕೇಳುತ್ತೇವೆ. ಮತ್ತು ದ್ರೌಪದೀ ವಸ್ತ್ರಾಪಹರಣ ಸಂಕೇತಿಸುವ ನಮ್ಮ ಜೀವನದ ಘಟನೆಗಳ, ನಾವು ಪರಮಾತ್ಮನನ್ನು ಬೇಡಬೇಕಾದ ಬಗೆಯ ವಿವರಣೆಯೂ ಇಲ್ಲಿದೆ.
HGM03 ಮೂಲಪ್ರತಿಮೆಗಳು
ಶ್ರೀಮದ್ ವ್ಯಾಸರಾಜಸಂಸ್ಥಾನದ ಪ್ರತಿಮೆಗಳ — ನೀಲಾದೇವಿಕರಾರ್ಚಿತವಾದ ಶ್ರೀ ಮೂಲಗೋಪಾಲಕೃಷ್ಣ, ಶ್ರೀಮದಾಚಾರ್ಯರಿಂದಲೇ ನಿರ್ಮಿತವಾದ ಶ್ರೀ ಮೂಲಪಟ್ಟಾಭಿರಾಮ, ಶ್ರೀವೇದವ್ಯಾಸದೇವರ ಬೆರಳು ಮತ್ತು ರೇಖೆಗಳನ್ನುಳ್ಳು ಒಂದು ವ್ಯಾಸಮುಷ್ಟಿ, ಶ್ರೀಮಟ್ಟೀಕಾಕೃತ್ಪಾದರು ಅರ್ಚನೆ ಮಾಡಿದ ಶ್ರೀ ಲಕ್ಷ್ಮೀನೃಸಿಂಹದೇವರ, ಶ್ರೀ ದಿಗ್ವಿಜಯಪಟ್ಟಾಭಿರಾಮದೇವರ — ಕುರಿತ ವಿವರಣೆ ಮೊದಲ ಪದ್ಯದಲ್ಲಿದೆ.
HGM02 ಶ್ರೀಮದ್ ವ್ಯಾಸರಾಜಸಂಸ್ಥಾನದಲ್ಲಿ ಪೂಜಾಕ್ರಮ
ಶ್ರೀಮದ್ ವ್ಯಾಸರಾಜ ಸಂಸ್ಥಾನದಲ್ಲಿ ಇಂದಿಗೆ ಅನೇಕ ಸಂಪ್ರದಾಯಗಳು ಲುಪ್ತವಾಗಿವೆ. ಅಂತಹುದರಲ್ಲಿ ಒಂದು, ನಾಲ್ಕು ಹಂತದ ಪೀಠದಲ್ಲಿ ಪೂಜೆ. ಪ್ರಾತಃಸ್ಮರಣೀಯರಾದ ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥಶ್ರೀಪಾದಂಗಳವರ ಕಾಲದವರೆಗೆ ಶ್ರೀಮತ್ ಸಂಸ್ಥಾನದಲ್ಲಿ ನಾಲ್ಕು ಹಂತದ ಪೀಠದಲ್ಲಿ ಪೂಜೆಯಾಗುತ್ತಿತ್ತು. ಆ ಸಂಪ್ರದಾಯದ ವಿವರಣೆ ಈ ಉಪನ್ಯಾಸದ ಭಾಗದಲ್ಲಿದೆ.
HGM01 ಈ ಸ್ತೋತ್ರದ ಸಾರಾಂಶ
ಶ್ರೀಮದ್ ವ್ಯಾಸರಾಜಸಂಸ್ಥಾನದ ಭೂಷಾಮಣಿಗಳಾದ ಶ್ರೀಮದ್ ವಿದ್ಯಾರತ್ನಾಕರತೀರ್ಥಗುರುಸಾರ್ವಭೌಮರು ರಚಿಸಿರುವ ಶ್ರೀಹರಿಗುರು ಮಂಗಳಾಷ್ಟಕ, ಸಮಗ್ರ ಸ್ತೋತ್ರಪ್ರಪಂಚದಲ್ಲಿಯೇ ಅತ್ಯಪೂರ್ವವಾದ ಸ್ತೋತ್ರ. ಶ್ರೀಮತ್ ಸಂಸ್ಥಾನದ ಮೂಲದೇವರಿಂದ ಆರಂಭಿಸಿ ಸಮಗ್ರ ಗುರುಪರಂಪರೆಯನ್ನು ಪ್ರಾರ್ಥಿಸಿ ಮಂಗಳವನ್ನು ಬೇಡುವ ಮತ್ತೊಂದು ಸ್ತೋತ್ರ ಮಾಧ್ವ ಸಾಹಿತ್ಯದಲ್ಲಿ ಇಲ್ಲವೇ ಇಲ್ಲ. ಈ ಸ್ತೋತ್ರದ ಅರ್ಥಾನುಸಂಧಾನ ಮಾಲಿಕೆಯ ಈ ಪ್ರಥಮ ಪುಷ್ಪದಲ್ಲಿ ಸ್ತೋತ್ರದ ಒಟ್ಟಾರೆ ಸಾರಾಂಶವನ್ನು ಕೇಳುತ್ತೇವೆ.
ದ್ವೇಷಿಗಳಿಗೂ ಮುಕ್ತಿಯಾಗುತ್ತದೆಯೇ?
ದೇವರನ್ನು ದ್ವೇಷಮಾಡಿದವಿರಿಗೂ ಮುಕ್ತಿಯಾಗುತ್ತದೆ ಎನ್ನುವ ಅರ್ಥ ತೋರುವ ಅನೇಕ ತರಹದ ಮಾತುಗಳನ್ನು ನಾವು ಪುರಾಣಗಳಲ್ಲಿ ಕೇಳುತ್ತೇವೆ. ಶ್ರೀ ಕನಕದಾಸಾರ್ಯರೂ ಸಹಿತ, ಸಮರದೊಳಗೆ ವಿಕ್ರಮದಿ ವೈರವ ಮಾಡಿದವರಿಗೆ ಅಮರಪದವಿಯನಿತ್ತೆ ಎಂದು ಹೇಳಿದ್ದಾರೆ. ಹಾಗಾದರೆ ದೇವರನ್ನು ದ್ವೇಷ ಮಾಡಿದರೂ ಮುಕ್ತಿಯಾಗಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯುರು ಅನುವ್ಯಾಖ್ಯಾನದಲ್ಲಿ ನೀಡಿರುವ ಪರಮಾದ್ಭುತ ಉತ್ತರದ ಅರ್ಥಾನುಸಂಧಾನ ಇಲ್ಲಿದೆ. ತಪ್ಪದೇ ಕೇಳಿ.
ನವಗ್ರಹಸ್ತೋತ್ರ
ಶ್ರೀ ವಾದಿರಾಜಗುರುಸಾರ್ವಭೌಮರು ಅನುಗ್ರಹಿಸಿರುವ ನ ವಗ್ರಹಸ್ತೋತ್ರದ ಪಠಣೆ.
ಶ್ರೀ ಹರಿಭಕ್ತಿಸಾರದ 28ನೆಯ ಪದ್ಯ
ಹಗೆಯರಿಗೆ ವರವೀವರಿಬ್ಬರು, ತೆಗೆಯಲರಿಯರು ಕೊಟ್ಟ ವರಗಳ ಎಂದು ಶ್ರೀ ಕನಕದಾಸಾರ್ಯರು ಹೇಳುತ್ತಾರೆ. ಬ್ರಹ್ಮದೇವರು ಕೊಟ್ಟವರವನ್ನು ಬ್ರಹ್ಮದೇವರಿಗೆ ಸಮಾನರಾದ ಮುಖ್ಯಪ್ರಾಣದೇವರು ಮೀರಿರುವದನ್ನು ಹತ್ತಾರು ಕಡೆಯಲ್ಲಿ ಕಾಣುತ್ತೇವೆ. ಬ್ರಹ್ಮದೇವರ ವರವನ್ನು ವಾಯುದೇವರಿಗೆ ಮೀರಲಿಕ್ಕೆ ಸಾಧ್ಯ ಎಂದ ಬಳಿಕ ಬ್ರಹ್ಮದೇವರಿಗೂ ಸಾಧ್ಯ ಎಂದು ನಿರ್ಣೀತವಾಯಿತು. ಅಂದ ಮೇಲೆ ದಾಸರಾಯರು ಹೀಗೆ ಹೇಳಿದ್ದು ಎಷ್ಟು ಸರಿ ಎಂಬ ಪ್ರಶ್ನೆಗೆ ಶ್ರೀ ಕನಕದಾಸರೇ ನೀಡಿರುವ ಉತ್ತರವನ್ನು — ಶ್ರೀಮಧ್ವಸಿದ್ಧಾಂತದ ಶ್ರೇಷ್ಠ ಸಿದ್ಧಾಂತವನ್ನು — ನಾವಿಲ್ಲಿ ಕೇಳುತ್ತೇವೆ. ದಾಸಸಾಹಿತ್ಯ ಎಷ್ಟು ಗಂಭೀರ ಎನ್ನುವದಕ್ಕೆ ದೃಷ್ಟಾಂತವಾಗಿ ನಿಲ್ಲುವ ಪದ್ಯವಿದು. ತಪ್ಪದೇ ಕೇಳಿ. ತೆಗೆದು ಕೊಡುವ ಸಮರ್ಥರಾರೀ ಎಂಬ ಅದ್ಭುತವಾಕ್ಯದ ಅರ್ಥಾನುಸಂಧಾನದೊಂದಿಗೆ.
ಶಿವಸ್ತುತಿ
ಕಲಿಯಲಿಕ್ಕೆ ಮತ್ತು ಪಾರಾಯಣ ಮಾಡಲಿಕ್ಕೆ ಅನುಕೂಲವಾಗುವಂತೆ ಶ್ರೀ ನಾರಾಯಣಪಂಡಿತಾಚಾರ್ಯರು ರಚಿಸಿರುವ ಶ್ರೀ ಶಿವಸ್ತುತಿಯ ಪಠಣ ಇಲ್ಲಿದೆ. ಕನ್ನಡ ಮತ್ತು ಸಂಸ್ಕೃತ ಎರಡೂ ಲಿಪಿಗಳಲ್ಲಿ ಈ ಸ್ತೋತ್ರವು VNA225ರಲ್ಲಿ ಉಪಲಬ್ಧವಿದೆ.
ತ್ರಿಪುರಾಸುರಸಂಹಾರ — 04 — ರುದ್ರವಿಜಯ
ದೇವತೆಗಳ ಪ್ರಾರ್ಥನೆಗೆ ಓಗೊಟ್ಟ ಕಾರುಣ್ಯದ ಬ್ರಹ್ಮದೇವರು ರುದ್ರದೇವರ ರಥದ ಸಾರಥ್ಯವನ್ನು ಮಾಡಲು ಒಪ್ಪುತ್ತಾರೆ. ಸಮಸ್ತದೇವತಾಮಯವಾದ ವೇದಮಯವಾದ ಆ ರಥಕ್ಕೆ ಸಾರಥಿಯಾಗಿ ಜಗತ್ತಿನ ಪಿತಾಮಹನಿರಲು ಆ ಪಾರ್ವತೀಪತಿ ರಥವನ್ನೇರಿ ತ್ರಿಪುರಗಳನ್ನು ಆ ಪುರಗಳಲ್ಲಿದ್ದ ತ್ರಿಪುರಾಸುರರನ್ನು, ಅಸಂಖ್ಯ ರಾಕ್ಷಸರನ್ನೂ ಸಂಹಾರ ಮಾಡುತ್ತಾರೆ. ಆ ಪರಮಪವಿತ್ರ ರುದ್ರವಿಜಯದ ನಿರೂಪಣೆ ಈ ಭಾಗದಲ್ಲಿದೆ, ತ್ರಿಪುರಾಸುರಸಂಹಾರದ ಶ್ರವಣದಲ್ಲಿ ನಮಗಿರಬೇಕಾದ ಅನುಸಂಧಾನದ ವಿವರಣೆಯೊಂದಿಗೆ.
ತ್ರಿಪುರಾಸುರಸಂಹಾರ — 03 — ರಥದ ನಿರ್ಮಾಣ
ಬ್ರಹ್ಮದೇವರ ಆಜ್ಞೆಯಂತೆ ದೇವತೆಗಳೆಲ್ಲರೂ ರುದ್ರದೇವರನ್ನು ತ್ರಿಪುರಾಸುರರ ಸಂಹಾರಕ್ಕಾಗಿ ಪ್ರಾರ್ಥಿಸುತ್ತಾರೆ. ವಿಶ್ವಕರ್ಮ ದೇವತೆಗಳ ಅಪೇಕ್ಷೆಯಂತೆ ಸಮಸ್ತ ದೇವತಾಮಯವಾದ ಒಂದು ಅದ್ಭುತ ರಥವನ್ನು ರುದ್ರದೇವರಿಗಾಗಿ ನಿರ್ಮಾಣ ಮಾಡುತ್ತಾನೆ. ರುದ್ರದೇವರ ಶಿವ, ದೇವದೇವ, ಪಶುಪತಿ ಮುಂತಾದ ಹೆಸರಿನ ಅರ್ಥಗಳ ವಿವರಣೆ ಹಾಗೂ ರುದ್ರರಥದ ವೈಭವವನ್ನು ಈ ಭಾಗದಲ್ಲಿ ಕೇಳುತ್ತೇವೆ.
ತ್ರಿಪುರಾಸುರ ಸಂಹಾರ — 2 — ಪುರಗಳ ನಿರ್ಮಾಣ
ವರವನ್ನು ಪಡೆದ ತ್ರಿಪುರಾಸುರರು ಮಯಾಸುರನ ಬಳಿಗೆ ಬಂದು ಮೂರು ಊರುಗಳನ್ನು ನಿರ್ಮಾಣ ಮಾಡಲು ಹೇಳುತ್ತಾರೆ. ಮಯಾಸುರ ತಾನೂ ತಪಸ್ಸಿನ ಆಚರಣೆ ಮಾಡಿ ವಿಶೇಷ ಶಕ್ತಿಯನ್ನು ಗಳಿಸಿ ಬಂಗಾರ, ಬೆಳ್ಳಿ, ಕಬ್ಬಿಣಗಳ ಮೂರು ಅದ್ಭುತ ಊರುಗಳನ್ನು ನಿರ್ಮಾಣ ಮಾಡುತ್ತಾನೆ. ತಾರಕಾಕ್ಷನ ಮಗ ಹರಿ ಎನ್ನುವ ದೈತ್ಯ ಬ್ರಹ್ಮದೇವರ ಕುರಿತು ತಪಸ್ಸು ಮಾಡಿ ಸತ್ತವರನ್ನು ಬದುಕಿಸುವ ಒಂದು ಕೆರೆಯನ್ನು ನಿರ್ಮಾಣ ಮಾಡುತ್ತಾನೆ. ಹೀಗೆ ಐಶ್ವರ್ಯ, ಶಕ್ತಿಗಳಿಂದ ಯುಕ್ತರಾದ ದೈತ್ಯರು ಸಜ್ಜನರನ್ನು ಹಿಂಸಿಸಲು ತೊಡಗಿದಾಗ ಇಂದ್ರದೇವರು ಅವರ ಮೇಲೆ ಯುದ್ಧ ಸಾರುತ್ತಾರೆ. ಆದರೆ ಬ್ರಹ್ಮದೇವರ ವರದ ರಕ್ಷೆಯಿದ್ದ ಅವರನ್ನು ಗೆಲ್ಲಲಾಗುವದಿಲ್ಲ. ನಂತರ ಬ್ರಹ್ಮದೇವರ ಆಜ್ಞೆಯಂತೆ ಸಮಸ್ತ ದೇವತೆಗಳೂ ಮಹಾರುದ್ರದೇವರ ಬಳಿ ಬಂದು ತ್ರಿಪುರಗಳ ಮತ್ತು ತ್ರಿಪುರಾಸುರರ ಸಂಹಾರಕ್ಕಾಗಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಈ ಘಟನೆಗಳ ಚಿತ್ರಣ ಈ ಭಾಗದಲ್ಲಿದೆ.
ತ್ರಿಪುರಾಸುರಸಂಹಾರ — 1 — ತ್ರಿಪುರಾಸುರರಿಗೆ ವರ
ತ್ರಿಪುರಾಸುರಸಂಹಾರದ ಕುರಿತು ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ನೀಡಿರುವ ನಿರ್ಣಯಗಳೊಂದಿಗೆ ಉಪನ್ಯಾಸ ಆರಂಭವಾಗುತ್ತದೆ. ತಾರಕಾಸುರನಿಗೆ ಮೂರು ಜನ ಮಕ್ಕಳು — ತಾರಕಾಕ್ಷ, ಕಮಲಾಕ್ಷ, ವಿದ್ಯುನ್ಮಾಲೀ ಎಂದು. ಮೂರೂ ಜನರು ಘೋರ ತಪಸ್ಸನ್ನು ಮಾಡಿ ಬ್ರಹ್ಮದೇವರಿಂದ ಮೂರು ಅಭೇದ್ಯವಾದ ಊರುಗಳನ್ನು ನಿರ್ಮಾಣ ಮಾಡಿಕೊಳ್ಳುವ ವರವನ್ನು ಪಡೆದುಕೊಳ್ಳುತ್ತಾರೆ. “ದೇವತೆಗಳಿಗೆ ಬುದ್ಧಿಯಿಲ್ಲ, ತಾವೇ ರಾಕ್ಷಸರಿಗೆ ವರ ಕೊಡುತ್ತಾರೆ. ಆ ನಂತರ ಅದೇ ವರದಿಂದ ರಾಕ್ಷಸರು ದೇವತೆಗಳಿಗೆ ತೊಂದರೆ ಕೊಡುತ್ತಾರೆ. ಮತ್ತೆ ದೇವತೆಗಳು ಏನೋ ತಂತ್ರ ಮಾಡಿ ಅವರನ್ನು ಕೊಲ್ಲುತ್ತಾರೆ. ಒಟ್ಟಾರೆ ಈ ಪುರಾಣಗಳು ಕಾಗಕ್ಕ ಗುಬ್ಬಕ್ಕಗಳ ಕಟ್ಟು ಕಥೆ” ಎಂದು ಇಂದಿನವರು ಮಾಡುವ ಆಕ್ಷೇಪಕ್ಕೆ ಶ್ರೀಮದಾಚಾರ್ಯರ ಸಿದ್ಧಾಂತ ನೀಡಿರುವ ಯುಕ್ತಿಯುಕ್ತವಾದ ಅದ್ಭುತವಾದ ಉತ್ತರವನ್ನು ನಾವಿಲ್ಲಿ ಕೇಳುತ್ತೇವೆ. ಸಾಧನಜೀವನದ ಅದ್ಭುತ ಸಂವಿಧಾನದ ಚಿತ್ರಣದೊಂದಿಗೆ. ತಪ್ಪದೇ ಕೇಳಿ.
ಶ್ರೀ ಹರಿಭಕ್ತಿಸಾರದ 27ನೇ ಪದ್ಯ
ದೇವರೂ ಶರಣಾಗತರಕ್ಷಕ, ಒಬ್ಬ ಸದ್ಗುಣಿ ರಾಜನೂ ಶರಣಾಗತರಕ್ಷಕ ಇಬ್ಬರಲ್ಲೂ ವ್ಯತ್ಯಾಸವೇನು ಎನ್ನುವ ಪ್ರಶ್ನೆಗೆ ಶ್ರೀ ಕನಕದಾಸಾರ್ಯರು ನೀಡಿರುವ ಅದ್ಭುತ ಉತ್ತರದ ವಿವರಣೆ ಈ ಉಪನ್ಯಾಸದಲ್ಲಿದೆ. ತಪ್ಪದೇ ಕೇಳಿ.
ಶ್ರೀ ಹರಿಭಕ್ತಿಸಾರದ 26ನೇ ಪದ್ಯ
“ಸಾಗರನ ಮಗಳರಿಯದಂತೆ ಸರಾಗದಲ್ಲಿ ಸಂಚರಿಸುತಿಹ” “ಕರಿರಾಜ ಕರೆಯಲು ಸಿರಿಗೆ ಹೇಳದೆ ಬಂದೆ” ಇತ್ಯಾದಿ ಮಾತುಗಳನ್ನು ನೋಡಿದಾಗ ಶ್ರೀಹರಿಯೂ ಸಹ ಕ್ಷುದ್ರ ಗಂಡಸರ ಹಾಗೆ ಹೆಂಡತಿಗೆ ತಿಳಿಸದಂತೆ ಓಡಾಡುತ್ತಾನೆ ಮತ್ತು ಲಕ್ಷ್ಮೀದೇವಿಗೆ ತಿಳಿಯದ ಸ್ಥಳಕ್ಕೆ ಹೋಗುತ್ತಾನೆ ಎಂದರೆ ಲಕ್ಷ್ಮೀದೇವಿಯಿಲ್ಲದ ಸ್ಥಳಕ್ಕೆ ಹೋಗುತ್ತಾನೆ ಎಂದಾಗುತ್ತದೆ, ಹೀಗಾಗಿ ದೇವರಿಗೂ ಲಕ್ಷ್ಮೀದೇವಿಯರಿಗೂ ವಿಯೋಗವಿದೆ. ಅಂದಮೇಲೆ ದಾಸಸಾಹಿತ್ಯದ ಈ ವಚನಗಳನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂಬ ಪ್ರಶ್ನೆಗೆ ಈ ಉಪನ್ಯಾಸದಲ್ಲಿ ಉತ್ತರವಿದೆ. ‘ನಿಮಿತ್ತಕಾರಣವೇನು’ ಎಂಬ ಶ್ರೀಕನಕದಾಸರ ಶಬ್ದಪ್ರಯೋಗದ ಕೌಶಲದ ಕುರಿತ ವಿವರಣೆಯೊಂದಿಗೆ.
ಶ್ರೀ ಹರಿಭಕ್ತಿಸಾರದ 25ನೆಯ ಪದ್ಯ
ಭಗವಂತನನ್ನು ವಿಶ್ವಕುಟುಂಬಿ ಎಂದು ಚಿಂತಿಸಿ ಪ್ರಾರ್ಥಿಸುವದನ್ನು ತಿಳಿಸಿಕೊಡುವ ಪದ್ಯ — ಸಿರಿಯು ಕುಲಸತಿ ಸುತನು ಕಮಲಜ ಎನ್ನುವದು. ಮಂಗಳಾಷ್ಟಕದ ಉಪನ್ಯಾಸದಲ್ಲಿ ದೇವರ ಮಹಾಕುಟುಂಬದ ವೈಭವವನ್ನು ಚಿಂತಿಸಿದ್ದೇವೆ. ಇಲ್ಲಿ, ದೇವರನ್ನು ಯಾಕಾಗಿ ವಿಶ್ವಕುಟುಂಬಿ ಎಂದು ಚಿಂತಿಸಬೇಕು, ಆ ವಿಶ್ವಕುಟುಂಬಿಯಲ್ಲಿ ಏನನ್ನು ಪ್ರಾರ್ಥನೆ ಮಾಡಬೇಕು ಎನ್ನುವದನ್ನು ಇಲ್ಲಿ ತಿಳಿಯುತ್ತೇವೆ.
ಶಾಂತಿಗಳನ್ನು ಆಚರಿಸುವ ಕ್ರಮ
ಶಾಂತಿ ಎಂದರೇನು, ಹೇಗೆ ಮಾಡಬೇಕು, ಶಾಂತಿಗಳಲ್ಲಿ ಎಷ್ಟು ವಿಧ ಮುಂತಾದ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ. ಲೇಖನ VNA224
ಶ್ರೀ ಹರಿಭಕ್ತಿಸಾರದ 24ನೆಯ ಪದ್ಯ
ಭಗವಂತನ ಇಬ್ಬರು ಮಕ್ಕಳ ಮಾಹಾತ್ಮ್ಯವನ್ನು ಚಿಂತನೆ ಮಾಡುವದರೊಂದಿಗೆ ಶ್ರೀಹರಿಯ ಮಾಹಾತ್ಮ್ಯ ಅದೆಷ್ಟು ಅನಂತ ಎನ್ನುವದನ್ನು ಶ್ರೀ ಕನಕದಾಸರು ನಮಗಿಲ್ಲಿ ಮನಗಾಣಿಸುತ್ತಾರೆ. ಎಷ್ಟು ತಿಳಿದರೂ ಪೂರ್ಣ ತಿಳಿಯಲು ಸಾಧ್ಯವಿಲ್ಲದ ಅನಂತಾನಂತಪದಾರ್ಥಗಳನ್ನೊಳಗೊಂಡ ಹದಿನಾಲ್ಕು ಲೋಕಗಳ ಸೃಷ್ಟಿಕರ್ತ ಬ್ರಹ್ಮದೇವರ ಮಾಹಾತ್ಮ್ಯದ ಹಾಗೂ ಪ್ರತ್ಯೇಕ ಪ್ರತ್ಯೇಕವಾಗಿ ಅನಂತಾನಂತ ಕರ್ಮಗಳನ್ನು ಹೊಂದಿರುವ ಅನಂತ ಜೀವರಾಶಿಗಳನ್ನು ನಿಯಮಿಸುವ ವಾಯುದೇವರ ಮಾಹಾತ್ಮ್ಯದ ಚಿಂತನೆ ಈ ಭಾಗದಲ್ಲಿದೆ.
