(You can only view comments here. If you want to write a comment please download the app.)
Anand Deshpande,Cupertino
2:39 AM , 23/05/2021
ಆಚಾರ್ಯರೆ ಬನ್ನಂಜೆ ಗೋವಿಂದಾಚಾರ್ಯರು ಮಹಾಭಾರತ ತಾತ್ಪರ್ಯ ನಿರ್ಣಯಕ್ಕೆ ಬರೆಂದಂಥ ವ್ಯಾಖ್ಯಾನದಲ್ಲಿ ಈ ಶ್ಲೋಕಗಳಿಗೆ ಏನು ಅರ್ಥ ಹೇಳಿದ್ದಾರೆ?
rammurthy kulkarni,Bangalore
9:53 PM , 21/05/2021
ಗುರುಗಳೆ,
ಆದರೆ ಶ್ರೀ ಚತುರ್ವೇದಿ ವೇದವ್ಯಾಸಾಚಾರ್ಯರು, ತಮ್ಮ ಪ್ರವಚನದಲ್ಲಿ ಭೃಗು ಮುನಿಗಳು ಭಗವಂತನಿಗೆ ಒದ್ದ ಪಾಪ ಪರಿಹಾರಕ್ಕಾಗಿ ಕೃತ ಯುಗದಲ್ಲಿ ಲಕ್ಷ್ಮೀಯನ್ನು ಮಗಳಾಗಿ ಪಡೆದು, ಪರಮಾತ್ಮನಿಗೆ ಕನ್ಯಾದಾನ ಮಾಡಿ, ತ್ರೇತೆಯಲ್ಲಿ ಸುರಲೀಲಾ ಎಂಬ ಕಪಿಯಾಗಿ ರಾಮನ ಸೇವೆ ಮಾಡಿದರು ಎಂದು ಹೇಳುತ್ತಾರೆ. ಹಾಗಾದರೆ, ಶ್ರೀನಿವಾಸ ಕಲ್ಯಾಣ ಕೃತ ಯುಗಕ್ಕೂ ಮುಂಚೆ ಆಗಿರಬೇಕಲ್ಲವೇ?
Srineel M S,Bengaluru
11:20 AM, 28/07/2019
ದಯವಿಟ್ಟು ಅನ್ಯಥಾ ಭಾವಿಸಬೇಡಿ. ನೀವು , ಆಚಾರ್ಯ ಮಧ್ವರನ್ನು ಹಾಗೆ ಕರೆದರೆ ಅದು ದುರಹಂಕಾರ ಎಂದಿರುವುದಕ್ಕೆ ನನ್ನ ಆಕ್ಷೇಪಣೆ ಸಲ್ಲಿಸಿ , ನಿಮ್ಮ ವಿವರಣೆ ಬಯಸುತ್ತಿದ್ದೇನೆ. ಎಷ್ಟೋ ಜನರು , ಆಚಾರ್ಯ ಮಧ್ವರು, ಆಚಾರ್ಯ ಶ್ರೀಮಧ್ವರು ಎಂದು ಹೇಳುತ್ತಲೇ ಇರುತ್ತಾರೆ. ಅವರೆಲ್ಲರೂ ದುರಹಂಕಾರಿಗಳೇ ಹಾಗಾದರೆ? ಸ್ವತಃ ನಾರಾಯಣ ಪಂಡಿತಾಚಾರ್ಯರೇ, ಆಚಾರ್ಯರ ಚರಿತ್ರೆಯನ್ನು ಮಧ್ವವಿಜಯ ಎಂದು ಕರೆದಿದ್ದಾರೆ. ಅಲ್ಲಿ ಏನಾದರೂ ನಾವು ಅಗೌರವದ ಪ್ರಸಕ್ತಿಯನ್ನು ಕಾಣಲು ಸಾಧ್ಯವೇ? ಅಂದಮೇಲೆ ಆಚಾರ್ಯ ಮಧ್ವರು ಎಂದು ಕರೆದರೆ ಅದು ತಪ್ಪೇ? ಹೊರಗಿನ ಮಾತಿಗಿಂತ ಒಳಗಿನ ಭಕ್ತಿ, ಗೌರವ, ಪ್ರೀತಿಗಳು ಮುಖ್ಯವಲ್ಲವೇ? ಬನ್ನಂಜೆಯವರು ಆಚಾರ್ಯ ಮಧ್ವರು ಎಂದು ಕರೆಯುವಾಗ ಅವರಿಗೆ ಅಥವಾ ಇನ್ಯಾರಿಗೇ ಆದರೂ ಆ ಭಕ್ತಿ ಇಲ್ಲವೆಂದು ನಿಮ್ಮ ಅಭಿಪ್ರಾಯವೇ? ನೀವು ದುರಹಂಕಾರ ಎಂಬ ಪದಪ್ರಯೋಗ ಮಾಡಿರುವುದು ಸಮಂಜಸವಲ್ಲ ಎಂದು ನನ್ನ ಭಾವನೆ
Vishnudasa Nagendracharya
ಈಗಾಗಲೇ ಉತ್ತರ ನೀಡಲಾದ ಪ್ರಶ್ನೆಯಿದು.
ಶ್ರೀಮಧ್ವವಿಜಯದ ಉಪನ್ಯಾಸಗಳಲ್ಲಿ 34ನೆಯ ಉಪನ್ಯಾಸವನ್ನು ಕೇಳಿ. (ವಿಶ್ವನಂದಿನಿಯ ಮಾಲಿಕೆಯಲ್ಲಿ VNU234)
Srineel M S,Bengaluru
10:40 AM, 28/07/2019
ನಿಮ್ಮ ಸಮರ್ಥನೆಗಳು ಇಷ್ಟವಾದವು. ಆದರೆ ಆಚಾರ್ಯ ಮಧ್ವ/ಮಧ್ವರು ಎಂದರೆ ಅದು ದುರಹಂಕಾರ ಎಂದಿದ್ದೀರಿ. ಅದು ಹೇಗೆ ದುರಹಂಕಾರ ಆಗುತ್ತದೆ. ಆಚಾರ್ಯ ಮಧ್ವರು ಎಂದು ಕೂಡ ಪ್ರೀತಿ ಅಭಿಮಾನದಿಂದ ಕರೆಯಬಹುದಲ್ಲವೇ? ಅವರೂ ಕೂಡ ಹಾಗೆಯೇ ಕರೆಯುತ್ತಿರಬಹುದಲ್ಲವೇ? ಶ್ರೀಮದಾಚಾರ್ಯರು ಎಂದೇ ಕರೆಯಲು ಯಾರಾದರೂ ಶಾಸನ ಮಾಡಿದ್ದಾರೆಯೇ? ನಿಮ್ಮಿಂದ ಸ್ಪಷ್ಟತೆಯನ್ನು ಬಯಸುತ್ತಿದ್ದೇನೆ ಆಚಾರ್ಯರೇ..
Vishnudasa Nagendracharya
ಈಗಾಗಲೇ ಉತ್ತರ ನೀಡಲಾದ ಪ್ರಶ್ನೆಯಿದು.
ಶ್ರೀಮಧ್ವವಿಜಯದ ಉಪನ್ಯಾಸಗಳಲ್ಲಿ 34ನೆಯ ಉಪನ್ಯಾಸವನ್ನು ಕೇಳಿ. (ವಿಶ್ವನಂದಿನಿಯ ಮಾಲಿಕೆಯಲ್ಲಿ VNU234)