Article - VNA117

ಜನ್ಮಾಷ್ಟಮೀ ಆಚರಣೆಯ ಕ್ರಮ — 1/3


Download Article Share to facebook View Comments15138 Views

Comments

(You can only view comments here. If you want to write a comment please download the app.)
 • B Sudarshan Acharya,Udupi

  3:57 PM , 02/09/2018

  ಭಾದ್ರಪದಮಾಸನಕ್ಷತ್ರ ಪೂರ್ವಾಭಾದ್ರ. ಯಾಕಂದರೆ ಭಾದ್ರಪದದ ಹಣ್ಣಿಮೆಯಂದು ಪೂರ್ವಾಭಾದ್ರಾನಕ್ಷತ್ರ. ಅದನ್ನು ಆಧರಿಸಿ ೨೨ನೇ ನಕ್ಷತ್ರ ಮೂಲ.
 • B Sudarshan Acharya,Udupi

  1:56 PM , 02/09/2018

  ಪೂರ್ವಾಭಾದ್ರದಿಂದ ಪ್ರಾರಂಭಿಸಿ ನಕ್ಷತ್ರ ಲೆಕ್ಕ ಮಾಡುತ್ತಾ ಹೋಗಿ ೨೨ ನೇ ನಕ್ಷತ್ರ ಮೂಲಾನಕ್ಷತ್ರವಾಗುತ್ತದೆ ಅದು ಭಾದ್ರಪದ ಶುಕ್ಲ ನವಮಿಯಂದು ಬರುತ್ತದೆ ಹೌದೋ ನೋಡಿ.

  Vishnudasa Nagendracharya

  ನಿಮ್ಮಿಂದ ಈ ರೀತಿಯ ವಿಚಿತ್ರ ಉತ್ತರವನ್ನು ನಿರೀಕ್ಷಿಸಿರಲಿಲ್ಲ. 
  
  ಈ ದೃಷ್ಟಿಯಲ್ಲಿ ಎಲ್ಲ ನಕ್ಷತ್ರಗಳು ಎಲ್ಲ ಸಂಖ್ಯೆಯನ್ನೂ ಪಡೆಯುತ್ತವೆ. 
  ಪೂರ್ವಾಭಾದ್ರಪದದಿಂದ ಏಕೆ ಎಣಿಸಬೇಕು ಎನ್ನುವದಕ್ಕೆ ಪ್ರಮಾಣವಿದೆಯಾ? ನೀವು ಹೇಳಿದ ಮಾತ್ರಕ್ಕೆ ಒಪ್ಪಬೇಕಾ. 
  
  27 ನಕ್ಷತ್ರಗಳಲ್ಲಿ 22ನೆಯದು ಶ್ರವಣ. ಅದು ಬರುವದು ಆಶ್ವೀನ ಶುದ್ಧ ನವಮಿಯಂದೇ. 
  