ಶ್ರೀಹರಭಕ್ತಿಸಾರದ 23ನೆಯ ಪದ್ಯ
ದೇವರೊಡನೆ ಭಕ್ತರ ಬಾಂಧವ್ಯ ಎಂತಹುದು ಎನ್ನುವದಕ್ಕೆ ಶ್ರೀ ಕನಕದಾಸರು ನೀಡಿದ ಉತ್ತರ — ತಾಯಿ ಮಕ್ಕಳ ಸಂಬಂಧ ಎಂದು. ನಮ್ಮ ಮನಸ್ಸು ಕರಗಿ ಶ್ರೀಹರಿಯ ಚರಣಕಮಲಗಳಲ್ಲಿ ನಮ್ಮ ಜೀವಚೈತನ್ಯ ಶರಣುಹೋಗುವಂತೆ ಈ ಸಂಬಂಧವನ್ನು ಶ್ರೀದಾಸರು ಇಲ್ಲಿ ಚಿತ್ರಿಸಿದ್ದಾರೆ. ಮತ್ತು ವ್ಯಾಸಸಾಹಿತ್ಯ ಮತ್ತು ದಾಸಸಾಹಿತ್ಯ ಎಂದರೆ ಜ್ಞಾನ ಭಕ್ತಿಗಳ ಸಂಗಮ ಎನ್ನುವದನ್ನು ಶ್ರೀ ಕನಕದಾಸರು ಈ ಪದ್ಯದ ಮುಖಾಂತರ ನಮಗೆ ಮನಗಾಣಿಸುತ್ತಾರೆ. ತಪ್ಪದೇ ಕೇಳಿ.
ಶ್ರೀ ಹರಿಭಕ್ತಿಸಾರದ 22ನೆಯ ಪದ್ಯ
ದೇವರ ಮುಂದೆ ನಾವೆಷ್ಟು ಸಣ್ಣವರು ಎನ್ನುವ ತತ್ವದ ಎಚ್ಚರವನ್ನು ವೇದಶಾಸ್ತ್ರ ಪುರಾಣ್ಯ ಪುಣ್ಯದ ಹಾದಿಯನು ನಾನರಿಯೆ ಎಂಬ ಪದ್ಯದ ಮುಖಾಂತರ ಶ್ರೀ ಕನಕದಾಸರು ನಮಗೆ ನೀಡುತ್ತಾರೆ. ಆ ಪದ್ಯದ ಅರ್ಥಾನುಸಂಧಾನ ಈ ಭಾಗದಲ್ಲಿದೆ.
ಸದಾಚಾರಸ್ಮೃತಿ — 12 — ದಂತಧಾವನ
ನಿಮಗೆ ಗೊತ್ತೆ, ನಮ್ಮ ಸುತ್ತಮುತ್ತಲೂ ಸಿಗುವ ಮರಗಳ ಕಡ್ಡಿಯನ್ನು ಹಲ್ಲುಜ್ಜುವದಕ್ಕಾಗಿ ಉಪಯೋಗಿಸುವದರಿಂದ ಕಿವುಡು ಪರಿಹಾರ, ಬುದ್ಧಿಯ ಚುರುಕುತನ, ವಾಕ್-ಶಕ್ತಿ, ಮಧುರಸ್ವರ, ದೇಹದ ಕಾಂತಿ ಮುಂತಾದವುಗಳನ್ನು ಸುಲಭವಾಗಿ ಪಡೆಯಲು ಸಾಧ್ಯ. ಮನುಕುಲದ ಮೇಲ ಅನುಗ್ರಹ ಮಾಡಲಿಕ್ಕಾಗಿಯೇ ಗ್ರಂಥಗಳನ್ನು ರಚಿಸಿರುವ ಶ್ರೀ ಗರ್ಗಾಚಾರ್ಯರು, ಅಶ್ವಲಾಯನರು ಯಾವ ಕಡ್ಡಿಯಿಂದ ಹಲ್ಲುಜ್ಜುವದರಿಂದ ಯಾವ ರೀತಿಯ ಪ್ರಯೋಜನವನ್ನು ನಾವು ಪಡೆಯುತ್ತೇವೆ ಎನ್ನುವದನ್ನು ತಿಳಿಸಿದ್ದಾರೆ. ಅವುಗಳ ವಿವರಣೆ ಇಲ್ಲಿದೆ. ಲೇಖನ VNA222, 223
ಶ್ರೀಹರಿಭಕ್ತಿಸಾರದ 20,21ನೆಯ ಪದ್ಯಗಳು
ಶ್ರೀಹರಿಭಕ್ತಿಸಾರದ 20,21ನೆಯ ಪದ್ಯಗಳು
ದೇವರ ಕುರಿತು ಬರೆಯುವ ಮುನ್ನ
ದೇವರ ಕುರಿತು ಒಂದು ಹಾಡನ್ನೋ, ಕೃತಿಯನ್ನೋ, ಸ್ತೋತ್ರವನ್ನೋ ಬರೆಯಬೇಕು ಎನ್ನುವ ತವಕ ಎಲ್ಲರಿಗೂ ಒಂದಲ್ಲ ಒಂದು ಹಂತದಲ್ಲಿ ಇದ್ದೇ ಇರುತ್ತದೆ. ಅನೇಕರು ಪ್ರಯತ್ನವನ್ನೂ ಪಡುತ್ತಾರೆ. ಆ ರೀತಯ ಭಕ್ತ ಸ್ತೋತ್ರ ರಚಿಸುವ ಮುನ್ನ, ಹಾಡು ಬರೆಯುವ ಮುನ್ನ ಯಾವ ಎಚ್ಚರಗಳನ್ನಿಟ್ಟುಕೊಳ್ಳಬೇಕು ಎನ್ನುವದನ್ನು ಶ್ರೀಕನಕದಾಸರು ನಮಗೆ ಅದ್ಭುತವಾದ ಕ್ರಮದಲ್ಲಿ ತಿಳಿ ಹೇಳುತ್ತಾರೆ. ಶ್ರೀಹರಿಭಕ್ತಿಸಾರವನ್ನು ರಚಿಸಹೊರಟಿರುವ ಶ್ರೀ ಕನಕದಾಸರು “ಬಳಸುವರು ಸತ್ಕವಿಗಳು ಅವರಗ್ಗಳಿಕೆ ಎನಗಿನಿತಿಲ್ಲ” ಎಂದು ಶ್ರೀಹರಿಯ ಮುಂದೆ ತಮ್ಮ ವಿನಯವನ್ನು ನಿವೇದಿಸಿಕೊಳ್ಳುತ್ತಾರೆ. ಈ ಪ್ರಸಂಗದಲ್ಲಿ ಶ್ರೀವಾದಿರಾಜರು, ಶ್ರೀಮಚ್ಚಂದ್ರಿಕಾಚಾರ್ಯರು, ಶ್ರೀ ಶ್ರೀಪಾದರಾಜರು, ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು, ಶ್ರೀಮಟ್ಟೀಕಾಕೃತ್ಪಾದರು ರಚಿಸಿರುವ ಸ್ತೋತ್ರಗಳ ಸೊಬಗಿನ ಚಿಂತನೆ ಈ ಉಪನ್ಯಾಸದಲ್ಲಿದೆ.
ಸಂಕ್ರಾಂತಿಯ ಆಚರಣೆ
ಸಂಕ್ರಾಂತಿಯ ಆಚರಣೆ ಹೇಗೆ? ಸ್ನಾನ, ದೇವರಪೂಜೆ, ತಿಲತರ್ಪಣ, ಎಳ್ಳುಬೆಲ್ಲದ ಸಮರ್ಪಣೆ ಯಾವಾಗ ಎನ್ನುವದರ ಕುರಿತ ವಿವರಣೆ ಇಲ್ಲಿದೆ. (ದುರ್ಮುಖಸಂವತ್ಸರದ ಪುಷ್ಯಶುದ್ಧ ದ್ವಿತೀಯಾ (14-1-2017) ರ ಉತ್ತರಾಯಣ ಸಂಕ್ರಾಂತಿಯ ಕುರಿತ ವಿವರಣೆ.
ಶ್ರೀ ಹರಿಭಕ್ತಿಸಾರದ 19ನೆಯ ಪದ್ಯದ ಪೂರ್ವಾರ್ಧ
ಶ್ರೀ ಕನಕದಾಸರ ಮೇಲೆ ಪರಮಾತ್ಮ ಮಾಡಿದ ಪರಮಾನುಗ್ರಹ ಅದೆಷ್ಟು ಅದ್ಭುತ ಎನ್ನುವದನ್ನು ತಿಳಿಸುವ ಉಪನ್ಯಾಸ.
ಶ್ರೀ ಹರಿಭಕ್ತಿಸಾರದ 18ನೆಯ ಪದ್ಯದ ಉತ್ತರಾರ್ಧ
ಹರಿಭಕ್ತಿಸಾರ ನಮ್ಮ ಸಾಧನೆಯ ಮಾರ್ಗದಲ್ಲಿ ಅದೆಷ್ಟು ದೊಡ್ಡ ಉಪಕಾರವನ್ನು ಮಾಡುತ್ತದೆ ಎನ್ನುವದನ್ನು ವಿವರಿಸುವ ಭಾಗ.
ಅತಿರಿಕ್ತ ಏಕಾದಶೀ
ಸಕಲ ಮಾಧ್ವರಿಗೂ ಒಂದೇ ಏಕಾದಶಿ ಆಗಬೇಕು ಎನ್ನುವದು ಪ್ರತಿಯೊಬ್ಬ ಸಜ್ಜನ ಮಾಧ್ವನ ಆಶಯ ಎನ್ನುವದರಲ್ಲಿ ಎರಡು ಮಾತಿಲ್ಲ. ಆದರೆ ಅದು ಹೇಗಾಗಲು ಸಾಧ್ಯ? ಉತ್ತರ ಸುಲಭವಿದೆ — ಏಕಾದಶಿಯನ್ನು ಹೇಗೆ ಲೆಕ್ಕಾಚಾರ ಹಾಕುತ್ತಾರೆ ಎನ್ನುವದನ್ನು ಪ್ರತಿಯೊಬ್ಬ ಮಾಧ್ವನೂ ಕಲಿಯಬೇಕು. ಏಕಾದಶಿ ಎಂದರೆ ಗಣಿತ. ಎರಡಕ್ಕೆ ಎರಡು ಸೇರಿದರೆ ನಾಲ್ಕು ಆಗಲೇಬೇಕು. ಮೂರು ಎಂದು ಬರೆದಿದ್ದಾರೆ ಎಂದರೆ ಲೆಕ್ಕಾಚಾರ ತಪ್ಪಾಗಿದೆ ಎಂದೇ ಅರ್ಥ. ಅವರು ಹೇಳಿದ್ದಾರೆ ನಾವು ಅನುಸರಿಸುತ್ತೇವೆ ಎಂಬ ಅಂಧಾನುಕರಣೆಯನ್ನು ಬಿಟ್ಟು ಏಕಾದಶಿಯ ಕುರಿತ ಲೆಕ್ಕಾಚಾರವನ್ನು ಪ್ರತಿಯೊಬ್ಬರೂ ಕಲಿತಲ್ಲಿ ಯಾರು ಎಲ್ಲಿ ಎಡವುತ್ತಿದ್ದಾರೆ ಎನ್ನುವದು ಅತ್ಯಂತ ಸ್ಪಷ್ಟವಾಗುತ್ತದೆ. ಸಾಮಾನ್ಯ ಮಾಧ್ವನಿಗೆ ಏಕಾದಶಿಯ ಲೆಕ್ಕಾಚಾರವನ್ನು ಕಲಿಸುವಲ್ಲಿ ಇದು ನನ್ನ ಅಳಿಲು ಸೇವೆ. ಇದೇ ವಿಷಯದ ಕುರಿತ ಲೇಖನವೂ ಪ್ರಕಟವಾಗಿದೆ. [VNA215]
ಶ್ರೀ ಹರಿಭಕ್ತಿಸಾರದ ಮೇಲಿನ ಆಕ್ಷೇಪಗಳು
ಇಂದಿನ ಜನ ಶ್ರೀಹರಿಭಕ್ತಿಸಾರದ ಮೇಲೆ ಮಾಡುವ ಆಕ್ಷೇಪಗಳಿಗೆ ಶ್ರೀ ಕನಕದಾಸರೇ ನೀಡಿದ ಉತ್ತರಗಳ ಸಂಕಲನ ಇಲ್ಲಿದೆ. ಪ್ರತಿಯೊಬ್ಬರೂ ಕೇಳಲೇಬೇಕಾದ ಭಾಗ.
ದೇವರ ಜೊತೆ ಮಾತನಾಡುವದು ಹೇಗೆ?
ದೇವರು ನಮ್ಮ ಅಂತರ್ಯಾಮಿ, ನಮ್ಮ ಸರ್ವಸ್ವ. ಹೊರಗಿನ ಪ್ರಪಂಚದಲ್ಲಿಯೇ ಆಸಕ್ತರಾದ ನಾವು ಒಳಗಿರುವ ನಮ್ಮ ಸ್ವಾಮಿಯನ್ನು ಮರೆತಿರುತ್ತೇವೆ. ಅವನೊಡನೆ ಹೇಗೆ ಸಂಪರ್ಕ ಮಾಡಬೇಕು ಎನ್ನುವದನ್ನೇ ಅರಿತಿರುವದಿಲ್ಲ. ಯಾರೂ ಸ್ಪರ್ಶ ಮಾಡದ ವಿಷಯಗಳನ್ನು ಕೈಗೆತ್ತಿಕೊಂಡು ಅದ್ಭುತವಾದ ವಿಷಯಗಳನ್ನು ತಿಳಿಸುವದಕ್ಕೆ ಪ್ರಸಿದ್ಧರಾದ ಕನಕದಾಸಾರ್ಯರು ಭಗವಂತ ಮತ್ತು ಭಕ್ತರೊಡಗಿನ ಸಂಬಂಧದ ಅದ್ಭುತ ಪ್ರಪಂಚವವೊಂದನ್ನು ಅನಾವರಣಗೊಳಿಸಿದ್ದಾರೆ. ದೇವರ ಜೊತೆ ಹೇಗೆ ಮಾತನಾಡಬೇಕು ಎನ್ನುವದನ್ನು ತಿಳಿಸುವ ಅವರ ದಿವ್ಯಪದ್ಯಗಳ ಅನುಸಂಧಾನ ಇಲ್ಲಿದೆ. ತಪ್ಪದೇ ಕೇಳಿ.
ಶ್ರೀಹರಿಭಕ್ತಿಸಾರದ 15ನೆಯ ಪದ್ಯ
ಶ್ರೀಕೃಷ್ಣ ಪಾಂಡವರ ಮೇಲೆ ಮಾಡಿದ ಪರಮಾನುಗ್ರಹದ ಚಿಂತನೆ, ಮತ್ತು ಭಕ್ತರನ್ನು ಉದ್ಧರಿಸುವ ಅದ್ಭುತ ಕ್ರಮದ ನಿರೂಪಣೆ.
ಶ್ರೀಹರಿಭಕ್ತಿಸಾರದ 14ನೆಯ ಪದ್ಯ
ನೀಲವರ್ಣ ವಿಶಾಲ ಶುಭಗುಣಶೀಲ ಮುನಿಕುಲಪಾಲ ಲಕ್ಷ್ಮೀಲೋಲ ರಿಪುಶಿಶುಪಾಲಮಸ್ತಕಶೂಲ ವನಮಾಲ | ಮೂಲಕಾರಣ ವಿಮಲ ಯಾದವಜಾಲಹಿತ ಗೋಪಾಲ ಅಗಣಿತಲೀಲ ಕೋಮಲಕಾಯ ರಕ್ಷಿಸು ನಮ್ಮನನವರತ ॥
ಶ್ರೀ ಹರಿಭಕ್ತಿಸಾರದ 13ನೆಯ ಪದ್ಯ
ಬಾಣಾಸುರನನ್ನು ಶ್ರೀಹರಿ ನಿಗ್ರಹಿಸಿದ ಬಗೆಯ ವಿವರಣೆ ಇಲ್ಲಿದೆ.
ಶ್ರೀಹರಿಭಕ್ತಿಸಾರದ 12ನೆಯ ಪದ್ಯ
ಕುಂದಕುಟ್ಮಲರದನ ಪರಮಾನಂದ ಹರಿ ಗೋವಿಂದ ಸನಕಸನಂದವಂದಿತ ಸಿಂಧುಬಂಧನ ಮಂದರಾದ್ರಿಧರ | ಇಂದಿರಾಪತಿ ವಿಜಯಸಖ ಅರವಿಂದನಾಭ ಪುರಂದರಾರ್ಚಿತ ನಂದಕಂದ ಮುಕುಂದ ರಕ್ಷಿಸು ನಮ್ಮನನವರತ ॥
ಶ್ರೀ ಹರಿಭಕ್ತಿಸಾರದ 11ನೆಯ ಪದ್ಯ
ದಾಶರಥಿ ವೈಕುಂಠನಗರನಿವಾಸ ತ್ರೈಜಗೀಶ ಪಾಪವಿನಾಶ ಪರಮವಿಲಾಸ ಹರಿ ಸರ್ವೇಶ ದೇವೇಶ | ವಾಸುದೇವ ದಿನೇಶಶತಸಂಕಾಶ ಯದುಕುಲವಂಶತಿಲಕ ಪರಾಶರಾನತ ದೇವ ರಕ್ಷಿಸು ನಮ್ಮನನವರತ ॥
ಪ್ರಾಯಿಕತ್ವ ಶಬ್ದಾರ್ಥ ವಿಚಾರ
ಶ್ರೀ ಕಂಬಾಲೂರು ರಾಮಚಂದ್ರತೀರ್ಥಶ್ರೀಪಾದಂಗಳವರ ವ್ಯಾಖ್ಯಾನದ ಮೇಲಿನ ಆಕ್ಷೇಪಕ್ಕೆ ಉತ್ತರ ಶ್ರೀಮದಾಚಾರ್ಯರು ಮತ್ತು ಶ್ರೀಮಟ್ಟೀಕಾಕೃತ್ಪಾದರು ಪ್ರಯೋಗ ಮಾಡಿರುವ ಪ್ರಾಯಿಕತ್ವ ಎನ್ನುವ ಶಬ್ದಕ್ಕೆ ಪ್ರಾಚುರ್ಯ ಎಂದು ಶ್ರೀಮದ್ ರಾಮಚಂದ್ರತೀರ್ಥಗುರುಸಾರ್ವಭೌಮರು ಮತ್ತು ಶ್ರೀಮದ್ ಭಾಷ್ಯದೀಪಿಕಾಚಾರ್ಯರು ಅರ್ಥವನ್ನು ಹೇಳಿದ್ದಾರೆ. ಆ ಅರ್ಥವನ್ನು ಮತ್ತು ಅದರ ವಿವರಣೆಯ ಕುರಿತು ಕೆಲವರು ಮಾಡಿರುವ ಆಕ್ಷೇಪಕ್ಕೆ ಇಲ್ಲಿ ವಿಸ್ತೃತವಾದ ಉತ್ತರವನ್ನು ನೀಡಿ, ಶ್ರೀಮದಾಚಾರ್ಯರ, ಶ್ರೀಮಟ್ಟೀಕಾಕೃತ್ಪಾದರ, ಕೋಶಗ್ರಂಥಗಳ ಮತ್ತು ಲೌಕಿಕಪ್ರಯೋಗಗಳ ಆಧಾರವನ್ನು ನೀಡಿ ಪ್ರಾಯಿಕತ್ವ ಎಂಬ ಶಬ್ದಕ್ಕೆ ಪ್ರಾಚುರ್ಯ ಎನ್ನುವದೇ ವಾಚ್ಯಾರ್ಥ, ಪ್ರಾಧಾನ್ಯ ಅಲ್ಲ ಎನ್ನುವದನ್ನು ಪ್ರತಿಪಾದಿಸಿ ಶ್ರೀಪದ್ಮನಾಭತೀರ್ಥಶ್ರೀಪಾದಂಗಳವರ ಸನ್ನ್ಯಾಯರತ್ನಾಯವಲೀ ಮುಂತಾದ ಆಧಾರಗಳನ್ನು ನೀಡಿ ಶ್ರೀರಾಮಚಂದ್ರತೀರ್ಥಗುರುಸಾರ್ವಭೌಮರು ಹೇಳಿದ ಅರ್ಥ ಸಾಂಪ್ರದಾಯಿಕ ಅರ್ಥ ಎನ್ನುವದನ್ನು ಇಲ್ಲಿ ಪ್ರತಿಪಾದಿಸಲಾಗಿದೆ. ಇದರ ಕುರಿತ ಲೇಖನದ ಸಂಖ್ಯೆ VNA214
ಶ್ರೀ ಹರಿಭಕ್ತಿಸಾರದ 10ನೆಯ ಪದ್ಯ
ಮಂಗಳಾತ್ಮಕ ದುರಿತತಿಮಿರಪತಂಗ ಗರುಡತುರಂಗ ರಿಪುಮದಭಂಗ ಕೀರ್ತಿತರಂಗ ಪುರಹರಸಂಗ ನೀಲಾಂಗ | ಅಂಗದಪ್ರಿಯನಂಗಪಿತ ಕಾಳಿಂಗಮರ್ದನ ಅಮಿತಕರುಣಾಪಾಂಗ ಶ್ರೀನರಸಿಂಗ ರಕ್ಷಿಸು ನಮ್ಮನನವರತ ॥
ಶ್ರೀ ಹರಿಭಕ್ತಿಸಾರದ 09ನೆಯ ಪದ್ಯ
ಚಿತ್ರಕೂಟನಿವಾಸ ವಿಶ್ವಾಮಿತ್ರಕ್ರತುಸಂರಕ್ಷ ರವಿಶಶಿನೇತ್ರ ಭವ್ಯಚರಿತ್ರ ಸದ್ಗುಣಗಾತ್ರ ಸತ್ಪಾತ್ರ | ಧಾತ್ರಿಜಾಂತಕ ಕಪಟನಾಟಕಸೂತ್ರ ಪರಮಪವಿತ್ರ ಫಲ್ಗುನಮಿತ್ರ ವಾಕ್ಯವಿಚಿತ್ರ ರಕ್ಷಿಸು ನಮ್ಮನನವರತ ॥
ಶ್ರೀ ಹರಿಭಕ್ತಿಸಾರದ 08ನೆಯ ಪದ್ಯ
ಅಕ್ಷಯಾಶ್ರಿತಸುಜನಜನಸಂರಕ್ಷಣ ಶ್ರೀವತ್ಸ ಕೌಸ್ತುಭ ಮೋಕ್ಷದಾಯಕ ಕುಟಿಲದಾನವಶಿಕ್ಷ ಕುಮುದಾಕ್ಷ | ಪಕ್ಷಿವಾಹನ ದೇವಸಂಕುಲಪಕ್ಷ ನಿಗಮಾಧ್ಯಕ್ಷ ವರನಿಟಿಲಾಕ್ಷಸಖ ಸರ್ವೇಶ ರಕ್ಷಿಸು ನಮ್ಮನನವರತ ॥
ಸದಾಚಾರಸ್ಮೃತಿ — 11 — ಶೌಚದ ವಿಧಿಗಳು
ಯಾವ ಪ್ರದೇಶ, ಕಾಲ, ಸಂದರ್ಭಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡಬಾರದು ಎನ್ನುವ ನಿಷೇಧಗಳನ್ನು ಹಿಂದಿನ ಉಪನ್ಯಾಸದಲ್ಲಿ ತಿಳಿದೆವು. ಮಲಮೂತ್ರವಿಸರ್ಜನೆಯ ಕಾಲದಲ್ಲಿ ಅನುಸರಿಸಬೇಕಾದ ವಿಧಿಗಳ ಕುರಿತು ಇಲ್ಲಿ ತಿಳಿಯುತ್ತೇವೆ.
