ಸೂತಕದ ಮೈಲಿಗೆಯಲ್ಲಿ ಸಂಧ್ಯಾವಂದನೆ ಅರ್ಘದವರೆಗೆ ಎಂದಾದರೆ, ನಂತರ ಗಾಯತ್ರಿ ಜಪ ಮಾಡುವಂತಿಲ್ಲ. ಅಷ್ಟು ದಿನ ಗಾಯತ್ರಿ ಬಿಟ್ಟರೆ ನಂತರ ಪ್ರಾಯಶ್ಚಿತ್ತ ಹೇಗೆ? ದೇವರ ಗುರುಗಳ ಸ್ತೋತ್ರ ಇಲ್ಲ. ಏನನ್ನು ಪಠಿಸಬಹುದು ತಿಳಿಸಿಕೊಡಿ
Vishnudasa Nagendracharya
ಯಾವಾಗ ಏನು ಮಾಡಬೇಕು ಎಂದು ತಿಳಿಸುವದು ಶಾಸ್ತ್ರ.
ಶಾಸ್ತ್ರ ಹೇಳಿದ್ದನ್ನು ಮಾಡದೇ ಇದ್ದಲ್ಲಿ, ಹೇಳದೇ ಇದ್ದದ್ದನ್ನು ಮಾಡಿದಲ್ಲಿ ಪಾಪ, ಪ್ರಾಯಶ್ಚಿತ್ತಗಳು.
ಸೂತಕದಲ್ಲಿ ಗಾಯತ್ರೀ ಜಪ ಮಾಡಬಾರದು ಎಂದು ಶಾಸ್ತ್ರವೇ ಹೇಳುತ್ತದೆ. ಹೀಗಾಗಿ ಗಾಯತ್ರಿಯನ್ನು ಮಾಡದೇ ಇರುವದರಿಂದ ಸರ್ವಥಾ ದೋಷವಿಲ್ಲ.
Pranesh ಪ್ರಾಣೇಶ,Bangalore
3:05 PM , 29/10/2017
ಆಚಾರ್ಯ ಕೆಲವೊಂದು ಪ್ರಸಂಗದಲ್ಲಿ ದೇವರ ಪೂಜೆ ಮೊದಲು ಸ್ನಾನದ ಸಮಯದಲ್ಲಿ ದೇಹ ಘಾಸಿಗೊಂಡು ರಕ್ತ ಬರುತ್ತಲೇ ಇರುತ್ತದೆ
ಈ ಸಂಧರ್ಭ ದಲ್ಲಿ ಮಡಿ ಹೇಗೆ
Vishnudasa Nagendracharya
ದೇಹಕ್ಕೆ ಗಾಯವಾಗಿ ರಕ್ತ ಸೋರುತ್ತಿದ್ದರೆ, ಮಡಿಯಾಗುವದಿಲ್ಲ. ಬೇರೆಯವರಿಂದ ಪೂಜೆಯನ್ನು ಮಾಡಿಸಬೇಕು.