  
 • MUDDATNUR SRINIVASACHAR,BELLARY

  2:28 PM , 02/09/2018

  ಧನ್ಯವಾದಗಳು
 • B Sudarshan Acharya,Udupi

  9:38 PM , 31/08/2018

  ವಾದಿರಾಜರ ನಿರ್ಣಯ ಭಾದ್ರಪದದಲ್ಲಿ ಕೃಷ್ಣಾವತಾರ ಎಂದೇ ಇರುವುದು ಶ್ರಾವಣವನ್ನು ಸೌರಸಿಂಹಮಾಸ ಎಂದಿದ್ದಾರೆ. ಇದು ಬನ್ನಂಜೆ ಗೋವಿಂದಾಚಾರ್ಯರ ಅಪಾಠ ಅನ್ನುತ್ತಿರಾದರೆ ಬನ್ನಂಜೆ ಗೋವಿಂದಾಚಾರ್ಯರಿಗಿಂತಲೂ ಹಿಂದಿನ ಆಚಾರ್ಯರುಗಳು ವಾದಿರಾಜರ ನಿರ್ಣಯವನ್ನು ಉಲ್ಲೇಖಿಸಿದ್ದಾರೆ ಅಲ್ಲಿರುವುದು ಇದೇ ಪಾಠ. ಹಾಗೆಯೇ ಈ ಸಿಂಹಮಾಸದ ಕೃಷ್ಣಜಯಂತಿ ಇಂದಿನ ಆಚರಣೆಯಲ್ಲ ನೂರಿನ್ನೂರು ವರ್ಷ ಹಳೆಯ ಪಂಚಾಂಗಗಳ ತೆಗೆದು ನೋಡಿ ಸಿಂಹಮಾಸದಲ್ಲೇ ಕೃಷ್ಣಜಯಂತಿ ನಮೂದಿಸಿದ್ದಾರೆ‌. ಮಠದದಾಖಲೆಗಳಲ್ಲೂ ಸಿಗುತ್ತದೆ. ಸಿಂಹಮಾಸೇ ತು ರೋಹಿಣ್ಯಾಂ ಯುತಾಂ ಕೃಷ್ಣಾಷ್ಟಮೀಂ ಪುಮಾನ್ ಇದು ಕೂಡಾ ಶ್ರೀವಿಷ್ಣುತೀರ್ಥರ ನಿರ್ಣಯವಚನ ಯಾಕಂದರೆ ಜಯಂತಿಯೋಗ ಸಿಗುವುದು ಸಿಂಹಮಾಸದಲ್ಲಿ. ಆದ್ದರಿಂದ ಪಿತೃಪಕ್ಷದ ಭಾದಕ ನಮಗಿಲ್ಲ.

  Vishnudasa Nagendracharya

  ಶ್ರೀ ವಾದಿರಾಜಗುರುಸಾರ್ವಭೌಮರ ವಾಕ್ಯದ ಚರ್ಚೆಯನ್ನು ವಿಸ್ತೃತವಾಗಿ ಮಾಡಿದ್ದೇನೆ. ಇನ್ನೂ ಉತ್ತರ ಬಂದಿಲ್ಲ. ವಾದಿರಾಜರ ವಾಕ್ಯವನ್ನು ತಿದ್ದಿದ್ದೇನೆ ಎಂದು ಬನ್ನಂಜೆಯೇ ಒಪ್ಪಿದ್ದಾರೆ. 
  
  ಶ್ರೀ ವೇದಾಂಗತೀರ್ಥರು ಶ್ರಾವಣದಲ್ಲಿ ಅವತಾರ ಎಂದು ಬರೆದಿರುವದನ್ನು ಬನ್ನಂಜೆಯೇ ಮುದ್ರಿಸಿದ್ದಾರೆ. 
  
  ಅದಕ್ಕೇಕೆ ಉತ್ತರವಿಲ್ಲ. 
  
  ಶ್ರಾವಣದಲ್ಲಿ ಅವತಾರ ಎಂದು ಹೇಳಿದ ಶ್ರೀ ವೇದಾಂಗತೀರ್ಥರು, ತಿಥ್ಯಂತೇ ಪಾರಣವನ್ನು ಹೇಳಿದ ಶ್ರೀ ವಾದಿರಾಜತೀರ್ಥರು ಇವರೆಲ್ಲರೂ ಭ್ರಾಂತರು, ನಾವು ಮಾತ್ರ ತಿಳಿದವರು ಎಂದು ತಾವೂ ಹೇಳುತ್ತೀರೇನು? 
 • B Sudarshan Acharya,Udupi