ಸದಾಚಾರಸ್ಮೃತಿ — 10 — ಶೌಚದಲ್ಲಿ ನಿಷೇಧಗಳು
ಬಯಲಶೌಚದ ಹಿಂದಿರುವ ವೈಜ್ಞಾನಿಕ ಅಂಶಗಳನ್ನು, ಇಂದಿಗೆ ಅದು ವಿರೂಪಗೊಂಡಿರುವದನ್ನು ಹಿಂದಿನ ಲೇಖನದಲ್ಲಿ ಮನಗಂಡೆವು. ಶೌಚವನ್ನು ಯಾವ ರೀತಿಯಾಗಿ ಆಚರಿಸಬೇಕು ಮತ್ತು ಯಾವ ರೀತಿಯಾಗಿ ಆಚರಿಸಬಾರದು ಎಂಬ ಎರಡೂ ವಿಷಯಗಳನ್ನು ಶಾಸ್ತ್ರಗಳು ಅತ್ಯಂತ ಸ್ಪಷ್ಟವಾಗಿ ತಿಳಿಸುತ್ತವೆ. ಶೌಚದಲ್ಲಿನ ನಿಷೇಧಗಳ ಕುರಿತು ತಿಳಿಸುವ ಲೇಖನಿವಿದು. ಇದರ ಕುರಿತ ಉಪನ್ಯಾಸ VNU367
ಶ್ರೀಹರಿಭಕ್ತಿಸಾರದ 07ನೆಯ ಪದ್ಯ
ವೇದಗೋಚರ ವೇಣುನಾದವಿನೋದ ಮಂದರಶೈಲಧರ ಮಧುಸೂದನಾಚ್ಯುತ ಕಂಸದಾನವರಿಪು ಮಹಾಮಹಿಮ | ಯಾದವೇಂದ್ರ ಯಶೋದನಂದನ ನಾದಬಿಂದುಕಲಾತಿಶಯ ಪ್ರಹ್ಲಾದರಕ್ಷಕ ವರದ ರಕ್ಷಿಸು ನಮ್ಮನನವರತ ॥
ಶ್ರೀ ಹರಿಭಕ್ತಿಸಾರದ 6ನೆಯ ಪದ್ಯ
ತಾಮರಸದಳನಯನ ಭಾರ್ಗವರಾಮ ಹಲಧರರಾಮ ದಶರಥ- ರಾಮ ಮೇಘಶ್ಯಾಮ ಸದ್ಗುಣಧಾಮ ನಿಸ್ಸೀಮ | ಸಾಮಗಾನ ಪ್ರೇಮ ಕಾಂಚನದಾಮಧರ ಸುತ್ರಾಮವಿನಮಿತ ನಾಮರವಿಕುಲಸೋಮ ರಕ್ಷಿಸು ನಮ್ಮನನವರತ॥
ಶ್ರೀ ಹರಿಭಕ್ತಿಸಾರ 05ನೆಯ ಪದ್ಯ
ಕ್ಷೀರವಾರಿಶಯನ ಶಾಂತಾಕಾರ ವಿವಿಧವಿಹಾರ ಗೋಪೀಜಾರ ನವನೀತಚೋರ ಚಕ್ರಾಧಾರ ಭವದೂರ | ಮಾರಪಿತ ಗುಣಹಾರ ಸರಸಾಗಾರ ರಿಪುಸಂಹಾರ ತುಂಬುರುನಾರದಪ್ರಿಯ ವರದ ರಕ್ಷಿಸು ನಮ್ಮನನವರತ ॥
ಶ್ರೀ ರಮಾದೇವೀಸ್ತೋತ್ರಮ್
ಮಾದನೂರಿನ ಶ್ರೀ ವಿಷ್ಣುತೀರ್ಥ ಶ್ರೀಪಾದಂಗಳವರು ರಚಿಸಿರುವ ಸಾತ್ವಿಕ ಸಂಪತ್ತನ್ನು ಕರುಣಿಸುವ ರಮಾದೇವಿಸ್ತೋತ್ರದ ಪಠಣೆ.
ಶ್ರೀ ಹರಿಭಕ್ತಿಸಾರದ 04ನೆಯ ಪದ್ಯ
ಕಮಲಸಂಭವವಿನುತ ವಾಸವ ನಮಿತ ಮಂಗಳಚರಿತ ದುರಿತಕ್ಷಮಿತ ರಾಘವ ವಿಶ್ವಪೂಜಿತ ವಿಶ್ವ ವಿಶ್ವಮಯ | ಅಮಿತವಿಕ್ರಮಭೀಮ ಸೀತಾರಮಣ ವಾಸುಕಿಶಯನ ಖಗಪತಿಗಮನ ಕಂಜಜನಯ್ಯ ರಕ್ಷಿಸು ನಮ್ಮನನವರತ ॥
ಶ್ರೀ ಹರಿಭಕ್ತಿಸಾರದ 03ನೆಯ ಪದ್ಯ
ಅನುಪಮಿತಚಾರಿತ್ರ ಕರುಣಾವನಧಿ ಭಕ್ತ ಕುಟುಂಬಿ ಯೋಗೀಜನಹೃದಯಪರಿಪೂರ್ಣ ನಿತ್ಯಾನಂದ ನಿಗಮನುತ | ವನಜನಾಭ ಮುಕುಂದ ಮುರಮರ್ದನ ಜನಾರ್ದನ ತ್ರೈ ಜಗತ್ಪಾವನ ಸುರಾರ್ಚಿತ ದೇವ ರಕ್ಷಿಸು ನಮ್ಮನನವರತ ॥
ಶ್ರೀ ಹರಿಭಕ್ತಿಸಾರದ 02ನೆಯ ಪದ್ಯದ ಉತ್ತರಾರ್ಧ
ದೇವದೇವ ಜಗದ್ಭರಿತ ವಸುದೇವಸುತ ಜಗದೇಕನಾಥ ರಮಾವಿನೋದಿತ ಸಜ್ಜನಾನತ ನಿಖಿಲಗುಣಭರಿತ | ಭಾವಜಾರಿಪ್ರಿಯ ನಿರಾಮಯ ರಾವಣಾಂತಕ ರಘುಕುಲಾನ್ವಯ ದೇವ ಅಸುರವಿರೋಧಿ ರಕ್ಷಿಸು ನಮ್ಮನನವರತ ॥
ಸದಾಚಾರಸ್ಮೃತಿ — 09 — ಬಯಲಶೌಚ
ಮಲಮೂತ್ರವಿಸರ್ಜನೆಯ ವಿಷಯದಲ್ಲಿ ನಮ್ಮ ಋಷಿಮುನಿಗಳು ವಿಧಿಸುವದು ಬಹಿಃಶೌಚವನ್ನು. ಆದರೆ ಇವತ್ತು ಹಳ್ಳಿಗಳಲ್ಲಿ ಇರುವ ಬಯಲ ಶೌಚ ಖಂಡಿತ ಶಾಸ್ತ್ರೀಯವೂ ಅಲ್ಲ, ಸಮಾಜಸಮ್ಮತವೂ ಅಲ್ಲ. ನಮ್ಮ ಪ್ರಾಚೀನ ಋಷಿಮುನಿಗಳು ಎಂದಿಗೂ ಪ್ರಕೃತಿಗೆ ಮಾರಕವಾದ ಬದುಕನ್ನು ಉಪದೇಶಿಸಲಿಲ್ಲ. ಪ್ರಕೃತಿಗೆ ಆಪ್ಯಾಯಮಾನವಾಗಿ ಬದುಕುತ್ತಿದ್ದವರು ಅವರು. ನಮ್ಮ ಪ್ರಾಚೀನರ ಬಯಲ ಶೌಚದ ಹಿಂದೆ ಅದೆಂತಹ ವೈಜ್ಞಾನಿಕತೆ ಅಡಗಿದೆ, ಹಾಗೂ ಟಾಯ್ಲೆಟ್ಟಿನ ಉಪಯೋಗದಿಂದ ಈಗಾಗಲೇ ಪ್ರಕೃತಿಯ ಮೇಲೆ ಉಂಟಾಗಿರುವ ಪರಿಣಾಮವೇನು ಎನ್ನುವದನ್ನು ಇಲ್ಲಿ ತಿಳಿಯುತ್ತೇವೆ. ಈ ವಿಷಯದ ಕುರಿತ ಲೇಖನ VNA205 ನಲ್ಲಿದೆ.
SS08 — ಹಾಸಿಗೆಯಲ್ಲಿ ಹರಿಸ್ಮರಣೆ
ನಿದ್ರೆಯಿಂದ ಏಳುತ್ತಲೇ ಮಾಡಬೇಕಾದ ವಿಷ್ಣುಸ್ಮರಣೆಯ ಕುರಿತ ವಿವರ, ಪಠಿಸುವ ಶ್ಲೋಕಗಳು ಮತ್ತು ಅವುಗಳ ಅರ್ಥ, ಹಾಗೂ ಹಾಸಿಗೆಯಲ್ಲಿ ಶ್ಲೋಕಗಳನ್ನು ಪಠಿಸಬಹುದೇ ಎನ್ನುವ ಪ್ರಶ್ನೆಗೆ ಉತ್ತರ ಮುಂತಾದವುಗಳನ್ನೊಳಗೊಂಡ ಉಪನ್ಯಾಸ. ಇದೇ ವಿಷಯದ ಕುರಿತ ಲೇಖನ: VNA204.
ಶ್ರೀ ಹರಿಭಕ್ತಿಸಾರದ 02ನೆಯ ಪದ್ಯದ ಪೂರ್ವಾರ್ಧ
ದೇವದೇವ, ಜಗದ್ಭರಿತ, ವಸುದೇವಸುತ, ಜಗದೇಕನಾಥ, ರಮಾವಿನೋದಿತ, ಸಜ್ಜನಾನತ, ನಿಖಿಲಗುಣಭರಿತ ಎಂಬ ಏಳು ಶಬ್ದಗಳ ಅರ್ಥಾನುಸಂಧಾನ ಈ ಉಪನ್ಯಾಸದಲ್ಲಿದೆ. ದೇವರ ಮಾಹಾತ್ಮ್ಯ, ಅವನ ಸರ್ವವ್ಯಾಪಿತ್ವ, ಆದರೂ ಭಕ್ತರ ಮನಸ್ಸಿಗೆ ನಿಲುಕಿ ಅವ ಉಪಾಸನೆಯನ್ನು ಸ್ವೀಕರಿಸುವ ಕಾರುಣ್ಯ, ಅವನ ಜಗತ್ಸ್ವಾಮಿತ್ವ, ಸಕಲ ರೂಪಗಳಲ್ಲಿಯೂ ಅವನು ಪರಿಪೂರ್ಣ ಎನ್ನುವದನ್ನು ದಾಸರು ಚಿತ್ರಿಸಿರುವ ಅದ್ಭುತವಾದ ರೀತಿ ಮುಂತಾದವನ್ನು ಈ ಉಪನ್ಯಾಸದಲ್ಲಿ ಕೇಳುತ್ತೇವೆ. VNA020 ಲೇಖನದಲ್ಲಿ ಈ ಪದ್ಯದ ವಿವರಣೆ ದೊರೆಯುತ್ತದೆ.
ಪ್ರಭಾತಪಂಚಕಮ್
ನಮಗೆ ನಾವು ಸುಪ್ರಭಾತವನ್ನು ಹೇಳಿಕೊಳ್ಳುವ ಪುರಾಣೋಕ್ತ ಧರ್ಮಕ್ಕೆ ಅನುಸಾರಿಯಾಗಿ ಶ್ರೀ ಲಕ್ಷ್ಮೀವಲ್ಲಭತೀರ್ಥಶ್ರೀಪಾದಂಗಳವರು ರಚಿಸಿರುವ ಒಂದು ದಿವ್ಯ ಸುಪ್ರಭಾತದ ಪಠಣೆ. ಇದರ ಅರ್ಥಾನುಸಂಧಾನ VNU190, 191, 192 ಮತ್ತು VNU194 ಗಳಲ್ಲಿ ಉಪಲಬ್ಧವಿದೆ.
ಶ್ರೀ ಹರಿಭಕ್ತಿಸಾರದ 01ನೆಯ ಪದ್ಯದ ಉತ್ತರಾರ್ಧ
ರಾಯ ರಘುಕುಲವರ್ಯ ಎಂಬಲ್ಲಿ ರಾಯ ಎಂಬ ಶಬ್ದದ ಬಳಕೆಯ ಹಿಂದಿನ ಔಚಿತ್ಯ, ಭೂಸುರಪ್ರಿಯ ಎಂದು ಪರಮಾತ್ಮನನ್ನು ಬ್ರಾಹ್ಮಣಪ್ರಿಯ ಎಂದು ಕರೆಯಲು ಹಿಂದಿರುವ ಕಾರಣ, ಕನಕದಸರ ಹಿಂದಿನ ಜೀವನ ಚರಿತ್ರೆ, ಕನಕನಾಯಕನನ್ನು ಕನಕದಾಸರನ್ನಾಗಿ ಮಾಡಿದ ಪರಮತ್ಮನ ಚತುರ ಉಪಾಯಗಳ ಚಿಂತನೆ ಮುಂತಾದವುಗಳ ವಿವರಣೆ ಈ ಉಪನ್ಯಾಸದಲ್ಲಿದೆ. VNA018 ಮತ್ತು VNA019 ಲೇಖನದಳಲ್ಲಿ ಈ ಪದ್ಯದ ವಿವರಣೆ ದೊರೆಯುತ್ತದೆ.
ಶ್ರೀ ಹರಿಭಕ್ತಿಸಾರದ 01ನೆಯ ಪದ್ಯದ ಪೂರ್ವಾರ್ಧ
ಶ್ರೀಯರಸ, ಗಾಂಗೇಯನುತ, ಕೌಂತೇಯವಂದಿತಚರಣ, ಕಮಲದಳಾಯತಾಂಬಕ, ರೂಪಚಿನ್ಮಯ, ದೇವಕೀತನಯ ಎಂಬ ಶಬ್ದಗಳ ವಿವರಣೆ ಮತ್ತು ಮೊದಲ ಪದ್ಯದಲ್ಲಿಯೇ ಆ ಶಬ್ದಗಳ ಬಳಕೆಯ ವಿವರಣೆ ಈ ಉಪನ್ಯಾಸದಲ್ಲಿದೆ. ನಮ್ಮ ಕನಕದಾಸರು ಬಳಸುವ ಶಬ್ದಗಳಲ್ಲಿ ಅದೆಷ್ಟು ಅರ್ಥಗಳು ತುಂಬಿರುತ್ತವೆ, ಅದೆಷ್ಟು ಅದ್ಭುತವಾಗಿ ಅವರು ಶಬ್ದಗಳ ಜೋಡಣೆಯನ್ನು ಮಾಡುತ್ತಾರೆ, ಗಂಭೀರವಾದ ತತ್ವಗಳನ್ನು ಅದೆಷ್ಟು ಸುಲಭವಾಗಿ ನಿರೂಪಿಸುತ್ತಾರೆ ಎನ್ನುವದನ್ನು ನಾವಿಲ್ಲಿ ಮನಗಾಣುತ್ತೇವೆ.
ಪ್ರವೇಶಿಕೆ
ಶ್ರೀ ಕನಕದಾಸಾರ್ಯರ ಹಾಗೂ ಶ್ರೀಹರಿಭಕ್ತಿಸಾರದ ಮಹತ್ತ್ವವನ್ನು ಮನಗಾಣಿಸುವ ಭಾಗ.
04/04 ಕಾಲಚಿಂತನೆ ಮತ್ತು ಶ್ರೀರಾಜರಾಜೇಶ್ವರತೀರ್ಥರ ಅನುಗ್ರಹ
ಕಾಲಾಭಿಮಾನಿ ದೇವತೆಗಳನ್ನು ಚಿಂತಿಸಿ ಅವರಿಂದ ಮಂಗಳವನ್ನು ಪ್ರಾರ್ಥಿಸುವ ಭಾಗದ ವಿವರಣೆ, ಮತ್ತು ಮಂಗಳಾಷ್ಟಕವನ್ನು ಪಠಿಸುವ ಭಕ್ತರ ಮೇಲೆ ಶ್ರೀ ರಾಜರಾಜೇಶ್ವರತೀರ್ಥ ಶ್ರೀಪಾದಂಗಳವರು ಮಾಡಿರುವ ಆಶೀರ್ವಾದದ ವಿವರಣೆ ಈ ಭಾಗದಲ್ಲಿದೆ.
03/04 ನದೀಪ್ರಾರ್ಥನೆ, ಮತ್ತು ಶಾಸ್ತ್ರಪ್ರಾರ್ಥನೆ
ನದ್ಯಭಿಮಾನಿ ದೇವತೆಗಳ ಪ್ರಾರ್ಥನೆ ಮತ್ತು ಸಮಸ್ತ ಶಾಸ್ತ್ರಗಳಿಂದ ಪ್ರತಿಪಾದ್ಯನಾದ ಶ್ರೀಹರಿಯಲ್ಲಿ ಪ್ರಾರ್ಥನೆ. ಇಡಿಯ ಮಂಗಳಾಷ್ಟಕದ ಜೀವದಂತಿರುವ ಭಾಗವಿದು. ತಪ್ಪದೇ ಕೇಳಿ.
02/04 ದೇವತಾ, ಋಷಿ, ರಾಜರು, ಪರ್ವತಗಳ ಪ್ರಾರ್ಥನೆ
ಭಗವಂತನ ಕಿಂಕರರಾದ ದೇವತೆಗಳ, ಋಷಿಗಳ, ಚಕ್ರವರ್ತಿಗಳ, ರಾಜರ, ಪರ್ವತಗಳ ಚಿಂತನೆ ಇಲ್ಲಿದೆ.
01/04 ವಿಶ್ವಕುಟುಂಬಿಯಲ್ಲಿ ಪ್ರಾರ್ಥನೆ
ಪ್ರಥಮ ಪದ್ಯದ ಅರ್ಥಾನುಸಂಧಾನ. ಶ್ರೀಹರಿಯ ಮಹಾಕುಟುಂಬ ದಿವ್ಯಚಿಂತನೆಯನ್ನು ಶ್ರೀ ರಾಜರಾಜೇಶ್ವರತೀರ್ಥಶ್ರೀಪಾದಂಗಳವರು ನಮ್ಮಿಂದ ಮಾಡಿಸುತ್ತಾರೆ. ಕಲಿಯಲು ಅನುಕೂಲವಾಗಲು ಇದರ ಪಠಣವನ್ನು VNU348ರಲ್ಲಿ ಪ್ರಕಟಿಸಲಾಗಿದೆ.
ಮಂಗಳಾಷ್ಟಕಮ್
ಶ್ರೀರಾಜರಾಜೇಶ್ವರತೀರ್ಥ ಶ್ರೀಪಾದಂಗಳವರು ರಚಿಸಿರುವ ಮಂಗಳಾಷ್ಟಕದ ಪಠಣೆ.
MV147 ನಮ್ಮ ಕರ್ತವ್ಯ
ಸಮಗ್ರ ಮಧ್ವವಿಜಯವನ್ನು ಆಲಿಸಿರುವ ನಾವು ಮಾಡಬೇಕಾದ ಮುಂದಿನ ಕರ್ತವ್ಯವನ್ನು ತಿಳಿಸುವ ಭಾಗ.
MV146 ದೇವತೆಗಳು ಮಾಡಿದ ಪುಷ್ಪವೃಷ್ಟಿ
ಷೋಡಶಸರ್ಗದ 49ನೆಯ ಶ್ಲೋಕದಿಂದ 58ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ. ದೇವತಾಸಭೆಯಲ್ಲಿ ಮಧ್ವವರ್ಣನೆ, ಶ್ರೀ ನಾರಾಯಣಪಂಡಿತಾಚಾರ್ಯರಿಗೆ ನಮನ, ಆಚಾರ್ಯರ ಮೇಲೆ ದೇವತೆಗಳು ಮಾಡಿದ ಪುಷ್ಪವೃಷ್ಟಿ.
MV145 ಆಚಾರ್ಯರ ಭಕ್ತವಾತ್ಸಲ್ಯ
ಷೋಡಶಸರ್ಗದ 47 ಮತ್ತು 48ನೆಯ ಶ್ಲೋಕಗಳ ಅರ್ಥಾನುಸಂಧಾನ. ಭಕ್ತರ ಮೇಲೆ ಆಚಾರ್ಯರು ತೋರುತ್ತಿದ್ದ ವಾತ್ಸಲ್ಯ ಮತ್ತು ಶ್ರೀಮನ್ ಮಧ್ವವಿಜಯದ ಅಗಾಧತೆಯ ಕುರಿತು ನಾವಿಲ್ಲಿ ಕೇಳುತ್ತೇವೆ.
MV144 ಕರ್ಮನಿರ್ಣಯದ ರಚನೆ
ಷೋಡಶಸರ್ಗದ 41ನೆಯ ಶ್ಲೋಕದಿಂದ 46ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV143 ಶ್ರೀ ಕೃಷ್ಣಾಮೃತಮಹಾರ್ಣವದ ರಚನೆ
ಷೋಡಶಸರ್ಗದ 40ನೆಯ ಶ್ಲೋಕದ ಅರ್ಥಾನುಸಂಧಾನ. ದಾರಿದ್ರ್ಯವನ್ನು ಕಳೆದುಕೊಳ್ಳಲು ಆಚಾರ್ಯರು ತೋರಿದ ದಿವ್ಯಮಾರ್ಗದ ಕುರಿತು ಇಲ್ಲಿ ತಿಳಿಯುತ್ತೇವೆ.
MV142 ಆಚಾರ್ಯರ ಮಾಹಾತ್ಮ್ಯಗಳು
ಷೋಡಶಸರ್ಗದ 36ನೆಯ ಶ್ಲೋಕದಿಂದ 39ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV141 ಆಚಾರ್ಯರ ಯೋಗಶಕ್ತಿ
ಷೋಡಶಸರ್ಗದ 25ನೆಯ ಶ್ಲೋಕದಿಂದ 35ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV140 ಆಚಾರ್ಯರ ಸಮುದ್ರನಿಯಾಮಕತ್ವ
ಷೋಡಶಸರ್ಗದ 10ನೆಯ ಶ್ಲೋಕದಿಂದ 24ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV139 ಬಂಡೆಯನ್ನು ಎತ್ತಿಟ್ಟ ಪ್ರಸಂಗ
ಷೋಡಶಸರ್ಗದ 6ನೆಯ ಶ್ಲೋಕದಿಂದ 9ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV138 ಆಚಾರ್ಯರ ಮಂತ್ರಸಿದ್ಧಿ
ಷೋಡಶಸರ್ಗದ 1ನೆಯ ಶ್ಲೋಕದಿಂದ 5ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV137 ಶ್ರೀ ಮಧ್ವವಿಜಯದ ಮಾಹಾತ್ಮ್ಯ
ಮಧ್ವಚರಿತ್ರೆಯ ಶ್ರವಣ ಸಕಲ ಆಪತ್ತುಗಳನ್ನು ಪರಿಹರಿಸುತ್ತದೆ, ಸಕಲ ಸಂಪತ್ತನ್ನು ತಂದುಕೊಡುತ್ತದೆ, ಸತ್ಸಂತಾನವನ್ನು ಅನುಗ್ರಹಿಸುತ್ತದೆ, ನಮ್ಮನ್ನು ಧರ್ಮಶೀರನ್ನಾಗಿ ಮಾಡುತ್ತದೆ, ನಮ್ಮನ್ನು ಸಾಧಕರನ್ನಾಗಿ ಮಾಡುತ್ತದೆ ಎಂಬಿತ್ಯಾದಿ ಮಧ್ವವಿಜಯದ ಮಹಾಮಾಹಾತ್ಮ್ಯಗಳನ್ನು ಇಲ್ಲಿ ತಿಳಿಸಲಾಗಿದೆ. ಆ ಮಾಹಾತ್ಮ್ಯ ಈ ಗ್ರಂಥಕ್ಕೆ ಬರಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರವನ್ನು ನೀಡುವದರೊಂದಿಗೆ.
MV136 ಮಧ್ವಶಿಷ್ಯರ ಮಾಹಾತ್ಮ್ಯ
ಪಂಚದಶಸರ್ಗದ 127thನೆಯ ಶ್ಲೋಕದಿಂದ 141ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ. ಹದಿನೈದನೆಯ ಸರ್ಗ ಇಲ್ಲಿಗೆ ಪರಿಸಮಾಪ್ತವಾಗುತ್ತದೆ.
MV135 ಶ್ರೀ ಪದ್ಮನಾಭತೀರ್ಥರ ಮಾಹಾತ್ಮ್ಯ
ಪಂಚದಶಸರ್ಗದ 120ನೆಯ ಶ್ಲೋಕದಿಂದ 126ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV134 ಕುಮಾರ ಪರ್ವತಾರೋಹಣ
ಪಂಚದಶಸರ್ಗದ 112ನೆಯ ಶ್ಲೋಕದಿಂದ 119ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV133 ವಿಷ್ಣುತೀರ್ಥರ ಅಪರೋಕ್ಷಜ್ಞಾನ
ಪಂಚದಶಸರ್ಗದ 104ನೆಯ ಶ್ಲೋಕದಿಂದ 111ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV132 ಶ್ರೀ ವಿಷ್ಣುತೀರ್ಥರ ತೀರ್ಥಯಾತ್ರೆ
ಪಂಚದಶಸರ್ಗದ 102 ಮತ್ತು 103ನೆಯ ಶ್ಲೋಕಗಳ ಅರ್ಥಾನುಸಂಧಾನ.
MV131 ಶ್ರೀ ವಿಷ್ಣುತೀರ್ಥರ ಸಂನ್ಯಾಸ
ಪಂಚದಶಸರ್ಗದ 96ನೆಯ ಶ್ಲೋಕದಿಂದ 101ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV130 ಶ್ರೀ ವಿಷ್ಣುತೀರ್ಥರ ವೈರಾಗ್ಯ
ಪಂಚದಶಸರ್ಗದ 92ನೆಯ ಶ್ಲೋಕದಿಂದ 95ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV129 ಶ್ರೀ ಮಧ್ಯಗೇಹಾರ್ಯದಂಪತಿಗಳ ನಿರ್ಯಾಣ
ಪಂಚದಶಸರ್ಗದ 91ನೆಯ ಶ್ಲೋಕದ ಅರ್ಥಾನುಸಂಧಾನ.
