Article - VNA110

ಶಾಕವ್ರತದ ಸಮರ್ಪಣೆ ಮತ್ತು ಧಧಿವ್ರತದ ಸಂಕಲ್ಪ


Download Article Share to facebook View Comments10534 Views

Comments

(You can only view comments here. If you want to write a comment please download the app.)
 • Mythreyi Rao,Bengaluru

  8:24 AM , 08/08/2022

  ಅಂದ್ರೆ ಗುರುಗಳೇ ದ್ವಾದಶಿ ಅಡುಗೆ ಶಾಕಾಹಾರ ಮಾಡಬೇಕೆ 🙏

  Vishnudasa Nagendracharya

  ಶ್ರಾವಣ ಶುಕ್ಲ ಏಕಾದಶಿಗೆ ಶಾಕವ್ರತ ಮುಗಿದುಬಿಡುತ್ತದೆ. ಏಕಾದಶಿಯ ದಿವಸವೇ "ದೇವರಿಗೆ" ಹಣ್ಣು ನೈವೇದ್ಯ ಮಾಡಬಹುದು. ಶ್ರಾವಣ ಶುಕ್ಲ ದ್ವಾದಶಿಯಿಂದ ಎಲ್ಲ ವಿಹಿತ ಶಾಕಗಳನ್ನು ಬಳಸಿ ಅಡಿಗೆ ಮಾಡಬಹುದು. 
 • Raghavendra,Bangalore

  5:07 PM , 04/08/2019

  ಗುರುರಾಯರ ಆರಾಧನೆ ದಧಿವ್ರತದಲ್ಲಿ ಬರುತ್ತದೆ. ಆದರೆ ಬಹುತೇಕ ಮಠಗಳಲ್ಲಿ ಪಂಚಾಮೃತಕ್ಕೆ ಗಟ್ಟಿ ಮೊಸರು ಬಳಸುತ್ತಾರೆ. ಮಠಗಳಲ್ಲೇ ಹೀಗೆ ಮಾಡಿದರೆ ಮಠಗಳನ್ನು ಅನುಸರಿಸುವ ನಮ್ಮ ಪಾಡೇನು? ರಾಯರಿಗೆ ಅರ್ಪಿತವಾದ ಫಲ ಪಂಚಾಂಮೃತ ಸ್ವೀಕಾರ ಮಾಡಬೇಕೋ ಬಿಡಬೇಕೋ... ಧರ್ಮ ಸಂಕಟ

  Vishnudasa Nagendracharya

  ಶಾಸ್ತ್ರವಿರುದ್ಧವಾಗಿ ಯಾರೇ ನಡೆದರೂ ತಪ್ಪೇ. ಆಯಾ ಮಾಸದಲ್ಲಿ ನಿಷಿದ್ಧವಾದ ಪದಾರ್ಥವನ್ನು ಬಳಸಿ ನೈವೇದ್ಯ ಪಂಚಾಮೃತಗಳನ್ನು ಮಾಡಿದರೆ ಸರ್ವಥಾ ಸ್ವೀಕಾರ ಮಾಡಬಾರದು. 
  
  ಒಂದು ಉದಾಹರಣೆ — ನೀವು ವ್ರತ ಮಾಡುತ್ತಿದ್ದೀರಿ, ಯಾವುದೋ ಮಠಕ್ಕೆ ಹೋಗಿದ್ದೀರಿ. ಅಲ್ಲಿ ವ್ರತದ ಅಡಿಗೆ ಮಾಡಿಲ್ಲ, ನೀವು ಸ್ವೀಕರಿಸುತ್ತೀರೋ, ಇಲ್ಲ. ಹಾಗೆಯೇ ಇದು. 
  
  ಇಲ್ಲಿ, ಪಂಚಾಮೃತವನ್ನು ಗುರುಗಳ ವೃಂದಾವನಕ್ಕೆ ಅಭಿಷೇಕ ಮಾಡಿರುತ್ತಾರಲ್ಲ, ಅದಕ್ಕಾಗಿ ಪ್ರಶ್ನೆ ಮಾಡುತ್ತಿದ್ದೇವೆ ಎಂದು ನೀವು ಹೇಳಬಹುದು. 
  