  8:01 AM , 01/09/2018

  ಭಾದ್ರಪದ ಶುದ್ಧನವಮಿಯು ಯಾವರ್ಥದಲ್ಲೂ ಅಶ್ವಯುಜ ಶುಕ್ಲನವಮಿಯಾಗದು ಅದು ಕೃಷ್ಣಾದೀಯವಾಗಲಿ ಅಥವಾ ಶುಕ್ಲಾದೀಯ ಕ್ರಮದಲ್ಲೇ ಆಗಲಿ. ಅಲ್ಲಿ ಹೇಳಿರುವುದು ನವರಾತ್ರಿ ಎಂದು ಹೇಗೆ ಹೇಳುತ್ತೀರಿ ! ಅಲ್ಲಿ ಹೇಳಿರುವು ಭಾದ್ರಪದದ ಶುಕ್ಲ ನವಮಿಯೇ. ನವರಾತ್ರಿಯಲ್ಲಿ ಶಾರದಾಪೂಜೆ. ಅದೂ ನವಮಿಯಲ್ಲ ನವರಾತ್ರಿಯಲ್ಲಿ ಮೂಲಾನಕ್ಷತ್ರ ಪ್ರಾರಂಭಿಸಿ. ಇಲ್ಲಿಯೂ ಯಾವುದೇ ಅರ್ಥಾಂತರಗಳನ್ನು ಹೇಳದೆ ಯಥಾರ್ಥದಲ್ಲೇ ಶ್ರೀವಿಷ್ಣುತೀರ್ಥರು ಹೇಳಿದ್ದಾರೆ. ಇಂದು ನಾವು ಮಾಡುವ ಹಲವು ಆಚರಣೆಗಳಿಗಿಗೂ ಶಾಸ್ತ್ರಗಳಲ್ಲಿ ಹೇಳಿರುವ ವಿಚಾರಗಳಿಗೂ ವ್ಯತ್ಯಾಸ ಇದೆ. ಖಂಡಿತ ಇಲ್ಲಿ ಭಾದ್ರಪದದ ಶುಕ್ಲನವಮಿಯೇ ವೇದವ್ಯಾಸರ ಮತ್ತು ಪರಶುರಾಮರ ಪೂಜೆ

  Vishnudasa Nagendracharya

  ಸಂತೋಷ. 
  
  ಶ್ರವಣ-ಪೂರ್ವಾಭಾದ್ರಪದಾ ನಕ್ಷತ್ರಗಳನ್ನು ಕೂಡಿಸಿ. 
  
  ನವಮಿಯಿಂದ ಪೂರ್ಣಿಮೆಯವರೆಗೆ ಮೂರೇ ನಕ್ಷತ್ರಗಳು ಹೇಗೆ. ಉತ್ತರಿಸಿ. 
 • B Sudarshan Acharya,Udupi

  9:45 PM , 31/08/2018

  ಶ್ರೀಮದಾಚಾರ್ಯರಾಗಲಿ ಅಥವಾ ಶ್ರೀವಿಷ್ಣುತೀರ್ಥರಾಗಲಿ ಅಥವಾ ಶ್ರೀವಾದಿರಾಜತೀರ್ಥರಾಗಲಿ ಮುಚ್ಚಿಟ್ಟ ಅರ್ಥವನ್ನು ಹೇಳಲು ಬಂದವರಲ್ಲ ಮುಚ್ಚಿಟ್ಟ ಅರ್ಥವನ್ನು ತಿಳಿಸಲು ಬಂದವರು ಆದ್ದರಿಂದ ನಾಮಾಂತರಗಳಿಂದ ಹೇಳಿದರೆಂಬುದಕ್ಕೆ ಪ್ರಮೇಯವೇ ಇಲ್ಲ.

  Vishnudasa Nagendracharya

  ಶಾಸ್ತ್ರಗ್ರಂಥಗಳನ್ನು ಪರಿಪೂರ್ಣವಾಗಿ ಅಧ್ಯಯನ ಮಾಡದೇ ಶಬ್ದಗಳ ಆಡಂಬರವನ್ನು ಮಾಡಬಾರದು. 
  
  ಮೇಲೆ ಹೇಳಿದ ಮಹಾನುಭಾವರು ಮುಚ್ಚಿಟ್ಟು ಅರ್ಥವನ್ನು ಹೇಳಲು ಬರಲಿಲ್ಲ, ಮುಚ್ಚಿಟ್ಟ ಅರ್ಥವನ್ನು ಹೇಳಲು ಬಂದವರು ಎಂದು ಹೇಳುತ್ತಿರುವ ತಮಗೆ ಪ್ರಶ್ನೆ — 
  