MV128 ಶ್ರೀಮದನುವ್ಯಾಖ್ಯಾನದ ರಚನೆ
ಪಂಚದಶಸರ್ಗದ 86ನೆಯ ಶ್ಲೋಕದಿಂದ 90ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV127 ಸರ್ವಮೂಲದ ಮಾಹಾತ್ಮ್ಯ - 2
ಪಂಚದಶಸರ್ಗದ 76ನೆಯ ಶ್ಲೋಕದಿಂದ 85ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV126 ಸರ್ವಮೂಲದ ಮಾಹಾತ್ಮ್ಯ
ಪಂಚದಶಸರ್ಗದ 72ನೆಯ ಶ್ಲೋಕದಿಂದ 85ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV125 ಶ್ರೀ ತ್ರಿವಿಕ್ರಮಪಂಡಿತಾಚಾರ್ಯರ ಉದ್ಧಾರ
ಪಂಚದಶಸರ್ಗದ 64ನೆಯ ಶ್ಲೋಕದಿಂದ 71ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV124 ಮೋಕ್ಷದ ಸ್ವರೂಪ
ಪಂಚದಶಸರ್ಗದ 46ನೆಯ ಶ್ಲೋಕದಿಂದ 63ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV123 ಚಾರ್ವಾಕರ ಖಂಡನೆ
ಪಂಚದಶಸರ್ಗದ 43ನೆಯ ಶ್ಲೋಕದಿಂದ 45ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV122 ಶೂನ್ಯ-ಮಾಯಾವಾದಗಳ ವಿಮರ್ಶೆ
ಪಂಚದಶಸರ್ಗದ 27ನೆಯ ಶ್ಲೋಕದಿಂದ 42ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV121 ಶೂನ್ಯವಾದ ಮಾಯಾವಾದಗಳು
ಪಂಚದಶಸರ್ಗದ 24ನೆಯ ಶ್ಲೋಕದಿಂದ 26ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV120 ತಾರ್ಕಿಕರ ಖಂಡನೆ
ಪಂಚದಶಸರ್ಗದ 16ನೆಯ ಶ್ಲೋಕದಿಂದ 23ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV119 ಪಾಶುಪತರ ವಿಮರ್ಶೆ
ಪಂಚದಶಸರ್ಗದ 15ನೆಯ ಶ್ಲೋಕದ ಅರ್ಥಾನುಸಂಧಾನ.
MV118 ಪರಿಣಾಮವಾದದ ಖಂಡನೆ
ಪಂಚದಶಸರ್ಗದ 14ನೆಯ ಶ್ಲೋಕದ ಅರ್ಥಾನುಸಂಧಾನ.
MV117 ಸೇಶ್ವರ ಸಾಂಖ್ಯರ ವಿಮರ್ಶೆ
ಪಂಚದಶಸರ್ಗದ 11ನೆಯ ಶ್ಲೋಕದಿಂದ 13ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV116 ಸಾಂಖ್ಯರ ವಿಮರ್ಶೆ
ಪಂಚದಶಸರ್ಗದ 8ನೆಯ ಶ್ಲೋಕದಿಂದ 10ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV115 ಆಚಾರ್ಯರ ಉಪನ್ಯಾಸ ವೈಖರೀ
ಪಂಚದಶಸರ್ಗದ ಪ್ರಥಮ ಶ್ಲೋಕದಿಂದ 7ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV114 ಮಧ್ಯಾಹ್ನದ ನಂತರ
ಚತುರ್ದಶಸರ್ಗದ 40ನೆಯ ಶ್ಲೋಕದಿಂದ 55ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ. ಹದಿನಾಲ್ಕನೆಯ ಸರ್ಗ ಇಲ್ಲಿಗೆ ಪರಿಸಮಾಪ್ತವಾಗುತ್ತದೆ.
MV113 ಶ್ರೀಮದಾಚಾರ್ಯರ ಪೂಜಾವೈಭವ
ಚತುರ್ದಶಸರ್ಗದ 31ನೆಯ ಶ್ಲೋಕದಿಂದ 39ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV112 ನಿರ್ಮಾಲ್ಯಾಭಿಷೇಕ
ಚತುರ್ದಶಸರ್ಗದ 26ನೆಯ ಶ್ಲೋಕದಿಂದ 30ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV111 ಶ್ರೀಮದಾಚಾರ್ಯರ ಪಾಠದ ಮಾಧುರ್ಯ
ಚತುರ್ದಶಸರ್ಗದ 22ನೆಯ ಶ್ಲೋಕದಿಂದ 25ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV110 ಮಧ್ವಶಿಷ್ಯರ ಪಾಠದ ಸಿದ್ಧತೆ
ಚತುರ್ದಶಸರ್ಗದ 14ನೆಯ ಶ್ಲೋಕದಿಂದ 21ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV109 ಅರುಣೋದಯದಿಂದ ಸೂರ್ಯೋದಯದವರೆಗೆ
ಚತುರ್ದಶಸರ್ಗದ 7ನೆಯ ಶ್ಲೋಕದಿಂದ 13ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV108 ಆಚಾರ್ಯರ ಪಾದಧೂಳಿಯ ವರ್ಣನೆ
ಚತುರ್ದಶಸರ್ಗದ ಪ್ರಥಮಶ್ಲೋಕದಿಂದ 6ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV107 ಶ್ರೀ ತ್ರಿವಿಕ್ರಮಪಂಡಿತಾಚಾರ್ಯರ ಚರಿತ್ರೆ
ತ್ರಯೋದಶಸರ್ಗದ 54ನೆಯ ಶ್ಲೋಕದಿಂದ 68ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV106 ಲಿಕುಚ ಮನೆತನದ ಪಾಂಡಿತ್ಯ
ತ್ರಯೋದಶಸರ್ಗದ 43ನೆಯ ಶ್ಲೋಕದಿಂದ 43ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV105 ಆಚಾರ್ಯರ ದೇಹದ ವರ್ಣನೆ
ತ್ರಯೋದಶಸರ್ಗದ 21ನೆಯ ಶ್ಲೋಕದಿಂದ 42ನೆಯ ಶ್ಲೋಕದವರಿಗಿನ ವರ್ಣನೆ
MV104 ಮಧೂರಿನಲ್ಲಿ ಆಚಾರ್ಯರು
ತ್ರಯೋದಶಸರ್ಗದ 9ನೆಯ ಶ್ಲೋಕದಿಂದ 20ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV103 ಆಚಾರ್ಯರ ಸಂಚಾರವೈಭವ
ತ್ರಯೋದಶಸರ್ಗದ ಪ್ರಥಮಶ್ಲೋಕದಿಂದ 8ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV102 ಮಧ್ವವಿಜಯದ ಪರಿಶುದ್ಧಿ
ಶ್ರೀಮನ್ ಮಧ್ವವಿಜಯ ಎಷ್ಟು ಪರಿಶುದ್ಧವಾದ ಕ್ರಮದಲ್ಲಿ ಇತಿಹಾಸಗಳನ್ನು ನಿರೂಪಿಸುವ ಗ್ರಂಥ ಎನ್ನುವದನ್ನು ಇಲ್ಲಿ ನಿರೂಪಿಸಲಾಗಿದೆ.
MV101 ತತ್ವೋದ್ಯೋತದ ರಚನೆ
ದ್ವಾದಶಸರ್ಗದ 42ನೆಯ ಶ್ಲೋಕದಿಂದ 54ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ. ಇಲ್ಲಿಗೆ ಹನ್ನೆರಡನೆಯ ಸರ್ಗ ಪರಿಸಮಾಪ್ತವಾಗುತ್ತದೆ.
MV100 ಆಚಾರ್ಯರ ಅದ್ಭುತ ವೇದವ್ಯಾಖ್ಯಾನ
ದ್ವಾದಶಸರ್ಗದ 26ನೆಯ ಶ್ಲೋಕದಿಂದ 41ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV99 ದುಷ್ಟರ ದುರಾಲೋಚನೆಗಳು
ದ್ವಾದಶಸರ್ಗದ 11ನೆಯ ಶ್ಲೋಕದಿಂದ 25ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV98 ದುರ್ಜನರ ದುರ್ಮಂತ್ರಣ
ದ್ವಾದಶಸರ್ಗದ ಪ್ರಥಮಶ್ಲೋಕದಿಂದ 10ನೆಯ ಶ್ಲೋಕದ ವರೆಗಿನ ಅರ್ಥಾನುಸಂಧಾನ.
MV97 ಮೋಕ್ಷವೇ ಮಧ್ವಶಾಸ್ತ್ರದ ಫಲ
ಏಕಾದಶಸರ್ಗದ 78 ಮತ್ತು 79ನೆಯ ಶ್ಲೋಕಗಳ ಅರ್ಥಾನುಸಂಧಾನ. ಇಲ್ಲಿಗೆ ಹನ್ನೊಂದನೆಯ ಸರ್ಗ ಪರಿಸಮಾಪ್ತವಾಗುತ್ತದೆ.
MV96 ಭಗವಂತನ ವರ್ಣನೆ
ಏಕಾದಶಸರ್ಗದ 64ನೆಯ ಶ್ಲೋಕದಿಂದ 77ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV95 ಮುಕ್ತರ ಭೋಗ
ಏಕಾದಶಸರ್ಗದ 20ನೆಯ ಶ್ಲೋಕದಿಂದ 63ನೆಯ ಶ್ಲೋಕದವರಿಗೆ ಅರ್ಥಾನುಸಂಧಾನ.
MV94 ಮಹಾಲಕ್ಷ್ಮೀ ವೈಭವ
ಏಕಾದಶಸರ್ಗದ 16ನೆಯ ಶ್ಲೋಕದಿಂದ 19ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV93 ವೈಕುಂಠವರ್ಣನೆ
ಏಕಾದಶಸರ್ಗದ 6ನೆಯ ಶ್ಲೋಕದಿಂದ 11ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV92 ಶೇಷ-ಸನಕಾದಿಗಳ ಸಂವಾದ
ಏಕಾದಶಸರ್ಗದ ಪ್ರಥಮಶ್ಲೋಕದಿಂದ 5ನೆಯ ಶ್ಲೋಕದವರಿಗಿನ ಅರ್ಥಾನುಸಂಧಾನ.
MV91 ಮಧ್ವವಿಜಯದಲ್ಲಿ ಮೋಕ್ಷದ ವರ್ಣನೆಯ ಔಚಿತ್ಯ
ಮಧ್ವವಿಜಯದಲ್ಲಿ ಮೋಕ್ಷದ ವರ್ಣನೆ ಯಾಕಾಗಿ ಬಂದಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
MV90 ಮೋಕ್ಷದ ಸ್ವರೂಪ
ಶ್ರೀಮದಾಚಾರ್ಯರು ನಿರೂಪಿಸಿರುವ ಮೋಕ್ಷದ ಪರಿಶುದ್ಧ ಸ್ವರೂಪದ ನಿರೂಪಣೆ ಇಲ್ಲಿದೆ.
MV89 ಆಚಾರ್ಯರ ಮಹಿಮೆಗಳು
ದಶಮಸರ್ಗದ 50ನೆಯ ಶ್ಲೋಕದಿಂದ 56ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ. ಇಲ್ಲಿಗೆ ಹತ್ತನೆಯ ಸರ್ಗ ಪರಿಸಮಾಪ್ತವಾಗುತ್ತದೆ.
MV88 ಭೀಮನ ಗದಾಯುದ್ಧ ವೈಭವ
ದಶಮಸರ್ಗದ 49ನೆಯ ಶ್ಲೋಕದ ಅರ್ಥಾನುಸಂಧಾನ.
MV87 ಅಮರೇಂದ್ರಪುರಿಯನ್ನು ಗೆದ್ದದ್ದು
ದಶಮಸರ್ಗದ 42ನೆಯ ಶ್ಲೋಕದಿಂದ 48ನೆಯ ಶ್ಲೋಕದವರೆಗೆ ಅರ್ಥಾನುಸಂಧಾನ.
MV86 ಆಚಾರ್ಯರನ್ನು ಗಂಗೆ ಸಾಕ್ಷಾತ್ತಾಗಿ ಪೂಜಿಸಿದ್ದು
ದಶಮಸರ್ಗದ 34ನೇ ಶ್ಲೋಕದಿಂದ 41ನೇ ಶ್ಲೋಕಗಳವರೆಗಿನ ಅರ್ಥಾನುಸಂಧಾನ.
MV85 ಗಂಗೆಯನ್ನು ಈಜಿ ದಾಟಿದ ಕಥೆ
ದಶಮಸರ್ಗದ 26ನೆಯ ಶ್ಲೋಕದಿಂದ 33ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV84 ಕಳ್ಳರಿಗೆ ಬುದ್ಧಿ ಕಲಿಸಿದ ಘಟನೆಗಳು
ದಶಮಸರ್ಗದ 20ನೆಯ ಶ್ಲೋಕದಿಂದ 25ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV83 ಬನ್ನಂಜೆಯ ಅಪವ್ಯಾಖ್ಯಾನ
ಅರ್ಧರಾಜ್ಯ ಎನ್ನುವ ಶಬ್ದಕ್ಕೆ ಬನ್ನಂಜೆ ಗೋವಿಂದಾಚಾರ್ಯರು ಹೇಳಿರುವ ಅರ್ಥ ಪಂಡಿತಾಚಾರ್ಯರ ಅಭಿಪ್ರಾಯಕ್ಕೆ ವಿರುದ್ಧ ಎಂದು ಪ್ರತಿಪಾದಿಸುವ ಭಾಗ.
MV82 ಮುಸ್ಲಿಮ್ ರಾಜನ ಪ್ರಸಂಗ
ದಶಮಸರ್ಗದ 8ನೆಯ ಶ್ಲೋಕದಿಂದ 19ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV81 ಈಶ್ವರದೇವನ ಪ್ರಸಂಗ
ದಶಮಸರ್ಗದ 4ನೇ ಶ್ಲೋಕದಿಂದ 7ನೇ ಶ್ಲೋಕದವರೆಗಿನ ಅರ್ಥಾನುಸಂಧಾನ.
MV80 ಮಧ್ವಚರಿತ್ರೆಯ ಅಗಾಧತೆ
ದಶಮಸರ್ಗದ 1ನೆಯ ಶ್ಲೋಕದಿಂದ 3ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV79 ದಶಮಸರ್ಗದ ಸಾರಾಂಶ
ಸಮಗ್ರ ದಶಮಸರ್ಗದಲ್ಲಿ ವಿಷಯಗಳ ಪಕ್ಷಿನೋಟ
MV78 ಯಜ್ಞ ಮತ್ತು ದ್ವಿತೀಯ ಬದರೀಯಾತ್ರೆ
ನವಮಸರ್ಗದ 44ನೆಯ ಶ್ಲೋಕದಿಂದ 55ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ. ಇಲ್ಲಿಗೆ ಒಂಭತ್ತನೆಯ ಸರ್ಗ ಮುಗಿಯುತ್ತದೆ.
MV77 ಉಡುಪಿಯಲ್ಲಿ ಕೃಷ್ಣಪ್ರತಿಷ್ಠಾಪನೆ
ನವಮಸರ್ಗದ 39ನೆಯ ಶ್ಲೋಕದಿಂದ 43ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV76 ಅಚ್ಯುತಪ್ರೇಕ್ಷಾಚಾರ್ಯರಿಗೆ ಜ್ಞಾನಪ್ರದಾನ
ನವಮಸರ್ಗದ 29ನೆಯ ಶ್ಲೋಕದಿಂದ 38ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV75 ಆಚಾರ್ಯರು ನಮ್ಮನ್ನು ಉದ್ಧಾರ ಮಾಡುವ ರೀತಿ
ನವಮಸರ್ಗದ 27 ಮತ್ತು 28ನೆಯ ಶ್ಲೋಕಗಳ ಅರ್ಥಾನುಸಂಧಾನ.
MV74 ಶ್ರೀ ಶೋಭನಭಟ್ಟರ ಉಪನ್ಯಾಸ
ಮಾಧ್ವಸಮಾಜ ಪಡೆದಿರುವ ಬೆಲೆ ಕಟ್ಟಲಾಗದ ಮಹಾ ಸೌಭಾಗ್ಯಗಳಲ್ಲಿ ಒಂದು, ಆಚಾರ್ಯರ ಸಾಕ್ಷಾತ್ ಶಿಷ್ಯರಾದ ಶ್ರೀ ಪದ್ಮನಾಭತೀರ್ಥಗುರುಸಾರ್ವಭೌಮರ ಪ್ರವಚನವೊಂದು ಮಧ್ವವಿಜಯದಲ್ಲಿ ದಾಖಲೆಯಾಗಿರುವದು. ಆ ಪದ್ಮನಾಭತೀರ್ಥಾರ್ಯರು ತಾವು ಶೋಭನಭಟ್ಟರಾಗಿದ್ದಾಗಲೇ ಮಾಡಿದ ಮಧ್ವಸೇವೆಯ ಚಿತ್ರಣ ಇಲ್ಲಿದೆ. ಮೈ ಮನಗಳನ್ನು ಪುಳಕಗೊಳಿಸಿ ಜೀವಚೈತನ್ಯವನ್ನು ಸಾರ್ಥಕಗೊಳಿಸುವ ಆ ಮಹಾಗುರುಗಳ ವಚನಗಳ ಅನುವಾದ ಇಲ್ಲಿದೆ. ತಪ್ಪದೇ ಕೇಳಿ
MV73 ಶ್ರೀ ಶೋಭನಭಟ್ಟರ ಚರಿತ್ರೆ
ನವಮಸರ್ಗದ 14ನೆಯ ಶ್ಲೋಕದಿಂದ 19ನೆಯ ಶ್ಲೋಕದವರೆಗಿನ ವಿವರಣೆ.
MV72 ಶ್ರೀಮತ್ ಸೂತ್ರಭಾಷ್ಯದ ಮಾಹಾತ್ಮ್ಯ
ನವಮಸರ್ಗದ 8 ನೆಯ ಶ್ಲೋಕದಿಂದ ರಿಂದ 13 ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ
MV71 ಶ್ರೀಮದಾಚಾರ್ಯರ ಗ್ರಂಥರಚನಾಕೌಶಲ
ಶ್ರೀಮದಾಚಾರ್ಯರು ಬದರಿಯಲ್ಲಿದ್ದುಕೊಂಡೇ ಸೂತ್ರಭಾಷ್ಯದ ರಚನೆಯನ್ನು ಮಾಡುತ್ತಾರೆ. ಈ ಪ್ರಸಂಗದಲ್ಲಿ ಶ್ರೀ ವಾದೀಂದ್ರತೀರ್ಥಶ್ರೀಪಾದಂಗಳವರು ಗುರುಗುಣಸ್ತವನದಲ್ಲಿ ಹೇಳಿರುವ ಶ್ರೀ ರಾಘವೇಂದ್ರಸ್ವಾಮಿಗಳ ಗ್ರಂಥರಚನಾಕೌಶಲದ ಮಾಹಾತ್ಮ್ಯವನ್ನು ವಿವರಿಸಿ ಆಚಾರ್ಯರ ಅನಂತಜ್ಞಾನ ಮತ್ತು ಸೂತ್ರಭಾಷ್ಯದ ಮಾಹಾತ್ಮ್ಯಕುರಿತ ಚಿಂತನೆಯಿದೆ.
MV70 ಬದರಿಗೆ ಹಿಂತಿರುಗಿದ ಆಚಾರ್ಯರು
ನವಮಸರ್ಗದ 1 ನೆಯ ಶ್ಲೋಕದಿಂದ ರಿಂದ 7 ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV69 ಕಲಿಕಾಲದ ಜನರ ನೀಚತೆ
ಅಷ್ಟಮಸರ್ಗದ 49 ನೆಯ ಶ್ಲೋಕದಿಂದ ರಿಂದ 54 ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ
MV68 ಮಧ್ವ-ನಾರಾಯಣಸಂವಾದ
ಅಷ್ಟಮಸರ್ಗದ 43 ನೆಯ ಶ್ಲೋಕದಿಂದ ರಿಂದ 48 ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV67 ಅನೇಕ ಅವತಾರಗಳ ಚಿಂತನೆ
ಅಷ್ಟಮಸರ್ಗದ 35 ನೆಯ ಶ್ಲೋಕದಿಂದ ರಿಂದ 42 ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV66 ರಾಮ-ಕೃಷ್ಣಾವತಾರಗಳ ವರ್ಣನೆ — 2
ಅಷ್ಟಮಸರ್ಗದ 25 ನೆಯ ಶ್ಲೋಕದಿಂದ ರಿಂದ 34 ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ
MV65 ರಾಮ-ಕೃಷ್ಣಾವತಾರಗಳ ವರ್ಣನೆ — 1
ಅಷ್ಟಮ ಸರ್ಗದ 19 ನೆಯ ಶ್ಲೋಕದಿಂದ ರಿಂದ 24 ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV64 ಪರಮಾತ್ಮನ ಅವತಾರಗಳ ವರ್ಣನೆ
ಅಷ್ಟಮಸರ್ಗದ 14ನೆಯ ಶ್ಲೋಕದಿಂದ ರಿಂದ 18 ನೆಯ ಶ್ಲೋಕದವರೆಗಿನ ವಿವರಣೆ.
MV63 ಮಹಾಬದರಿಗೆ ತೆರಳಿದ ಶ್ರೀಮದಾಚಾರ್ಯರು
ಅಷ್ಟಮಸರ್ಗದ 6ನೆಯ ಶ್ಲೋಕದಿಂದ ರಿಂದ 13 ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV62 ಋಜುಗಳ ಶ್ರೇಷ್ಠ ಜ್ಞಾನ
ಅಷ್ಟಮಸರ್ಗದ 1ನೆಯ ಶ್ಲೋಕದಿಂದ ರಿಂದ 5 ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV61 ಋಷಿಗಳಿಗೆ ಆಚಾರ್ಯರ ಜ್ಞಾನವನ್ನು ಕಂಡು ಉಂಟಾದ ಬೆರಗು
ಅಷ್ಟಮಸರ್ಗದ ಸರ್ಗದ ಪ್ರಥಮಶ್ಲೋಕದ ಅರ್ಥಾನುಸಂಧಾನ.
MV60 ವೇದವ್ಯಾಸದೇವರ ಸನ್ನಿಧಿಯಲ್ಲಿ ಶ್ರೀಮದಾಚಾರ್ಯರು
ಸಪ್ತಮಸರ್ಗದ 32ನೆಯ ಶ್ಲೋಕದಿಂದ 59 ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ. ಇಲ್ಲಿಗೆ ಸಪ್ತಮ ಸರ್ಗ ಪರಿಸಮಾಪ್ತವಾಗುತ್ತದೆ.
MV59 ವೇದವ್ಯಾಸದೇವರ ವರ್ಣನೆ
ಸಪ್ತಮಸರ್ಗದ 16ನೆಯ ಶ್ಲೋಕದಿಂದ 32 ನೆಯ ಶ್ಲೋಕದವರೆಗಿನ ವಿವರಣೆ.
MV58 ಋಷಿಗಳ ದೃಷ್ಟಿಯಲ್ಲಿ ಆಚಾರ್ಯರು
ಸಪ್ತಮಸರ್ಗದ 5ನೆಯ ಶ್ಲೋಕದಿಂದ 15 ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV57 ವ್ಯಾಸಬದರಿಯ ವರ್ಣನೆ
ಸಪ್ತಮಸರ್ಗದ ಪ್ರಥಮಶ್ಲೋಕದಿಂದ 4ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV56 ವ್ಯಾಸಬದರಿಕಾಶ್ರಮಕ್ಕೆ ಶ್ರೀಮದಾಚಾರ್ಯರ ಪ್ರಯಾಣ
ಷಷ್ಠಸರ್ಗದ 48ನೆಯ ಶ್ಲೋಕದಿಂದ 57 ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ. ಇಲ್ಲಿಗೆ ಆರನೆಯ ಸರ್ಗ ಮುಕ್ತಾಯವಾಗುತ್ತದೆ.
MV55 ಶ್ರೀಮದಾಚಾರ್ಯರು ಮಾಡಿದ ತಪಸ್ಸು
ಷಷ್ಠಸರ್ಗದ 43ನೆಯ ಶ್ಲೋಕದಿಂದ 47 ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV54 ಶ್ರೀಮದ್ ಗೀತಾಭಾಷ್ಯದ ಮಾಹಾತ್ಮ್ಯ
ಷಷ್ಟಸರ್ಗದ 39ನೆಯ ಶ್ಲೋಕದಿಂದ 42 ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV53 ಬದರಿಗೆ ಬಂದ ಶ್ರೀಮದಾಚಾರ್ಯರು
ಷಷ್ಠಸರ್ಗದ 36 ರಿಂದ 38 ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV52 ಆಚಾರ್ಯರ ಮೊದಲ ಬದರೀಯಾತ್ರೆ
ಷಷ್ಠಸರ್ಗದ 32ನೆಯ ಶ್ಲೋಕದಿಂದ 35ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV51 ಗೀತಾಭಾಷ್ಯದ ರಚನೆ
ಷಷ್ಠಸರ್ಗದ 26ನೆಯ ಮತ್ತು 31ನೆಯ ಶ್ಲೋಕದ ವರೆಗಿನ ಅರ್ಥಾನುಸಂಧಾನ.
MV50 ವೇದಗಳು ಮತ್ತು ದ್ರೌಪದೀದೇವಿಯರಲ್ಲಿ ಇರುವ ಸಾಮ್ಯ
ಷಷ್ಠಸರ್ಗದ 24 ಮತ್ತು 25ನೆಯ ಶ್ಲೋಕಗಳ ಅರ್ಥಾನುಸಂಧಾನ.
MV49 ಮೂರು ವಿದ್ವತ್ಸಭೆಗಳು
ಷಷ್ಠ ಸರ್ಗದ 11ನೆಯ ಶ್ಲೋಕದಿಂದ 23ನೆಯ ಶ್ಲೋಕದ ವರೆಗಿನ ಅರ್ಥಾನುಸಂಧಾನ.
MV48 ವಿಷ್ಣುಸಹಸ್ರನಾಮದ ಅರ್ಥ
ಷಷ್ಠಸರ್ಗದ 3ನೆಯ ಶ್ಲೋಕದಿಂದ 10ನೆಯ ಶ್ಲೋಕದ ವರೆಗಿನ ಅರ್ಥಾನುಸಂಧಾನ.