  ವ್ರತ ಮಾಡುವ ಸಾಮಾನ್ಯರಾದ ನಾವು ನೀವೇ ಅವ್ರತದನ್ನು ಸ್ವೀಕಾರ ಮಾಡುವದಿಲ್ಲ ಎಂದಾದ ಬಳಿಕ, ರಾಯರು ಹೇಗೆ ಸ್ವೀಕಾರ ಮಾಡುತ್ತಾರೆ. ಅವರು ಮಾಡಿರುವದೇ ಇಲ್ಲ. 
  
  ಹೀಗಾಗಿ ಅದು ರಾಯರ ಪ್ರಸಾದವಾಗಿರುವದೇ ಇಲ್ಲವಾದ್ದರಿಂದ, ಪ್ರಸಾದವನ್ನು ಧಿಕ್ಕರಿಸಿದಂತಾಗುವದೇ ಇಲ್ಲ. 
 • Arun Kumar M N,Banglore

  7:26 AM , 23/08/2018

  ವಿಹಿತ ಪದಾರ್ಥಗಳು ಯಾವ್ಯಾವುದು..??

  Vishnudasa Nagendracharya

  VNA242
  ವಿಹಿತ ನಿಷಿದ್ಧ ತರಕಾರಿ ಹಣ್ಣುಗಳು
  
  ಈ ಲೇಖನದಲ್ಲಿ ವಿವರಣೆಯಿದೆ. 
 • Arun Kumar M N,Banglore

  7:26 AM , 23/08/2018

  ದಧಿ ವ್ರತದಲ್ಲಿ ಮೆಣಸಿನ ಕಾಯಿ, ಟಮೋಟ, ಹುಣಿಸೆ ತಿನ್ನಬಹುದಾ..???

  Vishnudasa Nagendracharya

  Tomato ಎಲ್ಲ ಕಾಲದಲ್ಲಿಯೂ ನಿಷಿದ್ಧ. 
  
  ದಧಿವ್ರತದಲ್ಲಿ ಮೊಸರು ಒಂದನ್ನು ಹೊರತು ಪಡಿಸಿ, ವಿಹಿತವಾದ ಉಳಿದ ಎಲ್ಲ ತರಕಾರಿಗಳನ್ನೂ ತಿನ್ನಬಹುದು. 
 • Pranesh ಪ್ರಾಣೇಶ,Bangalore

  10:42 AM, 03/08/2017

  ನಮ್ಮ ಮನೆಯವರೆಲ್ಲರೂ ದಧಿ ವ್ರತ ಸಂಕಲ್ಪ ಮಾಡಿದ್ದೇವೆ

  Vishnudasa Nagendracharya

  ಶ್ರೀಹರಿ-ವಾಯು-ದೇವತಾ-ಗುರುಗಳು ಶ್ರೇಷ್ಠ ಜ್ಞಾನ ಭಕ್ತಿ ವೈರಾಗ್ಯಗಳನ್ನು ಕರುಣಿಸಲಿ, ವ್ರತ ನಿರ್ವಿಘ್ನವಾಗಿ ಸಾಗಲಿ. 
  
 • Lakshmi,Bangalore

  10:49 AM, 16/07/2017

  Acharyarige anantha namanagalu, dhadhi vrathdalli misarannu kadidu majjige maadabaarada adara quantity kammi iddaga enu maaduvudu, hehe kadidu benne thegeyuvudu, illadiddare, mixy maadi balasabahude,. Istella maaduva badalu ondu thingalavarege idannu sweekara maadadiddare sariye? Dayaitu thilsi

  Vishnudasa Nagendracharya

  ನೀವು ಹೇಳಿದ ಕ್ರಮದಲ್ಲಿ ಮಿಕ್ಸಿ ಮುಂತಾದವುಗಳಿಂದಲೂ ಬೆಣ್ಣೆ ತೆಗೆದು ಮಜ್ಜಿಗೆಯನ್ನು ಬಳಸಬಹುದು. 
  
  ಇಡಿಯ ತಿಂಗಳು ಅದನ್ನೂ ತ್ಯಾಗ ಮಾಡಿದರೆ ಖಂಡಿತ ತಪ್ಪಿಲ್ಲ. ನಮ್ಮ ಮನೆಯಲ್ಲಿ ಇದೇ ಕ್ರಮ. ಬೆಣ್ಣೆ ತೆಗೆದ ಮಜ್ಜಿಗೆಯಿದ್ದರೆ ಬಳಸುತ್ತೇವೆ. ಇಲ್ಲವಾದಲ್ಲಿ ಬಳಸುವದೇ ಇಲ್ಲ.