  ಸಂನ್ಯಾಸಪದ್ಧತಿಯಲ್ಲಿ ನವರಾತ್ರಿಯ ಪೂಜೆಯನ್ನು ವಿಧಾನ ಮಾಡುವಾಗ ಶ್ರೀಮಧ್ವಾನುಜಾಚಾರ್ಯರು ಹೀಗೆ ತಿಳಿಸಿದ್ದಾರೆ — 
  
  ಏವಂ ಭಾದ್ರಪದೇ ಮಾಸೇ ನವಮ್ಯಾಂ ಸಿತಪಕ್ಷಕೇ
  ಗ್ರಂಥಾನೇಕತ್ರ ಸಂಸ್ಥಾಪ್ಯ ವಸ್ತ್ರೈಃ ಸಂಛಾದ್ಯ ಸರ್ವಶಃ
  
  ವ್ಯಾಸಂ ಪರಶುರಾಮಂ ಚ ಪೂಜಯೇತ್ ತೇಷು ಭಕ್ತಿತಃ
  ದ್ವಾವಿಂಶಭೇನ ಯದ್ ಯುಕ್ತಾ ಉಪವಾಸೋ ವಿಧೀಯತೇ 
  
  ಎಂದು. ಕೃಷ್ಣಾಷ್ಟಮಿಯ ವಿಷಯವಾದ ತಕ್ಷಣ ಬಂದಿರುವ ಶ್ಲೋಕಗಳಿವು. 
  
  ಇಲ್ಲಿ ಭಾದ್ರಪದ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಗ್ರಂಥಗಳ ಪೂಜೆ, ಆಶ್ವೀನದ ನವರಾತ್ರಿಯಲ್ಲಿಯೋ ಭಾದ್ರಪದ ಶುದ್ಧ ನವಮಿಯೋ? ನೀವೇ ಹೇಳಿ. ಅಂದ ಮೇಲೆ ಶ್ರೀಮನ್ ಮಧ್ವಾನುಜಾಚಾರ್ಯರು ಇಲ್ಲಿ ಭಾದ್ರಪದ ಎಂದೇಕೆ ಶಬ್ದ ಬಳಸಿದ್ದಾರೆ. ಶುಕ್ಲಾದಿ ಕೃಷ್ಣಾದಿ ಲೆಕ್ಕದಿಂತಂತೂ ಇದನ್ನು ಸರ್ವಥಾ ಕೂಡಿಸಲು ಬರುವದಿಲ್ಲ. ಕಾರಣ ಶುಕ್ಲಪಕ್ಷದ ನವಮೀ. 
  
  ಅಂದ ಮೇಲೆ ಹೇಗೆ ಕೂಡಿಸುತ್ತೀರಿ. ಮುಚ್ಚಿಟ್ಟ ಅರ್ಥವನ್ನು ತಿಳಿಸಲು ಬಂದವರು ಹೀಗೇಕೆ ಮಾತನಾಡಿದರು? 
  
  ಸಂನ್ಯಾಸಪದ್ಧತಿ ಸೂತ್ರಪ್ರಾಯವಾದ ಗ್ರಂಥ. ಇಲ್ಲಿನ ಶಬ್ದಗಳಿಗೆ ಅರ್ಥ ಹೇಳಲು ಇಡಿಯ ಧರ್ಮಶಾಸ್ತ್ರದ ಅಧ್ಯಯನ ಬೇಕಾಗುತ್ತದೆ. ನೀವು ಪ್ರಯತ್ನ ಪಟ್ಟು ಇಲ್ಲಿನ ಭಾದ್ರಪದಕ್ಕೆ ಆಶ್ವೀನ ಎಂದು ಅರ್ಥ ಹೇಳಲು ಪ್ರಯತ್ನಿಸಿ. ಇಲ್ಲಿಯ ಭಾದ್ರಪದಕ್ಕೆ ಆಶ್ವೀನ ಎಂದು ಅರ್ಥ ಮಾಡುವದಾದರೆ ಮೇಲಿನ ಸಿಂಹಮಾಸಕ್ಕೂ ಶ್ರಾವಣ ಎಂದೇ ಅರ್ಥ. ಇಲ್ಲವಾದರೆ ಭಾದ್ರಪದ ಶುದ್ಧ ನವಮಿಯಂದು ಎಲ್ಲಿ ಸರಸ್ವತೀಪೂಜೆ ನಡೆಯುತ್ತದೆ ಎನ್ನುವದನ್ನು ತೋರಿಸಿಕೊಡಿ. 
  