MV47 ಆಚಾರ್ಯರು ಮಾಡಿದ ವೇದವ್ಯಾಖ್ಯಾನ
ಷಷ್ಠಸರ್ಗದ 1 ಮತ್ತು 2ನೆಯ ಶ್ಲೋಕದ ಅರ್ಥಾನುಸಂಧಾನ. ಋಗ್ಭಾಷ್ಯದ ವಿವರಣೆಯೂ ಇಲ್ಲಿದೆ.
MV46 ಷಷ್ಠಸರ್ಗದ ಸಾರಾಂಶ
ಆರನೆಯ ಸರ್ಗದ ಮಹತ್ತ್ವ ಮತ್ತು ಸಾರಾಂಶ.
MV45 ಶ್ರೀರಂಗದಿಂದ ಪಯಸ್ವಿನೀ ತೀರಕ್ಕೆ
ಪಂಚಮಸರ್ಗದ 48ನೆಯ ಶ್ಲೋಕದಿಂದ 52ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ. ಇಲ್ಲಿಗೆ ಐದನೆಯ ಸರ್ಗ ಮುಕ್ತಾಯವಾಗುತ್ತದೆ.
MV44 ರಾಮೇಶ್ವರದಲ್ಲಿ ಚಾತುರ್ಮಾಸ್ಯ
ಪಂಚಮಸರ್ಗದ 42ನೆಯ ಶ್ಲೋಕದಿಂದ 47ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV43 ಕುದುಪುಸ್ತೂರನ ಮಧ್ವದ್ವೇಷ
ಪಂಚಮಸರ್ಗದ 38ನೆಯ ಶ್ಲೋಕದಿಂದ 41ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV42 ತಿರುವನಂತಪುರದಲ್ಲಿ ಆಚಾರ್ಯರು
ಪಂಚಮಸರ್ಗದ 36 ಮತ್ತು 37ನೆಯ ಶ್ಲೋಕಗಳ ಅರ್ಥಾನುಸಂಧಾನ.
MV41 ದುರ್ಗಾದೇವಿಯ ಅವತಾರದ ಕುರಿತು
ಪಂಚಮಸರ್ಗದ 35ನೆಯ ಶ್ಲೋಕದ ಅರ್ಥಾನುಸಂಧಾನ.
MV40 ಪಯಸ್ವಿನೀ ತೀರಕ್ಕೆ ಯಾತ್ರೆ
ಪಂಚಮಸರ್ಗದ 30ನೆಯ ಶ್ಲೋಕದಿಂದ 34ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV39 ಲಿಕುಚಯತಿಗಳು ಮಾಡಿದ ಪ್ರಾರ್ಥನೆ
ಪಂಚಮಸರ್ಗದ 29ನೆಯ ಶ್ಲೋಕದಿಂದ 29ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV38 ಆಚಾರ್ಯರಿಂದ ಜ್ಞಾನ ಪಡೆದ ತಂದೆತಾಯಿಯರು
ಪಂಚಮಸರ್ಗದ 23 ಮತ್ತು 24ನೆಯ ಶ್ಲೋಕಗಳ ಅರ್ಥಾನುಸಂಧಾನ.
MV37 ಅದ್ವೈತಭಾಷ್ಯದ ಸಮಸ್ಯೆಗಳು
ಪಂಚಮಸರ್ಗದ 17ನೆಯ ಶ್ಲೋಕದಿಂದ 22ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV36 ವಾದಿಸಿಂಹ ಬುದ್ಧಿಸಾಗರರ ಪರಾಜಯ
ಪಂಚಮಸರ್ಗದ 8ನೆಯ ಶ್ಲೋಕದಿಂದ 16ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV35 ಅನುಮಾನತೀರ್ಥ ಎಂಬ ಬಿರುದು
ಪಂಚಮಸರ್ಗದ 3ನೆಯ ಶ್ಲೋಕದಿಂದ 7ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ
MV34 ಆನಂದತೀರ್ಥ ಎಂಬ ಹೆಸರಿನ ಅರ್ಥ
ಪಂಚಮಸರ್ಗದ 2ನೆಯ ಶ್ಲೋಕದ ಅರ್ಥಾನುಸಂಧಾನ.
MV33 ವೇದಾಂತಪೀಠಾಧಿಪತಿಗಳಾದ ಶ್ರೀಮದಾಚಾರ್ಯರು
ಪಂಚಮಸರ್ಗದ ಪ್ರಥಮಶ್ಲೋಕದ ಅರ್ಥಾನುಸಂಧಾನ.
MV32 ಪಂಚಮಸರ್ಗದ ಸಾರಾಂಶ
ಪಂಚಮಸರ್ಗದಲ್ಲಿ ವಿಷಯಗಳ ಪಕ್ಷಿನೋಟ ಮತ್ತು ಪಂಚಮಸರ್ಗದ ಮಹತ್ತ್ವ
MV31 ಮೊದಲ ವಾದಿವಿಜಯ
ಚತುರ್ಥಸರ್ಗದ 43ನೆಯ ಶ್ಲೋಕದಿಂದ 54ನೆಯ ಶ್ಲೋಕದ ವರೆಗಿನ ಅರ್ಥಾನುಸಂಧಾನ. ಇಲ್ಲಿಗೆ ನಾಲ್ಕನೆಯ ಸರ್ಗ ಪರಿಸಮಾಪ್ತವಾಗುತ್ತದೆ.
MV30 ಉಡುಪಿಗೆ ಗಂಗೆ ಬಂದ ಘಟನೆ
ಚತುರ್ಥಸರ್ಗದ 36ನೆಯ ಶ್ಲೋಕದಿಂದ 42ನೆಯ ಶ್ಲೋಕಗಳ ವರೆಗಿನ ಅರ್ಥಾನುಸಂಧಾನ.
MV29 ಆಚಾರ್ಯರು ಅನುಪಮರು
ಚತುರ್ಥಸರ್ಗದ 34 ಮತ್ತು 35ನೆಯ ಶ್ಲೋಕಗಳ ಅರ್ಥಾನುಸಂಧಾನ.
MV28 ಪೂರ್ಣಪ್ರಜ್ಞ ಎಂಬ ಹೆಸರಿನ ಅರ್ಥ
ಚತುರ್ಥಸರ್ಗದ 32 ಮತ್ತು 33ನೆಯ ಶ್ಲೋಕಗಳ ಅರ್ಥಾನುಸಂಧಾನ.
MV27 ಶುದ್ಧ ಸಂನ್ಯಾಸದ ಕ್ರಮ ಮತ್ತು ಆಚಾರ್ಯರಿಂದ ಸಂನ್ಯಾಸಸ್ವೀಕಾರ
ಚತುರ್ಥಸರ್ಗದ 31ನೆಯ ಶ್ಲೋಕದ ಅರ್ಥಾನುಸಂಧಾನ.
MV26 ಶ್ರೀ ವಿಷ್ಣುತೀರ್ಥರ ಜನನ
ಚತುರ್ಥಸರ್ಗದ 26ನೆಯ ಶ್ಲೋಕದಿಂದ 29ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV25 ತಂದೆತಾಯಿಯರ ದುಃಖ
ಚತುರ್ಥಸರ್ಗದ 19ನೆಯ ಶ್ಲೋಕದಿಂದ 25ನೆಯ ಶ್ಲೋಕದವರೆಗಿನ ವಿವರಣೆ.
MV24 ತಂದೆತಾಯಿಯರಿಗಾದ ಆಘಾತ
ಚತುರ್ಥಸರ್ಗದ 15ನೆಯ ಶ್ಲೋಕದಿಂದ 18ನೆಯ ಶ್ಲೋಕದ ವರೆಗಿನ ಅರ್ಥಾನುಸಂಧಾನ.
MV23 ವೇದಾಂತ ಪೀಠದ ಇತಿಹಾಸ
ಸನಕಾದಿಗಳಿಂದ ಪ್ರವರ್ತಿತವಾದ ಶ್ರೀಮದ್ ವೇದಾಂತ ಪೀಠದ ಇತಿಹಾಸ.
MV22 ಶ್ರೀ ಅಚ್ಯುತಪ್ರೇಕ್ಷಾಚಾರ್ಯರ ಪೂರ್ವಜನ್ಮ
ಚತುರ್ಥಸರ್ಗದ 7ನೆಯ ಶ್ಲೋಕದಿಂದ 12ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV21 ಸಂನ್ಯಾಸದ ನಿರ್ಧಾರ
ಚತುರ್ಥಸರ್ಗದ 2ನೆಯ ಶ್ಲೋಕದಿಂದ 5ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV20 ವಾಸುದೇವನ ಆಲೋಚನೆ
ಚತುರ್ಥಸರ್ಗದ ಪ್ರಥಮಶ್ಲೋಕದ ವಿವರಣೆ.
MV19 ಗುರುಪುತ್ರನ ಖಾಯಿಲೆ ಪರಿಹಾರ
ತೃತೀಯಸರ್ಗದ 53ನೆಯ ಶ್ಲೋಕದಿಂದ 56ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ. ಇಲ್ಲಿಗೆ ಮೂರನೆಯ ಸರ್ಗ ಪರಿಸಮಾಪ್ತವಾಗುತ್ತದೆ.
MV18 ವಾಸುದೇವನ ಗುರುಕುಲವಾಸ
ತೃತೀಯಸರ್ಗದ 41ನೆಯ ಶ್ಲೋಕದಿಂದ 52ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV17 ವಾಸುದೇವನ ಉಪನಯನ
ತೃತೀಯಸರ್ಗದ 32ನೆಯ ಶ್ಲೋಕದಿಂದ 40ನೆಯ ಶ್ಲೋಕದವರೆಗಿನ ವಿವರಣೆ.
MV16 ಮೊದಲ ಮಧ್ವವಿಜಯ
ತೃತೀಯಸರ್ಗದ 17ನೆಯ ಶ್ಲೋಕದಿಂದ 31ನೆಯ ಶ್ಲೋಕದ ವರೆಗಿನ ಅರ್ಥಾನುಸಂಧಾನ.
MV15 ವಾಸುದೇವನ ಏಕಾಂಗಿ ಯಾತ್ರೆ
ತೃತೀಯಸರ್ಗದ 6ನೇ ಶ್ಲೋಕದಿಂದ 16ನೇ ಶ್ಲೋಕದ ವರೆಗಿನ ಅರ್ಥಾನುಸಂಧಾನ. ಶ್ರೀಮದಾಚಾರ್ಯರು ಕೃಷ್ಣಾಮೃತಮಹಾರ್ಣವದಲ್ಲಿ ತಿಳಿಸಿರುವ ನಮಸ್ಕಾರದ ಮಹಾತ್ಮ್ಯದ ಚಿಂತನೆಯೂ ಇಲ್ಲಿದೆ.
MV14 ಆಚಾರ್ಯರ ಅಪ್ರತಿಮ ಧೈರ್ಯ
ತೃತೀಯಸರ್ಗದ 1ನೆಯ ಶ್ಲೋಕದಿಂದ 5ನೆಯ ಶ್ಲೋಕದ ವರೆಗಿನ ಅರ್ಥಾನುಸಂಧಾನ.
MV13 ಹುರುಳಿ ತಿಂದು ಅರಗಿಸಿಕೊಂಡ ಲೀಲೆ
ದ್ವಿತೀಯಸರ್ಗದ 35ನೆಯ ಶ್ಲೋಕದಿಂದ 54ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ. ಇಲ್ಲಿಗೆ ಎರಡನೆಯ ಸರ್ಗ ಮುಕ್ತಾಯವಾಗುತ್ತದೆ.
MV12 ಪಿಶಾಚಿಗಳಿಂದ ಪಾರು ಮಾಡಿದ ಘಟನೆ
ದ್ವಿತೀಯಸರ್ಗದ 30ನೆಯ ಶ್ಲೋಕದಿಂದ 34ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV11 ಆಚಾರ್ಯರ ಅವತಾರ
ದ್ವಿತೀಯಸರ್ಗದ 22ನೆಯ ಶ್ಲೋಕದಿಂದ 29ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV10 ಶ್ರೀ ಮಧ್ಯಗೇಹಾರ್ಯರ ತಪಸ್ಸು
ದ್ವಿತೀಯಸರ್ಗದ 14ನೆಯ ಶ್ಲೋಕದಿಂದ 21ನೆಯ ಶ್ಲೋಕದ ವರೆಗಿನ ಅರ್ಥಾನುಸಂಧಾನ.
MV09 ಶ್ರೀ ಮಧ್ಯಗೇಹಾರ್ಯರ ವ್ಯಕ್ತಿತ್ವ
ದ್ವಿತೀಯಸರ್ಗದ 9ನೆಯ ಶ್ಲೋಕದಿಂದ 13ನೆಯ ಶ್ಲೋಕದ ವರೆಗಿನ ಅರ್ಥಾನುಸಂಧಾನ.
MV08 ಮಧ್ವಾವತಾರದ ಮುನ್ಸೂಚನೆ
ದ್ವಿತೀಯಸರ್ಗದ 5ನೆಯ ಶ್ಲೋಕದಿಂದ 8ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV07 ವಾಯುದೇವರ ಅವತಾರದ ನಿಶ್ಚಯ
ದ್ವಿತೀಯಸರ್ಗದ 2ನೆಯ ಶ್ಲೋಕದಿಂದ 4ನೆಯ ಶ್ಲೋಕದ ವರೆಗಿನ ಅರ್ಥಾನುಸಂಧಾನ.
MV06 ಕಲಿಯುಗದಲ್ಲಿ ಜ್ಞಾನದ ಅವಸ್ಥೆ
ದ್ವಿತೀಯಸರ್ಗದ ಪ್ರಥಮಶ್ಲೋಕದ ಅರ್ಥಾನುಸಂಧಾನ. ಕಲಿಯುಗದ ಕುರಿತು ಇರುವ ಹತ್ತಾರು ಪ್ರಶ್ನೆಗಳಿಗೆ ಇಲ್ಲಿ ಉತ್ತರ ದೊರೆಯುತ್ತವೆ.
MV05 ಭೀಮಾವತಾರದ ಕಥೆ.
ಪ್ರಥಮಸರ್ಗದ 28ನೆಯ ಶ್ಲೋಕದಿಂದ ಕಡೆಯ 55ನೆಯ ಶ್ಲೋಕದ ವರೆಗಿನ ಅರ್ಥಾನುಸಂಧಾನ. ಇಲ್ಲಿಗೆ ಪ್ರಥಮಸರ್ಗದ ವಿವರಣೆ ಮುಗಿಯುತ್ತದೆ.
MV04 ಹನುಮದವತಾರದ ಕಥೆ
ಪ್ರಥಮಸರ್ಗದ 9ನೆಯ ಶ್ಲೋಕದಿಂದ 27ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ.
MV03 ಗುರುದೇವತಾವಂದನೆ
ಪ್ರಥಮಸರ್ಗದ ಮೊದಲ ಎಂಟು ಶ್ಲೋಕಗಳ ವಿವರಣೆ
MV02 ಸಮಗ್ರ ಮಧ್ವವಿಜಯದ ಸಾರಾಂಶ
ಸಮಗ್ರ ಶ್ರೀ ಮಧ್ವವಿಜಯದ ಸಾರಾಂಶ ಹಾಗೂ ಶ್ರೀ ಮಧ್ವವಿಜಯದ ಪ್ರಾಮಾಣಿಕತೆ .
MV01 ತತ್ವಶಾಸ್ತ್ರದ ಇತಿಹಾಸ
ಸಮಗ್ರ ಮಧ್ವವಿಜಯಕ್ಕೊಂದು ಉಪೋದ್ಘಾತ ರೂಪವಾದ ಉಪನ್ಯಾಸವಿದು. ಇದರಲ್ಲಿ ಸೃಷ್ಟಿಯ ಆರಂಭದಿಂದ ಶ್ರೀಮದಾಚಾರ್ಯರ ಕಾಲದವರೆಗೆ ತತ್ವಶಾಸ್ತ್ರ ಬೆಳೆದು ಬಂದ ಬಗೆಯನ್ನು — ತತ್ವಶಾಸ್ತ್ರದ ಇತಿಹಾಸವನ್ನು — ತಿಳಿಸಲಾಗಿದೆ. ವೇದ-ಭಾರತ-ಪುರಾಣಗಳು ದರ್ಶನಗಳು, ಶ್ರೀಮದಾಚಾರ್ಯರ ಸಿದ್ಧಾಂತ ಇವೆಲ್ಲದರ ಕುರಿತು ನೀವಿಲ್ಲಿ ಕೇಳುತ್ತೀರಿ.
ಗಣಪತಿ ಪೂಜಾ ಪದ್ಧತಿ
ಮಂತ್ರ ಮತ್ತು ತಂತ್ರಗಳ ವಿವರಣೆಯೊಂದಿಗೆ, ಮನಸ್ಸಿನಲ್ಲಿ ಗಣಪತಿಯನ್ನು ಪೂಜಿಸುವ ಕ್ರಮದೊಂದಿಗೆ ವರಸಿದ್ಧಿವಿನಾಯಕವ್ರತದ ಪದ್ಧತಿಯ ವಿವರಣೆ ಈ ಉಪನ್ಯಾಸದಲ್ಲಿದೆ. VNU199ನೆಯ ಉಪನ್ಯಾಸ ಕೇಳಿದ ನಂತರ ಇದನ್ನು ಕೇಳಿ.
ಗಣಪತಿ ಪೂಜಾ ಸಿದ್ಧತೆ
ಗಣಪತಿಯ ಪೂಜೆಯನ್ನು ಮಾಡಬೇಕಾದರೆ ಮಾಡಿಕೊಳ್ಳಬೇಕಾದ ಸಿದ್ಧತೆಗಳ ಕುರಿತ ಉಪನ್ಯಾಸ. ಗಣಪತಿಯ ಪೂಜಾಕ್ರಮದ ಕುರಿತ ಉಪನ್ಯಾಸ ಮುಂದಿನದು. ಅದನ್ನು ಕೇಳುವದಕ್ಕಿಂತ ಮಂಚೆ ಇದನ್ನು ಕೇಳಿ ಎಲ್ಲ ಸಿದ್ಧತೆಯನ್ನು ಮಾಡಿಕೊಳ್ಳಿ.
ನೆನೆವನುದಿನ 03
ಜರಾಸಂಧನನ್ನು ಸೋಲಿಸಿದ್ದು, ಮುಚುಕುಂದನ ಉದ್ಧಾರ, ಕಾಲಯವನನ ಸಂಹಾರ, ಅಷ್ಟಮಹಿಷಿಯರನ್ನು ಮದುವೆಯಾದ ಪ್ರಸಂಗ, ನರಕಾಸುರನ ಸಂಹಾರ, ಪಾರಿಜಾತವನ್ನು ತಂದ ಪ್ರಸಂಗ, ಪಾಂಡವರನ್ನು ರಕ್ಷಿಸಿದ ಅದ್ಭುತವಾದ ಮಾಹಾತ್ಮ್ಯ ಇವೆಲ್ಲದರ ಚಿಂತನೆ ಇಲ್ಲಿದೆ.
ನೆನೆವನನುದಿನ 02
ಕುಬ್ಜೆಯ ಪ್ರಸಂಗ, ಶಿವಧನುಷ್ಯಭಂಗದ ಪ್ರಸಂಗ, ಆನೆಗಳನ್ನು ಕೆಡವಿದ ಪ್ರಸಂಗ, ಮಲ್ಲರನ್ನು ಗೆದ್ದದ್ದು, ಕಂಸನ ಸಂಹಾರ, ಸಾಂದೀಪನಿಯರ ಬಳಿಯಲ್ಲಿ ಅಧ್ಯಯನ ಮಾಡಿದ ಘಟನೆಯ ವಿವರಣೆ ಈ ಭಾಗದಲ್ಲಿದೆ.
ನೆನೆವನನುದಿನ 01
ಶ್ರೀಮದಾಚಾರ್ಯರು ಮಹಾಭಾರತತಾತ್ಪರ್ಯನಿರ್ಣಯದ ಹದಿಮೂರು ಮತ್ತು ಹದಿನಾಲ್ಕನೆಯ ಅಧ್ಯಾಯಗಳಲ್ಲಿ ನಿರ್ಣಯಿಸಿರುವ, ಶ್ರೀಮದ್ಭಾಗವತ ಹತ್ತನೆಯ ಸ್ಕಂಧದಲ್ಲಿ ತಿಳಿಸಿರುವ ಕೃಷ್ಣಕಥೆಯನ್ನು ಶ್ರೀ ವಾದಿರಾಜರು ಒಂಭತ್ತು ಪದ್ಯಗಳ ಪುಟ್ಟ ಕೃತಿಯಲ್ಲಿ ಸಂಗ್ರಹಿಸಿ ನೀಡುತ್ತಾರೆ. ಪ್ರತೀನಿತ್ಯವೂ ಬೆಳಿಗ್ಗೆ ಮಧ್ಯಾಹ್ನ ಸಂಜೆಯ ಸಮಯದಲ್ಲಿ ಕೃಷ್ಣಕಥೆಯನ್ನು ಹಾಡಿ ನಲಿಯಲು ದಿವ್ಯವಾದ “ನೆನೆವನೆನನುದಿನ” ಎಂಬ ಹಾಡನ್ನು ರಚಿಸಿ ನೀಡಿದ್ದಾರೆ. ಆ ಪದ್ಯದ ಅರ್ಥಾನುಸಂಧಾನದ ಮೊದಲ ಭಾಗ ಇಲ್ಲಿದೆ.
ಶ್ರೀ ರಾಘವೇಂದ್ರದಂಡಕಮ್
ಶ್ರೀ ಅಪ್ಪಣಾಚಾರ್ಯರು ರಚಿಸಿರುವ ರಾಘವೇಂದ್ರದಂಡಕದ ಪಠಣೆ ಇಲ್ಲಿದೆ.
ರಾಯರ ದಿನಚರಿ
ಶ್ರೀರಾಘವೇಂದ್ರ ಗುರುಸಾರ್ವಭೌಮರ ಸಾಕ್ಷಾತ್ ಶಿಷ್ಯರಾದ ಅವರ ಪೂರ್ಣಾನುಗ್ರಹವನ್ನು ಪಡೆದ ಶ್ರೀ ಅಪ್ಪಣಾಚಾರ್ಯರು ತಮ್ಮ ಗುರುಗಳು ಯಾವ ರೀತಿಯಾಗಿ ಪ್ರತೀನಿತ್ಯವೂ ಭಗವದಾರಾಧನೆಯನ್ನು ಮಾಡುತ್ತಿದ್ದರು ಎಂದು ತಮ್ಮ ರಾಘವೇಂದ್ರದಂಡಕ ಎಂಬ ಅದ್ಭುತ ಕೃತಿಯಲ್ಲಿ ದಾಖಲಿಸಿಟ್ಟಿದ್ದಾರೆ. ನಮ್ಮೆಲ್ಲರ ಗುರುಗಳಾದ ಶ್ರೀ ರಾಘವೇಂದ್ರಸ್ವಾಮಿಗಳು ಅದೆಷ್ಟು ಅದ್ಭುತವಾಗಿ ಜೀವನವನ್ನು ನಡೆಸುತ್ತಿದ್ದರು ಎನ್ನುವದನ್ನು ಸ್ಮರಣೆ ಮಾಡಿದಾಗ ನಾವು ಸದಾಚಾರಿಗಳಾಗಲು ಸಾಧ್ಯ. ಆ ರಾಘವೇಂದ್ರದಂಡಕದ ಅನುವಾದ ಇಲ್ಲಿದೆ. ತಪ್ಪದೇ ಕೇಳಿ. ಲೇಖನ VNA194.
ಪ್ರಭಾತಪಂಚಕಮ್ 05/05
ಇಡಿಯ ಸ್ತೋತ್ರಪ್ರಪಂಚದಲ್ಲಿಯೇ ಅಪೂರ್ವವಾದ ಒಂದು ಪರಮಾದ್ಭುತಪ್ರಾರ್ಥನೆಯನ್ನು ಶ್ರೀಲಕ್ಷ್ಮೀವಲ್ಲಭತೀರ್ಥಶ್ರೀಪಾದಂಗಳವರು ನಮಗಿಲ್ಲಿ ತಿಳಿಸಿಕೊಂಡುತ್ತಾರೆ. ನಮ್ಮ ದಿವಸವನ್ನಲ್ಲ, ಇಡಿಯ ಜೀವನವನ್ನೇ ಪವಿತ್ರಗೊಳಿಸುವ, ಸಾರ್ಥಕಗೊಳಿಸುವ ದಿವ್ಯ ಪ್ರಾರ್ಥನೆಯಿದು. ತಪ್ಪದೇ ಕೇಳಿ.
ಪ್ರಭಾತಪಂಚಕಮ್ 04/05
ಶ್ರೀಹರಿನಾಮಸ್ಮರಣೆಯ ಕ್ರಮದ ವಿವರಣೆ ಇಲ್ಲಿದೆ. ಶ್ರೀಮದಾಚಾರ್ಯರು ಕೃಷ್ಣಾಮೃತಮಹಾರ್ಣವದಲ್ಲಿ ತಿಳಿಸಿ ಹೇಳಿದ ಪವಿತ್ರತತ್ವಗಳ ಅನುಸಂಧಾನದೊಂದಿಗೆ.
ಪ್ರಭಾತಪಂಚಕಮ್ 03/05
ಬೆಳಿಗ್ಗೆ ಏಳುತ್ತಿದ್ದಂತೆ ಮಾಡಬೇಕಾದ, ಪರಮಪವಿತ್ರ ನದಿಗಳ ಸ್ಮರಣೆಯ ಕ್ರಮವನ್ನು ಶ್ರೀ ಲಕ್ಷ್ಮೀವಲ್ಲಭತೀರ್ಥಶ್ರೀಪಾದಂಗಳವರು ನಮಗಿಲ್ಲಿ ಕಲಿಸುತ್ತಾರೆ. ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರು ಸಂಗ್ರಹಿಸಿ ನೀಡಿರುವ ನದೀತಾರತಮ್ಯಸ್ತೋತ್ರದ ವಿವರಣೆಯೂ ಇಲ್ಲಿದೆ.