  ಇನ್ನು ನಾವು ಮೇಲು ನೋಟದ ಅರ್ಥವನ್ನೇ ಹಿಡಿಯುವವರು, ಭಾದ್ರಪದದಲ್ಲಿಯೇ ಸರಸ್ವತೀಪೂಜೆ, ಆಶ್ವೀನದಲ್ಲಲ್ಲ ಎಂದು ನೀವು ಹೇಳುವದಾದರೆ 22ನೆಯ ನಕ್ಷತ್ರ ಭಾದ್ರಪದ ಶುದ್ಧ ನವಮಿಯಂದು ಹೇಗೆ ಬರಲು ಸಾಧ್ಯ? ಕಾರಣ, ಭಾದ್ರಪದ ಶುದ್ಧ ಪೌರ್ಣಿಮೆಗೆ 25ನೆಯ ನಕ್ಷತ್ರವಿರಬೇಕು. ನವಮಿಯಿಂದ ಪೌರ್ಣಿಮೆಗೆ ಏಳು ದಿವಸಗಳು. ನವಮಿಯಲ್ಲಿ ಶ್ರವಣವಿದ್ದರೆ, ಪೌರ್ಣಿಮೆಗೆ ಪೂರ್ವಾಭಾದ್ರಪದಾ ಹೇಗೆ ಬರಲು ಸಾಧ್ಯ. ಏಳು ದಿವಸಗಳಲ್ಲಿ ಮೂರೇ ನಕ್ಷತ್ರಗಳೇ?
  
  ಶಾಸ್ತ್ರಗ್ರಂಥಗಳನ್ನು ಪರಿಪೂರ್ಣವಾಗಿ ಅಧ್ಯಯನ ಮಾಡದೇ ಹೀಗೆಲ್ಲ ಮಾತನಾಡಬಾರದು. 
  
  ಇದೊಂದಲ್ಲ, ಈ ರೀತಿಯಾದ ಸಾಕಷ್ಟು ವಚನಗಳನ್ನು ಶ್ರೀ ವಾದಿರಾಜಗುರುಸಾರ್ವಭೌಮರ, ಶ್ರೀ ಭಗವತ್ಪಾದಾಚಾರ್ಯರ ಗ್ರಂಥಗಳಿಂದ ನೀಡುತ್ತೇನೆ. 
  
  ಮುಚ್ಚಿಟ್ಟ ಸತ್ಯವನ್ನು ಹೇಳಬಂದವರು, ಮುಚ್ಚಿಟ್ಟು ಯಾಕೆ ಹೇಳಿದರು ಎಂಬ ಪ್ರಶ್ನೆಗೆ ಉತ್ತರ ಕೊಡಿ. 
  
  ಆಶ್ವೀನವೆಂಬ ಮಾಸವನ್ನು ಭಾದ್ರಪದವೆಂಬ ನಾಮಾಂತರದಿಂದ ಶ್ರೀಮನ್ ಮಧ್ವಾನುಜಾಚಾರ್ಯರು ಕರೆದಿದ್ದಾರೆ ಎನ್ನುವದನ್ನು ಸದೃಷ್ಟಾಂತವಾಗಿ ತೋರಿಸಿದ್ದೇನೆ. “ನಾಮಾಂತರದಿಂದ ಕರೆಯುವ ಪ್ರಮೇಯವೇ ಇಲ್ಲ” ಎಂಬ ನಿಮ್ಮ ಮಾತು ಈಗ ಎಲ್ಲಿ ಹೋಯಿತು ತಿಳಿಸಿ. 
  
  ತಾವು ಇದಕ್ಕೆ ಉತ್ತರ ಕೊಟ್ಟ ನಂತರವೇ ಮುಂದಿನ ಪ್ರಶ್ನೆಯನ್ನು ಕೇಳಬೇಕಾಗಿ ವಿನಮ್ರ ಪ್ರಾರ್ಥನೆ. 
  