ಪ್ರಭಾತಪಂಚಕಮ್ 02/05
ನಿದ್ರೆಯನ್ನು ಗೆಲ್ಲಲು ಯಾವ ಭಗವದ್ರೂಪದ ಚಿಂತನೆ ಮಾಡಬೇಕು, ಬೆಳಿಗ್ಗೆ ಎದ್ದ ತಕ್ಷಣ ದುಷ್ಟರನ್ನು ಕಂಡರೆ, ದುಷ್ಟರ ನೆನಪು ಮಾಡಿಕೊಂಡೇ ಎದ್ದರೆ ಆಗುವ ಅಶುಭದ ಪರಿಹಾರಕ್ಕೆ ಯಾವ ರೂಪವನ್ನು ಚಿಂತಿಸಬೇಕು, ಸಂಸಾರದ ಭಾರವನ್ನು ಹೊತ್ತು ಸುಗಮವಾಗಿ ಸಾಧನೆಯ ಮಾರ್ಗದಲ್ಲಿ ನಡೆಯಲು ಯಾರನ್ನು ಸ್ಮರಿಸಬೇಕು, ಬಯಸಿದ್ದನ್ನು ಪಡೆಯಲು ಯಾರನ್ನು ಬೆಳಿಗ್ಗೆ ಏಳುತ್ತಿದ್ದಂತೆ ನೆನೆಯಬೇಕು, ಯಾವ ಮಂಗಳರೂಪದ ಸ್ಮರಣೆಯಿಂದ ಇಡಿಯ ದಿವಸ ಮಂಗಲಮಯವಾಗುತ್ತದೆ ಎಂಬ ಪ್ರಶ್ನೆಗಳಿಗೆ ಶ್ರೀ ಲಕ್ಷ್ಮೀವಲ್ಲಭತೀರ್ಥಶ್ರೀಪಾದರು ನೀಡಿರುವ ಉತ್ತರದ ವಿವರಣೆ ಈ ಉಪನ್ಯಾಸದಲ್ಲಿದೆ.
ಪ್ರಭಾತಪಂಚಕಮ್ 01/05
ನಮಗೆ ನಾವು ಸುಪ್ರಭಾತವನ್ನು ಹೇಳಿಕೊಳ್ಳಬೇಕು ಎಂದು ಆದೇಶಿಸಿದವರು ಶ್ರೀ ವೇದವ್ಯಾಸದೇವರು. ಆ ಮಹಾಧರ್ಮವನ್ನು ಆಚರಿಸಿ ತೋರಿದವರು ರುದ್ರದೇವರು. ಈ ಸತ್ಸಂಪ್ರದಾಯವನ್ನರಿತ ನಮ್ಮ ಶ್ರೀಮದ್ ವ್ಯಾಸರಾಜಸಂಸ್ಥಾನದ ವಿದ್ಯಾಸಿಂಹಾಸನಾಧೀಶ್ವರರಾದ ಶ್ರೀಲಕ್ಷ್ಮೀವಲ್ಲಭತೀರ್ಥಶ್ರೀಪಾದರು ಇಡಿಯ ಮಾಧ್ವಪರಂಪರೆಯಲ್ಲಿಯೇ ಅತ್ಯಪೂರ್ವವಾದ ಒಂದು ಪ್ರಭಾತಪಂಚಕವನ್ನು ಬರೆದು ನೀಡಿದ್ದಾರೆ. ಅದ್ಭುತಾರ್ಥಗರ್ಭಿತವಾಗ ಆ ಸ್ತೋತ್ರದ ಮೊದಲ ಶ್ಲೋಕದ ಅನುವಾದ ಈ ಲೇಖನದಲ್ಲಿದೆ, ಪರಮಾತ್ಮನ ದಶಾವತಾರಗಳಲ್ಲಿ ನಾವು ಮಾಡಬೇಕಾದ ಪ್ರಾರ್ಥನೆಯ ಚಿಂತನೆಯೊಂದಿಗೆ.
SS07 — ಬ್ರಾಹ್ಮಮುಹೂರ್ತದಲ್ಲಿ ಏಳಲು ಸುಲಭೋಪಾಯ
ನಿದ್ರೆಯ ಆರು ರೀತಿಯ ಅವಧಿಗಳನ್ನು ತಿಳಿದೆವು, ಬ್ರಾಹ್ಮಮುಹೂರ್ತದಲ್ಲಿ ಮಲಗಿರುವದರಿಂದ ಮಾಡಿದ ಪುಣ್ಯವೆಲ್ಲವೂ ಕ್ಷಯವಾಗುತ್ತದೆ ಎನ್ನುವದನ್ನೂ ತಿಳಿದೆವು. ಈಗ ಪ್ರಶ್ನೆ. ನಮಗೆ ಏಳಬೇಕೆಂಬ ಅಪೇಕ್ಷೆಯೂ ಇದೆ, ಏಳಲು ಅವಕಾಶವೂ ಇದೆ. ಆದರೆ ಏಳಲು ಸಾಧ್ಯವಾಗುತ್ತಿಲ್ಲ. ಏನು ಮಾಡಬೇಕು? ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ಮಂದರಾದ ನಮ್ಮ ಈ ಪ್ರಶ್ನೆಗೂ ಉತ್ತರವನ್ನಿತ್ತಿದ್ದಾರೆ. ಆ ಉತ್ತರದ ನಿರೂಪಣೆ ಇಲ್ಲಿದೆ. ಲೇಖನ VNA187
SS06 — ನಿದ್ರೆಯ ಅವಧಿ ಮತ್ತು ಏಳುವ ಸಮಯ
ಶಾಸ್ತ್ರ ತಿಳಿಸುವ ಆರು ರೀತಿಯ ನಿದ್ರೆಯ ಅವಧಿಯನ್ನು ವಿವರಿಸುವ ಉಪನ್ಯಾಸವಿದು. ಬ್ರಾಹ್ಮಮುಹೂರ್ತದಲ್ಲಿ ಯಾಕಾಗಿ ಏಳಬೇಕು, ಉಂಟಾಗುವ ಆಧ್ಯಾತ್ಮಿಕ ಪ್ರಯೋಜನಗಳೇನು, ಸಂನ್ಯಾಸಿಗಳು ಯಾವಾಗ ಏಳಬೇಕು, ಗೃಹಸ್ಥರು ಯಾವಾಗ ಎಂಬ ವಿಷಯಗಳೊಂದಿಗೆ, ಗಳಿಗೆ, ಮುಹೂರ್ತ ಮತ್ತು ಯಾಮ ಎನ್ನುವ ಶಬ್ದಗಳ ಅರ್ಥವವಿರಣೆ ಇಲ್ಲಿದೆ. ಲೇಖನ VNA186
SS05 — ಕರ್ಮಸಮರ್ಪಣೆಗೆ ಕಾರಣಗಳು
ದೇವರಿಗೇಕೆ ಕರ್ಮಗಳನ್ನು ಸಮರ್ಪಿಸಬೇಕು? ಈ ಪ್ರಶ್ನೆಗೆ ಶ್ರೀಮದಾಚಾರ್ಯರು ನೀಡಿರುವ ಉತ್ತರಗಳ ಸಂಗ್ರಹ ಈ ಉಪನ್ಯಾಸದಲ್ಲಿದೆ. ಲೇಖನ VNA185
ಅಂಗಗಳ ಕಸಿಯನ್ನು ಶಾಸ್ತ್ರೀಯವಾಗಿ ಹೇಗೆ ಒಪ್ಪಲು ಸಾಧ್ಯ?
ಸತ್ತ ದೇಹದಲ್ಲಿರುವ ಯಾವ ಇಂದ್ರಿಯಗಳೂ ಕಾರ್ಯ ಮಾಡುವದಿಲ್ಲ ಎಂದು ಶಾಸ್ತ್ರ ಹೇಳುತ್ತದೆ, ಆದರೆ ಸತ್ತ ದೇಹದಿಂದ ಕಣ್ಣು ಮುಂತಾದವನ್ನು ತೆಗೆದು ಕಣ್ಣಿಲ್ಲದವರಿಗೆ ಕಸಿ ಮಾಡಿದಾಗ ಕಣ್ಣು ಕೆಲಸ ಮಾಡುವದು ಕಂಡಿದೆ. ಹೀಗಾಗಿ ಶಾಸ್ತ್ರ ಹೇಳುವದನ್ನು ಹೇಗೆ ಒಪ್ಪಲು ಸಾಧ್ಯ ಎಂಬ ಪ್ರಶ್ನೆಗೆ ಶಾಸ್ತ್ರೀಯವಾದ ಉತ್ತರ ಈ ಲೇಖನದಲ್ಲಿದೆ.
SS04 — ಕರ್ಮಗಳಲ್ಲಿ ಅನುಸಂಧಾನ — 3
ಆಚಾರ್ಯರ ಸದಾಚಾರಸ್ಮೃತಿಯ ಮೊದಲ ವಾಕ್ಯದ ಅರ್ಥಾನುಸಂಧಾನವನ್ನು ಮಾಡುತ್ತ ಶ್ರೀ ರಾಘವೇಂದ್ರಸ್ವಾಮಿಗಳು ತಿಳಿಸಿಕೊಟ್ಟ “ತ್ವದಾಜ್ಞಯಾ, ತ್ವತ್ಪ್ರಸಾದಾತ್, ತ್ವತ್ಪ್ರೇರಣಯಾ, ತ್ವತ್ಪ್ರೀತ್ಯರ್ಥಂ, ತ್ವಾಮುದ್ದಿಶ್ಯ, ತ್ವಾಮನುಸ್ಮರನ್ನೇವ” ಎಂಬ ಅನುಸಂಧಾನಗಳಲ್ಲಿ ಮೊದಲ ಮೂರನ್ನು ಅರ್ಥ ಮಾಡಿಕೊಂಡೆವು. ಕಡೆಯ ಮೂರು ಅನುಸಂಧಾನಗಳ ವಿವರಣೆ ಇಲ್ಲಿದೆ. ಲೇಖನ VNA183
SS03— ಕರ್ಮಗಳಲ್ಲಿ ಅನುಸಂಧಾನ — 2
ಆಚಾರ್ಯರ ಮಂಗಳಾಚಾರಣ ಶ್ಲೋಕದಲ್ಲಿನ ನಿರ್ಮಮಃ ಮತ್ತು ಕರ್ಮಾಣಿ ಸಂನ್ಯಸ್ಯ ಎಂಬ ತತ್ವಗಳನ್ನು ಯಥಾಶಕ್ತಿ ಅರ್ಥ ಮಾಡಿಕೊಂಡೆವು. ಈ ಉಪನ್ಯಾಸದಲ್ಲಿ ಅಧ್ಯಾತ್ಮಚೇತಸಾ ಎಂಬ ಪದದ ಅರ್ಥಾನುಸಂಧಾನವಿದೆ. ದೇವರ ಆಜ್ಞೆ, ಪ್ರಸಾದ, ಪ್ರೇರಣೆಗಳನ್ನು ನೆನೆಯುವ ಬಗೆಯ ಚಿಂತನೆಯಿದೆ. ಲೇಖನ VNA182
SS02 — ಕರ್ಮಗಳಲ್ಲಿ ಅನುಸಂಧಾನ — 1
ನಾಹಂ ಕರ್ತಾ ಹರಿಃ ಕರ್ತಾ ತತ್ಪೂಜಾ ಕರ್ಮಚಾಖಿಲಮ್” ಎಂಬ ಶ್ಲೋಕದ ವಿವರಣೆ ಈ ಉಪನ್ಯಾಸದಲ್ಲಿದೆ. ಆಚಾರ್ಯರ ಸದಾಚಾರಸ್ಮೃತಿಯ ಅರ್ಥಾನುಸಂಧಾನ ಈ ಲೇಖನ ಮತ್ತು ಉಪನ್ಯಾಸಗಳಿಂದ ಆರಂಭ. ಲೇಖನ VNA181
SS01 — ಸದಾಚಾರದ ಆವಶ್ಯಕತೆ ಮತ್ತು ಗ್ರಂಥಗಳು
ಸದಾಚಾರವನ್ನು ಯಾಕಾಗಿ ಅನುಷ್ಠಾನ ಮಾಡಬೇಕು, ಸಾಧನೆಯಲ್ಲಿ ಸದಾಚಾರದ ಪಾತ್ರವೇನು ಎನ್ನುವ ಪ್ರಶ್ನೆಗಳಿಗೆ ಶ್ರೀಮದಾಚಾರ್ಯರು ಗೀತಾಭಾಷ್ಯ ಮುಂತಾದ ಗ್ರಂಥಗಳಲ್ಲಿ ನೀಡಿರುವ ಉತ್ತರಗಳ ಅನುಸಂಧಾನ ಮತ್ತು ನಮ್ಮ ಮಾಧ್ವಪರಂಪರೆಯಲ್ಲಿ ಇರುವ ಸದಾಚಾರದ ಗ್ರಂಥಗಳ ಮಾಹಿತಿ ಈ ಲೇಖನದಲ್ಲಿದೆ.
08/08 ದೇವರ ಅಸ್ತಿತ್ವದ ಸಮರ್ಥನೆ - 2
ಬೀಜದಿಂದ ಮರ ಹುಟ್ಟುತ್ತದೆ. ಈ ಪ್ರಕ್ರಿಯೆ ದೇವರ ಅಸ್ತಿತ್ವವನ್ನು ಸಮರ್ಥಿಸುವ ರೀತಿಯ ವಿವರ ಈ ಉಪನ್ಯಾಸದಲ್ಲಿ. VNA178
07/08 ದೇವರ ಅಸ್ತಿತ್ವದ ಸಮರ್ಥನೆ
ವೀರ್ಯ ಎನ್ನುವ ಶಬ್ದ ಕೇಳಿದ ತಕ್ಷಣ ಕೀಳುಜನರ ಮನಸ್ಸಿನಲ್ಲಿ ಕಾಮ ಕೆರಳುತ್ತದೆ. ಆದರೆ, ಆ ವೀರ್ಯ ಎನ್ನುವದು ದೇವರ ಅಸ್ತಿತ್ವವನ್ನು ಸಾರಿ ಹೇಳುವ ಪದಾರ್ಥ ಎಂದು ಶಾಸ್ತ್ರ ಪ್ರತಿಪಾದಿಸುವ ಬಗೆಯನ್ನು ಈ ಉಪನ್ಯಾಸದಲ್ಲಿ ಕೇಳುತ್ತೀರಿ. ಲೇಖನ VNA177
06/08 ಕರ್ಮ ಸಿದ್ಧಾಂತದ ಸಮರ್ಥನೆ
ನಾವು ಹಿಂದೆ ಮಾಡಿದ ಕರ್ಮಗಳು ನಮ್ಮ ಮೇಲೆ ಯಾವ ರೀತಿ ಪರಿಣಾಮವನ್ನು ಬೀರುತ್ತವೆ ಎನ್ನುವದನ್ನು ಪ್ರತಿಪಾದಿಸುವ ಉಪನ್ಯಾಸ. ಲೇಖನ VNA176
05/08 ಜನ್ಮಾಂತರಗಳ ಸಮರ್ಥನೆ
ನಾಸ್ತಿಕರು ಪುನರ್ಜನ್ಮವನ್ನೂ ಒಪ್ಪುವದಿಲ್ಲ. ಪುನರ್ಜನ್ಮಗಳನ್ನು ಒಪ್ಪುವ ಅನಿವಾರ್ಯತೆಯನ್ನು ಇಲ್ಲಿ ತೋರಿಸಿಕೊಡಲಾಗಿದೆ. ಲೇಖನ VNA175
04/08 ಜೀವನ ಅಸ್ತಿತ್ವದ ಸಮರ್ಥನೆ
ನಾಸ್ತಿಕರು ಜೀವ ಚೈತನ್ಯದ ಅಸ್ತಿತ್ವವನ್ನೂ ಒಪ್ಪುವದಿಲ್ಲ. ಜೀವನ ಅಸ್ತಿತ್ವವನ್ನು ಒಪ್ಪುವ ಅನಿವಾರ್ಯತೆಯನ್ನು ಇಲ್ಲಿ ತೋರಿಸಿಕೊಡಲಾಗಿದೆ. ಲೇಖನ - VNA174
03/08 ದೇವರ ಅಭಾವವನ್ನು ಪ್ರತಿಪಾದಿಸಲು ಸಾಧ್ಯವಿಲ್ಲ
ದೇವರು ಇಲ್ಲ ಎಂದು ಪ್ರತಿಪಾದಿಸಲು ಸಾಧ್ಯವೇ ಇಲ್ಲ ಎನ್ನುವದನ್ನು ಸಮರ್ಥಿಸಲಾಗಿದೆ. ಬಹಳ ರೋಚಕವಾದ ವಿಷಯದ ಚರ್ಚೆ. ತಪ್ಪದೇ ಕೇಳಿ. ಲೇಖನ - VNA173
02/08 ನಾಸ್ತಿಕರ ವಾದಗಳ ವಿಮರ್ಶೆ
ಯಾವುದೇ ಒಂದು ವಾಕ್ಯಕ್ಕೆ, ಸಿದ್ಧಾಂತಕ್ಕೆ ವಿಷಯ ಮತ್ತು ಪ್ರಯೋಜನಗಳಿರಬೇಕು. ವಿಷಯ ಪ್ರಯೋಜನವಿಲ್ಲದ ವಾಕ್ಯ ಎಂದರೆ ಗೋಡೆ ಸೂರು ಇಲ್ಲದ ಮನೆ! ನಾಸ್ತಿಕರ ವಾದಕ್ಕೆ ವಿಷಯವೂ ಇಲ್ಲ, ಪ್ರಯೋಜನವೂ ಇಲ್ಲ ಎನ್ನುವದನ್ನು ಇಲ್ಲಿ ಪ್ರತಿಪಾದಿಸಲಾಗಿದೆ. ಲೇಖನ - VNA172
01/08 ನಾಸ್ತಿಕರ ವಾದಗಳು
ದೇವರ ಅಸ್ತಿತ್ವದ ಉಪನ್ಯಾಸದ ಪ್ರವೇಶಿಕೆ. ಇದರಲ್ಲಿ ನಾಸ್ತಿಕರ ವಾದಗಳ ನಿರೂಪಣೆಯಿದೆ.
02/02 ಪಂಚರತ್ನಮಾಲಿಕಾ ಸ್ತೋತ್ರ
ಶ್ರೀಮಚ್ಚಂದ್ರಿಕಾಚಾರ್ಯರು ರಚಿಸಿರುವ, ಶ್ರೀ ಬ್ರಹ್ಮಣ್ಯತೀರ್ಥಶ್ರೀಪಾದಂಗಳವರ ದಿವ್ಯ ಗುಣಗಳನ್ನು ಪರಿಚಯಿಸುವು ಶ್ರೀ ಪಂಚರತ್ನಮಾಲಿಕಾಸ್ತೋತ್ರದ ಅರ್ಥಾನುಸಂಧಾನ.
01/02 ಪಂಚರತ್ನಮಾಲಿಕಾ ಸ್ತೋತ್ರ
ಶ್ರೀಮಚ್ಚಂದ್ರಿಕಾಚಾರ್ಯರು ರಚಿಸಿರುವ, ಶ್ರೀ ಬ್ರಹ್ಮಣ್ಯತೀರ್ಥಶ್ರೀಪಾದಂಗಳವರ ದಿವ್ಯ ಗುಣಗಳನ್ನು ಪರಿಚಯಿಸುವು ಶ್ರೀ ಪಂಚರತ್ನಮಾಲಿಕಾಸ್ತೋತ್ರದ ಅರ್ಥಾನುಸಂಧಾನ.
ಶ್ರೀ ವಿದ್ಯಾರತ್ನಾಕರ ತೀರ್ಥರು
ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದಂಗಳವರು ರಚಿಸಿರುವ, ಶ್ರೀ ವಿದ್ಯಾರತ್ನಾಕರತೀರ್ಥರ ಮಹೋನ್ನತ ವ್ಯಕ್ತಿತ್ವವನ್ನು ಪರಿಚಯಿಸುವ ಶ್ರೇಷ್ಠ ಸ್ತೋತ್ರದ ಅರ್ಥಾನುಸಂಧಾನ.
ಶ್ರೀ ವಿದ್ಯಾಶ್ರೀಧರ ತೀರ್ಥರ ಮಾಹಾತ್ಮ್ಯ
ಮಠದ ಮಹಾಸಂಪತ್ತನ್ನೂ ಮಾರಿ ಕ್ಷಾಮದ ಕಾಲದಲ್ಲಿ ಬಡಜನರನ್ನು ರಕ್ಷಿಸಿದ ಮಹಾನುಭಾವರು ಶ್ರೀ ವಿದ್ಯಾಸಿಂಧುತೀರ್ಥಶ್ರೀಪಾದಂಗಳವರು. ಅವರ ಆ ಲೋಕೋತ್ತರ ಕಾರ್ಯದಲ್ಲಿ ಸಾಚಿವ್ಯವನ್ನು ವಹಿಸಿದ ಶ್ರೀ ಭೀಮಸೇನಾಚಾರ್ಯರೇ ಮುಂದೆ ಶ್ರೀ ವಿದ್ಯಾಶ್ರೀಧರತೀರ್ಥರಾಗುತ್ತಾರೆ. ಅವರ ಮಾಹಾತ್ಮ್ಯದ ಚಿಂತನೆ ಇಲ್ಲಿದೆ.
BV27 ನ್ಯಾಯಸುಧಾ ಅರ್ಥದ ಚರ್ಚೆ - 02
ಶ್ರೀಮದಾಚಾರ್ಯರ “ಮಿಥ್ಯಾಯಾಃ ಸಾಧಕತ್ವಂ ಚ” ಎಂಬ ವಾಕ್ಯಕ್ಕೆ ಟೀಕಾಕೃತ್ಪಾದರು ಶ್ರೀಮನ್ ನ್ಯಾಯಸುಧಾದಲ್ಲಿ ಹೇಳಿರುವ ಅರ್ಥದ ಕುರಿತ ಚರ್ಚೆಯ ಎರಡನೆಯ ಭಾಗವಿದು.
BV26 ನ್ಯಾಯಸುಧಾ ಅರ್ಥದ ಚರ್ಚೆ -01
ಶ್ರೀಮದಾಚಾರ್ಯರ “ಮಿಥ್ಯಾಯಾಃ ಸಾಧಕತ್ವಂ ಚ” ಎಂಬ ವಾಕ್ಯಕ್ಕೆ ಟೀಕಾಕೃತ್ಪಾದರು ಶ್ರೀಮನ್ ನ್ಯಾಯಸುಧಾದಲ್ಲಿ ಹೇಳಿರುವ ಅರ್ಥದ ಕುರಿತ ಚರ್ಚೆಯ ಮೊದಲ ಭಾಗವಿದು.
BV25 ಶ್ರೀ ರಘುವರ್ಯತೀರ್ಥರು ಮಾಡಿರುವ ಟೀಕಾಕೃತ್ಪಾದರ ಮಹತ್ತರ ಸೇವೆ
ಶ್ರೀ ಹೃಷೀಕೇಶಸಂಸ್ಥಾನ ಪಲಿಮಾರು ಮಠದ ಭೂಷಾಮಣಿಗಳಾದ ಶ್ರೀ ರಘುವರ್ಯತೀರ್ಥಶ್ರೀಪಾದಂಗಳವರು ಮಾಡಿರುವ ಸಾರ್ವಕಾಲಿಕ ಮತ್ತು ಐತಿಹಾಸಿಕ ಶ್ರೀಮಟ್ಟೀಕಾಕೃತ್ಪಾದರ ಮಹತ್ತರ ಆರಾಧನೆಯ ಚಿತ್ರಣ. ತಪ್ಪದೇ ಕೇಳಿ.
BV24 ಟೀಕಾಕೃತ್ಪಾದರಿಗೆ ಬನ್ನಂಜೆ ಮಾಡಿರುವ ಅವಹೇಳನ
ಬನ್ನಂಜೆ ಟೀಕಾಕೃತ್ಪಾದರನ್ನು ಅದೆಷ್ಟು ಅವಹೇಳನ ಮಾಡುತ್ತಾರೆ ಎನ್ನುವದನ್ನು ಆಧಾರಗಳ ಸಮೇತವಾಗಿ ನಿರೂಪಿಸಿ ಇಲ್ಲಿ ಖಂಡಿಸಲಾಗಿದೆ.
BV23 ತಿಥಿನಿರ್ಣಯ ಆಚಾರ್ಯರ ಗ್ರಂಥವಲ್ಲ
ತಿಥಿನಿರ್ಣಯ ಎನ್ನುವ ಗ್ರಂಥ ಶ್ರೀಮದಾಚಾರ್ಯರ ರಚನೆ ಎನ್ನುವದು ಬನ್ನಂಜೆಯ ವಾದ. ಆದರೆ ಶ್ರೀ ವಾದಿರಾಜಗುರುಸಾರ್ವಭೌಮರು ಈ ಕೃತಿ ಶ್ರೀ ತ್ರಿವಿಕ್ರಮಪಂಡಿತಾಚಾರ್ಯರ ರಚನೆ ಎಂದು ಸ್ಪಷ್ಟವಾಗಿ ತಮ್ಮ ಏಕಾದಶೀನಿರ್ಣಯ ಗ್ರಂಥದಲ್ಲಿ ಹೇಳಿದ್ದಾರೆ. ಇದರ ಕುರಿತ ಚರ್ಚೆ ಇಲ್ಲಿದೆ.
BV22 ಪಂಡಿತರ ಬೌದ್ಧಿಕ ದಾಸ್ಯ
ಬನ್ನಂಜೆ ಗೋವಿಂದಾಚಾರ್ಯರು ಪ್ರಮಾಣಪ್ರಮಿತವಾದ ವಿಷಯವನ್ನು ಹೇಳಿದರೆ ಎಲ್ಲರೂ ಆದರದಿಂದ ಒಪ್ಪಬೇಕು, ಸಂಶಯವಿಲ್ಲ. ಆದರೆ, ಕೆಲವು ಪಂಡಿತರು ಹೀನ ಬೌದ್ಧಿಕ ದಾಸ್ಯಕ್ಕೊಳಗಾಗಿ ಬನ್ನಂಜೆ ಹೇಳಿದ್ದನ್ನೆಲ್ಲ ತಲೆಯ ಮೇಲೆ ಹೊತ್ತು ಮೆರೆಯುತ್ತಾರೆ, ಬನ್ನಂಜೆಯನ್ನು ಆದರಿಸುವ ಭರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳಿಗೆ, ಶ್ರೀ ರಘೂತ್ತಮರಿಗೆ ಅಪಚಾರವನ್ನು ಎಸಗುತ್ತಾರೆ, ಅಷ್ಟೇ ಅಲ್ಲ ಬನ್ನಂಜೆಯ ಪುಸ್ತಕದಲ್ಲಿರುವ ಮುದ್ರಣ ದೋಷವನ್ನೂ ಮೂಲ ಪಾಠ ಎಂದು ಭ್ರಮಿಸಿ ಶ್ರೀ ಹೃಷೀಕೇಶತೀರ್ಥರ ಪಾಠ ಎಂದು ಮುದ್ರಿಸುತ್ತಾರೆ ಎನ್ನುವದನ್ನು ಆಧಾರಗಳ ಸಮೇತವಾಗಿ ಇಲ್ಲಿ ಪ್ರತಿಪಾದಿಸಲಾಗಿದೆ.
BV21 ಆ ಹಸ್ತಪ್ರತಿಯನ್ನು ಶ್ರೀ ಹೃಷೀಕೇಶತೀರ್ಥರು ಬರೆದಿಲ್ಲ
ಯಾವ ಹಸ್ತಪ್ರತಿಯನ್ನು ಶ್ರೀ ಹೃಷೀಕೇಶತೀರ್ಥರು ಬರೆದಿದ್ದಾರೆ ಎಂದು ಬನ್ನಂಜೆ ವಾದಿಸುತ್ತಾರೆಯೋ, ಆ ಹಸ್ತಪ್ರತಿಯನ್ನು ಶ್ರೀ ಹೃಷೀಕೇಶತೀರ್ಥರು ಬರೆದದ್ದಲ್ಲ, ಶ್ರೀ ಹೃಷೀಕೇಶತೀರ್ಥರು ಬರೆದ ಶುದ್ಧ ಹಸ್ತಪ್ರತಿಯನ್ನು ನೋಡಿ ಯಾರೋ ಬರೆದುಕೊಂಡಿರುವ ಮಾತೃಕೆಯದು ಎನ್ನುವದನ್ನು ಆಧಾರಗಳ ಸಮೇತವಾಗಿ ಈ ಭಾಗದಲ್ಲಿ ಪ್ರತಿಪಾದಿಸಲಾಗಿದೆ.
BV20 ಆ ಹಸ್ತಪ್ರತಿ ಪ್ರಾಚೀನರಿಗೆ ಸಮ್ಮತವಲ್ಲ
ಬನ್ನಂಜೆ ಒಂದು ಹಸ್ತಪ್ರತಿಯನ್ನಿಟ್ಟುಕೊಂಡು ಇದು ಶ್ರೀ ಹೃಷೀಕೇಶತೀರ್ಥರ ಹಸ್ತಪ್ರತಿ ಎಂದು ವಾದಿಸುತ್ತಿರುತ್ತಾರೆ. ಅಲ್ಲಿನ ಪಾಠಗಳನ್ನೂ ಶ್ರೀ ಹೃಷೀಕೇಶತೀರ್ಥರ ಪಾಠ ಎಂದೇ ಪ್ರಚಾರ ಮಾಡುತ್ತಿರುತ್ತಾರೆ. ವಸ್ತುಸ್ಥಿತಿಯಲ್ಲಿ ಆ ಹಸ್ತಪ್ರತಿ ಶ್ರೀ ಹೃಷೀಕೇಶತೀರ್ಥರ ಹಸ್ತಪ್ರತಿಯೇ ಅಲ್ಲ ಎನ್ನುವದನ್ನು ಈ ಉಪನ್ಯಾಸ ಮತ್ತು ಮುಂದಿನ ಉಪನ್ಯಾಸಗಳಲ್ಲಿ ಅತ್ಯಂತ ಸಮರ್ಥವಾಗಿ ಪ್ರತಿಪಾದಿಸಲಾಗಿದೆ. ಬನ್ನಂಜೆಯ ಬಳಿಯಿರುವ ಹಸ್ತಪ್ರತಿಯಲ್ಲಿರುವ ಪಾಠ ಶ್ರೀ ಪದ್ಮನಾಭತೀರ್ಥರಿಗೆ, ಶ್ರೀ ತ್ರಿವಿಕ್ರಮಪಂಡಿತಾಚಾರ್ಯರಿಗೆ ಮತ್ತು ಶ್ರೀ ನಾರಾಯಣಪಂಡಿತಾಚಾರ್ಯರಿಗೆ ಸಮ್ಮತವೇ ಅಲ್ಲ ಎನ್ನುವದನ್ನು ಈ ಉಪನ್ಯಾಸದಲ್ಲಿ ಆಧಾರಗಳ ಸಮೇತವಾಗಿ ಪ್ರತಿಪಾದಿಸಲಾಗಿದೆ. ಈ ಉಪನ್ಯಾಸ ಮತ್ತು ಪುಸ್ತಕ ಪ್ರಕಟವಾದದ್ದು 2014ರ ನವೆಂಬರಿನಲ್ಲಿ. ಬನ್ನಂಜೆಗೆ ಇನ್ನೂ ಉತ್ತರಿಸಲು ಸಾಧ್ಯವಾಗಿಲ್ಲ. ಸಾಧ್ಯವೂ ಇಲ್ಲ.
BV19 ಬನ್ನಂಜೆಯಿಂದ ಮಾಧ್ವತತ್ವಗಳ ಕುರಿತ ಅವಹೇಳನ
ಬನ್ನಂಜೆ ಗೋವಿಂದಾಚಾರ್ಯರಿಗೆ ಮಾಧ್ವ ತತ್ವಗಳ ಇರುವ ತಿರಸ್ಕಾರವನ್ನು, , ಮಾಧ್ವ ಜ್ಞಾನಿಗಳನ್ನು ಅವರು ಅವಹೇಳನ ಮಾಡುವದನ್ನು ಅನೇಕ ಆಧಾರಗಳ ಸಮೇತವಾಗಿ ಇಲ್ಲಿ ಪ್ರತಿಪಾದಿಸಲಾಗಿದೆ.
BV18 ಸ್ಮರಣಾಚ್ಚ ಎಂಬ ಸೂತ್ರದ ಕುರಿತ ಚರ್ಚೆ
ಸ್ಮರಣಾಚ್ಚ ಎನ್ನುವ ಸೂತ್ರವನ್ನೂ ಸಹಿತ ಬ್ರಹ್ಮಸೂತ್ರ ಎಂದು ಬನ್ನಂಜೆ ಒಪ್ಪುವದಿಲ್ಲ. ಬನ್ನಂಜೆ ನೀಡುವ ಕಾರಣಗಳು ಪೇಲವ ಎನ್ನುವದನ್ನು ಪ್ರತಿಪಾದಿಸಿ ಅದನ್ನು ಸೂತ್ರ ಎಂದು ಈ ಭಾಗದಲ್ಲಿ ಪ್ರತಿಪಾದಿಸಲಾಗಿದೆ. ಹಿಂದಿನ ಚರ್ಚೆಯನ್ನು ಕೇಳಿದ ನಂತರವೇ ಇದನ್ನು ಕೇಳಿ. ಪೂರ್ಣವಾಗಿ ಅರ್ಥವಾಗುತ್ತದೆ.
BV17 ಯುಕ್ತೇಶ್ಚ ಎನ್ನುವ ಸೂತ್ರದ ಚರ್ಚೆ
ಬ್ರಹ್ಮಸೂತ್ರಗಳ ದ್ವಿತೀಯಾಧ್ಯಾಯದಲ್ಲಿ ಯುಕ್ತೇಶ್ಚ ಎನ್ನುವದು ಸೂತ್ರವೇ ಅಲ್ಲ, ಭಾಷ್ಯವಚನವನ್ನೇ ಸೂತ್ರ ಎಂದು ಎಲ್ಲರೂ ಭ್ರಮಿಸಿದ್ದಾರೆ ಎನ್ನುವದು ಬನ್ನಂಜೆಯ ವಾದ. ಇದಕ್ಕೆ ಬನ್ನಂಜೆ ನೀಡಿರುವ ಕಾರಣಗಳು ಅದೆಷ್ಟು ಬಾಲಿಶ ಮತ್ತು ಪೇಲವ ಎನ್ನುವದನ್ನು ಪ್ರತಿಪಾದಿಸಿ, ಶ್ರೀಮದಾಚಾರ್ಯರ ಸಿದ್ಧಾಂತವನ್ನು ಸಮರ್ಥಿಸಲಾಗಿದೆ. ಸುಲಭವಾಗಿ ಅರ್ಥವಾಗುವ ವಿಷಯ, ತಪ್ಪದೇ ಕೇಳಿ.
BV16 ಬನ್ನಂಜೆಯ ಅಪಪಾಠಗಳು - 2
ಶ್ರೀಮದಾಚಾರ್ಯರ ಭಾಷ್ಯದ ಜೊತೆಯಲ್ಲಿ ಶಂಕರರ ಪಾಠಗಳನ್ನು ಬನ್ನಂಜೆ ಸೇರಿಸಿ ಅದನ್ನು ಮಾಧ್ವಪಾಠ ಎಂದು ಕರೆಯುತ್ತಾರೆ, ಅಷ್ಟರ ಮಟ್ಟಿಗೆ ಅವರಿಗೆ ಪೂರ್ವಾಗ್ರಹವಿದೆ ಎನ್ನುವದನ್ನು ಆಧಾರ ಸಮೇತವಾಗಿ ಪ್ರತಿಪಾದಿಸುವ ಭಾಗವಿದು. ಗೀತೆಯಲ್ಲಿ ಯ ಏನಮ್ ಎನ್ನುವದು ಶ್ರೀಮದಾಚಾರ್ಯರ ಪಾಠ. ಯ ಏವಂ ಎನ್ನುವದು ಶಂಕರರ ಪಾಠ. ಬನ್ನಂಜೆ ಶಂಕರರ ಪಾಠವನ್ನೇ ಮಧ್ವಭಾಷ್ಯದ ಜೊತೆಯಲ್ಲಿ ಮುದ್ರಿಸಿದ್ದಾರೆ ಎನ್ನುವದನ್ನು ತೋರಿಸಿ, ಯ ಏನಮ್ ಎನ್ನುವ ಪಾಠವೇ ಶ್ರೀಮದಾಚಾರ್ಯರಿಗೆ ಸಮ್ಮತವಾದದ್ದು ಎಂದು ಇಲ್ಲಿ ಸಮರ್ಥಿಸಲಾಗಿದೆ.
BV15 ಬನ್ನಂಜೆಯ ಅಪಪಾಠಗಳು
ಬನ್ನಂಜೆ ನಿರ್ಣಯಿಸುವ ಬಹುತೇಕ ಪಾಠಗಳು ಅಪಪಾಠಗಳೇ ಆಗಿವೆ. ಮೂಲಗ್ರಂಥಗಳಿಗೆ ಅಪಚಾರವನ್ನೇ ಎಸಗುತ್ತವೆ ಎನ್ನುವದನ್ನು ಆಧಾರಸಮೇತವಾಗಿ ಇಲ್ಲಿ ಪ್ರತಿಪಾದಿಸಲಾಗಿದೆ.
BV14 ಬನ್ನಂಜೆಯ ಪೂರ್ವಾಗ್ರಹ
ಬನ್ನಂಜೆ ತಾಡೆವಾಲೆಗಳ ಆಧಾರದ ಮೇಲಷ್ಟೇ ಪಾಠಗಳನ್ನು ನಿರ್ಣಯಿಸುವದಿಲ್ಲ, ತಮ್ಮ ಪೂರ್ವಾಗ್ರಹದಿಂದ ಪಾಠಗಳನ್ನು ನಿರ್ಣಯಿಸುತ್ತಾರೆ ಎನ್ನುವದನ್ನು ಆಧಾರಸಮೇತವಾಗಿ ಇಲ್ಲಿ ಸಾಬೀತುಪಡಿಸಲಾಗಿದೆ.
BV13 ಬನ್ನಂಜೆ ಮಾಡಿರುವ ಪ್ರಕ್ಷೇಪ
ಪಾಠನಿರ್ಣಯದ ಸಂದರ್ಭದಲ್ಲಿ ಬನ್ನಂಜೆ ಪ್ರಕ್ಷೇಪಗಳನ್ನು ಮಾಡುತ್ತಾರೆ, ವ್ಯತ್ಯಾಸಗಳನ್ನು ಮಾಡುತ್ತಾರೆ ಎನ್ನುವದನ್ನು ಆಧಾರದೊಂದಿಗೆ ಈ ಉಪನ್ಯಾಸದಲ್ಲಿ ಸಾಬೀತುಪಡಿಸಲಾಗಿದೆ. ಯಮಜ್ಯಾಮುದವಾಹ ಎಂಬ ಶ್ರೀ ಮಧ್ವವಿಜಯದ ಮಾತನ್ನು ಯಮಜಾಮ್ಯುದವಾಸ ಎಂದು ಬನ್ನಂಜೆ ಮಾಡಿರುವ ಬದಲಾವಣೆ ಮಧ್ವವಿಜಯದ ಸೊಬಗಿಗೆ ಮತ್ತು ಅರ್ಥಕ್ಕೆ ಅದೆಂತಹ ಅಪಚಾರವನ್ನು ಮಾಡಿದೆ ಎನ್ನುವದನ್ನು ನಾವಿಲ್ಲಿ ಮನಗಾಣುತ್ತೇವೆ.
BV12 ಸೂರ್ಯ ನುಡಿದ ಸಾಕ್ಷಿ
ದೇವಕಾರ್ಯ ಪಿತೃಕಾರ್ಯಗಳಿಗೆ ಸೌರಮಾನವನ್ನು ಅನುಸರಿಸಬಾರದು, ಚಾಂದ್ರಮಾನವನ್ನೇ ಅನುಸರಿಸಬೇಕು ಎಂಬ ಶ್ರೀಮದಾಚಾರ್ಯರ ಸಿದ್ಧಾಂತವನ್ನು ಸೌರಮಾನದ ಅಧಿಪತಿಯಾದ ಸ್ವಯಂ ಸೂರ್ಯನೇ ಪ್ರತೀವರ್ಷವೂ ಅನುಸರಿಸುವ ಸಾಕ್ಷಿಯನ್ನು ಇಲ್ಲಿ ತೋರಿಕೊಡಲಾಗಿದೆ. ತಪ್ಪದೇ ಕೇಳಿ.
BV11 ಸಂನ್ಯಾಸಪದ್ಧತಿಯ ಚರ್ಚೆ
“ಸಿಂಹಮಾಸೇ ತು ರೋಹಿಣ್ಯಾ ಯುತಾಂ ಕೃಷ್ಣಾಷ್ಟಮೀಂ ಪುಮಾನ್” ಎಂಬ ಸಂನ್ಯಾಸಪದ್ಧತಿಯ ವಾಕ್ಯ ಇಡಿಯ ಕೃಷ್ಣಾಷ್ಟಮಿಯ ಆಚರಣೆಯ ಕುರಿತ ಚರ್ಚೆಯಲ್ಲಿ ಅತ್ಯಂತ ಮಹತ್ತ್ವದ್ದು. ಈ ವಾಕ್ಯದ ಅರ್ಥವಿವರಣೆ ಈ ಉಪನ್ಯಾಸದಲ್ಲಿದೆ.
BV10 ಜಯಂತೀನಿರ್ಣಯದ ಚರ್ಚೆ
ಜಯಂತೀ ನಿರ್ಣಯದಲ್ಲಿ ಶ್ರೀಮದಾಚಾರ್ಯರು ಮಾಸವನ್ನು ಯಾಕೆ ಉಲ್ಲೇಖಿಸಿಲ್ಲ ಎಂಬ ಪ್ರಶ್ನೆಗೆ ಉತ್ತರ ನೀಡುವದರೊಂದಿಗೆ “ರೋಹಿಣ್ಯಾಮರ್ಧರಾತ್ರೇ ತು ಯದಾ ಕಾಲಾಷ್ಟಮೀ ಭವೇತ್” ಎಂಬ ಆಚಾರ್ಯರ ವಾಕ್ಯದ ಅರ್ಥವಿವರಣೆ ಈ ಉಪನ್ಯಾಸದಲ್ಲಿದೆ.
BV09 ತಾತ್ಪರ್ಯನಿರ್ಣಯ ವಾಕ್ಯದ ಚರ್ಚೆ
ಕೃಷ್ಣ ಹುಟ್ಟಿದ್ದು ಭಾದ್ರಪದದಲ್ಲಿ, ಶ್ರಾವಣದಲ್ಲಿ ಅಲ್ಲ ಎನ್ನುವದು ಬನ್ನಂಜೆಯ ನಿಲುವು. ಇದಕ್ಕೆ ಕಾರಣ ತಾತ್ಪರ್ಯನಿರ್ಣಯದ ಯಸ್ಮಿನ್ನಬ್ಧೇ ಭಾದ್ರಪದೇ ಎಂಬ ವಾಕ್ಯ. ಈ ವಾಕ್ಯದ ಅರ್ಥದ ವಿಸ್ತೃತವಾದ ಚರ್ಚೆಯನ್ನು ಮಾಡಿ, ಶ್ರೀ ವೇದಾಂಗತೀರ್ಥರು ಮುಂತಾದ ಪ್ರಾಚೀನ ಆಚಾರ್ಯರ ವಾಕ್ಯಗಳ ಮುಖಾಂತರ ಆಚಾರ್ಯರ ಅಭಿಪ್ರಾಯವನ್ನು ತಿಳಿಸಿ ಶ್ರೀಕೃಷ್ಣ ಅವತರಿಸಿದ್ದು ಶ್ರಾವಣದಲ್ಲಿಯೇ, ಭಾದ್ರಪದದಲ್ಲಿ ಅಲ್ಲ ಎಂದು ಇಲ್ಲಿ ಸಪ್ರಮಾಣವಾಗಿ ಪ್ರತಿಪಾದಿಸಲಾಗಿದೆ. ಇದರ ಕುರಿತ ಲೇಖನ VNA084
BV08 ಸೌರಮಾನದ ಆಚರಣೆ ತಪ್ಪು
ಸೌರಮಾನದ ರೀತಿಯ ಆಚರಣೆ ಶ್ರೀಮದಾಚಾರ್ಯರಿಗೆ ಸಮ್ಮತವಲ್ಲ, ಚಾಂದ್ರಮಾನದ ಆಚರಣೆಯೇ ಸಮ್ಮತ ಎಂದು ಆಚಾರ್ಯರ ಮತ್ತು ಶ್ರೀ ವಾದಿರಾಜರ ವಾಕ್ಯಗಳಿಂದ ಇಲ್ಲಿ ಸಮರ್ಥಿಸಲಾಗಿದೆ.
BV07 ಕೃಷ್ಣಾಷ್ಟಮೀ ವಿವಾದ
ಕೃಷ್ಣಾಷ್ಟಮಿಯ ಆಚರಣೆಯ ಕುರಿತು ಬನ್ನಂಜೆಯ ವಿಚಾರಗಳ ಸಂಗ್ರಹ ಇಲ್ಲಿದೆ.
BV06 ಅಚ್ಯುತಪ್ರೇಕ್ಷ ಎಂಬ ಹೆಸರೇ ಸರಿ
ಶ್ರೀಮದಾಚಾರ್ಯರ ಗುರುಗಳ ಹೆಸರು ಅಚ್ಯುತಪ್ರೇಕ್ಷರೆಂದೋ, ಅಚ್ಯುತಪ್ರಜ್ಞರೆಂದೋ ಎಂಬ ವಿವಾದದ ಕುರಿತ ಚರ್ಚೆ ಇಲ್ಲಿದೆ. ಶ್ರೀ ನಾರಾಯಣಪಂಡಿತಾಚಾರ್ಯರ ಮತ್ತು ಮಾಧ್ವಪರಂಪರೆಯ ಜ್ಞಾನಿಗಳ ವಚನದ ಆಧಾರಗಳಿಂದ ಅವರ ಹೆಸರು ಅಚ್ಯುತಪ್ರೇಕ್ಷರೆಂದೇ ಎಂದು ಇಲ್ಲಿ ಸಮರ್ಥವಾಗಿ ಪ್ರತಿಪಾದಿಸಲಾಗಿದೆ.
BV05 ಮಧ್ವವಿಜಯ ಎಂಬ ಹೆಸರೇ ಸರಿ
ಮಧ್ವವಿಜಯ ಎನ್ನುವ ಹೆಸರೇ ಸರಿ, ಸುಮಧ್ವವಿಜಯ ಎನ್ನುವದು ಆ ಕಾವ್ಯದ ಹೆಸರಲ್ಲ ಎನ್ನುವ ಬನ್ನಂಜೆಯ ಸಂಶೋಧನೆಯನ್ನು ಪ್ರಾಚೀನ ಆಚಾರ್ಯರ ವಾಕ್ಯಗಳಿಂದ ಸಮರ್ಥಿಸುವ ಭಾಗ.
BV04 ದ್ವಾದಶಾದಿತ್ಯರ ವಿವಾದ
ದ್ವಾದಶಾದಿತ್ಯರ ಕುರಿತು ಶಾಸ್ತ್ರ ನೀಡುವ ಚಿತ್ರಣವನ್ನು ಪ್ರತಿಪಾದಿಸುವ ಭಾಗ, ಪ್ರಳಯಕಾಲದ ಕುರಿತು ಪುರಾಣಗಳು ತಿಳಿಸುವ ಅನೇಕ ಅಪೂರ್ವ ವಿಷಯಗಳ ನಿರೂಪಣೆಯೊಂದಿಗೆ.
BV03 ಬನ್ನಂಜೆ ಉತ್ತಮ ಕವಿ
ಬನ್ನಂಜೆ ಗೋವಿಂದಾಚಾರ್ಯರ ಕವಿತಾಶಕ್ತಿ, ಅನುವಾದಸಾಮರ್ಥ್ಯ ಮತ್ತು ಗ್ರಂಥಸಂಪಾದನಾಕೌಶಲದ ಕುರಿತ ಮುಕ್ತಪ್ರಶಂಸೆ ಈ ಭಾಗದಲ್ಲಿ.
BV02 ಸಂಸ್ಕೃತಕ್ಕೆ ಲಿಪಿ ಇದೆ
ಸಂಸ್ಕೃತಕ್ಕೆ ಲಿಪಿಯಿದೆಯೋ ಇಲ್ಲವೋ ಎನ್ನುವ ವಿಷಯದ ಕುರಿತ ಚರ್ಚೆಯಲ್ಲಿ ಹನುಮಂತದೇವರು ಪುಸ್ತಕವನ್ನು ಹಿಡಿದು ಅಧ್ಯಯನ ಮಾಡುತ್ತಿದ್ದರು ಎಂಬ ರಾಮಾಯಣದ ವಚನ, ಮತ್ತು ಹಯಗ್ರೀವದೇವರ ಕೈಯಲ್ಲಿ ಪುಸ್ತಕವಿದೆ ಎಂಬ ಆಚಾರ್ಯರ ವಚನಗಳ ಆಧಾರದ ಮೇಲೆ ಸಂಸ್ಕೃತಕ್ಕೆ ಲಿಪಿಯಿದೆ ಎಂದು ಸಮರ್ಥವಾಗಿ ಪ್ರತಿಪಾದಿಸಲಾಗಿದೆ.
BV01 ಮುನ್ನುಡಿ
ಬನ್ನಂಜೆ ಗೋವಿಂದಾಚಾರ್ಯರ ಸಂಶೋಧನೆಗಳ ಸರಿತಪ್ಪುಗಳನ್ನು ವಿಮರ್ಶಿಸುವ ಹಿಂದಿನ ಉದ್ದೇಶವನ್ನು ಸ್ಪಷ್ಟವಾಗಿ ವಿವರಿಸುವಂತಹ ಭಾಗ.