 • B Sudarshan Acharya,Udupi

  9:41 PM , 31/08/2018

  ಇದರ ಬಗ್ಗೆ ಯಥಾರ್ಥವಾದ ವಿಮರ್ಷೆ ಖಂಡಿತವಾಗಿಯೂ ಮಾಡೋಣ ನನಗೂ ಬೇಕಾಗಿರುವು ತತ್ವ ಅಷ್ಟೇ
 • B Sudarshan Acharya,Udupi

  7:20 PM , 31/08/2018

  ಕೃಷ್ಣಾವತಾರ ಭಾದ್ರಪದದಲ್ಲಿ

  Vishnudasa Nagendracharya

  ಉತ್ತರ ನೀಡಿಯಾದ ವಿಷಯವನ್ನು ಮತ್ತೆಮತ್ತೆ ಕೆದಕುವದರಲ್ಲಿ ಅರ್ಥವಿಲ್ಲ. 
  
  ಭಾದ್ರಪದದಲ್ಲಿ ಆಗಿದ್ದರೆ, ಪಿತೃಪಕ್ಷದಲ್ಲಿಯೇ ಕೃಷ್ಣಾಷ್ಟಮಿ ಮಾಡಿ. ಯಾರು ಬೇಡ ಎನ್ನುತ್ತಾರೆ. ಅಥವಾ ಸಿಂಹಮಾಸದಲ್ಲಿಯೇ ಮಾಡಿ. ಚಾಂದ್ರಮಾನದ ಅಷ್ಟಮಿ ಯಾಕೆ ಬೇಕು? 
  
  ಶ್ರೀ ವೇದಾಂಗತೀರ್ಥರು ಶ್ರಾವಣ ಎಂದಿದ್ದಾರೆ. ಶ್ರೀ ವಾದಿರಾಜತೀರ್ಥರು ಶ್ರಾವಣದಲ್ಲಿ ಕೃಷ್ಣ ಹುಟ್ಟಿದ ಎಂದಿದ್ದಾರೆ. ಶ್ರೀ ರಾಘವೇಂದ್ರತೀರ್ಥರು ಶಾ್ರವಣದಲ್ಲಿಯೇ ಎಂದಿದ್ದಾರೆ. ಶ್ರೀ ಕೃಷ್ಣಾಚಾರ್ಯರು ಶ್ರಾವಣದಲ್ಲಿಯೇ ಎಂದಿದ್ದಾರೆ. 
  
  ಆಚಾರ್ಯರ ಮತ್ತು ಮಧ್ವಾನುಜಾಚಾರ್ಯರ ವಚನಗಳಿಂದಲೇ ಇವು ನಿಸ್ಸಂದಿಗ್ಧವಾಗಿ ನಿರ್ಣೀತವಾಗಿವೆ. 
  
  
  ಇವರೆಲ್ಲರನ್ನು ಮೀರಿ ಭಾದ್ರಪದ ಎಂದು ಒಪ್ಪುವ ಆಗ್ರಹ ಇರಾದೆ ಎರಡೂ ನಮಗಿಲ್ಲ. 
  
  
  ಈ ವಿಷಯವನ್ನು ವಿಸ್ತೃತವಾಗಿ ಚರ್ಚಿಸಿದ್ದೇನೆ ಸಹಿತ. 
  