ರಾಮಾಯಣದ ಕಾಲ ನಿರ್ಣಯ
ಬನ್ನಂಜೆ ಗೋವಿಂದಾಚಾರ್ಯರ ಪ್ರಕಾರ ರಾಮಾಯಣ ನಡೆದದ್ದು 24ನೆಯ ತ್ರೇತಾಯುಗದಲ್ಲಿ. ಶ್ರೀ ಯಾದವಾರ್ಯರು 28ನೆಯ ಮಹಾಯುಗದಲ್ಲಿಯೇ ರಾಮಾಯಣ ನಡೆದದ್ದು ಎನ್ನುತ್ತಾರೆ. ಶ್ರೀಮದಾಚಾರ್ಯರ ವಚನಗಳ ಆಧಾರ ಮತ್ತು ಯುಕ್ತಿಗಳ ಆಧಾರದಿಂದ 28ರಲ್ಲಿಯೇ ರಾಮಾವತಾರವಾದದ್ದು ಎಂದು ಇಲ್ಲಿ ಪ್ರತಿಪಾದಿಸಲಾಗಿದೆ. ಇದರ ಕುರಿತ ಲೇಖನ VNA135
11/11 ಶ್ರೀ ವಿಜಯದಾಸಾರ್ಯರ ಮಾಹಾತ್ಮ್ಯ
ದೇವರು, ದೇವತೆಗಳು ಶ್ರೀ ವಿಜಯದಾಸಾರ್ಯರ ಮೇಲೆ ಮಾಡುವ ಪರಮಾನುಗ್ರಹ, ವಿಜಯಕವಚದ ಮಾಹಾತ್ಮ್ಯಮುಂತಾದ ವಿಷಯಗಳ ನಿರೂಪಣೆ ಇಲ್ಲಿದೆ.
10/11 ದಾಸರಿಲ್ಲದೆ ಗತಿಯಿಲ್ಲ
ಶ್ರೀ ವಿಜಯದಾಸಾರ್ಯರ ಪಾದಗಳನ್ನು ನಂಬದೆ ಸದ್ಗತಿ ಸಾಧ್ಯವಿಲ್ಲ ಎಂಬ ಪ್ರಮೇಯದ ನಿರೂಪಣೆ ಇಲ್ಲಿದೆ.
09/11 ಶ್ರೀ ವಿಜಯರಾಯರ ಕಾರುಣ್ಯ
ನಂಬಿದ ಭಕ್ತರನ್ನು ಸರ್ವದಾ ರಕ್ಷಣೆ ಮಾಡುವ ಶ್ರೀ ವಿಜಯದಾಸಾರ್ಯರ ಕಾರುಣ್ಯದ ಚಿಂತನೆ ಇಲ್ಲಿದೆ.
08/11 ವಿಜಯದಾಸರ ಉಪದೇಶ
ನಮ್ಮನ್ನು ಸಂಸಾರ ಸಾಗರದಿಂದ ಪಾರು ಮಾಡುವ ಶ್ರೀ ವಿಜಯದಾಸಾರ್ಯರ ಅದ್ಭುತ ಉಪದೇಶವೊಂದರ ವಿವರಣೆ ಇಲ್ಲಿದೆ.
07/11 ಭಕ್ತರ ಮೇಲೆ ದಾಸರು ಮಾಡುವ ಅನುಗ್ರಹ
ಶ್ರೀ ವಿಜಯರಾಯರು ಭಕ್ತರ ಮೇಲೆ ಮಾಡುವ ಪರಮಾನುಗ್ರಹದ ಕುರಿತು ಶ್ರೀ ವ್ಯಾಸವಿಠಲದಾಸರು ತಿಳಿಸಿದ ಅದ್ಭುತ ವಿಷಯಗಳ ಕುರಿತ ವಿವರಣೆ ಇಲ್ಲಿದೆ.
06/11 ಸುಬ್ಬಣ್ಣಾಚಾರ್ಯರ ಮೇಲೆ ಅನುಗ್ರಹ
ದಾಸರು ಶ್ರೀಹರಿಯನ್ನು ಆರಾಧಿಸಿದ ಬಗೆ, ಅವರ ಅದ್ಭುತ ಮನಸ್ಥೈರ್ಯ, ಕಲ್ಲೂರು ಸುಬ್ಬಣ್ಣಾಚಾರ್ಯರ ಮೇಲೆ ಮಾಡಿದ ಪರಮಾನುಗ್ರಹಗಳ ನಿರೂಪಣೆ ಇಲ್ಲಿದೆ.
05/11 ವಿಜಯದಾಸರ ಅದ್ಭುತ ಜೀವನ
ಶ್ರೀ ವಿಜಯರಾಯರು ಸಜ್ಜನರಿಂದ ಪಡೆದ ಅಪಾರ ಗೌರವ, ಅವರ ಮಾತಿನ ಶೈಲಿ, ಅವರ ಕೊಡುಗೈತನ, ಅವರ ಅದ್ಭುತ ಇಂದ್ರಿಯನಿಗ್ರಹಗಳ ಕುರಿತು ಶ್ರೀ ವ್ಯಾಸವಿಠಲದಾಸರು ನಿರೂಪಿಸಿರುವ ಅದ್ಭುತವಿಷಯಗಳ ಅರ್ಥಾನುಸಂಧಾನ ಇಲ್ಲಿದೆ.
04/11 ವಿಜಯದಾಸರ ಅದ್ಭುತ ಗುಣಗಳು
ಜ್ಞಾನವಂತನಾ ಬಲು ನಿದಾನಿ ಶಾಂತನಾ ಎಂಬ ಮಾತುಗಳ ಅರ್ಥಾನುಸಂಧಾನ.
03/11 ವಿಜಯದಾಸರ ಗುರುಭಕ್ತಿ
ಗುರುಭಕ್ತಿಯ ಸಾಕಾರ ಮೂರ್ತಿ ಎಂದರೆ ಶ್ರೀ ವಿಜಯದಾಸರು. ಅವರು ಪುರಂದರದಾಸರಿಂದ ಪಡೆದ ಅನುಗ್ರಹ, ಪುರಂದರದಾಸರ ಕುರಿತು ಅವರಿಗಿದ್ದ ಅಪಾರ ಭಕ್ತಿ, ಆ ಭಕ್ತಿಯಿಂದ ಅವರು ಸಂಪಾದಿಸಿದ್ದ ಅಪಾರ ಸದ್ಗುಣಗಳ ವಿವರಣೆ ಇಲ್ಲಿದೆ.
02/11 ಸ್ಮರಿಸಿ ಬದುಕಿರೋ
ಸ್ಮರಿಸಿ ಬದುಕಿರೋ ದಿವ್ಯ ಚರಣಕೆರಗಿರೋ, ದುರಿತ ತರಿದು ಪೊರೆವ ವಿಜಯ ಗುರುಗಳೆಂಬರ, ಎಂಬ ಪದ್ಯದ ಅರ್ಥಾನುಸಂಧಾನ.
01/11 ಗುರುಗಳ ಮಾಹಾತ್ಮ್ಯದ ಚಿಂತನೆ
ಗುರುಗಳು ಎಂದರೆ ಹೇಗಿರಬೇಕು, ಅವರನ್ನು ಯಾವ ರೀತಿ ಆಶ್ರಯಿಸಬೇಕು ಎಂದು ತಿಳಿಸುವ ಆಚಾರ್ಯರ ವಚನಗಳ ಅರ್ಥಾನುಸಂಧಾನ.
ಕೃಷ್ಟಾಷ್ಟಮೀ ಅರ್ಘ್ಯಪ್ರದಾನ
ಶ್ರೀಕೃಷ್ಣಜನ್ಮಾಷ್ಟಮಿಯಂದು ಶ್ರೀಕೃಷ್ಣನಿಗೆ ಮತ್ತು ಚಂದ್ರನಿಗೆ ಅರ್ಘ್ಯ ನೀಡುವ ಕ್ರಮ. ಮಂತ್ರ ಮತ್ತು ಕ್ರಮದ ವಿವರಣೆಯೊಂದಿಗೆ.
21/21 ಗುರ್ವಂತರ್ಯಾಮಿಗೆ ಸಮರ್ಪಣೆ
ಶ್ರೀ ವಿಜಯರಾಯರ ಪರಮಾನುಗ್ರಹದಿಂದ ನಡೆದಿರುವ, ಅವರು ರಚಿಸಿರುವ ಬ್ಯಾಸರದೇ ಭಜಿಸಿರೋ ಎಂಬ ಕೃತಿಯ ಅರ್ಥಾನುಸಂಧಾನದ ಸಮರ್ಪಣೆ
20/21 ಅವರ ಸಾಹಿತ್ಯದ ಕುರಿತು
ಶ್ರೀ ಪುರಂದರದಾಸರ ದಿವ್ಯ ಸಾಹಿತ್ಯದ ಕುರಿತಾದ ಒಂದು ಚಿಂತನೆ ಇಲ್ಲಿದೆ.
19/21 ನಾರದರ ಮಾಹಾತ್ಮ್ಯ
ಎಲ್ಲ ಲೋಕಗಳನ್ನು ಸಂಚರಿಸುವ ನಾರದರು ಒಮ್ಮೆ ನರಕಕ್ಕೂ ಭೇಟಿ ನೀಡಿದಾಗ ಅಲ್ಲಿದ್ದ ದುಃಖಿಜನರನ್ನು ಕಂಡು ಮರುಕದಿಂದ ಅವರನ್ನು ತಮ್ಮ ಹರಿನಾಮಸ್ಮರಣೆಯ ಶಕ್ತಿಯಿಂದಲೇ ಉದ್ಧರಿಸುತ್ತಾರೆ. ವಾಯುಪುರಾಣದಲ್ಲಿ ಬಂದಿರುವ ಈ ದಿವ್ಯಘಟನೆಯ ವಿವರ ಇಲ್ಲಿದೆ. ಆ ದಿವಸ ನರಕದಲ್ಲಿ ತೊಳಲುತ್ತಿದ್ದವರನ್ನು ಉದ್ದರಿಸಿದ ನಾರದರು ಸಂಸಾರದಲ್ಲಿ ಬಳಲುತ್ತಿರುವ ಸಜ್ಜನರನ್ನು ಉದ್ಧರಿಸಲೋಸುಗ ಶ್ರೀಪುರಂದರದಾಸರಾಗಿ ಅವತರಿಸಿ ಬಂದರು ಎಂಬ ಅವರ ಕಾರುಣ್ಯದ ಚಿಂತನೆಯ ಅಂಗವಾಗಿ.
18/21 ಪುರಂದರ ದಾಸರ ಸ್ವರೂಪ
ಶ್ರೀ ಪುರಂದರದಾಸರು ನಾರದರ ಅವತಾರ ಎಂಬ ಪರಮಮಂಗಳ ವಿಷಯವನ್ನು ಶ್ರೀ ವಿಜಯರಾಯರು ನಮ್ಮ ಮೇಲಿನ ಕಾರುಣ್ಯದಿಂದ ಈ ಪದ್ಯದಲ್ಲಿ ತಿಳಿಸಿಕೊಡುತ್ತಾರೆ. ಈ ಪವಿತ್ರ ವಿಷಯದ ಕುರಿತ ಚಿಂತನೆ ಇಲ್ಲಿದೆ.
17/21 ಭಗವಂತನ ಅನುಗ್ರಹ
ಶ್ರೀಹರಿ ಪುರಂದರದಾಸರ ಮೇಲೆ ಮಾಡಿದ ಪರಮಾನುಗ್ರಹವನ್ನು ಶ್ರೀವಿಜಯರಾಯರು ಮೈಯುಬ್ಬಿ ವರ್ಣಿಸುತ್ತಾರೆ. ಅವರ ಪವಿತ್ರವಚನಗಳ ಅನುವಾದ ಇಲ್ಲಿದೆ.
16/21 ರಂಗ ಕೊಳಲನೂದಲಾಗಿ
ರಂಗ ಕೊಳಲನೂದಲಾಗಿ ಎಂಬ ಪದ್ಯ ಶ್ರೀ ಪುರಂದರದಾಸರ ಒಂದು ದಿವ್ಯ ಕೃತಿ. ಕೆಲವರು ಇದು ಶ್ರೀ ಪ್ರಸನ್ನ ವೇಂಕಟದಾಸರ ರಚನೆ ಎನ್ನುತ್ತಾರೆ. ಆದರೆ ಹಸ್ತಪ್ರತಿಗಳ ಸಂಶೋಧನೆಯಿಂದ ಇದು ಪುರಂದರದಾಸರದೇ ಕೃತಿ ಎಂದು ವಿದ್ವಾಂಸರು ನಿರ್ಣಯಿಸಿದ್ದಾರೆ. ಆ ಕೃತಿಯ ವಿವರಣೆ ಈ ಭಾಗದಲ್ಲಿದೆ.
15/21 ಪುರಂದರ ದಾಸರ ಕೃತಿಗಳ ಸಂಖ್ಯೆ
ಪುರಂದರದಾಸರು ಒಟ್ಟು ಎಷ್ಟು ಕೃತಿಗಳನ್ನು ರಚಿಸಿದ್ದಾರೆ ಎಂಬ ವಿಷಯದ ಕುರಿತ ಚರ್ಚೆ ಇಲ್ಲಿದೆ.
14/21 ದಾಸರೆಂದರೆ ಪುರಂದರದಾಸರಯ್ಯ
ಒಳ್ಳೆಯ ಕೆಲಸಗಳನ್ನು ಮಾಡಿದಾಗ ಜಗತ್ತು ನಮ್ಮನ್ನು ಹೊಗಳಬಹುದು. ಆದರೆ ಪುರಂದರದಾಸರಿಗೆ ದಾಸದೀಕ್ಷೆಯನ್ನು ನೀಡಿದ ಶ್ರೀಮಚ್ಚಂದ್ರಿಕಾಚಾರ್ಯರೇ ದಾಸರಾಯರ ಜೀವನಶೈಲಿಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಾರೆ. ಅವರ ರಚನೆ — ದಾಸರೆಂದರೆ ಪುರಂದರದಾಸರಯ್ಯ ಎಂಬ ಕೃತಿಯ ಅರ್ಥಾನುಸಂಧಾನ ಈ ಪದ್ಯದಲ್ಲಿದೆ.
13/21 ಮಧುಕರ ವೃತ್ತಿ ಎನ್ನದು...
ಶ್ರೀ ಪುರಂದರದಾಸರ ಜೀವನಶೈಲಿಯನ್ನು ನಿರೂಪಿಸುವ ಮಧುಕರ ವೃತ್ತಿ ಎನ್ನದು ಎಂಬ ಹಾಡಿನ ಅರ್ಥಾನುಸಂಧಾನ.
12/21 ಎನ್ನ ಗಂಡ ವೈಷ್ಣವನಾದ ಕಾರಣ...
ಲೌಕಿಕ ಮತ್ತು ವೈಷ್ಣವ ಬದುಕಿನ ವ್ಯತ್ಯಾಸಗಳನ್ನು ಮನಗಾಣಿಸುವ ಮತ್ತೊಂದು ನಿಂದಾಸ್ತುತಿ — ಅಕ್ಕಾ ಅಕಟಕಟೆನ್ನ ಗಂಡ ವೈಷ್ಣವನಾದ ಕಾರಣ, ಬರಿದಾಯ್ತೆನ್ನ ಬದುಕು ಎನ್ನುವದು. ಮನುಷ್ಯನಾದವನು ಯಾಕೆ ವೇದೋಕ್ತವಾದ ಶುದ್ಧ ಕ್ರಮದಲ್ಲಿ ಯಾಕೆ ಬದುಕಬೇಕು ಎನ್ನುವದಕ್ಕೆ ಶ್ರೀ ಪುರಂದರಾದಸರು ಮನಸ್ಸಿನಲ್ಲಿ ನಾಟಿ ಕುಳಿತುಕೊಳ್ಳುವ ದಿವ್ಯ ಉತ್ತರವನ್ನು ನೀಡುತ್ತಾರೆ. ತಪ್ಪದೇ ಆಲಿಸಿ. ಎಲ್ಲ ಸಜ್ಜನರಿಗೂ ಕೇಳಿಸಿ.
11/21 ಶ್ರೀ ವ್ಯಾಸರಾಜರ ಮೇಲಿನ ನಿಂದಾಸ್ತುತಿ
ಶ್ರೀಪುರಂದರದಾಸರು ರಚಿಸಿರುವ ನಿಂದಾಸ್ತುತಿಗಳಲ್ಲಿಯೇ ಪ್ರಾಯಃ ಮೊದಲನೆಯ ನಿಂದಾಸ್ತುತಿ — ಮಂಡೆ ಬೋಳಾದ ಸಂನ್ಯಾಸಿ ಮನೆ ಬಂದ್ಹೊಕ್ಕನಮ್ಮ ಎನ್ನುವದು. ಲೋಕದ ಸುಖದಲ್ಲಿ ಆಸಕ್ತವಾದ ಜೀವನಕ್ಕೂ ವಿಷ್ಣುಭಕ್ತನಾಗಿ ಸಾಗಿಸುವ ಜೀವನಕ್ಕೂ ಇರುವ ವ್ಯತ್ಯಾಸವನ್ನು ಅದ್ಭುತವಾಗಿ ಮನಗಾಣಿಸುವ ದಿವ್ಯ ಕೃತಿ. ತಪ್ಪದೇ ಕೇಳಿ
10/21 ಶ್ರೀ ವ್ಯಾಸರಾಜರಿಂದ ದಾಸದೀಕ್ಷೆ
ವೈರಾಗ್ಯಭಾವದಿ ಜೀವಿಸಿಕೊಂಡಿರುವದೇ ಛಂದ ಎಂದು ನಿರ್ಣಯಿಸಿದ ಶ್ರೀನಿವಾಸನಾಯರು ಶ್ರೀಮಚ್ಚಂದ್ರಿಕಾಚಾರ್ಯಗುರುಸಾರ್ವಭೌಮರ ಪಾದದಡಿಗೆ ಬರುತ್ತಾರೆ, ಸರ್ವವನ್ನೂ ನಿವೇದಿಸಕೊಂಡು ಅವರಿಂದ ದಾಸದೀಕ್ಷೆಯನ್ನು ಪಡೆದು ಪುರಂದರದಾಸರಾಗುತ್ತಾರೆ. ಆ ಪವಿತ್ರ ಘಟನೆಯ ವಿವರಣೆ ಈ ಭಾಗದಲ್ಲಿದೆ.
09/21 ನಾಯಕರು ದಾಸರಾದರು
ಮಗನ ಮುಂಜಿಗಾಗಿ ತನ್ನನ್ನು ಹಣ ಕೇಳಲು ಬಂದದ್ದು ಸಾಮಾನ್ಯ ಬ್ರಾಹ್ಮಣನಲ್ಲ, ನನ್ನ ಮನಸ್ಸಿನ ಭಾವವನ್ನು ತಿಳಿಯಲು ಶ್ರೀಹರಿಯೇ ಬ್ರಾಹ್ಮಣನಾಗಿ ಬಂದಿದ್ದ ಎನ್ನವದನ್ನು ಶ್ರೀಶ್ರೀನಿವಾಸನಾಯಕರು ಮನಗಾಣುತ್ತಾರೆ. ಅಲ್ಲಿಯವರೆಗೆ ಲೋಭಿಯಾಗಿ ಬದುಕುತ್ತಿದ್ದ ಅವರು ಸರ್ವಸ್ವವನ್ನೂ ತ್ಯಾಗ ಮಾಡಿ ಪುರಂದರವಿಠಲನ ದಾಸರಾದ ಘಟನೆಯ ಮಂಗಳ ಘಟನೆಯ ವಿವರವನ್ನು ನಾವಿಲ್ಲಿ ಕೇಳುತ್ತೇವೆ.
08/21 ಮೂಗುತಿ ಘಟನೆಯ ವಾಸ್ತವಿಕತೆ
ಮೂಗುತಿ ವಿಷದ ಬಟ್ಟಲಿನಿಲ್ಲಿ ಬಿದ್ದ ಕಥೆಯನ್ನು ಒಪ್ಪಲಿಕ್ಕೆ ಕೆಲವರಿಗೆ ವೈಚಾರಿಕತೆ ಅಡ್ಡಿ ಬರುತ್ತದೆ. ವಸ್ತುಸ್ಥಿತಿಯಲ್ಲಿ ಇದು ನಿಜವಾಗಿ ನಡೆದ ಘಟನೆಯೇ ಎನ್ನುವದನ್ನು ಈ ಭಾಗದಲ್ಲಿ ಯುಕ್ತಿಯುಕ್ತವಾಗಿ ಪ್ರತಿಪಾದಿಸಲಾಗಿದೆ. ನೀವು ಕೇಳುವದರೊಂದಿಗೆ ಈ ಭಾಗವನ್ನಿನು ತಪ್ಪದೇ ನಿಮ್ಮ ಮಕ್ಕಳಿಗೆ ಕೇಳಿಸಿ.
07/21 ವಿಷದ ಬಟ್ಟಲಲ್ಲಿ ಮೂಗುತಿ
ಇದು ತಮ್ಮ ಪತ್ನಿಯದೇ ಮೂಗುತಿ ಎಂದು ಅರಿತ ನಾಯಕರು ಮನೆಗೆ ಬಂದು ಮೂಗುತಿಯೆಲ್ಲಿ ಎಂದು ಹೆಂಡತಿಯನ್ನು ಕೇಳುತ್ತಾರೆ. ಅದು ಮುರಿದಿದೆ, ಒಳಗಿಟ್ಟಿದ್ದೇನೆ ಎಂದು ಸರಸ್ವತಮ್ಮನವರು ತಿಳಿಸುತ್ತಾರೆ. ಒಳಗಿಂದ ತರದಿದ್ದರೆ ನಿನ್ನನ್ನು ಕೊಂದೇ ಬಿಡುತ್ತೇನೆ ಎನ್ನುತ್ತಾರೆ, ನಾಯಕರು. ಸಾಯಲು ಸಿದ್ಧವಾಗಿ ವಿಷ ಕುಡಿಯಲು ಆ ಸಾಧ್ವಿ ಸಿದ್ಧರಾದರೆ, ಆ ವಿಷದ ಬಟ್ಟಲಿನಲ್ಲಿ ಮೂಗುತಿಯನ್ನು ಹಾಕುತ್ತಾನೆ, ನಮ್ಮ ಸ್ವಾಮಿ. ಈ ಘಟನೆಗಳ ವಿವರದೊಂದಿಗೆ, ನಾಯಕರ ಪತ್ನಿಯ ವ್ಯಕ್ತಿತ್ವದ ಎತ್ತರದ ಚಿಂತನೆ ಇಲ್ಲಿದೆ. ತಪ್ಪದೇ ಕೇಳಿ.
06/21 ಮೂಗುತಿ ನಾಯಕರ ಬಳಿಗೇ ಬಂತು
ಸರಸ್ವತಮ್ಮನವರಿಂದ ಮೂಗುತಿಯನ್ನು ಪಡೆದ ಬ್ರಾಹ್ಮಣ ಅದನ್ನು ನಾಯಕರ ಬಳಿಗೇ ತಂದು ಮಾರಾಟ ಮಾಡುತ್ತಾನೆ. ತಿರುಗಿ ಬರುತ್ತೇನೆ ಎಂದು ಹೇಳಿ ಹಣ ತೆಗೆದುಕೊಳ್ಳದೇ ಹೊರಟು ಬಿಡುತ್ತಾನೆ. ಆ ಘಟನೆಗಳ ವಿವರಣೆ ಇಲ್ಲಿದೆ.
05/21 ಪತ್ನಿಯು ಮೂಗುತಿ ದಾನ ಮಾಡಿದ ಕಥೆ
ನಾಯಕರಿಂದ ತಿರಸ್ಕೃತನಾದ ಬ್ರಾಹ್ಮಣರೂಪಿ ಶ್ರೀಹರಿ, ಅವರ ಮನೆಯ ಹಿತ್ತಲಿನ ಬಾಗಿಲಿನ ಬಳಿ ಹೋಗಿ ನಾಯಕರ ಪತ್ನಿಯನ್ನು ಹಣಕ್ಕಾಗಿ ಪರಿಪರಿಯಾಗಿ ಬೇಡುತ್ತಾನೆ. ಮನಕರಗಿದ ಆ ಸಾಧ್ವಿ ತನ್ನ ಮೂಗಿನ ಮುತ್ತಿನ ಮೂಗುತಿಯನ್ನು ದಾನ ಮಾಡುತ್ತಾರೆ. ಆ ಪ್ರಸಂಗದ ಚಿತ್ರಣ ಇಲ್ಲಿದೆ. ಶ್ರೀ ವಿಜಯದಾಸರ ಕಥಾನಿರೂಪಣಾಕೌಶಲವನ್ನು ಅರಿಯಲು ಈ ಭಾಗ ಕೇಳಬೇಕು.
04/21 ಬ್ರಾಹ್ಮಣನಿಗಾದ ಅವಮಾನ
ಶ್ರೀನಿವಾಸನಾಯಕರು ಆ ಬ್ರಾಹ್ಮಣನನ್ನು ನಡೆಸಿಕೊಂಡ ಬಗೆಯ ಚಿತ್ರಣ ಇಲ್ಲಿದೆ.
03/21 ದೇವರು ಬ್ರಾಹ್ಮಣನಾಗಿ ಬಂದ
ಶ್ರೀನಿವಾಸನಾಯಕನಾಗಿ ಹುಟ್ಟಿ ಬಂದಿರುವ ನಾರದರನ್ನು ಶ್ರೀಹರಿಗೆ ಪುರಂದರದಾಸರನ್ನಾಗಿ ಮಾಡಬೇಕಾಗಿದೆ. ಹೀಗಾಗಿ ಅವರ ಅಂಗಡಿಗೆ ಹಣ ಬೇಡುವ ಬ