  
  ನನ್ನ ಮುಕ್ತ ಅಭಿಪ್ರಾಯವಿಷ್ಟೇ — 
  
  ಇವತ್ತಿನ ನಾವು ನಮ್ಮ ಪ್ರಾಚೀನ ಆಚಾರ್ಯರಿಗಿಂತ ದೊಡ್ಡವರು ಎಂಬ ಭ್ರಮೆ ಬೇಡ. ಅವರು ನಿರ್ಣಯ ಮಾಡಿದ್ದೆಲ್ಲವೂ ತಪ್ಪು, ನಾವೇ ಶ್ರೀಮದಾಚಾರ್ಯರನ್ನು ಸರಿಯಾಗಿ ಅರ್ಥ ಮಾಡಿಕೊಂಡವರು ಎಂಬ ಮಾತೂ ಬೇಡ. ಎಲ್ಲ ಪ್ರಾಚೀನ ಆಚಾರ್ಯರ ವಚನಗಳನ್ನು ಪ್ರಾಂಜಲವಾಗಿ ಅಧ್ಯಯನ ಮಾಡೋಣ. ಶಾಸ್ತ್ರಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ನಿಸ್ಸಂದಿಗ್ಧವಾಗಿ ನಿರ್ಣಯವಾದರೆ ಗೌರವದಿಂದ ತ್ಯಾಗ ಮಾಡೋಣ. 
  
  ಆಚಾರ್ಯರಿಗೆ ನಮಗಿಂತ ಹತ್ತಿರವಾದವರು ಅವರು. ನಮಗಿಂತ ಎತ್ತರದ ಬದುಕನ್ನು ಬದುಕಿದವರು. ಶ್ರೀ ವೇದಾಂಗತೀರ್ಥರಾದಿಯಾಗಿ ಮಹಾನುಭಾವರ ಕುರಿತು ಪ್ರತ್ಯೇಕವಾಗಿ ಹೇಳಬೇಕಾದ್ದಿಲ್ಲ. ನಮ್ಮನ್ನು ಉದ್ದರಿಸಬಂದ ಚೇತನೋತ್ತಮರು ಎಂಬ ಎಚ್ಚರ ನಮಗಿದೆ.  ಶ್ರೀ ಕೃಷ್ಣಾಚಾರ್ಯರು ಗುರುಸಾರ್ವಭೌಮರ ನೆಚ್ಚಿನ ಶಿಷ್ಯರು. ಶ್ರೀ ವಿಜಯೀಂದ್ರತೀರ್ಥರು ಅವತರಿಸಿದ ಶ್ರೇಷ್ಠ ವಂಶದಲ್ಲಿ ಜನ್ಮ ಪಡೆದ ಸೌಭಾಗ್ಯಶಾಲಿಗಳು. ಶ್ರೀ ರಾಮಚಂದ್ರತೀರ್ಥರು ಮುಂತಾದ ಮಹಾನುಭಾವರ ಅನುಗ್ರಹ ಪಡೆದವರು. ಅನೇಕ ಸಂಪ್ರದಾಯಗಳ ಅರಿವಿದ್ದವರು. ಧರ್ಮಶಾಸ್ತ್ರದ ಲಕ್ಷಲಕ್ಷ ವಚನಗಳನ್ನು ಬುದ್ಧಿಸ್ಥ ಮಾಡಿಕೊಂಡಿದ್ದ ಮೇಧಾವಿಗಳು. “ಆಚಾರ್ಯರ ವಚನಗವನ್ನು ಅರ್ಥ ಮಾಡಿಕೊಂಡವನು ನಾನೇ” ಎಂದು ಎಲ್ಲಿಯೂ ಅಹಂಕಾರ ತೋರಿದವರಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಶ್ರೇಷ್ಠ ವಿಷ್ಣುಭಕ್ತರು. ಅವರ ಮಾತುಗಳನ್ನು ಧಿಕ್ಕರಿಸಿ ನಡೆಯುವ ಇರಾದೆ ನಮಗೆ ಕನಸಿನಲ್ಲಿಯೂ ಇಲ್ಲ. ಹಾಗಂತ ಅಂಧ ಅನುಯಾಯಿತನವೂ ಇಲ್ಲ. ದೇವರು ಕೊಟ್ಟ, ಗುರುಗಳು ಅನುಗ್ರಹಿಸಿದ ಯಥಾಮತಿ ಬುದ್ಧಿಯಿಂದ ಇತರ ಶಾಸ್ತ್ರವಚನಗಳೊಂದಿಗೆ ತುಲನೆ ಮಾಡಿ ಸರಿಯಾದದ್ದು ಯಾವುದು ಎಂದು ವಿಮರ್ಶಿಸಿ ಮುನ್ನಡೆಯುತ್ತೇವೆ.